ಭಾರತ-ರಷ್ಯಾ ಭದ್ರತಾ ಒಪ್ಪಂದ
ಎಕೆ-203 ರೈಫಲ್ ಉತ್ಪಾದನೆ ಸೇನಾ ಸಹಕಾರ 2031ರ ತನಕ ವಿಸ್ತರಣೆ
ನವದೆಹಲಿ: ರಷ್ಯಾ ಅಧ್ಯಕ್ಷ ವಾದಿಮಿರ್ ಪುತಿನ್ ದ್ವಿಪಕ್ತಿಯ ಮಾತುಕತೆಗಾಗಿ ಸೋಮವಾರ ಭಾರತಕ್ಕೆ ಅಗಮಿಸಿದ್ದಾರೆ. ಭಾರತ – ರಷ್ಯಾ ನಡುವೆ ಮಹತ್ವದ ಭದ್ರತಾ ಒಪ್ಪಂದವೂ ಏರ್ಪಟ್ಟಿದೆ. ಉಭಯ ದೇಶಗಳ ಮೈತ್ರಿ ಮುಂದುವರಿಸುವ ಕುರಿತು ಪುತಿನ್ ಜತೆ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಿದ್ದಾರೆ. ಭಾರತೀಯ ಸೇನೆಗೆ ಎಕೆ-203 ರೈಫಲ್‌ಗಳನ್ನು ರಷ್ಯಾದಿಂದ ಖರೀದಿಸುವ ಒಪ್ಪಂದಕ್ಕೆ ಭಾರತ ಸೋಮವಾರ ಸಹಿಹಾಕಿದೆ, ಸೇನಾ ಸಹಕಾರವನ್ನು 2031ರ ತನಕ ವಿಸ್ತರಿಸುವುದಾಗಿಯೂ ಉಭಯ ರಾಷ್ಟ್ರಗಳು ಘೋಷಿಸಿವೆ.
ಸಚಿವರ ಹಂತದ ಮಾತುಕತೆ: ರಷ್ಯಾದ ರಕ್ಷಣಾ ಸಚಿವ » 2+2 ಸಚಿವರ ಸರ್ಟಿ ಹಂತದ ಮಾತುಕತೆ ಯಶಸ್ವಿ ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಗ್, ವಿದೇಶಾಂಗ ಸಚಿವರಾದ ಸರ್ಜಿ ಲಾವೋವ್ ಮತ್ತು ಜೈಶಂಕರ್ ಸೋಮವಾರ ಬೆಳಗ್ಗೆ 2+2 ಸಚಿವರ ಸ್ತರದ ಮಾತುಕತೆ ನಡೆಸಿದರು. ರಷ್ಯಾ ಜತೆಗಿನ ಪಾಲುದಾರಿಕೆ ಯಾವುದೇ ದೇಶವನ್ನು ಹಿಮ್ಮೆಟ್ಟಿಸುವುದಕ್ಕೆ ಮಾಡುತ್ತಿರುವುದಲ್ಲ. ಭಾರತದ ದೀರ್ಘಾವಧಿಯ ವಿಶೇಷ ಮತ್ತು ಪ್ರತಿಷ್ಠಿತ ವ್ಯೂಹಾತ್ಮಕ ಪಾಲುದಾರ ರಾಷ್ಟ್ರ ರಾಜ್ಯ, ಸಮಾನ ಆಸಕ್ತಿ ಬಹುತ್ವ ಮತ್ತು ಜಾಗತಿಕ ಶಾಂತಿ ಮತ್ತು ಸುವ್ಯವಸ್ಥೆಗಾಗಿ ಪರಸ್ಪರ ಅರ್ಥಮಾಡಿಕೊಳ್ಳುವಿಕೆ ಮತ್ತು ವಿಶ್ವಾಸದೊಂದಿಗೆ ಎರಡೂ ರಾಷ್ಟ್ರಗಳು ಪಾಲುದಾರಿಕೆಯನ್ನು ಮುಂದುವರಿಸುತ್ತಿವೆ ಎಂದು ಸಚಿವ ರಾಜನಾಥ್ ಸಿಂಗ್ ಹೇಳಿದರು. ರಷ್ಯಾದ ರಕ್ಷಣಾ ಸಚಿವ ಸರ್ಚಿ ಶೋಯಿಗು ಮತ್ತು ವಿದೇಶಾಂಗ ಸಚಿವ ಸರ್ಜಿ ಲಾವೋವ್ ಭಾನುವಾರ ರಾತಿಯ 242 ಮಾತುಕತೆಗಾಗಿ ದೆಹಲಿಗೆ ಆಗಮಿಸಿದ್ದರು. ಭಾರತದ ಗಡಿ ಭಾಗದಲ್ಲಿ ಅಪ್ರಚೋದಿತ ಅತಿಕ್ರಮಣ, ಒತ್ತುವರಿ ಪ್ರಕರಣ, ಭಯೋತ್ಪಾದನೆ, ಕೋವಿಡ್ 19 ಮತ್ತು ಅಫ್ಘಾನಿಸ್ತಾನದ ವಿಚಾರಗಳು ಮಾತುಕತೆಯಲ್ಲಿ ಚರ್ಚೆಗೊಳಗಾಗಿವೆ. ಗಡಿಭಾಗದಲ್ಲಿ ಉದ್ವಿಗ್ನತೆ ಇರುವಾಗಲೇ ಈ ಮಾತುಕತೆ ನಡೆದಿರುವುದು ಗಮನಾರ್ಹ,
• ಮುಂದಿನ 10 ವರ್ಷಗಳ ಅವಧಿಗೆ ರಕ್ಷಣಾ ಪಾಲುದಾರಿಕ ಮುಂದುವರಿಸುವ ಒಪ್ಪಂದಕ್ಕೂ ಉಭಯ ರಾಷ್ಟ್ರಗಳು ಅಂಕಿತ ಹಾಕಿದೆ. ಮತ್ತು ಪಾಕಿಸ್ತಾನ
ಕ್ಷಿಪಣಿ ಡೀಲ್ ತಡೆಗೆ ಅಮೆರಿಕ ಪ್ರಯತ್ನ ವಿಫಲ
ರಷ್ಯಾ ನಿರ್ಮಿತ ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ 'ಟ್ರಯಂಫ್ನ ಮೊದಲ ಘಟಕ ಈಗಾಗಲೇ ಭಾರತಕ್ಕೆ ತಲುಪಿದೆ. ಈ ಒಪ್ಪಂದ ತಡೆಯುವುದಕ್ಕೆ ಅಮೆರಿಕ ಸಾಕಷ್ಟು ಪ್ರಯತ್ನ ಮಾಡಿದೆ. ಅಮೆರಿಕದ ಆದೇಶವನ್ನು ಪಾಲಿಸುವಂತೆ ಭಾರತದ ಮೇಲೆ ಒತ್ತಡ ಹೇರಿತ್ತು. ಇವೆಲ್ಲವನ್ನೂ ಮೀರಿ ಈ ಒಪ್ಪಂದವನ್ನು ಭಾರತ ಯಶಸ್ವಿ ಯಾಗಿ ನೆರವೇರಿಸಿಕೊಂಡಿದೆ. ಕೈಗಾರಿಕಾ ಮೂಲಗಳ ಪ್ರಕಾರ, ಬ್ಯಾಡ್ರನ್‌ನ ಮೊದಲ ಭಾಗಗಳು ಈಗಾಗಲೇ ಭಾರತವನ್ನು ಸೇರಿವೆ. ಈ ಕ್ಷಿಪಣಿ ಬಿಡಿಭಾಗಗಳು ಈಗಾಗಲೇ ವಾಯು ಮತ್ತು ಸಮುದ್ರ ಮಾರ್ಗವಾಗಿ ಭಾರತಕ್ಕೆ ಸೇರಿದೆ: ರಷ್ಟಾದಿಂದ 40,000 ಕೋಟಿ ರೂಪಾಯಿ ಮೌಲ್ಯದ 5 ಟ್ರಯಂಫ್ ಎಸ್ 400 ಯುದ್ಧವಿಮಾನ ಹಾಗೂ ಕ್ಷಿಪಣಿ ದಾಳಿ ನಿರೋಧಕ ವ್ಯವಸ್ಥೆ ಖರೀದಿಯ ಒಪ್ಪಂದಕ್ಕೆ 2018ರ ಅಕ್ಟೋಬರ್‌ನಲ್ಲಿ ಉಭಯ ರಾಷ್ಟ್ರಗಳು ಸಹಿ ಹಾಕಿವೆ. ಇದರಂತೆ ರಷ್ಯಾವು ಐದು ವರ್ಷದೊಳಗೆ ಎಲ್ಲ 5 ವ್ಯವಸ್ಥೆಯನ್ನು ಹಸ್ತಾಂತರಿಸಬೇಕು.
ಅಮೆರಿಕದ ನಿರ್ಬಂಧ ಭೀತಿ
ರಷ್ಯಾದಿಂದ ಖರೀದಿಗೆ ಸಂಬಂಧಿಸಿ ಒಪ್ಪಂದ ಮಾಡಿಕೊಳ್ಳು ವುದರಿಂದ ಭಾರತಕ್ಕೆ ಅಮೆರಿಕದ ನಿರ್ಬಂಧದ ಭೀತಿಯೂ ಇದೆ. ಇಷ್ಟಾದರೂ, ಅಮೆರಿಕದ ಜತೆಗಿನ ಒಪ್ಪಂದ, ಒಡನಾಟಗಳಿಗೆ ತೊಂದರೆ ಆಗದ ರೀತಿಯಲ್ಲಿ ರಷ್ಯಾದ ಜತೆಗೂ ಒಡನಾಟ ನಡೆಸುವ ಅನಿವಾರ್ಯತೆ ಭಾರತಕ್ಕೆ ಇದೆ. ಹೀಗಾಗಿ, ಭಾರತದ ಸೇನಾ ಬಲ ವೃದ್ಧಿಗೆ ಬೇಕಾದ ಎಲ್ಲ ಕ್ರಮಗಳನ್ನೂ ಸರ್ಕಾರ ತೆಗೆದುಕೊಳ್ಳುತ್ತಿದೆ.
ಮಾತುಕತೆಯಲ್ಲಿ
ಪ್ರಸ್ತಾಪಿತ ವಿಚಾರಗಳು
* ರಕ್ಷಣೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಪಾಲುದಾರಿಕ
. ಆಫ್ಘಾನಿಸ್ತಾನದ ತಾಲಿಬಾನ್ ಆಡಳಿತ, ಪಾಕಿಸ್ತಾನ, ಚೀನಾಗಳ ವರ್ತನೆ
ಈ ಭಾರತದ ಗಡಿಭಾಗದಲ್ಲಿ
* ವಾಣಿಜ್ಯ ಮತ್ತು ಇತರೆ ವಿಚಾರಗಳು
ರಷ್ಯಾ ಅಧ್ಯಕ್ಷ ಪುತಿನ್, ಪ್ರಧಾನಿ ನರೇಂದ್ರ ಮೋದಿ ಪರಸ್ಪರ ಹಸ್ತಲಾಘವ
4 ರಕ್ಷಣಾ ಒಪ್ಪಂದಗಳು
ಈ ಉತ್ತರ ಪ್ರದೇಶದ ಅಮೇರಿಯಲ್ಲಿ 6,01,427 28-203 me daders ಉತ್ಪಾದಿಸುವುದಕ್ಕೆ ಸಂಬಂಧಿಸಿ 5,000 ಕೋಟಿ ರೂಪಾಯಿ ಮೌಲ್ಯದ ಒಪ್ಪಂದಕ್ಕೆ ಭಾರತ ಮತ್ತು ರಷ್ಯಾ ಸಹಿ ಹಾಕಿವೆ. ನಾಲ್ಕು ಒಪ್ಪಂದಗಳು ಕೂಡ ಇದೇ ಡೀಲ್‌ಗೆ ಸಂಬಂಧಿಸಿದವು. 'ಇಂಡೋ-ರಷ್ಯಾ ರೈಫಲ್ಸ್ ಪ್ರೈವೇಟ್ ಲಿಮಿಟೆಡ್ ಇದನ್ನು ಉತ್ಪಾದಿಸಿಕೊಡಲಿದೆ.
ಭಾರತ -ರಷ್ಯಾ ಸಂಬಂಧ ಸ್ಥಿರ
ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವಾದಿಮಿರ್ ಪುತಿನ್ ಸೋಮವಾರ ಸಂಜೆ ದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ಮಹತ್ವದ ದ್ವಿಪಕ್ಷೀಯ ಸಭೆ ನಡೆಸಿದರು. ಉಭಯ ದೇಶಗಳ ನಡುವಿನ ವಿಶೇಷ ಮತ್ತು ಸಾಮಾನ್ಯ ಹಿತಾಸಕ್ತಿಯ ವಿಚಾರಗಳು ಮತ್ತು ವ್ಯೂಹಾತ್ಮಕ ಪಾಲುದಾರಿಕೆ ವಿಚಾರಗಳು ಚರ್ಚೆಗೆ ಒಳಗಾಗಿವೆ.
ಹೈದರಾಬಾದ್ ಹೌಸ್‌ನಲ್ಲಿ ಮೋದಿ-ಪುತಿನ್ ಮಾತುಕತೆ
ಕೋವಿಡ್ 19 ನಂಕಷ್ಟ ಇದ್ದಾಗ್ಯೂ ಭಾರತ ಮತ್ತು ರಷ್ಯಾ ನಡುವಿನ ಬಾಂಧವ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ನಿಮ್ಮ ಆಗಮನವು ಭಾರತದ ಜತೆಗಿನ ಬಾಂಧವ್ಯ ಸಂಬಂಧಿಸಿ ನಿಮ್ಮ ಬದ್ಧತೆಯನ್ನು ಎತ್ತಿ ತೋರಿಸಿದೆ. ಕಳೆದ ಕೆಲವು ದಶಕಗಳ ಅವಧಿಯಲ್ಲಿ ಜಾಗತಿಕ ಮಟ್ಟದಲ್ಲಿ ಭೌಗೋಳಿಕ ರಾಜಕೀಯ ಸೂತ್ರಗಳು ಬದಲಾಗಿವೆ. ಆದರೆ, ಭಾರತ-ರಷ್ಯ ಸಂಬಂಧದ ಮೇಲೆ ಅವು ಪರಿಣಾಮ ಬೀರಿಲ್ಲ. ಅದು ಇನ್ನಷ್ಟು ಬಲಿಷ್ಠಗೊಳ್ಳುತ್ತ ಮುಂದುವರಿದಿದೆ ಎಂದು ಸಾವಿ ನರೇಂದ್ರ ಮೋದಿ ತಮ್ಮ ಮಾತನ್ನು ಆರಂಭಿಸಿದ್ದರು. ಭಾರತ ಒಂದು ಮಹಾನ್ ಶಕ್ತಿ ಒಂದು ಸ್ನೇಹಪರ ದೇಶ ಮತ್ತು ಸರಿಯಾದ ಮಿತ್ರ ರಾಷ್ಟ್ರ ಎಂಬುದನ್ನು ನಾವು ಗ್ರಹಿಸಿದ್ದೇವೆ. ನಮ್ಮ ದೇಶಗಳ ನಡುವಿನ ಸಂಬಂಧ ವೃದ್ಧಿಯಾಗುತ್ತಿದೆ. ಭವಿಷ್ಯದ ಕಡೆಗೆ ನಮ್ಮ ನೋಟವಿದೆ ಎಂದು ರಷ್ಯಾ ಅಧ್ಯಕ್ಷ ವಾದಿಮಿರ್ ಪುತಿನ್ ಹೇಳಿದರು.
how many teeth do adult humans have
ReplyDeletehow many teeth in the human mouth