ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Saturday, March 07, 2015

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

  Pundalik       Saturday, March 07, 2015
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಭಾಗ್ಯಲಕ್ಷ್ಮಿ ಯೋಜನೆ
ಸಮಾಜದಲ್ಲಿ ಹೆಣ್ಣು ಮಕ್ಕಳ ಸ್ಥಿತಿಯನ್ನು ಉತ್ತಮಗೊಳಿಸಲು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಹೆಣ್ಣು ಮಗು ಜನಿಸಿದಾಗ ಅಂತಹ ಕುಟುಂಬಗಳಿಗೆ ನೈತಿಕ ಸ್ಥೈರ್ಯ ತುಂಬಲು 2006-07ನೇ ಸಾಲಿನಿಂದ ಭಾಗ್ಯಲಕ್ಷ್ಮಿ ಎಂಬ ಹೊಸ ಯೋಜನೆಯನ್ನು ಜಾರಿಗೆ ತರಲಾಗಿದೆ.
ಭಾಗ್ಯಲಕ್ಷ್ಮಿ ಯೋಜನೆಯು ರಾಜ್ಯ ಪುರಸ್ಕೃತ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ ದಿನಾಂಕ: 01-04-2006 ರಿಂದ 31-07-2008 ರ ವರೆಗೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಜನಿಸಿದ ಎರಡು ಹೆಣ್ಣು ಮಕ್ಕಳಿಗೆ ರೂ. 10000/- ಗಳಂತೆ ನಿಗದಿತ ಠೇವಣಿ ಇಟ್ಟು, ಫಲಾನುಭವಿಗಳಿಗೆ 18 ವರ್ಷದ ನಂತರ ನಗದು ಹಣ ಬಡ್ಡಿ ಸಮೇತ ಸದರಿಯವರಿಗೆ ಪಾವತಿಸಲಾಗುವುದು.
ಈಗ ರಾಜ್ಯ ಸರ್ಕಾರವು 01-08-2008 ರ ನಂತರ ಜನಿಸಿದ ಹೆಣ್ಣು ಮಕ್ಕಳಿಗೆ ರೂ. 19300/- ರಂತೆ ನಿಗದಿತ ಠೇವಣಿ ಮೊತ್ತ ನೀಡಲಾಗುತ್ತಿದ್ದು, 18 ವರ್ಷದ ನಂತರ ರೂ. 100097/- ಗಳು ಪಾವತಿಸಲಾಗುವುದು.
ಅರ್ಹತೆ
ಫಲಾನುಭಾವಿ ಪೋಷಕರು ಬಡತನ ರೇಖೆಗಿಂತ ಕೆಳಗಿನ ಕುಟುಂಬದವರಾಗಿರಬೇಕು.
ಫಲಾನುಭಾವಿ  ಪೋಷಕರ ವಾರ್ಷಿಕ ವರಮಾನ ಗ್ರಾಮೀಣ ಪ್ರದೇಶದಲ್ಲಿ ರೂ. 12000/- ಹಾಗೂ ನಗರ ಪ್ರದೇಶದಲ್ಲಿ ರೂ. 17000/- ಇರತಕ್ಕದ್ದು.
ಕುಟುಂಬದಲ್ಲಿ ಮಕ್ಕಳ ಸಂಖ್ಯೆ: 3 ಕ್ಕಿಂತ ಹೆಚ್ಚಿಸಬಾರದು. ಒಂದು ವೇಳೆ ಫಲಾನುಭವಿ 3ನೇ ಮಗುವಾಗಿದ್ದರೆ ತಂದೆ ತಾಯಿ ಕುಟುಂಬ ಶಸ್ತ್ರಿಗೊಳಪಟ್ಟಿರಬೇಕು.
ಸ್ತ್ರೀಶಕ್ತಿ ಯೋಜನೆ
ಗ್ರಾಮೀಣ ಮಹಿಳೆಯರ ಸಬಲೀಕರಣ ಹಾಗೂ ಸ್ವಾವಲಂಬಿಗಳನ್ನಾಗಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶ. ಈ ಸ್ತ್ರೀಶಕ್ತಿ ಯೋಜನೆಯನ್ನು ಸರಕಾರವು 2000-01 ನೇ ಸಾಲಿನಲ್ಲಿ ಜಾರಿಗೊಳಿಸಲಾಗಿದೆ.
ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದ್ದು, ಮಹಿಳೆಯರಲ್ಲಿ ಉಳಿತಾಯದ ಮನೋಭಾವ ಮೂಡಿಸುವುದರೊಂದಿಗೆ ಸಾಮಾಜಿಕ ಸಮಸ್ಯೆಗಳ ಬಗ್ಗೆಯೂ ಜಾಗೃತಿಯನ್ನುಂಟು ಮಾಡಲಾಗುತ್ತಿದೆ. ಆರ್ಥಿಕ್ ಚಟುವಟಿಕೆಗಳಲ್ಲಿ ಸ್ವತಂತ್ರ ಬಾಳನ್ನು ರೂಪಿಸಿಕೊಂಡಿರುವ ಈ ಸ್ವಾವಲಂಬಿ ಮಹಿಳೆಯರ ಬದುಕಿನಲ್ಲಿ ಹೊಸ ಚೈತನ್ಯ ಮೂಡಿದೆ.
ಸಮಾಜದ ಬಡ ಕುಟುಂಬದ ಸಮಾನ ಸಾಮಾಜಿಕ ಅಥವಾ ಆರ್ಥಿಕ ಹಿನ್ನೆಲೆಯಲ್ಲಿ ಸಮಾನ, ಮನಸ್ಸಿನ ಪರಸ್ಪರ ವಿಶ್ವಾಸದಿಂದ ಕೂಡಿದ 15 ರಿಂದ 20 ಜನ ಮಹಿಳೆಯರು ಒಂದೆಡೆ ಸೇರಿ, ತಮ್ಮ ಆರ್ಥಿಕ್  ಅಭಿವೃದ್ಧಿಗಾಗಿ ಇಚ್ಛೆಯಿಂದ ಉಳಿತಾಯ ಮಾಡುವುದು ತಮ್ಮದೇ ಹಣವನ್ನು ಸ್ವ ಸಹಾಯ ತತ್ವದ ಮೂಲಕ ಸಾಲ ನೀಡುವುದು. ಸಾಮಾನ್ಯ ನಿಧಿಯನ್ನು ರೂಢಿಸುವುದು, ಒಮ್ಮತದ ತೀಮರ್ಾನದಿಂದ ಎಲ್ಲಾ ಸಮಸ್ಯೆಗಳನ್ನು ತಮ್ಮಲ್ಲೇ ಬಗೆಹರಿಸಿಕೊಂಡು ಅಭಿವೃದ್ಧಿ ಸಾಧಿಸುವದು ಗುಂಪಿನ ಪ್ರಮುಖ ಲಕ್ಷಣಗಳಾಗಿವೆ.
ಗುಂಪಿಗೆ ಸದಸ್ಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಬ್ಯಾಂಕನಿಂದ ಹಣ ಇತರೆ ಇಲಾಖೆಗಳಿಂದ ಸಾಲ ಸೌಲಭ್ಯ ಒದಗಿಸಲಾಗಿದೆ. ಅದೇ ರೀತಿಯಾಗಿ ಗುಂಪುಗಳ ಬಲವರ್ಧನೆಗಾಗಿ ಸದಸ್ಯರಿಗೆ ಪುಸ್ತಕ ನಿರ್ವಹಣೆ, ಸಾಲ ನಿರ್ವಹಣೆ ಹಾಗೂ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ನೀಡಲಾಗುತ್ತದೆ. ಅದೇ ರೀತಿಯಾಗಿ ಪ್ರತಿಯೊಂದು ತಾಲೂಕಿನಲ್ಲಿ ಸ್ತ್ರೀಶಕ್ತಿ ಫೆಡರೇಷನ್ಗಳು ರಚಿಸಲಾಗಿರುತ್ತದೆ.
ಅರ್ಹತೆ
ಬಡತನ ರೇಖೆಗಿಂತ ಕಡಿಮೆ ಆದಾಯ ಇರುವ ಕುಟುಂಬಗಳ ಮಹಿಳೆಯರು.
ಪರಿಶಿಷ್ಟ ಜಾತಿ / ಪರಿಶಿಷ್ಟ ವರ್ಗಕ್ಕೆ ಸೇರಿದ ಮಹಿಳೆಯರು.
ಭೂ ರಹಿತ ಕೃಷಿ ಕಾರ್ಮಿಕರು
ಸಮಾನ ಸಾಮಾಜಿಕ ಹಾಗೂ ಆರ್ಥಿಕ ಹಿನ್ನೆಲೆಯುಳ್ಳ ಹಾಗೂ ಸಮಾನ ಮನಸ್ಸಿನ ಮಹಿಳೆಯರು.
ಸುತ್ತು ನಿಧಿ
ಎಲ್ಲಾ ಸ್ವ ಸಹಾಯ ಗುಂಪುಗಳಿಗೆ ತಲಾ 5000/- ರೂಪಾಯಿಗಳನ್ನು ಸುತ್ತು ವಿಧಿಯನ್ನಾಗಿ ನೀಡಲಾಗುವುದು.
ತರಬೇತಿ
ಸ್ತ್ರೀಶಕ್ತಿ ಯೋಜನೆಯಡಿ ರಚಿಸಲಾಗುವ ಗುಂಪುಗಳಿಗೆ ಯೋಜನೆ ಬಗ್ಗೆ ಮಾಹಿತಿ ನೀಡುವ ತರಬೇತಿಯಲ್ಲದೇ ಗುಂಪುಗಳಿಗೆ ಪುಸ್ತಕ ನಿರ್ವಹಣೆ, ಸಾಲ ನಿರ್ವಹಣೆ ಹಾಗೂ ಸಾಮಾಜಿಕ ವಿಷಯಗಳ ತರಬೇತಿ ನೀಡಲಾಗುವುದು.
ಆದಾಯೋತ್ಪನ್ನ ಚಟುವಟಿಕೆಗಳು
ಗುಂಪುಗಳು ಆರ್ಥಿಕವಾಗಿ ಸಬಲತೆ ಹೊಂದಲು ಬ್ಯಾಂಕ್ ಸಂಪಕ್ದೊಂದಿಗೆಸ ಆದಾಯೋತ್ಪನ್ನ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಅನುವು ಮಾಡುವುದಲ್ಲದೇ ಈ ಬಗ್ಗೆ ಕೌಶಲ್ಯ ತರಬೇತಿಯನ್ನೂ ಸಹ ನೀಡಲಾಗುತ್ತದೆ. ಗುಂಪುಗಳ ಚಟುವಟಿಕೆ ಹಮ್ಮಿಕೊಳ್ಳಲು ಅವರ ಉಳಿತಾಯದಿಂದ ಆಂತರಿಕ ಸಾಲವನ್ನು ನೀಡಲಾಗುತ್ತದೆ. ಗುಂಪುಗಳು ತಯಾರಿಸುವ ವಸ್ತುಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಲು ಪ್ರಯತ್ನಿಸಲಾಗುತ್ತದೆ.
ಗುಂಪುಗಳು ಹಮ್ಮಿಕೊಳ್ಳಬಹುದಾದ ಚಟುವಟಿಕೆಗಳು
ಹಸು / ಕೋಳಿ ಸಾಕಾಣಿಕೆ, ಸಿದ್ದ ಉಡುಪುಗಳ ಮಾರಾಟ, ಕಿರಾಣಿ ಅಂಗಡಿ, ನೇಯ್ಕೆ, ಕಸೂತಿ, ಕುಸರಿ, ಹಪ್ಪಳ, ಸಂಡಿಗೆ, ಉಪ್ಪಿನಕಾಯಿ ತಯಾರಿಕೆ, ಎರೆ ಹುಳು ಗೊಬ್ಬರ ತಯಾರಿಕೆ ಇತ್ಯಾದಿ.
ವಿವಿಧ ಇಲಾಖೆಯಲ್ಲಿ ಯೋಜನೆಗಳ ಪ್ರಯೋಜನ ಪಡೆಯುವುದು
  • ಸರ್ಕಾರದ ಇತರೆ ಇಲಾಖೆಗಳಲ್ಲಿ ಮಹಿಳೆಯರಿಗೆ ಲಭ್ಯವಾಗುವಂತಹ ಸೌಲಭ್ಯಗಳನ್ನು ಗುಂಪುಗಳಿಗೆ ಒದಗಿಸಲಾಗುವುದು ಉದಾಹರಣೆ.
  • ರಾಷ್ಟ್ರೀಯ ಹಿಂದುಳಿದ ನಿಗಮ ವತಿಯಿಂದ ನ್ಯೂ ಸ್ವಣರ್ಿಮಾ ಯೋಜನೆಯಡಿ ಸಾಲ ಸೌಲಭ್ಯ ಪಡೆಯುವುದು.
  • ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ವತಿಯಿಂದ ಸಾಲ ಸೌಲಭ್ಯ ಪಡೆಯುವುದು.
  • ಪಶುಸಂಗೋಪನಾ ಇಲಾಖೆಯಿಂದ ಗಿರಿರಾಜ ಕೋಳಿ ತಳಿಯನ್ನು ಖರೀದಿಸುವುದು.
  • ರಾಜೀವ ಗಾಂಧಿ ವಸತಿ ನಿಗಮದಿಂದ ಮಹಿಳೆಯರಿಗೆ ಕಟ್ಟಡ   ನಿರ್ಮಾಣ  ಕುರಿತು ನಿರ್ಮಿತಿಕೇಂದ್ರದಿಂದ ತರಬೇತಿ ನೀಡುವುದು ಇತ್ಯಾದಿ.
  • ಶಿಕ್ಷಣ ಇಲಾಖೆಯಿಂದ ಅಕ್ಷರ ದಾಸೋಹ ಕಾರ್ಯಕ್ರಮದಲ್ಲಿ ಗುಂಪುಗಳನ್ನು ತೊಡಗಿಸುವುದು.
ಗುಂಪುಗಳಿಗೆ ಪ್ರೋತ್ಸಾನ ಧನ ನೀಡುವುದು
ಗುಂಪುಗಳನ್ನು ಉಳಿತಾಯ ಮನೋಭಾವನೆ ಬೆಳೆಸಲು ಸರ್ಕಾರವು ಹೆಚ್ಚು ಉಳಿತಾಯ ಮಾಡುವ ಗುಂಪುಗಳಿಗೆ ಪ್ರೋತ್ಸಾಹ ಧನವನ್ನು ನಗದು ರೂಪದಲ್ಲಿ ನೀಡಲಾಗುವುದು. 75000/- ರೂಪಾಯಿಗಳಿಂದ 1 ಲಕ್ಷ ರೂಪಾಯಿಗಳವರೆಗಿನ ಉಳಿತಾಯಕ್ಕೆ 15000/- ರೂಪಾಯಿಗಳ ಪ್ರೋತ್ಸಾಹ ಧನ ನೀಡಲಾಗುವುದು. 1 ಲಕ್ಷ ರೂಪಾಯಿಗೂ ಮೇಲ್ಪಟ್ಟು ಉಳಿತಾಯಕ್ಕೆ 20000/- ರೂಪಾಯಿಗಳ ಪ್ರೋತ್ಸಾಹ ಧನ ನೀಡಲಾಗುವುದು.
ಸಾಂತ್ವನ
ದೌರ್ಜನ್ಯ ಹಾಗೂ ಅತ್ಯಾಚಾರಕ್ಕೊಳಪಟ್ಟ ಮಹಿಳೆಯರಿಗೆ ಆರ್ಥಿಕ ಸಹಾಯ, ಕಾನೂನು ಸಹಾಯ ನೀಡುವುದು ಆಶ್ರಯ ಒದಗಿಸುವುದು ಹಾಗೂ ಸ್ವಯಂ ಉದ್ಯೋಗ ಮಾಡಲು ಅನುಕೂಲವಾಗುವಂತೆ ತರಬೇತಿ ನೀಡಿ ಸ್ವಾವಲಂಬಿಗಳಾಗಿ ಬದುಕುವಂತೆ ಮಾಡುವುದೇ ಈ ಯೊಜನೆಯ ಉದ್ದೇಶವಾಗಿರುತ್ತದೆ.
ಸಹಾಯ ಪಡೆಯಬಹುದಾದವರು
ಅತ್ಯಾಚಾರಕ್ಕೊಳಪಟ್ಟ, ದೈಹಿಕ ದೌರ್ಜನ್ಯಕ್ಕೊಳಪಟ್ಟ, ವರದಕ್ಷಿಣೆ ಕಿರುಕುಳ ಅನುಭವಿಸುತ್ತಿರುವ ಹಾಗೂ ಕುಟುಂಬದಲ್ಲಿ ಇತರೆ ದೌರ್ಜನ್ಯಕ್ಕೊಳಪಟ್ಟ ಮಹಿಳೆಯರು ಈ ಯೋಜನೆಯ ಸಹಾಯ ಪಡೆಯಬಹುದಾಗಿದೆ.
ತೊಂದರೆಗೊಳಗಾದ ಮಹಿಳೆಯರು ಉಚಿತ ದೂರವಾಣಿ ಕರೆ ಸಂಖ್ಯೆ: 1091 
  ಸಂಪರ್ಕಿಸಿ 
ದಲ್ಲಿ ಅವರಿಗೆ ಅವಶ್ಯಕ ನೆರವು ನೀಡಲಾಗುವುದು.
ಅರ್ಹತೆಗಳು
ಸ್ವಯಂ ಸೇವಾ ಸಂಸ್ಥೆಗಳಲ್ಲಿ ಅಲ್ಪಾವಧಿ ವಸತಿ ಗೃಹಗಳಲ್ಲಿ ರಾಜ್ಯ ನಿಲಯಗಳಲ್ಲಿ ಅಥವಾ ಸ್ವೀಕಾರ ಕೇಂದ್ರಗಳಲ್ಲಿ ತಾತ್ಕಾಲಿಕ ಆಶ್ರಯವನ್ನು ನೀಡಲಾಗುವುದು.
ಸಲಹಾ ಸೇವೆ ಮತ್ತು ಕಾನೂನು ನೆರವು ಒದಗಿಸಲಾಗುವುದು.
ಮಹಿಳೆಯರು ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಲು ಆಸಕ್ತಿ ತೋರಿದಲ್ಲಿ ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯಗಳಲ್ಲಿ ಆಶ್ರಯ ಒದಗಿಸಲಾಗುವುದು.
ದೌರ್ಜನ್ಯಕ್ಕೆ ಒಳಗಾದ ಮಹಿಳೆಗೆ ರೂ. 2000/- ದಿಂದ ರೂ. 10000/- ದ ವರೆಗೆ ಆರ್ಥಿಕ ಪರಿಹಾರ ನೀಡಲಾಗುವುದು.
ದೌರ್ಜನ್ಯಕ್ಕೆ ಒಳಗಾದ ಮಹಿಳೆಯು ಮರಣ ಹೊಂದಿದ ಪಕ್ಷದಲ್ಲಿ ಅಂತಹ ಮಹಿಳೆಯ ಮಕ್ಕಳ ಹೆಸರಿನಲ್ಲಿ ರೂ. 5000/- ದಿಂದ ರೂ. 10000/- ದ ವರೆಗೆ ನಿಗದಿತ ಠೇವಣಿಯನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಇಡಲಾಗುವುದು.
ಸಾಂತ್ವನ ಕೇಂದ್ರದಿಂದ ಶಿಫಾರಸ್ಸು ಮಾಡಲ್ಪಟ್ಟ ಮಹಿಳೆಯರಿಗೆ ಅವರ ಆಸಕ್ತಿಗೆ ಅನುಗುಣವಾಗಿ ಕೌಶಲ್ಯತೆ ಅಭಿವೃದ್ಧಿಯಲ್ಲಿ ತರಬೇತಿ ಹೊಂದಲು ಮತ್ತು ಸ್ವ ಉದ್ದಿಮೆ ನಡೆಸಲು ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮವು ತನ್ನ ವಿವಿಧ ಯೋಜನೆಗಳಡಿಯಲ್ಲಿ ಸಹಾಯ ನೀಡುತ್ತದೆ.
ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ 2005
ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ಸಂರಕ್ಷಣೆ, ಕುಟುಂಬದಲ್ಲಿ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಿ ಮಹಿಳೆಯರ ಸಂರಕ್ಷಣೆ ಮಾಡುವುದು ಈ ಕಾಯ್ದೆಯ ಉದ್ದೇಶವಾಗಿದೆ.
ಬೀದರ ಜಿಲ್ಲೆಯ 11 ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ತಾಲೂಕಾ ಸಂರಕ್ಷಣಾಧಿಕಾರಗಳೆಂದು ಹಾಗೂ ಜಿಲ್ಲಾ ಉಪ ನಿದರ್ೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೀದರ ಇವರನ್ನು ಜಿಲ್ಲಾ ಸಂರಕ್ಷಣಾಧಿಕಾರಿಗಳೆಂದು ಸರ್ಕಾರ ನೇಮಕ ಮಾಡಿರುತ್ತದೆ. ಕಾನೂನು ಸೇವಾ ಪ್ರಾಧಿಕಾರದಿಂದ ನ್ಯಾಯವಾದಿಗಳ ಮುಖಾಂತರ ಉಚಿತ ಕಾನೂನು ಸಲಹೆಯನ್ನು ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಯೋಜನಾ ಕಚೇರಿಯಲ್ಲಿ ಪ್ರತಿ ಬುಧವಾರ ಹಾಗೂ ಶನಿವಾರದಂದು ಕಾನೂನು ನೆರವು ನೀಡಲಾಗುತ್ತಿದೆ. ಪ್ರತಿಯೊಂದು ತಾಲೂಕಿಗೂ 
ಸರ್ವಿಸ್ ಪ್ರೊವೈಡರ್ಗಳನ್ನಾಗಿ ಸ್ವಯಂ ಸೇವಾ ಸಂಸ್ಥೆಗಳನ್ನು ಸರಕಾರ ನೇಮಕ ಮಾಡಿದ್ದು, ಸದರಿ ಸಂಸ್ಥೆಯವರ ಮುಖಾಂತರ ಸೇವೆ ನೀಡಲಾಗುತ್ತಿದೆ.
ಗ್ರಾಮಾಂತರ ಪ್ರದೇಶದ ಬಾಲಕಿಯರಿಗೆ ವಸತಿ ನಿಲಯ ನಡೆಸಲು ಆರ್ಥಿಕ ನೆರವು
ಉದ್ದೇಶ: ಗ್ರಾಮಾಂತರ ಪ್ರದೇಶದ ಹೆಣ್ಣು ಮಕ್ಕಳ ವಿದ್ಯಭ್ಯಾಸವನ್ನು ಪ್ರೋತ್ಸಾಹಿಸಲು ಹಾಗೂ ಶಾಲೆ ಬಿಡುವುದನ್ನು ತಪ್ಪಿಸಲು ಅನುಕೂಲವಾಗುವಂತೆ ವಸತಿ ನಿಲಯಗಳನ್ನು ಇಲಾಖಾ ವತಿಯಿಂದ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಸಲಾಗುತ್ತಿದೆ.
ಅರ್ಹತೆ:
ಸರ್ಕಾರ ಅನುಮೋದನೆ ಪಡೆದ ಶಿಕ್ಷಣ ಸಂಸ್ಥೆಗಳಲ್ಲಿ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ತರಗತಿಗಳಲ್ಲಿ ಓದುತ್ತಿರುವ ಗ್ರಾಮಾಂತರ ಪ್ರದೇಶ ಹೆಣ್ಣು ಮಕ್ಕಳು ಸದರಿ ವಸತಿ ನಿಲಯಗಳಲ್ಲಿ ದಾಖಲು ಪಡೆಯಲು ಅರ್ಹರು.
ಅರ್ಜಿ ಹಾಕುವ ವಿಧಾನ ಹಾಗೂ ಅರ್ಹತೆ
ಎಸ್.ಸಿ. / ಎಸ್.ಟಿ. 
ವಿದ್ಯಾರ್ಥಿನಿಯರು ಕಂದಾಯ ಇಲಾಖೆ ಅಧಿಕಾರಿಗಳು ನೀಡುವ ಜಾತಿ ಪ್ರಮಾಣ ಪತ್ರ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿನಿಯರು ಆದಾಯ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು.
ಕುಟುಂಬದ 
ವಾರ್ಶೀಕ್ ಆದಾಯ ರೂ. 10000/-ಗಳಿಗೆ ಮೀರಿರಬಾರದು.
ವಸತಿ ನಿಲಯಕ್ಕೆ ದಾಖಲಾಗುವ ವಿದ್ಯಾರ್ಥಿನಿಯರು
  ಮೆರಿಟ್ ಶಿಷ್ಯ ವೇತನವನ್ನು ಬಿಟ್ಟು ಇನ್ನಾವುದೇ ಶಿಷ್ಯ ವೇತನ ಪಡೆಯಲು ಅರ್ಹರಲ್ಲ.
ಸಂಬಂಧಪಟ್ಟ ಶಾಲಾ ಕಾಲೇಜುಗಳಿಂದ ವಿದ್ಯಾರ್ಥಿನಿಯರು  ವ್ಯಾಸಂಗ ಮಾಡುತ್ತಿರುವ ಬಗ್ಗೆ ವ್ಯಾಸಂಗ ಪ್ರಮಾಣ ಪತ್ರವನ್ನು ಒದಗಿಸಬೇಕು.

ಮಹಿಳಾ ಕಾನೂನು ಪದವೀಧರರಿಗೆ ಧನಸಹಾಯ
ಉದ್ದೇಶ
ಕಾನೂನು ಪದವಿ ಪಡೆದಿರುವ ಮಹಿಳೆಯರಿಗೆ ಕಾನೂನು ಆಡಳಿತದಲ್ಲಿ ತರಬೇತಿ ಪಡೆಯಲು ಆರ್ಥಿಕ್ ಸಹಾಯ ನೀಡುವುದು ಈ ಯೋಜನೆಯ ಉದ್ದೇಶವಾಗಿರುತ್ತದೆ.
ಅರ್ಹತೆ
ಕುಟುಂಬದ 
ವಾರ್ಶೀಕ ವರಮಾನವು ಎಲ್ಲಾ ಮೂಲಗಳಿಂದ 40 ಸಾವಿರ ರೂಪಾಯಿಗಳಿಗಿಂತ ಕಡಿಮೆ ಇರಬೇಕು.
ಕಾನೂನು ಪದವಿ ಪಡೆದಿರುವ ಮಹಿಳೆ 35 ವರ್ಷ ವಯೋಮಿತಿಯೊಳಗಿರಬೇಕು.
ಅಭ್ಯರ್ಥಿಯು ಬಾರ್ ಕೌನ್ಸಿಲ್ನಲ್ಲಿ ತಮ್ಮ ಹಎಸರನ್ನು ನೋಂದಾಯಿಸಿಬೇಕು.
ಪಬ್ಲಿಕ ಪ್ರಾಸಿಕ್ಯೂಟರ್ ಅಥವಾ 2 ವರ್ಷ ವಕೀಲಿಕೆ ಮಾಡಿ ಅನುಭವ ಇರುವ ವಕೀಲರ ಅಧಿನದಲ್ಲಿ ತರಬೇತಿ ಹೊಂದಿರಬೇಕು.
ಅನುದಾನ ವಿಧಾನ
ತರಬೇತಿ ಪಡೆಯಲು ಆಯ್ಕೆಯಾದ ಮಹಿಳಾ ಕಾನೂನು ಪದವೀಧರರಿಗೆ ಮಾಹೆಯಾನ 1000/- ರೂಪಾಯಿಗಳು ಮಾತ್ರ ಆರ್ಥಿಕ್  ಸಹಾಯವನ್ನು ನಾಲ್ಕು ವರ್ಷಗಳವರೆಗೆ ನೀಡಲಾಗುತ್ತದೆ. ತರಬೇತಿಗೆ ನೋಂದಾಯಿಸಿಕೊಳ್ಳಲು 460 ರೂಪಾಯಿಗಳನ್ನು ಮತ್ತು ಅತ್ಯಾವಶ್ಯಕ ಕಾನೂನು ಪುಸ್ತಕಗಳನ್ನು ಖರೀದಿಸಲು 500 ರೂಪಾಯಿಗಳನ್ನು ನೀಡಲಾಗುವುದು.
ಯೋಜನೆಯ ಉದ್ದೇಶಗಳು
0-6 ವರ್ಷದೊಳಗಿನ ಮಕ್ಕಳ ಪೌಷ್ಠಿಕತೆ ಮಟ್ಟವನ್ನು ಹಾಗೂ ಆರೋಗ್ಯ ಸ್ಥಿತಿಯನ್ನು ಸುಧಾರಿಸುವುದು.
ಮಗುವಿನ ಮಾನಸಿಕ, ಸಾಮಾಜಿಕ, ದೈಹಿಕ ಸಮರ್ಪಕ ಬೆಳವಣಿಗೆಗೆ ಬುನಾದಿ ಹಾಕುವುದು.
ಶಿಶು ಮರಣದರ, ಅಪೌಷ್ಠಿಕತೆ, ಅನಾರೋಗ್ಯ ಹಾಗೂ ಶಾಲೆ ಬಿಡುವ ಘಟನೆಗಳನ್ನು ಕಡಿಮೆ ಮಾಡುವುದು.
ಮಗುವಿನ ಸರ್ವರಂಗೀಣ ಅಭಿವೃದ್ಧಿಗೆ ಇತರೆ ಇಲಾಖೆಗಳೊಂದಿಗೆ ಪರಿಣಾಮಕರಿಯಾದ ಸಮನ್ವಯತೆಯನ್ನು ಸಾಧಿಸುವುದು.
ಆರೋಗ್ಯ ಶಿಕ್ಷಣ ನೀಡುವ ಮೂಲಕ ತಾಯಂದಿರಲ್ಲಿ ಸಾಮಾನ್ಯ ಪೌಷ್ಠಿಕ ಹಾಗೂ ಆರೋಗ್ಯ ಅಗತ್ಯತೆಗಳನ್ನು ಪೂರೈಸುವಲ್ಲಿ ಸಬಲರನ್ನಾಗಿ ಮಾಡುವುದು.
ಸೇವೆಗಳು
0-6 ವರ್ಷದೊಳಗಿನ ಮಕ್ಕಳಿಗೆ ಗರ್ಭಿಣಿ  ಹಾಗೂ ಬಾಣಂತಿಯರಿಗೆ ಪೂರಕ ಪೌಷ್ಠಿಕ ಆಹಾರ ನೀಡುವುದು.
ಮಕ್ಕಳಿಗೆ ಹಾಗೂ ತಾಯಂದಿರಿಗೆ ರೋಗ ನಿರೋಧಕ ಚುಚ್ಚುಮದ್ದು ನೀಡುವುದು. ಆರೋಗ್ಯ ತಪಾಸಣೆ ಮಾಡುವುದು.
ಸಲಹಾ ಸೇವೆ.
ಮಹಿಳೆಯರಿಗೆ ಆರೋಗ್ಯ ಮತ್ತು ಪೌಷ್ಠಿಕ ಶಿಕ್ಷಣ ನೀಡುವುದು.
3-6 ವರ್ಷದೊಳಗಿನ ಮಕ್ಕಳಿಗೆ ಶಾಲಾಪೂರ್ವ ಚಟುವಟಿಕೆ ನಡೆಸುವುದು.
ನಿರ್ಗತಿಕ ಮಕ್ಕಳ ರಕ್ಷಣೆಮತ್ತು ಪೋಷಣೆ
ನಿರ್ಗತಿಕ ಮಕ್ಕಳಿಗೆ ಪಾಲನೆ-ಪೋಷಣೆ, ರಕ್ಷಣೆ ಹಾಗೂ ಪುನರ್ ವಸತಿ ಒದಗಿಸುವುದು, ನಿರ್ಗತಿಕ ಮಕ್ಕಳಿಗೆ ಕುಠಿರಗಳಲ್ಲಿ ಕೌಟುಂಬಿಕ ವಾತಾವರಣ ಕಲ್ಪಿಸುವುದು. ಸಮಾಜದಲ್ಲಿ ಅವರ ಜೀವನ ಮಟ್ಟವನ್ನು ಸುಧಾರಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಈ ಯೋಜನೆ ಅಡಿ ನಿರ್ಗತಿಕ ಹಾಗೂ ಅತೀ ಕಡಿಮೆ ಆದಾಯ ಹೊಂದಿರುವ 18 ವರ್ಷದೊಳಗಿನ ಮಕ್ಕಳಿಗೆ ಪ್ರವೇಶ ಕಲ್ಪಿಸಿದ ನಂತರ ಪ್ರತಿ ತಿಂಗಳು ರೂ. 400/- ರಂತೆ 
ಖರ್ಚು ಭರಿಸಲು ಅವಕಾಶವಿರುತ್ತದೆ. ಈಲ್ಲೆಯಲ್ಲಿ ಈ ಯೋಜನೆ ಅಡಿಯಲ್ಲಿ ಒಂದು ಕುಠಿರ ಕಾರ್ಯನಿರ್ವಹಿಸುತ್ತಿದ್ದು, ಉಳಿದ 19 ಕುಠಿರಗಳು ಯೋಜನೇತರ ಅಡಿಯಲ್ಲಿ ನಡೆಯುತ್ತಿವೆ. ಒಟ್ಟು 500 ಜನ ಫಲಾನುಭವಿಗಳು ಈ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ. ಈ ಯೋಜನೆಯಿಂದ ಅನಾಥ ಮಕ್ಕಳ ಪುನರ್ ವಸತಿ ಮತ್ತು ಅವರ ಜೀವನ ಮಟ್ಟವನ್ನು ಸಮಾಜದಲ್ಲಿ ಸುಧಾರಿಸಿಕೊಳ್ಳಲು ಹೆಚ್ಚಿನ ಉತ್ತೇಜನ ನೀಡಲಾಗಿದೆ.
ಉದ್ದೇಶಗಳು
ನಿರ್ಗತಿಕ ಮಕ್ಕಳ ಪಾಲನೆ, ಪೋಷಣೆ, ಹಾಗೂ ಪುನರ್ ವಸತಿ ಹಾಗೂ ಅವರಿಗೆ ಕೌಟುಂಬಿಕ ವಾತಾವರಣ ಕಲ್ಪಿಸುವುದು, ಸಮಾಜದಲ್ಲಿ ಅವರ ಆರ್ಥಿಕ ಹಾಗೂ ಜೀವನ ಮಟ್ಟವನ್ನು ಸುಧಾರಿಸಿ, ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಅರ್ಹತೆ
ಸ್ವಯಂ ಸೇವಾ ಸಂಸ್ಥೆ: ಮಕ್ಕಳ ಕ್ಷೇತ್ರದಲ್ಲಿ ಕನಿಷ್ಠ ಮೂರು ವರ್ಷಗಳು ಅನುಭವ ಹೊಂದಿರುವ ನೊಂದಾಯಿತ ಸಂಸ್ಥೆಗಳು ನಿರ್ಗತಿಕ ಮಕ್ಕಳ ಪಾಲನೆ ಪೋಷಣೆಗಾಗಿ ಕುಠೀರವನ್ನು ತೆರೆಯಲು ಅರ್ಹತೆ ಪಡೆದಿರುತ್ತವೆ.
ಮಕ್ಕಳು: ತಾಯಿ ತಂದೆ ಇಬ್ಬರೂ ಇಲ್ಲದ ಅಥವಾ ತಾಯಿ/ ತಂದೆ ಹೊಂದಿದ್ದು, ಮಾಸಿಕ 500/- ರೂಪಾಯಿ ಹಾಗೂ ಅದಕ್ಕೂ ಕಡಿಮೆ ಆದಾಯವನ್ನು ಹೊಂದಿರುವ 18 ವರ್ಷದ ಒಳಗಿನ ಮಕ್ಕಳು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಅರ್ಹರಿರುತ್ತಾರೆ. ಸದರಿ ಮಕ್ಕಳು ನಿರ್ಗತಿಕರು ಎಂದು ದೃಢೀಕರಿಸಲು ಸಂಬಂಧಪಟ್ಟ ತಾಲೂಕಿನ ತಹಸೀಲ್ದಾರ್ ಅವರಿಂದ ಪ್ರಮಾಣ ಪತ್ರವನ್ನು ಒದಗಿಸಬೇಕಾಗಿರುತ್ತದೆ.
ಉದ್ಯೋಗಸ್ಥ ಮಹಿಳೆಯರ ಮಕ್ಕಳಿಗಾಗಿ ಶಿಶುಪಾಲನಾ ಕೇಂದ್ರಗಳು
ಉದ್ದೇಶ
ವ್ಯವಸಾಯ ಹಾಗೂ ಇನ್ನೀತರ ವೃತ್ತಿನಿರತ ಉದ್ಯೋಗಸ್ಥ ಮಹಿಳೆಯರ 0-3 ವರ್ಷದ ಮಕ್ಕಳಿಗೆ ಗ್ರಾಮಾಂತರ ಹಾಗೂ ನಗರ ಪ್ರದೇಶಗಳಲ್ಲಿ ಆಶ್ರಯ ನೀಡಲು ಶಿಶುಪಾಲನಾ ಕೇಂದ್ರಗಳನ್ನು ಪ್ರಾರಂಭಿಸಲು ಸ್ವಯಂ ಸೇವಾ ಸಂಸ್ಥೆಗಳಿಗೆ ಧನಸಹಾಯ.
0-3 ವರ್ಷದ ಮಕ್ಕಳು ಪಾಲನೆ, ನೈಸರ್ಗಿಕ  ಆಪತ್ತುಗಳಿಂದ ರಕ್ಷಿಸುವುದು, ಪೂರಕ ಪೌಷ್ಠಿಕ ಆಹಾರ ನೀಡುವುದು, ಹೆಣ್ಣು ಮಕ್ಕಳು ಶಾಲೆ ಬಿಡುವುದನ್ನು ತಪ್ಪಿಸುವುದು ಮತ್ತು ಮಹಿಳೆಯರ ಸಾಕ್ಷರತೆಯನ್ನು ಹೆಚ್ಚಿಸುವುದು ಸಹ ಈ ಯೋಜನೆಯ ಉದ್ದೇಶವಾಗಿರುತ್ತದೆ.
ಅರ್ಹತೆ
ಸಂಘಗಳ ನೋಂದಣಿ ಕಾಯ್ದೆ 1960 ರ ಅನ್ವಯ ನೋಂದಣಿಯಾಗಿದ್ದು, ಸೌಲಭ್ಯಗಳು, ಸಾಧನೋಪಾಯಗಳು, ಅನುಭವ ಮತ್ತು ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸಿಬ್ಬಂದಿಯನ್ನು ಹೊಂದಿರುವ ಸ್ವಯಂ ಸೇವಾ ಸಂಸ್ಥೆಗಳು ಈ ಯೋಜನೆ ಅಡಿ ಅನುದಾನ ಪಡೆಯಲು ಅರ್ಹವಾಗಿರುತ್ತವೆ. ಸಂಸ್ಥೆಯು ಕೇಂದ್ರ ನಡೆಸಲು ಸೂಕ್ತ ಕಟ್ಟಡವನ್ನು ಒದಗಿಸಬೇಕು.
ಜಿಲ್ಲೆಯಲ್ಲಿ ಯೋಜನೆ ಅಡಿ ಒಂದು ಶಿಶುಪಾಲನಾ ಕೇಂದ್ರ ಮತ್ತು ಯೋಜನೇತರ ಅಡಿ ಏಳು ಶಿಶುಪಾಲನಾ ಕೇಂದ್ರಗಳು ನಡೆಯುತ್ತಿದ್ದು, ಇದರ ಲಾಭವನ್ನು 0-3 ವರ್ಷದ ಒಟ್ಟು 200 ಶಿಶುಗಳು ಪ್ರಯೋಜನೆ ಪಡೆಯುತ್ತಿದ್ದಾರೆ. ಒಂದು ಕೇಂದ್ರದಲ್ಲಿ 25 ಮಕ್ಕಳಿಗೆ ಅವಕಾಶ ಕಲ್ಪಿಸಲಾಗಿರುತ್ತದೆ.
ಮಕ್ಕಳ ಸಹಾಯವಾಣಿ
ಸಂಕಷ್ಟ ಮತ್ತು 
ತುರ್ತುಪರಿಸ್ಥಿತಿಯಲ್ಲಿರುವ ಮಕ್ಕಳ ಅಗತ್ಯವನ್ನು ಮನಗಂಡು ಸಾರ್ವಜನಿಕರು
 1077 ಸಂಖ್ಯೆಗೆ ಉಚಿತವಾಗಿ ಕರೆ ಮಾಡುವ ಮೂಲಕ ಈ ಸೇವೆಯ ಸದುಪಯೋಗ ಪಡೆದುಕೊಳ್ಳಬಹುದು.
ಉದ್ದೇಶ
ತೊಂದರೆಯಲ್ಲಿರುವ ಮಕ್ಕಳ ಪಾಲನೆ ಮತ್ತು ರಕ್ಷಣೆಯ ಅವಶ್ಯವಿರುವ ಮಕ್ಕಳ ಕರೆಗಳಿಗೆ ಸ್ಪಂದಿಸುವ ಮೂಲಕ ಸ್ವಯಂ ಸೇವಾ ಸಂಘಗಳು ಮತ್ತು ಸಮುದಾಯದ ನಡುವೆ ಸಹಭಾಗಿತ್ವವನ್ನು ನಿರ್ಮಿಸುವ
  ಉದ್ದೇಶ ಹೊಂದಿದೆ.ಉಸ್ತುವಾರಿ
ಚೈಲ್ಡ್ಲೈನ್ ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ನೇತೃತ್ವದಲ್ಲಿ ನಡೆಸಲ್ಪಡುವ ಯೋಜನೆಯಾಗಿದ್ದು, ಚೈಲ್ಡ್ಲೈನ್ ಇಂಡಿಯಾ ಫೌಂಡೇಶನ್ ಮುಂಬೈ ಇವರ ಸಮಗ್ರ ನಿರ್ವಹಣೆಯ ಹೊಣೆ ಹೊತ್ತಿದೆ. ಸಚಿವಾಲಯ ಮತ್ತು ಸ್ಯವಂ ಸೇವಾ ಸಂಸ್ಥೆಗಳ ಮಧ್ಯೆ ಒಂದು ಸೇತುವೆಯಂತೆ ಮೇಲ್ವಿಚಾರಣೆ ನಡೆಸುತ್ತದೆ.
ಇದು ಕೇಂದ್ರ ಸರ್ಕಾರ್ ದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯವು ಪ್ರಾರಂಭಿಸಿದ ಯೋಜನೆಯಾಗಿರುತ್ತದೆ.
ಗ್ರಾಮಾಂತರ ಪ್ರದೇಶದ ಹೆಣ್ಣು ಮಕ್ಕಳಿಗೆ ಹಾಜರಾತಿ ಶಿಷ್ಯವೇತನ
ಉದ್ದೇಶ:
ಗ್ರಾಮಾಂತರ ಪ್ರದೇಶದ ಹೆಣ್ಣು ಮಕ್ಕಳು ಶಾಲೆಯನ್ನು ಬಿಡುವುದುನ್ನು ತಪ್ಪಿಸುವುದು. ಹಾಗೂ ಹೆಣ್ಣು ಮಕ್ಕಳ ಸಾಕ್ಷರತೆಯನ್ನು ಹೆಚ್ಚಿಸುವ ಸಲುವಾಗಿ ಆರ್ಥಿಕ ಸಹಾಯ ನೀಡುವುದು ಈ ಯೋಜನೆಯ ಉದ್ದೇಶವಾಗಿರುತ್ತದೆ.
ಅರ್ಹತೆ
ಹೆಣ್ಣು ಮಗುವು ಭಾರತದ ಪ್ರಜೆಯಾಗಿರಬೇಕು.
ಒಂದನೇ ತರಗತಿಯಿಂದ ಹಾಜರಾತಿ ಶಿಷ್ಯವೇತನ ಪಡೆಯಲು ಅರ್ಜಿ
   ಸಲ್ಲಿಸಿರುವ ತರಗತಿಯವರೆಗೆ ಮತ್ತು ಮುಂದೆಯೂ ಸಹ ರಾಜ್ಯ ಸರ್ಕಾರ್ ದ ಮಾನ್ಯತೆ ಪಡೆದಿರುವ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡಬೇಕು.
20000 ಜನಸಂಖ್ಯೆಗಿಂತ ಕಡಿಮೆ ಇರುವ ಗ್ರಾಮದಲ್ಲಿ ವಾಸಿಸುತ್ತಿರುಬೇಕು.
5ನೇ ತರಗತಿಯಿಂದ 10ನೇ ತರಗತಿಯವರೆಗೆ ರಾಜ್ಯ ಸರ್ಕಾರದ ಮಾನ್ಯತೆ ಪಡೆದ ರಾಜ್ಯದಲ್ಲಿರುವ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು.
ಕುಟುಂಬದ ವಾರ್ಷಿಕ್ ಆದಾಯ ಐ.ಆರ್.ಡಿ.ಪಿ. ಮಿತಿಯಲ್ಲಿರಬೇಕು.
ಹಿಂದಿನ ತರಗತಿಯಲ್ಲಿ ಶೇ. 80 ರಷ್ಟು ಹಾಜರಾತಿ ಹೊಂದಿರಬೇಕು.
ಮೊದಲನೇಯ ಪ್ರಯತ್ನದಲ್ಲಿ ಉತ್ತೀರ್ಣಳಾಗಿರಬೇಕು.
ಅನುದಾನದ ವಿಧಾನ
ಈ ಯೋಜನೆಯಡಿ ವಿವಿಧ ತರಗತಿಗಳಿಗೆ ಹಾಜರಾತಿ ಶಿಷ್ಯವೇತನ ನೀಡುವ ಪ್ರಮಾಣ ಮತ್ತು ಅವಧಿ ಕೆಳಕಂಡಂತಿವೆ.
ತರಗತಿ ಒಂದು ತಿಂಗಳಿಗೆ ಶಿಷ್ಯ ವೇತನ ದರ ಶಿಷ್ಯವೇತನ ಅವಧಿ:
ಅ)  5ನೇ ತರಗತಿಯಿಂದ 7ನೇ ತರಗತಿಯವರೆಗೆ ಶಿಷ್ಯವೇತನ ರೂ. 25.00   10 ತಿಂಗಳು.
ಆ) 8ನೇ ತರಗತಿಯಿಂದ 10ನೇ ತರಗತಿಯವರೆಗೆ ಶಿಷ್ಯವೇತನ ರೂ. 50.00   10 ತಿಂಗಳು.
ಅರ್ಜಿಗಳನ್ನು ಸಂಬಂಧಿಸಿದ ಶಾಲಾ ಮುಖ್ಯೋಪಾಧ್ಯಾಯರ ಮುಖಾಂತರ ಸಲ್ಲಿಸುವುದು.
ರಾಷ್ಟ್ರೀಯ ಪೌಷ್ಠಿಕ ಮಿಷನ್
ಉದ್ದೇಶ
ರಾಷ್ಟ್ರೀಯ ಪೌಷ್ಠಿಕ ಮಿಷನ್ ಅಡಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಪ್ರಾಯಪೂರ್ವ ಬಾಲಕಿಯರಿಗೆ ವಿಶೇಷ ಪೌಷ್ಠಿಕ ಆಹಾರವನ್ನು ನೀಡುವ ಯೋಜನೆಯನ್ನು ಹಮ್ಮಿಕೊಂಡಿದ್ದು, ಈ ಯೋಜನೆಯ ಮುಖಾಂತರ ಕಡಿಮೆ ತೂಕವಿರುವ ಪ್ರಾಯಪೂರ್ವಬಾಲಕಲಿಯರಿಗೆ ಆರೋಗ್ಯವನ್ನು ಉತ್ತಮಗೊಳಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಆರ್ಹತೆ
ಈ ಯೋಜನೆಯಡಿ 35 ಕೆ.ಜಿ.ಗಳಿಗಿಂತಕಡಿಮೆ ತೂಕವಿರುವ ಪ್ರಾಯಪೂರ್ವ ಬಾಲಕಿಯರನ್ನು ಫಲಾನುಭವಿಗಳಾಗಿ ಗುರುತಿಸಿ ನ್ಯಾಯಬೆಲೆ ಅಂಗಡಿಯಿದ ಗುರುತಿನ ಚೀಟಿ ಆಧಾರದ ಮೇಲೆ ಪ್ರತಿ ಮಾಹೆ ಪ್ರತಿ ಫಲಾನುಭವಿಗಳಿಗೆ 6 ಕೆ.ಜಿ. ಅಕ್ಕಿಯನ್ನು ವಿತರಿಸಲಾಗುತ್ತಿದೆ.
ಸಾಮಾಜಿಕ ಶಾಸನಗಳನ್ವಯ ನಡೆಸಲಾಗುತ್ತಿರುವ ಕಾರ್ಯಕ್ರಮಗಳು
ವೀಕ್ಷಣಾಲಯ:
ಬಾಲನ್ಯಾಯ (ಮಕ್ಕಳ ರಕ್ಷಣೆ ಹಾಗೂ ಘೋಷಣೆ) ಕಾಯ್ದೆ 2000 ಅನ್ವಯ ಬಾಲನ್ಯಾಯ ಮಂಡಳಿಯನ್ನು ರಚಿಸಲಾಗಿರುತ್ತದೆ. ಈ ಮಂಡಳಿಗೆ ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ನಾಮನಿರ್ದೆಶನ
 ಮಾಡಿದ್ದು, (ಕಾನೂನಿನ ಸಂಘರ್ಷಗೊಳಪಟ್ಟ) ಮಕ್ಕಳನ್ನು ರಾಜ್ಯದ ವಿಶೇಷ ಪೋಲಿಸ್ ಕಾರ್ಯಪಡೆ ಮುಖಾಂತರ ಸರ್ಕಾರಿ ವೀಕ್ಷಣಾಲಯಕ್ಕೆ ಪರಿವೀಕ್ಷಣೆಗೆ ಒಳಪಡಿಸಿ ತದನಂತರ ಬಾಲನ್ಯಾಯ ಮಂಡಳಿ ಮುಖಾಂತರ ಸದರಿ ಮಕ್ಕಳು ಬೆಳೆದ ವಾತಾವರಣ, ಅವರ ನಡುವಳಿಕೆ ಮತ್ತು ಪೂರ್ವೊತ್ತರಗಳನ್ನು ತಿಳಿಯುವ ಸಲುವಾಗಿ ಪರಿವೀಕ್ಷಣಾಧಿಕಾರಿಗಳು ವಿವರವಾದ ತನಿಖೆಯನ್ನು ನಡೆಸಲು ಅನುವು ಆಗುವಂತೆ ಅವರನ್ನು ವೀಕ್ಷಣಾಲಯಗಳಲ್ಲಿ ಇಡಲಾಗುವುದು. ಹಾಗೂ ಪ್ರಕರಣವನ್ನು ಬಾಲನ್ಯಾಯ ಮಂಡಳಿ ಮುಖಾಂತರ ವಿಚಾರಣೆಗೆ ಒಳಪಡಿಸಿ ಅಚಿತಿಮ ತೀರ್ಮಾನ   / ತೀರ್ಪನ್ನು ನೀಡಲಾಗುವುದು.
ಅಪರಾಧವು ಗಂಭೀರ ಸ್ವರೂಪದಾಗಿದ್ದಲ್ಲಿ ಮಕ್ಕಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಸಾಧ್ಯವಿಲ್ಲದ ಸಂದರ್ಭದಲ್ಲಿ ಬಾಲನ್ಯಾಯ ಮಂಡಳಿಯ ಆದೇಶದಂತೆ ಮುಂದಿನ ಪುನರ್ ವಸತಿಗೆ ಹೆಣ್ಣು ಮಕ್ಕಳಿಗೆ ಬೆಂಗಳೂರ ಸರ್ಕಾರಿ ವೀಕ್ಷಣಾಲಯಕ್ಕೆ ಹೊಂದಿಕೊಂಡಂತೆ ಹಾಗೂ ಗಂಡು ಮಕ್ಕಳಿಗಾಗಿ ವೀಕ್ಷಣಾಲಯ ಧಾರವಾಡ ಸಂಸ್ಥೆಗೆ ಹೊಂದಿಕೊಂಡಂತೆ ವಿಶೇಷ ಗೃಹಗಳಿಗೆ ವರ್ಗಾಯೀಸಲಾಗುವುದು.
ರಾಜ್ಯ ಮಹಿಳಾ ನಿಲಯ
ಪೋಷಣೆ ಮತ್ತು ಆಶ್ರಯದ ಅಗತ್ಯವಿರುವ ಮತ್ತು ಅವುಗಳನ್ನು ತಾವಾಗಿಯೇ ಬಯಸಿ ಬರುವ ಹಾಗೂ ಅನೈತಿಕ ವ್ಯವಹಾರ (ನಿವಾರಣೆ) ಅಧಿನಿಯಮದ ಮೇರೆಗೆ (ರಕ್ಷಣೆ ಮತ್ತು ಪುನರ್ ವಸತಿಗಾಗಿ) ನ್ಯಾಯಾಲಯವು ಕಳುಹಿಸುವ ಮಹಿಳೆಯರನ್ನು ರಾಜ್ಯ ಮಹಿಳಾ ನಿಲಯದಲ್ಲಿ ಆಶ್ರಯ ನೀಡಲಾಗುತ್ತಿದೆ. ನಿವಾಸಿಗಳಿಗೆ ಸರ್ಕಾರೆತರ್  ಸಂಸ್ಥೆಗಳ ಮುಖಾಂತರ ವಿವಿಧ ರೀತಿಯ ವೃತ್ತಿ ತರಬೇತಿಯನ್ನು ನೀಡಲಾಗುತ್ತಿದೆ. ವೃತ್ತಿ ತರಬೇತಿ ಪಡೆದ ಮಹಿಳೆಯರಿಗೆ ಉದ್ಯೋಗಗಳನ್ನು ಕೊಡಿಸಲು ಸಹ ಕ್ರಮಕೈಕೊಳ್ಳಲಾಗುತ್ತಿದೆ. ವಿಧ್ಯಾಭ್ಯಾಸವನ್ನು ಮುಂದುವರಿಸಲು ಅನುಕೂಲವಾಗುವಂತೆ ಕರ್ನಾಟಕ ಓಪನ ಸ್ಕೂಲ್ ಪರೀಕ್ಷೆಗೆ ಕುಳಿತುಕೊಳ್ಳಲುಅ ವಕಾಶ ಕಲ್ಪಿಸಲಾಗುತ್ತಿದೆ.
ಸುಧಾರಣಾ ಸಂಸ್ಥೆಗಳಲ್ಲಿರುವ ನಿರ್ಗತಿಕ ಮತ್ತು ಅನಾಥ ಹೆಣ್ಣು ಮಕ್ಕಳ ಪುನರ್ ವಸತಿ ದೃಷ್ಟಿಯಿಂದ ಮದುವೆಗೆ ಪ್ರೋತ್ಸಾಹ ನೀಡುವ ಕಾರ್ಯಕ್ರಮವಿದ್ದು, ನಿವಾಸಿಗಳನ್ನು ವಿವಾಹವಾಗಲು ಅರ್ಹರಾದ ವ್ಯಕ್ತಿಯೂ ಮುಂದೆ ಬಂದಲ್ಲಿ ಪ್ರತಿ ನಿವಾಸಿಯ ವಿವಾಹಕ್ಕಾಗಿ ಸಾಮಾನ್ಯ ವರ್ಗದ ಮಹಿಳೆಗೆ ರೂ. 20000/- ಹಾಗೂ ಪರಿಶಿಷ್ಟ ಜಾತಿ / ಪ.ಪಂ. ಮಹಿಳೆಗೆ ರೂ. 25000/- ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಸಾಮಾನ್ಯ ವರ್ಗದ ಮಹಿಳೆಯಾಗಿದ್ದಲ್ಲಿ ಈ ಹಣದಲ್ಲಿ ಮದುವೆ ಖರ್ಚಗಾಗಿ  ರೂ. 5000/- ಗಳನ್ನು ನೀಡಲಾಗುವುದು. ಹಾಗೂ ರೂ. 15000/- ಗಳನ್ನು ದಂಪತಿಗಳ ಹೆಸರಿನಲ್ಲಿ 2 ವರ್ಷಗಳ ಅವಧಿಗೆ ನಿಗದಿತ ಠೇವಣಿ ಇಡಲಾಗುವುದು. ಪರಿಶಿಷ್ಟ ಜಾತಿ ಮಹಿಳೆಯಾಗಿದ್ದಲ್ಲಿ ಪ್ರೋತ್ಸಾಹ ಧನದಲ್ಲಿ ರೂ. 5000/-ಗಳನ್ನು ಮದುವೆ ಖರ್ಚಗಾಗಿ  ವೆಚ್ಚಭರಿಸಲಾಗುವುದು. ಹಾಗೂ ರೂ. 20000/- ಗಳನ್ನು ದಂಪತಿಗಳು ಹೆಸರಿನಲ್ಲಿ 2 ವರ್ಷಗಳ ಅವಧಿಗೆ ನಿಗಧಿತ ಠೇವಣಿ ಇಡಲಾಗುವುದು.
ಸ್ವದೇಶಿ ದತ್ತು ಪ್ರೋತ್ಸಾಯಿಸಲು ಮಕ್ಕಳ ಸಂಸ್ಥೆಗಳಿಗೆ ಆರ್ಥಿಕ ನೆರವು
(ಶಿಶು ಗೃಹ ಯೋಜನೆ)

6 ವರ್ಷದೊಳಗಿನ ಅನಾಥ ಮತ್ತು ನಿರ್ಗತಿಕ ಮಕ್ಕಳ ರಕ್ಷಣೆ, ಘೋಷಣೆ ಮತ್ತು ಪುನರ್ ವಸತಿಗಾಗಿ ಬೀದರ ನಗರದ ಸರ್ಕಾರಿ ಬಾಲಕಿಯರ ಬಾಲಮಂದಿರದಲ್ಲಿ ಇಲಾಖೆಯ ವತಿಯಿಂದ ಶಿಶುಗೃಹವನ್ನು ನಡೆಸಲಾಗುತ್ತಿದೆ. ಈ ಕೇಂದ್ರದ ಅನಾಥ ಮಕ್ಕಳನ್ನು ಅರ್ಹ ಪೋಷಕರಿಗೆ ದತ್ತು ನೀಡುವ ಕಾರ್ಯಕ್ರಮ ಇರುತ್ತದೆ. 
ಉದ್ದೇಶ
  • ಮಕ್ಕಳಿಗೆ ಅಗತ್ಯವಿರುವ ಸೌಲಭ್ಯ ಕಲ್ಪಿಸಲು ದತ್ತು ಯೋಜನೆಯಡಿ ರಕ್ಷಣೆ ನೀಡುವುದು.
  • 6 ವರ್ಷದ ಒಳಗಿನ ಅನಾಥ, ನಿರ್ಗತಿಕ ಮತ್ತು ಪರಿತ್ಯಕ್ತ ಮಕ್ಕಳಿಗೆ ಪುನರ್ ವಸತಿ ಸೌಲಭ್ಯವನ್ನು ಸ್ವದೇಶಿ ದತ್ತು ಮೂಲಕ ನೀಡುವುದು.
 ಸ್ವದೇಶಿ ದತ್ತು ಕಾರ್ಯಕ್ರಮವನ್ನು ಪ್ರೋತ್ಸಾಹಿಸಲು ಹಾಗೂ ಕಾನೂನುಬಾಹೀರ ದತ್ತು ಸ್ವೀಕಾರವನ್ನು ತಡೆಗಟ್ಟುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಅರ್ಹತೆ
ಶಿಶು ಗೃಹ ನಡೆಸಲು ಇಚ್ಛಿಸುವ ಸಂಸ್ಥೆಯು ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಕಾನೂನುಗಳನ್ವಯ ಅಥವಾ ಅನಾಥ ಮತ್ತು ಇತರೇ ಚಾರಿಟೇಬಲ್ ಹೋಂ 1960 ಕಾನೂನಿನನ್ವಯ ನೋಂದಣಿ ಆಗಿರತಕ್ಕದ್ದು.
ಸೊಸೈಟಿ ನೋಂದಣಿ ಕಾಯ್ದೆ 1860 ಮೇರೆಗೆ ಕಡ್ಡಾಯವಾಗಿ ನೋಂದಣಿ ಆಗಿರಬೇಕು.
ಸಾರ್ವಜನಿಕ ಟ್ರಸ್ಟ್ ಅನ್ನು ಕಾನೂನಿನ ಪ್ರಕಾರ ನೋಂದಾಯಿಸಿರಬೇಕು ಅಥವಾ
ಸರ್ಕಾರದಿಂದ ನಡೆಸುವ ಮಕ್ಕಳ ಸಂಸ್ಥೆ /ಮಕ್ಕಳ ಮಂದಿರಗಳು, ಭಾರತ ಸರ್ಕಾರದ ಕಾರ್ಯದರ್ಶಿಗಳು, ಸಾಮಾಜಿಕ ನ್ಯಾಯ ಹಾಗೂ ಅಧಿಕಾರಯುಕ್ತ ಮಂತ್ರಾಲಯರವರಿಂದ ಅನುಮೋದಿಸಲ್ಪಟ್ಟ ಇತರೇ ಸಂಘ ಸಂಸ್ಥೆಗಳು.
ಕರ್ನಾಟಕ  ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳ ವಿವರ:
ಕರ್ನಾಟಕ  ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು 1987 ರಲ್ಲಿ ಕಂಪನಿ ಕಾಯ್ದೆ 1956 ರ ಅಡಿಯಲ್ಲಿ ಸ್ಥಾಪಿಸಲಾಗಿದೆ. ನಿಗಮದ ಒಟ್ಟು ಶೇರು ಬಂಡವಾಳ ರೂ. 12.84 ಕೋಟಿಗಳು. ಇದರಲ್ಲಿ ಕೇಂದ್ರ ಸರ್ಕಾರದ ಪಾಲು 297.84 ಲಕ್ಷ ಹಾಗೂ ರಾಜ್ಯ ಸರ್ಕಾರದ ಪಾಲು 986.25 ಲಕ್ಷಗಳಾಗಿರುತ್ತದೆ.
ಉದ್ದೇಶ
ಮಹಿಳೆಯರಿಗೆ ಮುಖ್ಯವಾಗಿ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಿ ಮಹಿಳೆಯರ ಅಭಿವೃದ್ಧಿಗೆ ಶ್ರಮಿಸುವುದು.
ಮಹಿಳೆಯರಿಗೆ ಆದಾಯ ಉತ್ಪನ್ನಕರ ಚಟುವಟಿಕೆಗಳ ಬಗ್ಗೆ ಮಾರ್ಗದರ್ಶನ ಹಾಗೂ ತಾಂತ್ರಿಕ ಸಲಹಾ ಸೇವೆಯನ್ನು ಒದಗಿಸುವುದು.
ಬ್ಯಾಂಕ್ ಹಾಗೂ ಇತರೆ ಆರ್ಥಿಕ  ಸಂಸ್ಥೆಗಳಲ್ಲಿ ಲಭ್ಯವಿರುವ ಸಾಲವನ್ನು ಒದಗಿಸಿ ಸಹಾಯಧನವನ್ನು ನೀಡುವುದು.
ಮಾರುಕಟ್ಟೆ ಅನುಕೂಲಗಳನ್ನು ಕಲ್ಪಿಸುವುದು.
ಮಹಿಳಾ ಸಂಘವನ್ನು, ಮಹಿಳಾ ಅಭಿವೃದ್ಧಿ ಸಂಸ್ಥೆಗಳನ್ನು ಉತ್ತೇಜಿಸಿ ಬಲಪಡಿಸುವುದು.
ಸರಕಾರಿ/ ಸರ್ಕಾರೆತರ್  ಸಂಸ್ಥೆಗಳ ಮೂಲಕ ಮಹಿಳೆಯರು ಸ್ವ-ಉದ್ಯೋಗಿಗಳಾಗುವಂತೆ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
ಯೋಜನೆಗಳ ಹೆಸರು ಮತ್ತು ವಿವರ
ರಾಜ್ಯ ಸರ್ಕಾರದ ಅನುದಾನದಿಂದ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳು:
ಉದ್ಯೋಗಿನ ಯೋಜನೆ
ಅರ್ಹತೆ
ಆದಾಯ ಮಿತಿ ಅಭ್ಯರ್ಥಿಯ ಕುಟುಂಬದ ವಾರ್ಷಿಕ್ ವರಮಾನ ರೂ. 40000/-.
ವಯಸ್ಸು: 18 ರಿಂದ 45 ವರ್ಷದೊಳಗಿನ ಮಹಿಳೆಯರು, ಯಾವುದೇ ಘಟಕ, ಉದ್ಯಮ, ವ್ಯಾಪಾರ, ಪ್ರಾರಂಭಿಸುವವರು ಮಾತ್ರ ಈ ಯೋಜನೆಯ ಪ್ರಯೋಜನ ಪಡೆಯಬಹುದು.
ವಿಧವೆಯರು / ಅಂಗವಿಕಲರ ಮಹಿಳೆಯರಿಗೆ ಆದಾಯ ಮಿತಿ ಇರುವುದಿಲ್ಲ.
ಸಾಲದ ಗರಿಷ್ಠ ಮೊತ್ತ ರೂ. 100000.00
ಸಹಾಯಧನ ಪ.ಜಾ. / ಪ.ಪಂ / ಅಂಗವಿಕಲರು / ವಿಧವೆಯರು ಸಂಕಷ್ಟ ಪರಿಸ್ಥಿತಿ ಮಹಿಳೆಯರಿಗೆ ಸಾಲ ಮಂಜೂರಾದ ಮೊತ್ತದ ಶೇ. 30 ರಷ್ಟು ಗರಿಷ್ಠ 10000/- ಸಾಮಾನ್ಯ ವರ್ಗದವರಿಗೆ ಶೇ. 20 ರಷ್ಟು ಗರಿಷ್ಠ 7500/-.
ದೇವದಾಸಿ ಪುನರ್ ವಸತಿ ಯೋಜನೆ
ಈ ಯೋಜನೆಯನ್ನು ಬೀದರ ಜಿಲ್ಲೆಯಲ್ಲಿ ಪ್ರತ್ಯೇಕ ದೇವದಾಸಿ ಪುನರ್ ವಸತಿ ಯೋಜನಾ ಕಚೇರಿಯನ್ನು ಸ್ಥಾಪಿಸಿ ದೇವದಾಸಿ ಮಹಿಳೆಯರಿಗೆ ಅವರ ಅಭಿವೃದ್ಧಿಗಾಗಿ ಅರಿವು ಜಾಗೃತಿ ಶಿಬಿರ, ಆರೋಗ್ಯ ತಪಾಸಣೆ ಶಿಬಿರ, ಆದಾಯ ಉತ್ಪನ್ನ ಚಟುವಟಿಕೆಗೆ ಬ್ಯಾಂಕಿನಿಂದ ಸಾಲ ಮತ್ತು ಸಬ್ಸಿಡಿ ನೀಡಲಾಗುತ್ತಿದೆ. ಹಾಗೂ ಮಾಜಿ ಅರ್ಹ ದೇವದಾಸಿ ಮಹಿಳೆಯರಿಗೆ ಪ್ರತಿ ತಿಂಗಳು 400/- ರಂತೆ ಮಾಶಾಸನವನ್ನು ಸಿ.ಡಿ.ಪಿ.ಓ. ಕಚೇರಿಗೆಳ ಮುಖಾಂತರ ನೀಡಲಾಗುತ್ತಿದೆ.
ರಾಜ್ಯಸ ಸಂಪನ್ಮೂಲ ಕೇಂದ್ರ (ಎಸ್.ಆರ್.ಸಿ)
ಮಹಿಳೆಯರಿಗೆ ಸ್ವಂತ ಉದ್ಯೋಗ ಕೈಗೊಳ್ಳಲು ಮಾರುಕಟ್ಟೆ ಸಮೀಕ್ಷೆ, ಪ್ರಚಾರ, ಇತ್ಯಾದಿ ವಿಚಾರಗಳ ಬಗ್ಗೆ ಹಾಗೂ ಆದಾಯ ಉತ್ಪನ್ನಕರ ಚಟುವಟಿಕೆಗಳ ಬಗ್ಗೆ ಮಾರ್ಗದರ್ಶನ ಹಾಗೂ ತಾಂತ್ರಿಕ ಸಲಹಾ ಸೇವೆಯನ್ನು ಒದಗಿಸುವುದು.
ಮಹಿಳಾ ತರಬೇತಿ ಯೋಜನೆ
ಈ ಯೋಜನೆಯ ಮುಖ್ಯ ಉದ್ದೇಶವೇನೆಂದರೆ, ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ವೃತ್ತಿ / ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ತಾಂತ್ರಿಕ ಕಾಲೇಜು / ಸಕರ್ಾರೇತರ ಸಂಸ್ಥೆಗಳ ಮುಖಾಂತರ ಉಚಿತವಾಗಿ ನೀಡಲಾಗುತ್ತಿದೆ. ತರಬೇತಿ ನಂತರ ಇಲಾಖೆಯಿಂದ ಸಾಲ - ಸೌಲಭ್ಯ ಒದಗಿಸಲಾಗುವುದು.
ಮಾರುಕಟ್ಟೆ ನೆರವಿನ ಯೋಜನೆ
ಮಹಿಳೆಯರು ತರಬೇತಿ ಮತ್ತು ಸ್ವಂತ ಉದ್ಯಮದಲ್ಲಿ ತೊಡಗಿಸಿಕೊಂಡು ತಯಾರಿಸಿದ ಉತ್ಪನ್ನಗಳಿಗೆ ನಿಗಮದಿಂದ ಉಚಿತವಾಗಿ ಪ್ರಚಾರ ಮತ್ತ ಮಳಿಗೆಯನ್ನು ನೀಡಲಾಗುತ್ತಿದೆ


Bhagyalakshmi ಯೋಜನೆ ಬಡತನ ರೇಖೆಗಿಂತ ಕುಟುಂಬಗಳು ಕೆಳಗೆ ಹುಡುಗಿ ಮಕ್ಕಳ ಜನನ ಉತ್ತೇಜಿಸಲು ಮತ್ತು ಸಾಮಾನ್ಯವಾಗಿ ನಿರ್ದಿಷ್ಟ ಮತ್ತು ಸಮಾಜದಲ್ಲಿ ಕುಟುಂಬದಲ್ಲಿ ಹೆಣ್ಣು ಮಕ್ಕಳ ಸ್ಥಾನಮಾನವನ್ನು ಹೆಚ್ಚಿಸಲು ವಸ್ತುನಿಷ್ಠ 2006-07ನೇ ಆರಂಭಿಸಲಾಯಿತು. ಹಣಕಾಸಿನ ನೆರವು ತಾಯಿ / ತಂದೆ ಅಥವಾ ಕೆಲವು ಪರಿಸ್ಥಿತಿಗಳಲ್ಲಿ ಈಡೇರಿದ ಒಳಪಟ್ಟಿರುತ್ತದೆ ನೈಸರ್ಗಿಕ ಗಾರ್ಡಿಯನ್ ಮೂಲಕ ಹೆಣ್ಣು ಮಗುವಿಗೆ ಒದಗಿಸಲಾಗುತ್ತದೆ.

31.3.06 ನಂತರ ಬಿಪಿಎಲ್ ಕುಟುಂಬಗಳಲ್ಲಿ ಜನಿಸಿದ • ಹೆಣ್ಣು ಮಕ್ಕಳು ಈ ಯೋಜನೆಯಡಿ ಫಲಾನುಭವಿಗಳಾಗಿ ನೋಂದಾಯಿಸಿಕೊಳ್ಳಲು ಅರ್ಹರಿರುತ್ತಾರೆ ಇವೆ. ನೋಂದಣಿ ಜನನ ಪ್ರಮಾಣ ಪತ್ರವನ್ನು ಒದಗಿಸಿ ಮಗು ಜನಿಸಿದ ಒಂದು ವರ್ಷದ ವರೆಗೆ ಅವಕಾಶ ಇದೆ.
• ಯೋಜನೆಯ ಲಾಭಗಳನ್ನು ಒಂದು ಬಿಪಿಎಲ್ ಕುಟುಂಬದ 2 ಹೆಣ್ಣು ಮಕ್ಕಳ ಸೀಮಿತಗೊಳಿಸಲಾಗಿದೆ. ತಂದೆ, ತಾಯಿ ಅಥವಾ ಪೋಷಕರು ಟರ್ಮಿನಲ್ ಕುಟುಂಬ ಯೋಜನಾ ವಿಧಾನಗಳನ್ನು ಒಳಗಾಗಿವೆ ಮಾಡಬೇಕು ಮತ್ತು ಮಕ್ಕಳ ಒಟ್ಟು ಸಂಖ್ಯೆ 3 ಮೀರಬಾರದು.
• ಇಲಾಖೆ, ರೂ ಮೂಲಕ ನೋಂದಣಿ ಮತ್ತು ಕಾರಣ ಪರಿಶೀಲನೆ ನಂತರ. 10,000 / - ಹೆಣ್ಣು ಮಗುವಿನ ಹೆಸರಿನಲ್ಲಿ ಆಯ್ಕೆ ಹಣಕಾಸು ಸಂಸ್ಥೆ ಠೇವಣಿ ನಡೆಯಲಿದೆ.
• ಹಣಕಾಸು ಸಂಸ್ಥೆ ರೂ ಮೇಲೆ ಪ್ರತಿಫಲ ಗರಿಷ್ಠಗೊಳಿಸಲು ಮಾಡುತ್ತದೆ. 10,000 / - ಮತ್ತು ಸಂಚಿತ ಆಸಕ್ತಿಗಳು ಒಟ್ಟಾಗಿ ಠೇವಣಿ 18 ವರ್ಷ ಗಳಿಸಿದ ಮೇಲೆ ಫಲಾನುಭವಿಗೆ ಕೊಡಲಾಗುವುದು. ರೂ. 34.751 / - ಮೊದಲ ಮಗುವಿಗೆ ಮತ್ತು ರೂ. 40.918 / - ಒಂದೇ ಕುಟುಂಬದ ಸೇರಿಕೊಂಡಳು ಎರಡನೇ ಮಗುವಿಗೆ ನೀಡಲಾಗುವುದು.
ಇಂತಹ ವಿದ್ಯಾರ್ಥಿವೇತನ ಮತ್ತು ವಿಮಾ ಪ್ರಯೋಜನ ಎಂದು • ಮಧ್ಯಂತರ ಪಾವತಿ ಔಟ್ ಯೋಜನೆಯಡಿ ತಿಳಿಸಲಾದ ಅರ್ಹತೆ ಮಾನದಂಡಗಳನ್ನು ಪೂರೈಸುತ್ತಿದ್ದಲ್ಲಿ ಮೇಲೆ ಫಲಾನುಭವಿಗೆ ಕೊಡಲಾಗುವುದು.
ಹೆಣ್ಣು ಮಗುವಿನ Rs.25,000 / ಗರಿಷ್ಠ ವರೆಗೆ ಅನಾರೋಗ್ಯ, ಆರೋಗ್ಯ ವಿಮೆ NCE ಹಕ್ಕುಗಳನ್ನು ಕುಸಿದರೆ • - ಒದಗಿಸಲಾಗುತ್ತದೆ.
ವಿಮಾದಾರರು ಸ್ವಾಭಾವಿಕ ಸಾವು ನಡೆಯುತ್ತದೆ •, Rs.42,500 / ವಿಮೆ - ನೀಡಲಾಗುತ್ತದೆ.
ವಿಮೆದಾರರು ಅಪಘಾತದಲ್ಲಿ ಸಾವನ್ನಪ್ಪಿದರೆ •, ರೂ .1,00,000 ವನ್ನು ವಿಮೆ ಕುಟುಂಬಕ್ಕೆ ನೀಡಲಾಗುವುದು.

ಅರ್ಹತಾ ಮಾನದಂಡಗಳು:

• ಮಗುವಿನ ಜನನದ ಕಡ್ಡಾಯವಾಗಿ ನೋಂದಣಿ ಮಾಡಬೇಕು
• ಮಗುವಿನ ಬಗ್ಗೆ
ಒಂದು. ಆರೋಗ್ಯ ಇಲಾಖೆಯ ಕಾರ್ಯಕ್ರಮ ಪ್ರಕಾರ ಪ್ರತಿರಕ್ಷಣೆ ಎಂದು
ಬಿ. theAnganwadi ಸೆಂಟರ್ ಸೇರಿಕೊಂಡಳು
ಸಿ. ಶಿಕ್ಷಣ ಇಲಾಖೆ ಮಾನ್ಯತೆ ಶಾಲೆಯಲ್ಲಿ ಪ್ರವೇಶ ಪಡೆಯಲು.
ಡಿ. ಮಗುವಿನ ಕಾರ್ಮಿಕ ಆಗಲು
ಇ. 18 ವರ್ಷ ವಯೋಮಾನದ ಮದುವೆಯಾಗಲು ಅಲ್ಲ.

ಯೋಜನೆ ಭಾರತೀಯ ಜೀವ ವಿಮೆ ಕಾಪರ್ೋರೇಷನ್ ಅಳವಡಿಸಲಾಗಿದೆ.
ಯೋಜನೆ ಭಾಗಶಃ ಆಗಸ್ಟ್ 2008 ರ ಸಮಯದಲ್ಲಿ ಬದಲಾಯಿಸಲಾಗಿತ್ತು ಮತ್ತು ಅಥವಾ 01/08/2008 ನಂತರ ಜನಿಸಿದ ಮಕ್ಕಳಿಗೆ ಅನ್ವಯಿಸುತ್ತದೆ.

ಯೋಜನೆಯನ್ನು ಈ ಬದಲಾವಣೆಗಳನ್ನು ಕೆಳಗೆ ಸೂಚಿಸಲಾಗುತ್ತದೆ ಎಂದು:
• ರೂ. 19.300 / - ಮೊದಲನೇಯ ಫಲಾನುಭವಿಗೆ ರೂ ಹೆಸರಿನಲ್ಲಿ ಹಣಕಾಸು ಸಂಸ್ಥೆ ಠೇವಣಿ ನಡೆಯಲಿದೆ. 18.350 / - ಒಂದೇ ಕುಟುಂಬದ ಎರಡನೇ ಫಲಾನುಭವಿಗೆ ಹೆಸರಿನಲ್ಲಿ. 18 ವರ್ಷ ಪೂರೈಸಿರುವುದು ರಂದು ಯೋಜನೆಯ ಪರಿಸ್ಥಿತಿಗಳು ಪೂರ್ಣಗೊಂಡಾಗ ಕುಟುಂಬದ ಮೊದಲನೇಯ ಫಲಾನುಭವಿಗೆ ರೂ ಮೆಚ್ಯುರಿಟಿ ಹಣ ಪಡೆಯುತ್ತಾನೆ. 1,00,097 / - ಹಾಗೂ ಎರಡನೇ ಫಲಾನುಭವಿಗೆ ರೂ. 1,00,052 / -.

• ಹಾದುಹೋಗುವ ಎಸ್.ಎಸ್.ಎಲ್.ಸಿ. ನಂತರ ಉನ್ನತ ಶಿಕ್ಷಣ ಮುಂದುವರಿಸಲು ಇಚ್ಛಿಸುವ ಮತ್ತು 15 ವರ್ಷ ತಲುಪಿದ ಫಲಾನುಭವಿಗಳ ಗರಿಷ್ಠ ರೂ ವರೆಗೆ ಬಂಧ ಸಾಲವನ್ನು ಪಡೆಯಬಹುದಾಗಿರುತ್ತದೆ ಪ್ರತಿಜ್ಞೆಯನ್ನು ಅರ್ಹರಾಗಿರುತ್ತಾರೆ. 50,000 / - ಮಾನ್ಯತೆ ಬ್ಯಾಂಕುಗಳಿಂದ.

• ವಿದ್ಯಾರ್ಥಿವೇತನಗಳು ಮತ್ತು ವೈದ್ಯಕೀಯ ವೆಚ್ಚ ಪ್ರಯೋಜನಗಳನ್ನು ಹಿಂತೆಗೆದುಕೊಳ್ಳಲಾಯಿತು.
2010-11, 2006-07 ರಿಂದ Rs.1376.53 ಕೋಟಿ ರೂಪಾಯಿಗಳನ್ನು 10,18,189 ಫಲಾನುಭವಿಗಳು ಬಾಂಡುಗಳು ವಿತರಣೆಯ ಉಂಟಾದ ಮಾಡಲಾಗಿದೆ
2011-12ರಲ್ಲಿ Rs.486.14 ಕೋಟಿ ರೂಪಾಯಿಗಳನ್ನು 2,54,473 ಫಲಾನುಭವಿಗಳಿಗೆ ಬಾಂಡ್ ವಿತರಿಸಲು ಬಿಡುಗಡೆ ಮಾಡಲಾಗಿದೆ



’ಉದ್ಯೋಗಿನಿ’ 
     ಯೋಜನೆಯಲ್ಲಿ ಬಿಪಿಎಲ್‌ ಕಾರ್ಡ್‌ ಹೊಂದಿದ ಹೆಣ್ಣು ಮಕ್ಕಳಿಗೆ 1 ಲ.ರೂ. ಸಾಲ ನೀಡಲಾಗುವುದು. 
ಇದರಲ್ಲಿ ಪರಿಶಿಷ್ಟರಿಗೆ, ಅಂಗವಿಕಲರು, ವಿಧವೆಯರಿಗೆ 10,000 ರೂ. ಸಬ್ಸಿಡಿ, ಉಳಿದವರಿಗೆ 7,500 ರೂ. ಸಬ್ಸಿಡಿ ಇರುತ್ತದೆ.
 ಜಿಲ್ಲೆಯಲ್ಲಿ 206 ಜನರನ್ನು ಗುರುತಿಸಿ ತರಬೇತಿ ನೀಡಿದ್ದು 184 ಜನರಿಗೆ ಸಾಲ ವಿತರಿಸಲಾಗಿದೆ. ರಾಜ್ಯದಲ್ಲಿ ಬಹುತೇಕರು ಹೈನುಗಾರಿಕೆಗೆ ಬೇಡಿಕೆ ಸಲ್ಲಿಸುತ್ತಿದ್ದಾರೆ. ಕಂಪ್ಯೂಟರ್‌, ಕ್ಯಾಟರಿಂಗ್‌, ಹೈನುಗಾರಿಕೆ, ವಸ್ತ್ರವಿನ್ಯಾಸ ಮೊದಲಾದ ವಿಷಯಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಉಡುಪಿ ಜಿಲ್ಲೆಯಿಂದ ಕೆಲವು ವಿಷಯಗಳಿಗೆ ಆಸಕ್ತಿ ಕಂಡುಬರುತ್ತಿಲ್ಲ ಎಂದರು
logoblog

Thanks for reading ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *