ಚೈತನ್ಯ ಸಬ್ಸಿಡಿ ಕಂ ಸಾಫ್ಟ್ ಲೋನ್ ಯೋಜನೆ
- ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ ಸೇರಿದವರಾಗಿರಬೇಕು(ವಿಶ್ವಕರ್ಮ ಸಮುದಾಯಗಳನ್ನು ಹೊರತುಪಡಿಸಿ) ಹಾಗೂ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.40,000/-ಗಳು ಪಟ್ಟಣ ಪ್ರದೇಶದವರಿಗೆ ರೂ.55,000/-ಗಳ ಒಳಗಿರಬೇಕು.
- ಬ್ಯಾಂಕ್ ಗಳ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಗುತ್ತದೆ.
- ಸರ್ಕಾರದ ಆದೇಶ ಸಂಖ್ಯೆ:ಸಕಇ/165/ಬಿಎಂಎಸ್/2011 ದಿ:28/07/2011ರನ್ವಯ ಯೋಜನೆಯಲ್ಲಿ ಹಿಂದುಳಿದ ವರ್ಗಗಳ ಜನರಿಗೆ ಗರಿಷ್ಠ ರೂ.5.00 ಲಕ್ಷಗಳವರೆಗೆ ಸಾಲ ಒದಗಿಸಲಾಗುವುದು.
- ಸಹಾಯಧನ ಶೇ.30ರಷ್ಟು ಅಥವಾ ರೂ.10,000/-ಗಳು. ರೂ.1.00ಲಕ್ಷಕ್ಕಿಂತ ಹೆಚ್ಚಿನ ಸಾಲಕ್ಕೆ ಸಹಾಯಧನ ಲಭ್ಯವಿಲ್ಲ.
- ನಿಗಮದಿಂದ ಮಾರ್ಜಿನ್ ಹಣ ಶೇ. 20ರಷ್ಟು ಅಥವಾ ಗರಿಷ್ಟ ರೂ.1.00 ಲಕ್ಷಗಳು.
- ಮಾರ್ಜಿನ್ ಹಣಕ್ಕೆ ವಾರ್ಷಿಕ ಶೇ.4ರ ಬಡ್ಡಿದರ.
- ಉಳಿಕೆ ಮೊತ್ತ ಬ್ಯಾಂಕ್ ಪಾಲಿನ ಸಾಲ.
- ಸಾಲದ ಉದ್ದೇಶ ಕೃಷಿ ಅವಲಂಬಿತ ಚಟುವಟಿಕೆಗಳು, ವ್ಯಾಪಾರ, ಸೇವಾವಲಯ ಮತ್ತು ಸಾರಿಗೆ ವಲಯದ ಉದ್ದೇಶಗಳು,
- ಮಾರ್ಜಿನ್ ಹಣ ಸಾಲದ ಮರುಪಾವತಿ ಬ್ಯಾಂಕ್ ನಿಗದಿಪಡಿಸಿದ ಕಂತುಗಳನ್ವಯ.
- ಆಯಾ ಬ್ಯಾಂಕ್ ಶಾಖೆಗೆ ನಿಗಧಿಪಡಿಸಿದ ಗುರಿಗೆ 1:3 ಅನುಪಾತದಲ್ಲಿ ಅರ್ಜಿ ಶಿಫಾರಸ್ಸು ಮಾಡುವುದು.
- ರೂ.50,000/-ಗಳಿಗಿಂತ ಹೆಚ್ಚಿನ ಮಾರ್ಜಿನ್ ಹಣದ ಮರುಪಾವತಿ ಭದ್ರತೆಗೆ ಅರ್ಜಿದಾರರಿಂದ/ ಜಾಮೀನುದಾರರಿಂದ ಸ್ತಿರಾಸ್ತಿ ಭದ್ರತೆ ಪಡೆಯಬೇಕು(Collateral Security).
- ಚೈತನ್ಯ ಸಬ್ಸಿಡಿ ಕಂ ಸಾಫ್ಟ್ ಲೋನ್ ಯೋಜನೆಯಲ್ಲಿ ಘಟಕ ವೆಚ್ಚ ರೂ.1.00 ಲಕ್ಷಗಳ ಮಿತಿಯಲ್ಲಿ ಬ್ಯಾಂಕ್ ಗಳು ಸಾಲ ಮಂಜೂರು ಮಾಡಿದಲ್ಲಿ ಶೇ,30ರಷ್ಟು ಗರಿಷ್ಟ ರೂ.10,000/-ಗಳ ಸಹಾಯಧನ ಮಂಜೂರು ಮಾಡಬೇಕು. ಘಟಕ ರೂ.1.00ಲಕ್ಷ ಗಳಿಗೆ ಮೇಲ್ಪಟ್ಟಲ್ಲಿ ಶೇ.20ರಷ್ಟು ಮಾರ್ಜಿನ್ ಹಣ ಮಂಜೂರು ಮಾಡುವುದು. ಯಾವುದೇ ಕಾರಣಕ್ಕೂ ಬ್ಯಾಂಕ್ ಮಂಜೂರು ಮಾಡಿದ ಘಟಕ ವೆಚ್ಚವನ್ನು ಕಡಿಮೆ ಮಾಡಿ ಸಹಾಯಧನ ಲಭ್ಯವಾಗುವಂತೆ ಪ್ರಸ್ತಾವನೆ ಸಲ್ಲಿಸಬಾರದು. ಪ್ರಸ್ತಾವನೆಯೊಂದಿಗೆ ಬ್ಯಾಂಕ್ ಮಂಜೂರಾತಿ ಪತ್ರ/ಮಾರ್ಜಿನ್ ಹಣ ಕ್ಲೈಂ ಪತ್ರದ ಜೆರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ಪ್ರಸ್ತಾವನೆಯೊಂದಿಗೆ ಸಲ್ಲಿಸುವುದು.
- ಸರ್ಕಾರ ಆದೇಶ ಸಂಖ್ಯೆ: ಹಿಂವಕ/31/ಸಮನ್ವಯ/2013, ಬೆಂಗಳೂರು ದಿನಾಂಕ 25/02/2013ರನ್ವಯ ಈ ಯೋಜನೆಯಡಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್ ಇವರ ಅಧ್ಯಕ್ಷತೆಯಲ್ಲಿ ರಚಿಸಿರುವ ಆಯ್ಕೆ ಸಮಿತಿಯ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು.
ಕುಂಬಾರಿಕೆ ಉತ್ಪನ್ನಗಳ ತಯಾರಿಕೆಗೆ ಆರ್ಥಿಕ ನೆರವು
|
ಕುರಿ ಸಾಕಾಣಿಕೆ ಮಾಡುವ ಸಮಾಜದವರಿಗೆ ಕುರಿಗಳನ್ನು ಸಾಕಾಲು ಹಾಗೂ ಕಂಬಳಿ ನೇಕಾರರಿಗೆ ಸಾಲ ಮತ್ತು ಸಹಾಯಧನ ಯೋಜನೆ:
ಸನ್ಮಾನ್ಯ ಮುಖ್ಯಮಂತ್ರಿಯವರು 2013-14ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ-288ರಲ್ಲಿ ಕುರಿ ಸಾಕಾಣಿಕೆ ಮಾಡುವ ಪ್ರವರ್ಗ-1,ಪ್ರವರ್ಗ-2ಎ((ವಿಶ್ವಕರ್ಮ ಸಮುದಾಯಗಳನ್ನು ಹೊರತುಪಡಿಸಿ)ಸಮಾಜದವರಿಗೆ ಕುರಿಗಳ ಸಾಕಲು ಹಾಗೂ ಕಂಬಳಿ ನೇಕಾರಿಕೆಗೆ ಆರ್ಥಿಕ ನೆರವು ನೀಡಲು ರೂ.10,000/-ಗಳ ಸಹಾಯಧನ ಹಾಗೂ ರೂ.90,000/-ಗಳ ಸಾಲವನ್ನು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಒದಗಿಸಲಾಗುವುದೆಂದು ಘೋಷಿಸಲಾಗಿರುತ್ತದೆ. ಈ ಘೋಷಣೆಯಂತೆ ಸರ್ಕಾರದ ಆದೇಶ ಸಂಖ್ಯೆ ಬಿಸಿಡಬ್ಲ್ಯೂ 503 ಬಿಎಂಎಸ್ 2013, ಬೆಂಗಳೂರು ದಿನಾಂಕ 29/03/2014ರಲ್ಲಿ ಕುರಿ ಸಾಕಾಣಿಕೆ ಹಾಗೂ ಉಣ್ಣೆ ನೇಕಾರಿಕೆ ಮಾಡುವ ಕುರುಬ ಸಮಾಜದ ಪ್ರತಿ ಅರ್ಜಿದಾರರಿಗೆ ರೂ.10000- ಸಹಾಯಧನ ಹಾಗೂ ರೂ.90000/-ಗಳ ಸಾಲವನ್ನು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಸಾಲ ಮಂಜೂರು ಮಾಡಲು ಸರ್ಕಾರವು ಆದೇಶ ಹೊರಡಿಸಿರುತ್ತದೆ ಹಾಗೂ ಪೂರಕ ಅಂದಾಜು-2ರಲ್ಲಿ ರೂ.960.00 ಲಕ್ಷಗಳನ್ನು ಒದಗಿಸಲಾಗಿರುತ್ತದೆ. 2014-15ನೇ ಸಾಲಿನಲ್ಲಿ 960 ಜನರಿಗೆ ಸೌಲಭ್ಯ ಒದಗಿಸುವ ಗುರಿ ಹೊಂದಲಾಗಿದೆ.
ಗಂಗಾಕಲ್ಯಾಣ ನೀರಾವರಿ ಯೋಜನೆ
ಉದ್ದೇಶ: ಹಿಂದುಳಿದ ವರ್ಗಗಳ ಸಣ್ಣ ಮತ್ತು ಅತಿ ಸಣ್ಣ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುವುದು. ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರಾಗಿರಬೇಕು ಹಾಗೂ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.40000/-ಗಳ ಒಳಗಿರಬೇಕು.
1.ವೈಯಕ್ತಿಯ ನೀರಾವರಿ ಕೊಳವೆಬಾವಿ ಯೋಜನೆ:- ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದ ಹಿಂದುಳಿದ ವರ್ಗಗಳ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಉಡುಪಿ, ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಕನಿಷ್ಠ 1 ಎಕರೆ ಜಮೀನು ಹೊಂದಿರಬೇಕು. ಉಳಿಕೆ ಜಿಲ್ಲೆಗಳಲ್ಲಿ ಒಂದೇ ಸ್ಥಳದಲ್ಲಿ ಹೊಂದಿಕೊಂಡಂತೆ ಇರುವ ಕನಿಷ್ಠ 2 ಎಕರೆ ಜಮೀನು ಇರಬೇಕು. ಸಣ್ಣ ಮತ್ತು ಅತಿಸಣ್ಣ ರೈತರಾಗಿಬೇಕು.
ಘಟಕ ವೆಚ್ಚ:- ರೂ.2.00 ಲಕ್ಷಗಳು, ರೂ.1.50 ಲಕ್ಷಗಳ ಸಹಾಯಧನ(ಸಬ್ಸಿಡಿ) ಹಾಗೂ ಸಾಲದ ಮೊತ್ತ ರೂ.50,000/-ಗಳ ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಸಾಲ, ಸಾಲದ ಮರುಪಾವತಿ ಅವಧಿ 3 ವರ್ಷಗಳು.
2. ಸಾಮೂಹಿಕ ನೀರಾವರಿ ಕೊಳವೆಬಾವಿ ಯೋಜನೆ: ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದ ಕನಿಷ್ಠ 3 ಜನ ಸಣ್ಣ ಮತ್ತು ಅತಿಸಣ್ಣ ರೈತರು ಹೊಂದಿರುವ 8 ಎಕರೆ ಮತ್ತು ಅದಕ್ಕಿಂತ ಹೆಚ್ಚಿನ ಜಮೀನಿಗೆ ಸಾಮೂಹಿಕವಾಗಿ ನೀರಾವರಿ ಸೌಲಭ್ಯ.
ಘಟಕ ವೆಚ್ಚ: ರೂ.2.53 ಲಕ್ಷಗಳ ವೆಚ್ಚದಲ್ಲಿ 8-15 ಎಕರೆ ಜಮೀನಿಗೆ 2 ಕೊಳವೆಬಾವಿ ಹಾಗೂ 15 ಎಕರೆಗಿಂತ ಹೆಚ್ಚು ಜಮೀನು ಒಳಪಡುವ ಘಟಕಗಳಿಗೆ ನಿಗಧಿತ ಘಟಕ ವೆಚ್ಚ ರೂ.3.59 ಲಕ್ಷಗಳಿಂದ 3 ಕೊಳವೆ ಬಾವಿಗಳನ್ನು ಕೊರೆಯಿಸಿ ಪಂಪ್ ಸೆಟ್ ಮತ್ತು ಉಪಕರಣಗಳನ್ನು ಸರಬರಾಜು ಮಾಡುವುದು ಹಾಗೂ ವಿದ್ಯುದ್ಧೀಕರಣಕ್ಕೆ ಠೇವಣಿ ಪಾವತಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿ ನೀರಾವರಿ ಸೌಲಭ್ಯ ಒದಗಿಸುವುದು. ಇದು ಪೂರ್ಣ ಅನುದಾನವಾಗಿರುತ್ತದೆ.
3. ತೆರೆದ ಬಾವಿ: ವೈಯಕ್ತಿಕ ನೀರಾವರಿ ಕೊಳವೆಬಾವಿ ಯೋಜನೆಗೆ ನಿಗದಿಪಡಿಸಿದಂತೆ ರೂ.1.50 ಲಕ್ಷಗಳ ಅನುದಾನ ಹಾಗೂ ರೂ.50,000/-ಗಳ ಸಾಲ ಹೀಗೆ ಒಟ್ಟು ರೂ.2.00 ಲಕ್ಷಗಳ ವೆಚ್ಚದಲ್ಲಿ ಕರಾವಳಿ ಹಾಗೂ ಮಲೆನಾಡು ಪ್ರದೇಶದ ಜಿಲ್ಲೆಗಳಲ್ಲಿ ತೆರೆದಬಾವಿ ನೀರಾವರಿ ಸೌಲಭ್ಯ ಒದಗಿಸಲು ಅವಕಾಶವಿರುತ್ತದೆ.
4. ಸಾಮೂಹಿಕ ಏತ ನೀರಾವರಿ ಯೋಜನೆ:- ಭೂಮಟ್ಟದಲ್ಲಿ ಶಾಶ್ವತವಾಗಿ ದೊರೆಯುವ ಜಲಸಂಪನ್ಮೂಲಗಳಾದ ನದಿ, ಕೆರೆ, ಹಳ್ಳ, ಇವುಗಳಿಗೆ ಮೋಟಾರ್ ಅಳವಡಿಸಿ ಪೈಪ್ ಲೈನ್ ಮೂಲಕ ಖುಷ್ಕಿ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುವುದು
.
ಘಟಕ ವೆಚ್ಚ: ಸಾಮೂಹಿಕ ನೀರಾವರಿ ಯೋಜನೆಗೆ ನಿಗದಿಪಡಿಸಿದ ಘಟಕ ವೆಚ್ಚದಲ್ಲಿ ಸೌಲಭ್ಯ ಒದಗಿಸುವುದು.
ಈ ಕಾರ್ಯಕ್ರಮಕ್ಕೆ ನಿಗದಿಪಡಿಸಿದ ಅನುದಾನದಲ್ಲಿ ಮೀಸಲಾತಿ ಅನುಪಾತ ಪ್ರವರ್ಗ-1 ಮತ್ತು 2ಎಗೆ 70% ಪ್ರವರ್ಗ-3ಎ ಮತ್ತು 3ಬಿಗೆ 30% ರಂತೆ ಸೌಲಭ್ಯ ಒದಗಿಸಬೇಕು.
5. ಕರ್ನಾಟಕ ಅಂತರ್ಜಲ ಅಧಿನಿಯಮದನ್ವಯ ಈ ಕೆಳಕಂಡ 35 ತಾಲ್ಲೂಕುಗಳಲ್ಲಿ ಗಂಗಾ ಕಲ್ಯಾಣ ಯೋಜನೆಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಕೊಳವೆ ಬಾವಿ ಕೊರೆಯುವ ಮುನ್ನ ಅಂತರ್ಜಲ ಪ್ರಾಧಿಕಾರದಿಂದ ಅನುಮತಿ ಪಡೆಯತಕ್ಕದ್ದು, ಅನುಮತಿ ಪಡೆದಂತಹ ಫಲಾನುಭವಿಗಳ ಜಮೀನುಗಳಲ್ಲಿ ಕೊಳವೆ ಬಾವಿ ಕೊರೆಯಲು ಕ್ರಮವಹಿಸತಕ್ಕದ್ದು.
ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಮಾಡುವ ಹಿಂದುಳಿದ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಬಡ್ಡಿರಹಿತ ಸಾಲ ಯೋಜನೆ:
- ಉದ್ದೇಶ: ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪಿ.ಹೆಚ್.ಡಿ, ಪೋಸ್ಟ್ ಡಾಕ್ಟ್ರಲ್ ಮತ್ತು ಮಾಸ್ಟರ್ ಡಿಗ್ರಿ ವ್ಯಾಸಂಗಕ್ಕೆ ಪ್ರವೇಶ ಹೊಂದಿದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಬಡ್ಡಿ ರಹಿತ ಸಾಲ.
- ಸಾಲದ ಮೊತ್ತ: ವಾರ್ಷಿಕ ಗರಿಷ್ಠ ರೂ.3.50ಲಕ್ಷಗಳಂತೆ 3 ವರ್ಷದ ಅವಧಿಗೆ ಗರಿಷ್ಠ ರೂ.10.00ಲಕ್ಷಗಳು.
- ಅಭ್ಯರ್ಥಿಯ ವಯಸ್ಸು 35 ವರ್ಗಗಳ ವಯೋಮಿತಿಯಲ್ಲಿರಬೇಕು.
- ಕುಟುಂಬದ ವಾರ್ಷಿಕ ಆದಾಯ ರೂ.1,44,000/-ಗಳ ಮಿತಿಯಲ್ಲಿರಬೇಕು.
- ವ್ಯಾಸಂಗಕ್ಕೆ ಪ್ರವೇಶ ಪಡೆದ ಬಗ್ಗೆ ವಿದೇಶಿ ವಿಶ್ವವಿದ್ಯಾಲಯಗಳ ಪ್ರವೇಶ ಪತ್ರ, ವೀಸಾ, ಪಾಸ್ ಪೋರ್ಟ್, ಏರ್ ಟಿಕೇಟ್ ಪ್ರತಿ ಒದಗಿಸಬೇಕು.
- ಸಾಲದ ಭದ್ರತೆಗೆ ವಿದ್ಯಾರ್ಥಿಯ ತಂದೆ ಅಥವಾ ಜಾಮೀನುದಾರರು ಹೊಂದಿರುವ ಸ್ಥಿರಾಸ್ಥಿಯನ್ನು ನಿಗಮಕ್ಕೆ ಆಧಾರ ಮಾಡಬೇಕು. (ಕೊಲ್ಯಾಟರಲ್ ಸೆಕ್ಯೂರಿಟಿ)
- ಅಭ್ಯರ್ಥಿಗಳ ಆಯ್ಕೆ; ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ರಚಿಸಿರುವ ಆಯ್ಕೆ ಸಮಿತಿಯ ಮೂಲಕ ಆಯ್ಕೆ ಮಾಡುವುದು.
- ಮರುಪಾವತಿ ಅವಧಿ: ಮರುಪಾವತಿ ಅವಧಿ ಗರಿಷ್ಠ 60 ಮಾಸಿಕ ಕಂತುಗಳು, ವ್ಯಾಸಂಗ ಪೂರ್ಣಗೊಂಡ 1 ವರ್ಷದ ನಂತರ ಅಥವಾ ಉದ್ಯೋಗ ದೊರೆತ 6 ತಿಂಗಳ ನಂತರ ಮರುಪಾವತಿ ಕಂತು ಪ್ರಾರಂಭವಾಗುತ್ತದೆ.
ಸವಿತ ಸಮಾಜ ಯೋಜನೆ
ಸವಿತ ಸಮಾಜದವರಿಗೆ ಬೈಸಿಕಲ್ ಮತ್ತು ಉಚಿತ ಟೂಲ್ ಕಿಟ್ ವಿತರಣೆಗೆ ಕಳೆದ ಸಾಲುಗಳಲ್ಲಿ ನಿಗದಿಪಡಿಸಿದ ಮೊತ್ತದಲ್ಲಿ ಉಳಿದಿರುವ ಮೊತ್ತ ರೂ.75.00 ಲಕ್ಷಗಳನ್ನು ಈ ಸಮಾಜದವರಿಗೆ ಸಾಲ ಮತ್ತು ಸಹಾಯಧನ ಒದಗಿಸಲು ದಿನಾಂಕ 25/05/2014ರಂದು ನಡೆದ ನಿಗಮದ 158ನೇ ನಿರ್ದೇಶಕ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿರುತ್ತದೆ.
ಆದ್ದರಿಂದ, ಬೈಸಿಕಲ್ ಮತ್ತು ಉಚಿತ ಟೂಲ್ ಕಿಟ್ ವಿತರಣೆಗೆ ಆಯ್ಕೆ ಮಾಡಿರುವ ಫಲಾನುಭವಿಗಳಿಗೆ ಸರ್ಕಾರದ ಆದೇಶ ಸಂಖ್ಯೆ: ಬಿಸಿಡಬ್ಲ್ಯೂ 486 ಬಿಎಂಎಸ್ 2012, ಬೆಂಗಳೂರು ದಿನಾಂಕ 07/01/2013ರನ್ವಯ ಪ್ರತಿ ಫಲಾನುಭವಿಗೆ ರೂ.5,000/-ಗಳ ಸಹಾಯಧನ ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ರೂ.30,000/-ಗಳ ಸಾಲವನ್ನು ಮಂಜೂರು ಮಾಡಲಾಗುವುದು. ಉಳಿದಂತಹ ಅರ್ಜಿದಾರರಿಗೆ ಸಾಂಪ್ರದಾಯಿಕ ವೃತ್ತಿದಾರರ ಅಭಿವೃದ್ಧಿ ಯೋಜನೆಯಲ್ಲಿ ಸೌಲಭ್ಯ ಒದಗಿಸುವುದು.
- ಅಲೆಮಾರಿ/ಅರೆ ಅಲೆಮಾರಿ ಗಂಗಾ ಕಲ್ಯಾಣ ವೈಯಕ್ತಿಕ ನೀರಾವರಿ ಯೋಜನೆ:- ಕರ್ನಾಟಕ ರಾಜ್ಯದ ಅಲೆಮಾರಿ/ಅರೆ ಅಲೆಮಾರಿ ಅಭಿವೃದ್ಧಿ ಮಂಡಳಿಯು ನಿಗಮಕ್ಕೆ 2013-14ನೇ ಸಾಲಿಗೆ ಮಾರ್ಚ್-2014ರ ಅಂತ್ಯದಲ್ಲಿ ಒದಗಿಸಿದ ರೂ.10.00 ಕೋಟಿಗಳಲ್ಲಿ ಗಂಗಾ ಕಲ್ಯಾಣ ನೀರಾವರಿ ಯೋಜನೆಗೆ ರೂ.6.50ಕೋಟಿಗಳನ್ನು ನಿಗದಿಪಡಿಸಲಾಗಿದೆ. ಈ ಮೊತ್ತದಲ್ಲಿ ಸರ್ಕಾರದ ಆದೇಶ ಸಂಖ್ಯೆ ಪಿ.ಹೆಚ್.ಎಸ್/262/ಎಸ್.ಇ.ಡಬ್ಲ್ಯೂ/65/ ದಿನಾಂಕ 01/2/1966ರನ್ವಯ ಅಲೆಮಾರಿ/ಅರೆ ಅಲೆಮಾರಿ ಜನಾಂಗಕ್ಕೆ ಸೇರಿದ 1) ಬೈರಾಗಿ (ಬಾವ), 2) ಬಾಲ ಸಂತೋಷಿ-ಜೋಷಿ, 3)ಬಾಜಿಗರ್, 4)ಭರಡಿ, 5)ಬುಡಬುಡಕಿ-ಜೋಶಿ-ಗೋಂಧಳಿ, 6)ಚಾರ, 7)ಚಿತ್ರಕರ್ತಿ-ಜೋಶಿ, 8)ಧೋಲಿ, 9)ದವೇರಿ, 10)ದೊಂಬರಿ, 11)ಘಿಸಾಡಿ, 12)ಗರುಡಿ, 13)ಗೋಪಾಲ್, 14) ಗೋಂಧಳಿ, 15)ಹೆಳವ, 16)ಜೋಗಿ, 17) ಕೆಲ್ ಕರಿ, 18)ಕೋಲ್ ಹಾಟಿ, 19)ನಂದಿವಾಲ-ಜೋಶಿ-ಘೋಂಧಳಿ, ಫುಲ್-ಮಲ್ಲಿ, 20)ನಾಥಪಂಧಿ-ಡೌರಿ-ಗೋಸಾವಿ 21) ನೀರ್ ಶಿಕಾರಿ, 22)ಪಂಗುಲ್. 23)ಜೋಶಿ (ಸಾದ ಜೋಶಿ), 24)ಸನ್ ಸಿಯ, 25)ಸರನಿಯ, 26) ತಿರುಮಲಿ, 27) ವೈಡು, 28)ವಾಸುದೇವ್, 29)ವಡಿ, 30)ವಗ್ರಿ, 31)ವಿರ್, 32)ಬಜನಿಯ, 33)ಶಿಕ್ಕಲ್ ಗಾರ, 34)ಗೊಲ್ಲ, 35)ಕಿಳ್ಳಕ್ಯಾತಸ್, 36)ಸರೋಡಿ, 37)ದುರ್ಗಾಮುರ್ಗ(ಬುರ್ ಬುರ್ ಚ), 38)ಹಾವಗಾರ್(ಹಾವಾಡಿಗರ್) 39)ಪಿಚಗುಂಟಲ, 40)ಮಸನಿಯ ಯೋಗಿ, 40)ಬೆಸ್ತರ್ 41)ಬುಂಡ ಬೆಸ್ತ, 42)ಕಟಬು, 43)ಕಾಶಿಕಪ್ ಡಿ, 44)ದೊಂಬಿದಾಸ ಮತ್ತು 45)ಬೈಲ್ ಪತ್ತಾರ್ ಜನಾಂಗಕ್ಕೆ ಸೇರಿದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಗಂಗಾ ಕಲ್ಯಾಣ ಘಟಕ ವೆಚ್ಚಗಳ ಅನ್ವಯ ನೀರಾವರಿ ಸೌಲಭ್ಯ ಒದಗಿಸುವುದು.
- ಅಲೆಮಾರಿ/ಅರೆ ಅಲೆಮಾರಿ ಭೂ ಖರೀದಿ ಯೋಜನೆ:- ಅಲೆಮಾರಿ/ಅರೆ ಅಲೆಮಾರಿ ಜನಾಂಗಕ್ಕೆ ಸೇರಿದ ಕನಿಷ್ಠ 1 ಎಕರೆ ತರಿ ಭೂಮಿ ಅಥವಾ 2 ಎಕರೆ ಖುಷ್ಕಿ ಜಮೀನನ್ನು ಕೊಂಡುಕೊಳ್ಳಲು ಸಾಲ ಮತ್ತು ಸಹಾಯಧನ ಒದಗಿಸಲಾಗುವುದು. ಘಟಕ ವೆಚ್ಚ ರೂ.5.00ಲಕ್ಷಗಳನ್ನು ನಿಗದಿಪಡಿಸಿದೆ. ಈ ಮೊತ್ತದಲ್ಲಿ ಶೇ.50ರಷ್ಟು ಸಹಾಯಧನ ಹಾಗೂ ಉಳಿಕೆ ಶೇ.50ರಷ್ಟು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಸಾಲ ಮಂಜೂರು ಮಾಡಲಾಗುವುದು.
- ಅಲೆಮಾರಿ/ಅರೆ ಅಲೆಮಾರಿ ಶೈಕ್ಷಣಿಕ ನೇರ ಸಾಲ ಯೋಜನೆ:- ಅಲೆಮಾರಿ/ಅರೆಅಲೆಮಾರಿ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬದ ವಾರ್ಷಿಕ ಆದಾಯ ರೂ.3.50ಲಕ್ಷಗಳ ಮಿತಿಯಲ್ಲಿದ್ದು, ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ(ಸಿ.ಇ.ಟಿ) ಪ್ರವೇಶ ಪಡೆದು, (1)ಬಿ.ಇ(ಸಿ.ಇ.ಟಿ), (2)ಎಂ.ಬಿ.ಬಿ.ಎಸ್, (3) ಬಿ.ಯೂ.ಎಂ.ಎಸ್., 4) ಬಿ.ಡಿ.ಎಸ್. 5)ಬಿ.ಎ.ಎಂ.ಎಸ್, 6) ಬಿ.ಎಚ್.ಎಂಎಸ್. 7)ಎಂ.ಬಿ.ಎ 8)ಎಂ.ಟೆಕ್, 9)ಎಂ.ಇ, 10) ಎಂ.ಡಿ, 11)ಪಿ.ಹೆಚ್.ಡಿ 12) ಬಿ.ಸಿ.ಎ/ಎಂ.ಸಿ.ಎ 13)ಎಂ.ಎಸ್.ಆಗ್ರಿಕಲ್ಚರ್ 14) ಬಿ.ಎಸ್.ಸಿ ನರ್ಸಿಂಗ್, 15) ಬಿ.ಫಾರಂ 16)ಬಿ.ಎಸ್.ಸಿ ಪ್ಯಾರಾ ಮೆಡಿಕಲ್ 17) ಬಿ.ಎಸ್.ಸಿ. ಬಯೋ ಟಿಕ್ನಾಲಜಿ 18)ಬಿ.ಟೆಕ್ 19)ಬಿ.ಪಿ.ಟಿ. 20)ಬಿ.ಬಿ.ಎಸ್.ಸಿ/ಎಂ.ವಿ.ಎಸ್.ಸಿ 21) ಬಿ.ಎನ್.ಎಂ 22)ಬಿ.ಹೆಚ್.ಎಮ್. 23)ಎಂಡಿ.ಎಸ್ ಬಯೋ ಟೆಕ್ನಾಲಜಿ ಮತ್ತು 28)ಎಂ.ಎಸ್.ಸಿ(ಎ.ಜಿ) ಕೋರ್ಸ್ ಗಳಲ್ಲಿ ಉಚಿತ ಸೀಟ್ ಪಡೆದು ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಕೋರ್ಸ್ನ ಅವಧಿಗೆ ಶೇಕಡ 2ರ ಬಡ್ಡಿ ದರದಲ್ಲಿ ಗರಿಷ್ಠ ವಾರ್ಷಿಕ 1.00 ಲಕ್ಷಗಳ ವರೆಗೆ ಸಾಲ ಮಂಜೂರು ಮಾಡುವುದು.
ಕಳ್ಳಭಟ್ಟಿ ಹಾಗೂ ಅಕ್ರಮ ಮಧ್ಯ ತಯಾರಿಕೆಯಲ್ಲಿ ತೊಡಗಿ ಸಂತ್ರಸ್ತರಾದ ಕುಟುಂಬಗಳ ಪುನರ್ವಸತಿಗೆ ಆರ್ಥಿಕ ನೆರವು
ಕಳ್ಳಭಟ್ಟಿ ಮತ್ತು ಅಕ್ರಮ ಮಧ್ಯ ತಯಾರಿಕೆ ಕೇಂದ್ರಗಳಲ್ಲಿ ತೊಡಗಿದ್ದ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಅವರು ಕೈಗೊಳ್ಳುವ ಆರ್ಥಿಕ ಚಟುವಟಿಕೆಗಳಿಗೆ ರೂ.5,000/-ಗಳ ಸಹಾಯಧನ ಹಾಗೂ ರೂ.45,000/-ಗಳ ಸಾಲ ಒಟ್ಟು ರೂ.50,000/-ಗಳ ಸೌಲಭ್ಯ ಒದಗಿಸಲಾಗುವುದು.
ಸರ್ಕಾರದ ಆದೇಶ ಸಂಖ್ಯೆ: ಹಿಂವಕ 536 ಬಿಎಂಎಸ್ 2013 ಬೆಂಗಳೂರು, ದಿನಾಂಕ 22/01/2014ರನ್ವಯ ಕಳ್ಳಭಟ್ಟಿ ಹಾಗೂ ಅಕ್ರಮ ಮಧ್ಯ ತಯಾರಿಕೆಯಲ್ಲಿ ತೊಡಗಿದ್ದು, ಸಂತ್ರಸ್ತರಾದ ಒಟ್ಟು 897 ಕುಟುಂಬಗಳ ಜಿಲ್ಲಾವಾರು ಸಂಖ್ಯೆ ನೀಡಿ ಪುನರ್ ವಸತಿಗೆ ಸಾಲ ಮತ್ತು ಸಹಾಯಧನದ ಸೌಲಭ್ಯ ತಿಳಿಸಲಾಗಿರುತ್ತದೆ.
ಚೈತನ್ಯ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ
- ಫಲಾನುಭವಿಗಳು:- ಬ್ಯಾಂಕ್ ಗಳಿಂದ ಸಾಲ ಪಡೆಯಲು ಸಾಧ್ಯವಿಲ್ಲದ ಹಿಂದುಳಿದ ಮತ್ತು ಅತಿ ಹಿಂದುಳಿದ ವರ್ಗದವರು, ಸಾಂಪ್ರದಾಯಿಕ ವೃತ್ತಿಯಲ್ಲದ ಆರ್ಥಿಕ ಚಟುವಟಿಕೆಗಳಿಗೆ ಸಾಲ ಮತ್ತು ಸಹಾಯಧನ ಮಂಜೂರು ಮಾಡಲಾಗುವುದು.
- ಅರ್ಹತೆ:- ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರಾಗಿರಬೇಕು(ವಿಶ್ವಕರ್ಮ ಸಮುದಾಯಗಳನ್ನು ಹೊರತುಪಡಿಸಿ) ಹಾಗೂ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.40,000/-ಗಳು ಪಟ್ಟಣ ಪ್ರದೇಶದವರಿಗೆ ರೂ.55,000/-ಗಳ ಒಳಗಿರಬೇಕು.
- ಸಹಾಯಧನ ಶೇ.30ರಷ್ಟು ಗರಿಷ್ಠ ರೂ.10,000/-ಗಳು.
- ಸಾಲದ ಮೊತ್ತ: ರೂ.40,000/-ಗಳ ಸಾಲ ವಾರ್ಷಿಕ ಶೇ.4ರ ಬಡ್ಡಿದರ.
- ಸಾಲದ ಮರುಪಾವತಿ ಅವಧಿ: 3 ವರ್ಷಗಳು ಮಾಸಿಕ ಕಂತುಗಳಲ್ಲಿ.
- ಈ ಯೋಜನೆಯಲ್ಲಿ ಕೃಷಿ ಅವಲಂಭಿತ ಚಟುವಟಿಕೆಗಳು, ವ್ಯಾಪಾರ ಚಟುವಟಿಕೆಗಳು ಹಾಗೂ ಸೇವಾ ವಲಯ ಚಟುವಟಿಕೆಗಳಿಗೆ ಸಮನಾಗಿ ಹಂಚಿಕೆ ಮಾಡಿಕೊಂಡು ಅನುಷ್ಠಾನಗೊಳಿಸುವುದು.
ಕಿರುಸಾಲ ಯೋಜನೆ
ಈ ಯೋಜನೆಯಲ್ಲಿ ಕುಶಲಿ ಕುಶಲಿಯಲ್ಲದ ವ್ಯಕ್ತಿಗಳು ನಗರ, ಪಟ್ಟಣ ಮತ್ತು ಹೋಬಳಿ ಹಂತಗಳಲ್ಲಿ ಸಣ್ಣ ಪ್ರಮಾಣದ ವ್ಯಾಪಾರ ಚಟುವಟಿಕೆಗಳನ್ನು ಕೈಗೊಳ್ಳಲು ಸ್ವ ಸಹಾಯ ಗುಂಪುಗಳ ಮೂಲಕ ಸಾಲ ಸೌಲಭ್ಯ ನೀಡುವುದು.
- ಸಾಲದ ಉದ್ದೇಶ:- ಸಣ್ಣ ವ್ಯಾಪಾರ ಚುಟುವಟಿಕೆಗಳಾದ ಹಣ್ಣು, ತರಕಾರಿ ವ್ಯಾಪಾರ, ಹಾಲು ವ್ಯಾಪಾರ, ಹೂ ವ್ಯಾಪಾರ, ಮೀನುವ್ಯಾಪಾರ, ಟೀ/ಕಾಫೀ ಸ್ಟಾಲ್, ವ್ಯಾಪಾರ, ಸಣ್ಣ ವ್ಯಾಪಾರ ಇತ್ಯಾದಿ ವ್ಯಾಪಾರದ ಚಟುವಟಿಕೆಗಳಿಗೆ ಗರಿಷ್ಟ ರೂ.15,000/-ಗಳ ಆರ್ಥಿಕ ನೆರವು.
- ಅರ್ಹತೆ: ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರಾಗಿರಬೇಕು(ವಿಶ್ವಕರ್ಮ ಸಮುದಾಯಗಳನ್ನು ಹೊರತುಪಡಿಸಿ) .
- ಸಹಾಯಧನ: ಗರಿಷ್ಠ ರೂ.5,000/-ಗಳು
- ಸಾಲದ ಮೊತ್ತ: ರೂ.10,000/-ಗಳು
- ಬಡ್ಡಿದರ: ಸ್ವ ಸಹಾಯ ಸಂಘಗಳು ಸಾಲದ ಮೊತ್ತವನ್ನು ವಾರ್ಷಿಕ ಶೇಕಡ 4ರ ಬಡ್ಡಿಯೊಂದಿಗೆ ನಿಗಮಕ್ಕೆ ಹಿಂದಿರುಗಿಸಬೇಕಾಗಿರುತ್ತದೆ. ಶೇಕಡ 1ರ ಭಾಗ ಬಡ್ಡಿಯನ್ನು ಹೆಚ್ಚುವರಿಯಾಗಿ ಪಡೆದು ಸ್ವ ಸಹಾಯ ಗುಂಪುಗಳು ಸೇವಾ ಶುಲ್ಕವಾಗಿ ಇಟ್ಟುಕೊಳ್ಳಬಹುದು.
- ಫಲಾನುಭವಿಗಳು ಸ್ವ ಸಹಾಯ ಗುಂಪುಗಳ ಸದಸ್ಯರಾಗಿರಬೇಕು.
- ಫಲಾನುಭವಿಗಳು ಬಿ.ಪಿ.ಎಲ್ ಕುಟುಂಬಕ್ಕೆ ಸೇರಿರಬೇಕು. ಹಾಗೂ ಸರ್ಕಾರಿ/ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿರಬಾರದು.
- ಮರುಪಾವತಿ: ಸ್ವಸಹಾಯ ಗುಂಪುಗಳು ಸಾಲದ ಮೊತ್ತವನ್ನು 36 ತಿಂಗಳಲ್ಲಿ ತ್ರೈಮಾಸಿಕ ಕಂತುಗಳಲ್ಲಿ ಪ್ರತಿ ವರ್ಷ 30ನೇ ಜೂನ್, 30ನೇ ಸೆಪ್ಟಂಬರ್, 30ನೇ ಡಿಸೆಂಬರ್ ಹಾಗೂ 31ನೇ ಮಾರ್ಚ್ ನಲ್ಲಿ ಸಾಲ ಮರುಪಾವತಿ ಮಾಡಬೇಕು. ಸುಸ್ತಿಯಾದಲ್ಲಿ ಶೇಕಡ 5ರಷ್ಟು ದಂಡ ಬಡ್ಡಿ ಪಾವತಿಸಬೇಕು.
ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ವೃತ್ತಿ ಕುಸುಬುದಾರರಿಗೆ ಸಾಲ ಮತ್ತು ಸಹಾಯಧನ
- ಸಾಂಪ್ರದಾಯಿಕ ವೃತ್ತಿ ಮತ್ತು ಕುಶಲಕರ್ಮಿಗಳಿಗೆ ಅವರ ವೃತ್ತಿ ಕೌಶಲ್ಯತೆಯನ್ನು ಅಭಿವೃದ್ಧಿ ಪಡಿಸಿಕೊಳ್ಳಲು ರೂ.5,000/-ಗಳ ಸಹಾಯಧನ ಹಾಗೂ ರೂ.45,000/-ಗಳ ಸಾಲವನ್ನು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಮಂಜೂರು ಮಾಡುವುದು.
- ಈ ಕಾರ್ಯಕ್ರಮದಲ್ಲಿ ರೂ.45,000/-ಗಳಿಂತ ಹೆಚ್ಚಿನ ಸಾಲದ ಮೊತ್ತ ಕೋರಿದಲ್ಲಿ ಅಂತಹ ಫಲಾನುಭವಿಗಳಿಗೆ ಬ್ಯಾಂಕ್ ಗಳ ಸಹಯೋಗದೊಂದಿಗೆ ಅನುಷ್ಠಾನಗೊಳಿಸುತ್ತಿರುವ ಚೈತನ್ಯ ಸಬ್ಸಿಡಿ ಕಂ ಸಾಫ್ಟ್ ಲೋನ್ ಯೋಜನೆಯಲ್ಲಿ ಸೌಲಭ್ಯ ಒದಗಿಸಬೇಕು
ಅರ್ಹತೆ:
- ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರಾಗಿರಬೇಕು.(ವಿಶ್ವಕರ್ಮ ಸಮುದಾಯಗಳನ್ನು ಹೊರತುಪಡಿಸಿ) ಹಾಗೂ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.40,000/-ಗಳು ಪಟ್ಟಣ ಪ್ರದೇಶದವರಿಗೆ ರೂ.55,000/-ಗಳ ಒಳಗಿರಬೇಕು.
- ಸಾಂಪ್ರದಾಯಿಕ ವೃತ್ತಿಗಳಲ್ಲಿ ಗುರುತಿಸಿರುವ 47 ವೃತ್ತಿಗಳಾದ ಬಡಗಿ ಕೆಲಸ, ಮರದ ಕೆತ್ತನೆ ಕೆಲಸ, ಉಣ್ಣೆ ಮತ್ತು ಕಂಬಳಿ ನೇಯ್ಗೆ, ಅಡಿಕೆ ಹಾಳೆಯಿಂದ ತಟ್ಟೆ ತಯಾರಿಕೆ ಕುಂಬಾರಿಕೆ/ಕಲಾತ್ಮಕ ಮಡಿಕೆ ತಯಾರಿಕೆ, ಟೈಲರಿಂಗ್, ಹತ್ತಿ ನೇಯ್ಗೆ/ನೇಕಾರಿಕೆ, ಟಿನ್ ವಸ್ತುಗಳ ತಯಾರಿಕೆ, ಜೇನು ಸಾಕಾಣಿಕೆ, ನಿಟ್ಟಿಂಗ್ ಕೆಲಸ, ಉಣ್ಣೆ ನೇಯ್ಗೆ ಮತ್ತು ಹಾಸು ಕಂಬಳಿ ತಯಾರಿಕೆ, ಚರ್ಮದ ವಸ್ತುಗಳ ತಯಾರಿಕೆ, ಗಾಣದ ಕೆಲಸ, ಸಿಲ್ಕ್ ರೀಲಿಂಗ್ ಮತ್ತು ಸಿಲ್ಕ್ ಟ್ವಿಸ್ಟಿಂಗ್ ಕೆಲಸ, ಅಗರಭತ್ತಿ ತಯಾರಿಕೆ, ಮೆಷನರಿ ವರ್ಕ್ಸ್, ಪೊರಕೆ ಕಡ್ಡಿ ತಯಾರಿಕೆ, ಕಾಯರ್ ಫೈಬರ್ ತಯಾರಿಕೆ, ಹೂ ಕಟ್ಟುವ ವೃತ್ತಿ, ಬಿದರಿ ವೇರ್ ಕೆಲಸ, ವಿಗ್ರಹ/ಕಲ್ಲು ಕತ್ತನೆ ಕೆಲಸಗಳು, ಪಾತ್ರಗಳಿಗೆ ಕಲಾಯಿ, ಕ್ಷೌರಿಕ ವೃತ್ತಿ/ಸೆಲೂನ್, ಮೀನುಗಾರಿಕೆ, ವಾದ್ಯ ವೃಂದ ವೃತ್ತಿ, ವಾಲಗ ಊದುವುದು, ನಾಟಿ ಔಷಧಿ, ಗೌಳಿ ವೃತ್ತಿ(ಹೈನುಗಾರಿಕೆ), ದನಗಾಹಿ ವೃತ್ತಿ, ಬಣ್ಣ/ಶೃಂಗಾರ (ಬ್ಯೂಟಿ ಪಾರ್ಲರ್) ಮಾಡುವ ವೃತ್ತಿ, ಬೈಸಿಕಲ್/ಆಟೋಮೊಬೈಲ್ ರಿಪೇರಿ, ಬಳೆ ವ್ಯಾಪಾರ/ಮೇಣದ ಬತ್ತಿ, ಶೀಟ್ ಮೆಟಲ್ ವೃತ್ತಿ, ವೆಲ್ಡಿಂಗ್ ವರ್ಕ್ಸ್, ಚಿನ್ನಬೆಳ್ಳೆ ಕೆಲಸ, ಬಣ್ಣಗಾರಿಕೆ ಮತ್ತು ಮುದ್ರಣಕಾರಿಕೆ, ಕುರಿ ಸಾಕಾಣಿಕೆ, ಕಂಚು ಕೆಲಸ, ಮ್ಯಾಟ್ ತಯಾರಿಕೆ, ನಾರಿನಿಂದ ವಿವಿಧ ಉತ್ಪನ್ನ ತಯಾರಿಕೆ, ಗಾಡಿ/ರಥ ತಯಾರಿಕೆ, ಕಮ್ಮಾರಿಕೆ/ಕುಲುವೆ, ಗ್ಲಾಸ್ ಬೀಡ್ಸ್ ತಯಾರಿಕೆ, ಬೆತ್ತದ ಕೆಲಸ(ರಟ್ಟನ್) ಆಟಿಕೆ/ಗೊಂಬೆ ತಯಾರಿಕೆ ಮತ್ತು ಕೆತ್ತನೆ ಕೆಲಸ, ಮೆಟಲ್ ಕ್ರಾಫ್ಟ್ ಕೆಲಸ.
ವಿಶೇಷ ಸೂಚನೆ:-ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ಸ್ಥಾಫನೆಯಾಗಿರುವುದರಿಂದ ಈ ಮೇಲ್ಕಂಡ ವೃತ್ತಿಗಳಲ್ಲಿ ವಿಶ್ವಕರ್ಮ ಸಮುದಾಯದವರು ಕೈಗೊಳ್ಳುವ ವೃತ್ತಿಗಳಿಗೆ ಹಾಗೂ ಕುಂಬಾರಿಕೆ ಅಭಿವೃದ್ಧಿ ಮಂಡಳಿಯು ಕಾರ್ಯ ನಿರ್ವಹಿಸುತ್ತಿದ್ದು, ಇದರ ವತಿಯಿಂದ ಕುಂಬಾರಿಕೆ ಉದ್ದೇಶಕ್ಕೆ ಪ್ರತ್ಯೇಕವಾಗಿ ಗುರಿ ನಿಗದಿಪಡಿಸಿರುವುದರಿಂದ ಈ ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮುದಾಯದವರಿಗೆ ಮತ್ತು ಕುಂಬಾರ ಸಮುದಾಯದವರಿಗೆ ಅವರು ನಿರ್ವಹಿಸುವ ಸಾಂಪ್ರದಾಯಿಕ ವೃತ್ತಿಗಳಿಗೆ ಸಾಲ ಸೌಲಭ್ಯ ಒದಗಿಸಲು ಅವಕಾಶವಿರುವುದಿಲ್ಲ.
No comments:
Post a Comment