ಏಷ್ಯನ್ ಪ್ಯಾರಾ ಕ್ರೀಡಾಕೂಟ: ಮಂಗಳವಾರ 11 ಪದಕ ಗೆದ್ದ ಭಾರತದ ಸ್ಪರ್ಧಿಗಳು
ಏಕ್ತಾ, ನಾರಾಯಣ್, ಮನೀಷ್‌ಗೆ ಚಿನ್ನ
ಜಕಾರ್ತ (ಪಿಟಿಐ): ಅಮೋಘ ಸಾಮರ್ಥ್ಯ ತೋರಿದ ಏಕ್ತಾ ಬಯಾನ್, ನಾರಾಯಣ್ ಠಾಕೂರ್ ಮತ್ತು ಮನೀಷ್ ನರ್ವಾಲ್ ಅವರು ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಚಿನ್ನದ ಪದಕಗಳಿಗೆ ಮುತ್ತಿಕ್ಕಿದ್ದಾರೆ.
ಮಂಗಳವಾರ ಭಾರತದ ಖಾತೆಗೆ ಒಟ್ಟು 11 ಪದಕಗಳು ಸೇರ್ಪಡೆಯಾಗಿವೆ.
ಮಹಿಳೆಯರ ಎಫ್ 32/51 ವಿಭಾಗದ ಕ್ಲಬ್ ಥ್ರೋ ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದ ಏಕ್ತಾ, ಫೈನಲ್‌ನಲ್ಲಿ 16.02 ಮೀಟರ್ಸ್ ಸಾಮರ್ಥ್ಯ ತೋರಿ ಮೊದಲ ಸ್ಥಾನ ತಮ್ಮದಾಗಿಸಿಕೊಂಡರು.
ಯುನೈಟೆಡ್ ಅರಬ್ ಎಮಿರೇಟ್ಸ್‌ನ (ಯುಎಇ) ಅಲಕಾಬಿ ಥೆಕ್ರಾ ಬೆಳ್ಳಿಯ ಪದಕ ಗೆದ್ದರು. ಅವರಿಂದ 15.75 ಮೀಟರ್ಸ್ ಸಾಮರ್ಥ್ಯ ಮೂಡಿಬಂತು. ಏಕ್ತಾ ಅವರು ಈ ವರ್ಷದ ಆರಂಭದಲ್ಲಿ ನಡೆದಿದ್ದ ಇಂಡಿಯಾ ಓಪನ್ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಸಾಧನೆ ಮಾಡಿದ್ದರು.
ಪುರುಷರ ಟಿ–35 ವಿಭಾಗದ 100 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ಠಾಕೂರ್ ಪಾರಮ್ಯ ಮೆರೆದರು. ಆರಂಭದಿಂದಲೂ ಚುರುಕಾಗಿ ಓಡಿದ ಅವರು 14.02 ಸೆಕೆಂಡುಗಳಲ್ಲಿ ಅಂತಿಮ ರೇಖೆ ಮುಟ್ಟಿ ಸಂಭ್ರಮಿಸಿದರು.
ಸೌದಿ ಅರೇಬಿಯಾದ ಅದಾವಿ ಅಹ್ಮದ್ (14.40ಸೆ.) ಮತ್ತು ಹಾಂಕಾಂಗ್‌ನ ಯಿಯು ಚುಯಿ ಬಾವೊ (14.62ಸೆ.) ಅವರು ಕ್ರಮವಾಗಿ ಈ ವಿಭಾಗದ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಪಡೆದರು.
ಎಸ್‌ಎಚ್–1 ವಿಭಾಗದ 10 ಮೀಟರ್ಸ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮನೀಷ್ ಚಿನ್ನಕ್ಕೆ ಮುತ್ತಿಕ್ಕಿದರು.
ಪುರುಷರ ಎಫ್ 43/44, ಎಫ್ 62/64 ವಿಭಾಗದ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಸುರೇಂದರ್ ಅನೀಶ್ ಕುಮಾರ್, ಟಿ 45/46/47 ವಿಭಾಗದ ಹೈಜಂಪ್‌ನಲ್ಲಿ ರಾಂಪಾಲ್ ಮತ್ತು ಎಫ್ 56/57 ವಿಭಾಗದ ಶಾಟ್‌ಪಟ್‌ನಲ್ಲಿ ವೀರೇಂದರ್ ಬೆಳ್ಳಿಯ ಪದಕಗಳಿಗೆ ಕೊರಳೊಡ್ಡಿದರು.
ಪುರುಷರ ಎಫ್ 11 ವಿಭಾಗದ ಶಾಟ್‌ಪಟ್‌ನಲ್ಲಿ ಮೋನು ಗಾಂಗಸ್, ಟಿ 44/62/64 ವಿಭಾಗದ 200 ಮೀಟರ್ ಓಟದಲ್ಲಿ ಆನಂದನ್ ಗುಣಶೇಖರನ್ ಮತ್ತು ಮಹಿಳೆಯರ ಟಿ 45/46/47 ವಿಭಾಗದ 200 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ಜಯಂತಿ ಬೆಹ್ರಾ ಅವರು ಕಂಚಿನ ಪದಕಗಳನ್ನು ಜಯಿಸಿದರು. ಪುರುಷರ ಎಫ್ 46 ವಿಭಾಗದ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಗುರ್ಜರ್ ಕಂಚಿನ ಸಾಧನೆ ಮಾಡಿದರು.
ಒಟ್ಟು 28 ಪದಕಗಳನ್ನು ಗೆದ್ದಿರುವ ಭಾರತ ಪದಕ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. 73 ಚಿನ್ನ, 32 ಬೆಳ್ಳಿ ಮತ್ತು 29 ಕಂಚಿನ ಪದಕಗಳನ್ನು ಜಯಿಸಿರುವ ಚೀನಾ ಅಗ್ರಸ್ಥಾನ ತನ್ನದಾಗಿಸಿಕೊಂಡಿದೆ. ದಕ್ಷಿಣ ಕೊರಿಯಾ ತಂಡ ಎರಡನೇ ಸ್ಥಾನ ಹೊಂದಿದೆ.
ವೇಟ್‌ಲಿಫ್ಟಿಂಗ್‌ನಲ್ಲಿ ಸಾಧನೆ ಮಾಡಿದ ಜೆರೆಮೈ ಲಾಲ್‌ರಿನುಂಗಾ
ಯೂತ್ ಒಲಿಂಪಿಕ್ಸ್: ಭಾರತಕ್ಕೆ ಮೊದಲ ಚಿನ್ನ
ಬ್ಯೂನಸ್ ಐರಿಸ್, ಅರ್ಜೆಂಟೀನಾ (ಪಿಟಿಐ): ಜೆರೆಮೈ ಲಾಲ್‌ರಿನುಂಗಾ ಅವರು ಯೂತ್ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತಕ್ಕೆ ಮೊಟ್ಟಮೊದಲ ಚಿನ್ನದ ಪದಕದ ಕಾಣಿಕೆ ನೀಡಿದರು.
ಮಂಗಳವಾರ ನಡೆದ ಬಾಲಕರ ವೇಟ್‌ಲಿಫ್ಟಿಂಗ್ 62 ಕೆ.ಜಿ. ವಿಭಾಗದಲ್ಲಿ ಒಟ್ಟು 274 ಕೆ.ಜಿ. (ಸ್ನ್ಯಾಚ್ 124 ಕೆ.ಜಿ+ಜರ್ಕ್ 150 ಕೆ.ಜಿ) ಭಾರ ಎತ್ತಿದ ಅವರು ಪ್ರಥಮ ಸ್ಥಾನ ಗಳಿಸಿ
ದರು. ಐಜ್ವಾಲ್‌ನ ಜೆರೆಮೈ ಅವರು ಇದೇ 26ರಂದು 16ನೇ ವಸಂತಕ್ಕೆ ಕಾಲಿಡಲಿದ್ದಾರೆ.
ದರು. ಐಜ್ವಾಲ್‌ನ ಜೆರೆಮೈ ಅವರು ಇದೇ 26ರಂದು 16ನೇ ವಸಂತಕ್ಕೆ ಕಾಲಿಡಲಿದ್ದಾರೆ.
ಅವರು ಈಚೆಗೆ ನಡೆದಿದ್ದ ಯೂತ್ ಏಷ್ಯನ್ ಮತ್ತು ಜೂನಿಯರ್ ಏಷ್ಯನ್ ಚಾಂಪಿಯನ್‌ಷಿಪ್‌ಗಳಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದಿದ್ದರು.
ಈ ವಿಭಾಗದಲ್ಲಿ ಟರ್ಕಿಯ ಟಾಪ್‌ಟಾಸ್ ಕ್ಯಾನರ್ (ಎತ್ತಿದ ಭಾರ; 263 ಕೆ.ಜಿ) ಮತ್ತು ಕೊಲಂಬಿಯಾದ ವಿಲ್ಲಾರ್ ಎಸ್ತಿವೆನ್ ಜೋಸ್ (260 ಕೆ.ಜಿ) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಪಡೆದರು.
ಈ ಕೂಟದಲ್ಲಿ ಈಗಾಗಲೇ ಭಾರತವು ನಾಲ್ಕು ಪಖದಗಳನ್ನು ಜಯಿಸಿದೆ. ಅದರಲ್ಲಿ ತುಷಾರ ಮಾನೆ ಮತ್ತು ಮೆಹುಲಿ ಘೋಷ್ ಅವರು ಬೆಳ್ಳಿ ಪದಕ ಜಯಿಸಿದ್ದಾರೆ. ತಂಗಜಾಮ್ ತಬಾಬಿ ದೇವಿ ಅವರು ಜೂಡೊದಲ್ಲಿ ಮೊದಲ ಪದಕ ಗೆದ್ದಿದ್ದರು. 2014ರಲ್ಲಿ ಚೀನಾದ ನಾನ್‌ಜಿಂಗ್‌ನಲ್ಲಿ ನಡೆದಿದ್ದ ಕೂಟದಲ್ಲಿ ಭಾರತ ತಂಡವು ಒಂದು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಗೆದ್ದಿತ್ತು. 2010ರಲ್ಲಿ ಸಿಂಗಪುರದಲ್ಲಿ ನಡೆದಿದ್ದ ಮೊದಲ ಕೂಟದಲ್ಲಿ ಭಾರತವು ಆರು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಗಳಿಸಿತ್ತು.
ಸ್ನೇಹಾಗೆ ನಿರಾಸೆ: ಬಾಲಕಿಯರ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಸ್ನೇಹಾ
ಸೊರೇನ್ ಅವರು ನಿರಾಶೆ ಅನುಭವಿಸಿದರು. 48 ಕೆ.ಜಿ. ವಿಭಾಗದಲ್ಲಿ ಅವರು ಐದನೇ ಸ್ಥಾನ ಪಡೆದರು.
ಸೊರೇನ್ ಅವರು ನಿರಾಶೆ ಅನುಭವಿಸಿದರು. 48 ಕೆ.ಜಿ. ವಿಭಾಗದಲ್ಲಿ ಅವರು ಐದನೇ ಸ್ಥಾನ ಪಡೆದರು.
ಕನ್ನಡಿಗ ಶ್ರೀಹರಿಗೆ ಆರನೇ ಸ್ಥಾನ: ಬಾಲಕರ ಈಜು ವಿಭಾಗದಲ್ಲಿ ಬೆಂಗಳೂರಿನ ಶ್ರೀಹರಿ ನಟರಾಜ್ ಅವರು ಪದಕ ಜಯಿಸುವಲ್ಲಿ ಯಶಸ್ವಿಯಾಗಲಿಲ್ಲ.
100 ಮೀಟರ್ಸ್ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ವರು ಆರನೇ ಸ್ಥಾನ ಪಡೆದರು.
ಅರ್ಚನಾ ಕಾಮತ್‌ಗೆ ಜಯ: ಕನ್ನಡದ ಹುಡುಗಿ ಅರ್ಚನಾ ಕಾಮತ್ ಅವರುಟೇಬಲ್ ಟೆನಿಸ್‌ನಲ್ಲಿ ಬಾಲಕಿಯರ ಸಿಂಗಲ್ಸ್‌ನಲ್ಲಿ ಮುನ್ನಡೆ ಸಾಧಿಸಿದರು.
ಅರ್ಚನಾ 4–2 ರಿಂದ ಮಲೇಷ್ಯಾದ ಜೇವನ್ ಚೂಂಗ್ ವಿರುದ್ಧ ಜಯಿಸಿದರು.
ಇನ್ನೊಂದು ಪಂದ್ಯದಲ್ಲಿ; ಮಾನವ್ ಠಕ್ಕರ್ 4–1ರಿಂದ ಸ್ಲೋವಾಕಿಯಾದ ಅಲೆಕ್ಸಾಂಡ್ರಾ ವೋಕ್ ವಿರುದ್ಧ ಗೆದ್ದರು.
ಲಕ್ಷ್ಯ ಸೇನ್‌ಗೆ ಗೆಲುವು: ಉದಯೋನ್ಮುಖ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಬಾಲಕರ ಸಿಂಗಲ್ಸ್‌ನಲ್ಲಿ ಶುಭಾರಂಭ ಮಾಡಿದ್ದಾರೆ.
ಮೊದಲ ಪಂದ್ಯದಲ್ಲಿ ಅವರು 23–21, 21–8ರಿಂದ ಉಕ್ರೇನ್‌ನ ಡೆನೈಲೊ ಬೊಸ್ನಿಯಕ್ ಅವರನ್ನು ಮಣಿಸಿದರು.
ಮನು ಭಾಕರ್‌ಗೆ ಚಿನ್ನ: ಭಾರತದ ಶೂಟರ್ ಮನು ಭಾಕರ್ ಅವರು ಯೂತ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದರು. 16 ವರ್ಷದ ಮನು ಅವರು 10 ಮೀಟರ್ಸ್ ಏರ್ ಪಿಸ್ತೂಲ್ ವಿಭಾಗದಲ್ಲಿ 236.5 ಪಾಯಿಂಟ್ಸ್‌ಗಳನ್ನು ಗಳಿಸಿ ಪ್ರಥಮರಾದರು.
No comments:
Post a Comment