ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 ಕಾಳಧನ ತಡೆಗಟ್ಟಲು ಶಾಶ್ವತ ಪರಿಹಾರಗಳನ್ನು ಹುಡುಕಬೇಕಿದೆ | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Friday, September 28, 2018

ಕಾಳಧನ ತಡೆಗಟ್ಟಲು ಶಾಶ್ವತ ಪರಿಹಾರಗಳನ್ನು ಹುಡುಕಬೇಕಿದೆ

  Pundalik       Friday, September 28, 2018
ಭಾರತದ ಆದಾಯ ತೆರಿಗೆಗೆ ಹಾಕಿ ಅಕ್ರಮ ಗಳಿಕೆಯ ಮೂಲಕ ಸಂಪಾದಿಸಿದ ಹಣವೇ ಕಪ್ಪುಹಣ ಆಗಿದ್ದು, ಇದನ್ನು ವಿದೇಶದಲ್ಲಿ ಇಡುವುದು ಸಾಮಾನ್ಯವಾಗಿದೆ. ಜರ್ಮನಿ, ಫ್ರಾನ್‌ಸ್ ಮತ್ತು ಸ್ವಿಸ್‌ನಲ್ಲಿ ಭಾರತದ ಕಪ್ಪು ಹಣ ಇಟ್ಟಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಹಣ ಇಟ್ಟವರು ಯಾರೇ ಆಗಿರಬಹುದು, ಅದು ಕಾನೂನು ಬಾಹಿರವಾಗಿ ಬಂದಿದ್ದೇ ಆಗಿರುತ್ತದೆ. ರಾಜಕಾರಣಿಗಳು ವಿದೇಶದಲ್ಲಿ ಬೇನಾಮಿ ಹೆಸರಲ್ಲಿ ಖಾತೆ ತೆರೆದು ಹಣ ಹೂಡಿದ್ದಾರೆ ಎಂಬುದು ಪ್ರಚಲಿತದಲ್ಲಿರುವ ಮಾತು. ಸಾಮಾನ್ಯವಾಗಿ ಕಪ್ಪುಹಣ ಎಂದರೆ ಲೆಕ್ಕಕ್ಕೆ ತೋರಿಸದೇ ಕೂಡಿಟ್ಟ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಪಡೆಯುವ ಲಂಚ, ತೆರಿಗೆಗಳ್ಳತನ ಮತ್ತು ದೊಡ್ಡ ಪ್ರಮಾಣದ ದುಡ್ಡಿನ ಹಗರಣಗಳು ಕಪ್ಪುಹಣದ ಮೂಲ ಎನಿಸಿವೆ. ಕಪ್ಪುಹಣವು ದೇಶದ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿರುವ ಕಪ್ಪು ಚುಕ್ಕಿಯೇ ಆಗಿದೆ. ಸರ್ವೋಚ್ಚ ನ್ಯಾಯಾಲಯವು ಕಪ್ಪು ಹಣವನ್ನು ‘ರಾಷ್ಟ್ರೀಯ ಸಂಪತ್ತಿನ ಲೂಟಿ’ ಎಂದೇ ಖಾರವಾಗಿ ಹೇಳಿದೆ.
ಅಪಾರ ಹಣ ತರುವ ಶಸ್ತ್ರಾಸ್ತ್ರ ವ್ಯಾಪಾರ ಅಥವಾ ಮಾದಕ ವಸ್ತು ಮಾರಾಟಗಳಂತಹ ಸಂಪೂರ್ಣ ಕಾನೂನು ಬಾಹಿರ ದಂಧೆಗಳು ಕೆಲವಾದರೆ, ಕಾನೂನುಬದ್ಧ ಚಟುವಟಿಕೆಗಳೇ ಆಗಿದ್ದೂ ತಪ್ಪಿಸಿಕೊಳ್ಳುವ ಉದ್ದೇಶದಿಂದ ಘೋಷಿಸಿಕೊಳ್ಳದೇ ಇರುವ ಚಟುವಟಿಕೆಗಳೂ ಇವೆ. ರಾಜಕಾರಣಿಗಳು ತಾವು ಗಳಿಸಿದ ಮೋಸದ ಹಣವನ್ನೆಲ್ಲ ಸುರಕ್ಷಿತವಾಗಿ ಇಡಲು ಆರಿಸಿಕೊಳ್ಳುವುದು ‘ಸ್ವಿಸ್ ಬ್ಯಾಂಕ್’ನ್ನೇ ಅಲ್ಲಿನ ಬ್ಯಾಂಕುಗಳು ಇವರ ಪಾಲಿಗೆ ಸ್ವರ್ಗ ಸಮಾನ. ಭಾರತೀಯರು ಸ್ವಿಸ್‌ಬ್ಯಾಂಕಿನಲ್ಲಿ ಸುಮಾರು 30 ಸಾವಿರ ಲಕ್ಷ ಕೋಟಿ ರುಪಾಯಿ ಕಪ್ಪುಹಣ ಇಟ್ಟಿರುವುದಾಗಿ ಒಂದು ಸಮೀಕ್ಷೆ ಹೇಳುತ್ತದೆ. ಸಿಬಿಐ ಅಂದಾಜಿನ ಪ್ರಕಾರ, 84 ಲಕ್ಷ ಕೋಟಿ ರುಪಾಯಿ ಭಾರತೀಯರ ಕಪ್ಪುಹಣ ಅಲ್ಲಿ ಕೊಳೆಯುತ್ತಿದೆ ಎಂದು ಹೇಳಲಾಗಿದೆ. ಈ ನಾಚಿಸುವಂತೆ ದೇಶದೊಳಗೆ ಸರಿಸುಮಾರು 30 ಸಾವಿರ ಲಕ್ಷ ಕೋಟಿ ರುಪಾಯಿಗಳಷ್ಟು ಪ್ರಮಾಣದ ಕಪ್ಪುಹಣ ಪರ್ಯಾಯ ರೂಪದಲ್ಲಿ ಚಲಾವಣೆಯಲ್ಲಿದೆ ಎನ್ನಲಾಗುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕಪ್ಪುಹಣ ಹೇಗೆ ಹುಟ್ಟುತ್ತದೆ? ಅದನ್ನು ಹೇಗೆ ಬಳಸಲಾಗುತ್ತದೆ? ಈ ಹಣವೆಲ್ಲ ಎಲ್ಲಿ ಹೋಗುತ್ತದೆ, ಹೇಗೆ ತಡೆಗಟ್ಟಬಹುದು ಎನ್ನುವ ಪ್ರಶ್ನೆಗಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯುವ ಬಗ್ಗೆ ಯಾರೂ ಅಷ್ಟಾಗಿ ಚಿಂತಿಸುತ್ತಿಲ್ಲ.
ಭಾರತದಲ್ಲಿ ಕಪ್ಪುಹಣವು ಲಂಚದ ಮುಖಾಂತರವೇ ಹುಟ್ಟುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ನಮ್ಮ ಬಹುತೇಕ ಇವತ್ತು ಲಂಚ ಪಡೆಯುವವರೇ ಆಗಿದ್ದಾರೆ. ಈ ರೀತಿಯಾಗಿ ಪಡೆದ ಲಂಚದ ಹಣವನ್ನು ಇವರು ಆದಾಯ ತೆರಿಗೆಯಲ್ಲಿ ತೋರಿಸುವುದೇ ಇಲ್ಲ ಮತ್ತು ಇದನ್ನು ತೋರಿಸಲು ಬರುವುದೂ ಇಲ್ಲ. ಈ ರೀತಿ ಮೋಸದಿಂದ ಸಂಗ್ರಹಿಸಲಾದ ಹಣ ಕಪ್ಪುಹಣದ ಗುಡ್ಡೆಯಾಗಿ ಪರಿವರ್ತನೆಯಾಗುತ್ತದೆ. ಅಂತೆಯೇ ಅಧಿಕಾರಶಾಹಿ ಪಡೆಯುವ ಲಂಚದ ಹಣವೂ ಕಪ್ಪುಹಣದ ಮತ್ತೊಂದು ಪ್ರಬಲ ಉಗಮ ಸ್ಥಾನ. ವಿದೇಶಗಳಲ್ಲಿ ಬೇನಾಮಿ ಕಂಪನಿಗಳನ್ನು ಇವರು ಸೃಷ್ಟಿಸಿಕೊಂಡಿರುತ್ತಾರೆ. ಆ ಕಂಪನಿಯು ಬೇರೇನೂ ವ್ಯವಹಾರ ಮಾಡದೆ, ಈ ರೀತಿ ಹಣವನ್ನು ಸಕ್ರಮ ಮಾಡುವುದನ್ನೇ ಕೆಲಸ ಮಾಡಿಕೊಂಡಿರುತ್ತದೆ. ಅಂತಹ ಕಂಪನಿ ಅಥವಾ ವ್ಯಕ್ತಿ ಜತೆಗೆ ವ್ಯವಹಾರ ಮಾಡಿದಂತೆ, ಅದರ ಭಾಗವಾಗಿ ಹಣ ಚುಕ್ತಾ ಮಾಡಿರುವಂತೆ ಕಪ್ಪು ಹಣ ಇರುವ ವ್ಯಕ್ತಿ ಲೆಕ್ಕ ತೋರಿಸುತ್ತಾನೆ. ವ್ಯವಹಾರಸ್ಥರು, ರಿಯಲ್ ಎಸ್ಟೇಟ್, ಉತ್ಪಾದನಾ ವಲಯ, ಚಿಲ್ಲರೆ ವ್ಯಾಪಾರ ಹೀಗೆ ಸಾಮಾನ್ಯ ಜನಜೀವನಕ್ಕೆ ಅನಿವಾರ್ಯವಾದ ಎಲ್ಲ ದೊಡ್ಡ ಮತ್ತು ಸಣ್ಣ ಕ್ಷೇತ್ರಗಳಲ್ಲಿನ ಕೊಡುಕೊಳ್ಳುವಿಕೆಯಲ್ಲಿ ಆದಾಯ ತೆರಿಗೆಯನ್ನು ಉದ್ದೇಶಪೂರ್ವಕವಾಗಿಯೇ ತಪ್ಪಿಸಲಾಗುತ್ತದೆ. ಸರಕಾರಕ್ಕೆ ತೋರಿಸುವ ಮತ್ತು ಬಚ್ಚಿಡುವ ಅಂದರೆ ಲೆಕ್ಕ ಮತ್ತು ಕೃಷ್ಣನ ಲೆಕ್ಕಗಳನ್ನು ಇವರೆಲ್ಲರು ಬೇಕೆಂದೇ ಸೃಷ್ಟಿಸುತ್ತಾರೆ. ಇದಕ್ಕೆ ಲೆಕ್ಕ ಪರಿಣತರೇ ಖುದ್ದು ಸಹಕರಿಸಿ ಎಲ್ಲೆಲ್ಲಿ ಲೆಕ್ಕ ತಪ್ಪಿಸಬೇಕೆಂಬುದನ್ನು ಹೇಳಿಕೊಡುತ್ತಾರೆ. ಯಾವಾಗ ಒಬ್ಬ ವ್ಯಾಪಾರಸ್ಥ ಅಥವಾ ಉದ್ದಿಮೆದಾರ ತಾನು ಗಳಿಸಿದ ಆದಾಯಕ್ಕೆ ಲೆಕ್ಕ ತೋರಿಸದೇ ವ್ಯಾಪಾರ ಮಾಡುತ್ತಾನೆಯೋ ಆ ಕ್ಷಣದಲ್ಲೇ ಕಪ್ಪುಹಣ ಜನ್ಮ ತಾಳುತ್ತದೆ. ಹೀಗಾಗಿ ಎಲ್ಲ ವರ್ಗದ ವ್ಯಾಪಾರಿಗಳು, ಮಾರಾಟಗಾರರು, ಹಂಚಿಕೆದಾರರು, ವ್ಯವಹಾರಸ್ಥರು ಕಪ್ಪುಹಣ ಎಂಬ ಅನಿಷ್ಟದ ಹುಟ್ಟಿಗೆ ಕಾರಣರಾಗಿದ್ದಾರೆ.
ಆದಾಯ ತೆರಿಗೆ ಮತ್ತು ಮಾರಾಟ ವಂಚಿಸಿ ಸಂಗ್ರಹಿಸಲ್ಪಟ್ಟ ಈ ಕಪ್ಪು ಹಣ ಭಾರತದ ಆರ್ಥಿಕತೆಯ ಮೇಲೆ ಅನೇಕ ಋಣಾತ್ಮಕ ಪರಿಣಾಮವನ್ನು ಬೀರುತ್ತಿದೆ. ಕಪ್ಪು ಹಣವನ್ನು ದೇಶದ್ರೋಹಿ ಕೆಲಸಗಳಿಗೆ, ದುಷ್ಟ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ. ಇದರಿಂದಾಗಿ ಭ್ರಷ್ಟಾಚಾರ ಹೆಚ್ಚಿ ಸಾಮಾಜಿಕ ಮತ್ತು ರಾಜಕೀಯ ಸ್ವಾಸ್ಥ್ಯ ಹಾಳಾಗುತ್ತಿದೆ. ಈ ಕಪ್ಪು ಹಣವನ್ನು ನಿಯಂತ್ರಿಸಲು ಸರಕಾರ ಅನೇಕ ಕಾರ್ಯಗಳನ್ನು ಕೈಗೊಂಡರೂ, ಕಪ್ಪು ಹಣವನ್ನು ತಡೆಗಟ್ಟುವುದು ಕಷ್ಟಕರವಾಗಿದೆ. ಇತ್ತೀಚೆಗೆ ಸರಕಾರವು ಕಪ್ಪು ಹಣವನ್ನು ಮಟ್ಟ ಹಾಕಲು ಸರಳೀಕೃತ ಆದಾಯ ತೆರಿಗೆ ಪಾವತಿ 500 ಮತ್ತು 1000 ರುಪಾಯಿಗಳ ನೋಟ್ಯಂತರ, ಡಿಜಿಟಲ್ ಇಂಡಿಯಾ ಎಂಬ ಅನೇಕ ಯೋಜನೆಗಳ ಜತೆಗೆ, ವಿವಿಧ ದೇಶಗಳೊಂದಿಗೆ ಕಪ್ಪುಹಣ ಮಾಹಿತಿ ವಿನಿಮಯದಂತಹ ಅನೇಕ ಒಪ್ಪಂದಗಳಿಗೆ ಸಹಿ ಹಾಕಿದೆ. ಸರಕಾರದ ಈ ಕಾರ್ಯಕ್ರಮಗಳ ಜತೆ ಜತೆಗೆ ಪ್ರಜೆಗಳಾದ ನಾವು ಸ್ವಪ್ರೇರಣೆಯಿಂದ ನಮ್ಮ ಆಸ್ತಿ, ಸಂಪತ್ತುಗಳಿಗೆ ಆದಾಯ ತೆರಿಗೆ ಪಾವತಿಸುವುದರ ಮೂಲಕ ಕಪ್ಪು ಹಣಕ್ಕೆ ಕಡಿವಾಣ ಹಾಕಬೇಕು.
ಕಪ್ಪುಹಣವೆನ್ನುವುದು ಅಕ್ರಮವಾಗಿ ಸಂಪಾದಿಸಿದ ಸಂಪತ್ತು. ಅನೈತಿಕವಾಗಿ ಗಳಿಸಿದ ಸ್ವತ್ತು, ತೆರಿಗೆ ವಂಚಿಸಿ ಸಂಗ್ರಹಿಸಿಟ್ಟ ಇದು ಬೇನಾಮಿ ಖಾತೆಗಳಲ್ಲಿ, ಗುಪ್ತ ಸ್ಥಳಗಳಲ್ಲಿ ಇಟ್ಟಿರುವ ಹಣ ಮಾತ್ರವಲ್ಲದೆ, ಷೇರುಗಳು, ವಿವಿಧ ಭದ್ರತೆಗಳು, ರಿಯಲ್ ಎಸ್ಟೇಟ್, ಮನೆ ಅಂಗಡಿಗಳು, ನಿವೇಶನ, ಕಾರುಗಳು, ಒಡವೆ ಆಭರಣಗಳಲ್ಲಿ ಹೂಡಲ್ಪಟ್ಟಿದೆ. ಸ್ವಿಸ್‌ನಲ್ಲಿರುವ ಭಾರತೀಯ ಕಪ್ಪು ಹಣವನ್ನು ದೇಶಕ್ಕೆ ತರಲು ಕೇಂದ್ರ ಸರಕಾರ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಆ ಪ್ರಕಾರ ಸ್ವಿಟ್ಜರ್‌ಲ್ಯಾಂಡಿನ ತನ್ನ ವಿದೇಶಿ ಗ್ರಾಹಕರ ಕಪ್ಪು ಹಣದ ಮಾಹಿತಿಯನ್ನು ಹಂಚಿಕೊಳ್ಳಲು ಆರಂಭಿಸಿದೆ.
2015ರ ಅಂತ್ಯಕ್ಕೆ ಸ್ವಿಸ್ ಬ್ಯಾಂಕಿನಲ್ಲಿ ಭಾರತೀಯರ ಹಣದ ಪ್ರಮಾಣ ಮಿಲಿಯನ್ ಸಿಎಚ್‌ಎಫ್‌ನಷ್ಟು ಕಡಿಮೆಯಾಗಿ ಅದು 1,217,60 ಮಿಲಿಯನ್ ಸಿಎಚ್‌ಎಫ್‌ಗೆ ಇಳಿಯಿತು ಎಂದು ಸ್ವಿಸ್ ನ್ಯಾಶನಲ್ ಬ್ಯಾಂಕ್ ಹೇಳಿದೆ. ಕಪ್ಪುಹಣದ ಸಂಗ್ರಹ ಮತ್ತು ಅದರ ಚಲಾವಣೆಯಲ್ಲಿ ಭಾರತ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಹೇಳಲಾಗುತ್ತಿದೆ. ಬಹುತೇಕ ವ್ಯವಹಾರಗಳಲ್ಲಿ ಕಪ್ಪುಹಣದ ವಹಿವಾಟು ನಿರ್ಭಿಡೆಯಿಂದ ನಡೆಯುತ್ತಿದೆ. ಅಲಿಖಿತವಾಗಿ ಕೊಡು ಕೊಳುವ ವ್ಯಕ್ತಿಗಳಿಬ್ಬರಲ್ಲೂ ಅದೊಂದು ಒಪ್ಪಿತ ವಿಧಾನವಾಗಿ ಮಾರ್ಪಟ್ಟಿದೆ.
ಇನ್ನು ರಾಜಕಾರಣಿಗಳು ಹಾಗೂ ಕಂಪನಿಗಳ ಹಗರಣದ ಸರಮಾಲೆಗಳಿಗಂತೂ ಲೆಕ್ಕವೇ ಇಲ್ಲ. ಅದರಲ್ಲೂ 2ಜಿ, ಕಾಮನ್‌ವೆಲ್‌ತ್, ಹಗರಣ, ನಕಲಿ ಛಾಪಾ ಕಾಗದ ಹಗರಣಗಳಂತಹ ಪ್ರಸಂಗಗಳು ಹಗರಣಗಳು ಎಷ್ಟೊಂದು ದೊಡ್ಡ ಮೊತ್ತದವಾಗಿರುತ್ತವೆ ಎಂಬುದಕ್ಕೆ ಸಾಂಕೇತಿಕವಾಗಿವೆ. ಈ ಬೃಹತ್ ಮೊತ್ತವು ಭಾರತದ ಪ್ರತಿಯೊಬ್ಬ ಪ್ರಜೆಯ ಹಣ. ಇದನ್ನು ಭಾರತಕ್ಕೆ ವಾಪಸು ತರುವುದು ಯಾವುದೇ ಸರಕಾರದ ಆದ್ಯ ಕರ್ತವ್ಯ. ಆದರೇನು ಮಾಡುವುದು? ಈ ಕಪ್ಪು ಹಣವೆಲ್ಲ ಆಳುವ ಪ್ರತಿನಿಧಿಗಳದ್ದೇ ಆಗಿರುವುದರಿಂದ ಅವರ್ಯಾರಿಗೂ ಇದನ್ನು ವಾಪಸು ತರುವ ಆಲೋಚನೆ ಸುಲಭಕ್ಕೆ ರುಚಿಸುತ್ತಿಲ್ಲ. ಆದಾಗ್ಯೂ ಒಂದೊಮ್ಮೆ ಈ ಹಣವನ್ನು ರಾಷ್ಟ್ರೀಯ ಸಂಪತ್ತು ಎಂದು ಅದನ್ನು ರಾಷ್ಟ್ರದ ಅಭ್ಯುದಯಕ್ಕೆ ಬಳಸಿದ್ದೇ ಆದರೆ ಬಹುಶಃ ಯಾರೂ ಇದಕ್ಕೆ ತಕರಾರು ಒಡ್ಡುವುದಿಲ್ಲ ಎಂದೆನಿಸುತ್ತದೆ.
ಲಂಚದ ಹಾವಳಿಯನ್ನು ತಪ್ಪಿಸುವಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರದ ಅಧೀನ ಎಸಿಬಿ, ಲೋಕಾಯುಕ್ತ ಸಂಸ್ಥೆಗಳು ನಿರತವಾಗಿದ್ದರೂ ಲಂಚವನ್ನು ತಪ್ಪಿಸುವುದು ಸಾಧ್ಯವಾಗಿಲ್ಲ. ಕೆಳದರ್ಜೆಯ ಸಾಮಾನ್ಯರ ಲಂಚಗುಳಿತನವನ್ನು ತಪ್ಪಿಸಲು ಮುಂದುವರಿದ ದೇಶಗಳಲ್ಲಿ ಇರುವಂತಹ ‘ಕನ್ಸಲ್ಟಿಂಗ್ ಸರ್ವೀಸ್ ಏಜೆನ್ಸೀಸ್’ ಅಥವಾ ಹೊರಗುತ್ತಿಗೆ ಪದ್ಧತಿಯನ್ನು ಪರಿಚಯ ಮಾಡುವುದರಿಂದ ಸಾಧ್ಯವಾದಷ್ಟು ಮಟ್ಟಿಗೆ ಲಂಚವನ್ನು ತಪ್ಪಿಸಬಹುದಾಗಿದೆ. ಉದಾಹರಣೆಗೆ, ಪಾಸ್‌ಪೋರ್ಟ್, ಲೈಸೆನ್‌ಸ್ ನವೀಕರಣದಂತಹ ‘ಬೆಂಗಳೂರು ಒನ್’ ಎನ್ನುವ ಹೊರಗುತ್ತಿಗೆ ಸಂಸ್ಥೆಗೆ ವಹಿಸಿರುವುದರಿಂದ ‘ಬೆಂಗಳೂರು ಒನ್’ ಕರಾರುವಾಕ್ಕು ಸಮಯದಲ್ಲಿ ಪಾಸ್‌ಪೋರ್ಟ್ ವಿತರಣೆ ಮಾಡುತ್ತದೆ. ಆದರೆ ಈ ಪ್ರಕ್ರಿಯೆಗೆ ಶುಲ್ಕವೆಂದು 500 ರುಪಾಯಿಗಳನ್ನು ಪಡೆಯಲಾಗುತ್ತದೆ. ಒಂದು ವೇಳೆ ನಾವು ಇದನ್ನು ಲಂಚದ ಹಣ ಎಂದೇನಾದರೂ ಕೊಟ್ಟಿದ್ದರೆ ಅದು ಕಪ್ಪಹಣದ ಸೃಷ್ಟಿಗೆ ಕಾರಣವಾಗುತ್ತಿತ್ತು. ಅದನ್ನೇ ಹೊರಗುತ್ತಿಗೆ ಏಜೆನ್ಸಿಗೆ ನೀಡಿದಾಗ ಅವರು ಇದಕ್ಕೆ ರಸೀದಿ ಕೊಡುತ್ತಾರೆ. ಆಗ ಇದು ಲಂಚದ ಹಣವಾಗಿ ಕಪ್ಪು ಪಟ್ಟಿಗೆ ಸೇರದೆ ಹೊರಗುಳಿಯುತ್ತದೆ.
ಕಾಳಧನ ನಿವಾರಣೆಗೆ ಸರಕಾರ, ವಿದೇಶಿ ಉದ್ದಿಮೆ ಕುರಿತು ಸಹ ಅನೇಕ ಕ್ರಮ ತೆಗೆದುಕೊಳ್ಳಬೇಕಾಗಿದೆ. ಬೃಹತ್ ಪ್ರಮಾಣದಲ್ಲಿ ಕಪ್ಪು ದಂಧೆಯಲ್ಲಿ ತೊಡಗಿರುವ ದೊಡ್ಡ ಕುಳಗಳನ್ನು ಹಿಡಿದು, ಕಟಕಟೆಗೆ ಎಳೆದು, ಶಿಕ್ಷೆ ನೀಡಿದರೆ ಅದು ನಿಜಕ್ಕೂ ಪರಿಣಾಮ ಬೀರುತ್ತದೆ. ಒಟ್ಟಾರೆ, ಪ್ರಾಮಾಣಿಕವಾದ, ಶ್ರಮವಹಿಸಿ ಕೆಲಸ ಮಾಡುವ ಒಂದು ತೆರಿಗೆ ಆಡಳಿತವಿದ್ದಾಗ ಹಾಗೂ ಸರಕಾರ ತನ್ನ ಉದ್ದೇಶಗಳಲ್ಲಿ ಪ್ರಾಮಾಣಿಕತೆ ಇರಿಸಿಕೊಂಡಾಗ ಮಾತ್ರವೇ ನಿಜವಾದ ಬದಲಾವಣೆ ಸಾಧ್ಯ.

Telegram Link https://t.me/joinchat/AAAAAE9lq2X6z4BbgUUCnw Friends, If you like this post,kindly comment below the post and do share your Response, (Thanks for Reading....)
logoblog

Thanks for reading ಕಾಳಧನ ತಡೆಗಟ್ಟಲು ಶಾಶ್ವತ ಪರಿಹಾರಗಳನ್ನು ಹುಡುಕಬೇಕಿದೆ

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *