ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 English ಕಲಿಯೋಣ ಬನ್ನಿ | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Thursday, March 05, 2015

English ಕಲಿಯೋಣ ಬನ್ನಿ

  Pundalik       Thursday, March 05, 2015
ಇಂಗ್ಲಿಷ್‌ನಲ್ಲಿ ವರದಿ ವಾಕ್ಯ

ನಮ್ಮ ಅಥವಾ ಇತರರ ಮಾತುಗಳನ್ನು ಹಾಗೂ ಹೇಳಿಕೆಗಳನ್ನು ಇದ್ದ ಹಾಗೆಯೇ, ಯಾವುದೇ ಬದಲಾವಣೆಯನ್ನೂ ಮಾಡದೆ ಹೇಳಿದಾಗ ಅದನ್ನು Direct speech (D.S) ಎನ್ನುತ್ತೇವೆ. ಬರವಣಿಗೆಯಲ್ಲಿ, ಈ ಹೇಳಿಕೆಗಳನ್ನು inverted commasನಲ್ಲಿ ಹಾಕುತ್ತೇವೆ.
ಉದಾ: 1. He said, “I will come tomorrow’’
          2. I said, “How are you?”
ಆದರೆ, ಇನ್ನೊಬ್ಬರ ಅಥವಾ ನಮ್ಮ ಮಾತುಗಳನ್ನು ವರದಿ ಮಾಡಬೇಕಾದ ಸಂದರ್ಭದಲ್ಲಿ, Indirect speech (I.S) ಅನ್ನು ಉಪಯೋಗಿಸುತ್ತೇವೆ. ಸಾಮಾನ್ಯವಾಗಿ ಭೂತಕಾಲದಲ್ಲಾಡಿದ ಮಾತುಗಳನ್ನು ವರ್ತಮಾನದಲ್ಲಿ ವರದಿ ಮಾಡಲು indirect/reported speech ಅನ್ನು ಬಳಸಬಹುದು.
ಉದಾ: 1. He told that he would come the next day.
2. I asked how he was.
ನಮ್ಮ ಅಥವಾ ಇತರರ ಹೇಳಿಕೆಗಳು/ ಪ್ರಶ್ನೆಗಳು / ಭಾವನೆಗಳು/ ಸಲಹೆಗಳು/ ಕೋರಿಕೆಗಳು/ ಆಜ್ಞೆಗಳ ಬಗ್ಗೆ ನಾವು ಮಾತನಾಡಬೇಕಾದ ಸಂದರ್ಭದಲ್ಲಿ ಹೆಚ್ಚಾಗಿ reported speechhಅನ್ನು ಬಳಸುತ್ತೇವೆ. ಹಾಗಾಗಿ, reported speech ಅನ್ನು ಬಳಸುವಾಗ ಉಪಯೋಗಿಸುವಂತಹ ಕೆಲವು ಮುಖ್ಯ ನಿಯಮಗಳನ್ನು ತಿಳಿದುಕೊಳ್ಳುವುದು ಅವಶ್ಯಕ.
ಇಲ್ಲಿ ನಾವು ನಾಲ್ಕು ರೀತಿಯ ವಾಕ್ಯಗಳನ್ನು ಪರಿಗಣಿಸಬೇಕಾಗುತ್ತದೆ.
1. Assertive sentences (statements)
2. Interrogative sentences (questions)
3. Imperative sentences (request, order, advice....)
4. Exclamatory sentences (appreciation, wonder, excitement and other strong emotions)
Assertive sentenceಗಳನ್ನು reported speech ನಲ್ಲಿ ಹೇಳುವಾಗ ಉಪಯೋಗಿಸುವ ಕೆಲವು ನಿಯಮಗಳೆಂದರೆ, ‘that’ ಎಂಬ ಪದದಿಂದ ಹೇಳಿಕೆಯನ್ನು ಪ್ರಾರಂಭಿಸಬೇಕು ಹಾಗೂ ಹೇಳಿಕೆಯಲ್ಲಿನ ಕ್ರಿಯಾಪದವು present tenseನಲ್ಲಿದ್ದರೆ past tenseeಗೆ ಹಾಗೂ past tenseನಲ್ಲಿದ್ದರೆ past perfect tenseಗೆ ಬದಲಾಯಿಸಬೇಕು.
ಉದಾ: 1. D.S:  He said, “I will complete it”
I.S: He told that he would complete it.
2. D.S: She said, “I came last night”
I.S: she told that she had come the previous night.
ಈ ಸಂದರ್ಭದಲ್ಲಿ ನಾವು ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯವೆಂದರೆ, direct speechನಲ್ಲಿನ ಹೇಳಿಕೆಗಳಲ್ಲಿ should, could, would ಎಂಬ ಪದಗಳು ಬಂದರೆ, reported speech ನಲ್ಲಿ ಆ ಪದಗಳನ್ನು ಬದಲಾಯಿಸದೇ ಹಾಗೆಯೇ ಉಳಿಸಿಕೊಳ್ಳಬೇಕು.
ಉದಾ: 1. D.S: The teacher said, “You should be disciplined”
I.S: The teacher told that I should be disciplined.
2. D.S: I said, “I could have done it better”
I.S: I told that I could have done it better.
Reported speech / Indirect speechh ಅನ್ನು ಕರಗತ ಮಾಡಿಕೊಂಡಾಗ ನಮಗೆ ವ್ಯಾಕರಣದ ಕೆಲವು ಸೂಕ್ಷ್ಮ ಪರಿವರ್ತನೆಗಳ ಬಗ್ಗೆ ಉಪಯುಕ್ತ ಒಳನೋಟಗಳು ದಕ್ಕುತ್ತವೆ, ಇದರಿಂದ ಇಂಗ್ಲಿಷ್ ಸಂಭಾಷಣೆಯ ಮೇಲಿನ ನಮ್ಮ ಹಿಡಿತ ದೃಢಗೊಳ್ಳುತ್ತದೆ.
ಮತ್ತಷ್ಟು ವರದಿ ವಾಕ್ಯಗಳು
Interrogative sentence (questions) ಗಳನ್ನು reported speechನಲ್ಲಿ ಬಳಸಬೇಕಾದರೆ ಉಪಯೋಗಿಸುವಂತಹ ಕೆಲವು ನಿಯಮಗಳನ್ನು ಇಲ್ಲಿ ಗಮನಿಸೋಣ.

ಪ್ರಶ್ನೆಗಳಲ್ಲಿ ಎರಡು ವಿಧ.
1. Wh-questions (what, when, which, why, where, how, whom, whose, who ಎಂಬ  wh-  ಪದಳಿಂದ ಪ್ರಾರಂಭವಾಗುವ ಪ್ರಶ್ನೆಗಳು)
2. Yes/no questions (yes ಅಥವಾ no ಎಂದು ಉತ್ತರಿಸಬಹುದಾದ ಎಲ್ಲಾ ಪ್ರಶ್ನೆಗಳು)
ಉದಾ: Are you alright?
Has she come to college?
ಮೊದಲನೆಯದಾಗಿ, ಪ್ರಶ್ನೆಗಳನ್ನು reported speechನಲ್ಲಿ ಹೇಳುವಾಗ that ಎನ್ನುವ ಪದದಿಂದ ಪ್ರಾರಂಭಿಸಬಾರದು. ಎರಡನೆಯ ಮುಖ್ಯ ನಿಯಮವೆಂದರೆ, ಪ್ರಶ್ನೆಯಲ್ಲಿನ verb-subject ಪದಕ್ರಮವನ್ನು reported speech ನಲ್ಲಿ, ssubject-verb ಪದಕ್ರಮವನ್ನಾಗಿ ಬದಲಾಯಿಸಿಬೇಕು ಹಾಗೂ ಕೊನೆಯದಾಗಿ, asked, inquired ಎನ್ನುವಂತಹ ಪದಗಳನ್ನು ಬಳಸಬೇಕು.
ಉದಾ: :1. D.S:  He said, “what are (verb) you (subject) doing?
I.S: He asked what I (subject) was (verb) doing.
2. D.S: She asked, “when will (verb) you (subject) complete the work?
I.S: She asked when I (subject) would (verb) complete the work.
ಹೀಗೆ ನಾವು ಪದಕ್ರಮವನ್ನು ಬದಲಾಯಿಸುವುದರಿಂದ, ಪ್ರಶ್ನೆಯನ್ನು ಹೇಳಿಕೆಯನ್ನಾಗಿ ಬದಲಾಯಿಸುತ್ತೇವೆ.
Yes/no ಪ್ರಶ್ನೆಗಳನ್ನು reported speechನಲ್ಲಿ ಹೇಳಬೇಕಾದಾಗ ನಾವು ಅನುಸರಿಸಬೇಕಾದ ಇನ್ನೊಂದು ನಿಯಮವೆಂದರೆ, iif/wheather ಎಂಬ ಪದದಿಂದ ಹೇಳಿಕೆಯನ್ನು ಪ್ರಾರಂಭಿಸಬೇಕು.
ಉದಾ: 1. D.S:  I said, “Is (verb) it (subject) alright?
I.S: I asked if it (subject) was (verb) alright.
Imperative sentenceಗಳನ್ನು (request, order, advice...) reported speechನಲ್ಲಿ ಹೇಳುವ ರಿತಿಯನ್ನು ನೋಡೋಣ:
1. D.S:  He said, “please wait for me’
    I.S: he requested me to wait for him.
2. D.S: She said, “post it immediately”
    I.S: She urged me to post it immediately.
3. D.S: I said to him, “complete the works as soon as possible”
I. S:  I suggested to him to complete the work as soon as possible.
ಇಲ್ಲಿ ನಾವು ಗಮನಿಸಬೇಕಾದ ಅಂಶವೆಂದರೆ, imperative sentenceಗಳ ಧ್ವನಿಯನ್ನು ಅನುಸರಿಸಿ, ಅದಕ್ಕೆ ಸರಿಹೊಂದುವಂತಹ ಪದಗಳನ್ನು (requested, urged, suggested....) ಉಪಯೋಗಿಸಬೇಕು.
Exclamatory sentenceಗಳಲ್ಲಿಯೂ, ಧ್ವನಿಯನ್ನು ಅನುಸರಿಸಿಯೇ ಪದಗಳ ಆಯ್ಕೆಯನ್ನು ಮಾಡಬೇಕು.
ಉದಾ: 1. D.S:  She said, “what a beautiful garden it is!”
I.S: She exclaimed that it was a very beautiful garden.


English ಕಲಿಯೋಣ ಬನ್ನಿ –21

ಫೋನೆಟಿಕ್ಸ್ ಮಾತು‌



ಇಂಗ್ಲಿಷ್ ಭಾಷೆಯನ್ನು ಕಲಿಯುವಾಗ, ಪ್ರಾರಂಭದಲ್ಲಿ, English alphabetನ 26 ಅಕ್ಷರಗಳನ್ನು ಕಲಿಯುವುದು ಎಷ್ಟು ಮುಖ್ಯವೋ, ಆ ಭಾಷೆಯ speech sounds ಅನ್ನು ಕಲಿಯುವುದು ಅಷ್ಟೇ ಮುಖ್ಯ. ಸಾಮಾನ್ಯವಾಗಿ ಬಹುತೇಕ ಶಾಲೆಗಳಲ್ಲಿ, ಪ್ರಾರಂಭದ ತರಗತಿಗಳಲ್ಲಿ ಮಕ್ಕಳಿಗೆ Aಯಿಂದ Zವರೆಗಿನ ಅಕ್ಷರಗಳನ್ನು ಮಾತ್ರ ಕಲಿಸುತ್ತಾರೆಯೇ ಹೊರತು, ಆ ಅಕ್ಷರಗಳಲ್ಲಿ ಅಂತರ್ಗತವಾಗಿರುವ ಶಬ್ದಕಣಗಳ (phonemes) ಬಗ್ಗೆ ತಿಳುವಳಿಕೆ ನೀಡುವುದಿಲ್ಲ.
ಇಂಗ್ಲಿಷ್ ಭಾಷೆಯ speech soundsನ ಅಧ್ಯಯನವನ್ನು Phonetics(ಫೊನೆಟಿಕ್ಸ್) ಎಂದು ಕರೆಯುತ್ತೇವೆ. ಇಂಗ್ಲಿಷ್ ಭಾಷೆಯಲ್ಲಿ ಉಪಯೋಗಿಸುವ ಸುಮಾರು ಹತ್ತು ಲಕ್ಷ ಪದಗಳೆಲ್ಲವೂ 44 ಶಬ್ದಕಣಗಳಿಂದ ರಚಿತವಾಗಿವೆ. ಇಂಗ್ಲಿಷ್ ಅಕ್ಷರಮಾಲೆಯಲ್ಲಿ 5 vowels (a, e, i, o, u) ಮತ್ತು 21 consonantss (ಇನ್ನುಳಿದ ಅಕ್ಷರಗಳು) ಇದ್ದರೆ, ಇಂಗ್ಲಿಷ್ ಫೊನೆಟಿಕ್ಸ್‌ನ ಪ್ರಕಾರ ನಾವು ಉಪಯೋಗಿಸುವ 44 phonemesನಲ್ಲಿ 20vowel soundssಮತ್ತು  24 consonant soundss ಇವೆ.
ನಮ್ಮ ಉಚ್ಚಾರಣೆ ಸ್ಪಷ್ಟವಾಗಿಯೂ, ಸುಶ್ರಾವ್ಯವಾಗಿಯೂ ಇರಬೇಕಾದಲ್ಲಿ ನಮಗೆ ಈ 44 phonemeಗಳ ಮೇಲೆ ಹಿಡಿತವಿರಬೇಕು.
ಫೊನೆಟಿಕ್ಸ್‌ನ ಬಗ್ಗೆ ತಿಳುವಳಿಕೆ ಇಲ್ಲದೆ, ನಮ್ಮ ದಿನನಿತ್ಯದ ಭಾಷಾ ಬಳಕೆಯಲ್ಲಿ ನಮಗರಿವಿಲ್ಲದಂತೆಯೇ ಸುಮಾರು ತಪ್ಪುಗಳು ನುಸುಳಿರುತ್ತವೆ. ಇವುಗಳಲ್ಲಿ ಪ್ರಮುಖವಾದ ಕೆಲವನ್ನು ಈಗ ಗಮನಿಸೋಣ.
1. Abacus -ಇದು mmental mathematics ಅನ್ನು ಕಲಿಸಲು ಉಪಯೋಗಿಸುವ ಮಣಿಹಲಗೆ. ಈ ಪದವನ್ನು ಸಾಮಾನ್ಯವಾಗಿ ‘ಅಬಾಕಸ್’ ಎಂದು ಉಚ್ಚರಿಸುವುದನ್ನು ನಾವು ಕೇಳಿದ್ದೇವೆ. ಆದರೆ, ಇದರ ಸರಿಯಾದ ಉಚ್ಚಾರಣೆಯೆಂದರೆ ‘ಆಬಕಸ್’. ಈ ಪದದ ಮೊದಲನೆಯ ಅಕ್ಷರ ಇಲ್ಲಿ ‘ಆ’ ಎಂದು ಸೂಚಿಸಿದ್ದರೂ, ಇದರ ಉಚ್ಚಾರಣೆ  an, ant, apple ಎಂಬ ಪದಗಳಲ್ಲಿನ ಮೊದಲನೆಯ ಶಬ್ದದಂತೆ ಧ್ವನಿಸಬೇಕು. ಕನ್ನಡ ಅಕ್ಷರಮಾಲೆಯಲ್ಲಿ ಈ ಶಬ್ದಕ್ಕೆ ಸಮಾನವಾದ ಅಕ್ಷರ ವಿಲ್ಲದಿರುವುದರಿಂದ ಅದಕ್ಕೆ ಹತ್ತಿರವಾದ ‘ಆ’ ಎಂಬ ಅಕ್ಷರವನ್ನು ಇಲ್ಲಿ ಉಪಯೋಗಿಸಲಾಗಿದೆ.
2. Asthma - ‘ಉಬ್ಬಸ’ ಎಂಬ ಅರ್ಥವನ್ನು ಕೊಡುವ ಈ ಪದವನ್ನು ಸಾಮಾನ್ಯವಾಗಿ ‘ಆಸ್ತಮಾ’ ಎಂದು ಉಚ್ಚರಿಸುವುದನ್ನು ಕೇಳಿರಬಹುದು. ಆದರೆ ಇದನ್ನು ‘ಆಸ್ಮಾ’ ಎಂದೂ ಉಚ್ಚರಿಸಬಹುದೆಂದು ನಮ್ಮ ಗಮನದಲ್ಲಿರಬೇಕು. Abacus ಪದದ ಉಚ್ಚಾರಣೆಯಂತೆಯೇ, ‘ಆಸ್ಮಾ’ ಪದದಲ್ಲಿಯೂ, ಮೊದಲ ಶಬ್ದ  an, ant, apple ಎಂಬ ಪದಗಳ ಮೊದಲ ಶಬ್ದದಂತಿರಬೇಕು.
3. Academic - ಈ ಪದದ ಉಚ್ಚಾರಣೆ, ಸಾಮಾನ್ಯವಾಗಿ ‘ಅಕ್ಯಾಡೆಮಿಕ್’ ಎಂದು ಕೇಳಿಬರುತ್ತದೆ. ಆದರೆ ಇದರ ಸರಿಯಾದ ಉಚ್ಚಾರಣೆ ‘ಅಕಡೆಮಿಕ್’ ಎಂದು. ಈ ಪದದ ಉಚ್ಚಾರಣೆಯ ಮೊದಲನೆಯ ಸ್ವರ  an, antನ ಮೊದಲನೆಯ ಸ್ವರದಂತೆಯೇ ಇರಬೇಕೆಂದು ನಾವು ಮರೆಯಬಾರದು.
4. Athlete - ಓಟಗಾರ/ಓಟಗಾರ್ತಿ ಎಂಬ ಅರ್ಥ ಕೊಡುವ ಈ ಪದವನ್ನು ಸಾಮಾನ್ಯವಾಗಿ ‘ಅತ್ಲೆಟ್’ ಎಂದು ತಪ್ಪಾಗಿ ಉಚ್ಚರಿಸುವುದುಂಟು. ಆದರೆ, ಇದನ್ನು ‘ಅತ್ಲೀಟ್’ ಎಂದು ಉಚ್ಚರಿಸಬೇಕು.
5. Alarm - ಗಡಿಯಾರದಲ್ಲಿ  alarm ಅನ್ನು  set ಮಾಡು ಎಂದು ಹೇಳುವ ಸಂದರ್ಭದಲ್ಲಿ, ಈ ಪದವನ್ನು ಅಲಾರಮ್ ಎಂದು ಉಚ್ಚರಿಸುವುದನ್ನು ಕೇಳಿದ್ದೇವೆ. ಇದರ ಉಚ್ಚಾರಣೆ ಅಲಾಮೆಂದಿರಬೇಕು. ನಮ್ಮ ಸಂಭಾಷಣೆಯಲ್ಲಿ ಪದಗಳ ಉಚ್ಚಾರಣೆಗೆ ಸಂಬಂಧಿಸಿದಂತೆ ಇನ್ನೂ ಕೆಲವು ಉಪಯುಕ್ತ ವಿಷಯಗಳು ಹಾಗೂ ಸಾಮಾನ್ಯ ತಪ್ಪುಗಳನ್ನು ಗಮನಿಸೋಣ.
1.Suite- ಹೋಟೆಲ್ ರೂಮ್ ಎಂದು ಅರ್ಥ ಕೊಡುವ ಈ ಪದವನ್ನು ಸಾಮಾನ್ಯವಾಗಿ suit (ಒಂದು ರೀತಿಯ ಉಡುಪು) ಎಂಬ ಪದದಂತೆಯೇ ‘ಸೂಟ್’ ಎಂದು ಉಚ್ಚರಿಸುವುದನ್ನು ಕೇಳಿದ್ದೇವೆ. ಆದರೆ, ಇದರ ಉಚ್ಚಾರಣೆ ‘ಸ್ವೀಟ್’ ಎಂದಿರಬೇಕು. ssweet ಮತ್ತು suite- ಈ ಎರಡೂ ಪದಗಳಿಗೆ ಒಂದೇ ಉಚ್ಚಾರಣೆಯೆಂದು ನೆನಪಿಡಬೇಕು.
2. Film - ಈ ಪದವನ್ನು ‘ಫಿಲಮ್’ ಎಂದು ತಪ್ಪಾಗಿ ಉಚ್ಚರಿಸುವುದುಂಟು. ‘ಫಿಲ್ಮ್’ ಎನ್ನುವುದು ಈ ಪದದ ಸರಿಯಾದ ಉಚ್ಚಾರಣೆ.
3. Pronunciation- ‘ಉಚ್ಚಾರಣೆ’ ಎಂಬ ಅರ್ಥ ಕೊಡುವ ಈ ಪದವನ್ನು ತಪ್ಪಾಗಿ ‘ಪ್ರನೌನ್ಸಿಯೇಶನ್’ ಎಂದು ಉಚ್ಚರಿಸುವುದನ್ನು ನಾವು ಆಗಾಗ ಕೇಳಬಹುದು. Pronounce (ಕ್ರಿಯಾಪದ) ಎಂದ ಪದವನ್ನು ‘ಪ್ರನೌನ್ಸ್’ ಎಂದೂ, pronunciation (ನಾಮಪದ) ಎಂಬ ಪದವನ್ನು ‘ಪ್ರನನ್ಸಿಯೇಶನ್’ ಎಂದೂ ಉಚ್ಚರಿಸಬೇಕು.
4. Receipt - ಈ ಪದದ ಅರ್ಥ ರಸೀದಿ ಎಂದು. ಇದರ ಉಚ್ಚಾರಣೆ ‘ರೆಸಿಪ್ಟ್’ ಎಂದೇ ಹೆಚ್ಚಾಗಿ ಕೇಳಿಬರುತ್ತದೆ. ಆದರೆ, ಇದರ ಸರಿಯಾದ ಉಚ್ಚಾರಣೆ ‘ರಿಸೀಟ್’ ಎಂದು.  Receiptನಲ್ಲಿನ ‘-ceipt’ ಅನ್ನು seatಎಂಬ ಪದದಂತೆಯೇ ಉಚ್ಚರಿಸಬೇಕು. 
5. Bruise - ‘ಬಲವಾದ ಪೆಟ್ಟಿನಿಂದಾದ ಗಾಯ’ ಎಂಬ ಅರ್ಥ ಬರುವ ಈ ಪದವನ್ನು ‘ಬ್ರೂಯಿಸ್’ ಎಂದು ಸಾಮಾನ್ಯವಾಗಿ ತಪ್ಪಾಗಿ ಉಚ್ಚರಿಸುವುದನ್ನು ಕೇಳಿದ್ದೇವೆ. ‘ಬ್ರೂಜ್’ ಸರಿಯಾದ ಉಚ್ಚಾರಣೆ.
6. Petrol- ಈ ಪದವನ್ನು ಸಮಾನ್ಯವಾಗಿ ‘ಪೆಟ್ರೋಲ್’ ಎಂದೇ ಉಚ್ಚರಿಸುತ್ತಾರೆ. ‘ಪೆಟ್ರಲ್’ಸರಿಯಾದ ಉಚ್ಚಾರಣೆ.
7. Picture- ‘ಚಿತ್ರ’ ಎಂಬ ಅರ್ಥವನ್ನು ಹೊಂದಿರುವ ಈ ಪದವನ್ನು ‘ಪಿಚ್ಚರ್’ ಎಂದು ಉಚ್ಚರಿಸುವುದುಂಟು. ಈ ಪದದಲ್ಲಿರುವ ‘c’ ಅಕ್ಷರ ಗಣನೆಗೆ ತೆಗೆದುಕೊಳ್ಳದೆ ಇದ್ದಾಗ ಆಗುವಂತಹ ಆಭಾಸವಿದು. ಇದರ ಸರಿಯಾದ ಉಚ್ಚಾರಣೆ ‘ಫಿಕ್ಚರ್’ ಎಂದು. ಈ ಉಚ್ಚಾರಣೆಯಲ್ಲಿ, ಮೊದಲನೆಯ ಸ್ವರ ಮಹಾಪ್ರಾಣವೆಂದು ಗಮನಿಸಬೇಕು.
8. etc. - ‘ಮುಂತಾದವು’ ಎನ್ನುವ ಸಂದರ್ಭದಲ್ಲಿ ಉಪಯೋಗಿಸುವಂತಹ  etc. ಎಲ್ಲರಿಗೂ ತಿಳಿದಂತಹ ಪದವೇ ಆಗಿದೆ. ಇದರ ಪೂರ್ಣರೂಪ e etcetera ಎಂದೂ, ಹಾಗೂ ಇದರ ಉಚ್ಚಾರಣೆ ‘ಎಟ್ಸೆಟ್ರ’ ಎಂದೂ ಗಮನದಲ್ಲಿರಬೇಕು. ಈ ಪದವನ್ನು ‘ಎಕ್ಸೆಟ್ರ’ ಎಂದು ತಪ್ಪಾಗಿ ಉಚ್ಚರಿಸಬಾರದು.
9. Resume - ಈ ಪದಕ್ಕೆ ಎರಡು ಅರ್ಥಗಳಿವೆ. ಮೊದಲನೆಯದು ‘ಪುನರಾರಂಭಿಸು’ ಎಂದು, ಎರಡನೆಯ ಅರ್ಥ bio-data ಎಂದು. ಪುನರಾರಂಭಿಸು ಎಂಬ ಅರ್ಥವನ್ನು ವ್ಯಕ್ತಪಡಿಸುವಾಗ ಮಾತ್ರ ಈ ಪದವನ್ನು ‘ರಿಝ್ಯೂಮ್’ (ಕ್ರಿಯಾಪದ) ಎಂದು ಉಚ್ಚರಿಸಬೇಕು.  Bio-data ಎಂಬ ಅರ್ಥವನ್ನು ಸೂಚಿಸಬೇಕಾದರೆ ಇದರ ಉಚ್ಚಾರಣೆ “ರಿಝ್ಯೂಮೆ’ (ನಾಮಪದ) ಎಂದು ಬದಲಾಗಬೇಕು.
English ಕಲಿಯೋಣ ಬನ್ನಿ, ಸರಣಿ 20

ವಿರಾಮ ಚಿಹ್ನೆಗಳ ಉಪಯೋಗ


ನಾವು ಸಂಭಾಷಿಸುವಾಗ, ನಮ್ಮ ಮಾತುಗಳಲ್ಲಿನ ಸ್ಪಷ್ಟತೆಯನ್ನು sstress, intonation, pauses, body languageಗಳ ಮುಖಾಂತರ ವ್ಯಕ್ತಪಡಿಸುವ ಹಾಗೆ ನಮ್ಮ ಬರವಣಿಗೆಯಲ್ಲಿನ ಸ್ಪಷ್ಟತೆಯನ್ನು ಸರಿಯಾದ ವಿರಾಮ ಚಿಹ್ನೆಗಳನ್ನು ಉಪಯೋಗಿಸುವುದರ ಮುಖಾಂತರ ವ್ಯಕ್ತಪಡಿಸಬಹುದು.
ಇಂಗ್ಲಿಷ್ ಭಾಷೆಯಲ್ಲಿ ಬಳಸುವ ವಿರಾಮ ಚಿಹ್ನೆಗಳು ಮತ್ತು ಅವುಗಳನ್ನು ಎಲ್ಲಿ, ಹೇಗೆ ಬಳಸಬೇಕೆಂಬುದನ್ನು ಇಲ್ಲಿ ಗಮನಿಸಿ:
Full stop (.)
ಅಮೆರಿಕನ್ನರು full stop ಅನ್ನು periodಎನ್ನುತ್ತಾರೆ. ಇದನ್ನು ಯಾವುದೇ ವಾಕ್ಯವು ಕೊನೆಗೊಳ್ಳುವುದನ್ನು ಸೂಚಿಸುವುದಕ್ಕಾಗಿ ಬಳಸಲಾಗುತ್ತದೆ.
ಉದಾ: WWe learn grammar. This helps us in the correct use of language. Abbreviation ಮತ್ತು initialಗಳನ್ನು ಬಳಸುವಾಗ ಸಹಾ full stop ಅನ್ನು ಉಪಯೋಗಿಸುತ್ತೇವೆ.
ಉದಾ: 1. M.A. for Master of Arts (abbreviation)
2. K. Ashok (initial)
Comma (,)
ನಮ್ಮ ಬರವಣಿಗೆಯಲ್ಲಿ ಸಾಕಷ್ಟು ಬಾರಿ ಉಪಯೋಗಿಸುವ ವಿರಾಮ ಚಿಹ್ನೆಯೆಂದರೆ comma. ಇದನ್ನು ನಾಲ್ಕು ಸಂದರ್ಭಗಳಲ್ಲಿ ಬಳಸಬಹುದು.
a). Listing comma - ಮೂರು ಅಥವಾ ಮೂರಕ್ಕಿಂತ ಹೆಚ್ಚು ಪದಗಳ/ಪದಪುಂಜಗಳನ್ನು, ಒಂದರಿಂದ ಇನ್ನೊಂದನ್ನು ಬೇರ್ಪಡಿಸಲು ಬಳಸುವ commaವನ್ನು listing comma ಎನ್ನಬಹುದು.
ಉದಾ: 1. Orange, white and green are the colours in the Indian flag.
2. Arjuna, Bheema, Nakula and Sahadeva are brothers.
b). Joining Comma -ಎರಡು ವಾಕ್ಯಗಳನ್ನು ಸೇರಿಸಿ ಒಂದು ವಾಕ್ಯವನ್ನಾಗಿ ಮಾಡಲು ಬಳಸುವ commaವನ್ನು joining comma ಎನ್ನಬಹುದು.
ಉದಾ:I could have lied to you, but I did not.
c) Gapping Comma - ಹಿಂದೊಮ್ಮೆ ಸೂಚಿಸಿದಂತಹ ಪದಗಳನ್ನು ಮತ್ತೆ ಪುನರಾವರ್ತಿಸುವ ಬದಲಾಗಿ comma ವನ್ನು ಉಪಯೋಗಿಸಿ ವಾಕ್ಯವನ್ನು ಸಂಕ್ಷಿಪ್ತಗೊಳಿಸಬಹುದು ಹಾಗೂ ಏಕತಾನತೆಯನ್ನು (monotony) ತಡೆಗಟ್ಟಬಹುದು. ಇಂತಹ commaವನ್ನು ggapping commaಎಂದು ಕರೆಯುತ್ತೇವೆ. ಉದಾ:Some writers use punctuation correctly; others, not.
d) Bracketing Comma - bracket  ಒಳಗೆ ಉಪಯೋಗಿಸಬಹುದಾದ ಪದಪುಂಜ ಅಥವಾ ಒಂದು ಚಿಕ್ಕ ವಾಕ್ಯವನ್ನು bbracket ಇಲ್ಲದೆಯೇ ಇನ್ನೊಂದು ವಾಕ್ಯದೊಳಗೆ ಸೇರಿಸುವಾಗ ಬಳಸುವಂತಹ commaವನ್ನು bbracketing comma ಎನ್ನಬಹುದು.
ಉದಾ: 1. Ashok, who is a resident of Bangalore, is a good singer.
2. Milton, the great English poet, was blind.
ಸಾಮಾನ್ಯವಾಗಿ. ಎಲ್ಲಿ comma ಉಪಯೋಗಿಸಬೇಕೆಂಬ ಸಂದೇಹ ಬಂದಾಗ ನಾವು ಮಾಡಬೇಕಾಗಿರುವ ಕೆಲಸ ಇಷ್ಟೆ. ವಾಕ್ಯವನ್ನು ಜೋರಾಗಿ ಓದಿ, ಎಲ್ಲಿ ಅರ್ಥಪೂರ್ಣವಾಗಿ ನಿಲ್ಲಿಸಬೇಕಾಗುತ್ತದೋ ಅಥವಾ ಉಸಿರನ್ನು ತೆಗೆದುಕೊಳ್ಳ ಬೇಕಾಗುತ್ತದೋ ಅಲ್ಲಿ comma ಹಾಕುವುದು ಸೂಕ್ತ. ಇದು ಬಹುತೇಕ ಸಂದರ್ಭಗಳಲ್ಲಿ ಉಪಯುಕ್ತ ವಿಧಾನ.
ಮತ್ತಷ್ಟು ವಿರಾಮ ಚಿಹ್ನೆಗಳು
ಸೈದ್ಧಾಂತಿಕವಾಗಿ, ನಾವು ಬರೆಯುವ ವಾಕ್ಯವೊಂದು ಎಷ್ಟಾದರೂ ಉದ್ದವಿರಬಹುದು. ಉದಾಹರಣೆಗೆ, James Joyce ಎನ್ನುವ ಕಾದಂಬರಿಕಾರನ Ulysses ಎಂಬ ಕಾದಂಬರಿಯ ಕೊನೆಯ ವಾಕ್ಯ ವಿರಾಮ ಚಿಹ್ನೆಗಳನ್ನು ಉಪಯೋಗಿಸದೆಯೇ ಬರೆದದ್ದಾಗಿದ್ದು, ಅನೇಕ ಪುಟಗಳಷ್ಟು ಉದ್ದವಿದೆ. ಆದರೆ ಸಾಮಾನ್ಯವಾಗಿ ಓದುಗರ ಮೇಲೆ ಈ ರೀತಿಯ ಒತ್ತಡವನ್ನು ಹೇರಬಾರದು. ನಮ್ಮ ಮೆದುಳಿಗೆ ಸೀಮಿತ ಗ್ರಹಣಶಕ್ತಿಯಿರುವುದರಿಂದ ವಿರಾಮ ಚಿಹ್ನೆಗಳನ್ನು ಉಪಯೋಗಿಸಿ ಬಳಸುವ ಭಾಷೆ ಓದುಗರಿಗೆ ಸುಲಭವಾಗಿ ಅರ್ಥವಾಗುತ್ತದೆ. ಈ ಕಾರಣಕ್ಕೆ ನಾವು ವಿರಾಮ ಚಿಹ್ನೆಗಳ ಉಪಯೋಗದ ಮೇಲೆ ಹಿಡಿತ ಸಾಧಿಸಬೇಕು. ಈಗ ಇನ್ನೂ ಕೆಲವು ವಿರಾಮ ಚಿಹ್ನೆಗಳ ಬಗ್ಗೆ ತಿಳಿದುಕೊಳ್ಳೋಣ.
Semi Colon (;)
ಒಂದಕ್ಕೊಂದು ಸಂಬಂಧವಿರುವ ಎರಡು ಉಪವಾಕ್ಯಗಳನ್ನು (clauses), full stop ನಿಂದ ಬೇರ್ಪಡಿಸಲಾಗದ ಸಂದರ್ಭದಲ್ಲಿ  semi colon ಉಪಯೋಗಿಸಿ ಬೇರ್ಪಡಿಸಬಹುದು.
ಉದಾ: People continue to worry about the future; our failure to conserve natural resources has put the future at risk.
ಕೆಲವು comma ಗಳಿರುವಂತಹ ದೊಡ್ಡ ವಾಕ್ಯದಲ್ಲಿನ ಉಪವಾಕ್ಯಗಳನ್ನು ಬೇರ್ಪಡಿಸಬೇಕಾದರೆ semi colon ಅನ್ನು ಬಳಸಬೇಕು.
ಉದಾ: I went for a movie with fun loving, young friends; and we all enjoyed the movie.
ಇಲ್ಲಿ ನಾವು ಗಮನಿಸಬೇಕಾದ ವಿಷಯವೆಂದರೆ, comma ಬಿಂಬಿಸುವಂತಹ ವಿರಾಮಕ್ಕಿಂತ, ಹೆಚ್ಚು ಮಹತ್ವವುಳ್ಳ ವಿರಾಮವನ್ನು semi colon ಬಿಂಬಿಸುತ್ತದೆ.
Colon (:)
Semi colon ಗಿಂತ ದೀರ್ಘವಾದ, ಆದರೆ full stop ಗಿಂತ ಕಡಿಮೆಯಾದ ವಿರಾಮವನ್ನು colonಬಿಂಬಿಸುತ್ತದೆ.
ಯಾವುದಾದರೂ ಪಟ್ಟಿಯನ್ನು ಪರಿಚಯಿಸುವಾಗ colonಬಳಸಬೇಕು. ಉದಾ: There are three colours in the Indian flag: Orange, white and green..
ಉದಾಹರಣೆ ಅಥವಾ ವಿವರಣೆಯನ್ನು ಒಂದು ವಾಕ್ಯದ ನಂತರ ಕೊಡುವಂತಹ ಸಂದರ್ಭದಲ್ಲಿ. Colon ಅನ್ನು ಉಪಯೋಗಿಸಿ ಪ್ರಾರಂಭಿಸಬೇಕು.
ಉದಾ:There is one challenge above all others: the alleviation of poverty.
ಯಾವುದಾದರೂ ಉಲ್ಲೇಖ (question) ವನ್ನು ಪರಿಚಯಿಸುವಂತಹ ಸಂದರ್ಭದಲ್ಲಿಯೂ colon ಬಳಸುತ್ತೇವೆ.
ಉದಾ: Swami Vivekananda says: “Arise, awake, stop not till you  reach the goal.”
Inverted Commas (“ ”) (‘ ’)
ಇವುಗಳನ್ನು quotation marks ಅಥವಾ  quotes  ಎಂದೂ ಕರೆಯುತ್ತೇವೆ. ಇನ್ನೊಬ್ಬರ ಮಾತುಗಳನ್ನು ಉಲ್ಲೇಖಿಸಬೇಕಾದರೆ double inverted commas ಬಳಸುತ್ತೇವೆ.
ಉದಾ: Hamlet’s famous speech begins with “to be or not to be, that is the question”
ಆದರೆ ಒಂದು quotation ಒಳಗಡೆ ಮತ್ತೊಂದು quotation ಇದ್ದಾಗ single inverted commas ಬಳಸಬೇಕು. ಉದಾ: My teacher told me, “your use of the phrase’old is gold’ is a cliché”h
ವಿಶೇಷ ಗುಣವಿರುವ ಪದವನ್ನು ಸೂಚಿಸಲು ಕೂಡ single inverted commas ಬಳಸುತ್ತೇವೆ.
ಉದಾ: Under the circumstances, her courage was ‘stupendous’.

English ಕಲಿಯೋಣ ಬನ್ನಿ ಸರಣಿ– 17

ಬಯೊಡೇಟಾ ಒಂದು ಸ್ಥೂಲ ಪರಿಚಯ



ಕೆಲಸಕ್ಕೆ ಅರ್ಜಿ ಸಲ್ಲಿಸುವಾಗ ಒಂದು ಒಳ್ಳೆಯ cover letterನ ಜೊತೆಯಲ್ಲಿ, ನಮ್ಮ ಬಗ್ಗೆ ಒಂದು ಸಂಕ್ಷಿಪ್ತ ಮಾಹಿತಿಯನ್ನು ಕೊಡುವಂತಹ Bio-dataವನ್ನು ಕಳುಹಿಸುವುದು ಬಹು ಮುಖ್ಯ.
Bio ಎಂದರೆ ಸ್ವ (self) data ಎಂದರೆ ‘ಮಾಹಿತಿ’ ಎಂದರ್ಥ. Bio-dataವನ್ನು ಅಮೆರಿಕನ್ ಇಂಗ್ಲಿಷ್‌ನಲ್ಲಿ resume (ರೆಸ್ಯೂಮೆ) ಎಂದು, ಬ್ರಿಟಿಷ್ ಇಂಗ್ಲಿಷ್‌ನಲ್ಲಿ CV (Curriculum Vitae) ಎಂದು ಕರೆಯುತ್ತಾರೆ. ಸಾಮಾನ್ಯವಾಗಿ, resume ನಲ್ಲಿರುವ ನಮ್ಮ ಮಾಹಿತಿಗಳು ಆದಷ್ಟು ಸಂಕ್ಷಿಪ್ತವಾಗಿದ್ದು, ಒಂದು ಪುಟದ ಮಿತಿಯಲ್ಲಿರಬೇಕು. ಆದರೆ CVಯಲ್ಲಿ, ನಾವು ಕೊಡುವ ಮಾಹಿತಿಗಳ ಸಂಪೂರ್ಣ ವಿವರ ಕೂಲಂಕಷವಾಗಿದ್ದು, ಇಷ್ಟೇ ಪುಟಗಳಿರಬೇಕೆಂಬ ನಿಬಂಧನೆಯಿಲ್ಲ.
ಇನ್ನೂ ನಿಖರವಾಗಿ ಹೇಳಬೇಕೆಂದರೆ, CVಯಲ್ಲಿ, ನಮ್ಮ ವಿದ್ಯಾರ್ಹತೆಗೆ ಸಂಬಂಧಿಸಿದ ವಿವರಗಳನ್ನು (academic details) ತಿಳಿಸಬೇಕು. ಹಾಗಾಗಿ, education ಮತ್ತು researchಗೆ ಸಂಬಂಧಪಟ್ಟ ಉದ್ಯೋಗಗಳಿಗೆ (teacher, lecturer, research scholar, scientist...) CVಯನ್ನೂ, ಇತರ ಉದ್ಯೋಗ ಗಳಿಗೆ (police, clerk, typist, receptionist, IT company ಯಲ್ಲಿನ ಕೆಲಸಗಳು....) resume  ಅನ್ನೊ ಕಳುಹಿಸುವುದು ಸೂಕ್ತ.
Bio-data ಒಳ್ಳೆಯ ಕೆಲಸ ಪಡೆಯವುದಕ್ಕೆ ಇರುವಂತಹ ಪ್ರಮುಖ ಸಾಧನ. ಆದ್ದರಿಂದ, ಅದರ ರಚನೆ ಹಾಗೂ ಸ್ವರೂಪದ ಬಗ್ಗೆ ಎಚ್ಚರವಹಿಸಬೇಕು. Bio-dataದಲ್ಲಿ ಸಾಮಾನ್ಯವಾಗಿ ನಾವು ಕೊಡಬೇಕಾದ ಮಾಹಿತಿಗಳ ಪಟ್ಟಿಯನ್ನು ಗಮನಿಸಿ:
Name / ಹೆಸರು:
Age / ವಯಸ್ಸು:
Date of Birth / ಜನ್ಮ ದಿನಾಂಕ:
Address for communication / ವಿಳಾಸ:
Phone/Mobile / ದೂರವಾಣಿ, ಮೊಬೈಲ್‌ ಸಂಖ್ಯೆ:
Email/ ಇಮೇಲ್‌ ವಿಳಾಸ:
Career Objective / ವೃತ್ತಿಪರ ನಿಲುವು:
Educational Qualifications/ ಶೈಕ್ಷಣಿಕ ಅರ್ಹತೆ:
Work Experience / ವೃತ್ತಿ ಅನುಭವ
Achievements and Extra Curricular Activities/ ಸಾಧನೆ, ಪಠ್ಯೇತರ ಚಟುವಟಿಕೆ:
About Yourself / ಸ್ವ ವಿವರ:
Personal Information/ ವೈಯಕ್ತಿಕ ಮಾಹಿತಿ:
Father’s Name/ ತಂದೆಯ ಹೆಸರು:
Mother’s Name/ ತಾಯಿಯ ಹೆಸರು:
Hobbies/Interests/ ಹವ್ಯಾಸ/ ಆಸಕ್ತಿ:
Marital Status: ವಿವಾಹ ಮಾಹಿತಿ:
Languages known/ ಭಾಷಾ ಜ್ಞಾನ:
Place/ ಸ್ಥಳ:
References will be provided on Request/ ಕೋರಿಕೆಯ ಮೇರೆಗೆ ಶಿಫಾರಸ್ಸು ನೀಡಲಾಗುವುದು.
ಇಲ್ಲಿ career objectiveಎಂದು ಇರುವ ಜಾಗದಲ್ಲಿ ನಮಗೆ ಯಾವ ಉದ್ಯೋಗದ ಬಗ್ಗೆ ಒಲವಿದೆ ಎಂಬುದನ್ನು ಸೂಚ್ಯವಾಗಿ ವಿವರಿಸಬೇಕು.
Educational Qualifications ಬಗ್ಗೆ ಮಾಹಿತಿ ನೀಡುವಾಗ, ವರ್ತಮಾನದ ವಿವರಗಳನ್ನು ಮೊದಲು ನೀಡಿ ಅನಂತರ ಹಿಂದಿನ ವರ್ಷದ ವಿವರಗಳನ್ನು ನೀಡುತ್ತಾ ಹೋಗಬೇಕು. (ಉದಾ: Ph. D., M. Phil., M.A., B.A., -ಈ ಕ್ರಮದಲ್ಲಿರಬೇಕು)
About Yourselfನ ಜಾಗದಲ್ಲಿ, ಉದ್ಯೋಗಕ್ಕೆ ಸಂಬಂಧಿಸಿದಂತೆ ನಮ್ಮಲ್ಲಿರುವ ವಿಶೇಷ ಶಕ್ತಿ, ಸಾಮರ್ಥ್ಯಗಳನ್ನು ಪರಿಚಯಿಸಬೇಕು. ಇಲ್ಲಿ ನಮ್ಮ ಬಗ್ಗೆ ನಾವೇ ಬಡಾಯಿ ಕೊಚ್ಚಿಕೊಳ್ಳುವುದನ್ನು ಹಾಗೂ ಅನಗತ್ಯ ಹಿಂಜರಿಕೆಯನ್ನು ತೋರಬಾರದು.
Bio-dataದ ಕೊನೆಯಲ್ಲಿ ಸಹಿ ಇರಬಾರದೆಂಬುದು ಒಂದು ಮುಖ್ಯ ನಿಯಮ.
ಕೊನೆಯದಾಗಿ,MS wordನಲ್ಲಿ ತಯಾರಿಸಿದಂತ Bio-dataದ print out ತೆಗೆಯುವಾಗ ಕೆಲವು ನಿರ್ದಿಷ್ಟ ಅಂಶಗಳನ್ನು ನೆನಪಿಡಬೇಕು. ಸಾಮಾನ್ಯವಾಗಿ, sstyle:Times New Roman, Font Size : 12, Line Space : 1.5, ಹಾಗೂ A4 ಅಳತೆಯ ಹಾಳೆಯಲ್ಲಿ ಮೂಡಿಬರುವ Bio-data ಅಂದವಾಗಿಯೂ, ಚೊಕ್ಕವಾಗಿಯೂ ಇರುತ್ತದೆ.
Bio-dataದ ಒಂದು ಮಾದರಿ
ನಾವು ಉದ್ಯೋಗವೊಂದನ್ನು ಅರಸಿ ಯಶಸ್ವಿಯಾಗಿ ಪಡೆದುಕೊಳ್ಳುವುದು ಹಲವು ಹಂತಗಳಲ್ಲಿರುವ ಒಂದು ಪ್ರಕ್ರಿಯೆ. Cover letterನ ನಂತರ ಈ ಪ್ರಕ್ರಿಯೆಯ ಮುಖ್ಯ ಭಾಗ ಒಂದು ಪರಿಣಾಮಕಾರಿ Bio-dataವನ್ನು ರೂಪಿಸುವುದು. ಹಿಂದಿನ ಭಾಗದ ಸ್ಥೂಲ ಪರಿಚಯ ಹಿನ್ನೆಲೆಯಲ್ಲಿ, ಈ ಕೆಳಗಿನ Bio-dataದ ಮಾದರಿಯನ್ನು ಪರಿಶೀಲಿಸಿ ಮನದಟ್ಟು ಮಾಡಿಕೊಳ್ಳಿ. ಇಲ್ಲೊಂದು ಉದಾಹರಣೆ ನೀಡಲಾಗಿದೆ.
Bio-dataದ ಕೊನೆಯಲ್ಲಿ ಬರುವ Referencesಎಂದರೆ, ಯಾರಾದರೂ ಇಬ್ಬರು ಪ್ರಮುಖ ವ್ಯಕ್ತಿಗಳು, ಅಭ್ಯರ್ಥಿಯ ಪರಿಚಯವಿದೆ ಎಂದು ಹೇಳುವ ಅನುಮೋದನೆ. ಇದರಿಂದ, ಅಭ್ಯರ್ಥಿಯ credibility (ವಿಶ್ವಾಸಾರ್ಹತೆ) ಹೆಚ್ಚುತ್ತದೆ.ಇಂದಿನ ಜಗತ್ತಿನಲ್ಲಿ ಇಂಗ್ಲಿಷ್ ಭಾಷೆ ಮಾತ್ರವಲ್ಲ, ಅದು ಶಕ್ತಿಯ ಒಂದು ಸಾಧನ. ಅನೇಕ ಸಂದರ್ಭಗಳಲ್ಲಿ ಇದು ವೃತ್ತಿಪರ ಯಶಸ್ಸಿನ ರಹದಾರಿಯೂ ಕೂಡ. ಉದ್ಯೋಗ ಪಡೆಯಲು, ಸಂದರ್ಶನದಲ್ಲಿ ಯಶಸ್ವಿಯಾಗಲು ಮತ್ತು ಇತರ ಅನೇಕ ವೃತ್ತಿಪರ ಸಂದರ್ಭಗಳಲ್ಲಿ (professional situations), ಸ್ಮಾರ್ಟ್ ಇಂಗ್ಲಿಷ್ ಬಹು ಉಪಯೋಗಕಾರಿ. ಈ ನಿಟ್ಟಿನಲ್ಲಿ, ಉದ್ಯೋಗಕ್ಕೆ ಅರ್ಜೆ ಸಲ್ಲಿಸುವಾಗ ಒಂದು ಒಳ್ಳೆಯ cover letter ಅನ್ನು ಹೇಗೆ ಬರೆಯಬಹುದು ಎಂಬುದನ್ನು ತಿಳಿದುಕೊಳ್ಳೋಣ.
ಕಲಿಯೋಣ ಬನ್ನಿ...16

ಇಂಗ್ಲಿಷ್‌ನಲ್ಲಿ ಕವರ್‌ ಲೆಟರ್‌



Cover letter ಎಂದರೆ employerನ ಮನಮುಟ್ಟುವ ರೀತಿಯಲ್ಲಿ ನಮ್ಮ ಕಿರುಪರಿಚಯವನ್ನು ಮಾಡಿಕೊಡುವ ಒಂದು ಪತ್ರ, cover letter ಅನ್ನು covering letter ಅಥವಾ motivational letter  ಅಥವಾ letter of motivation ಎಂದೂ ಕರೆಯುತ್ತಾರೆ. ಈ ಪತ್ರವನ್ನು ಸಾಮಾನ್ಯವಾಗಿ ನಮ್ಮ Bio-data ಅಥವಾ resume ಅಥವಾ curriculum vitae ಜೊತೆಯಲ್ಲಿ ಕಳುಹಿಸುತ್ತೇವೆ.
Cover letter ಅನ್ನು ಬರೆಯಬೇಕಾದರೆ, ಅದರಲ್ಲಿ ನಾವು ಏನನ್ನು ಬರೆಯಬೇಕು ಹಾಗೂ ಹೇಗೆ ಬರೆಯಬೇಕು ಎಂಬ ಎರಡು ಅಂಶಗಳತ್ತ ನಮ್ಮ ಗಮನಹರಿಸೋಣ.
Cover letter ಸಾಮಾನ್ಯವಾಗಿ ಒಂದು ಪುಟವನ್ನು ಮೀರದಂತಿರಬೇಕು ಹಾಗೂ ಇದರಲ್ಲಿ ಇರಬೇಕಾದ ಅಂಶಗಳೆಂದರೆ:
1. Addresses
2. Date
3. Salutation
4. Body of the letter
5. Complimentary close

ಮೊದಲಿಗೆ ನಮ್ಮ ವಿಳಾಸ ಹಾಗೂ eemployerನ ವಿಳಾಸಗಳನ್ನು ಒಂದರ ಕೆಳಗೆ ಒಂದನ್ನು ಬರೆಯಬೇಕು.
ದಿನಾಂಕವನ್ನು ಸಾಮಾನ್ಯವಾಗಿ ಎರಡು ವಿಳಾಸಗಳ ನಡುವೆ ಬರೆಯಬೇಕು ಹಾಗೂ ಅದನ್ನು ಬರೆಯುವ ರೀತಯನ್ನು ಗಮನಿಸಿ - 20th December 2014.
SSalutationಅನ್ನು ಈ ರೀತಿಯಲ್ಲಿ ಬರೆಯಬೇಕು  – Dear Sir/Madam ನಂತರ, Body of the letter ಅನ್ನು ಮೂರು paragraphಗಳಾಗಿ ವಿಂಗಡಿಸಬಹುದು. ಮೊದಲನೆಯ paragraphನಲ್ಲಿ, ಅರ್ಜಿಯ ಉದ್ದೇಶ ಹಾಗೂ ಆ ಉದ್ಯೋಗದ ಬಗ್ಗೆ ಎಲ್ಲಿ ಮತ್ತು ಹೇಗೆ ಮಾಹಿತಿ ದೊರಕಿತು ಎಂಬುದನ್ನು ತಿಳಿಸಬೇಕು. ಎರಡನೆಯ paragraphನಲ್ಲಿ, ನಮ್ಮ ವಿದ್ಯಾರ್ಹತೆ ಮತ್ತು ಕಾರ್ಯಾನುಭವದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಬೇಕು ಹಾಗೂ ನಮ್ಮ ಪ್ರಸ್ತುತ ಸಾಮರ್ಥ ಮತ್ತು ಅರ್ಹತೆಗಳ ಹಿನ್ನೆಲೆಯಲ್ಲಿ ನಾವು ಏಕೆ ಈ ಉದ್ಯೋಗಕ್ಕೆ ಸೂಕ್ತರು ಎಂಬುದನ್ನು ಚೊಕ್ಕವಾಗಿ ವಿವರಿಸಬೇಕು. ಕೊನೆಯ paragraph ನಲ್ಲಿ, ನಮಗೆ ಆ ಉದ್ಯೋಗದಲ್ಲಿರುವ ಆಸಕ್ತಿ ಹಾಗೂ eemployerನ ಸಕಾರಾತ್ಮಕ ಪ್ರತ್ಯುತ್ತರಕ್ಕಾಗಿ ನಮ್ಮ ನಿರೀಕ್ಷೆಯನ್ನು ಸೂಚಿಸಬೇಕು.
ಆ ನಂತರ, complimentary closeನಲ್ಲಿ, Respectfully yours ಅಥವಾ Yours faithfullyಎಂದು ಬಳಸಬಹುದು. ಇಲ್ಲಿ ನಾವು ಗಮನಿಸಬೇಕಾದ ವಿಷಯವೆಂದರೆ, Yoursಎಂಬ ಪದದಲ್ಲಿ  s ಅಕ್ಷರದ ಹಿಂದೆ (’) ಯನ್ನು ಹಾಕಬಾರದು. ಹಾಗಾಗಿ Your’s ಎನ್ನುವುದು ತಪ್ಪಾದ ಬಳಕೆ. ಕೊನೆಯಲ್ಲಿ, ನಮ್ಮ ಸಹಿಯನ್ನು ಹಾಕಿ ಪತ್ರವನ್ನು ಸಂಪೂರ್ಣಗೊಳಿಸಬೇಕು.
ನಾವು ಹಿಂದೆ ನೋಡಿದ cover letterನ ಪರಿಕಲ್ಪನೆಗಳನ್ನು ಮೈಗೂಡಿಸಿಕೊಂಡಿರುವ ಈ ಪಕ್ಕದ ಉದಾಹರಣೆಯನ್ನು ಗಮನಿಸಿ:
ಸಾಮಾನ್ಯವಾಗಿ, cover letterಅನ್ನು ಬರೆಯುವಾಗ ನಾವು ಎಚ್ಚರವಹಿಸದಿದ್ದರೆ ಈ ಮೂರು ತಪ್ಪುಗಳಾಗುತ್ತವೆ: ಮೊದಲನೆಯದು, complimentary close ನಲ್ಲಿ, Your’sಗೆ ಹಾಕುವುದು. ಎರಡನೆಯದು, ದಿನಾಂಕವನ್ನು full formನಲ್ಲಿ ಬರೆಯದೇ ಇರುವುದು. ಮೂರನೆಯದಾಗಿ, salutation ಮತ್ತು subjectಗಳ ಸ್ಥಾನಪಲ್ಲಟವಾಗುವುದು (ಅಂದರೆ, salutationನ ನಂತರವೇ subject ಬರಬೇಕು.) ಈ ತಪ್ಪುಗಳಾಗದಂತೆ ಎಚ್ಚರ ವಹಿಸಿದಲ್ಲಿ, ನಮ್ಮ cover letterನ ಗುಣಮಟ್ಟ ತನಗೆ ತಾನೇ ಹೆಚ್ಚುತ್ತದೆ.
ಕಲಿಯೋಣ ಬನ್ನಿ –15

ಸ್ಪರ್ಧಾತ್ಮಕ ಪರೀಕ್ಷೆಗೆ ಇಂಗ್ಲಿಷ್

ನಮ್ಮ ಇಂಗ್ಲಿಷ್ ಕಲಿಕೆಯಲ್ಲಿ, ಉತ್ತಮ ಸಂಭಾಷಣೆಯನ್ನೂ ಒಳ್ಳೆಯ ಬರವಣಿಗೆಯನ್ನೂ ಗುರಿಯಾಗಿಟ್ಟುಕೊಂಡು ಅಭ್ಯಾಸ ಮಾಡುವ ಹಿನ್ನೆಲೆಯಲ್ಲೇ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ (competitive exams) ನಾವು ಉತ್ತಮವಾದ ಫಲಿತಾಂಶ ಪಡೆಯಲು ಕೆಲವು ಸರಳ ಸೂತ್ರಗಳು ನಮಗೆ ನೆರವಾಗುತ್ತವೆ.
ಸಾಮಾನ್ಯವಾಗಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇಂಗ್ಲಿಷ್ ಭಾಷೆಗೆ ಸಂಬಂಧಿಸಿದಂತೆ ಕೇಳಬಹುದಾದ ಕೆಲವು ಪ್ರಮುಖ ಪ್ರಶ್ನಾ ಪ್ರಕಾರಗಳೆಂದರೆ (question types)
1. Error detection
2. Word analogies
3. Data transformation
4. Comprehension passage and questions related to it
5. Vocabulary related questionss
ಇಂದು Error detectionಗೆ ಸಂಬಂಧಿಸಿದ ಕೆಲವು ಪ್ರಶ್ನೆಗಳು ಹಾಗೂ ಅದರ ವಿಶ್ಲೇಷಣೆಯನ್ನು ತಿಳಿದುಕೊಳ್ಳೋಣ.
Error detectionಗೆ ಸಂಬಂಧಿಸಿದಂತೆ, ಪರೀಕ್ಷೆಯಲ್ಲಿ ಪ್ರಶ್ನೆಗಳನ್ನು ಕೇಳುವ ರೀತಿಯೆಂದರೆ, ಇಂಗ್ಲಿಷ್‌ನಲ್ಲಿ ವಾಕ್ಯವನ್ನು ಕೊಟ್ಟು, ವಾಕ್ಯದ ಯಾವ ಭಾಗದಲ್ಲಿ ತಪ್ಪಿದೆ ಎಂದು ಗುರುತಿಸಬೇಕಾಗಿರುತ್ತದೆ. ಆ ತಪ್ಪುಗಳು ಸಾಮಾನ್ಯವಾಗಿ ವಾಕ್ಯದಲ್ಲಿರುವ articles, prepositions, subject-verb agreement, spelling, question tag gಅಥವಾ degrees of comparisonಗೆ ಸಂಬಂಧಪಟ್ಟದ್ದಾಗಿರುತ್ತವೆ.
ಇಲ್ಲಿನ ಕೆಲವು ಉದಾಹರಣೆಗಳಲ್ಲಿ, articlesಗೆ ಸಂಬಂಧಪಟ್ಟ ತಪ್ಪುಗಳನ್ನು ಹಾಗೂ ಅವುಗಳ ವಿಶ್ಲೇಷಣೆಯನ್ನು ಗಮನಿಸಿ:
1. He is a tallest boy in the class.
     a b      c
ಈ ವಾಕ್ಯದಲ್ಲಿ ಮೂರು ಭಾಗಗಳು  (a, b, c) ಕಂಡುಬರುತ್ತವೆ. ತಪ್ಪಿರುವುದು b ಭಾಗದಲ್ಲಿ. ಇಲ್ಲಿ a tallest boyಗೆ ಬದಲಾಗಿ the tallest boy ಎಂದಿರಬೇಕಿತ್ತು. ಏಕೆಂದರೆ, tallest ಎಂಬ ಪದ shortest, strongest, fastest... ಎಂಬ ಪದಗಳಂತೆ superlative degree adjective ಆಗಿದೆ. ಇಂಗ್ಲಿಷ್ ವ್ಯಾಕರಣ ನಿಯಮದ ಪ್ರಕಾರ, ಯಾವುದೇ superlative degree adjectiveeನ ಹಿಂದೆ the ಎಂಬ article ಮಾತ್ರ ಉಪಯೋಗಿಸಬೇಕು.
2. I met an European the last week.
     a b      c
ಈ ವಾಕ್ಯದ b ಭಾಗದಲ್ಲಿ ತಪ್ಪಿದೆ. ಇಲ್ಲಿ an Europeanಗೆ ಬದಲಾಗಿ a European ಎಂದು ಇರಬೇಕು. ಏಕೆಂದರೆ, European ಎಂಬ ಪದ ಪ್ರಾರಂಭವಾಗುವುದು ಯು(Eu) ಎಂಬ consonant soundನಿಂದ. ಹಾಗಾಗಿ, consonant soundನಿಂದ ಪ್ರಾರಂಭವಾಗುವ ಯಾವುದೇ ಪದದ ಹಿಂದೆ a ಎಂಬ article ಇರಬೇಕೇ ಹೊರತು an ಅಲ್ಲ.
3. He is a honest man
    a      b   
ಈ ವಾಕ್ಯದಲ್ಲಿನ b ಭಾಗದಲ್ಲಿ ತಪ್ಪಿದೆ. Honest ಪದದ ಹಿಂದೆ a ಗೆ ಬದಲಾಗಿ an ಎಂಬ article ಇರಬೇಕು. ಏಕೆಂದರೆ, honest ನಲ್ಲಿನ h ಅಕ್ಷರವು silent ಆಗುರುವುದರಿಂದ, ಅದರ ಉಚ್ಚಾರಣೆ ಆನೆಸ್ಟ್ ಎಂದೇ ಹೊರತು ಹಾನೆಸ್ಟ್ ಅಲ್ಲ. ಹಾಗಾಗಿ, ಅ, ಆ, ಇ, ಈ, ಉ, ಊ, ಎ, ಏ, ಐ, ಒ, ಓ, ಜೌ.. ಎಂಬಂತಹ vowel soundನಿಂದ ಪ್ರಾರಂಭವಾಗುವ ಯಾವುದೇ ಪದದ ಹಿಂದೆ, an ಎಂಬ articleನ ಬಳಕೆ ಸರಿಯಾದುದು.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ, usage ಮತ್ತು spelling errorsಗೆ ಸಂಬಂಧಿಸಿದಂತೆ ಇಂಗ್ಲಿಷ್ ವಾಕ್ಯಗಳ ವಿಶ್ಲೇಷಣೆಯನ್ನು ತಿಳಿದುಕೊಳ್ಳೋಣ.
1. I met my cousin brother last week.
     a                    b                   c
ಈ ವಾಕ್ಯದ b ಭಾಗದಲ್ಲಿ ತಪ್ಪು ಕಂಡುಬರುತ್ತದೆ. Cousin brotherಗೆ ಬದಲಾಗಿ cousinಎಂದಷ್ಟೇ ಇರಬೇಕು. ಸಂಬಂಧಗಳ ಬಗ್ಗೆ ಮಾತನಾಡುವಾಗ, ಅತ್ತೆಯ ಮಗ ಅಥವಾ ದೊಡ್ಡಪ್ಪ, ಚಿಕ್ಕಪ್ಪನ ಮಗನನ್ನು cousin brother  ಎಂದೂ, ಅತ್ತೆಯ ಮಗಳು, ದೊಡ್ಡಪ್ಪ, ಚಿಕ್ಕಪ್ಪನ ಮಗಳನ್ನು cousin sisterಎಂದೂ, ಸಾಧಾರಣವಾಗಿ ನಾವು ನಮ್ಮ ಆಡುಭಾಷೆಯಲ್ಲಿ ಉಪಯೋಗಿಸುತ್ತೇವೆ. ಆದರೆ, ಶಿಷ್ಟ ಇಂಗ್ಲಿಷ್‌ನ ಪ್ರಕಾರ, ಸರಿಯಾದ ಉಪಯೋಗ (usage) ವೆಂದರೆ, ಅತ್ತೆಯ ಮಗನಾಗಲೀ, ಮಗಳಾಗಲೀ, cousin ಎಂದಷ್ಟೇ ಹೇಳಬೇಕು.
2. The porter carried the luggages.
      a         b         c
ಈ ವಾಕ್ಯದ c ಭಾಗದಲ್ಲಿ ಲೋಪವನ್ನು ಕಾಣಬಹುದು. Luggages ಎಂಬುದರ ಬದಲು luggage ಎಂದಿರಬೇಕು. Suiticase, bag, kitನಂತಹ ಎಷ್ಟೇ ವಸ್ತುಗಳಿದ್ದರೂ, ಎಲ್ಲವನ್ನೂ ಸೇರಿಸಿ liggageeಎಂದು ಬಳಸಬೇಕೇ ಹೊರತು luggages ಎಂದಲ್ಲ. ಈ ನಿಟ್ಟಿನಲ್ಲಿ, ಇದೇ ತರಹದ ಇನ್ನೂ ಕೆಲವು ಪದಗಳ ಬಗ್ಗೆ ಎಚ್ಚರ ವಹಿಸಬೇಕು
– furnitures, informations, peoples, publics ಮುಂತಾದವುಗಳು. ಇವುಗಳ ಬದಲಾಗಿ furniture, information, people, public ಎಂಬ ಪದಗಳು ಸರಿಯಾದ ಬಳಕೆ.
3. By the time I reached the college the principal left.
         a  b                  c
ಈ ವಾಕ್ಯದ c  ಭಾಗದಲ್ಲಿ ತಪ್ಪು ಕಂಡುಬರುತ್ತದೆ. The principal leftಗೆ ಬದಲಾಗಿ the principal had left ಎಂದಿರಬೇಕು. ಭೂತಕಾಲದಲ್ಲಿ ಎರಡು ಕ್ರಿಯೆಗಳು ನಡೆದಿದ್ದರೆ, ಮೊದಲನೆಯ ಕ್ರಿಯೆಗೆ past perfect tense ಅನ್ನೂ ಹಾಗೂ ಎರಡನೆಯ ಕ್ರಿಯೆಗೆ simple past tense ಅನ್ನೂ ಬಳಸಬೇಕು. ಹಾಗಾಗಿ ಮೊದಲೇ ನಡೆದ ಕ್ರಿಯೆಯಾದ the principal had left (past perfect tense) ಸರಿಯಾದ ಬಳಕೆ.
4.He seems week today
     a        b       c
ಈ ವಾಕ್ಯದ b ಭಾಗದಲ್ಲಿ ತಪ್ಪಿದೆ. ಇಲ್ಲಿ weekಗೆ ಬದಲಾಗಿ weakಎಂಬ spelling ಇರಬೇಕು. ‘ವಾರ’ ಎಂಬ ಅರ್ಥವನ್ನು ಕೊಡುವ weekನ ಬದಲಾಗಿ, ‘ನಿಶ್ಶಕ್ತಿ’ ಎಂಬ ಅರ್ಥವನ್ನು ಕೊಡುವ weak ಎಂಬ ಪದ ಇಲ್ಲಿ ಸೂಕ್ತ.
5. I recieved the cheque yesterday.
     a                  b                  c
ಈ ವಾಕ್ಯದ a ಭಾಗದಲ್ಲಿ ತಪ್ಪಿದೆ. recieved ಎಂಬ ಪದದsspelling ತಪ್ಪಾಗಿದೆ ಅದು received ಎಂದಿರಬೇಕು.
6. Our efforts must not go in vein.
      a          b            c
ಈ ವಾಕ್ಯದಲ್ಲಿ  c ಭಾಗದಲ್ಲಿ, vein ಪದದ spelling ತಪ್ಪಿದೆ. ‘ರಕ್ತನಾಳ’ ಎಂಬ ಅರ್ಥವನ್ನು ಕೊಡುವ veinಗೆ ಬದಲಾಗಿ, ‘ವ್ಯರ್ಥ’ ಎಂಬ ಅರ್ಥವನ್ನು ಕೊಡುವ vain ಇಲ್ಲಿ ಸೂಕ್ತವಾದ ಪದ.
ಕಲಿಯೋಣ ಬನ್ನಿ... 13

ಸಂಭಾಷಣೆಯಲ್ಲಿ ಪ್ರಿಫಿಕ್ಸ್‌ ಉಪಯೋಗ



ನಮ್ಮ ಪದ ಸಂಪತ್ತನ್ನು (ವೊಕ್ಯಾಬ್ಯುಲರಿಯನ್ನು) ಹೆಚ್ಚಿಸಿಕೊಳ್ಳುವಲ್ಲಿ prefix ಮತ್ತು suffixಗಳ ಪಾತ್ರ ಮಹತ್ವದ್ದು. ಪದವೊಂದನ್ನು ಮೂಲಪದ (root word), ಪೂರ್ವ ಪ್ರತ್ಯಯ (prefix) ಹಾಗೂ ಅಂತ್ಯಪ್ರತ್ಯಯ (suffix) ಎಂಬ ಮೂರು ಭಾಗಗಳಾಗಿ ವಿಂಗಡಿಸಬಹುದು.
ಯಾವುದಾದರೊಂದು ಮೂಲಪದದ ಹಿಂದೆ ಕೆಲವು ಅಕ್ಷರಗಳನ್ನು ಸೇರಿಸಿ, ಇನ್ನೊಂದು ಅರ್ಥಪೂರ್ಣವಾಗಿರುವ ಪದವನ್ನು ಸೃಷ್ಟಿಸಬಹುದು. ಅಂತಹ ಅಕ್ಷರಗಳನ್ನು prefix ಎನ್ನುತ್ತೇವೆ.
ಉದಾ: 1. Kind ಎನ್ನುವ ಮೂಲಪದದ ಹಿಂದೆ ‘un’ ಎನ್ನುವ 2 ಅಕ್ಷರಗಳ prefix ಅನ್ನು ಸೇರಿಸಿ unkind ಎನ್ನುವ ಇನ್ನೊಂದು ಪದವನ್ನು ಮಾಡಬಹುದು.
2. Agreeಯ ಹಿಂದೆ dis ಎನ್ನುವ 3 ಅಕ್ಷರಗಳ prefix ಅನ್ನು ಸೇರಿಸಿದಾಗ disagree ಎನ್ನುವ ಬೇರೊಂದು ಪದದ ಸೃಷ್ಟಿಯಾಗುತ್ತದೆ.
3. Activeನ ಹಿಂದೆ hyper ಎನ್ನುವ 4 ಅಕ್ಷರಗಳ prefix ಅನ್ನು ಸೇರಿಸಿ hyperactive ಮಾಡಬಹುದು.
ಇಂಗ್ಲಿಷ್ ಪದಗಳು ಸಾಮಾನ್ಯವಾಗಿ ಈ ಕೆಳಗಿನ prefix ಗಳೊಂದಿಗೆ ಕಾಣಿಸಿಕೊಳ್ಳುತ್ತವೆ:
Un, dis, mis, il, im, ir, de, sub, re, pre, hyper, hypo, over, under...
PPrefixಗಳನ್ನು ಸರಿಯಾಗಿ ಬಳಸಿದಾಗ ಮಾತ್ರ ಅರ್ಥಪೂರ್ಣವಾದ ಪದಗಳು ಸೃಷ್ಟಿಯಾಗುತ್ತಾ ಹೋಗುತ್ತವೆ. ಬೇರೆ ಬೇರೆ ರೀತಿಯ ಪದಗಳನ್ನು ರಚಿಸಬೇಕಾದರೆ, ವಿವಿಧ prefix ಗಳನ್ನು ಉಪಯೋಗಿಸಬೇಕಾಗುತ್ತದೆ.
ಮೂಲಪದದ ವಿರುದ್ಧಾರ್ಥವನ್ನು ಸೂಚಿಸಲು un, im, il, ir, de, dis, mis ಎನ್ನುವಂತಹ prefixಗಳನ್ನು ಉಪಯೋಗಿಸಬೇಕಾಗುತ್ತದೆ.
ಉದಾ: kind - unkind,
Possible - impossible,
Legal - illegal,
Regular - irregular,
Hydrate - dehydrate,
Agree - disagree,
Management - mismanagement
Re ಎನ್ನುವ prefix, ಮತ್ತೆ ಎನ್ನುವ ಅರ್ಥವನ್ನು ಸೂಚಿಸುತ್ತದೆ.
ಉದಾ: open – reopen
Act – react
Organise – reorganise
Pre ಎನ್ನುವ prefix ಅನ್ನು ‘ಮುಂಚೆ’ ಎಂಬ ಅರ್ಥವನ್ನು ಸೂಚಿಸಲು ಉಪಯೋಗಿಸಬಹುದು.
ಉದಾ: Paid – prepaid,
Caution – precaution,
Requisite – prerequisite...
Co ಎಂಬ prefix, ‘ಜೊತೆಗೆ’ ಎನ್ನುವ ಅರ್ಥವನ್ನು ಸೂಚಿಸುತ್ತದೆ.
ಉದಾ: Operate – cooperate,
Ordinate – coordinate,
Education – coeducation
Hyper, hypo ಎನ್ನುವ prefix ಗಳು ಕೂಡ ‘ಅತಿ ಹೆಚ್ಚು’ ಹಾಗೂ ‘ತುಂಬಾ ಕಡಿಮೆ’ ಎನ್ನುವ ಅರ್ಥಗಳನ್ನು ಸೂಚಿಸುತ್ತವೆ.
ಉದಾ: hyperthyroid, hypothyroid...
Over, under ಎನ್ನುವ prefix ಗಳು ಕೂಡ ‘ಅತಿ ಹೆಚ್ಚು’ ಹಾಗೂ ‘ತುಂಬಾ ಕಡಿಮೆ’ ಎನ್ನುವ ಅರ್ಥಗಳನ್ನು ಸೂಚಿಸಲು ಸಹಾಯ ಮಾಡುತ್ತವೆ.
ಉದಾ: active – overactive,
Paid – underpaid.
Sub ಎನ್ನುವ prefix, ‘ಕೆಳ’/‘ಒಳ’ ಎನ್ನುವ ಅರ್ಥಗಳನ್ನು ಸೂಚಿಸುತ್ತವೆ.
ಉದಾ: Conscious – subconscious,
Branch – subbranch
ಈ ಮೇಲೆ ಕೊಟ್ಟಿರುವ ಉದಾಹರಣೆಗಳು, ಇಂಗ್ಲಿಷ್‌ನ ಸಾಮಾನ್ಯ ಬಳಕೆಯಲ್ಲಿರುವಂತಹ prefixಗಳು. ಹೀಗೆ, ಅವುಗಳ ಜ್ಞಾನ, ಉದ್ದೇಶ ಹಾಗೂ ಅರ್ಥಗಳನ್ನು ತಿಳಿದುಕೊಂಡು ಬಳಸುತ್ತಾ ಹೋದಂತೆ, ನಾವು ಮೂಲ ಪದಗಳ ಜೊತೆಜೊತೆಗೆ ಅವುಗಳಿಂದ ಹುಟ್ಟುವ ಇನ್ನೂ ಹಲವಾರು ಪದಗಳನ್ನು ತಿಳಿದುಕೊಂಡು, ಬಳಸಿ, ನಮ್ಮ ವೊಕ್ಯಾಬ್ಯುಲರಿಯನ್ನು ಹೆಚ್ಚಿಸಿಕೊಳ್ಳಬಹುದು. ಅಷ್ಟೇ ಅಲ್ಲದೆ prefixಗಳ ಬಳಕೆಯಿಂದ ನಮ್ಮ ಸಂಭಾಷಣೆಗೆ ಆಕರ್ಷಕವಾದ ಸಂಕ್ಷಿಪ್ತತೆ ದೊರಕುತ್ತದೆ.
Prefix ಗಳ ಬಳಕೆಯ ಜೊತೆಗೆ suffix ಗಳ ಬಳಕೆಯ ಬಗ್ಗೆಯೂ ತಿಳಿದು ಕೊಳ್ಳುವುದು ಮುಖ್ಯ. ಮೂಲಪದದ ಮುಂದೆ ಕೆಲವು ಅಕ್ಷರಗಳನ್ನು ಸೇರಿಸಿ ಇನ್ನೊಂದು ಅರ್ಥಪೂರ್ಣವಾಗಿರುವ ಪದವನ್ನು ಮಾಡಬಹುದು. ಅಂತಹ ಅಕ್ಷರಗಳನ್ನು suffix ಎಂದು ಕರೆಯುತ್ತೇವೆ.
ಉದಾ: Kind ಎನ್ನುವ ಮೂಲ ಪದದ ಮುಂದೆ ly ಎನ್ನುವ suffixಅನ್ನು ಸೇರಿಸಿ, kindly ಎನ್ನುವ ಇನ್ನೊಂದು ಪದವನ್ನು ಮಾಡಬಹುದು.
ಒಂದೊಂದು ರೀತಿಯ suffix ಅನ್ನು ಸೇರಿಸಿದಾಗ, ಮೂಲಪದವು ಒಂದೊಂದು ರೀತಿಯಲ್ಲಿ ಬದಲಾಗುತ್ತಾ ಹೋಗುತ್ತದೆ.
Er, est ಎನ್ನುವ suffixಗಳನ್ನು ಸಣ್ಣ ಗಾತ್ರದ adjective ಗಳಿಗೆ ಸೇರಿಸಿದಾಗ, ಅವುಗಳ ಹೋಲಿಕೆಯ ಪ್ರಮಾಣವನ್ನು (degree of comparison) ಸೂಚಿಸಬಹುದು.
ಉದಾ: strongಗೆ ‘er’ ಸೇರಿಸಿ stronger ಹಾಗೂ ‘est’ ಸೇರಿಸಿ strongest ಮಡಬಹುದು. ಅದೇ ರೀತಿ ಇನ್ನೂ ಕೆಲವು ಪದಗಳನ್ನು ಗಮನಿಸಿ:
Tall, taller, tallest
Short, shorter, shortest
S ಎನ್ನುವ suffix ಅನ್ನು ಯಾವುದಾದರೂ common nounನ ಮುಂದೆ ಬಳಸಿದಾಗ, ಅದು ಬಹುವಚನವಾಗುತ್ತದೆ.
ಉದಾ: table – tables, pen-pens
ಆದರೆ, s/es/ies ಎನ್ನುವ suffix ಅನ್ನು ಯಾವುದಾದರೂ ಕ್ರಿಯಾಪದದ ಮುಂದೆ ಬಳಸಿದಾಗ, ಅದು ಏಕವಚನವಾಗುತ್ತದೆ.
ಉದಾ: come – comes, go–goes, study-studieses ಹಾಗೆಯೇ, verbಗಳ tense ಅನ್ನು ಬದಲಾಯಿಸಬೇಕಾದರೆ ಸೂಕ್ತ ರೀತಿಯ suffixಗಳನ್ನು ಉಪಯೋಗಿಸಬೇಕು.
ED/d/ied ಎನ್ನುವ suffixನಿಂದ ವರ್ತಮಾನ ಕಾಲದ ಕ್ರಿಯಾಪದವನ್ನು ಭೂತಕಾಲದ ಕ್ರಿಯಾಪದವನ್ನಾಗಿ ಬದಲಾಯಿಸಬಹುದು.
ಉದಾ: start–started,
Charge–charged,
Study-studied
Ing ಎನ್ನುವusuffix ಅನ್ನು ಕ್ರಿಯಾಪದದ ಮುಂದೆ ಬಳಸಿದಾಗ continuous tense ಆಗುತ್ತದೆ.
ಉದಾ: go–going
Learn–learning
Write - writing
ಕೆಲವು ಸಂದರ್ಭಗಳಲ್ಲಿ ing ಅನ್ನುssuffix ಆಗಿ ಬಳಸಿದಾಗ ಕ್ರಿಯಾಪದವು ನಾಮಪದವಾಗಿ ಬದಲಾಗುತ್ತದೆ.
ಉದಾ: meet - meeting
ಇಲ್ಲಿ ನಾವು ಗಮನಿಸಬೇಕಾದ ವಿಷಯವೆಂದರೆ, ನಮ್ಮ ಸಂಭಾಷಣೆ ಸರಳವಾಗಿರಬೇಕಾದರೆ, ನಾಮಪದದ ರೂಪದಲ್ಲಿರುವ ಶಬ್ದವನ್ನು ಆದಷ್ಟು ಮಟ್ಟಿಗೆ ಕ್ರಿಯಾಪದದ ರೂಪದಲ್ಲಿ ಉಪಯೋಗಿಸಲು ಪ್ರಯತ್ನಿಸಬೇಕು.
ಉದಾ: I have a meeting (noun) with the director.- ಈ ರೀತಿಯ ವಾಕ್ಯಕ್ಕೆ ಬದಲಾಗಿ,
II have to meet (verb) the director. - ಈ ರೀತಿಯ ವಾಕ್ಯವು ನಮ್ಮ ಸಂಭಾಷಣೆಗೆ ಸರಳತೆ ಮತ್ತು ಖಚಿತತೆಯನ್ನು ತಂದುಕೊಡುತ್ತದೆ.
Lyಅನ್ನು adjectiveಗಳ ಮುಂದೆ ಸೇರಿಸಿದಾಗ adverbಗಳಾಗುತ್ತವೆ.
ಉದಾ: beautiful – beautifully
Quick - quickly
Dom/ion/nessಎಂಬ suffixಗಳನ್ನು ಪದಗಳಿಗೆ ಸೇರಿಸಿದಾಗ, ಆ ಪದಗಳು nounಗಳಾಗಿ ಪರಿವರ್ತನೆಗೊಳ್ಳುತ್ತವೆ.
ಉದಾ: stardom
Examination
Cleanlinessss
ಈ ಮೇಲಿನ ಉದಾಹಣೆಗಳಿಂದ ನಾವು ತಿಳಿಯಬಹುದಾದ ಒಂದು ಸ್ವಾರಸ್ಯಕರವಾದ ವಿಷಯವೆಂದರೆ, s ಎಂಬ suffixಅನ್ನು ಹೊಂದಿರುವ ಪದಗಳು ಸಾಮಾನ್ಯವಾಗಿ noun ಅಥವಾ verb ಆಗಿರುತ್ತವೆ.
Ed/ing/en, suffix ಆಗಿದ್ದರೆ, ಅವು ಬಹುತೇಕ verb ಗಳಾಗಿರುತ್ತವೆ.
Ly, suffix ಆಗಿದ್ದರೆ, ಆ ಪದಗಳು ಸಾಮಾನ್ಯವಾಗಿ adverbbಗಳಾಗಿರುತ್ತವೆ ಹಾಗೂ dom/ion/ness, suffix ಆಗಿದ್ದರೆ, ಆ ಪದಗಳು ಸಾಮಾನ್ಯವಾಗಿ nounಗಳಾಗಿರುತ್ತವೆ.
ಕಲಿಯೋಣ ಬನ್ನಿ...

ಇಂಗ್ಲಿಷ್‌ನಲ್ಲಿ ಆರ್ಟಿಕಲ್ಸ್‌ಗಳ ಪಾತ್ರ


ಕನ್ನಡದಲ್ಲಿ articlesಗೆ ಸಮಾನವಾದ ಪದಗಳಿಲ್ಲ. ಆದ್ದರಿಂದ ಇವುಗಳನ್ನು ನಾವು ಎಚ್ಚರಿಕೆಯಿಂದ ಬಳಸಬೇಕು. ಇಂಗ್ಲಿಷ್‌ನಲ್ಲಿ a, an, the ಎನ್ನುವ ಮೂರು adjectiveಗಳನ್ನು articles ಎಂದು ಕರೆಯುತ್ತೇವೆ. ಈ ಮೂರರಲ್ಲಿ a, an ಗಳನ್ನು indefinite articles ಎನ್ನುತ್ತೇವೆ ಹಾಗೂ the ಅನ್ನು definite article ಎಂದು ಕರೆಯುತ್ತೇವೆ. ಇಲ್ಲಿ definite ಎಂದರೆ ನಿರ್ದಿಷ್ಟ ಹಾಗೂ indefinite ಎಂದರೆ ನಿರ್ದಿಷ್ಟ ವಲ್ಲದುದು ಎಂದರ್ಥ. ನಮ್ಮ ಸಂಭಾಷಣೆಯಲ್ಲಿ ಯಾವುದಾದರೂ ವಸ್ತು/ವಿಷಯ/ವ್ಯಕ್ತಿಯ ಬಗ್ಗೆ ಮಾತನಾಡುವಾಗ ಅವುಗಳು ನಮಗೆ ನಿರ್ದಿಷ್ಟವಾಗಿ ತಿಳಿಯದೆ ಇದ್ದಾಗ a ಅಥವಾ an ಎನ್ನುವ indefinite articlesesಅನ್ನು ಬಳಸಬೇಕಾಗುತ್ತದೆ.
ಉದಾ: There is a letter for you.
An apple a day is good for health.
ಈ ಮೇಲಿನ ವಾಕ್ಯಗಳಲ್ಲಿ  a letter, an apple ಎಂದರೆ ನಿರ್ದಿಷ್ಟವಲ್ಲದ ಯಾವುದೋ ಪತ್ರ ಹಾಗೂ ಯಾವುದಾದರೂ ಸೇಬು ಎಂದರ್ಥ.
ಹಾಗೆಯೇ, ನಾವು ಯಾರ ಬಗ್ಗೆ ಅಥವಾ ಯಾವುದರ ಬಗ್ಗೆ ಮಾತನಾಡುತ್ತಿದ್ದೇವೆ ಎನ್ನುವುದು ನಿರ್ದಿಷ್ಟವಾಗಿ ತಿಳಿದಿದ್ದಲ್ಲಿ, the ಎನ್ನುವ definite article ಅನ್ನು ಬಳಸಬೇಕಾಗುತ್ತದೆ.
ಉದಾ: I know the clinic - ಈ ವಾಕ್ಯದಲ್ಲಿ, the clinic ಎಂದರೆ ಒಂದು ನಿರ್ದಿಷ್ಟವಾದ clinic ಎಂದರ್ಥ.
Indefinite ಅನ್ನು ಬಳಸುವಾಗ ಎಲ್ಲಿ a ಹಾಗೂ ಎಲ್ಲಿ an ಬಳಸಬೇಕು ಎಂಬುದರ ಬಗ್ಗೆ ಗಮನಹರಿಸೋಣ. ಯಾವ ಪದಗಳು consonant sound ನಿಂದ ಪ್ರಾರಂಭವಾಗುತ್ತವೆಯೋ ಅವುಗಳ ಹಿಂದೆ a ಉಪಯೋಗಿಸಬೇಕು.
ಉದಾ:A boy, a girl...
ಆದರೆ, hour, honest, heir ಗಳಂತಹ ಪದಗಳನ್ನು ಬಳಸುವಾಗ a ಉಪಯೋಗಿಸದಂತೆ ಎಚ್ಚರವಹಿಸಬೇಕು. ಏಕೆಂದರೆ, ಈ ಪದಗಳಲ್ಲಿ h ಅನ್ನು ಉಚ್ಚರಿಸುವುದಿಲ್ಲ. ಹವರ್/ಹಾನೆಸ್ಟ್/ಹೇರ್ ಗೆ ಬದಲಾಗಿ ಅವರ್/ಆನೆಸ್ಟ್/ಏರ್ ಎಂದು ಉಚ್ಚರಿಸುತ್ತೇವೆ. ಹಾಗಾಗಿ, an hour, an honest man, an heir ಬಳಸಬೇಕಾಗುತ್ತದೆ.
A ಎನ್ನುವ article ಅನ್ನು ನಮ್ಮ ಸಂಭಾಷಣೆಯಲ್ಲಿ ಬಳಸುವಾಗ, ಅದರ ಉಚ್ಚಾರಣೆಯ ಕಡೆಗೂ ನಮ್ಮ ಗಮನವಿರಬೇಕು. ಅದನ್ನು ವಾಕ್ಯಗಳಲ್ಲಿ ಬಳಸುವಾಗ ಎ ಎನ್ನದೆ ಅ ಎಂದು ಉಚ್ಚರಿಸಬೇಕು.
ಉದಾ: I am a teacher - ಈ ವಾಕ್ಯವನ್ನು ಐಯಾಮ್ ಎ ಟೀಚರ್ ಎನ್ನದೆ ಐಯಾಮ್ ಅ ಟೀಚರ್ ಎಂದು ಉಚ್ಚರಿಸಬೇಕಾಗುತ್ತದೆ.
A, e, i, o, u ಎಂಬುವು vowels ಎಂಬುದು ಸಾಮಾನ್ಯ ತಿಳುವಳಿಕೆ. ಇದಕ್ಕೆ ಅಪವಾದಗಳೂ ಇವೆ ಎಂಬುದನ್ನು ಮುಂದೆ ನೋಡೋಣ. ಯಾವ ಪದಗಳು vowel sound ನಿಂದ ಪ್ರಾರಂಭವಾಗುತ್ತವೆಯೋ ಅವುಗಳ ಹಿಂದೆ an ಬಳಸಬೇಕು.
ಉದಾ: an orange, an umbrella...
ಆದರೆ, university, European, useful ಎನ್ನುವಂತಹ ಪದಗಳನ್ನು ಬಳಸುವಾಗ an ಉಪಯೋಗಿಸಬಾರದು. ಏಕೆಂದರೆ, ಈ ಪದಗಳ ಮೊದಲನೆಯ ಅಕ್ಷರ vowel ಆದರೂ ಸಹ ಇವುಗಳನ್ನು ಉಚ್ಚರಿಸಬೇಕಾದರೆ ‘yu’ (ಯು) ಎನ್ನುವ consonant sound ನಿಂದ ಪ್ರಾರಂಭವಾಗುತ್ತವೆ. ಹಾಗಾಗಿ  a university, a European, a useful thing... ಎಂದು ಬಳಸಬೇಕಾಗುತ್ತದೆ.
Articles ನ ಸರಿಯಾದ ಬಳಕೆ ಬರಿ ಕಂಠಪಾಠದಿಂದ ದಕ್ಕುವಂತಹುದಲ್ಲ. ಕುಶಲ ಸಂಭಾಷಣಾಕಾರರ ಮಾತುಗಳನ್ನು ಗಮನವಿಟ್ಟು ಆಲಿಸಿ, ಈ articlesನ ಸೂಕ್ಷ್ಮಗಳನ್ನು ನಿಧಾನವಾಗಿ ಮನದಟ್ಟು ಮಾಡಿಕೊಳ್ಳಬೇಕು.
Definite articles ಉಪಯೋಗದ ಬಗ್ಗೆ ನೋಡೋಣ.
The ಎನ್ನುವ definite article ಅನ್ನು ಎಲ್ಲೆಲ್ಲಿ ಹಾಗೂ ಹೇಗೆ ಉಪಯೋಗಿಸಬಹುದು ಎಂಬುದನ್ನು ತಿಳಿದು ಕೊಳ್ಳೋಣ.
ನದಿ, ಸಮುದ್ರ, ದ್ವೀಪ ಅಥವಾ ಪರ್ವತಗಳನ್ನು ಕುರಿತು ಮಾತನಾಡುವಾಗ, ಅವುಗಳ ಹೆಸರಿನ ಹಿಂದೆ the ಬಳಸಬೇಕಾಗುತ್ತದೆ.
ಉದಾ: The Kaveri flows through the two states.
We can walk on some parts of the Arctic ocean, as it is frozen.
ಕೆಲವು ಪುಸ್ತಕಗಳ ಹೆಸರಿನ ಹಿಂದೆಯೂ the ಬಳುಸುತ್ತೇವೆ.
ಉದಾ: Valmiki wrote the Ramayana.
The Mahabharatha is a massive epic.
ನಮ್ಮ ಸಂಭಾಷಣೆಯಲ್ಲಿ, ಭೂಮಿ, ಆಕಾಶ, ಸೂರ್ಯ, ಚಂದ್ರ, ದಿಕ್ಕುಗಳು ಮುಂತಾದ ಅನನ್ಯ ಮತ್ತು ಏಕಮಾತ್ರ ವಾದವುಗಳ ಬಗ್ಗೆ ಮಾತನಾಡುವಾಗ, ಅವುಗಳ ಹಿಂದೆ  the ಉಪಯೋಗಿಸುತ್ತೇವೆ.
ಉದಾ: The sun rises in the east.
The sky has grown very dark.
ವಾದ್ಯಗಳ ಹೆಸರಿನ ಹಿಂದೆಯೂ the ಬಳಸಬೇಕು.
ಉದಾ: He plays the guitar very effectively.
ಕ್ರಮಸೂಚಕಗಳ (first, second, third, ....) ಹಿಂದೆ the ಉಪಯೋಗಿಸುತ್ತೇವೆ.
ಉದಾ: I would be the first to admit my mistakes.
My child has secured the first rank.
ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಕ್ರಮಸೂಚಕಗಳು noun ಅಥವಾ adjective ಆಗಿದ್ದ ಸಂದರ್ಭದಲ್ಲಿ ಮಾತ್ರ ಅವುಗಳ ಹಿಂದೆ the ಬಳಸುತ್ತೇವೆ. ಆದರೆ, ಅದೇ ಕ್ರಮಸೂಚಕಗಳು (ordinals) adverb ಆಗಿದ್ದರೆ, ಅವುಗಳ ಹಿಂದೆ the ಬಳಸಬಾರದು.
ಉದಾ: My child stood first in the class.
Tallest, strongest, most beautiful, most intelligent ಮುಂತಾದ ssuperlative degree adjective  ಗಳ ಹಿಂದೆ the ಉಪಯೋಗಿಸಬೇಕು.
ಉದಾ: She is the cutest girl in the family.
He is the most intelligent boy in the class.
Proper nounಗಳ ಹಿಂದೆ the ಬಳಸಬಾರದು. ಹಾಗಾಗಿ, ಈ ಕೆಳಗೆ ಸೂಚಿಸಿರುವ ಸಾಮಾನ್ಯ ತಪ್ಪುಗಳಿಂದ ದೂರವಿರಿ:
1. The Bangalore is a place of opportunities (ತಪ್ಪು).
Bangalore is a place of opprotunities  (ಸರಿ).
2. I am learning the English (ತಪ್ಪು).
II am learning English (ಸರಿ).
The ನ ಸರಿಯಾದ ಬಳಕೆಯ ಜೊತೆಗೆ, ಅದರ ಸರಿಯಾದ ಉಚ್ಚಾರಣೆಯೂ ನಮಗೆ ತಿಳಿದಿರಬೇಕು. Consonant sound ಇಂದ ಪ್ರಾರಂಭವಾಗುವ ಪದದ ಹಿಂದೆ the ಬಂದರೆ, ಅದನ್ನು ‘ದ’ ಎಂದೂ ಹಾಗೂ vowel sound ಇಂದ ಪ್ರಾರಂಭವಾಗುವ ಪದದ ಹಿಂದೆ the ಬಂದರೆ, ಅದನ್ನು ‘ದಿ’ ಎಂದು ಉಚ್ಚರಿಸಬೇಕು.
ಉದಾ: The end of the film is fascinating. ಈ ವಾಕ್ಯವನ್ನು ಓದುವ ರೀತಿ ಹೀಗಿದೆ:
ದಿ ಎಂಡ್ ಆಫ್ ದ ಫಿಲ್ಮ್ ಈಸ್‌ಫ್ಯಾಸಿನೇಟಿಂಗ್.
the ಎನ್ನುವ ಪದ ಇಂಗ್ಲಿಷ್ ಭಾಷೆಯಲ್ಲಿಯೇ ಅತಿ ಹೆಚ್ಚು ಉಪಯೋಗಸಲಾಗುವ ಪದ. ಅದರ ಸರಿಯಾದ ಬಳಕೆಯನ್ನು ಗಮನವಿಟ್ಟು ಕಲಿಯಬೇಕು.
ಇಂಗ್ಲಿಷ್ ಕಲಿಯೋಣ ಬನ್ನಿ-10

