ಫೂಕನ್, ಕೊಂಕಣಿಯ ಮೌಜೋಗೆ ಜಾನಪೀಠ
ನವದೆಹಲಿ: ಅಸ್ಸಾಮಿ ಕವಿ ನೀಲಮಣಿ ಫೂಕನ್ ಮತ್ತು ಕೊಂಕಣಿ ಸಾಹಿತಿ ದಾಮೋದರ ಮೌಜೋ ಅವರಿಗೆ ಕ್ರಮವಾಗಿ 56 ಮತ್ತು 57ನೇ ಜ್ಞಾನಪೀಠ ಪ್ರಶಸ್ತಿ ಸಂದಿದೆ. ಭೂಕನ್ ಅವರು 2020ರ ಸಾಲಿನ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದರೆ, ಮೌಜೋ ಅವರನ್ನು 2021ನೇ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
1933ರಲ್ಲಿ ಅಸ್ಸಾಂನ ದೇರ್ಗಾಂವ್ ನಲ್ಲಿ ಜನಿಸಿದ ಫೂಕನ್ ಅವರು, ಅಸ್ಸಾಂ ಸಾಹಿತ್ಯಕ್ಕೆ ಫ್ರೆಂಚ್ ಪ್ರತಿಮಾ ಸಿದ್ಧಾಂತ ಆಧಾರಿತ ಅಧುನಿಕತೆ ಯನ್ನು ತಂದುಕೊಟ್ಟರು. ಇದು ಅಸ್ಸಾಮಿ ಭಾಷೆಗೆ ಸಂದಿರುವ ಮೂರನೇ ಜ್ಞಾನಪೀಠ ಪ್ರಶಸ್ತಿ.
1944ರಲ್ಲಿ ಗೋವಾದಲ್ಲಿ ಜನಿಸಿದ ದಾಮೋದರ ಮೌಜೋ ಅ
ಪೂಕನ್ ಸಣ್ಣ ಕತೆಗಳು ಮತ್ತು ಕಾದಂಬರಿಗಳಿಗೆ ಪ್ರಸಿದ್ಧರು. ಇದು ಕೊಂಕಣಿ ಭಾಷೆಗೆ ಸಂದಿರುವ ಎರಡನೇ ಜ್ಞಾನಪೀಠ. ಜಿ.ಎನ್. ದೇವಿ, ಎಂ.ಎಂ. ಕಲಬುರ್ಗಿ ಮೊದಲಾದವರೊಡನೆ ಮೌಜೋ ಕೆಲಸ ಮಾಡಿದ್ದಾರೆ. ಕಲಬುರ್ಗಿ ಅವರ ಸಂಪಾದಕತ್ವದ 'ವಚನ ಸಂಪುಟ'ವನ್ನು ಕೊಂಕಣಿ ಭಾಷೆಗೆ ಅನುವಾದ ಮಾಡಿದ ತಂಡದ ಮುಖ್ಯಸ್ಥರಾಗಿದ್ದರು. ಜಿ.ಎನ್. ದೇವಿ ಅವರ ಜತೆ ಭಾಷಾಶಾಸ್ತ್ರಕ್ಕೆ ಸಂಬಂಧಿಸಿ ಕೆಲಸ ಮಾಡಿದ್ದಾರೆ.
No comments:
Post a Comment