ಕರ್ನಾಟಕ ಸರ್ಕಾರವು ಅಸಹಾಯಕ, ಅಶಕ್ತ ವ್ಯಕ್ತಿಗಳಿಗೆ, ವಿಧವೆಯರಿಗೆ ಹಾಗೂ ಅಂಗವಿಕಲರಿಗೆ ಅನೇಕ ಸಾಮಾಜಿಕ ಭದ್ರತೆ ಯೋಜನೆಗಳನ್ನು ಕಂದಾಯ ಇಲಾಖೆಯ ಮೂಲಕ ಅನುಷ್ಟಾನಗೊಳಿಸುತ್ತಿರುತ್ತದೆ. ಕಂದಾಯ ಇಲಾಖೆಯ ತಹಸೀಲ್ದಾರ್ ಗಳು ಮಂಜೂರಾತಿ ಅಧಿಕಾರಿಗಳಾಗಿದ್ದು, ಜಿಲ್ಲಾಧಿಕಾರಿಗಳು ಹಾಗು ಪ್ರಾದೇಶಿಕ ಆಯುಕ್ತರುಗಳು ಮೇಲ್ವಿಚಾರಣಾಧಿಕಾರಿಗಳಾಗಿರುತ್ತಾರೆ. ಈ ಯೋಜನೆಗಳನ್ನು ಇನ್ನು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತೆ ಮಾಡಲು ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯವನ್ನು ಕಂದಾಯ ಇಲಾಖೆಯಡಿಯಲ್ಲಿ ಸೃಜಿಸಲಾಗಿದೆ. ನಿರ್ದೇಶನಾಲಯವು ಸರ್ಕಾರಿ ಆದೇಶ ಸಂಖ್ಯೆಃ ಕಂಇ 44 ಎಂಎಸ್ ಟಿ 2007, ದಿನಾಂಕಃ 08-05-2007 ರಂತೆ ಅಸ್ತಿತ್ವಕ್ಕೆ ಬಂದಿದೆ. ನಿರ್ದೇಶನಾಲಯದ ಮುಖ್ಯ ಉದ್ದೇಶವೇನೆಂದರೆ ಸಾಮಾಜಿಕ ಭದ್ರತೆಗಳಿಗೆ ಸಂಬಂಧಪಟ್ಟ ಎಲ್ಲಾ ಯೋಜನೆಗಳನ್ನು ಜಾರಿಗೊಳಿಸುವುದಾಗಿರುತ್ತದೆ.
1.ಕೇಂದ್ರ ಸರ್ಕಾರ ಪುರಸ್ಕೃತ ಯೋಜನೆಗಳು.
ರಾಷ್ಟ್ರೀಯ ಸಾಮಾಜಿಕ ನೆರವು ಯೋಜನೆಯಡಿಯಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಯೋಜನೆ, ಇಂದಿರಾಗಾಂಧಿ ರಾಷ್ಟ್ರೀಯ ವಿಧವಾ ವೇತನ ಯೋಜನೆ, ಇಂದಿರಾಗಾಂಧಿ ರಾಷ್ಟ್ರೀಯ ಅಂಗವಿಕಲರ ವೇತನ ಯೋಜನೆ, ಅನ್ನಪೂರ್ಣ ಯೋಜನೆ ಮತ್ತು ರಾಷ್ಟ್ರೀಯ ಕುಟುಂಬ ನೆರವು ಯೋಜನೆ.
1.ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನಯೋಜನೆಃ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮಂತ್ರಾಲಯ ನಿಗಧಿಪಡಿಸಿರುವಂತೆ ಬಡತನ ರೇಖೆಗಿಂತ (ಬಿಪಿಲ್) ಕೆಳಗಡೆ ಇರುವ ಕುಟುಂಬಗಳಿಗೆ ಸೇರಿದ 60 ವರ್ಷ ಹಾಗೂ ಮೇಲ್ಪಟ್ಟ ಫಲಾನುಭವಿಗಳಿಗೆ ಮಾಸಾಶನ ನೀಡಲಾಗುವುದು. ಈ ಯೋಜನೆಯಡಿ 966595 ಫಲಾನುಭವಿಗಳಿಗೆ ಕೇಂದ್ರ ಸರ್ಕಾರದ ಸಹಾಯಧನ ನೀಡಲು ಅನುಮತಿಸಲಾಗಿದೆ.
ಪಿಂಚಣಿ ವಿವರ ಕೆಳಗಿನಂತಿದೆ.
ವಯಸ್ಸು
|
ಪಿಂಚಣಿ ಮೊತ್ತ (ಪ್ರತಿ ತಿಂಗಳಿಗೆ)
|
ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲು
|
ಕೇಂದ್ರ
|
ರಾಜ್ಯ
|
60-64
|
ರೂ.200/-
|
ರೂ.200/-
|
-
|
65-79
|
ರೂ.500/-
|
ರೂ.200/-
|
ರೂ.300/-
|
80 ವರ್ಷ ಮೇಲ್ಪಟ್ಟು
|
ರೂ.750/-
|
ರೂ.500/-
|
ರೂ.250/-
|
2.ರಾಷ್ಟ್ರೀಯ ಕುಟುಂಬ ನೆರವು ಯೋಜನೆಃ ಬಡತನ ರೇಕೆಗಿಂತ ಕೆಳಗೆ ಇರುವ ಕುಟುಂಬದ 18 ಕ್ಕಿಂತ ಹೆಚ್ಚಿಗೆ ಮತ್ತು 50 ಕ್ಕಿಂತ ಕಡಿಮೆ ವಯಸ್ಸುಳ್ಳ ದುಡಿಯುವ ವ್ಯಕ್ತಿಯ ಮರಣವಾದಲ್ಲಿ ರೂ.20,000/-ಗಳ(ಒಂದು ಬಾರಿ ಮಾತ್ರ) ಸಹಾಯಧನವನ್ನು ದಿನಾಂಕಃ 01/04/2013 ರಿಂದ ನೀಡಲಾಗುತ್ತಿದೆ. ರಾಷ್ಟ್ರೀಯ ಕುಟುಂಬ ನೆರವು ಯೋಜನೆಯಡಿ 18312 ಫಲಾನುಭವಿಗಳಿಗೆ ಕೇಂದ್ರ ಸರ್ಕಾರದ ಸಹಾಯಧನ ನೀಡಲು ಅನುಮತಿಸಲಾಗಿದೆ.
3.ಇಂದಿರಾಗಾಂಧಿ ರಾಷ್ಟ್ರೀಯ ವಿಧವಾ ವೇತನ ಯೋಜನೆಃ ಕೇಂದ್ರ ಸರ್ಕಾರವು ರೂ.300/-ಗಳ ಮಾಸಾಶನವನ್ನು 40 ರಿಂದ 79 ವರ್ಷದ ಹಾಗೂ ಬಡತನ ರೇಖೆಗಿಂತ ಕೆಳಗಿರುವ ವಿಧವೆಯರಿಗೆ ನೀಡಲಾಗಿತ್ತಿದೆ. ಪ್ರಸ್ತುತ ಈಗಾಗಲೇ ರಾಜ್ಯ ಸರ್ಕಾರದ ನಿರ್ಗತಿಕ ವಿಧವಾ ವೇತನದಡಿ ಮಾಸಾಶನ ಪಡೆಯುತ್ತಿರುವ 465363 ವಿಧವೆಯರಿಗೆ ಸಹಾಯಧನ ನೀಡಲು ಅನುಮತಿಸಿರುತ್ತದೆ.
4. ಇಂದಿರಾಗಾಂಧಿ ರಾಷ್ಟ್ರೀಯ ಅಂಗವಿಕಲರ ವೇತನ ಯೋಜನೆಃ ಕೇಂದ್ರ ಸರ್ಕಾರವು ರೂ.300/-ಗಳ ಮಾಸಾಶನವನ್ನು 18 ರಿಂದ 79 ವರ್ಷದ ಹಾಗೂ ಬಡತನ ರೇಖೆಗಿಂತ ಕೆಳಗಿರುವ ಹಾಗೂ ಬಹುವಿಧ ಅಂಗವಿಕಲತೆ ಇರುವ ಅಂಗವಿಕಲರಿಗೆ ನೀಡುತ್ತದೆ. ಪ್ರಸ್ತುತ ಈಗಾಗಲೇ ರಾಜ್ಯ ಸರ್ಕಾರದ ಅಂಗವಿಕಲ ವೇತನದಡಿ ಮಾಸಾಶನ ಪಡೆಯುತ್ತಿರುವ 43639 ಅಂಗವಿಕಲರಿಗೆ ಸಹಾಯಧನ ನೀಡಲು ಅನುಮತಿಸಿರುತ್ತದೆ..
2. ರಾಜ್ಯ ಸರ್ಕಾರ ಪುರಸ್ಕೃತ ಯೋಜನೆಗಳುಃ
ನಿರ್ಗತಿಕ ವಿಧವಾ ವೇತನ ಯೋಜನೆ ಃ ಕಾನೂನು ರೀತ್ಯಾ ಪತಿ ಮೃತಪಟ್ಟಿರುವ 18 ರಿಂದ 64 ವರ್ಷ ವಯಸ್ಸಿನ ನಿರ್ಗತಿಕ ವಿಧವೆಯರಿಗೆ ತಿಂಗಳಿಗೆ ರೂ.500/- ಗಳ ಮಾಸಾಶನವನ್ನು ನೀಡಲಾಗುವುದು. ಮಾಸಾಶನವನ್ನು ಮೃತರಾಗುವವರೆಗೆ ಅಥವಾ ಪುನರ್ವಿವಾಹವಾಗುವವರೆಗೆ ಅಥವಾ ಉದ್ಯೋಗ ಪಡೆದುಕೊಂಡು ಅವರ ವಾರ್ಷಿಕ ಆದಾಯ ಗ್ರಾಮೀಣ ಪ್ರಧೇಶದಲ್ಲಿ ರೂ.12000/- (ರೂ. ಹನ್ನೇರಡು ಸಾವಿರ) ಕ್ಕಿಂತ ಹೆಚ್ಚಿಗೆ ಪಡೆಯುವವರೆಗೆ ಹಾಗೂ ನಗರ ಪ್ರದೇಶಗಳಲ್ಲಿ ರೂ.17000/- (ರೂ, ಹದಿನೇಳು ಸಾವಿರ) ಕ್ಕಿಂತ ಹೆಚ್ಚಿಗೆ ಪಡೆಯುವವರೆಗೆ ನೀಡಲಾಗುವುದು. 2013-14 ನೇ ಸಾಲಿಸಲ್ಲಿ ಈ ಯೋಜೆಯಡಿ 1207320 ಫಲಾನುಭವಿಗಳಿಗೆ ಪಿಂಚಣಿ ನೀಡಲಾಗಿದೆ.
ಅಂಗವಿಕಲರ ಮಾಸಾಶನ ಯೋಜನೆಃ ಶೇಕಡಾ 40 ಕ್ಕಿಂತ ಮೇಲ್ಪಟ್ಟ ಕೆಳಕಂಡ ಅಂಗವಿಕಲತೆ ಹೊಂದಿರುವ ಅಂಗವಿಕಲರಿಗೆ ತಿಂಗಳಿಗೆ ರೂ. 500/- ಹಾಗೂ ಶೇಕಡಾ 75 ರಷ್ಟು ಹಾಗೂ ಅದಕ್ಕಿಂತ ಹೆಚ್ಚು ಅಂಗವಿಕಲತೆಯುಳ್ಳ ವ್ಯಕ್ತಿಗಳಿಗೆ ರೂ.1200/- ಮಾಸಿಕ ವೇತನ ನೀಡಲಾಗುವುದು ಹಾಗೂ ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶಗಳಲ್ಲಿ ರೂ.12000/- (ರೂ. ಹನ್ನೇರಡು ಸಾವಿರ) ಕ್ಕಿಂತ ಹೆಚ್ಚಿಗೆ ಪಡೆಯುವವರೆಗೆ ಹಾಗೂ ನಗರ ಪ್ರದೇಶಗಳಲ್ಲಿ ರೂ.17000/- (ರೂ, ಹದಿನೇಳು ಸಾವಿರ) ಕ್ಕಿಂತ ಹೆಚ್ಚಿಗೆ ಪಡೆಯುವವರೆಗೆ ನೀಡಲಾಗುವುದು.
ಅ)ಅಂಧತ್ವ/ಮಂದ ದೃಷ್ಟಿ
ಆ)ಕುಷ್ಠರೋಗ ನಿವಾರಿತರಾದ.
ಇ) ಶ್ರವಣ ದೋಷವುಳ್ಳವರು.
ಈ) ಚಲನ ವಲನ ಅಂಗವಿಕಲತೆ.
ಉ)ಬುದ್ಧಿಮಾಂಧ್ಯತೆ.
ಊ)ಮಾನಸಿಕ ಅಸ್ವಸ್ಥತೆ.
ಈ ಯೋಜನೆಯಡಿ 2013-14 ನೇ ಸಾಲಿನಲ್ಲಿ 672934 ಫಲಾನುಭವಿಗಳಿಗೆ ಪಿಂಚಣಿಯನ್ನು ನೀಡಲಾಗಿದೆ.
ಸಂಧ್ಯಾ ಸುರಕ್ಷಾ ಯೋಜನೆಃ 65 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ ವಾರ್ಷಿಕ ಆದಾಯ ರೂ. 20,000/- ಕ್ಕಿಂತ ಕಡಿಮೆ ಇರುವ ವ್ಯಕ್ತಿಗಳಿಗೆ ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ ದಿಶೆಯಲ್ಲಿ ಮಾಸಿಕ ರೂ.500/- ಮಾಸಾಶನವನ್ನು ನೀಡಲಾಗುತ್ತದೆ. ಅರ್ಹ ವ್ಯಕ್ತಿಗಳು ಕೆಳಕಂಡ ಉದ್ಯೋಗ ನಿರತರಾಗಬೇಕಿರುತ್ತದೆ.
ಅ) ಸಣ್ಣ ರೈತರು.
ಆ) ಅತೀ ಸಣ್ನ ರೈತರು.
ಇ)ಕೃಷಿ ಕಾರ್ಮಿಕರು.
ಈ)ನೇಕಾರರು.
ಉ)ಮೀನುಗಾರರು.
ಊ)ಅಸಂಘಟಿತ ವಲಯದ ಕಾರ್ಮಿಕರು (ಕಟ್ಟಡ ಹಾಗೂ ಇತರೆ ನಿರ್ಮಾಣದ ಕಾರ್ಮಿಕರು ಈ ಯೋಜನೆಯಡಿಯಲ್ಲಿ ಅರ್ಹರಾಗಿರುವುದಿಲ್ಲ)
ಈ ಯೋಜನೆಯಡಿ 2013-14 ನೇ ಸಾಲಿನಲ್ಲಿ 1558201 ಫಲಾನುಭವಿಗಳಿಗೆ ಪಿಂಚಣಿಯನ್ನು ವಿತರಿಸಲಾಗಿದೆ.
ಆದರ್ಶ ವಿವಾಹ ಯೋಜನೆ:
ರಾಜ್ಯದಲ್ಲಿ ಸರಳ ಸಾಮೂಹಿಕ ವಿವಾಹಗಳನ್ನು ಜನಪ್ರಿಯಗೊಳಿಸಲು ಕನಿಷ್ಟ 25 ವಿವಾಹಗಳು ನಗರ ಪ್ರದೇಶಗಳಲ್ಲಿ ಮತ್ತು ಕನಿಷ್ಟ 10 ವಿವಾಹಗಳು ಗ್ರಾಮಾಂತರ ಪ್ರದೇಶಗಳಲ್ಲಿ ನಡೆದ ಕಾರ್ಯಕ್ರಮಕ್ಕೆ ಪ್ರತಿ ವಿವಾಹಕ್ಕೆ 2 ವರ್ಷದ ಠೇವಣಿ ರೂಪದಲ್ಲಿ ರೂ.10,000/- ಗಳ ಪ್ರೋತ್ಸಾಹ ಧನ ನೀಡಲಾಗುವುದು.
ಅಂತ್ಯ ಸಂಸ್ಕಾರ ಯೋಜನೆ:
ಬಡತನ ರೇಖೆಗಿಂತ ಕೆಳಮಟ್ಟದಲ್ಲಿರುವ ಕುಟುಂಬದ ಸದಸ್ಯರು ಮೃತಪಟ್ಟಲ್ಲಿ ಅವರ ಅಂತಿಮ ಕ್ರಿಯೆಗಾಗಿ ನೆರವು ನೀಡಲು ರೂ.1000/- ಗಳನ್ನು ನೀಡಲಾಗುವುದು.
ಆಮ್ ಆದ್ಮಿ ಬೀಮಾ ಯೋಜನೆ (ಕೇಂದ್ರ ಪುರಸ್ಕೃತ ಯೋಜನೆ):
ಗ್ರಾಮೀಣ ಭೂರಹಿತ ಕುಟುಂಬಗಳ ಜೊತೆಗೆ 72 ವಿವಿಧ ಕಸುಬುದಾರರ ಕುಟುಂಬಗಳಿಗೆ ಮರಣ/ ಅಂಗವಿಕಲತೆಯ ಸಂದರ್ಭದಲ್ಲಿ ಆರ್ಥಿಕ ನೆರವು ನೀಡಲು ಭಾರತ ಸರ್ಕಾರದ ಸಹಭಾಗಿತ್ವದಲ್ಲಿ ರಾಜ್ಯ ಸರ್ಕಾರವು ಆಮ್ ಆದ್ಮಿ ಬೀಮಾ ಯೋಜನೆಯನ್ನು ಜಾರಿಗೆ ತಂದಿದೆ. ಪ್ರತಿ ಕುಟುಂಬದ ಮುಖ್ಯಸ್ಥರಿಗೆ ರೂ.200/- ಗಳ ವಿಮಾ ಕಂತನ್ನು ಭಾರತೀಯ ಜೀವನ ಬೀಮಾ ನಿಗಮಕ್ಕೆ ನೀಡಲಾಗುವುದು. ಇದರಲ್ಲಿ ರೂ.100/- ಗಳನ್ನು ರಾಜ್ಯ ಸರ್ಕಾರ ಮತ್ತು ಉಳಿದ ರೂ.100/- ಗಳನ್ನು ಕೇಂದ್ರ ಸರ್ಕಾರ ಭರಿಸುತ್ತದೆ.
ಯೋಜನೆಯ ಲಾಭಗಳು:
- ನೈಸರ್ಗಿಕ ಸಾವು ರೂ.30,000/-
- ಆಕಸ್ಮಿಕ ಸಾವು ರೂ. 75,000/-
- ಶಾಶ್ವತ ಅಂಗವಿಕಲತೆ ರೂ.75,000/-
- ಭಾಗಶಃ ಅಂಗವಿಕಲತೆ ರೂ.37,500/-
- ವಿದ್ಯಾರ್ಥಿ ವೇತನ : ಎರಡು ಮಕ್ಕಳಿಗೆ ಸೀಮಿತ 9 ರಿಂದ 12ನೇ ತರಗತಿವರೆಗೆ ಮಾತ್ರ ಪ್ರತಿ ತಿಂಗಳಿಗೆ ರೂ.100/- ಪ್ರತಿ ವಿದ್ಯಾರ್ಥಿಗೆ
ಈ ಯೋಜನೆಯ ಪ್ರಾರಂಭದಿಂದ ನೋಂದಣಿಯಾಗಿದ್ದ 649004 ಫಲಾನುಭವಿಗಳ ಜೊತೆಗೆ 2013-14ನೇ ಸಾಲಿನಲ್ಲಿ ಗುರುತಿಸಲಾದ 360806 ಫಲಾನುಭವಿಗಳು ಸೇರಿ ಒಟ್ಟು 1009810 ಫಲಾನುಭವಿಗಳನ್ನು ವಿಮಾ ಸೌಲಭ್ಯದಡಿ ಒಳಪಡಿಸಲಾಗಿದೆ.
ಮನಸ್ವಿನಿ ಯೋಜನೆ:
ರಾಜ್ಯದಲ್ಲಿನ ಬಡತನ ರೇಖೆಗಿಂತ ಕೆಳಗಿರುವ 40 ರಿಂದ 64 ವರ್ಷದೊಳಗಿನ ಅವಿವಾಹಿತ ಹಾಗೂ ವಿಚ್ಛೇಧಿತ ಮಹಿಳೆಯರಿಗೆ ಆರ್ಥಿಕ ಸೌಲಭ್ಯವನ್ನು ಒದಗಿಸಿ ಸಮಾಜದ ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಸರ್ಕಾರದ ಆದೇಶ ಸಂಖ್ಯೆ:ಆರ್ ಡಿ 95 ಡಿಎಸ್ ಪಿ 2013, ದಿನಾಂಕ:01.08.2013 ರನ್ವಯ ಜಾರಿಗೆ ತರಲಾಗಿದೆ. ಈ ಯೋಜನೆಯಡಿ 2013-14ನೇ ಸಾಲಿನಲ್ಲಿ 11929 ಫಲಾನುಭವಿಗಳಿಗೆ ಪಿಂಚಣಿಯನ್ನು ನೀಡಲಾಗಿದೆ.
ಮೈತ್ರಿ ಯೋಜನೆ:
ರಾಜ್ಯದಲ್ಲಿನ ಸಾಮಾಜಿಕ ಹಾಗೂ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಹಾಗೂ ಬಡತನ ರೇಖೆಗಿಂತ ಕೆಳಗಿರುವ ಲಿಂಗತ್ವ ಅಲ್ಪಸಂಖ್ಯಾತರಿಗೆ (ಹಿಜ್ರಾಗಳು, ಕೋಥಿಗಳು, ಜೋಗಪ್ಪಂದಿರುವ/ಎಫ್ ಟುಎಂ/ ಎಂಟುಎಫ್/ಮಂಗಳ ಮುಖಿಯರು) ಸಹಾಯ ನೀಡುವ ಉದ್ದೇಶದಿಂದ ಸರ್ಕಾರದ ಆದೇಶ ಸಂಖ್ಯೆ:ಆರ್ ಡಿ 94 ಡಿಎಸ್ ಪಿ 2013, ದಿನಾಂಕ:01.08.2013 ರನ್ವಯ ಜಾರಿಗೆ ತರಲಾಗಿದೆ. ಈ ಯೋಜನೆಯಡಿ 2013-14ನೇ ಸಾಲಿನಲ್ಲಿ 213 ಫಲಾನುಭವಿಗಳಿಗೆ ಪಿಂಚಣಿಯನ್ನು ನೀಡಲಾಗಿದೆ.
ಸಾಮಾಜಿಕ ಭದ್ರತಾ ಯೋಜನೆಗಳಡಿಯಲ್ಲಿ 2013-14ನೇ ಸಾಲಿನಲ್ಲಿ ಸಾಧಿಸಿದ ಪ್ರಗತಿ ವರದಿಯ ಅಂಕಿ ಅಂಶಗಳ ಭೌತಿಕ ಹಾಗೂ ಆರ್ಥಿಕ ಪ್ರಗತಿಯ ವರದಿ
ಕ್ರ.ಸಂ |
ಯೋಜನೆಗಳು
|
ಬಿಡುಗಡೆಯಾದ ಅನುದಾನ (ಕೋಟಿಗಳಲ್ಲಿ)
|
2013-14ನೇ ಸಾಲಿನ ಫಲಾನುಭವಿಗಳ ಸಂಖ್ಯೆ
|
2013-14ನೇ ಸಾಲಿನ ಅನುದಾನದ ಒಟ್ಟು ಖರ್ಚು (ಕೋಟಿಗಳಲ್ಲಿ)
|
ಮಾಸಿಕ ಪೋಷಣಾ ಭತ್ಯೆ ಯೋಜನೆಗಳು
|
1
|
ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ದಾಪ್ಯ ವೇತನ
|
700.00
|
591532
|
325.76
|
2
|
ನಿರ್ಗತಿಕ ವಿಧವಾ ವೇತನ
|
639.36
|
1207320
|
639.36
|
3
|
ಅಂಗವಿಕಲ ವೇತನ ಶೇ.40 ಕ್ಕಿಂತ ಹೆಚ್ಚು ಅಂಗವೈಕಲ್ಯತೆ ಹೊಂದಿರುವ ಫಲಾನುಭವಿಗಳ ಸಂಖ್ಯೆ
|
568.09
|
416207
|
554.74
|
ಶೇ.75 ಕ್ಕಿಂತ ಹೆಚ್ಚು ಅಂಗವೈಕಲ್ಯತೆ ಹೊಂದಿರುವ ಫಲಾನುಭವಿಗಳ ಸಂಖ್ಯೆ
|
256727
|
4
|
ಸಂಧ್ಯಾ ಸುರಕ್ಷಾ ಯೋಜನೆ
|
869.31
|
1558201
|
869.31
|
5
|
ಮನಸ್ವಿನಿ ಯೋಜನೆ
|
ಪ್ರತ್ಯೇಕ ಅನುದಾನ ಬಿಡುಗಡೆಯಾಗಿರುವುದಿಲ್ಲ
|
11929
|
ಮನಸ್ವಿನಿ ಯೋಜನೆಗೆ ವಿಧವಾ ವೇತನದಡಿ ಬಿಡುಗಡೆಯಾದ ಅನುದಾನದಲ್ಲಿ ಭರಿಸಲಾಗಿದೆ.
|
6
|
ಮೈತ್ರಿ ಯೋಜನೆ
|
ಪ್ರತ್ಯೇಕ ಅನುದಾನ ಬಿಡುಗಡೆಯಾಗಿರುವುದಿಲ್ಲ
|
215
|
ಮೈತ್ರಿ ಯೋಜನೆಗೆ ಅಂಗವಿಕಲ ವೇತನದಡಿ ಬಿಡುಗಡೆಯಾದ ಅನುದಾನದಲ್ಲಿ ಭರಿಸಲಾಗಿದೆ.
|
ಇತರೆ ಸಾಮಾಜಿಕ ಭದ್ರತಾ ಯೋಜನೆಗಳು:
|
1
|
ರಾಷ್ಟ್ರೀಯ ಕುಟುಂಬ ನೆರವು ಯೋಜನೆ
|
45.00
|
17000
|
34.00
|
2
|
ಅಂತ್ಯ ಸಂಸ್ಕಾರ ನೆರವು ಯೋಜನೆ
|
10.00
|
51800
|
5.18
|
3
|
ಆದರ್ಶ ವಿವಾಹ ಯೋಜನೆ
|
3.08
|
1440
|
1.44
|
4
|
ಆಮ್ ಆದ್ಮಿ ಬೀಮಾ ಯೋಜನೆ
|
7.50
|
1009810
|
5.22
|
No comments:
Post a Comment