ಪ್ಯಾಸಿವ್‌ ವಾಯ್ಸ್‌ನ ಉಪಯೋಗ



ಭಾಷೆಯ ವ್ಯಾಕರಣಕ್ಕೂ ಅರ್ಥವಂತಿಕೆಗೂ ಇರುವ ಸಂಬಂಧವನ್ನು ಗ್ರಹಿಸುವುದು ಭಾಷಾ ಕಲಿಕೆಯಲ್ಲಿ ಅತಿಮುಖ್ಯ ಅಂಶ. ಈ ನಿಟ್ಟಿನಲ್ಲಿ Passive voice ಮತ್ತು active voice ಗಳ ರಚನೆ ಮತ್ತು ಅರ್ಥವ್ಯಾಪ್ತಿಗಳನ್ನು ಸರಿಯಾಗಿ ಕಲಿಯುವುದರಿಂದ ನಮ್ಮ ಭಾಷೆಯ ಸಂವಹನ ಶಕ್ತಿ ಹೆಚ್ಚುತ್ತದೆ.
ಯಾವುದೇ ವಾಕ್ಯದಲ್ಲಿನusubject  ಕರ್ತೃವಾಗಿದ್ದರೆ, ಅಂತಹ ವಾಕ್ಯದಲ್ಲಿನ ಕ್ರಿಯಾಪದವು active voiceನಲ್ಲಿರುತ್ತದೆ.
ಉದಾ: 1. Sita loves flowers.
2. Ram writes a letter.
3. The teacher taught the lesson.
ಈ ಎಲ್ಲಾ ವಾಕ್ಯಗಳಲ್ಲಿ Sita, Ram, The teacher, ಎಂಬ subsubjectಗಳು ಕರ್ತೃಗಳಾಗಿವೆ (agents of action) ಹಾಗಾಗಿ, loves, writes, taught ಎಂಬ ಕ್ರಿಯಾಪದಗಳು active voiceನಲ್ಲಿವೆ.
ಹಾಗೆಯೇ, ಯಾವುದೇ ವಾಕ್ಯದಲ್ಲಿನ subject ಕ್ರಿಯೆಗೆ ಒಳಪಟ್ಟಿದ್ದರೆ, ಅಂತಹ ವಾಕ್ಯದಲ್ಲಿನ ಕ್ರಿಯಾಪದವು Passive voiceನಲ್ಲಿರುತ್ತದೆ. ಉದಾ:
1.Flowers are loved by Sita.
2. A letter is written by Ram
3. The lesson was taught by the teacher.
Flowers, A letter, The lesson ಈ ಮೇಲಿನ ವಾಕ್ಯಗಳಲ್ಲಿನ subject ಗಳು. ಇಲ್ಲಿ, ಇವು ಕ್ರಿಯೆಯನ್ನು ಮಾಡುತ್ತಿಲ್ಲ. ಆದರೆ ಕ್ರಿಯೆಗೆ ಒಳಪಟ್ಟಿವೆ ಎಂಬುದನ್ನು ಗಮನಿಸಬೇಕು. Passive voiceನ ಮುಖ್ಯಲಕ್ಷಣವೇ (identifying feature) ಇದು.
ಸಾಮಾನ್ಯವಾಗಿ Passive voice ಅನ್ನು ಬಳಸುವ ಕೆಲವು ಸಂದರ್ಭಗಳನ್ನು ಇಲ್ಲಿ ಗಮನಿಸಿ:
*ನಮಗೆ ಕ್ರಿಯೆಯನ್ನು ಮಾಡಿದವರು ಯಾರು ಎಂದು ತಿಳಿಯದೆ ಇದ್ದಾಗ 1. passive voice ಅನ್ನು ಬಳಸುತ್ತೇವೆ.
ಉದಾ: My purse was stolen last night.
(ಇಲ್ಲಿ ಪರ್ಸನ್ನು ಕದ್ದವರಾರು ಎಂಬ ಮಾಹಿತಿ ಇಲ್ಲ.)
*ಕ್ರಿಯೆ ನಡೆಸಿದವರು ಮುಖ್ಯವಲ್ಲದೆ ಇದ್ದಾಗ passive voice ಅನ್ನು ಬಳಸಬಹುದು.
ಉದಾ: The building is constructed very quickly.
(ಇಲ್ಲಿ ಕಟ್ಟಡವನ್ನು ಕಟ್ಟಿದವರಾರು ಎಂಬುದು ಮುಖ್ಯವಲ್ಲ. ಅದಕ್ಕೆ ಬದಲಾಗಿ, ಕಟ್ಟಡ ನಿರ್ಮಾಣವಾಗಿರುವುದಷ್ಟೇ ಮುಖ್ಯ.)
*ಕ್ರಿಯೆಯ ಗುರಿ ಯಾರು ಎಂಬ ಅಂಶವನ್ನು ಎತ್ತಿ ತೋರಿಸಬೇಕಾದ ಸಂದರ್ಭಗಳಲ್ಲಿ  passive voice ಬಳಸುತ್ತೇವೆ.
ಉದಾ: Ashok was chosen the best singer of his school.
(ಇಲ್ಲಿ Ashokಗೆ ಹೆಚ್ಚು ಪ್ರಾಮುಖ್ಯ ಕೊಡಲಾಗಿದೆಯೇ ಹೊರತು, ಯಾರು ಅವನನ್ನು ಆಯ್ಕೆ ಮಾಡಿದರು ಎಂಬುದು ಮುಖ್ಯವಲ್ಲ)
*ಘೋಷಣೆಗಳು ಹಾಗೂ ಸೂಚನೆಗಳನ್ನು ಕೊಡುವ ಸಂದರ್ಭದಲ್ಲಿ passive voiceನ ಬಳಕೆ ಸೂಕ್ತ.
ಉದಾ: PPatrons are asked not to smoke. Application form should be filled in black ink.
*ಮಾಧ್ಯಮದ ಬರವಣಿಗೆಯಲ್ಲಿಯೂ passive voice ಇರುವಂತಹ ವಾಕ್ಯಗಳು ಹೆಚ್ಚಾಗಿ ಕಾಣುಸಿಗುತ್ತವೆ.
Passive voiceeನ ಬಗ್ಗೆ ನಾವು ತಿಳಿದುಕೊಳ್ಳಬೇಕಾದ ಇನ್ನೊಂದು ಮುಖ್ಯವಾದ ವಿಷಯವೆಂದರೆ, ಇದನ್ನು French ಅಥವಾ Germanನಂತಹ ಬೇರೆ  European ಭಾಷೆಗಳಿಗಿಂತ ಇಂಗ್ಲಿಷ್ ಭಾಷೆಯಲ್ಲಿಯೇ ಹೆಚ್ಚಾಗಿ ಬಳಸುತ್ತೇವೆ ಹಾಗೂ passive voice ಇರುವ ವಾಕ್ಯರಚನೆಗಳನ್ನು ಹೆಚ್ಚು ವಿಸ್ತಾರವಾಗಿ ಅಧಿಕೃತ ಕಾಗದ ಪತ್ರಗಳು (official documents) ಹಾಗೂ ವಿಜ್ಞಾನ ಬರವಣಿಗೆಯಲ್ಲಿ (scientific writing) ಕಾಣುತ್ತೇವೆ.
ಇಂಗ್ಲಿಷ್ ಭಾಷೆಯಲ್ಲಿ passive voiceನ ಉಪಯೋಗಗಳನ್ನು ತಿಳಿದುಕೊಳ್ಳುವುದರ ಜೊತೆಗೆ, ವಾಕ್ಯಗಳನ್ನು active voice ನಿಂದ passive voice ಬದಲಾಯಿಸುವುದನ್ನು ಕಲಿಯುವುದೂ ಮುಖ್ಯ.
ಮೊದಲಿಗೆ ಎಂತಹ ವಾಕ್ಯಗಳು ಈ ಬದಲಾವಣೆಗೆ ಒಳಪಡುತ್ತವೆ ಎಂಬುದನ್ನು ತಿಳಿದುಕೊಳ್ಳೋಣ:
subject ಮತ್ತು oobject ಎರಡೂ ಅಂಶಗಳು ಇರುವಂತಹ ವಾಕ್ಯಗಳನ್ನು ಮಾತ್ರ active voiceನಿಂದ passive voiceಗೆ ಬದಲಾಯಿಸಬಹುದು.
ಉದಾ: Ashok sings a song.
She has submitted the form.
They can draw the picture.
ಈ ಎಲ್ಲಾ ವಾಕ್ಯಗಳಲ್ಲಿ, Ashok, She, They ಎಂಬುವು subject ಗಳಾದರೆ, a song, the form, the picture ಎಂಬುವು objectಗಳು. ಹಾಗಾಗಿ, ಈ ವಾಕ್ಯಗಳನ್ನು activeನಿಂದ passiveಗೆ ಬದಲಾಯಿಸಬಹುದು. ಇಂತಹ ವಾಕ್ಯಗಳಲ್ಲಿನ verbಗಳನ್ನು transitive verbs ಎಂದು ಕರೆಯುತ್ತೇವೆ.
ಈ ಮೇಲಿನ ವಾಕ್ಯಗಳನ್ನು passive voiceಗೆ ಬದಲಿಸಿದನಂತರ ಹೀಗಿರುತ್ತವೆ:
A song is sung by Ashok.
The form has been submitted by her.
The picture can be drawn by them.
ಈ ರೀತಿಯ ಬದಲಾವಣೆಯನ್ನು ಮಾಡಬೇಕಾದಾಗ ನಾವು ಅನುಸರಿಸಬೇಕಾದ ಕೆಲವು ನಿಯಮಗಳನ್ನು ಗಮನಿಸಿ:
1. ಕ್ರಿಯಾಪದದ ಕಾಲವನ್ನು (tense)  ಬದಲಾಹಿಸಬಾರದು.
2. ಒಂದು ಸೂಕ್ತವಾದ -be-verbನ (am, is, are, was, were, be, been, being) ಕ್ರಿಯಾಪದದ past participleನ ರೂಪವನ್ನು ಸೇರಿಸಬೇಕು.
ಈ ಮೇಲಿನ ಉದಾಹರಣೆಗಳಲ್ಲಿನ is sung, has been submitted, can be drawn ಎಂಬ vverbಗಳನ್ನು ಗಮನಿಸಿದಾಗ, is, been, be ಎಂಬುವು be-verb ಗಳಾದರೆ, sung, submitted, drawn ಎಂಬುವು past - participlee ರೂಪದಲ್ಲಿರುವ ಕ್ರಯಾಪದಗಳಾಗಿವೆ. ಹಾಗಾಗಿ, ಒಂದು ವಾಕ್ಯ Passive voiceನಲ್ಲಿರಬೇಕಾದರೆ, ಒಂದು bbe-verb ಹಾಗೂ past-participlee ರೂಪದ ಒಂದು ಕ್ರಿಯಾಪದವು ಕಡ್ಡಾಯವಾಗಿ ಇರಲೇಬೇಕು.
ವಾಕ್ಯಗಳನ್ನು active voice ನಿಂದ passive voiceeಗೆ ರೂಪಾಂತರಿಸುವ ಸಂದರ್ಭದಲ್ಲಿ ನಾವು ತಿಳಿದುಕೊಳ್ಳಬೇಕಾದ ಇನ್ನೊಂದು ವಿಷಯವೆಂದರೆ, ಎಲ್ಲಾ ವಾಕ್ಯಗಳೂ ಈ ರೀತಿಯ ಬದಲಾವಣೆಗೆ ಒಳಪಡುವುದಿಲ್ಲ. ಹಾಗೆ ಬದಲಾವಣೆಗೆ ಒಳಪಡದ ವಾಕ್ಯಗಳಲ್ಲಿನ ಕ್ರಿಯಾಪದಗಳನ್ನು intransitive verbs ಎಂದು ಕರೆಯುತ್ತೇವೆ.
ಉದಾ: The dog barks.
           The sky is blue.
           The birds fly in the sky.
ಈ ಎಲ್ಲಾ ವಾಕ್ಯಗಳಲ್ಲಿ object ಇಲ್ಲದಿರುವುದರಿಂದ, barks, is, fly ಎಂಬ verbಗಳು iintransitive verbಗಳಾಗಿದ್ದು, ಇವುಗಳನ್ನು passive voiceeಗೆ ರೂಪಾಂತರಿಸಲು ಸಾಧ್ಯವಿಲ್ಲ.
ಈ active / passive voiceಗಳ ನಿಯಮಗಳು ತುಸು ರಗಳೆಯೆನಿಸಿದರೆ ಚಿಂತಿಸಬೇಡಿ. ರೂಢಿಯಾದಂತೆಲ್ಲಾ, ಈ ವ್ಯಾಕರಣ ನಿಯಮಗಳು ನಮ್ಮ ಸುಪ್ತಪ್ರಜ್ಞೆಯ ಭಾಗವಾಗಿ ಹೋಗುತ್ತವೆ ಹಾಗೂ ನಮ್ಮ ಭಾಷಾ ಕಲಿಕೆಯ ಪಯಣ ಹಂತಹಂತವಾಗಿ ನಿರಾಳವೆನಿಸುತ್ತದೆ.
ಕಲಿಯೋಣ ಬನ್ನಿ... – 9

ಉಪಯುಕ್ತ ಇಂಗ್ಲಿಷ್ ಪದಪುಂಜ


Word cluster ಗಳನ್ನು ತಿಳಿದುಕೊಳ್ಳುವ ಮುಖಾಂತರ ನಮ್ಮ ಶಬ್ದಭಂಡಾರವನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ಎಂಬುದನ್ನು ನಾವು ಈಗಾಗಲೇ ತಿಳಿದಿದ್ದೇವೆ. ನಮ್ಮ ಪದಸಂಪತ್ತನ್ನು ವಿಸ್ತರಿಸಿಕೊಳ್ಳಲು ಇನ್ನಷ್ಟು clusterಗಳನ್ನು ಗಮನಿಸೋಣ:
ಮನಶಾಸ್ತ್ರದಲ್ಲಿ phobia ಎನ್ನುವ ಒಂದು ಪರಿಕಲ್ಪನೆಯಿದೆ. Phobia ಎಂದರೆ ಭಯ. ಇದು ಭೀತಿಯ ಒಂದು ಸ್ವರೂಪ. ಸಾಮಾನ್ಯವಾಗಿ ನಾವು ತಿಳಿದುಕೊಳ್ಳಬೇಕಾದ phobiaಗಳೆಂದರೆ -
Acrophobia – fear of heights
Aqua phobia – fear of water
Glossophobia – fear of speaking in public
Gynophobia – fear of women
Androphobia – fear of men
Haemophobia – fear of //boold//
Necrophobia – fear of death
Nyctophobia – fear of darkness
Somniphobia – fear of sleep
Photophobia – fear of light
ಇವು ಒಂದು cluster ಆದರೆ, ಮನಸ್ಸಿನ ನಾನಾ ಭಾವನೆಗಳನ್ನು ಒಂದು cluster ಎಂದು ಪರಿಗಣಿಸಬಹುದು. ಮೂಲಭೂತವಾಗಿ, ನಾವು 8 ರೀತಿಯ ಭಾವನೆಗಳನ್ನು ವ್ಯಕ್ತಪಡಿಸುತ್ತೇವೆ - happiness (ಸಂತೋಷ), sadness (ದುಃಖ), anger (ಕೋಪ), confusion (ಗೊಂದಲ), fear (ಭಯ), guilt (ಅಪರಾಧಿ ಮನೋಭಾವ), weakness (ದೌರ್ಬಲ್ಯ), stength (ದೃಢತೆ).
ಸಂತೋಷ (happiness) ಕ್ಕೆ ಸಂಬಂಧಪಟ್ಟ ಪದಗಳನ್ನು ಗಮನಿಸಿ:
ಉತ್ಕಟವಾದ ಸಂತೋಷವಾದಾಗ ಉಪಯೋಗಿಸುವ ಪದಗಳು elated, excited, overjoyed, delighted, ecstatic...
ಮಧ್ಯತೀವ್ರತೆಯ ಸಂತೋಷವನ್ನು ವ್ಯಕ್ತಪಡಿಸುವಾಗ ಉಪಯೋಗಿಸಬಹುದಾದ ಪದಗಳು–cheerful, satisfied, contented, fine, pleased... ಹಾಗೆಯೇ, ದುಃಖ (sadness)ದ ತೀವ್ರತೆ ಹೆಚ್ಚಿದಾಗ ಬಳಸುವ ಪದಗಳು –depressed, hurt, dejected, crushed, sorrowful.. ಅದರ ತೀವ್ರತೆ ಕಡಿಮೆ ಇದ್ದಾಗ unhappy, disappointed, dissatisfied, upset ಮುಂತಾದವುಗಳನ್ನು ಉಪಯೋಗಿಸಬಹುದು.
ಕೋಪ (anger) ತೀವ್ರವಾಗಿದ್ದಾಗ ಬಳಸಬಹುದಾದ ಪದಗಳನ್ನು ಗಮನಿಸಿ: furious, enraged, outraged, seething, livid... ಮಧ್ಯತೀವ್ರತೆಯ ಕೋಪವನ್ನು ಈ ಪದಗಳು ಬಿಂಬಿಸುತ್ತವೆ – annoyed, frustrated, agitated, disgusted, irritated... ನಮ್ಮ ಮನಸ್ಸು ಗೊಂದಲಕ್ಕೊಳಗಾದಾಗ (confusion) ಹಾಗೂ ಅದರ ತೀವ್ರತೆ ಹೆಚ್ಚಿದ್ದಾಗ ಬಳಸುವ ಪದಗಳು– bewildered, baffled, troubled, lost...
ಅದರ ತೀಕ್ಷ್ಣತೆ ಕಡಿಮೆಯಾದಾಗ foggy, disoriented, unsure, puzzled, perplexed ಮುಂತಾದ ಪದಗಳನ್ನು ಉಪಯೋಗಿಸಬಹುದು. ಭಯದ ತೀವ್ರತೆ ಕಡಿಮೆಯಿದ್ದಾಗ scared, frightened, nervous, apprehensive ಎನ್ನುವಂತಹ ಪದಗಳನ್ನು ಬಳಸಬಹುದು.
ದುರ್ಬಲಸ್ಥಿತಿ (weakness)ಯನ್ನು ವ್ಯಕ್ತಪಡಿಸುವಾಗ helpless, hopeless, drained, exhausted, rundown, shaky ಮುಂತಾದವುಗಳನ್ನು ಬಳಸಬಹುದು. ನಮ್ಮ ದೃಢ ಮನಸ್ಸನ್ನು (firmness) ಸೂಚಿಸಲು determined, confident, energetic, proud, capable ಎನ್ನುವಂತಹ ಪದಗಳ ಉಪಯೋಗ ಸೂಕ್ತ.
ಅಪರಾಧಿ ಮನೋಭಾವ (guilt) ಇದ್ದಾಗ ಉಪಯೋಗಿಸುವ ಪದಗಳೆಂದರೆ ashamed, unworthy, worthless, embarrassed...  ಈ ಪದಗಳನ್ನು ನಿಮ್ಮದೇ ಆದ ಸ್ವಂತ ಇಂಗ್ಲಿಷ್ ವಾಕ್ಯಗಳಲ್ಲಿ ಬಳಸಿ. ಉತ್ತಮ dictionary ಯೊಂದರಲ್ಲಿ ಮಾದರಿ ವಾಕ್ಯಗಳನ್ನು ನೋಡಿದಾಗ ನಿಮಗೆ ನಿಮ್ಮ ವಾಕ್ಯಗಳ ಸರಿ, ತಪ್ಪುಗಳು ಸ್ಪಷ್ಟವಾಗುತ್ತವೆ. ಇದು ಇಂಗ್ಲಿಷ್ ವಾಕ್ಯಗಳ ಮೇಲೆ ಪ್ರಬುದ್ಧತೆಯನ್ನು ಸಾಧಿಸಲು ಇರುವ ತುಂಬ ಒಳ್ಳೆಯ ವಿಧಾನ.
ಶಬ್ದಭಂಡಾರವನ್ನು ಹೆಚ್ಚಿಸಿಕೊಳ್ಳುವ ಹಾದಿಯಲ್ಲಿ ಇನ್ನೂ ಕೆಲವು cluster ಗಳನ್ನು ಗಮನಿಸಿ:
Altruism, anarchy, autocracy, bigotry, caucus, chaos, conspiracy, monarchy- ಇವುಗಳನ್ನು political termmಗಳ ಒಂದು cluster ಎಂದು ಪರಿಗಣಿಸಬಹುದು.
Altruism (ಆಲ್ಟ್ರೂಯಿಸಮ್) ಇನ್ನೊಬ್ಬರ ಒಳಿತಿಗಾಗಿ ತಮ್ಮನ್ನು ತಾವು ತ್ಯಾಗಮಾಡಿಕೊಳ್ಳುವುದು.
Anarchy (ಅನಾರ್ಕಿ) ದೇಶದಲ್ಲಿ ವ್ಯವಸ್ಥೆ ಅಥವಾ ನಿಯಂತ್ರಣ ಇಲ್ಲದಿರುವ ಸ್ಥಿತಿ.
Autocracy (ಆಟೋಕ್ರಸಿ) ಒಬ್ಬರ ಕೈಯಲ್ಲಿ ಮಿತಿ ಇಲ್ಲದಿರುವಂತಹ ಅಧಿಕಾರವಿರುವ ಸ್ಥಿತಿ.
Bigotry(ಬಿಗಟ್ರಿ) ಇನ್ನೊಬ್ಬರ ನಂಬಿಕೆ, ಅಭಿಪ್ರಾಯಗಳೆಡೆಗಿರುವ ಅಸಹಿಷ್ಣುತೆ.
Caucus(ಕಾಕಸ್) ಅಭ್ಯರ್ಥಿಯನ್ನು ಆಯ್ಕೆ ಮಾಡುವುದಕ್ಕಾಗಲೀ ಅಥವಾ ಪಕ್ಷದ ನೀತಿಯನ್ನು ನಿರ್ಧರಿಸುವುದಕ್ಕಾಗಲೀ ಅಥವಾ ಪಕ್ಷದ ನೀತಿಯನ್ನು ನಿರ್ಧರಿಸುವುದಕ್ಕಾಗಿಯಾಗಲೀ, ಒಂದು ರಾಜಕೀಯ ಪಕ್ಷವು ಆಯೋಜಿಸುವ ಗುಪ್ತ ಸಭೆ (closed meetingg).
Chaos (ಖೆಯೋಸ್) - ಸಂಪೂರ್ಣ ಅವ್ಯವಸ್ಥೆಯ ಸ್ಥಿತಿ.
Conspiracy (ಕಾನ್‌ಸ್ಪಿರಸಿ)- ಪಿತೂರಿ.
Monarchy(ಮೊನಾರ್ಕಿ) ವಂಶಪಾರಂಪರ್ಯವಾಗಿ ಬಂದ ಪರಮಾಧಿಕಾರ.
ಧಾರ್ಮಿಕ ನಂಬಿಕೆಗಳಿಗೆ ಸಂಬಂಧಪಟ್ಟ cluster ಎಂದರೆ animism, asceticism, atheism, theism, blasphemy, monotheism, nihilism, agnosticism.
Animism (ಅನಿಮಿಸಮ್) ಎಲ್ಲದರಲ್ಲೂ (ಪ್ರಾಣಿ, ಗಿಡ, ವಸ್ತುಗಳು) ಚೇತನವಿದೆ ಎನ್ನುವ ನಂಬಿಕೆ.
Asceticism (ಅಸೆಟಿಸಿಸಮ್) ಎಲ್ಲಾ ಪ್ರಾಪಂಚಿಕ ಸುಖಗಳನ್ನು ತ್ಯಜಿಸಿದಂತಹ ಜೀವನದ ಸ್ಥಿತಿ.
Atheism (ಏತಿಯಿಸಮ್)- ನಾಸ್ತಿಕವಾದ.
Theism (ತೀಯಿಸಮ್) ಅಸ್ತಿವಾದ
Blasphemy (ಬ್ಲಾಸ್‌ಫೆಮಿ) ದೇವರು ಅಥವಾ ಧರ್ಮಕ್ಕೆ ಅವಮಾನವೆಸಗುವಂತಹ ವರ್ತನೆ ಅಥವಾ ಭಾಷೆ.
Monotheism (ಮಾನೋತೀಯಿಸಮ್) ದೇವರೊಬ್ಬನೇ ಎನ್ನುವ ನಂಬಿಕೆ.
Nihilism (ನೀಯಿಲಿಸಮ್) ಎಲ್ಲಾ ಸಾಂಪ್ರದಾಯಿಕ ನಂಬಿಕೆಗಳು ಅರ್ಥವಿಲ್ಲದ್ದು ಹಾಗೂ ಮಾನವ ಜೀವನವೇ ಅರ್ಥರಹಿತವಾದದ್ದು ಎನ್ನುವ ದೃಷ್ಟಿಕೋನ (ಶೂನ್ಯವಾದ).
Agnosticism (ಅಗ್ನೋಸ್ಟಿಸಿಸಮ್) ದೇವರ ಅಸ್ತಿತ್ವದ ಪ್ರಶ್ನೆಗೆ ನಿರ್ದಿಷ್ಟ ಉತ್ತರ ಮನಸ್ಸಿಗೆ ನಿಲುಕುವಂತದ್ದಲ್ಲ ಎಂಬ ನಂಬಿಕೆ. ಇನ್ನೊಂದು ಮುಖ್ಯವಾಗಿ ತಿಳಿದುಕೊಳ್ಳಬಹುದಾದ cluster ಎಂದರೆ, ಉದ್ಯೋಗಗಳಿಗೆ ಸಂಬಂಧಪಟ್ಟದ್ದು. ಅದನ್ನು ಇಲ್ಲಿ ಗಮನಿಸಿ: chef, florist, dustman, pharmacist, plumber, traffic warden, lifeguard, fireman/fire fighter.
Chef (ಶೆಫ್)- ಹೋಟೆಲಿನಲ್ಲಿ ಅಡುಗೆ ಮಾಡುವವನು.
Florist (ಫ್ಲೋರಿಸ್ಟ್)- ಹೂ ಮಾರುವವನು / ಹೂ ಅಂಗಡಿಯ ಮಾಲೀಕ.
Dustman (ಡಸ್ಟ್ ಮ್ಯಾನ್) ಕಸ ಆಯುವವನು.
Pharmacist (ಫಾರ್ಮಸಿಸ್ಟ್) ಔಷಧ ವ್ಯಾಪಾರಿ.
Plumber(ಪ್ಲಂಬರ್)-ನೀರಿನ ವ್ಯವಸ್ಥೆ ಅಥವಾ ಕೊಳವೆಗಳನ್ನು ದುರಸ್ತಿ ಮಾಡುವವನು.
Traffic warden (ಟ್ರಾಫಿಕ್ ಗಾರ್ಡ್)- ನಿರ್ಬಂಧಿ ಸ್ಥಳದಲ್ಲಿ ವಾಹನವನ್ನು ನಿಲ್ಲಿಸದಂತೆ ನೋಡಿಕೊಳ್ಳಲು ಗಸ್ತು ತಿರುಗುವವನು.
Life guard (ಲೈಫ್ ಗಾರ್ಡ್)- ಸಮುದ್ರತೀರ ಅಥವಾ ಈಜುಕೊಳದಲ್ಲಿ ಜೀವರಕ್ಷಣೆಗಾಗಿ ನಿಯೋಜಿತವಾಗಿರುವವನು.
Fireman / Fire fighter (ಫೈಯರ್ ಮ್ಯಾನ್ / ಫೈಯರ್ ಫ್ಯೆಟರ್) ಅನಾಹುತಕಾರಿ ಬೆಂಕಿಯನ್ನು ಆರಿಸುವವನು.
ಹೀಗೆ ನಮ್ಮ ಭಾಷಾ ಸಾಮರ್ಥಕ್ಕನುಸಾರವಾಗಿ cluster ಗಳನ್ನು ಬಳಸುತ್ತಾ ನಮ್ಮ ಶಬ್ದಸಂಪತ್ತನ್ನು ವೃದ್ಧಿಸಿಕೊಳ್ಳಬಹುದು.

ENGLISH ಕಲಿಯೋಣ ಬನ್ನಿ, ಸರಣಿ– 8

ಅಲಂಕಾರಗಳ ಬೆಡಗಿನ ಲೋಕ

ನಮ್ಮ ಭಾಷೆಯನ್ನು ಸತ್ವಯುತಗೊಳಿಸಲು ಅಲಂಕಾರಗಳು (figures of speech) ಒಂದು ಉತ್ತಮ ಸಾಧನ. ಜಾಹೀರಾತು ಪ್ರಪಂಚದ ಭಾಷೆಯ ಜೀವಾಳವೇ ಈ ಅಲಂಕಾರಗಳು ಎಂಬುದನ್ನು ಗಮನಿಸಬೇಕು. ನಾವು ಸಾಧಾರಣವಾಗಿ ಉಪಯೋಗಿಸುವ ಭಾಷೆಗಿಂತ ಅಲಂಕಾರಗಳು ವಿಶಿಷ್ಟ ರೀತಿಯಲ್ಲಿ ಭಿನ್ನವಾಗಿರುತ್ತವೆ. ಇವುಗಳಿಂದ ನಮ್ಮ ಸಂವಹನ, ಆಕರ್ಷಕವಾಗಿಯೂ, ಪರಿಣಾಮಕಾರಿಯಾಗಿಯೂ ಇರುತ್ತದೆ.
ಇಂಗ್ಲಿಷ್‌ನಲ್ಲಿ ಸಾಮಾನ್ಯವಾಗಿ ಕಂಡುಬರುವ ಅಲಂಕಾರಗಳೆಂದರೆ simile(ಸಿಮಿಲಿ), metaphor(ಮೆಟಫರ್), personification (ಪರ್ಸಾನಿಫಿಕೇಶನ್), hyperbole (ಹೈಪರ್‌ಬಲಿ), alliteration (ಅಲಿಟರೇಶನ್), pun(ಪನ್), onomatopoeia (ಒನಮಟೊಪಿಯ), antithesis (ಆನ್ಟಿತೆಸಿಸ್) ಮುಂತಾದವು. ಇವು ಸಾಹಿತ್ಯ ವಿದಾರ್ಥಿಗಳಿಗೆ ಗೊತ್ತಿರುವ ವಿಷಯವೇ. ಈ ಅಲಂಕಾರಗಳು ಜಾಹೀರಾತು ಭಾಷೆಯಲ್ಲಿ ಹೇಗೆ ಬಳಕೆಯಾಗುತ್ತವೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದಾಗ, ನಾವು ಉಪಯೋಗಿಸುವ ಭಾಷೆಯ ಶಕ್ತಿಯನ್ನು, ಸೂಕ್ಷ್ಮತೆಯನ್ನು ವೃದ್ಧಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ಕೆಲವು ಉದಾಹರಣೆಗಳನ್ನು ನೋಡೋಣ.
1. As thin as a giraffee
ಈ ಸಾಲನ್ನು Noblia Watchನ ಜಾಹಿರಾತಿನಲ್ಲಿ ಕಾಣಬಹುದು. ವಾಚೊಂದು, ಜಿರಾಫೆಯಷ್ಟೇ ತೆಳುವಾಗಿ, ಆಕರ್ಷಕವಾಗಿದೆ ಎಂದು ಸೂಚಿಸುವಂತಹ ಈ ಸಾಲಿನಲ್ಲಿ, simileಎಂಬ ಅಲಂಕಾರ ಕಂಡುಬರುತ್ತದೆ. Simileಯಲ್ಲಿ ಒಂದು ವಸ್ತುವನ್ನು ಇನ್ನೊಂದು ವಿಭಿನ್ನವಾದ ವಸ್ತುವಿಗೆ ಹೋಲಿಸಲಾಗುತ್ತದೆ (Simile is a kind of comparison).
2. If you want to get read, use red.
Panasonic copiersನ ಜಾಹೀರಾತಿನಲ್ಲಿ ಕಂಡುಬರುವ ಸಾಲಿದು. ಇದರಲ್ಲಿ, paronomasia (ಪ್ಯಾರನಮೇಸಿಯ) ಎಂಬ ಅಲಂಕಾರವನ್ನು ಕಾಣಬಹುದು. Paronomasia ದಲ್ಲಿ ಬೇರೆ ಬೇರೆ ಅರ್ಥ ಹೊಮ್ಮಿಸುವ ಹಾಗೂ ಒಂದೇ ಉಚ್ಚಾರಣೆಯುಳ್ಳ ಪದಗಳನ್ನು ಕಾಣಬಹುದು. ಮೇಲಿನ ಉದಾಹರಣೆಯಲ್ಲಿ, read(ರೆಡ್) ಮತ್ತು red(ರೆಡ್) ಅನ್ನು paronomasia ಎಂದು ಪರಿಗಣಿಸಬಹುದು.
3. FiIt makes salads, dressings.. and it won’t bite ಎಂಬ ಸಾಲನ್ನು cuisinart food processorನ ಜಾಹೀರಾತಿನಲ್ಲಿ ಬಳಸಲಾಗಿದೆ. ತರಕಾರಿ ಹೆಚ್ಚುವಂತಹ ಕ್ರಿಯೆಯನ್ನು ಕೂಡ ಹಿಂಸೆಯಿಲ್ಲದೆ, ಅತಿ ನಾಜೂಕಾಗಿ ಈ ಫುಡ್ ಪ್ರೊಸೆಸರ್ ಮಾಡುತ್ತದೆಂಬ ಅರ್ಥ ಈ ವಾಕ್ಯದಲ್ಲಿ ಅಡಕವಾಗಿದೆ. ಇಲ್ಲಿ ಕಂಡುಬರುವ ಅಲಂಕಾರವೆಂದರೆ personification. Personificationನಲ್ಲಿ ಜಡ ವಸ್ತುಗಳಿಗೆ ಜೀವಲಕ್ಷಣಗಳನ್ನು ಆರೋಪಿಸಲಾಗುತ್ತದೆ.
4.Clean, clear, confident.
Clean & Clear face washನ ಜಾಹೀರಾತಿನಲ್ಲಿ ಕಂಡುಬರುವ ಸಾಲಿದು. ಇದರಲ್ಲಿ alliteration ಎಂಬ ಅಲಂಕಾರವಿದೆ. Alliterationನಲ್ಲಿ ಒಂದೇ ರೀತಿಯ ಶಬ್ದದಿಂದ ಪ್ರಾರಂಭವಾಗುವ ಹಲವು ಪದಗಳಿರುತ್ತವೆ. ಮೇಲಿನ ಉದಾಹರಣೆಯಲ್ಲಿ Clean, clear, confident ಎಂಬ ಪದಗಳು ‘ಕ’ ಶಬ್ದದಿಂದ ಪ್ರಾರಂಭವಾಗುತ್ತವೆ. Alliterationನ ಬಳಕೆಯಿಂದ ಜಾಹೀರಾತಿನಲ್ಲಿರುವ ಪದಗಳು ಕೇಳಲು ಹಿತವಾಗಿದ್ದು, ಕೇಳುಗರ ಮನಸ್ಸನ್ನು ಸೆಳೆಯುತ್ತದೆ.
ಅಲಂಕಾರಗಳು, ಭಾಷೆಗೆ ಹೊಳಪು ನೀಡುತ್ತವಾದರೂ ಅವುಗಳ ಬಳಕೆ ಅತಿಯಾಗದಂತೆ ಎಚ್ಚರ ವಹಿಸುವುದು ಅಗತ್ಯ. ಜಾಹೀರಾತುಗಳಲ್ಲಿ ಮತ್ತು ದಿನನಿತ್ಯದ ಭಾಷೆಯಲ್ಲಿ ಕಂಡು ಬರುವ ಇನ್ನೂ ಕೆಲವು ಅಲಂಕಾರಗಳನ್ನು ಇಲ್ಲಿ ಗಮನಿಸಿ:
Monita, finest to put you finest.
Monita cameraದ ಜಾಹೀರಾತಿನಲ್ಲಿ ಕಂಡುಬರುವ ಈ ಸಾಲಿನಲ್ಲಿ Repetition ಎಂಬ ಅಲಂಕಾರವಿದೆ. ಮೊದಲನೆಯ ಬಾರಿ ಕಂಡುಬರುವ finest ಎಂಬ ಪದ ಕ್ಯಾಮೆರಾವನ್ನು ಪ್ರಶಂಸಿಸುವುದಕ್ಕಾಗಿ ಉಪಯೋಗಿಸಿದ್ದರೆ, ಎರಡನೆಯ ಬಾರಿ, ಗ್ರಾಹಕರನ್ನು ಪ್ರಶಂಸಿಸುವುದಕ್ಕಾಗಿ ಬಳಸಲಾಗಿದೆ.
ಈ ಜಾಹೀರಾತಿನಲ್ಲಿ, ಪದಗಳ repetition ಇದ್ದರೆ, Raymond suitingssನ ಜಾಹಿರಾತಿನಲ್ಲಿ ಕಂಡುಬರುವ Feels like heaven, feels like Raymond ಎಂಬ ಸಾಲಿನಲ್ಲಿ ಪದಗಳಷ್ಟೇ ಅಲ್ಲದೆ ವಾಕ್ಯರಚನೆಯಲ್ಲಿಯೂ repetition ಕಂಡುಬರುತ್ತದೆ. ಈ ರೀತಿಯ repetitionಅನ್ನು Parallelism ಎನ್ನುತ್ತೇವೆ. ಈ ಅಲಂಕಾರದ ಬಳಕೆಯಿಂದ ನಮ್ಮ ಭಾವನೆಗಳ ಲಯವನ್ನು ಒತ್ತುಕೊಟ್ಟು, ಮನ ಮುಟ್ಟುವಂತೆ ಅಭಿವ್ಯಕ್ತಿಗೊಳಿಸಲು ಸಾಧ್ಯವಾಗುತ್ತದೆ. Parallelismನ ಇನ್ನೊಂದು ಉದಾಹರಣೆಯನ್ನು Smith Corona Electronic Typewriter ಜಾಹೀರಾತಿನ ಈ ಸಾಲಿನಲ್ಲಿ ನೋಡಿ.
It catches your mistakes. Finds it. Erases it. Even helps you to spell it.
Warehouse Clearance. Their Loss, your Gain.
Clearance sale ಜಾಹೀರಾತಿನಲ್ಲಿ ಕಾಣಸಿಗುವ ಈ ಸಾಲಿನಲ್ಲಿ, Antithesis ಎಂಬ ಅಲಂಕಾರವಿದೆ. Anetithesis ನಲ್ಲಿ ಸಾಮಾನ್ಯವಾಗಿ ಎರಡು ವಿರುದ್ಧ ಅಭಿಪ್ರಾಯಗಳನ್ನು ಒಂದೇ ವಾಕ್ಯದಲ್ಲಿ ಸೂಚಿಸಲಾಗಿರುತ್ತದೆ.
Antithesis ಹೇಳಿರುವ ‘To err is human, to forgive, divine’ ಎಂಬ ವಾಕ್ಯದಲ್ಲಿಯೂ ಹಾಗೂ Neil Armstrong ಹೇಳಿರುವ ‘That’s one small step for am man, one giant heap for mankind’ ಎಂಬ ವಾಕ್ಯದಲ್ಲಿಯೂ ಅಡಕವಾಗಿದೆ.
Make your hair glimmer, shimmer, or simply glow ಎಂಬ ಸಾಲು, Clairol hair colourನ ಜಾಹೀರಾತಿನಲ್ಲಿ ಕಂಡುಬರುತ್ತದೆ. ಇಲ್ಲಿ ಉಪಯೋಗಿಸಲಾದ ಅಲಂಕಾರವೆಂದರೆ Imagery.. ನಾವು ಉಪಯೋಗಿಸುವ ಭಾಷೆ, ನಮ್ಮ ಇಂದ್ರಿಯಾನುಭವಕ್ಕೆ ಥಟ್ಟನೆ ದಕ್ಕುವಂತಿದ್ದರೆ, ಅಲ್ಲಿ imageryಯ ಉಪಯೋಗವಾಗಿದೆ ಎಂದರ್ಥ. IImageryಯಲ್ಲಿ ಐದು ವಿಧಗಳಿವೆ- vivisual imagery (sight), auditory imagery (hearing), olfactory imagery (smell), gustatory imagery (taste), kinaesthetic imagery (touch).
ಮೇಲಿನ ಉದಾಹರಣೆಯಲ್ಲಿರುವ glimmer, shimmer, glow ಎಂಬ ಪದಗಳು ದೃಶ್ಯಾಧಾರಿತ(vision based) ವಾಗಿರುವುದರಿಂದ, ಇವು visual imageryಯ ರೂಪಗಳಾಗಿವೆ. ಯಾವುದೇ ವಿಷಯದ ಉತ್ಕಟತೆಯನ್ನು (intensity) ಪ್ರಕಟಗೊಳಿಸಲು,  Hyperbole ಎಂಬ ಅಲಂಕಾರಿಕ ಅತಿ ಉಪಯುಕ್ತ. ಮೊಬೈಲೊಂದರ ಜಾಹೀರಾತಿನಲ್ಲಿ ಉಪಯೋಗಿಸಿರುವ LG Optimus, outshines the sun ಎಂಬ ವಾಕ್ಯ hhyperboleಯ ಒಂದು ಉದಾಹರಣೆ.
ನಮ್ಮ ದಿನನಿತ್ಯದ ಸಂಭಾಷಣೆಯಲ್ಲಿ, I am so hungry that I can eat an elephant ಎಂಬ ವಾಕ್ಯದಲ್ಲೂ, I have told you a thousand times ಎಂಬಂತಹ ಅಭಿವ್ಯಕ್ತಿಯಲ್ಲಿಯೂ, hyperbole ಅನ್ನು ಕಾಣಬಹುದು.

ಆಕ್ಸ್‌ಫರ್ಡ್‌ ನವನವೀನ ಪದಕೋಶ


* ಒಂಬತ್ತನೇ ಆವೃತ್ತಿಯ ಕುರಿತು ವಿವರಿಸಿ
ಎಂಟನೇ ಆವೃತ್ತಿಯಲ್ಲಿ ಬರೆಯುವುದಕ್ಕೆ ಹೆಚ್ಚಿನ ಒತ್ತು ಕೊಡಲಾಗಿತ್ತು. ಈ ಆವೃತ್ತಿಯಲ್ಲಿ ಮಾತನಾಡುವುದಕ್ಕೆ ಪ್ರಾಮುಖ್ಯತೆ ನೀಡಿದ್ದೇವೆ. ಬೋಧಿಸುವವರು ಮತ್ತು ಕಲಿಯುವವರಿಗೆ ಇದರಿಂದ ಸಹಾಯವಾಗಲಿದೆ. ಈ ಕಾರಣಕ್ಕಾಗಿಯೇ ಮೊದಲ ಬಾರಿಗೆ ಡಿವಿಡಿ ಮತ್ತು ಆನ್‌ಲೈನ್‌ನಲ್ಲಿ ಬ್ರಿಟಿಷ್‌ ಮತ್ತು ಅಮೆರಿಕನ್‌ ಇಂಗ್ಲಿಷ್‌ ಉಚ್ಚಾರಣೆಗೆ ಸಂಬಂಧಿಸಿದ 20 ವಿಡಿಯೊಗಳನ್ನು ಸೇರಿಸಿದ್ದೇವೆ.
ಇದು ಹೊಸದಾಗಿ ಸಂದರ್ಶನ ಕೊಡಲು ಹೋಗುವವರಿಗೆ ಬಹಳ ಪ್ರಯೋಜನವಾಗಲಿದೆ. ಇಂದಿನ ದಿನಗಳಲ್ಲಿ ನಾವು ಯಾವ ರೀತಿಯಲ್ಲಿ ಮಾತನಾಡುತ್ತೇವೆ ಎನ್ನುವುದೇ ಮುಖ್ಯವಾಗಿದೆ. ಇವುಗಳನ್ನೆಲ್ಲ ಗುರುತಿಸಿಯೇ ವಿಡಿಯೊ ತಯಾರಿಸಿದ್ದೇವೆ. ಕೆಲವು ಶಿಕ್ಷಕರು ನಿಘಂಟಿನ ಸಹಾಯದಿಂದ ಬೋಧಿಸಲು ಪ್ರಯತ್ನಿಸುತ್ತಾರೆ. ಅದಕ್ಕೆ ಸೂಕ್ತ ಸಾಮಗ್ರಿ ಇರುವುದಿಲ್ಲ. ಆದರೆ, ನಾವು ಬೋಧಿಸುವವರಿಗೆ ಸಹಾಯವಾಗಲೆಂದು ಸಾಕಷ್ಟು ಸಾಮಗ್ರಿಯನ್ನು ಒದಗಿಸಿದ್ದೇವೆ. ಪಾಠದ ಯೋಜನೆ, ವಿಡಿಯೊಗಳು ಇದರಲ್ಲಿ ಸೇರಿವೆ.
* ನಿಘಂಟಿನ ನಿರ್ವಹಣೆಗೆ ಯಾವುದಾದರೂ ನಿರ್ದಿಷ್ಟವಾದ ತಜ್ಞರ ಸಮಿತಿ ಇದೆಯೇ?
ಹೌದು, ಇದನ್ನು ನೋಡಿಕೊಳ್ಳಲು ಆರು ಜನ ಶಿಕ್ಷಣ ಕ್ಷೇತ್ರದ ಪರಿಣತರ ಸಲಹಾ ಸಮಿತಿ ಇದೆ. ಇವರ ಸಲಹೆಯ ಮೇರೆಗೆ ಹೊಸ ನಿಘಂಟು ಅಥವಾ ಅದನ್ನು ಪರಿಷ್ಕರಣೆ ಮಾಡುತ್ತೇವೆ. ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಇತರ ಕ್ಷೇತ್ರದವರೊಂದಿಗೆ ಮುಕ್ತವಾಗಿ ಸಂವಾದ ನಡೆಸಿದ ಬಳಿಕವಷ್ಟೇ ಹೊಸ ಶಬ್ದಗಳನ್ನು ನಿಘಂಟಿಗೆ ಸೇರಿಸಲಾಗುತ್ತದೆ.
ಕಲಿಯುವವರನ್ನು ಗಮನದಲ್ಲಿಟ್ಟುಕೊಂಡೆ ಮುಂದುವರೆಯುತ್ತೇವೆ. ಭಾಷಾ ಕ್ಷೇತ್ರದಲ್ಲಿ ದುಡಿಯುತ್ತಿರುವವರ ಸಲಹೆಯೂ ಪಡೆಯುತ್ತೇವೆ. ಕಲಿಯುವವರಿಗೆ ನಿಜವಾಗಲೂ ಏನು ಬೇಕು ಎನ್ನುವುದು ಮುಖ್ಯವಾಗಿರುತ್ತದೆ. ಅದರ ಆಧಾರದ ಮೇಲೆ ಎಲ್ಲವೂ ನಿರ್ಧಾರವಾಗುತ್ತದೆ. ಇದು ತಜ್ಞರಿಗಿಂತಲೂ ಮುಖ್ಯವಾಗಿರುವ ವಿಷಯ ಎಂದು ನಾನು ಅಂದುಕೊಂಡಿದ್ದೇನೆ.
* ಸಲಹಾ ಸಮಿತಿಯಲ್ಲಿ ಅನ್ಯ ದೇಶದ ಭಾಷಾ ತಜ್ಞರು ಇದ್ದಾರೆಯೇ?
ಭಾರತ ಸೇರಿದಂತೆ ಹಲವು ದೇಶದ ಭಾಷಾ ವಿದ್ವಾಂಸರು ಸಲಹಾ ಸಮಿತಿಯಲ್ಲಿ ಇದ್ದಾರೆ. ಅವರೆಲ್ಲರ ಸಲಹೆ ಪಡೆದ ಬಳಿಕವಷ್ಟೇ ನಿರ್ದಿಷ್ಟವಾದ ಶಬ್ದಗಳನ್ನು ನಿಘಂಟಿಗೆ ಸೇರಿಸುವ ಕಾರ್ಯ ನಡೆಯುತ್ತದೆ.
* ಭಾರತದ ಶಬ್ದಗಳನ್ನು ಸೇರಿಸಲು ಯಾವ ವಿಧಾನ ಬಳಸಿದ್ದೀರಿ?
ಕಳೆದ ಮೂರು ಆವೃತ್ತಿಗಳಲ್ಲಿ ನಮ್ಮೊಂದಿಗೆ ಕೆಲಸ ನಿರ್ವಹಿಸಿರುವ ಭಾರತದ ಪ್ರೊ. ಪಾಲ್‌ ಗುಣಶೇಖರ್‌ ಅವರ ಸಹಾಯದಿಂದ ಸ್ಥಳೀಯವಾಗಿ ಹೆಚ್ಚು ಪ್ರಚಲಿತವಾಗಿರುವ ಮತ್ತು ಮುಖ್ಯವಾಹಿನಿಯಲ್ಲಿರುವ ಶಬ್ದಗಳನ್ನು ನಿಘಂಟಿಗೆ ಸೇರಿಸಲಾಗಿದೆ. ಇವರು ಹೈದರಾಬಾದ್‌ನಲ್ಲಿ ಇದ್ದುಕೊಂಡು ಕೆಲಸ ನಿರ್ವಹಿಸುತ್ತಾರೆ.
ಇಂಗ್ಲಿಷ್‌ ಅಂಡ್‌ ಫಾರೆನ್‌ ಲಾಂಗ್ವೆಜೆಸ್‌ ಯೂನಿವರ್ಸಿಟಿಯಲ್ಲಿ ಪ್ರಾಕ್ಟರ್‌ ಮತ್ತು ಡೀನ್‌ ಆಗಿ ಕೆಲಸ ನಿರ್ವಹಿಸಿದ ಅನುಭವ ಇವರಿಗಿದೆ. ಪ್ರತಿಯೊಂದು ಪದಗಳನ್ನು ಸೂಕ್ಷ್ಮವಾಗಿ ವಿಶ್ಲೇಷಣೆ ಮಾಡಿದ ಬಳಿಕವಷ್ಟೇ ಸೇರಿಸಲಾಗುತ್ತದೆ.
* ಪ್ರದೇಶದಿಂದ ಪ್ರದೇಶಕ್ಕೆ ಜನರ ಉಚ್ಚಾರಣೆಯಲ್ಲಿ ವ್ಯತ್ಯಾಸ ಕಾಣುತ್ತೇವೆ. ಆಯಾ ಸ್ಥಳದ ಒಂದು ನಿರ್ದಿಷ್ಟ ಪದ ಸೇರಿಸುವಾಗ ನಿಖರವಾದ ಉಚ್ಚಾರಣೆ ಯಾವುದು ಎಂದು ಹೇಗೆ ಗುರುತಿಸುತ್ತೀರಿ?
ನಮ್ಮ ನಿಘಂಟಿನಲ್ಲಿ ಬ್ರಿಟಿಷ್‌ ಮತ್ತು ಅಮೆರಿಕನ್‌ ಇಂಗ್ಲಿಷ್‌ ಉಚ್ಚಾರಣೆ ಯಾವ ರೀತಿ ಮಾಡಬೇಕು ಎನ್ನುವುದನ್ನು ವಿವರಿಸಿದ್ದೇವೆ. ಈ ಎರಡೂ ಮಾದರಿಯಲ್ಲಿ ಆಂಗ್ಲ ಭಾಷೆಯಲ್ಲಿ ಆಯಾ ಪ್ರದೇಶಕ್ಕೆ ಹತ್ತಿರವಾಗುವ ಉಚ್ಚಾರಣೆಯನ್ನು ಸೂಚಿಸಿದ್ದೇವೆ. ಎಲ್ಲ ಪ್ರದೇಶದ ಉಚ್ಚಾರಣೆಯನ್ನು ಸೇರಿಸುವುದು ಅಸಾಧ್ಯ.
* ಇದು ಎಸ್‌ಎಂಎಸ್‌/ಟೆಕ್ಸ್ಟ್‌ ಮೆಸೇಜ್‌ ಜಮಾನಾ. ಇದಕ್ಕಾಗಿ ಬೇಕಾದ ಪದಗಳನ್ನೂ ನಿಘಂಟಿನಲ್ಲಿ ಸೇರಿಸಿದ್ದೀರಾ?
ನಮ್ಮ ನಿಘಂಟಿನಲ್ಲಿ ಈಗಾಗಲೇ ಇಂತಹ ಕೆಲ ಶಬ್ದಗಳಿವೆ. ಸ್ಮಾರ್ಟ್‌ಫೋನ್‌ ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆ ಇಂದು ಹೆಚ್ಚಾಗಿರುವುದರಿಂದ ಹೊಸದಾಗಿ ಮತ್ತೆ 25 ಶಬ್ದಗಳನ್ನು ಸೇರಿಸಿದ್ದೇವೆ.
* ಹೊಸದಾಗಿ ಎಷ್ಟು ಶಬ್ದಗಳನ್ನು ನಿಘಂಟಿಗೆ ಸೇರಿಸಲಾಗಿದೆ?
ಮುದ್ರಣ ಪ್ರತಿಯಲ್ಲಿ 700 ಮತ್ತು ಡಿಜಿಟಲ್‌ನಲ್ಲಿ 900 ಹೊಸ ಶಬ್ದಗಳನ್ನು ಸೇರಿಸಲಾಗಿದೆ. ಇದರಲ್ಲಿ ಕೇವಲ ಭಾರತವೊಂದರದ್ದೇ 2* 0 ಪದಗಳಿರುವುದು ವಿಶೇಷ.
* ಇಂದು ಆನ್‌ಲೈನ್‌ನಲ್ಲಿ ಸಾಕಷ್ಟು ಉಚಿತ ನಿಘಂಟುಗಳು ದೊರೆಯುತ್ತವೆ. ಅವುಗಳ ಸ್ಪರ್ಧೆ ಎದುರಿಸಲು ಯಾವ ರೀತಿಯ ತಯಾರಿ ಮಾಡಿಕೊಂಡಿದ್ದೀರಿ?
ನಿಜ, ನೀವು ಹೇಳಿದಂತೆ ಆನ್‌ಲೈನ್‌ನಲ್ಲಿ ಪುಕ್ಕಟೆಯಾಗಿ ಹಲವು ನಿಘಂಟುಗಳು ಸಿಗುತ್ತವೆ. ಆದರೆ, ಅವುಗಳ ಗುಣಮಟ್ಟ ಅಷ್ಟಕಷ್ಟೇ. ಇಂದಿಗೂ ಸಾಕಷ್ಟು ಜನರಿಗೆ ಅಂತರ್ಜಾಲ ಸೌಲಭ್ಯ ಇಲ್ಲ. ಅಲ್ಲದೇ ಈಗಲೂ ಹೆಚ್ಚಿನವರು ಮುದ್ರಣ ಪ್ರತಿ ಇಟ್ಟುಕೊಳ್ಳಲು ಬಯಸುತ್ತಾರೆ. ಇಷ್ಟಾಗಿಯೂ ನಾವು ಆನ್‌ಲೈನ್‌ನಲ್ಲಿ ಆಕ್ಸಫರ್ಡ್‌ ಡಿಕ್ಷನರಿಯಿಂದ ಅರ್ಥ ತಿಳಿಯಲು ವ್ಯವಸ್ಥೆ ಮಾಡಿದ್ದೇವೆ. ಇದನ್ನು ಕಾಲಕಾಲಕ್ಕೆ ಅಪ್‌ಡೇಟ್‌ ಕೂಡ ಮಾಡಲಾಗುತ್ತಿದೆ. ಜನರಿಗೆ ಯಾವುದು ಬೇಕೋ ಅದನ್ನು ಉಪಯೋಗಿಸಬಹುದು.
* ಆಂಗ್ಲ ಭಾಷೆಯಲ್ಲಿ ಯಾವ ನಿಘಂಟು ಖರೀದಿಸಬೇಕು?
ಆಕ್ಸ್‌ಫರ್ಡ್‌ ಡಿಕ್ಷನರಿ ಕೊಂಡುಕೊಳ್ಳಲು ಸಲಹೆ ಮಾಡುತ್ತೇನೆ. ಇತರ ನಿಘಂಟುಗಳಿಗೆ ಹೋಲಿಸಿದರೆ ಇದು ಸಾಕಷ್ಟು ಹೊಸ ಪದದ ಅರ್ಥಗಳನ್ನು ಹೊಂದಿದೆ. ಉತ್ತಮ ಗುಣಮಟ್ಟದ್ದು. ವಿಶ್ವದ ಎಲ್ಲ ಕಡೆಗಳಲ್ಲಿ ಬಳಸುವ ಬಹುತೇಕ ಶಬ್ದಗಳನ್ನು ಇದು ಒಳಗೊಂಡಿದೆ.
* ಬ್ರಿಟಿಷ್‌ ಮತ್ತು ಅಮೆರಿಕನ್‌ ಇಂಗ್ಲಿಷ್‌ ಶಬ್ದಗಳೆರಡರ ಉಚ್ಚಾರಣೆಯೂ ಇದೆ. ಯಾವುದು ಬಳಸುವುದು ಸೂಕ್ತ?
ಯಾವುದಾದರೂ ಒಂದನ್ನು ಅನುಸರಿಸುವುದು ಸೂಕ್ತ. ಬರೆಯಲು ಒಂದು ಮಾತನಾಡಲು ಇನ್ನೊಂದು ಬಳಸಬಾರದು. ಇಂದು ಬಹುತೇಕ ಇಂಗ್ಲಿಷ್‌ ಪದಗಳು ಬ್ರಿಟಿಷ್‌ ಶಬ್ದಗಳಾಗಿ ಮಾರ್ಪಟ್ಟಿವೆ.
ಒಂಬತ್ತನೇ ಆವೃತ್ತಿಯ ಪ್ರಮುಖ ಲಕ್ಷಣಗಳು
* ಮಾತನಾಡಲು, ಶಿಕ್ಷಕರ ಸಂಪನ್ಮೂಲ ಮತ್ತು ಶಬ್ದಭಂಡಾರ ವೃದ್ಧಿಸಲು ಒಂಬತ್ತನೇ ಆವೃತ್ತಿಯಲ್ಲಿ ಹೆಚ್ಚಿನ ಒತ್ತು
* ಮಾತನಾಡಲು ಮತ್ತು ಬರೆಯಲು ಸಹಕಾರಿಯಾಗಲು ಆನ್‌ಲೈನ್‌ನಲ್ಲಿ ಐ–ಸ್ಪೀಕರ್‌ ಹಾಗೂ ಐ-–ರೈಟರ್‌ ಸೇರ್ಪಡೆ.
* ನಮ್ಮದೇ ಸ್ವಂತ ಶಬ್ದಗಳ ಪಟ್ಟಿ ತಯಾರಿಸಬಹುದು
* ಬ್ರಿಟಿಷ್‌ ಮತ್ತು ಅಮೆರಿಕನ್‌ ಇಂಗ್ಲಿಷ್‌ ಉಚ್ಚಾರಣೆಗೆ ಸಂಬಂಧಿಸಿದ 20 ವಿಡಿಯೊಗಳು
* 700 ಹೊಸ ಪದ ಮತ್ತು ಅವುಗಳ ಅರ್ಥ ಸೇರ್ಪಡೆ
* ಡಿವಿಡಿ ಮತ್ತು ಆನ್‌ಲೈನ್‌ನಲ್ಲಿ 200 ಹೆಚ್ಚುವರಿ ಶಬ್ದ ಸೇರ್ಪಡೆ
* ಆನ್‌ಲೈನ್‌ನಲ್ಲಿ ಪ್ರತಿಯೊಬ್ಬರ ಶಬ್ದ ಉಚ್ಚಾರಣೆಯ ಪರೀಕ್ಷೆಗೆ ಅವಕಾಶ, ಪಾಠದ ಯೋಜನೆ
* ಪೇಪರ್‌ಬ್ಯಾಕ್‌ ಪ್ಲಸ್‌ ಡಿವಿಡಿ, ಹಾರ್ಡ್‌ಬ್ಯಾಕ್‌ ಪ್ಲಸ್‌ ಡಿವಿಡಿ, ಪೇಪರ್‌ಬ್ಯಾಕ್‌ ಪ್ಲಸ್‌
ಆನ್‌ಲೈನ್‌ನಲ್ಲಿ ಲಭ್ಯ
* ಆಕ್ಸ್‌ಫರ್ಡ್‌ 3000 ಆ್ಯಪ್‌ ಸಹಾಯದಿಂದಲೂ ಶಬ್ದಗಳ ಅರ್ಥ ತಿಳಿಯಬಹುದು
* ಬೆಂಗಳೂರಿನಲ್ಲಿ ಬಿಡುಗಡೆ
ಇತರ ಹೊಸ ಶಬ್ದಗಳು
* ಬ್ರೇನ್‌ ಕ್ಯಾಂಡಿ * ಫ್ಲಿಪ್ಡ್‌ ಕ್ಲಾಸ್‌ರೂಂ
* ಫಾಲೋವಿ * ಸಾಫ್ಟ್ ಸ್ಕಿಲ್ಸ್
* ಕ್ರಿಟಿಕಲ್ ಥಿಂಕಿಂಗ್ * ಚಿಲ್ ಪಿಲ್
ನಿಘಂಟಿನಲ್ಲಿ ಸೇರಿದ ಭಾರತದ ಶಬ್ದಗಳು
*ಕೀಮಾ, ಪಾಪ್ಪಡ್‌, ಕರಿ ಲೀಫ್‌, ಮೇಲಾ, ಮಿಕ್ಸಿ, ವಿದೇಶಿ, ಕಿಟ್ಟಿ ಪಾರ್ಟಿ, ಬಯೊಡೇಟಾ, ಜುಗ್ಗಡ್‌, ಬೂತ್‌ ಕ್ಯಾಪ್ಚರಿಂಗ್‌, ಟೈಮ್‌ಪಾಸ್‌.
*ಭಾರತದ 240 ಹೊಸ ಶಬ್ದ ಸೇರಿಸಲಾಗಿದ್ದು, ಇದರಲ್ಲಿ ಶೇ 60ರಷ್ಟು ಶಬ್ದಗಳು ಹಿಂದಿ ಭಾಷೆಗೆ ಸೇರಿವೆ 
ಸಾಮಾಜಿಕ ಜಾಲತಾಣಗಳನ್ನು ಗಮನದಲ್ಲಿಟ್ಟುಕೊಂಡು ಸೇರಿಸಿದ ಹೊಸ ಶಬ್ದಗಳು
*ಕ್ಯಾಟ್‌ಫಿಶ್‌, ಟ್ರಾಲ್‌, ಟ್ವಿಟ್ಟರ್‌ಟಿ, ರೀಟ್ವೀಟ್‌, ಟ್ವಿಟೇಬಲ್‌, ಟ್ವಿಟ್‌ಹಾರ್ಟ್‌, ಟ್ವಿಟರ್‌ವರ್ಸ್‌, ಡಿಫ್ರೆಂಡ್‌, ಸ್ಪೈವೇರ್‌, ಸ್ಕೇರ್‌ವೇರ್‌, ಕ್ಲಿಕ್‌ಜಾಕಿಂಗ್‌, ಟೇಕ್‌ ಎ ಚಿಲ್‌ ಪಿಲ್‌.
ಕೀನ್ಯಾದಲ್ಲಿ ಅತಿಹೆಚ್ಚು ಬೇಡಿಕೆ
ಆಕ್ಸ್‌ಫರ್ಡ್‌ ಅಡ್ವಾನ್ಸ್ಡ್‌ ಲರ್ನರ್‌್ಸ ಡಿಕ್ಷನರಿ ಅತಿ ಹೆಚ್ಚು ಮಾರಾಟ ವಾಗುವ ರಾಷ್ಟ್ರಗಳ ಪಟ್ಟಿಯಲ್ಲಿ ಆಫ್ರಿಕಾದ ಪುಟ್ಟ ರಾಷ್ಟ್ರ ಕೀನ್ಯಾ ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ಭಾರತ ಇದೆ.
ನಿಘಂಟಿನ ರೂವಾರಿ
1948ರಲ್ಲಿ ಎ.ಎಸ್‌. ಹಾರ್ನ್‌ಬಿ ಅವರು ಆಕ್ಸ್‌ಫರ್ಡ್‌ ಇಂಗ್ಲಿಷ್‌ ಲರ್ನರ್‌ ಡಿಕ್ಷನರಿಯನ್ನು ಮೊದಲ ಬಾರಿಗೆ ಪರಿಚಯಿಸಿದ್ದರು. ಅದರಲ್ಲಿ ಕಾಲಕಾಲಕ್ಕೆ ಹೊಸ ಹೊಸ ಶಬ್ದಗಳು ಸೇರುವುದರೊಂದಿಗೆ ಒಟ್ಟು ಒಂಬತ್ತು ಮುದ್ರಣಗಳನ್ನು ಕಂಡಿದೆ. ಸುಮಾರು 38 ದಶಲಕ್ಷ ಜನರಿಗೆ ತಲುಪಿದ ಹೆಗ್ಗಳಿಕೆ.


Precis ಸರಳ ಸೂತ್ರಗಳು

ಪಠ್ಯವೊಂದನ್ನು ಅದರ ಸಾರಸಂಗ್ರಹಕ್ಕೆ ಇಳಿಸುವ ಕ್ರಿಯೆ ಒಂದು ಅತಿ ಉಪಯುಕ್ತವಾದ ಕಲೆ. Prprecis–writing ಅದನ್ನು ಕಲಿಸುತ್ತದೆ. Precis ಎಂಬುದು ಫ್ರೆಂಚ್ ಭಾಷೆಯಿಂದ ಇಂಗ್ಲಿಷ್‌ಗೆ ಬಂದಿರುವ ಪದವಾಗಿದ್ದು, ಇದನ್ನು pray–see (ಪ್ರೇಯ್ಸೀ) ಎಂದು ಉಚ್ಚರಿಸುತ್ತೇವೆ. ಇದಕ್ಕೆ ಹತ್ತಿರವಾದ ಇಂಗ್ಲಿಷ್ ಪದವೆಂದರೆ precise (ಪ್ರಿಸೈಜ್) ಹಾಗೂ ಇದರ ಅರ್ಥ ‘ಸಾರಾಂಶ’ (summary). ಇದೇ ಅರ್ಥಕೊಡುವ ಇನ್ನೂ ಕೆಲವು ಇಂಗ್ಲಿಷ್ ಪದಗಳೆಂದರೆ substance, abridgement, abstract, condensed ಮುಂತಾದವುಗಳು.
Precis–writinggಗೂ paraphrasingಗೂ ಕೆಲವು ಮುಖ್ಯ ವ್ಯತ್ಯಾಸಗಳಿವೆಎಂಬುದನ್ನು ಗಮನಿಸಬೇಕು. paraphrasing ನಲ್ಲಿ ಯಾವುದೇ ಪಠ್ಯದ ಮುಖ್ಯವಿಷಯವನ್ನಷ್ಟೇ ಅಲ್ಲದೆ, ಅದರಲ್ಲಿರುವ ಎಲ್ಲಾ ವಿವರಗಳನ್ನೂ ಸರಳವಾಗಿ ಕೊಡಬೇಕಾಗುತ್ತದೆ. ಆದ್ದರಿಂದ, paraphrase ಪಠ್ಯದ ಗಾತ್ರದಷ್ಟೇ ದೊಡ್ಡದಾಗಿರುತ್ತದೆ. ಕೆಲವು ಬಾರಿ ಪಠ್ಯಕ್ಕಿಂತ ದೊಡ್ಡದಾಗಿಯೂ ಇರಬಹುದು. ಆದರೆ, Precis–writingನಲ್ಲಿ ಹಾಗಾಗುವುದಿಲ್ಲ.
ಸರಿಸುಮಾರಾಗಿ, ಮೂಲಪಠ್ಯದ ಮೂರನೇ ಒಂದು ಭಾಗದಷ್ಟು ಮಾತ್ರ ಅದರ precis ಇರುತ್ತದೆ. ಏಕೆಂದರೆ, Precis writingನಲ್ಲಿ, ಮೂಲ ಪಠ್ಯದ ಸಾರಾಂಶಗಳು (essence) ಮಾತ್ರ ದಾಖಲಾಗಿರುತ್ತವೆ. ಅದರಲ್ಲಿರುವ ಉದಾಹರಣೆಗಳು, ವಿವರಣೆಗಳು, ದೃಷ್ಟಾಂತಗಳನ್ನೆಲ್ಲಾ precisನಲ್ಲಿ ಕೊಡುವ ಅಗತ್ಯವಿಲ್ಲ.
ಈಗ ಪರಿಣಾಮಕಾರಿ Precis–writingಗೆ ಬೇಕಾದ ಕೆಲವು ಸರಳ ಸೂತ್ರಗಳನ್ನು ತಿಳಿದುಕೊಳ್ಳೋಣ. ಯಾವುದೇ ಪಠ್ಯದ precisಯನ್ನು ಬರೆಯಬೇಕಾದಾಗ, ಮೂರು ನಿಯಮಗಳನ್ನು ಖಂಡಿತವಾಗಿ ಪಾಲಿಸಬೇಕು–  reading the paragraph, writing the precis, revising.
ಮೊದಲಿಗೆ, ನಮ್ಮ ಮುಂದಿರುವ ಪಠ್ಯವನ್ನು ಒಂದು ಅಥವಾ ಎರಡು ಬಾರಿ ಓದಿ ಅದರಲ್ಲಿರುವ ಮುಖ್ಯ ಉದ್ದೇಶವನ್ನು ಅರ್ಥಮಾಡಿಕೊಳ್ಳಬೇಕು. ನಾವು ಓದುವಾಗ, ನಮಗೆ ನಾವು ಕೆಲವು ಪ್ರಶ್ನೆಗಳನ್ನು ಹಾಕಿಕೊಳ್ಳಬೇಕು.
1.  ನಾನು ಏನನ್ನು ಓದುತ್ತಿದ್ದೇನೆ?
2.  ಪಠ್ಯದಲ್ಲಿ ಲೇಖಕರು ಏನನ್ನು ಹೇಳಬಯಸುತ್ತಿದ್ದಾರೆ?
3.  ಮುಖ್ಯ ವಿಷಯವನ್ನು ಯಾವ ರೀತಿಯಲ್ಲಿ ಹೇಳುತ್ತಿದ್ದಾರೆ?
4.  ಅದರಲ್ಲಿರುವ ಮುಖ್ಯಾಂಶಗಳನ್ನು ಕೆಲವೇ ಪದಗಳಲ್ಲಿ ಹೇಳಲು ಸಾಧ್ಯವೇ?
ಈ ಪ್ರಶ್ನೆಗಳನ್ನು ಮನಸಿನಲ್ಲಿಟ್ಟುಕೊಂಡು ಓದಿದ ಮೇಲೆ, ಪಠ್ಯದಲ್ಲಿರುವ ಮುಖ್ಯಾಂಶವನ್ನು ಸೂಚಿಸುವ ವಾಕ್ಯಗಳಾವುವು ಹಾಗೂ ಅವಕ್ಕೆ ಪೂರಕವಾದ ಅಂಶಗಳನ್ನು (supporting details) ಸೂಚಿಸುವ ವಾಕ್ಯಗಳಾವುವು ಎಂಬುದನ್ನು ಸ್ಪಷ್ಟವಾಗಿ ಗುರುತಿಸಬೇಕು. ಆನಂತರ, ಆ ಪಠ್ಯದ ಮುಖ್ಯಾಂಶವನ್ನು ಸೂಚಿಸುವ ಒಂದು ತಲೆಬರಹವನ್ನು (title) ಕೊಡಬೇಕು.
ಇದಾದ ನಂತರ, precis ಯನ್ನು ಬರೆಯಲು ಪ್ರಾರಂಭಿಸುವುದಕ್ಕೆ ಮುಂಚೆ ಪಠ್ಯದಲ್ಲಿರುವ ಪದಗಳ ಸಂಖ್ಯೆಯನ್ನು ತಿಳಿದು, ಅದರ ಮೂರನೇ ಒಂದು ಭಾಗವೆಂದರೆ, ಎಷ್ಟು ಪದಗಳೆಂಬುದು ನಮ್ಮ ಮನಸಿನಲ್ಲಿರಬೇಕು. ಈಗ ಪಠ್ಯದ ಮುಖ್ಯವಾದ ಅಂಶಗಳನ್ನು ಒಂದೆಡೆ ಬರೆದುಕೊಳ್ಳಬೇಕು. ಇಲ್ಲಿ ಮುಖ್ಯಾಂಶಕ್ಕೆ ಸಂಬಂಧಿಸಿದ ಉದಾಹರಣೆಗಳು ಹಾಗೂ ವಿವರಣೆಗಳನ್ನು ಸೇರಿಸಬಾರದು. ನಾವು ಬರೆಯುವ precisಯಲ್ಲಿ ನಮ್ಮದೇ ಆದ ಸ್ವಂತ ವಾಕ್ಯಗಳಿರಬೇಕೇ ಹೊರತು ಪಠ್ಯದಲ್ಲಿರುವ ವಾಕ್ಯಗಳಲ್ಲ.
ಈ ರೀತಿಯಾಗಿ ಬರೆದ ಕರಡುಪ್ರತಿ (rough draft) ಯನ್ನು ಅಂತಿಮವಾಗಿ ಒಮ್ಮೆ ಪರಿಷ್ಕರಿಸಬೇಕು. ಈ ನಿಟ್ಟಿನಲ್ಲಿ, ನಾವು ಮೂಲಪಠ್ಯದ ಜೊತೆ ನಮ್ಮ precis ಯನ್ನು ಹೋಲಿಸಿ, ಮೂರನೇ ಒಂದು ಭಾಗಕ್ಕೆ ಇಳಿಸಿದ್ದೇವೆಯೇ ಹಾಗೂ ಎಲ್ಲಾ ಮುಖ್ಯಾಂಶಗಳನ್ನು ಸೇರಿಸಿದ್ದೇವೆಯೇ ಎಂದು ನೋಡಿ, spelling, punctuation, grammar ಅನ್ನು ಒಮ್ಮೆ ಪರಿಶೀಲಿಸಿ, ನಮ್ಮ precisಗೆ ಅಂತಿಮ ರೂಪವನ್ನು ಕೊಡಬೇಕು. ಇದರಲ್ಲಿ ನಮ್ಮ ಸ್ವಂತ ಅಭಿಪ್ರಾಯ, ಅನಿಸಿಕೆಗಳಿಗೆ ಎಡೆಯಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು. ಈ ಎಲ್ಲಾ ಅಂಶಗಳನ್ನೊಳಗೊಂಡ Precis–writingನ ಒಂದು ಉದಾಹರಣೆ ಮತ್ತುವಿಶ್ಲೇಷಣೆಯನ್ನು ಮುಂದೆ ನೋಡೋಣ.
Precis- ಒಂದು ಮಾದರಿ
ಈ ಕೆಳಗಿನ ಮೂಲಪಠ್ಯ ಮತ್ತದರ Precis ಯನ್ನು ನೋಡಿ.
Today there are 7 billion people in the world. Fifty years ago only about 2000 million people lived in it. If earth’s population were evenly distributed over its land surface, there would be about 1500 persons in every square mile.
But Earth has vast areas of forest, mountains and desert which are almost totally uninhabited. On the other hand, it has great cities each with millions of people concentrated in a few square miles.
To feed the fast growing population of our earth, scientists and planners have to discover new ways to produce more. One possible way is to bring more uncultivated land into food production. This can be done only in places where there is lot of land not used for productive purposes. In many places it is no longer possible, as all the arable land is already cultivated.
A second way is to make use of new types of seeds to produce more. Already a number of new varieties of paddy and wheat have been developed in different parts of the world. India is one of the countries where a lot of useful work has been done in the field of agriculture research.
Title: Growing Population and the Food ChallengeDuring the last fifty years, the world population has increased from 2000 million to 7 billion. It is unevenly distributed with millions of people concentrated in a few big cities. Scientists in India and abroad are, therefore, busy with agriculture research to find out new methods of increased food production to feed them all and they have already developed many new varieties of paddy and wheat.
ಇಲ್ಲಿನ ಮೂಲಪಠ್ಯದಲ್ಲಿ 195 ಪದಗಳಿವೆ ಹಾಗೂ ಅದರ precis ನಲ್ಲಿ ಮೂಲಪಠ್ಯದ ಸರಿಸುಮಾರು ಮೂರನೇ ಒಂದು ಭಾಗ ಎಂದರೆ 66 ಪದಗಳಿವೆ. ಮೂಲಪಠ್ಯವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಮೊದಲನೇ ಪ್ಯಾರಾದಲ್ಲಿ ಪ್ರಪಂಚದ ಜನಸಂಖ್ಯೆಯನ್ನು ಕುರಿತ ಅಂಕಿಅಂಶಗಳು ಹಾಗೂ ಅದರ ವಿವರಣೆಯನ್ನು ಹೆಚ್ಚಾಗಿ ಕಾಣಬಹುದು.



Note-Taking ಮತ್ತು Note-Making




ನಾವು ಇಂಗ್ಲಿಷ್ ಭಾಷೆಯನ್ನು ಹಲವಾರು ಉನ್ನತ ಶಿಕ್ಷಣ ಸಂದರ್ಭಗಳಲ್ಲಿ ಉಪಯೋಗಿಸಬೇಕಾಗುತ್ತದೆ. ನಾವು ಕಾಲೇಜಿನ ಪ್ರಾಧ್ಯಾಪಕರ ಉಪನ್ಯಾಸಗಳನ್ನು ಕೇಳುವ ಸಂದರ್ಭಗಳಲ್ಲಾಗಲೀ ಅಥವಾ ನಮ್ಮ ಪಠ್ಯಕ್ಕೆ ಸಂಬಂಧಿಸಿದ ನೋಟ್ಸ್ ಮಾಡುವುದಕ್ಕಾಗಲೀ ಇಂಗ್ಲಿಷ್ ತುಂಬಾ ಉಪಯುಕ್ತವಾದ ಹಾಗೂ ಅಗತ್ಯವಾದ ಭಾಷೆ.
ಈ ನಿಟ್ಟಿನಲ್ಲಿ Note-taking ಮತ್ತು Note-making ಗಳನ್ನು ಕಲಿಯುವುದು ಅತ್ಯಂತ ಉಪಯುಕ್ತವಾದ ಕೌಶಲ(skill). Note-takingg ಮತ್ತು  Note-makingg ಗಳ ನಡುವೆ ಕೆಲವು ಸೂಕ್ಷ್ಮವ್ಯತ್ಯಾಸಗಳಿರುವುದನ್ನು ನಾವು ಗಮನದಲ್ಲಿ ಇಡಬೇಕು.
Note-takingg ನಲ್ಲಿ ಮೂಲ ವಿಷಯವನ್ನು ಹೇಗಿದೆಯೋ ಹಾಗೆ ರವಾನಿಸುವುದಕ್ಕೆ ಒತ್ತು ಕೊಡಲಾಗುತ್ತದೆ.
ಇದರಲ್ಲಿ ಪಠ್ಯದ ಯಾವುದೇ ಭಾಗಕ್ಕೆ ಹೆಚ್ಚಿನ ಮಹತ್ವ ಕೊಡುವುದಾಗಲೀ ಅಥವಾ ಯಾವುದೇ ಭಾಗವನ್ನು ಕಡೆಗಣಿಸುವುದಾಗಲೀ ಇರುವುದಿಲ್ಲ. ಈ ರೀತಿಯ Note-taking ನಮ್ಮ ದಿನನಿತ್ಯದ ಮರು ಓದಿಗಾಗಿ ಉಪಯೋಗವಾಗುತ್ತದೆ. ಆದ್ದರಿಂದ, Note-takingg ಒಂದು ತಟಸ್ಥದಾಖಲಾತಿಯ ಕ್ರಿಯೆ ಮಾತ್ರವಾಗಿರುತ್ತದೆ. ಆದರೆ Note-taking ಅನ್ನು acive approachhನ ಒಂದು ಮಾದರಿಯನ್ನಾಗಿ ಪರಿಗಣಿಸಬಹುದು. ಏಕೆಂದರೆ, Note-takingg ಪ್ರಕ್ರಿಯೆಯು ಮೂರು ಬೌದ್ಧಿಕ ಕ್ರಿಯೆಗಳ ಸಂಗಮವಾಗಿರುತ್ತದೆ.
1. ಆಯ್ಕೆ (selecting)
2. ವಿಶ್ಲೇಷಣೆ (analyzing)
3. ಸಾರಸಂಗ್ರಹ  (summarizing) ಇವುಗಳೇ ಆ ಮೂರು ಕ್ರಿಯೆಗಳು.
Note-making ನಲ್ಲಿ ಹಲವಾರು ವಿಧಗಳಿವೆ
1. Sequential / linear note-making
2. Pattern note-making / mind-mapping
3. Using shorthand or abbreviation to aid note-making
4. Using diagrams for note-making
5. Using mnemonics and groupings
6. Highlighting, annotating and underliningu
ಇವುಗಳಲ್ಲಿ ಹೆಚ್ಚಾಗಿ ಬಳಸುವ ವಿಧಾನವೆಂದರೆ SequeSequential/linear note-making. ಈ ವಿಧಾನದ ಬಗ್ಗೆ ಗಮನ ಹರಿಸೋಣ.
ಮೊದಲಿಗೆ, ಪಠ್ಯವನ್ನು ಎಚ್ಚರಿಕೆಯಿಂದ ಓದಬೇಕು. ಪಠ್ಯದ ಮುಖ್ಯ ವಿಷಯಕ್ಕೆ ಸಂಬಂಧ ಪಟ್ಟಂತಹ ಒಂದು heheadingg ಅನ್ನು ಕೊಡಬೇಕು. ನಂತರ, ಮುಖ್ಯವಾದ ವಿಷಯ ಯಾವ ರೀತಿಯಲ್ಲಿ ಬೆಳೆದು ಬಂದಿದೆ ಎಂಬುದಕ್ಕನುಸಾರವಾಗಿ sub-headings ಅನ್ನು ಕೊಡಬೇಕು. ಆ ನಂತರ, sub-headings  ಗೆ ಸಂಬಂಧಪಟ್ಟ ಅಂಶಗಳಿದ್ದರೆ, ಅವುಗಳನ್ನೂ ಬರೆಯಬೇಕು.
Note-makingg ನಲ್ಲಿ ಸಂಪೂರ್ಣ ವಾಕ್ಯಗಳನ್ನು ಬರೆಯುವ ಅವಶ್ಯಕತೆಯಿಲ್ಲ. ಅರ್ಥವಾಗುವ ರೀತಿಯಲ್ಲಿ words/phrases/clauses  ಬರೆಯಬಹುದು.
ಉದಾ:‘The passage should be complete’  ಎಂಬ ವಾಕ್ಯಕ್ಕೆ ಬದಲಾಗಿ ‘complete passage’ ಎಂದಿದ್ದರೆ ಸಾಕು. ಪ್ರಚಲಿತ  abbreviationsಗಳನ್ನೂ ಬಳಸಬಹುದು.
ಉದಾ: Govt. Dr. Etc.Sc. ಮುಂತಾದವುಗಳೂ.
ಎಲ್ಲಾ s-hsub-headingss ಅನ್ನು mmargin ನಿಂದ ಒಂದೇ ಅಂತರದಲ್ಲಿ ಬರೆಯಬೇಕು.
Note-makingg ನಲ್ಲಿ ಕೇಳುಗರ ಸ್ವಂತ ಆಯ್ಕೆ ಬಹು ಮುಖ್ಯ ಪಾತ್ರ ವಹಿಸುತ್ತದೆ. ಆದರೆ, Note-takinggg ನಲ್ಲಿ ಹೀಗಿರುವುದಿಲ್ಲ ಎಂಬುದನ್ನು ಗಮನದಲ್ಲಿಡಬೇಕು. Note-takinggg ಹಾಗೂ Note-makingggಯಶಸ್ವಿ study skillss ನ ಅವಿಭಾಜ್ಯ ಅಂಗ. ಇಂಗ್ಲಿಷ್ ಭಾಷೆಯನ್ನು, sstudy skillsನ ಮುಖ್ಯ ಆಯಾಮಗಳಾದ Note-takinggg ಹಾಗೂ Note-makinggಗಳಿಗಾಗಿ ಬಳಸುತ್ತಾ ಹೋದಂತೆ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವಲ್ಲಿ ನಮ್ಮ ಕಾರ್ಯಕ್ಷಮತೆ (competence) ಹೆಚ್ಚುತ್ತಾ ಹೋಗುತ್ತದೆ.
Linear note-making ನ ಒಂದು ಮಾದರಿ
The small village of Somnathpur contains an extraordinary temple, built around 1268 AA.D. by the Hoysalas of Karnataka – one of the most prolific temple-builders. Belur and Halebid are among their better-known works. While thse suffered during the invasion of the 14th century, the somnathpur temple stands more or less intact in near original condition.
This small temple captivates with the beauty and vitality of its detailed sculpture, covering almost every inch of the walls, pillars, and even ceilings. It has three shikharas and stands on a star-shaped, raised-platform with 24 corners. The outer walls have a profusion of detailed carvings: the entire surface run over by a carved plaques of stone.
There were vertical panels covered by exquisite figures of gods and goddesses, with many incarnations being depicted. There were nymphs too, some carrying an ear of maize, a symbol of plenty and prosperity. The elaborate ornamentation, very characteristic of Hoysala sculpture was a remarkable feature. On closer look-and it is worth it – the series of friezes on the outer wall reveals intricately carved caparisoned elephants, charging horseman, stylized flowers, warriors, musicians, crocodiles, and swans.
ಈಗ ಈ ಮೇಲಿನ ಪಠ್ಯಕ್ಕೆ ಸಂಬಂಧಿಸಿದಂತೆ ಮಾಡಿದ ಲೀನಿಯರ್ ನೋಟ್ಸ್ ನ ಮಾದರಿಯನ್ನು ಗಮನಿಸಿ.
SoSomnathpura Temple
A) Structural details & sculptural perfection
1. Structure
i) Has 3 shikharas
ii) Stands on a star-shaped, raised-platform with 24 edges
iii) Vertical panels covered by exquisite figures of gods and goddesses, with many incarnations depicted
iv) Nymphs-some with an ear of maize
2. Sculptural perfection
i)Extensive carvings of caparisoned elephants, charging horseman, stylized flowers, warriors, crocodiles & swans
ಇಲ್ಲಿನ Headingsgs  ಹಾಗೂ sub-headings ಅನ್ನು ಸೂಕ್ಷ್ಮವಾಗಿ ಗಮನಿಸಿ.
Sub-hsub-headings ಗೆ ಸಂಬಂಧ ಪಟ್ಟ ವಾಕ್ಯಗಳು, ಸಂಪೂರ್ಣ ವಾಕ್ಯಗಳಲ್ಲದಿರುವುದನ್ನೂ ಹಾಗೂ ಇವು ಪಠ್ಯದ ಮುಖ್ಯಾಂಶಗಳು ಮಾತ್ರವೆಂಬುದನ್ನೂ ಇಲ್ಲಿ ಕಾಣಬಹುದು.
Note-making ವಿವಿಧ ಅಂಶಗಳು ಅನೇಕ ಬಾರಿ memory triggerss ಆಗಿ ಕೆಲಸ ಮಾಡುತ್ತವೆ. ಅಂದರೆ ಇಲ್ಲಿ ಬಳಸುವ ಒಂದು ಪದ, ಒಂದು ಇಡೀ ಪರಿಕಲ್ಪನೆಯನ್ನು ಮನಸ್ಸಿನಲ್ಲಿ ಮೂಡಿಸಲು ಸಹಾಯ ಮಾಡುತ್ತದೆ.
logoblog

Thanks for reading English ಕಲಿಯೋಣ ಬನ್ನಿ

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *