ಡಾ. ಶ್ರೀಲತಾ ಪದ್ಯಾಣ
ಎ ಲ್ಲರ ಯೋಚನೆ, ಮನಃಸ್ಥಿತಿ, ಭಾವನೆಗಳು ಒಂದೇ ತರಹ ಇರುವುದಿಲ್ಲ; ಅವು ಪ್ರತಿಕ್ಷಣಕ್ಕೂ ಬದಲಾಗುತ್ತಿರುತ್ತವೆ. ಒಬ್ಬ ವ್ಯಕ್ತಿಯಲ್ಲಿರುವ ಭಾವನೆಗಳು ಇನ್ನೊಬ್ಬನಲ್ಲಿರುವುದಿಲ್ಲ. ಆಸೆ–ಆಕಾಂಕ್ಷೆಗಳು, ಚಿಂತನೆಗಳು, ಬದುಕಿನ ದಾರಿ – ಇವು ಅವರವರ ಮನೋವೇಗಕ್ಕೆ ತಕ್ಕಂತೆ ಇರುತ್ತವೆ. ಮನಸ್ಸಿನ ದಾರಿಯೇ ಹಾಗೆ, ಅಂಚಿಲ್ಲದ ವಿಶಾಲ ಆಗಸದಂತೆ! ಆದರೆ ಅದು ಕೈಗೆಟುಕದಷ್ಟು ಎತ್ತರದಲ್ಲಿಲ್ಲ. ನಮ್ಮ ಕೈಯಲ್ಲೇ ಇದ್ದು ನಮ್ಮನ್ನೇ ಕುಣಿಸುತ್ತಿರುತ್ತದೆ. ಮನೋವಿಜ್ಞಾನಿ ಸಿಗ್ಮಂಡ್ ಫ್ರಾಯ್ಡ್ ಮನಸ್ಸಿನ ಬಗ್ಗೆ ಹೇಳಿದ ಮಾತೆಂದರೆ ‘ನಾವು ನಮಗರಿವಿಲ್ಲದಂತೆ ನಮ್ಮ ಆಸೆ, ನಿರಾಶೆ, ಬಯಕೆ, ಗಳಿಕೆ – ಎಲ್ಲವನ್ನೂ ಸುಪ್ತಮನಸ್ಸಿನಲ್ಲಿ ಹುದುಗಿಡುತ್ತೇವೆ. ಅದು ಒಂದು ಸೂಕ್ತ ಸಮಯ ಬಂದಾಗ ಒತ್ತಡ ನಿರ್ಮಾಣವಾಗಿ ಮನೋವೇದನೆಗಳಾಗಿ ಪರಿವರ್ತನೆಯಾಗುವುದು’.
ನಮ್ಮ ಮೆದುಳಿನಲ್ಲಿರುವ ದ್ರವಗಳಾದ ಎಂಡಾರ್ಫಿನ್ ಹಾಗೂ ಸೆರಟೋನಿನ್ ಮೊದಲಾದವುಗಳು ನಮ್ಮ ಮಾನಸಿಕ ಆರೋಗ್ಯಕ್ಕೆ ಕಾರಣವಾಗಿದೆ. ವ್ಯಕ್ತಿಯ ಮನಸ್ಸಿನಲ್ಲಾಗುವ ವ್ಯತ್ಯಾಸವೇ ಮಾನಸಿಕ ಆರೋಗ್ಯ ಅಥವಾ ಅಸ್ಥಿರತೆ; ಅಂದರೆ ಅವರ ವ್ಯಕ್ತಿತ್ವ ಅಥವಾ ಗುಣ–ನಡತೆಗಳ ಬದಲಾವಣೆಗಳೇ ತೊಂದರೆಗಳಿಗೆ ಕಾರಣವಾಗುವುದಿಲ್ಲ. ಪ್ರತಿಯೊಬ್ಬರಿಗೂ ಅವರವೇ ಆದ ಮಾನಸಿಕ ಒತ್ತಡಗಳಿರುತ್ತವೆ. ಆದರೆ ಅಗತ್ಯಕ್ಕಿಂತ ಹೆಚ್ಚಿನ ಒತ್ತಡವನ್ನು ಹೇರಿಕೊಂಡಾಗ ಮನಸ್ಸಿನ ಚಂಚಲತೆ ಹಾಗೂ ಕಾಯಿಲೆಗಳಿಗೆ ಕಾರಣವಾಗುವುದು.
ತಮಗೆ ಮಾನಸಿಕ ರೋಗವಿದೆ – ಎಂದು ಒಪ್ಪಿಕೊಳ್ಳಲು ಅಥವಾ ಹಾಗೆ ಹೇಳಿಕೊಳ್ಳಲು ಹೆಚ್ಚಿನ ಜನರು ಸಿದ್ಧವಿರುವುದಿಲ್ಲ. ಅಂಥವರು ಚಿಕಿತ್ಸೆಗೂ ಮುಂದೆ ಬರುವುದಿಲ್ಲ. ಮನಸ್ಸಿನಲ್ಲಿ ಗೊಂದಲ, ನೋವು ತೀವ್ರವಾಗಿ ಹೇಳಿಕೊಳ್ಳಲಾಗದ ಸ್ಥಿತಿ ಏರ್ಪಟ್ಟು, ಚಿಂತೆ, ಆತಂಕ, ಭಯ, ಖಿನ್ನತೆಗಳು ಕಾಡತೊಡಗಿದರೆ ಅಂಥವರು ತಜ್ಞ ಮನೋವೈದ್ಯರನ್ನು ಮೊದಲು ಭೇಟಿಯಾಗಬೇಕು. ಸೂಕ್ತವಾದ ಚಿಕಿತ್ಸೆಯನ್ನು ಕಂಡುಕೊಂಡಲ್ಲಿ ಮನಸ್ಸಿನ ರೋಗಗಳನ್ನು ವಾಸಿ ಮಾಡಬಹುದು.
‘ನಾನು ಯಾರಿಗೂ ಬೇಡ’, ‘ನನ್ನಿಂದ ಏನೂ ಸಾಧ್ಯವಿಲ್ಲ’ ಎಂದೆನಿಸುವುದು; ಜೀವನವೇ ಬೇಡವೆನಿಸುವುದು, ಆತ್ಮಹತ್ಯೆಯ ಆಲೋಚನೆಗಳು, ಸಹಿಸಲಾರದಷ್ಟು ದುಃಖವಾಗುವುದು, ನಕಾರಾತ್ಮಕ ಯೋಚನೆಗಳು, ಅಂಜಿಕೆಗಳ ರೂಪದಲ್ಲಿ ವ್ಯಕ್ತಿಯನ್ನು ದುರ್ಬಲಗೊಳಿಸುತ್ತಾ ಬರುವ ಕಾಯಿಲೆಯೇ ‘ಖಿನ್ನತೆ’. ಅದು ಯಾರಿಗೂ ಬರಬಹುದು. ಜೀವನದ ಯಾವ ಹಂತಗಳಲ್ಲೂ ಬರಬಹುದು. ಇದಕ್ಕೆ ನಿರ್ದಿಷ್ಟ ಅಥವಾ ಸರಾಸರಿ ವಯಸ್ಸಿನ ಅಂದಾಜಿಲ್ಲ. ಖಿನ್ನತೆ ಎಂಬುದು ದುರ್ಬಲ ಸ್ಥಿತಿಯಾಗಿದ್ದು ವ್ಯಕ್ತಿಯ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ.
ಅವಾಸ್ತವಿಕ ವಿಷಯಗಳನ್ನು ಮನಸ್ಸಿನಲ್ಲಿ ಕಲ್ಪಿಸಿಕೊಂಡವರು ‘ಸ್ಕಿಜೋಫ್ರಿನಿಯಾ’ದಿಂದ ಬಳಲುತ್ತಿ
ರುತ್ತಾರೆ. ಅಂತಹವರಿಗೆ ಯಾವುದು ಸತ್ಯ, ಯಾವುದು ಭ್ರಮೆ ಎಂದು ಗೊತ್ತಾಗದಂತಹ ಗೊಂದಲದ ಪರಿಸ್ಥಿತಿ ಉಂಟಾಗಿರುತ್ತದೆ. ಮೆದುಳಿನ ನರರಸಾಯನಗಳಾದ ಡೋಪಮಿನ್ ಹಾಗೂ ಸೆರಟೋನಿನ್‌ಗಳ ಏರುಪೇರುಗಳಿಂದ ಮಾನಸಿಕ ಕಾಯಿಲೆಗಳು ಉಂಟಾಗುತ್ತವೆ. ಅಸಹಜ ನಡವಳಿಕೆ, ವಿಭಿನ್ನ ವರ್ತನೆ, ಆಲೋಚನೆಗಳಲ್ಲಿ ತೊಂದರೆ, ವಿಭ್ರಾಂತಿ, ನಕಾರಾತ್ಮಕತೆ – ಮುಂತಾದ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ. ಅವಕ್ಕೆ ಆನುವಂಶಿಯತೆ ಕೂಡ ಒಂದು ಕಾರಣವಾಗಿರಬಹುದು. ವ್ಯಕ್ತಿಗೆ ತಾನು ಕಾಯಿಲೆಗೆ ಒಳಗಾಗಿದ್ದೇನೆ ಎಂಬ ಅರಿವು ಇರುವುದಿಲ್ಲ. ಹೀಗಾಗಿ ಮೇಲೆ ತಿಳಿಸಿದ ಲಕ್ಷಣಗಳು ಗೋಚರವಾದರೆ, ಅವು ತೊಂದರೆಗಳಾಗಿ ಕಾಡಲು ಆರಂಭವಾದರೆ ತಜ್ಞವೈದ್ಯರನ್ನು ಕಾಣುವುದು ಒಳಿತು.
ರುತ್ತಾರೆ. ಅಂತಹವರಿಗೆ ಯಾವುದು ಸತ್ಯ, ಯಾವುದು ಭ್ರಮೆ ಎಂದು ಗೊತ್ತಾಗದಂತಹ ಗೊಂದಲದ ಪರಿಸ್ಥಿತಿ ಉಂಟಾಗಿರುತ್ತದೆ. ಮೆದುಳಿನ ನರರಸಾಯನಗಳಾದ ಡೋಪಮಿನ್ ಹಾಗೂ ಸೆರಟೋನಿನ್‌ಗಳ ಏರುಪೇರುಗಳಿಂದ ಮಾನಸಿಕ ಕಾಯಿಲೆಗಳು ಉಂಟಾಗುತ್ತವೆ. ಅಸಹಜ ನಡವಳಿಕೆ, ವಿಭಿನ್ನ ವರ್ತನೆ, ಆಲೋಚನೆಗಳಲ್ಲಿ ತೊಂದರೆ, ವಿಭ್ರಾಂತಿ, ನಕಾರಾತ್ಮಕತೆ – ಮುಂತಾದ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ. ಅವಕ್ಕೆ ಆನುವಂಶಿಯತೆ ಕೂಡ ಒಂದು ಕಾರಣವಾಗಿರಬಹುದು. ವ್ಯಕ್ತಿಗೆ ತಾನು ಕಾಯಿಲೆಗೆ ಒಳಗಾಗಿದ್ದೇನೆ ಎಂಬ ಅರಿವು ಇರುವುದಿಲ್ಲ. ಹೀಗಾಗಿ ಮೇಲೆ ತಿಳಿಸಿದ ಲಕ್ಷಣಗಳು ಗೋಚರವಾದರೆ, ಅವು ತೊಂದರೆಗಳಾಗಿ ಕಾಡಲು ಆರಂಭವಾದರೆ ತಜ್ಞವೈದ್ಯರನ್ನು ಕಾಣುವುದು ಒಳಿತು.
ದಿನದ ಒತ್ತಡದ ಕಾರ್ಯಗಳ ಬಳಲಿಕೆಯಿಂದ ರಾತ್ರಿ ವಿಶ್ರಾಂತಿಗೆಂದು ತೆರಳುತ್ತಾರೆ. ಆಗ ಮನೆಯ ಮುಂದಿನ ಬಾಗಿಲು ಹಾಕಿದ್ದೇನೋ ಇಲ್ಲವೋ ಎಂಬ ಅನುಮಾನ ಬಂದು ಮತ್ತೆಹೋಗಿ ಪರಿಶೀಲಿಸಿ ಮನಸ್ಸಿಗೆ ಖಾತ್ರಿಯಾದ ಮೇಲೆ ಆರಾಮವಾಗಿ ಮಲಗುತ್ತಾರೆ. ಇದು ಎಚ್ಚರಿಕೆ, ಜಾಗೃತಿಯ ದೃಷ್ಟಿಯಿಂದ ಒಳ್ಳೆಯದು. ಆದರೆ ಇದೇ ಮತ್ತೆ ಮತ್ತೆ ಪುನರಾವರ್ತಿಸುತ್ತಿದ್ದರೆ ಅಭದ್ರತೆಯ ಮನಸ್ಸು ಆತಂಕ, ಭಯಗಳನ್ನು ಹುಟ್ಟಿಸುತ್ತವೆ. ಇದನ್ನೇ ‘ಗೀಳುಬೇನೆ’ (ಆಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್) ಎನ್ನುವರು. ಇನ್ನು ಕೆಲವರು ಪ್ರತಿ ಸಲದ ಊಟದ ನಂತರ ಟಾಯ್ಲೆಟ್ಟಿಗೆ ಹೋಗಬೇಕೆನಿಸುವುದು, ಪದೇ ಪದೇ ಕೈಗಳನ್ನು ತೊಳೆಯುವುದು, ಮನೆಯಿಂದ ಹೊರ ಹೋಗುವಾಗ ಎಲ್ಲಾ ಸ್ವಿಚ್ಚನ್ನು ಆಫ್ ಮಾಡಿದ್ದೆನೋ ಇಲ್ಲವೋ ಎಂದು ಮತ್ತೆ ಮತ್ತೆ ನೋಡುವುದು – ಇಂಥವನ್ನು ಮಾಡುತ್ತಿರುತ್ತಾರೆ. ಇವು ದೈನಂದಿನ ಚಟುವಟಿಕೆಗಳ ಮೇಲೂ ಪರಿಣಾಮ ಬೀರಲು ಕಾರಣವಾಗುತ್ತವೆ. ಮಾತ್ರವಲ್ಲ, ಇವು ಅಂಥವರ ಮಾನಸಿಕ ಸ್ಥಿತಿಯನ್ನೂ ಸೂಚಿಸುತ್ತವೆ. ಈ ರೀತಿಯ ಲಕ್ಷಣಗಳನ್ನುಳವರು ತಜ್ಞವೈದ್ಯರನ್ನು ಕಾಣುವುದು ಒಳ್ಳೆಯದು.
ಮನೋರೋಗಗಳ ಬಗ್ಗೆ ಸಮಾಜದಲ್ಲಿರುವ ಮೂಢನಂಬಿಕೆಗಳು, ಕೀಳುನೋಟ, ಚಿಕಿತ್ಸೆಯ ಕೊರತೆ, ಜಾಗೃತಿಯ ಕೊರತೆಗಳು ಕೂಡ ರೋಗದ ವ್ಯಾಪಕತೆಗೆ ಕಾರಣವಾಗಿವೆ. ಮನೋರೋಗದ ಲಕ್ಷಣಗಳ ಮುನ್ಸೂಚನೆ ಸಿಕ್ಕ ಕೂಡಲೇ ಜಾಗರೂಕತೆ ವಹಿಸಿ ಚಿಕಿತ್ಸೆಯನ್ನು ನೀಡಿದರೆ ಅವನ್ನು ಪರಿಹರಿಸಬಹುದು. ಮಾನಸಿಕ ರೋಗಗಳು ಸಾಮಾನ್ಯವೆಂದು ನಿರ್ಲಕ್ಷಿಸಿದರೆ, ಮುಂದೆ ರೋಗಿಯ ಜೀವಕ್ಕೆ ತೊಂದರೆಯೂ ಆಗಬಹುದು. ಈಗ ಕಾಲ ಬದಲಾಗಿದೆ; ವಿಜ್ಞಾನವೂ ಬೆಳೆದಿದೆ. ಹಲವು ಮಾನಸಿಕ ಕಾಯಿಲೆಗಳಿಗೆ ಚಿಕಿತ್ಸೆಗಳು ಲಭ್ಯವಿವೆ. ದೈನಂದಿನ ಜೀವನದಲ್ಲಿ ಸಕಾರಾತ್ಮಕ ರೂಢಿಗಳನ್ನು ಬೆಳೆಸಿಕೊಂಡರೆ ಈ ರೋಗಗಳನ್ನೆಲ್ಲಾ ಮೆಟ್ಟಿ ನಿಲ್ಲಬಹುದು.
ಖಿನ್ನತೆಯ ಲಕ್ಷಣಗಳು
l ಯಾವಾಗಲೂ ಮಂಕಾಗಿರುವುದು,
l ಲವಲವಿಕೆ ಇಲ್ಲದಿರುವುದು
l ಯಾವ ಕೆಲಸ ಮಾಡಲು ಶಕ್ತಿ, ಉತ್ಸಾಹ ಇಲ್ಲದಿರುವುದು
l ಮನಸ್ಸಿನಲ್ಲಿ ನೋವುಗಳು ಕಾಡುತ್ತಿರುವುದು
l ತಪ್ಪಿತಸ್ಥ ಭಾವನೆಗಳು, ಬೇಸರ
ಆಹಾರ ರುಚಿಸದಿರುವುದು ಅಥವಾ
ಆಹಾರ ರುಚಿಸದಿರುವುದು ಅಥವಾ
l ತಿನ್ನಲು ಮನಸ್ಸಿಲ್ಲದಿರುವುದು
l ನಿದ್ದೆಯ ತೊಂದರೆಗಳು
l ಆತ್ಮಹತ್ಯೆಯ ಆಲೋಚನೆಗಳು
ನಿಷ್ಪ್ರಯೋಜಕನೆಂಬ ಭಾವ, ಕೀಳುಭಾವನೆ
ನಿಷ್ಪ್ರಯೋಜಕನೆಂಬ ಭಾವ, ಕೀಳುಭಾವನೆ
l ಅನಾಥಪ್ರಜ್ಞೆ
l ನಕಾರಾತ್ಮಕ ಯೋಚನೆಗಳು
ಚಿಕಿತ್ಸೆಗಳು
• ಆಪ್ತ ಸಮಾಲೋಚನೆ: ರೋಗಿಯ ಜೊತೆಯಲ್ಲಿರುವವರು ಅವರ ಕ್ಷೇಮ–ಕುಶಲಗಳನ್ನು ವಿಚಾರಿಸುತ್ತಿರಬೇಕು. ಜೊತೆಗೆ ಹುರುಪು ಧೈರ್ಯವನ್ನು ತುಂಬಬೇಕು; ಸಕಾರಾತ್ಮಕ ಚಿಂತನೆಗಳ ಬಿತ್ತನೆಯನ್ನು ಮಾಡಬೇಕು.
• ಅನುಕೂಲಕರ ವಾತಾವರಣ: ಅತಿ ಗದ್ದಲ, ಬೇಸರ, ಭಯ, ಕಿರಿಕಿರಿ ತರುವ ಪ್ರದೇಶಗಳಿಂದ ದೂರವಿರಬೇಕು.
• ದೈಹಿಕ ಹಾಗೂ ಮಾನಸಿಕ ಚಟುವಟಿಕೆಗಳು: ಯೋಗ, ಧ್ಯಾನ, ಕಲೆ ಮುಂತಾದ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಬೇಕು.
No comments:
Post a Comment