ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 ಪ್ರಾಥಮಿಕ ಶಿಕ್ಷಣ – ಸರ್ವ ಶಿಕ್ಷಣ ಅಭಿಯಾನ | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Wednesday, March 11, 2015

ಪ್ರಾಥಮಿಕ ಶಿಕ್ಷಣ – ಸರ್ವ ಶಿಕ್ಷಣ ಅಭಿಯಾನ

  Pundalik       Wednesday, March 11, 2015

ಶಿಕ್ಷಣ

* ಪ್ರಾಥಮಿಕ ಶಿಕ್ಷಣ – ಸರ್ವ ಶಿಕ್ಷಣ ಅಭಿಯಾನ

ಪ್ರತಿ ಮಾನವ ಜೀವಿಯೂ ತಮ್ಮ ಜೀವನವನ್ನು ಉತ್ತಮ ಪಡಿಸಿಕೊಳ್ಳಲು  ಅವಕಾಶ ಹೊಂದಿರಬೇಕು. ದುರ್ದೈವ ದಿಂದ ವಿಶ್ವದಲ್ಲಿ ಇಂದು ಅನೇಕ ಮಕ್ಕಳು  ಈ ಅವಕಾಶದಿಂದ ವಂಚಿತರಾಗಿ ಬೆಳೆಯುತ್ತಿದ್ದಾರೆ., ಕಾರಣ ಅವರಿಗೆ ಕನಿಷ್ಠ ಶಾಲೆಗೆ ಹಾಜರಾಗುವ  ಮೂಲಭೂತ ಹಕ್ಕನ್ನೇ ನಿರಾಕರಿಸಲಾಗಿದೆ.
ಶಾಲಾ ಕಾರ್ಯಕ್ರಮಗಳ ಪರಿಣಾಮವಾಗಿ, ೨೦೦೦ ನೇ ಇಸ್ವಿಯ ಕೊನೆಗೆ ಭಾರತದಲ್ಲಿ ೯೪% ಗ್ರಾಮಾಂತರ ಜನರಿಗೆ ಒಂದು ಕಿ.ಮೀ. ಒಳಗಡೆ  ಪ್ರಾಥಮಿಕ ಶಾಲೆಗಳು ಲಭ್ಯವಾಗಿವೆ. ಮತ್ತು ೮೪% ಜನರಿಗೆ ಮೂರು ಕಿ.ಮೀ. ಒಳಗೆ ಹಿರಿಯ ಪ್ರಾಥಮಿಕ ಶಾಲೆಗಳಿವೆ.    ಪರಿಶಿಷ್ಠ ಜಾತಿ ಮತ್ತು ವರ್ಗಗಳ ಮತ್ತು  ಬಾಲಕಿಯರನ್ನು ದಾಖಲು ಮಾಡಿಕೊಳ್ಳಲು ವಿಶೇಷ ಪ್ರಯತ್ನ ಮಾಡಲಾಗುತ್ತಿದೆ. ಮೊದಲನೆ ಪಂಚ  ವಾರ್ಷಿಕ ಯೋಜನೆಯಿಂದ ಈಚೆಗೆ ಪ್ರಾಥಮಿಕ ಶಾಲೆಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ  ದಾಖಲಾತಿಯು ಗಣನೀಯವಾಗಿ ಹೆಚ್ಚಾಗಿದೆ. ಅದರಂತೆ ಪ್ರಾಥಮಿಕ ಶಾಲೆಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ  ಸಂಖ್ಯೆಯೂ ಹೆಚ್ಚಿದೆ.
 ೧೯೫೦-೫೧ರಲ್ಲಿ  ಪ್ರಾಥಮಿಕ ಶಾಲೆಯಲ್ಲಿ ೩.೧ ಮಿಲಿಯನ್ ಮಕ್ಕಳು ದಾಖಲಾಗಿದ್ದರು.  ೧೯೯೭-೯೮ ರಲ್ಲಿ  ೩೯.೫ ಮಿಲಿಯನ್ ಮಕ್ಕಳು  ಪ್ರಾಥಮಿಕ ಶಾಲೆಗಳಲ್ಲಿದ್ದಾರೆ. ಪ್ರಾಥಮಿಕ ಶಾಲೆಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ  ಸಂಖ್ಯೆ ೧೯೫೦-೫೧ ರಲ್ಲಿ  ೦.೨೨೩ ಮಿಲಿಯನ್ ಇದ್ದದ್ದು ೧೯೯೭-೯೮ರಲ್ಲಿ ೦.೭೭೫ ಮಿಲಿಯನ್ ಆಗಿದೆ.  ೨೦೦೨/೨೦೦೩ ರಲ್ಲಿ ೬-೧೪ ವಯೋಮಾನದ ಮಕ್ಕಳಲ್ಲಿ ೮೨% ಜನ ಶಾಲೆಗೆ ದಾಖಲಾಗಿದ್ದಾರೆ ಎಂದು ಅಂದಾಜು ಮಾಡಲಾಗಿದೆ.  ಭಾರತ ಸರ್ಕಾರವು ಇದನ್ನು ಈ ದಶಮಾನದ ಒಳಗೆ  ಅದನ್ನು ೧೦೦%  ಗೆ ಏರಿಸಲು ಗುರಿಯಿಟ್ಟು ಕೊಂಡಿದೆ.   ಇದನ್ನು ಸಾಧಿಸಲು ಸರ್ಕಾರವು ವಿಶ್ವದಲ್ಲಿನ ಬಡತನಕ್ಕೆ ಶಾಶ್ವತವಾದ ಕೊನೆ ಹೇಳಲು ಪ್ರಯತ್ನಿಸುತ್ತಿರುವುದನ್ನು  ನಾವು ಬಲ್ಲೆವು  .ಅಲ್ಲದೆ ಶಾಂತಿ ಮತ್ತು ಸುರಕ್ಷತೆಗಾಗಿ ಪ್ರತಿ ದೇಶದ ನಾಗರಿಕರು ಇತ್ಯಾತ್ಮಕ ಆಯ್ಕೆ ಮಾಡಲು ಸಶಕ್ತ ರಾಗಿರಬೇಕು  ಮತ್ತು ತಮಗೆ ಮತ್ತು ತಮ್ಮ ಕುಟುಂಬಕ್ಕೆ ಅಗತ್ಯ ಆದಾಯ ಹೊಂದಿರಬೇಕು.  ಇದು ಸಾಧ್ಯವಾಗ ಬೇಕಾದರೆ ವಿಶ್ವದ ಎಲ್ಲಾ ಮಕ್ಕಳಿಗೂ ಉತ್ತಮ ಗುಣ ಮಟ್ಟದ ಶೈಕ್ಷಣಿಕ ವಾತಾವರಣ  ಕೊನೆಯ ಪಕ್ಷ  ಪ್ರಾಥಮಿಕ ಹಂತದಲ್ಲಾದರೂ ದೊರೆಯಬೇಕು.

* ಸರ್ವ ಶಿಕ್ಷಣ ಅಭಿಯಾನ. (ಸ.ಶಿ.ಅ)
    ಮಟ್ಟದಲ್ಲಿ ವಿಕೇಂದ್ರಿಕೃತವಾಗಿ, ನಿರ್ಧಿಷ್ಟವಾದ ಯೋಜನೆ ಮತ್ತು ಅನುಷ್ಠಾನ ತಂತ್ರ ಕ್ಕಾಗಿ ಸಮುದಾಯವೆ ಶಿಕ್ಷಣ ವ್ಯವಸ್ಥೆಯನ್ನು ತನ್ನದಾಗಿಸಿಕೊಂಡ ಕಾರ್ಯಕ್ರಮ. ಇದು ದೇಶಾದ್ಯಂತ ಜಾರಿಯಾಗಿದೆ. ಇದು ಸರ್ಕಾರದ ಎಲ್ಲ ಪ್ರಮುಖ ಶೈಕ್ಷಣಿಕ ಮಧ್ಯವರ್ತನೆಗಳನ್ನು ಒಳಗೊಂಡಿದೆ. ಅಭಿಯಾನವು ೬-೧೪ ರೊಳಗಿನ ವಯೋಮಾನದ ಮಕ್ಕಳಿಗೆ ಅವಶ್ಯವಾದ ಮತ್ತು ಉಪಯುಕ್ತವಾದ ಪ್ರಾಥಮಿಕ ಶಿಕ್ಷಣವನ್ನು ೨೦೧೦ ರೊಳಗೆ ನೀಡಲಿದೆ.( ಭಾರತ ಸರ್ಕಾರದ೨೦೦೪ & ೨೦೦೫ ರ . (ಸ.ಶಿ.ಅ). SSA ಪ್ರಕಟಣೆ

* ಸರ್ವಶಿಕ್ಷಣ ಅಭಿಯಾನ ಎಂದರೇನು?
        * ಸ್ಪಷ್ಟವಾದ ಸಮಯ ಮಿತಿಯುಳ್ಳ  ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣ ಕಾರ್ಯ ಕ್ರಮ.
        *  ದೇಶಾದ್ಯಂತ ಗುಣಮಟ್ಟದ ಶಿಕ್ಷಣಕ್ಕೆ ಇರುವ ಬೇಡಿಕೆಗೆ , ಇದು ಒಂದು ಸ್ಪಂದನೆ.
        *  ಮೂಲ ಶಿಕ್ಷಣದ ಮೂಲಕ ಸಾಮಾಜಿಕ ನ್ಯಾಯವನ್ನು ಉತ್ತೇಜಿಸಲು ಒಂದು ಅವಕಾಶ.
        *  ಶಾಲಾ ಆಡಳಿತ ನಿರ್ವಹಣೆಯಲ್ಲಿ  ಪ್ರಪ್ರಥಮ ಹಂತದ  ಸಂರಚನೆಗಳಾದ ಪಂಚಾಯತ್ ರಾಜ್ಯ ಸಂಸ್ಥೆಗಳು,, ಶಾಲಾ ನಿರ್ವಹಣಾ ಸಮಿತಿ, ಗ್ರಾಮ ಮತ್ತು ನಗರದ ಕೊಳಚೆಪ್ರದೇಶಗಳ ಶಿಕ್ಷಣ ಸಮಿತಿಗಳು. ತಾಯಿತಂದೆ ಮತ್ತು ಶಿಕ್ಷಕರ ಸಂಘಗಳು, ಮಾತೃ ಶಿಕ್ಷಕ ಸಂಘಗಳು, ಗುಡ್ಡ ಗಾಡು ಸ್ವಾಯತ್ತ  ಕೌನ್ಸಿಲ್ ಗಳು ಇತ್ಯಾದಿಗಳನ್ನು ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳುವ ಪ್ರಯತ್ನ.
             *   ದೇಶಾದ್ಯಂತ ಪ್ರಾಥಮಿಕ ಶಿಕ್ಷಣವನ್ನು ಜಾರಿಗೆ ತರುವ  ರಾಜಕೀಯ ಶಕ್ತಿಯ ಇಚ್ಛಾಶಕ್ತಿ.
        *  ಕೇಂದ್ರಸರ್ಕಾರ, ರಾಜ್ಯಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳ ನಡುವೆ ಸಹಭಾಗಿತ್ವ.
        *  ರಾಜ್ಯಗಳಿಗೆ ತಮ್ಮದೆ ಆದ ಕಲ್ಪನೆಯನ್ನು ( ವಿಷನ್) ಅಭಿವೃದ್ಧಿಪಡಿಸಿಕೊಳ್ಳಲು  ಒಂದು ಅವಕಾಶ
* ಉದ್ದೇಶದ ಸ್ಪಷ್ಟನೆ

    ಸರ್ವಶಿಕ್ಷಣ  ಅಭಿಯಾನವು (SSA)  ಭಾರತ ಸರ್ಕಾರದ ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣದ (UEE)   ಕಾಲ ಮಿತಿಗೆ ಒಳಪಟ್ಟ ಕಾರ್ಯ  ಕ್ರಮಗಳಲ್ಲಿ ಅತ್ಯಂತ ಪ್ರಮುಖವಾಗಿದೆ.   ಭಾರತೀಯ ಸಂವಿಧಾನದ ೮೬ ನೇ ತಿದ್ದುಪಡಿಯು ಕಡ್ಡಾಯ ಮಾಡಿದಂತೆ ಉಚಿತ ಮತ್ತು ಕಡ್ಡಾಯ ಶಿಕ್ಷಣವು ೬-೧೪ ವಯೋಮಾನದ ಮಕ್ಕಳ ಮೂಲ ಭೂತ ಹಕ್ಕಾಗಿದೆ  .ಸಾ.ಪ್ರಾ.ಶಿ . (UEE) ವನ್ನು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ , ರಾಷ್ಟ್ರದ ೧೯೨ ಮಿಲಿಯನ್ ಮಕ್ಕಳ ಅಗತ್ಯಗಳನ್ನು ಪೂರೈಸಲು , ೧.೧ ಮಿಲಿಯನ್ ವಸತಿ ಪ್ರದೇಶಗಳಲ್ಲಿ ಕೈಗೆತ್ತಿಕೊಂಡಿದೆ. ಈ ಕಾರ್ಯಕ್ರಮವು ಶಾಲೆಯ ಸೌಲಭ್ಯವಿಲ್ಲದ ಪ್ರದೇಶಗಳಲ್ಲಿ  ಹೊಸಶಾಲೆಗಳನ್ನು ತರೆದು, ಈಗಿರುವ ಶಾಲೆಗೆ ಹೆಚ್ಚುವರಿ ಕೊಟ್ಟಡಿಗಳು,  ಕುಡಿಯುವ ನೀರು,  ಕಕ್ಕಸು, ನಿರ್ವಹಣಾ  ಅನುದಾನ ಮತ್ತು ಶಾಲಾ ಅಭಿವೃದ್ಧಿ ಅನುದಾನ ಅಲ್ಲದೆ ಅನೇಕ ಮೂಲ ಸೌಲಭ್ಯಗಳನ್ನು ಒದಗಿಸುವುದು. ಈಗಿರುವ ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ  ಹೆಚ್ಚುವರಿ ಶಿಕ್ಷಕರು, ಈಗಿರುವ ಶಿಕ್ಷಕರ ಸಾಮರ್ಥ್ಯವನ್ನು ಹೆಚ್ಚಿಸಲು ಅವರಿಗೆ ವಿಸ್ತೃತ ತರಬೇತಿ, ಬೋಧನಾ ಮತ್ತು ಕಲಿಕಾ ಉಪಕರಣಗಳ ಅಭಿವೃದ್ಧಿಗೆ ನೆರವು, ಶೈಕ್ಷಣಿಕ ಬೆಂಬಲಕ್ಕಾಗಿ ಕ್ಲಷ್ಟರ್, ವಲಯ ಮತ್ತು ಜಿಲ್ಲಾ ಮಟ್ಟದಲ್ಲಿ ಸಹಾಯ ನೀಡುವುದು.  ಸ.ಶಿ ಅ (ಎಸ್ ಎಸ್ಎ) ಯು ಜೀವನ ಕೌಶಲ್ಯಗಳೂ ಸೇರಿದಂತೆ ಗುಣ ಮಟ್ಟದ ಪ್ರಾಥಮಿಕ ಶಿಕ್ಷಣವನ್ನು ಕೊಡಲು ಒತ್ತು ನೀಡಲು ಬಯಸಿದೆ. ವಿಶೇಷ ಅಗತ್ಯವಿರುವ ಮಕ್ಕಳ   ಶಿಕ್ಷಣಕ್ಕೂ ಒತ್ತು ನೀಡಿದೆ. ಸ.ಶಿ ಅ (ಎಸ್ ಎಸ್ಎ) ಯು,  ಈಗ ಉಂಟಾಗಿರುವ ಡಿಜಿಟಲ್ ಭೇದವನ್ನು ನಿವಾರಿಸಲು ಅವರಿಗೆ ಕಾಂಪ್ಯೂಟರ್ ಶಿಕ್ಷಣ ನೀಡುವುದು.

* ಸರ್ವ ಶಿಕ್ಷಣ ಅಭಿಯಾನದ ಉದ್ದೇಶಗಳು.
    *  ಎಲ್ಲಾ ಮಕ್ಕಳು  ೨೦೦೩ ರ ಒಳಗೆ ಶಾಲೆಯಲ್ಲಿ , ಶಿಕ್ಷಣ ಖಾತ್ರಿ  ಕೇಂದ್ರದಲ್ಲಿ , ಪರ್ಯಾಯ ಶಾಲೆ ಗಳಲ್ಲಿ ಇರಬೇಕು. ”ಶಾಲೆಗೆ ಮರಳಿ”   ಶಿಬಿರ ದಲ್ಲಿರಬೇಕು              '
                 *  ಎಲ್ಲಾ ಮಕ್ಕಳು ೨೦೦೭ನೆ ಇಸ್ವಿಯೊಳಗೆ  ಐದು ವರ್ಷದ  ಶಾಲೆಯನ್ನು ಮುಗಿಸಿರಬೇಕು.
                 * ಎಲ್ಲಾ ಮಕ್ಕಳು ೨೦೧೧ ನೆ ಇಸ್ವಿಯೊಳಗೆ  ಎಂಟು ವರ್ಷದ ಪ್ರಾಥಮಿಕ  ಶಿಕ್ಷಣ ಹೊಂದಿರಬೇಕು.
                 *  ತೃಪ್ತಿದಾಯಕ ಪ್ರಾಥಮಿಕಶಿಕ್ಷಣ ಮತ್ತು ಜೀವನಕ್ಕಾಗಿ ಶಿಕ್ಷಣದ ಮೇಲೆ ಒತ್ತು ಇರಬೇಕು.
                 *  ಪ್ರಾಥಮಿಕ ಹಂತದಲ್ಲಿ ಎಲ್ಲಾ ಲಿಂಗ ಮತ್ತು ಸಾಮಾಜಿಕ  ಬಿರುಕುಗಳಿಗೆ ೨೦೦೭ರೊಳಗೆ  ಸೇತುವೆ ನಿರ್ಮಾಣವಾಗಬೇಕು.
                 *  ೨೦೧೦ನೇ ಇಸ್ವಿಯೊಳಗೆ  ಶಾಲೆಯಲ್ಲಿ ಮಕ್ಕಳನ್ನು ಉಳಿಸಿಕೊಳ್ಳುವುದು ಸಾರ್ವತ್ರಿಕ    ವಾಗಬೇಕು.

           ಕೇಂದ್ರಿಕೃತ ಪ್ರದೇಶಗಳು.
             ಪರ್ಯಾಯ ಶಾಲೆಗಳು.
               ವಿಶೇಷ ಅಗತ್ಯಗಳಿರುವ ಮಕ್ಕಳು
               ಸಮುದಾಯದ ಕ್ರೋಢೀಕರಣ
               ಹೆಣ್ಣು ಮಕ್ಕಳ ಶಿಕ್ಷಣ.

    ಪ್ರಾಥಮಿಕ ಶಿಕ್ಷಣದ ಗುಣ ಮಟ್ಟ.
              ಸಾಂಸ್ಥಿಕ ಪರಿವರ್ತನೆಗಳು. - ಸ.ಶಿ ಅ (ಎಸ್ ಎಸ್.ಎ)  ನ ಒಂದು ಭಾಗವಾಗಿ  ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ನೀಡುವಲ್ಲಿನ ನೈಪುಣ್ಯವನ್ನು ಅಭಿವೃದ್ಧಿಪಡಿಸಲು ಪರಿವರ್ತನೆ ತರಬೇಕು  .ರಾಜ್ಯ ಸರ್ಕಾರಗಳು ತಮ್ಮಲ್ಲಿ ಈಗ ಇರುವ ಶೈಕ್ಷಣಿಕ ವ್ಯವಸ್ಥೆಯಲ್ಲಿನ ಶೈಕ್ಷಣಿಕ ಆಡಳಿತ, ಶಾಲೆಗಳಲ್ಲಿನ  ಸಾಧನಾ ಮಟ್ಟ,      ಆರ್ಥಿಕ  ವಿಷಯಗಳು, ವಿಕೇಂದ್ರೀಕರಣ,  ಮತ್ತು ಸಮುದಾಯದ  ಮಾಲಿಕತ್ವಗಳೂ ಸೇರಿದಂತೆ ಎಲ್ಲವುಗಳ ನಿಷ್ಪಕ್ಷಪಾತ  ಮೌಲ್ಯಮಾಪನ ಮಾಡಬೇಕು.  ರಾಜ್ಯದ ಶೈಕ್ಷಣಿಕ ಕಾಯಿದೆಗಳ ಮರು ಪರಿಶೀಲನೆ ಯಾಗಬೇಕು.ಶಿಕ್ಷಕರ ನೇಮಕಾತಿ ಮತ್ತು ಕಾರ್ಯ ನಿರ್ವಹಣೆಯ ಪುನರ್ರಚನೆಯಾಗಬೇಕು. ಮೇಲುಸ್ತುವಾರಿ, ಮೌಲ್ಯಮಾಪನ, ಹೆಣ್ಣು ಮಕ್ಕಳ ಶಿಕ್ಷಣದ ಸ್ಥಿತಿ ಗತಿ   ಮತ್ತು ECCE. ಹಲವಾರು ರಾಜ್ಯಗಳು ಪ್ರಾಥಮಿಕ ಶಿಕ್ಷಣದ ನೀಡುವಿಕೆಯ  ವಿಧಾನವನ್ನು  ಸುಧಾರಿಸಲು  ಈಗಾಗಲೇ ಕ್ರಮ ಕೈಗೊಂಡಿವೆ.

    ಸುಸ್ಥಿರ ಆರ್ಥಿಕತೆ -   ಪ್ರಾಥಮಿಕ ಶಿಕ್ಷಣದ ಮಧ್ಯವರ್ತನೆಯ ಆರ್ಥಿಕತೆಯು ಸುಸ್ಥಿರವಾಗಿರಬೇಕು ಎಂಬ ತತ್ವದ ಮೇಲೆ ಸರ್ವಶಿಕ್ಷಣ ಅಭಿಯಾನವು ಆಧಾರಪಟ್ಟಿದೆ.  ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದೂರ ಗಾಮಿ  ಸಹಭಾಗಿತ್ವದ ತಿಳುವಳಿಕೆಯನ್ನು ಅವಲಂಬಿಸಿದೆ.
           ಸಮುದಾಯದ ಮಾಲಿಕತ್ವ -  ಈ ಕಾರ್ಯ ಕ್ರಮವು  ಸಮುದಾಯದ ಮಾಲಿಕತ್ವದ ಶಾಲೆಗಳ ಪರಿಣಾಮಕಾರಿ ವಿಕೇಂದ್ರೀ ಕರಣದ ಮಧ್ಯವರ್ತನೆಯಿಂದ ಉಂಟಾಗುವುದು. ಇದನ್ನು ಮಹಿಳಾ ಗುಂಪುಗಳು,ಪಂಚಾಯತಿ ರಾಜ್ ಸಂಸ್ಥೆಗಳನ್ನು ಮತ್ತು , VEC ಸದಸ್ಯರುಗಳನ್ನೂ  ತೊಡಗಿಸಿಕೊಳ್ಳುವುದರಿಂದ ಪರಿಣಾಮ ಕಾರಿಯನ್ನಾಗಿಸಬಹುದು.
           ಸಂಸ್ಥೆಗಳ  ಸಾಮರ್ಥ್ಯ ಹೆಚ್ಚಿಸುವುದು. - ಸ.ಶಿ ಅ (ಎಸ್ ಎಸ್ಎ) ಯು  ರಾಷ್ಟ್ರ, ರಾಜ್ಯ ಮತ್ತು ಜಿಲ್ಲಾಮಟ್ಟದ ಸಂಸ್ಥೆಗಳಾದ NIEPA/NCERT/NCTE/ SCERT/ SIEMAT/DIET ಗಳ ಸಾಮರ್ಥ್ಯ ಹೆಚ್ಚಳದಲ್ಲಿ ವಹಿಸಬಹುದಾದ ಪಾತ್ರವನ್ನು ಅರಿತು ಕೊಂಡಿದೆ.  ಗುಣಮಟ್ಟದಲ್ಲಿ ಸುಧಾರಣೆ ಆಗಬೇಕಾದರೆ ಸಂಪನ್ಮೂಲ ವ್ಕಕ್ತಿಗಳು ಮತ್ತು ಸಂಸ್ಥೆಗಳಿಂದ  ಸುಸ್ಥಿರವಾದ  ಬೆಂಬಲದ ವ್ಯವಸ್ಥೆ ಇರಬೇಕು.
           ಮುಖ್ಯವಾಹಿನಿಯ ಶೈಕ್ಷಣಿಕ ಆಡಳಿತ ಸುಧಾರಣೆ  -   ಸಾಂಸ್ಥಿಕ ಅಭಿವೃದ್ಧಿಯಿಂದ  ಮುಖ್ಯವಾಹಿನಿಯ ಶೈಕ್ಷಣಿಕ ಆಡಳಿತ ಸುಧಾರಣೆ  ಅಗುವುದು.   ಹೊಸ ವಿಧಾನಗಳ, ಕಡಿಮೆ ವೆಚ್ಚದ ಮತ್ತು ಫಲದಾಯಕ ವಿಧಾನಗಳ  ಅಳವಡಿಕೆಯಿಂದ ಇದು ಸಾಧ್ಯ.
     ಪೂರ್ಣ  ಪಾರದರ್ಶಕ ಸಮುದಾಯ ಆಧಾರಿತ ಉಸ್ತುವಾರಿ – ಈ ಕಾರ್ಯ ಕ್ರಮವು ಪೂರ್ಣ  ಪಾರದರ್ಶಕ ಸಮುದಾಯ ಆಧಾರಿತ ಉಸ್ತುವಾರಿ ಯನ್ನು ಹೊಂದಿರುವುದು.  ಶಿಕ್ಷಣ ನಿರ್ವಹಣಾ ಮಾಹಿತಿ ವ್ಯವಸ್ಥೆ (ದ ಎಜುಕೇಷನಲ್ ಮ್ಯನೇಜಮೆಂಟ ಇನಫರ್ಮೇಷನ್ ಸಿಸ್ಟಂ  (EMIS)) ಯಿಂದ ಶಾಲಾ ಮಟ್ಟದ ದತ್ತಾಂಶದ ಜತೆಗೆ ಮೈಕ್ರೊ ಪ್ಲಾನಿಂಗ್ ಮತ್ತು ಸಮೀಕ್ಷೆ ಯ ಸಮುದಾಯ ಆಧಾರಿತ ಮಾಹಿತಿಗಳ ತುಲನೆ ಮಾಡಬಹುದು. ಜತೆಗೆ ಇದರಿಂದ ಪ್ರತಿ ಶಾಲೆಗೆ ಸಮೂದಾಯದ ಜತೆಗೆ ಪೂರ್ಣ  ಪಾರದರ್ಶಕ ಸಮುದಾಯ ಆಧಾರಿತ ಉಸ್ತುವಾರಿ,  ಅನುದಾನವೂ ಸೇರಿದಂತೆ ಎಲ್ಲ ಮಾಹಿತಿಯನ್ನೂ  ಹಂಚಿಕೊಳ್ಳಲು ಉತ್ತೇಜನ ಸಿಗುವುದು. ಈ ಉದ್ದೇಶಕ್ಕಾಗಿ ಶಾಲೆಯಲ್ಲಿ ಒಂದು ಸೂಚನಾ ಫಲಕವನ್ನು  ಹಾಕಬಹುದು.
             ವಾಸಸ್ಥಳವು ಒಂದು ಯೋಜನಾ ಘಟಕ   - ಸ.ಶಿ ಅ (ಎಸ್ ಎಸ್. ಎ) ಯು ಸಮುದಾಯ ಆಧಾರಿತ ಯೋಜನೆಯನ್ನು ಮಾಡಲು ವಾಸಸ್ಥಳವು ಒಂದು ಯೋಜನಾ ಘಟಕ ಎಂದು ಪರಿಗಣಿಸಿದೆ . ಇವುಗಳು ಜಿಲ್ಲಾ ಯೋಜನೆ ರೂಪಿಸಲು ಆಧಾರವಾಗಿವೆ  .
                 
             ಸಮುದಾಯಕ್ಕೆ ಉತ್ತರ ದಾಯಿತ್ವ - ಸ.ಶಿ ಅ (ಎಸ್ ಸಸ್ಎ) ಯು  ಶಿಕ್ಷಕರು, ತಾಯಿತಂದೆಗಳು ಮತ್ತು  ಪಂಚಾಯತ್ ರಾಜ್ ಸಂಸ್ಥೆ (ಪಿ ಆರ್ ಐ), ಗಳ ನಡುವೆ ಸಹಕಾರ, ಜೊತೆಗೆ  ಅವರು ಸಮುದಾಯಕ್ಕೆ ಉತ್ತರದಾಯಿಗಳಾಗಿರಬೇಕು.  ಹಾಗು ಪಾರದರ್ಶಕತೆ ಹೊಂದಿರಬೇಕು ಎಂದು  ವಿಧಿಸಿದೆ.

    ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ-   ಹೆಣ್ಣು ಮಕ್ಕಳ ಶಿಕ್ಷಣ  ಅದರಲ್ಲೂ  ವಿಶೇಷವಾಗಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡ, ಅಲ್ಪ ಸಂಖ್ಯಾತರಾದವರಿಗೆ ಆದ್ಯತೆ ನೀಡುವುದು ಸರ್ವ ಶಿಕ್ಷಣ ಅಭಿಯಾನದ ಮುಖ್ಯ ಉದ್ದೇಶ.
             ವಿಶೇಷ ಗುಂಪುಗಳಿಗೆ ಗಮನ  -   ಪರಿಶಿಷ್ಟಜಾತಿ ಮತ್ತು ವರ್ಗ, ಅಲ್ಪಸಂಖ್ಯಾತರು ನಗರರದ ಅವಕಾಶ ವಂಚಿತ ಮಕ್ಕಳು, ಇತರೆ ಅನಾನುಕೂಲ ಹೊಂದಿದ ಗುಂಪಿನ ಮಕ್ಕಳು ಮತ್ತು ವಿಶೇಷ ಅಗತ್ಯಬೇಕಾದ ಮಕ್ಕಳಿಗೆ  ಶೈಕ್ಷಣಿಕ ಪ್ರಕ್ರಿಯೆಯಲ್ಲಿ  ಹೆಚ್ಚಿನ ಒತ್ತು ನೀಡಲಾಗುವುದು.

            ಯೋಜನಾಪೂರ್ವ ಹಂತ - ಸ.ಶಿ ಅ (ಎಸ್ ಎಸ್ಎ) ಯು  ದೇಶಾದ್ಯಂತ  ಚೆನ್ನಾಗಿ  ಯೋಜಿತ ವಾಗಿರುವ   ಯೋಜನಾಪೂರ್ವ ಹಂತ ವನ್ನು ಪ್ರಾರಂಭಿಸಿದೆ. ಅದು ಸಾಮರ್ಥ್ಯ  ಬೆಳೆಸುವಲ್ಲಿ ಅಧಿಕ ಮಧ್ಯವರ್ತನೆ ಅವಕಾಶ ಕೊಡುವುದು. ಅದರಿಂದ ಲಾಭವನ್ನು ತಲುಪಿಸುವಲ್ಲಿ  ಮತ್ತು ಮೇಲುಸ್ತುವಾರಿ ಮಾಡುವಲ್ಲಿ ಸುಧಾರಣೆಯಾಗುವುದು. ಇದರಲ್ಲಿ ಮನೆಮನೆಯ ಸಮೀಕ್ಷೆಗಳು, ಸಮುದಾಯ ಆಧಾರಿತ ಮೈಕ್ರೋ ಯೋಜನೆಗಳು ಮತ್ತು ಶಾಲಾ ನಕ್ಷೆಗಳು, ಸಮುದಾಯದ ನಾಯಕರಿಗೆ ತರಬೇತಿ, ಶಾಲಾಮಟ್ಟದ ಚಟುವಟಿಕಗಳು, ಮಾಹಿತಿ ವ್ಯವಸ್ಥೆಯ ಸ್ಥಾಪನೆಗೆ ಬೆಂಬಲ, ಕಚೇರಿಯ ಸಲಕರಣೆಗಳು,ಪತ್ತೆ ಮಾಡಲು ಅಧ್ಯಯನಗಳು, ಇತ್ಯಾದಿ.  .

           ಗುಣ ಮಟ್ಟಕ್ಕೆ ಹೆಚ್ಚು ಒತ್ತು – ಸ.ಶಿ ಅ (ಎಸ್ ಎಸ್ಎ) ಯು ಪ್ರಾಥಮಿಕ ಹಂತದಲ್ಲಿ ಶಿಕ್ಷಣವನ್ನು ಮಕ್ಕಳಿಗೆ ಹೆಚ್ಚು ಉಪಯುಕ್ತ ಮತ್ತು ಸುಸಂಗತವಾಗಿಸಲು  ಪಠ್ಯಕ್ರಮವನ್ನು ಸುಧಾರಿಸಲಿದೆ. ಮಗು ಕೇಂದ್ರಿತ ಕಲಿಯುವಿಕೆ ಮತ್ತು ಪರಿಣಾಮಕಾರಿ ಬೋಧನೆ ಮತ್ತು ಕಲಿಕೆಯ ತಂತ್ರಗಳ ಮೇಲೆ ವಿಶೇಷ ಮುತುವರ್ಜಿ ವಹಿಸಿದೆ.
            ಶಿಕ್ಷಕರ ಪಾತ್ರ - ಸ.ಶಿ ಅ (ಎಸ್ ಸಸ್ಎ) ಯು  ಯು  ಶಿಕ್ಷಕರ  ಆಯಕಟ್ಟಿನ ಮತ್ತು ಅತಿ ಮುಖ್ಯವಾದ ಪಾತ್ರವನ್ನು ಗುರುತಿಸಿದೆ. ಮತ್ತು ಅವರ  ಆಭಿವೃದ್ಧಿಯ ಅಗತ್ಯವನ್ನು  ಗಮನಿಸಿ ಅದಕ್ಕಾಗಿ ಸೂಕ್ತ  ಬೆಂಬಲ ನೀಡಿದೆ .  ವಲಯ ಸಂಪನ್ಮೂಲ ಕೇಂದ್ರ,/ ಕ್ಲಸ್ಟರ್ ಸಂಪನ್ಮೂಲ ಕೇಂದ್ರಗಳ ಸ್ಥಾಪನೆ, ಅದಕ್ಕೆ ಅರ್ಹ ಶಿಕ್ಷಕರ ನೇಮಕಾತಿ, ಪಠ್ಯಕ್ರಮಕ್ಕೆ ಸಂಬಂಧಿಸಿದ ಸಾಮಗ್ರಿಗಳ ಅಭಿವೃದ್ಧಿಮಾಡಲು, ಅದರಲ್ಲಿ ಪಾಲುಗೊಳ್ಳಲು ಅವರಿಗೆ ಅವಕಾಶ, ತರಗತಿಯ ಪ್ರಕ್ರಿಯೆಗೆ ಒತ್ತು, ಹೊರ ಪ್ರಪಂಚಕ್ಕೆ ಅವರನ್ನು ಒಡ್ಡಲು ಭೇಟಿಗಳು ಇತ್ಯಾದಿಗಳನ್ನು ,  ಶಿಕ್ಷಕರಲ್ಲಿ ಮಾನವ ಸಂಪನ್ಮೂಲವನ್ನು ಅಭಿವೃದ್ಧಿಗೊಳಿಸಲು ವಿನ್ಯಾಸಗೊಳಿಸಲಾಗಿದೆ.

    ಜಿಲ್ಲಾ ಪ್ರಾಥಮಿಕ ಶಿಕ್ಷಣ  ಯೋಜನೆಗಳು -  ನಿಗದಿಪಡಿಸಿದ ಮಾದರಿಯ ಪ್ರಕಾರ, ಪ್ರತಿಜಿಲ್ಲೆಯೂ ಜಿಲ್ಲಾ ಪ್ರಾಥಮಿಕ ಶಿಕ್ಷಣ ಯೋಜನೆಯನ್ನು, ಆ ಜಿಲ್ಲೆಯಲ್ಲಿ ಹೂಡುತ್ತಿರುವ  ಮತ್ತು ಪ್ರಾಥಮಿಕ ಶಿಕ್ಷಣ ವಿಭಾಗಕ್ಕೆ ಬೇಕಾದ ಹಣ, ಸರ್ವಾಂಗೀಣ ಮತ್ತು ಐಕ್ಯತಾ ದೃಷ್ಟಿಕೋನದಿಂದ ಯೋಜನೆಯನ್ನು  ತಯಾರಿಸಬೇಕು. ಒಂದು ಯಥಾದೃಷ್ಟಿಯ ಯೋಜನೆಯು  ( UEE).  ದೂರಗಾಮಿ ಅವಧಿಯಲ್ಲಿ ಸಾಧಿಸಬಹುದಾದ  ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣದ ಗುರಿಗೆ ಪೂರಕವಾದ ಚಟುವಟಿಕೆಗಳ ಮಾದರಿಯನ್ನು ನೀಡುತ್ತದೆ.  ಒಂದು ವಾರ್ಷಿಕ  ಕಾರ್ಯಯೋಜನೆ ಮತ್ತು  ಆಯವ್ಯಯ ಪಟ್ಟಿ ಯೂ ಇರುವುದು.   ಅದು ಆ ವರ್ಷದಲ್ಲಿ ಆದ್ಯತೆಯ ಮೇರೆಗೆ ಮಾಡಬಹುದಾದ ಚಟುವಟಿಕೆಗಳ ಪಟ್ಟಿ ತಯಾರಿಸಿರುವುದು. ಯಥಾದೃಷ್ಟಿಯ ಯೋಜನೆಯು ಒಂದು ಕ್ರಿಯಾತ್ಮಕ ದಾಖಲೆ. ಕಾರ್ಯಕ್ರಮದ ಅನುಷ್ಠಾನದ ಸಮಯದಲ್ಲಿ ಸದಾ ಸುಧಾರಣೆಗೆ ಅವಕಾಶ ಹೊಂದಿರುವುದು.
       

    ಸರ್ವಶಿಕ್ಷಣ ಅಭಿಯಾನದ ಆರ್ಥಿಕ  ಮಾದರಿ

               *  ಸರ್ವ ಶಿಕ್ಷಣ ಅಭಿಯಾನದ  ಅನುದಾನವು  ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ   IX ನೇ ಯೋಜನೆಯ ಅವಧಿಯಲ್ಲಿ ೮೫: ೧೫ ಪ್ರಮಾಣದಲ್ಲಿರುವುದು.  X ನೇ ಯೊಜನೆಯ ಅವಧಿಯಲ್ಲಿ  ೭೫ :  ೨೫  ಪ್ರಮಾಣದಲ್ಲಿರುವುದು.  ಅಲ್ಲಿಂದ  ಮುಂದೆ ೫೦ : ೫೦ ಪ್ರಮಾಣದಲ್ಲಿರುವುದು.
    .                                                                             

        ರಾಜ್ಯಸರ್ಕಾರಗಳು  ಪ್ರಾಥಮಿಕ ಶಿಕ್ಷಣಕ್ಕಾಗಿ ೧೯೯೯-೨೦೦೦ಸಾಲಿನಲ್ಲಿ ಮಾಡಿದಷ್ಟೆ ವೆಚ್ಚವನ್ನು ಮುಂದೂ ಮಾಡಬೇಕು.  ರಾಜ್ಯ ಸರ್ಕಾರದ ವಂತಿಕೆಯು ಸರ್ವ ಶಿಕ್ಷಣ ಅಭಿಯಾನಕ್ಕೆ  ಅದು ಈಗ ಮಾಡುತ್ತಿರುವ ವೆಚ್ಚದ ಮೇಲೆ ಹೆಚ್ಚುವರಿಯಾಗಿರುವುದು.
             ಭಾರತ ಸರ್ಕಾರವು ರಾಜ್ಯ ಅನುಷ್ಠಾನ ಸಮಿತಿಗೆ ನೇರವಾಗಿ ಹಣ ಬಿಡುಗಡೆ ಮಾಡುವುದು. ಮುಂದಿನ ಕಂತುಗಳನ್ನು  ರಾಜ್ಯಸರ್ಕಾರವು ಸರಿದೂಗುವ ಅನುದಾನವನ್ನು ಸಮಿತಿಗೆ ವರ್ಗಾಯಿಸಿದ ಮೇಲೆ ಬಿಡುಗಡೆ ಮಾಡಲಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡಿದ ಅನುದಾನದ  ಕನಿಷ್ಟ ೫೦% ಹಣವನ್ನು ವೆಚ್ಚಮಾಡಿದ ಮೇಲೆ ಮಾತ್ರ ಹಣ ಬಿಡುಗಡೆ ಮಾಡಲಾಗುವುದು.  
        ಸರ್ವ ಶಿಕ್ಷಣ ಅಭಿಯಾನ ಕಾರ್ಯಕ್ರಮದಲ್ಲಿ ನೇಮಕವಾದ ಶಿಕ್ಷಕರಿಗೆ ನೀಡಬೇಕಾದ ವೇತನದ ಹಣವನ್ನು IX ನೇ ಯೋಜನೆಯ ಅವಧಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲು ೮೫: ೧೫ ಪ್ರಮಾಣದಲ್ಲಿರುವುದು.  X ನೇ ಯೊಜನೆಯವಧಿಯಲ್ಲಿ  ೭೫ :  ೨೫  ಪ್ರಮಾಣದಲ್ಲಿರುವುದು.  ಅಲ್ಲಿಂದ ಮುಂದೆ ೫೦ : ೫೦ ಪ್ರಮಾಣದಲ್ಲಿರುವುದು.

         ಹೊರಗಿನಿಂದ ಸಹಾಯ ಪಡೆಯುವ ಯೋಜನೆಗಳಿಗೆ ಅನ್ವಯವಾಗುವ ಎಲ್ಲ ಕಾನೂನು ಬದ್ಧ  ಒಪ್ಪಂದಗಳು  ಇದಕ್ಕೂ ಅನ್ವಯವಾಗುತ್ತವೆ.ನಿರ್ಧಿಷ್ಟ ಮಾರ್ಪಾಡುಗಳೇನಾದರೂ  ಹಣ ನೀಡುವ ವಿದೇಶಿ ಏಜೆನ್ಸಿಯ ಸಲಹೆಯಂತೆ ಮಾಡಿಕೊಂಡಿದ್ದರೆ  ಅವಕ್ಕೆ ವಿನಾಯ್ತಿ ಇದೆ.
        ಶಿಕ್ಷಣ ಇಲಾಖೆಯ ಪ್ರಾಥಮಿಕ ಶಿಕ್ಷಣದ ಈಗಿರುವ ಯೋಜನೆಗಳು (ಮಹಿಳಾ ಸಾಮಖ್ಯ, ರಾಷ್ಟ್ರೀಯ ಬಾಲಭವನ, ಎನ್. ಸಿ.ಟಿ ಇ . ಹೊರತುಪಡಿಸಿ)   IXನೇ ಯೋಜನೆಯ ನಂತರ ಇದರಲ್ಲಿ ಐಕ್ಯವಾಗುತ್ತವೆ.   ಮಧ್ಯಾಹ್ನ ಭೋಜನ ( ಮಿಡ್ ಡೇ ಮೀಲ್ ) ಮಾತ್ರ ಪ್ರತ್ಯೇಕವಾಗಿರುವುದು. ಆಹಾರ ಧಾನ್ಯಗಳು ಮತ್ತು ಸಾಗಣಿಕೆ ವೆಚ್ಚವನ್ನು ಕೇಂದ್ರ ಸರಕಾರವು ಮತ್ತು ಅಡಿಗೆ ಮಾಡುವ ವೆಚ್ಚವನ್ನು ರಾಜ್ಯ ಸರ್ಕಾರವು ವಹಿಸಿ ಕೊಳ್ಳುವವು.
        ಜಿಲ್ಲಾ  ಶೈ ಕ್ಷ ಣಿಕ ಯೋಜನೆಯು ಸ್ಪಷ್ಟವಾಗಿ  ಬೇರೆ ಬೇರೆ ಯೋಜನೆ . ಕಾರ್ಯಕ್ರಮಗಳಾದ  PMGY, JGSY, PMRY, ಸುನಿಶ್ಚಿತ ರೋಜಗಾರ ಯೋಜನೆ,, ಎಂ.ಪಿ /ಎಮ್ ಎಲ್ ಎ ಗಳ ಪ್ರದೇಶ ನಿಧಿ , / ರಾಜ್ಯ ಯೋಜನೆ, ವಿದೇಶಿ ಅನುದಾನ ( ಇದ್ದರೆ) ಮತ್ತು (NGO ) ಸರಕಾರೇತರ ವಲಯದಲ್ಲಿ ಬಂದ ಸಂಪನ್ಮೂಲಗಳನ್ನು ನಮೂದಿಸಬೇಕು.
        ಎಲ್ಲ ನಿಧಿಯನ್ನು  ಶಾಲೆಯನ್ನು  ಉನ್ನತೀಕರಿಸಲು, ನಿರ್ವಹಣೆ, ದುರಸ್ತಿಮಾಡಲು, ಪಾಠೋಪಕರಣಗಳು  ಮತ್ತು  ಸ್ಥಳೀಯ ನಿರ್ವಹಣೆಯನ್ನು     ಗ್ರಾಮ ಶಿಕ್ಷಣ ಸಮಿತಿ / ಶಾಲಾನಿರ್ವಹಣಾ ಸಮಿತಿ /   ಗ್ರಾಮ ಪಂಚಾಯಿತಿಗೆ ಅಥವ ಸರ್ಕಾರವು ವಿಕೇಂದ್ರಿಕರಣದ ಮೇರೆಗೆ ಸೂಚಿಸಿದ ಸಂಸ್ಥೆಗೆ  ವರ್ಗಾಯಿಸಬೇಕು. ಶಾಲೆಯ / ಗ್ರಾಮ ಸಮಿತಿಯು ಆ ಬಗ್ಗೆ ಹಣವನ್ನು ಪಡೆಯಲು ಇರುವ ಅತ್ಯುತ್ತಮ ವಿಧಾನದ ಬಗ್ಗೆ ಗೊತ್ತುವಳಿ ಪಾಸು ಮಾಡಬೇಕು
        ಇತರ ಉತ್ತೇಜಕ ಯೋಜನೆಗಳಾದ ವಿದ್ಯಾರ್ಥಿ ವೇತನ,  ಸಮವಸ್ತ್ರ ಹಂಚುವಿಕೆ, ಮೊದಲಾದವು ರಾಜ್ಯ ಯೋಜನೆಯ ನಿಧಿಯಿಂದ ಬರುವವು, ಅವುಗಳನ್ನು ಸರ್ವಶಿಕ್ಷಣ ಅಭೀಯಾನದಿಂದ ಭರಿಸಬಾರದು

========================
ಎಸ್.ಎಸ್.ಎ ಅಡಿಯಲ್ಲಿ ಮಧ್ಯವರ್ತನೆಗಳಿಗಿರುವ ಮಾದರಿಗಳು
     ಎಸ್.ಎಸ್.ಎ ಅಡಿಯಲ್ಲಿ ಆರ್ಥಿಕ ಮಾದರಿಗಳು :
     ಮಧ್ಯವರ್ತನೆಯ  ಮಾದರಿಗಳು
        1.ಶಿಕ್ಷಕರು
                  * ಪ್ರತಿ  40  ಮಕ್ಕಳಿಗೆ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ  ಹಂತದಲ್ಲಿ ಒಬ್ಬ ಶಿಕ್ಷಕರು
                  *   ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಕನಿಷ್ಟ ಇಬ್ಬರು ಶಿಕ್ಷಕರು
                  *  ಪ್ರತಿ ತರಗತಿಗೆ,  ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಒಬ್ಬ ಶಿಕ್ಷಕರು.

        2 .  ಶಾಲೆ / ಪರ್ಯಾಯ ಶಾಲಾ ಸೌಲಭ್ಯ
                  * ವಾಸದ ಸ್ಥಳದಿಂದ ಒಂದು ಕಿಲೋಮಿಟರ್ ಒಳಗೆ
                  * ರಾಜ್ಯದ ನಿಯಮನಸಾರ  ಹೊಸ ಶಾಲೆ ಸ್ಥಾಪಿಸಲು ಅವಕಾಶ. ಅಥವ ಸೌಲಭ್ಯವಿಲ್ಲದ ಸ್ಥಳದಲ್ಲಿ  ಹೊಸ ಶಾಲೆ ಶುರು ಮಾಡಲು ಅವಕಾಶ

        3. ಉನ್ನತ ಪ್ರಾಥಮಿಕ ಶಾಲೆಗಳು / ವಲಯಗಳು
                  * ಅಗತ್ಯದಮೇರೆಗೆ,  ಪ್ರಾಥಮಿಕ  ಶಿಕ್ಷಣವನ್ನು ಮುಗಿಸಿದವರ ಸಂಖ್ಯೆಗೆ ಅನುಗುಣವಾಗಿ,  ಪ್ರತಿ ಎರಡು ಪ್ರಾಥಮಿಕ ಶಾಲೆಗಳಿಗೆ ಒಂದುಹಿರಿಯ ಪ್ರಾಥಮಿಕ ಶಾಲೆ ಅಥವ ಒಂದು ವರ್ಗ
        4. ತರಗತಿ ಕೊಠಡಿಗಳು
                  *  ಪ್ರಾಥಮಿಕ  ಶಾಲೆಯಲ್ಲಿ ಪ್ರತಿ ಶಿಕ್ಷಕನಿಗೆ ಅಥವ ಪ್ರತಿ ತರಗತಿಗೆ /ವರ್ಗ  , ಎರಡರಲ್ಲಿ  ಯಾವುದು ಕಡಿಮೆಯೋ ಅದರಂತೆ  ಕೊಠಡಿಇರಬೇಕು.  ಮತ್ತು  ಹಿರಿಯ ಪ್ರಾಥಮಿಕ ಶಾಲೆಯಾದರೆ ವರಾಂಡ ಇರುವ ಎರಡು ತರಗತಿಯ ಕೊಠಡಿಗಳು ಬೇಕು. ಕನಿಷ್ಟ ಇಬ್ಬರು ಶಿಕ್ಷಕರು  ಇರಬೇಕು.
                  * ಹಿರಿಯ ಪ್ರಾಥಮಿಕ ಶಾಲೆಯಾದರೆ ಮುಖ್ಯ ಶಿಕ್ಷಕರಿಗೆ ಒಂದುಪ್ರತ್ಯೇಕ  ಕೊಠಡಿ/ ವಿಭಾಗ ಇರಬೇಕು.
        5. ಉಚಿತ ಪಠ್ಯ ಪುಸ್ತಕಗಳು
                 ರಾಜ್ಯವು ಈಗ ರಾಜ್ಯದ ಯೋಜನೆಯ ಮೇರೆಗೆ ನೀಡುತ್ತಿರುವ ಉಚಿತ ಪುಸ್ತಕಗಳ ಹಂಚಿಕೆಯನ್ನು ಮುಂದುವರಿಸಬೇಕು.
                  *  ಯಾವುದೇ ರಾಜ್ಯದಲ್ಲಿ  ಪುಸ್ತಕಗಳನ್ನು   ಸರ್ಕಾರವು ರಿಯಾಯತಿ ದರದಲ್ಲಿ ನೀಡುತ್ತಿದ್ದರೆ , ಮಕ್ಕಳು  ಕೊಡುವ ಹಣವನ್ನು ಮಾತ್ರ ಸ. ಶಿ. ಆ ವು ನೀಡಬೇಕು.
        6. ಸಿವಿಲ್  ಕಾಮಗಾರಿಗಳು
                  * ಪಿಎ.ಬಿಯು (ಪರಸ್ಪೆಕ್ಟಿವ್) ಯಥಾದೃಷ್ಟಿ ಯೋಜನೆಯ ಮೇರೆಗೆ  ೨೦೧೦ರವರೆಗಿನ ಆವಧಿಗೆ ಕಾರ್ಯಕ್ರಮ ಅನುಮೋದಿಸಿದ ಒಟ್ಟು ನಿಧಿಯ ೩೩% ಗಿಂತ  ಹೆಚ್ಚು ಹಣವನ್ನು  ಸಾರ್ವಜನಿಕ ಕೆಲಸಗಳಿಗೆ ಉಪಯೋಗಿಸಬಾರದು  
                  * ಈ ೩೩% ಮಿತಿಯು  ಕಟ್ಟಡಗಳ ನಿರ್ವಹಣೆ ಮತ್ತು ದುರಸ್ತಿಯನ್ನು ಒಳಗೊಂಡಿರುವುದಿಲ್ಲ.
                  *  ಆದರೂ ಒಂದು ನಿರ್ಧಿಷ್ಟ   ವರ್ಷದ ವಾರ್ಷಿಕ ಯೊಜನೆಯಲ್ಲಿ ಸಾರ್ವಜನಿಕ ಕೆಲಸಗಳನ್ನು ೪೦% ರ ವರೆಗೆ ಆ ವರ್ಷದ ಕಾರ್ಯಕ್ರಮದ ವಿವಿಧ ಅಂಶಗಳ ಆದ್ಯತೆಯನ್ನು ಗಮನಿಸಿ ಖರ್ಚು ಮಾಡಬಹುದು.ಆದರೆ ಅದು ಯೋಜನೆಯ  ಎಲ್ಲ ಆಯವ್ಯದ ೩೩% ಮಿತಿಯನ್ನು ಮೀರಬಾರದು.
                  * ಶಾಲೆಯ ಸೌಲಭ್ಯಗಳನ್ನು ಸುಧಾರಿಸಲು,
                  *  ಕ್ಲಸ್ಟರ್ ಸಂಪನ್ಮೂಲ ಕೇಂದ್ರ (CRC) ಗಳನ್ನು ಹೆಚ್ಚುವರಿ ಕೊಠಡಿಯಾಗಿ ಉಪಯೋಗಿಸಬಹುದು.
                  *  ಕಚೇರಿ ಕಟ್ಟಡಕ್ಕಾಗಿ ಯಾವುದೆ ಖರ್ಚು ಮಾಡಬಾರದು.
                  *  ಜಲ್ಲೆಗಳು ಮೂಲಭೂತ ಸೌಕರ್ಯಗಳ ಯೋಜನೆ ತಯಾರಿಸಬೇಕು.
        7.  ಶಾಲಾ ಕಟ್ಟಡಗಳ ನಿರ್ವಹಣೆ ಮತ್ತು  ದುರಸ್ತಿ.

                  * ಶಾಲೆಯ ವ್ಯವಸ್ಥಾಪಕ ಸಮಿತಿ/ /VECs  ಮೂಲಕ ಮಾತ್ರ  ಕೆಲಸ ಮಾಡಿಸಬೇಕು.
                  *  ಶಾಲಾ ಸಮಿತಿಯ ಪ್ರಸ್ತಾವನೆಯ ಮೇರೆಗೆ ವಾರ್ಷಿಕ ೫೦೦೦ರೂಪಾಯಿಗಳ ವರೆಗೆ ಖರ್ಚು               ಮಾಡಬಹುದು
                          *   ಸಮುದಾಯದ ವಂತಿಗೆಯ ಅಂಶ ಇರಲೇಬೇಕು.
                  * ಕಟ್ಟಡಗಳ ನಿರ್ವಹಣೆ ಮತ್ತು ದುರಸ್ತಿಯ ಖರ್ಚನ್ನು  ಸಾರ್ವಜನಿಕ ಕೆಲಸಗಳಿಗೆ ಇರುವ ೩೩%      ಮಿತಿಯಲ್ಲಿ ಲೆಕ್ಕಹಾಕಬಾರದು .
                  *  ಅನುದಾನವು ಯಾವ ಶಾಲೆಗೆ ಸ್ವಂತ ಕಟ್ಟಡವಿದೆಯೋ ಅದಕ್ಕೆ ಮಾತ್ರ  ದೊರೆಯುವುದು.
        8.   ಕ್ರಮಬದ್ಧ ಶಾಲೆಯಾಗಿ ಇಜಿಎಸ್ ( EGS) ಯನ್ನು ಉನ್ನತಿಕರಿಸುವುದು ಅಥವ ರಾಜ್ಯದ ಮಾದರಿ  ಪ್ರಕಾರ ಹೊಸ ಶಾಲೆಯನ್ನು ತೆರೆಯಬಹುದು .
                  * ಪ್ರತಿ ಶಾಲೆಗೆ ಟಿ ಎಲ್ ಇ  TLE @ ರೂ.. 10,000/-.
                  *ಸ್ಥಳಿಯ ಸಂದರ್ಭ ಮತ್ತು ಅಗತ್ಯಕ್ಕೆ ಅನುಗುಣವಾಗಿ ಟಿ ಎಲ್ ಈ( TLE)
                  * ಟಿ ಎಲ್ ಇ ಯ  ಆಯ್ಕೆ  ಮತ್ತು  ಪಡೆಯುವುದರಲ್ಲಿ  ಶಿಕ್ಷಕರನ್ನು ಮತ್ತು ತಾಯಿತಂದೆಯರನ್ನು   ತೊಡಗಿಸುವುದು
                  *  ಶಾಲೆ ಪಡೆಯುವ ಅತ್ಯುತ್ತಮ ವಿಧಾನವನ್ನು VEC / ಶಾಲಾ- ಗ್ರಾಮಮಟ್ಟದ  ಸೂಕ್ತವಾದ                    ಸಂಸ್ಥೆಯು ನಿರ್ಧರಿಸುವುದು.
                  * ಇಜಿಎಸ್   EGS ಕೇಂದ್ರವನ್ನು  ಉನ್ನತಿಕರಣಕ್ಕೆ ಮೊದಲು  ಅದು ೨ ವರ್ಷ ಯಶಸ್ವಿಯಾಗಿ                          ನೆಡೆದಿರಬೇಕು..
                  *  ಶಿಕ್ಷಕರಿಗೆ ಮತ್ತು ತರಗತಿ ಕೊಠಡಿಗಳಿಗೆ ಅವಕಾಶ
        9. ಹಿರಿಯ ಪ್ರಾಥಮಿಕಶಾಲೆಗಳಿಗೆ ಟಿ ಎಲ್ ಇ (TLE) 
                  *   ಒಳಪಡದ ಶಾಲೆಗಳಿಗೆ ಪ್ರತಿಯೊಂದಕ್ಕೆ  @ ರೂ. Rs 50,000
                  *  ಶಾಲೆಯ  ನಿರ್ದಿಷ್ಟ ಅಗತ್ಯವನ್ನು  ಶಿಕ್ಷಕರು/  ಶಾಲಾ ಸಮಿತಿ ನಿರ್ಧರಿಸವುದು.
                  * ಶಾಲಾ ಸಮಿತಿಯು  ಶಿಕ್ಷಕರ ಸಲಹೆಯ ಮೇರೆಗೆ ಅದನ್ನು ಪಡೆಯುವ ವಿಧಾನವನ್ನು ನಿರ್ಧರಿಸಬೇಕು.                  * ಶಾಲಾ  ಸಮಿತಿಯು  ಅನುಕೂಲವಾಗುವುದಾದರೆ ಜಿಲ್ಲಾಮಟ್ಟದಲ್ಲಿ ಪದಾರ್ಥಗಳನ್ನು ಖರೀದಿಸುವ / ಪಡೆವುದನ್ನು ಶಿಫಾರ್ಸು   ಮಾಡಬಹುದು.

       ಮಧ್ಯ ವರ್ತನೆಯ ಮಾದರಿ.  
                                                                                        
        10. ಶಾಲಾ ಅನುದಾನ
                  * ಶಾಲೆಯ ಕೆಟ್ಟುಹೋದ, ಕೆಲಸ ಮಾಡದ ಉಪಕರಣಗಳ ಮರು ಖರಿದಿಗಾಗಿ  ಪ್ರಾಥಮಿಕ / ಹಿರಿಯ       ಪ್ರಾಥಮಿಕ ಶಾಲೆಗಳಿಗೆ  ವರ್ಷಕ್ಕೆ  ರೂ. 2000/-
                  * ಬಳಕೆಯಲ್ಲಿ ಪಾರದರ್ಶಕತೆ.
                  * ಗ್ರಾಮ ಶಿಕ್ಷಣ ಸಮಿತಿ / ಶಾಲಾ ನಿರ್ವಹಣ ಸಮಿತಿ ( VEC / SMC)  ಮಾತ್ರ  ಅನುದಾನ  ಬಳಸಬೇಕು

        11. ಶಿಕ್ಷಕ ಅನುದಾನ.
                  * ಪ್ರಾಥಮಿಕ / ಹಿರಿಯ ಪ್ರಾಥಮಿಕ ಶಾಲೆಗಳಿಗೆ ವರ್ಷಕ್ಕೆ ಪ್ರತಿ ಶಾಲೆಗೆ ರೂ  500.
                  *  ಬಳಕೆಯಲ್ಲಿ ಪಾರದರ್ಶಕತೆ .

        12. ಶಿಕ್ಷಕರಿಗೆ ತರಬೇತಿ
                  * ಎಲ್ಲ ಶಿಕ್ಷಕರಿಗೆ ಪ್ರತಿವರ್ಷ ೨೦ ದಿನದ ಸೇವಾಂತರ್ಗತ ತರಬೇತಿಗೆ ಅವಕಾಶ.  ಕೆಲಸದಲ್ಲಿರುವ ಆದರೆ ತರಬೇತಿ ಇಲ್ಲದ  ಶಿಕ್ಷಕರಿಗೆ  ೬೦ ದಿನಗಳ ತರಬೇತಿ.  ಹೊಸದಾಗಿ ಕೆಲಸಕ್ಕೆ ಸೇರಿದ ಇತ್ತೀಚೆಗೆ ತರಬೇತಿ ಪಡೆದವರಿಗೆ   ೩೦ ದಿನದ  ಪುನರ್ ಮನನ  ಕೋರ್ಸನ್ನು ನೆಡಸಬೇಕು. ಅವರಿಗೆ ದಿನಕ್ಕೆ ರೂ. ೭೦ ಗಳ ಭತ್ಯ ಕೊಡುವ ಅವಕಾಶ ಇರಬೇಕು  
              *    ಘಟಕದ ವೆಚ್ಚ ಸೂಚಕ;  ವಸತಿರಹಿತ ತರಬೇತಿ  ಕಾರ್ಯಕ್ರಮದ ವೆಚ್ಚ ಕಡಿಮೆ ಇರಬೇಕು
                  * ಎಲ್ಲ ತರಬೇತಿ ವೆಚ್ಚವು ಅದರಲ್ಲಿ ಸೇರಿರುವುದು.
                  *  ಪರಿಣಾಮಕಾರಿ ತರಬೇತಿಯ ಮೌಲ್ಯಮಾಪನ ಸಾಮರ್ಥ್ಯವನ್ನು  ತಿಳಿಯುವುದರಿಂದ  ತರಬೇತಿಯ ವ್ಯಾಪ್ತಿ ಗೊತ್ತಾಗುವುದು.
                  *  ಈಗಿರುವ ಶಿಕ್ಷಕರ ತರಬೇತಿ ಕಾರ್ಯಕ್ರಮದ ಅಡಿಯಲ್ಲಿ SCERT / DIET  ಗಳಿಗೆ ಬೆಂಬಲ

        13. ರಾಜ್ಯ ಶೈಕ್ಷಣಿಕ ನಿರ್ವಹಣೆ ಮತ್ತು ತರಬೇತಿ ಸಂಸ್ಥೆ (SIEMAT)
                  * ಮೂರು ಕೊಟಿಯವರೆಗೆ ಒಂದೆ ಸಲದ ಸಹಾಯ
                  * ರಾಜ್ಯಗಳು  ಸುಸ್ಥಿರಗೊಳಿಸಲು ಒಪ್ಪಬೇಕು.
                  *  ಆಯ್ಕೆಯ  ಮಾನದಂಡ  ಬಿಗಿಯಾಗಿರಬೇಕು.
        14. ಸಮುದಾಯದ ನಾಯಕರ ತರಬೇತಿ
                  * ಒಂದು ವರ್ಷದಲ್ಲಿ  ಪ್ರತಿ ಗ್ರಾಮದಿಂದ ೮ ಜನರಿಗೆ ೨ ದಿನದ ತರಬೇತಿ ನೀಡಬೇಕು.     ಹೆಣ್ಣುಮಕ್ಕಳಿಗೆ ಆದ್ಯತೆ ಇರಲಿ.
                  * ಪ್ರತಿ ವ್ಯಕ್ತಿಗೆ ಒಂದು ದಿನಕ್ಕೆ @ ರೂ. 30/-
        15.  ವಿಕಲ ಚೇತನ ಮಕ್ಕಳಿಗೆ  ಅವಕಾಶ
                  *  ವಿಕಲ ಚೇತನ ಮಕ್ಕಳನ್ನು ಒಂದು ಗೂಡಿಸಲು ಪ್ರತಿ ವರ್ಷಕ್ಕೆ ನಿರ್ದಿಷ್ಟ  ಪ್ರಸ್ತಾವನೆಯ ಮೆರೆಗೆ                           ರೂ. 1200/-  ತನಕ ಒಂದು ಮಗುವಿಗೆ   ಕೊಡಬಹುದು.
                  *  ವಿಶೇಷ ಅಗತ್ಯವಿರುವ   ಮಕ್ಕಳಿಗೆ  ಒಂದು ಮಗುವಿಗೆ 1200  ರೂಪಾಯಿಯ ಒಳಗೆ                            ಸಹಾಯ ನಿಡಲು ಜಿಲ್ಲಾ  ಯೋಜನೆಯನ್ನು ರೂಪಿಸಬೇಕು
                  *  ಸಂಪನ್ಮೂಲ ಸಂಸ್ಥೆಗಳ  ತೊಡಗುವಿಕೆಯನ್ನು ಉತ್ತೇಜಿಸಬೇಕು.
        16.  ಸಂಶೋಧನೆ, ಮೌಲ್ಯಮಾಪನ, ಮೇಲ್ವಿಚಾರಣೆ ಮತ್ತು ಉಸ್ತುವಾರಿ .
                  *  ಪ್ರತಿ ಶಾಲೆಗೆ  ವರ್ಷಕ್ಕೆ ರೂ.1500 ವರೆಗೆ.
                  * ಸಂಶೋಧನಾ ಮತ್ತು  ಸಂಪನ್ಮೂಲ   ಸಂಸ್ಥೆಗಳ ಜೊತೆ ಸಹಭಾಗಿತ್ವ.  ರಾಜ್ಯದಲ್ಲಿನ  ನಿರ್ಧಿಷ್ಟ           ಗುರಿ ಹೊಂದಿದ ಸಂಪನ್ಮೂಲ ತಂಡಗಳ ಕ್ರೋಢೀಕರಣ.
                  *ಮೌಲ್ಯ ಮಾಪನ ಮತ್ತು ಮೇಲ್ವಿಚಾರಣ ಸಾಮರ್ಥ್ಯದ ಅಭಿವೃದ್ಧಿಗೆ  ಸಂಪನ್ಮೂಲ ಮತ್ತು                              ಸಂಶೋಧನ ಸಂಸ್ಥೆಗಳ ಮೂಲಕ  ಅದ್ಯತೆ .ಮತ್ತು ಪರಿಣಮಕಾರಿಯಾದ  EMIS .
                  *   ಶಾಲೆಗಳ ನಕ್ಷೆ ಮತ್ತು/ ಮೈಕ್ರೋ ಯೋಜನೆಗಳ  ಮೂಲಕ ಮನೆಗಳ  ದತ್ತಾಂಶಗಳನ್ನು ತಹಲ್ ವರೆಗೆ ತರುವುದು.
               *  ಸಂಪನ್ಮೂಲ ವ್ಯಕ್ತಿಗಳ ಸಮೂಹ ರಚಿಸಲಾಗುವುದು, ಪ್ರವಾಸ  ಅನುದಾನ,  ಮೇಲುಸ್ತುವಾರಿಗೆ ಗೌರವಧನ, ಸಮುದಾಯ ಆಧಾರಿತ ದತ್ತಾಂಶದ ಉತ್ಪಾದನೆ, ಸಂಶೋಧನಾ ಅಧ್ಯಯನಗಳು, ವೆಚ್ಚದ ಅಂದಾಜು ಮತ್ತು ತಿಳುವಳಿಕೆಯ ಶರತ್ತುಗಳು ಮತ್ತು ಅವರ ಕ್ಷೇತ್ರ ಚಟುವಟಿಕೆಗಳು, ಸಂಪನ್ಮೂಲ ವ್ಯಕ್ತಿಗಳಿಂದ ತರಗತಿಯ ಪರಿಶೀಲನೆ.

        ಮಧ್ಯವರ್ತನೆಯ ಮಾದರಿ.

                  * ರಾಷ್ಟ್ರ, ರಾಜ್ಯ, ಜಿಲ್ಲಾ, ವಿಭಾಗ, ಮತ್ತು ಶಾಲಾ ಮಟ್ಟದಲ್ಲಿ  ನಿಧಿಯನ್ನು ಖರ್ಚು ಮಾಡುವಾಗ                   ಪ್ರತಿಶಾಲೆಗೆ ಮಂಜೂರಾದ ಅನುದಾನ ಗಮನದಲ್ಲಿರಬೇಕು  .
                  * ರಾಷ್ಟ್ರ ಮಟ್ಟದಲ್ಲಿ  ಶಾಲೆ ಒಂದಕ್ಕೆ ಪ್ರತಿವರ್ಷ. 100 ರೂಪಾಯಿ ವೆಚ್ಚ ಮಾಡಬಹುದು.
                  *  ರಾಜ್ಯ/ಜಿಲ್ಲೆ /BRC/CRC/ಶಾಲಾ ಹಂತದಲ್ಲಿ ಮಾಡುವ ಖರ್ಚನ್ನು ಆಯಾ ರಾಜ್ಯಗಳೇ                         ನಿರ್ಧರಿಸಬೇಕು.  ಇದು ಮೌಲ್ಯಮಾಪನ , ಉಸ್ತುವಾರಿ,  MIS  , ತರಗತಿಯ ಪರಶೀಲನಾ                       ವೆಚ್ಚವನ್ನು ಒಳಗೋಂಡಿರುವುದು.,
               SCERT  ಗೆ   ಬೆಂಬಲ  ನಿಡುವಾಗ ಶಿಕ್ಷಕರ ಶಿಕ್ಷಣ ಕಾರ್ಯಕ್ರಮಕ್ಕೆ ಒದಗಿಸಿದ ನಿಧಿಯೂ ಅಲ್ಲದೆ    ಹೆಚ್ಚಿನ ಅವಕಾಶ  ಇರಬೇಕು.
                  * ರಾಜ್ಯದಲ್ಲಿ  ನಿರ್ದಿಷ್ಟ ಜವಾಬ್ದಾರಿಯನ್ನು ನಿರ್ವಹಿಸಲು ಸಿದ್ಧವಿರುವ ಸಂಸ್ಥೆಗಳನ್ನು                           ಈ ಕಾರ್ಯದಲ್ಲಿ          ತೊಡಗಿಸಿಕೊಳ್ಳಬೇಕು.
        17. ನಿರ್ವಹಣಾವೆಚ್ಚ  :
                 *  ಜಿಲ್ಲಾ ಯೋಜನೆಯ ಆಯವ್ಯದ ೬% ನ್ನು  ಮೀರಬಾರದು.
                 * ಕಛೇರಿವೆಚ್ಚ: ,  ಈಗಿರುವ ಮಾನವ ಸಂಪನ್ಮೂಲದ ಮಾಹಿತಿ ಪಡೆದು ವಿವಿಧ ಹಂತದಲ್ಲಿ ತಜ್ಞರ ಎರವಲು ಪಡೆವುದು, POL, ಇತ್ಯಾದಿ.;
                  *  MIS ನಲ್ಲಿ, ಸಮುದಾಯ ಯೊಜನಾ ಪ್ರಕ್ರಿಯೆ, ಸಾರ್ವಜನಿಕ ಕಾಮಗಾರಿಗಳು, ಲಿಂಗತ್ವ, ಇತ್ಯಾದಿ ಜಿಲ್ಲೆಯಲ್ಲಿ ಲಭ್ಯವಿರುವ ಸಾಮರ್ಥ್ಯ ಕ್ಕೆ ಅನುಗುಣವಾಗಿ ತಜ್ಞರಿಗೆ ಆದ್ಯತೆ,
                  *  ವ್ಯವಸ್ಥಾಪನಾ ವೆಚ್ಚವನ್ನು ರಾಜ್ಯ/ಜಿಲ್ಲೆ/ವಲಯ/ ಕ್ಲಸ್ಟರ್ ಹಂತದಲ್ಲಿ  ಪರಿಣಾಮಕಾರಿ  ತಂಡಗಳನ್ನು ಬೆಳೆಸಲು ಬಳಸಬೇಕು.
                  * ವಲಯ ಸಂಪನ್ಮೂಲ ಕೇಂದ್ರ / ಕ್ಲಸ್ಟರ್ ಸಂಪನ್ಮೂಲ ಕೇಂದ್ರ (BRC/CRC) ಗಳಿಗೆ ಅಗತ್ಯವಾದ  ಸಿಬ್ಬಂಧಿಯನ್ನು ಆದ್ಯತೆಯ ಮೇರೆಗ ಯೋಜನಾ  ಪೂರ್ವ ಹಂತದಲ್ಲೆ ಗುರುತಿಸಿದರೆ ತೀವ್ರ ಪ್ರಕ್ರಿಯೆ ಆಧಾರಿತ  ಯೋಜನೆಗೆ ಸಹಾಯವಾಗುವುದು.
        18. ಬಾಲಕಿಯರ ಶಿಕ್ಷಣಕ್ಕೆ   ನವೀನವಾದ ಚಟುವಟಿಕೆಗಳನ್ನು , ಶಿಶುಗಳ ಅರೈಕೆ ಮತ್ತು ಶಿಕ್ಷಣ ,  ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಮಕ್ಕಳಿಗೆ ಮಧ್ಯವರ್ತನೆ, ವಿಶೇಷವಾಗಿ ಉನ್ನತ ಪ್ರಾಥಮಿಕ ಶಾಲಾ ಹಂತದಲ್ಲಿ ಸಮುದಾಯ ಕಾಂಪ್ಯೂಟರ್ ಶಿಕ್ಷಣ.
                  *  ನವೀನವಾದ  ಪ್ರತಿ ಯೋಜನೆಗೆ ರೂ.15  ಲಕ್ಷ  ಮತ್ತು ರೂ. 50 ಲಕ್ಷ ಪ್ರತಿ ಜಿಲ್ಲೆಗೆ ಪ್ರತಿವರ್ಷ,ಸ.ಶಿ ಅ ( SSA) ಅಡಿಯಲ್ಲಿ ಅನ್ವಯವಾಗುವುದು.
                  * ECCE ಯ ಮತ್ತು ಹೆಣ್ಣು ಮಕ್ಕಳ ಶಿಕ್ಷಣದ ಮಧ್ಯವರ್ತನೆಗಳು ಈಗಾಗಲೇ ಇರುವ ಇತರ ಕಾರ್ಯಕ್ರಮಗಳ ಮೇರೆಗಿನ ಅನುಮೋದನೆ ಪಡೆದ ಘಟಕದ ವೆಚ್ಚದಷ್ಟೆ ಇರವವು
        19. ವಲಯ ಸಂಪನ್ಮೂಲ ಕೇಂದ್ರಗಳು/ ಕ್ಲಸ್ಟರ್ ಸಂಪನ್ಮೂಲ ಕೇಂದ್ರಗಳು
                  *  ಪ್ರತಿ ಸಮುದಾಯ ಅಭಿವೃದ್ಧಿ ಕೇಂದ್ರದಲ್ಲಿ ಸಾಧಾರಣವಾಗಿ ಒಂದು (BRC ) ವಲಯ ಸಂಪನ್ಮೂಲ ಕೇಂದ್ರ  ಇರುವುದು ,  ಯಾವ ರಾಜ್ಯದಲ್ಲಿ ಶೈಕ್ಷಣಿಕ ಆಡಳಿತಕ್ಕಾಗಿ  ಉಪ ಜಿಲ್ಲಾ  ವಲಯ ಅಥವ   ವೃತ್ತಗಳು  ಇದ್ದರೆ ಆಗ ರಾಜ್ಯವು ಅಲ್ಲಿಯೂ ಒಂದು ವಲಯ ಸಂಪನ್ಮೂಲ ಕೇಂದ್ರ ವನ್ನು ಹೊಂದಬಹುದು. ಹಾಗಾದರೂ ಆ ಸಿಡಿ ವಲಯದಲ್ಲಿರುವ (BRC)  ವಲಯ ಸಂಪನ್ಮೂಲ ಕೇಂದ್ರಗಳು ಮತ್ತು  (CRC) ಕ್ಲಸ್ಟರ್ ಸಂಪನ್ಮೂಲ ಕೇಂದ್ರಗಳ  ಅವರ್ತ ಮತ್ತು ಅನಾವರ್ತ ವೆಚ್ಚವು  ಆ ಸಿ ಡಿ .ವಲಯದಲ್ಲಿ ಒಂದು ಸಿಡಿ ವಲಯದಲ್ಲಿ  ಒಂದೆ ವಲಯ ಸಂಪನ್ಮೂಲ ಕೇಂದ್ರ ( BRC) ಇದ್ದರೆ ಆಗುವ ವೆಚ್ಚವನ್ನು ಮೀರಬಾರದು
                  * (BRC/CRC) ವಲಯ ಸಂಪನ್ಮೂಲ ಕೇಂದ್ರಗಳು / ಕ್ಲಸ್ಟರ್ ಸಂಪನ್ಮೂಲ ಕೇಂದ್ರಗಳು ಸಾಧ್ಯವಾದ ಮಟ್ಟಿಗೆ ಶಾಲಾ ಆವರಣದಲ್ಲಿಯೇ ಇರಬೇಕು.
                  * ಅಗತ್ಯ ಬಿದ್ದಲೆಲ್ಲ ರೂ. 6 ಲಕ್ಷ ದ ಮಿತಿಯಲ್ಲಿ  (BRC) ವ.ಸಂ ಕೇಂದ್ರ ಕಟ್ಟಡ ನಿರ್ಮಿಸಬೇಕು.
                  * ರೂ. 2 ಲಕ್ಷ ದಲ್ಲಿ (CRC) ಕ್ಲ.ಸಂ.ಕೇಂದ್ರವನ್ನು ನಿರ್ಮಾಣ ಮಾಡಬೇಕು. ಅದನ್ನು ಹೆಚ್ಚುವರಿ ಕೊಟ್ಟಡಿಯಾಗಿ ಶಾಲೆಗೆ ಅಗತ್ಯ ಬಿದ್ದಾಗ ಬಳಸಬಹುದು.     
           *  ಯಾವುದೆ ಜಿಲ್ಲೆಯಲ್ಲಿ ಅಲ್ಲಿನ ಶಾಲೆಯಲ್ಲದ (BRC and CRC)  ವ.ಸಂ.ಕೇಂದ್ರ ಮತ್ತು ಕ್ಲ.ಸಂ.ಕೇಂದ್ರ ಕಟ್ಟಡಗಳ ನಿರ್ಮಾಣ ವೆಚ್ಚವು  ಕಾರ್ಯಕ್ರಮದ ವರ್ಷದ ಒಟ್ಟು ಖರ್ಚಿನ ೫% ನ್ನು ಮೀರಬಾರದು.

       ಮಧ್ಯವರ್ತನೆ ಮಾದರಿ.

                  *  ವಲಯದಲ್ಲಿ 100 ಕ್ಕೂ ಹೆಚ್ಚು ಶಾಲೆಗಳಿದ್ದರೆ   20 ರ ತನಕ ಶಿಕ್ಷಕರನ್ನು; ಚಿಕ್ಕ ವಲಯಗಳಲ್ಲಿ ವ.ಸಂ.ಕೇಂದ್ರ (BRC)ಗಳು  ಮತ್ತು  CRCಳು ಸೇರಿದಂತೆ  10  ಶಿಕ್ಷಕರನ್ನು ನೇಮಿಸಬಹುದು.
                  * ಪೀಠೋಪಕರಣಗಳಿಗೆ ಇತರೆ ಖರ್ಚಿಗೆ, . @ ರೂ. 1 ಲಕ್ಷ ಪ್ರತಿ ವ.ಸಂ.ಕೇಂದ್ರ( BRC)ಗೆ ಮತ್ತು  Rs. 10,000 ಪ್ರತಿ ಕ್ಲ.ಸಂ.ಕೇಂದ್ರ( CRC) ಕ್ಕೆ
                  * ಸಾದಿಲ್ವಾರು ಅನುದಾನ   ವರ್ಷ ಒಂದಕ್ಕೆ  ರೂ. 12,500 ಪ್ರತಿ  ವ.ಸಂ.ಕೇಂದ್ರಕ್ಕೆ (BRC)   ಮತ್ತು ರೂ. 2500 ಪ್ರತಿ  ಪ್ರತಿ ಕ್ಲ.ಸಂ.ಕೇಂದ್ರಕ್ಕೆ (CRC)
                  *  ಸಭೆಗಳಿಗೆ, ಪ್ರವಾಸ ಭತ್ಯ  ತಿಂಗಳಿಗೆ  ಪ್ರತಿ ವಲಯ ಸಂಪನ್ಮೂಲಕೇಂದ್ರಕ್ಕೆ( BRC) , Rs 200    ಪ್ರತಿ ಕ್ಲಸ್ಟರ್ ಸಂಪನ್ಮೂಲ ಕೇಂದ್ರಕ್ಕೆ ಪ್ರತಿ ಕ್ಲ.ಸಂ.ಕೇಂದ್ರ. ( CRC) ರೂ.100/-
                  * TLM ಅನುದಾನ: ವರ್ಷ ಒಂದಕ್ಕೆ  ಪ್ರತಿ ವಲಯ ಸಂಪನ್ಮೂಲ ಕೇಂದ್ರಕ್ಕೆ( BRC  )
    ರೂ. 5000/-, ಒಂದುವರ್ಷಕ್ಕೆ  ಪ್ರತಿ ಕ್ಲಸ್ಟರ್ ಸಂಪನ್ಮೂಲ ಕೇಂದ್ರಕ್ಕೆ ( CRC) ರೂ. 1000/-
                  * BRC/CRCಸಿಬ್ಬಂದಿಯನ್ನು ತೀವ್ರವಾದ ಆಯ್ಕೆಯ ಪ್ರಕ್ರಿಯೆಯ ನಂತರ ಪೂರ್ವ ತಯಾರಿ ಹಂತದಲ್ಲಿಯೇ ಗುರುತಿಸುವುದು.
        20. ಶಾಲೆಯಲ್ಲಿ ಇಲ್ಲದ ಮಕ್ಕಳಿಗೆ ಮಧ್ಯವರ್ತನೆಗಳು.
                  * ಈಗಾಗಲೇ  ಅನುಮೋದನೆ ಪಡೆದಿರುವ, ಶಿಕ್ಷಣ ಖಾತ್ರಿ ಯೋಜನೆ ಮತ್ತು ಪರ್ಯಾಯ ಹಾಗೂ            ನವೀನ ಶಿಕ್ಷಣಗಳು ಕೆಳಕಂಡ ರೀತಿಯ ಮಧ್ಯವರ್ತನೆಗಳನ್ನು ಒದಗಿಸುತ್ತವೆ. :
                  *   ಸೇವಾ  ಸೌಲಭ್ಯವಿಲ್ಲದ ಕಡೆ ಶಿಕ್ಷಣ ಖಾತ್ರಿ ಕೇಂದ್ರಗಳನ್ನು ಸ್ಥಾಪಿಸುವುದು.          
                *   ಪರ್ಯಾಯ ಶಾಲಾ ಮಾದರಿಗಳನ್ನು  ಸ್ಥಾಪಿಸುವುದು.

                  * ಸೇತು ಬಂಧ ಕೋರ್ಸಗಳು, ಪರಿಹಾರ ಬೋಧನೆಗಳು, ಮರಳಿ ಶಾಲೆಗೆ ಶಿಬಿರಗಳು ಶಾಲೆಯಲ್ಲಿ          ಇಲ್ಲದ ಮಕ್ಕಳನ್ನು ಮುಖ್ಯ ವಾಹಿನಿಗೆ ತಂದು ಈಗಿರುವ ಶಾಲೆಗಳಿಗೆ ಸೇರಿಸಬೇಕು
        21. ಮೈಕ್ರೋ ಯೋಜನೆಗಳು. ಕುಟುಂಬಗಳ, ಸಮಿಕ್ಷೆಗೆ ಅಧ್ಯಯನಕ್ಕೆ,ಸಮುದಾಯದ ಕ್ರೊಢೀಕರಣಕ್ಕೆ , ಶಾಲಾ ಆಧಾರಿತ ಚಟಯವಟಿಕೆಗಳಿಗೆ, ಕಚೇರಿ ಸಲಕರಣೆಗಳಿಗೆ  ಎಲ್ಲ ಹಂತದಲ್ಲಿ  ತರಬೇತಿ ಪುನರ್ ಮನನ,  ಪೂರ್ವ ತಯಾರಿ, ಇತ್ಯಾದಿಗಳಿಗೆ.
                  * ರಾಜ್ಯದಿಂದ ಶೀಫಾರಸ್ಸು  ಹೊಂದಿದ  ಜಿಲ್ಲೆಯ ನಿರ್ದಿಷ್ಟ ಪ್ರಸ್ತಾವನೆಯ ಮೇರೆಗೆ,
    .  ಜಿಲ್ಲೆಯಲ್ಲಿರುವ  ಪಟ್ಟಣ ಪ್ರದೇಶಗಳು ಅಥವ ಮೆಟ್ರೊ ಪಾಲಿಟಿಯನ್ ನಗರಗಳನ್ನು ಪ್ರತ್ಯೇಕ ಘಟಕ ಎಂದು ಪರಿಗಣಿಸಬಹುದು.
=====================================================================
ಇಲಾಖೆಯ ಪೀಠಿಕೆ ಮತ್ತು ಸಂಘಟನೆ.

    ಪ್ರಾಥಮಿಕ ಶಿಕ್ಷಣ ಸಾರ್ವತ್ರೀಕರಣಕ್ಕೆ ಸ್ಪಷ್ಟ ಕಾಲಮಿತಿಯುಳ್ಳ ಒಂದು ಕಾರ್ಯಕ್ರಮ. ಉತ್ತಮ ಗುಣಮಟ್ಟದ ಮೂಲ ಶಿಕ್ಷಣಕ್ಕೆ ದೇಶಾದ್ಯಂತ ಇರುವ ಬೇಡಿಕೆಗೆ ತೋರಿಸಿದ ಪ್ರತಿಕ್ರಿಯೆ. ಮೂಲ ಶಿಕ್ಷಣದ ಮೂಲಕ ಸಾಮಾಜಿಕ ನ್ಯಾಯವನ್ನು ಪ್ರವರ್ದಿಸುವ ಅವಕಾಶ. ಪ್ರಾಥಮಿಕ ಶಾಲೆಗಳ ನಿರ್ವಹಣೆಯಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳು, ಶಾಲಾ ಆಡಳಿತ ಸಮಿತಿಗಳು, ಗ್ರಾಮ ಮತ್ತು ನಗರ ಕೊಳಚೆ ಪ್ರದೇಶದ ಶಿಕ್ಷಣ ಸಮಿತಿಗಳು, ಪೋಷಕ-ಶಿಕ್ಷಕರ ಸಂಘ ಸಂಸ್ಥೆಗಳು, ತಾಯಿ-ಶಿಕ್ಷಕಿ ಸಂಘ ಸಂಸ್ಥೆಗಳು, ಬುಡಕಟ್ಟು ಸ್ವಾಯತ್ತ ಪರಿಷತ್ತುಗಳು ಹಾಗು ಇತರೆ ಬುನಾದಿ ಮಟ್ಟದ ಶಿಕ್ಷಣದ ನಿರ್ವಹಣಾ ಸಂಸ್ಥೆಗಳನ್ನು ಪರಿಣಾಮಕಾರಿಯಾಗಿ ತೊಡಗಿಸುವ ಒಂದು ಪ್ರಯತ್ನವಾಗಿದೆ. ದೇಶಾದ್ಯಂತ ಪ್ರಾಥಮಿಕ ಶಿಕ್ಷಣವನ್ನು ಸಾರ್ವತ್ರೀಕರಿಸುವ ರಾಜಕೀಯ ಇಚ್ಚಾ ಶಕ್ತಿಯ ಅಭಿವ್ಯಕ್ತಿ. ಕೇಂದ್ರ ರಾಜ್ಯ ಮತ್ತು ಸ್ಥಳೀಯ ಸರ್ಕಾರದ ನಡುವಿನ ಪಾಲುದಾರಿಕೆ. ಪ್ರಾಥಮಿಕ ಶಿಕ್ಷಣದ ಬಗ್ಗೆ ತಮ್ಮದೇ ಆದ ನಿಲುವನ್ನು (ವಿಷನ್) ಹೊಂದಲು ರಾಜ್ಯಗಳಿಗೆ ಒಂದು ಅವಕಾಶ.

ಇಲಾಖೆಯ ಮೂಲ ಉದ್ದೇಶ.

    6 ರಿಂದ 14 ವರ್ಷದ ಮಕ್ಕಳ ಪ್ರಾಥಮಿಕ ಶಿಕ್ಷಣ ಸಾರ್ವತ್ರೀಕರಣಕ್ಕೆ ಸ್ಪಷ್ಟ ಕಾಲಮಿತಿಯುಳ್ಳ ಕೇಂದ್ರ ಹಾಗೂ ರಾಜ್ಯ ಸಹಭಾಗಿತ್ವದ ಕಾರ್ಯಕ್ರಮವಾಗಿದ್ದು, ಉತ್ತಮ ಗುಣಮಟ್ಟದ ಮೂಲ ಶಿಕ್ಷಣ ನೀಡುವ ಉದ್ದೇಶ ಹೊಂದಿದೆ.

ಎಲ್ಲಾ ಕಾರ್ಯಕ್ರಮಗಳ ಮತ್ತು ಯೋಜನೆಯ ಅಂಶ.

    ಹೊಸ ಶಾಲೆಗಳು –
    1 ಕಿ.ಮೀ ವ್ಯಾಪ್ತಿಯಲ್ಲಿ ಪ್ರಾಥಮಿಕ ಶಾಲಾ ಸೌಲಭ್ಯ ಇಲ್ಲದ 6-14 ವಯೋಮಾನದ ಕನಿಷ್ಠ 10 ಮಕ್ಕಳಿರುವ ಜನವಸತಿಗಳಲ್ಲಿ ಹೊಸ ಪ್ರಾಥಮಿಕ ಶಾಲೆ ತೆರೆಯಲು ಅವಕಾಶವಿರುತ್ತದೆ.

    ಕಿ.ಪ್ರಾ.ಶಾಲೆ ಉನ್ನತೀಕರಣ –
    3 ಕಿ.ಮೀ ವ್ಯಾಪ್ತಿಯಲ್ಲಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲದ ಜನವಸತಿಯ ಕಿರಿಯ ಪ್ರಾಥಮಿಕ ಶಾಲೆಯನ್ನು ಹಿರಿಯ ಪ್ರಾಥಮಿಕ ಶಾಲೆಯನ್ನಾಗಿ ಉನ್ನತೀಕರಿಸಿ 6-7ನೇತರಗತಿ ಪ್ರಾರಂಭಿಸಲು ಅವಕಾಶವಿರುತ್ತದೆ.

    ಶಿಕ್ಷಕರ ಅನುದಾನ –
    ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ, ಒಬ್ಬರಿಗೆ ರೂ.500/- ರಂತೆ ಶಿಕ್ಷಕರ ಅನುದಾನ ನೀಡಲಾಗುವುದು. ಈ ಅನುದಾನದಲ್ಲಿ ಕಡಿಮೆ ವೆಚ್ಚದ ಕಚ್ಚಾವಸ್ತುಗಳನ್ನು ಖರೀದಿಸಿ ಶಿಕ್ಷಕರು ತಮ್ಮ ಬೋಧನೆಗೆ ಅಗತ್ಯವಿರುವ ಪಾಠೋಪಕರಣಗಳನ್ನು ತಯಾರಿಸಿಕೊಂಡು ಬೋಧನೆಯನ್ನು ಪರಿಣಾಮಕಾರಿಯಾಗಿ ಮಾಡುವರು.

    ಸೇವಾನಿರತ ಶಿಕ್ಷಕರ ತರಬೇತಿಗಳು –
    ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬ್ಲಾಕ್ ಹಂತದಲ್ಲಿ 10 ದಿನದ ಸೇವಾ ನಿರತ ತರಬೇತಿ ಹಾಗೂ ಕ್ಲಸ್ಟರ್ ಹಂತದಲ್ಲಿ 10 ದಿನಗಳ ಸೇವಾ ತರಬೇತಿ ನೀಡಲಾಗವುದು. 3 ದಿನದ ಧನಾತ್ಮಕ ಚಿಂತನೆ ಸನಿವಾಸ ತರಬೇತಿ, ಜೀವನ ವಿಜ್ಞಾನ 2 ದಿನದ ತರಬೇತಿ, 3ನೇತರಗತಿ ಬೋಧಿಸುತ್ತಿರುವ ಶಿಕ್ಷಕರಿಗೆ 3 ದಿನದ ನಲಿ-ಕಲಿ ತರಬೇತಿ, ಮುಖ್ಯ ಶಿಕ್ಷಕರಿಗೆ (Spoken English) 4 ದಿನದ ಇಂಗ್ಲೀಷ್ ತರಬೇತಿಗಳನ್ನು ಬಿ.ಆರ್.ಸಿ ಹಂತದಲ್ಲಿ ಡಯಟ್ ಮೂಲಕ ನೀಡಲಾಗುವುದು. ಇದರಿಂದ ಶಿಕ್ಷಕರು ಬೋಧನಾ ವಿಷಯದಲ್ಲಿ ಹೆಚ್ಚಿನ ಸಾಮರ್ಥ್ಯ ಗಳಿಸಿ ಪರಿಣಾಮಕಾರಿಯಾಗಿ ಬೋಧನೆ ಮಾಡಲು ಸಹಕಾರಿಯಾಗುತ್ತದೆ.

    12 ತಿಂಗಳ ವಸತಿಯುತ ಸೇತುಬಂದ –
    1) ಶಾಲೆಬಿಟ್ಟ/ಶಾಲೆಗೆ ದಾಖಲಾಗಿಲ್ಲದ ಎಲ್ಲಾ ಮಕ್ಕಳಿಗೆ.
    2) 2 ತಿಂಗಳ ಕಾಲ ಸೇತುಬಂಧ ನಡೆಸಿದರೂ ಅಗತ್ಯ ಕಲಿಕಾಂಶಗಳನ್ನು ಕಲಿಯಲು ಅಸಮರ್ಥರಾದ ಮಕ್ಕಳಿಗೆ ಬ್ರಿಡ್ಜ್ ಕೋರ್ಸ್ ನಂತರ ಮುಖ್ಯವಾಹಿನಿಗೆ ಬರುವ ಮಕ್ಕಳಿಗೆ.
    3) ವಯಸ್ಸು ತುಂಬಿದ್ದರೂ ಶಾಲೆಗೆ ದಾಖಲಾಗಿಲ್ಲದೇ ಇದ್ದು, ಈಗ ಶಾಲೆಗೆ ಸೇರಿಸುತ್ತಿರುವ ಮಕ್ಕಳಿಗೆ.
    4) ಒಂದು ಕೇಂದ್ರದಲ್ಲಿನ ಮಕ್ಕಳ ಕನಿಷ್ಠ ಸಂಖ್ಯೆ 50 ಕ್ಕಿಂತ ಕಡಿಮೆ ಮಕ್ಕಳಿದ್ದಾಗಲೂ ಕೇಂದ್ರ ನಡೆಸಬಹುದು. ಆದರೆ ಪ್ರತಿ ಮಗುವಿನ ಘಟಕ ವೆಚ್ಚ ಮೂರಬಾರದು.

    3 ತಿಂಗಳ ವಸತಿಯುತ ಚಿಣ್ಣರ ಅಂಗಳ –
    6-14 ವರ್ಷದ ಶಾಲೆಬಿಟ್ಟ ಮಕ್ಕಳಿಗೆ ಪ್ರತಿ ವರ್ಷ ಏಪ್ರಿಲ್ 15 ರಿಂದ ಜುಲೈ16, ರವರೆಗೆ 3 ತಿಂಗಳ ವಸತಿಯುತ ಚಿಣ್ಣರ ಅಂಗಳವನ್ನು ನಡೆಸಲಾಗುತ್ತಿದೆ. 3 ತಿಂಗಳಿಗೆ ಒಂದು ಮಗುವಿಗೆ ರೂ.2500/- ಘಟಕ ವೆಚ್ಚವಿರುತ್ತದೆ. ಇದರಲ್ಲಿ ಮಕ್ಕಳಿಗೆ ಊಟ, ವಸತಿ, ಕಲಿಕಾ ಸಾಮಗ್ರಿ, ವೈದ್ಯಕೀಯ ವೆಚ್ಚ, ಇತರೆಗಾಗಿ ಬಳಕೆ ಮಾಡಲಾಗುತ್ತದೆ.

    3 ತಿಂಗಳ ವಸತಿರಹಿತ ಚಿಣ್ಣರ ಅಂಗಳ –
    6-14 ವರ್ಷದ ಶಾಲೆಬಿಟ್ಟ ಮಕ್ಕಳಿಗೆ ಏಪ್ರಿಲ್ 15 ರಿಂದ ಜುಲೈ 16ರವರೆಗೆ 3 ತಿಂಗಳ ವಸತಿರಹಿತ ಚಿಣ್ಣರ ಅಂಗಳವನ್ನು ನಡೆಸಲಾಗುತ್ತಿದೆ. 3 ತಿಂಗಳಿಗೆ ಒಂದು ಮಗುವಿಗೆ ರೂ.800/- ಘಟಕ ವೆಚ್ಚವಿರುತ್ತದೆ. ಇದರಲ್ಲಿ ಮಕ್ಕಳಿಗೆ ಊಟ, ಕಲಿಕಾ ಸಾಮಗ್ರಿ, ವೈದ್ಯಕೀಯ ವೆಚ್ಚ ಇತರೆಗಾಗಿ ಬಳಕೆ ಮಾಡಲಾಗಿದೆ.

    ಟೆಂಟ್ ಶಾಲೆ –
    ತುಮಕೂರು ಬ್ಲಾಕಿನಲ್ಲಿ ಕೈಗಾರಿಕೆ ಮತ್ತು ಇತರೆ ಕಾಮಗಾರಿ ಕೆಲಸಗಳಿಗಾಗಿ ಬೇರೆ ಜಿಲ್ಲೆ ಅಥವಾ ರಾಜ್ಯದಿಂದ ವಲಸೆ ಬರುವ ಕುಟುಂಬದ ಮಕ್ಕಳಿಗೆ ಕೆಲಸ ನಡೆಯುತ್ತಿರುವ ಸ್ಥಳದಲ್ಲಿಯೇ ಟೆಂಟ್ ವ್ಯವಸ್ಥೆ ಮಾಡಿ ಶಾಲಾ ಶಿಕ್ಷಣ ನೀಡಲಾಗುತ್ತಿದೆ. (ಘಟಕ ವೆಚ್ಚ 1500/-)

    ಮದರಸ/ಮುಕ್ತಾಬ್ –
    ಪ್ರತಿ ವರ್ಷ ಮಕ್ಕಳ ಗಣತಿಯಲ್ಲಿ ಗುರುತಿಸುವ 6-14 ವರ್ಷದ ಶಾಲೆ ಬಿಟ್ಟ ಮಕ್ಕಳು ಮದರಸಗಳಲ್ಲಿ ಧಾರ್ಮಿಕ ಶಿಕ್ಷಣ ಪಡೆಯುತ್ತಿದ್ದು, ಈ ಮಕ್ಕಳಿಗೆ ಮದರಸ ಮುಕ್ತಾಬ್ ಗಳಿಗೆ ಶಾಲಾ ಶಿಕ್ಷಕರನ್ನು ನಿಯೋಜಿಸಿ ರಾಜ್ಯ ಪಠ್ಯಕ್ರಮ ಬೋಧಿಸಲು ಅವಕಾಶವಿರುತ್ತದೆ. ಒಂದು ಮಗುವಿಗೆ 1 ವರ್ಷಕ್ಕೆ ಘಟಕ ವೆಚ್ಚ 3000/- ಇರುತ್ತದೆ.

    ಸಾರಿಗೆ ವೆಚ್ಚ –
    1 ಕಿ.ಮೀ ವ್ಯಾಪ್ತಿಯಲ್ಲಿ ಪ್ರಾಥಮಿಕ ಶಾಲೆ ಇಲ್ಲದ, 3 ಕಿ.ಮೀ ವ್ಯಾಪ್ತಿಯಲ್ಲಿ ಹಿ.ಪ್ರಾ.ಶಾಲೆ ಇಲ್ಲದ ಜನವಸತಿಗಳ ಮಕ್ಕಳಿಗೆ ಸಮೀಪದ ಶಾಲೆಗೆ ಹೋಗಲು ಸಾರಿಎ ವೆಚ್ಚ ನೀಡಲಾಗುವುದು. 10 ತಿಂಗಳಿಗೆ ರೂ.2500/-ಗಳನ್ನು ಒಂದು ಮಗುವಿಗೆ ನೀಡಲಾಗುವುದು.

    ಮೀನಾ ತಂಡ –
    ಶಾಲೆಯಿಂದ ಹೊರಗುಳಿದ ಮಕ್ಕಳು ಮತ್ತು ಸತತವಾಗಿ ಗೈರು ಹಾಜರಾಗುತ್ತಿರುವ ಮಕ್ಕಳನ್ನು ಶಾಲೆಗೆ ದಾಖಲಿಸಲು ಪ್ರತಿ ಕ್ಲಸ್ಟರ್ ನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ಮಕ್ಕಳ ತಂಡವನ್ನು (10 ಬಾಲಕಿಯರು, 5 ಬಾಲಕರು, ಮತ್ತು 5 ಗೈರು ಹಾಜರಿ ಆಗಿ ಶಾಲೆಗೆ ಸೇರಿರುವ ಹೆಣ್ಣು ಮಕ್ಕಳು) ರಚಿಸಿ ತಂಡದ ಮುಖೇನ ಜಾಥಾ, ಬೀದಿ ನಾಟಕ, ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವುದು, ಪ್ರತಿ ವಾರಕ್ಕೊಮ್ಮೆ ಸಭೆ ಸೇರಿ ಪ್ರಗತಿ ಬಗ್ಗೆ ಚರ್ಚಿಸುವುದು. ಬಾಲ್ಯ ವಿವಾಹ, ಮೂಡನಂಭಿಕೆ, ಸಾಮಾಜಿಕ ಪಿಡುಗುಗಳ ಬಗ್ಗೆ ಚರ್ಚಿಸಿ ಕ್ಲಸ್ಟರ್ ಹಂತದಲ್ಲಿ ಜಾಗೃತಿ ಹಾಗೂ ಹೋರಾಟ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವುದು.

    ಉಚಿತ ಪಠ್ಯ ಪುಸ್ತಕ –
    1-8ನೇ ತರಗತಿಯ ಅನುದಾನಿತ ಶಾಲಾ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕಗಳನ್ನು ಒದಗಿಸಲಾಗುವುದು.

    ವರ್ಕ್ ಬುಕ್ಸ್ –
    ಸರ್ಕಾರಿ ಶಾಲೆಗಳಲ್ಲಿ 1-3ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗೆ ನಲಿ-ಕಲಿ ಆಧಾರಿತವಾಗಿ ಬೋಧಿಸಲು ಅವಶ್ಯಕವಾದ ನಲಿ-ಕಲಿ ಸಾಮಗ್ರಿಗಳಾದ ಕಾರ್ಡುಗಳು, ವಾಚಕಗಳು, ಅಭ್ಯಾಸ ಪುಸ್ತಕಗಳು, ಪ್ರಗತಿ ನೋಟ, ಕಲಿಕಾ ತಟ್ಟೆಗಳ ಮುದ್ರಣ ಮಾಡಿ ರಾಜ್ಯ ಹಂತದಿಂದ ಎಲ್ಲಾ ಸರ್ಕಾರಿ ಶಾಲೆಗಳಿಗೆ ವಿತರಿಸಲಾಗುವುದು.

    ಸಮನ್ವಯ ಶಿಕ್ಷಣ –
    ವಿಶೇಷ ಅಗತ್ಯತೆಯುಳ್ಳ ಮಕ್ಕಳ ಗಣತಿಯಲ್ಲಿ ಗುರುತಿಸುವ 6-14 ವರ್ಷದ ವಿಶೇಷ ಅಗತ್ಯತೆಯುಳ್ಳ ಮಕ್ಕಳಿಗೆ ಕೆಳಕಂಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.
    1) ವೈದ್ಯಕೀಯ ತಪಾಸಣೆ
    2) ಉಚಿತ ಸಾಧ-ಸಲಕರಣೆ ವಿತರಣೆ
    3) ತೀವ್ರ ನ್ಯೂನತೆಯುಳ್ಳ ಮಕ್ಕಳಿಗೆ ಸ್ವಯಂ ಸೇವಕರ ಮೂಲಕ ಗೃಹಾಧಾರಿತ (ಮನೆಯಲ್ಲಿಯೇ ಶಿಕ್ಷಣ) ಶಿಕ್ಷಣ
    4) ಶಾಲಾ ಶಿಕ್ಷಕರಿಗೆ 5 ದಿನದ ತರಬೇತಿ
    5) 90 ದಿನದ ತರಬೇತಿ
    6) ಪೋಷಕರಿಗೆ 2 ದಿನದ ತರಬೇತಿ
    7) ಸಮುದಾಯ ಜಾಗೃತಿ ಕಾರ್ಯಕ್ರಮಗಳು
    8) ಕರೆಕ್ಟೀವ್ ಸರ್ಜರಿ
    9) ಪೂರ್ಣ ಅಂಧ ಮಕ್ಕಳಿಗೆ ಬ್ರೈಲ್ ಕಿಟ್ ವಿತರಣೆ
    10) ಪೂರ್ಣ ಅಂಧ ಮಕ್ಕಳಿಗೆ ಕಂಪ್ಯೂಟರ್ ಆಧಾರಿತ ಕಲಿಕೆಗೆ ಅಗತ್ಯವಾದ ಸಾಪ್ಟ್ ವೇರ್ ಅಳವಡಿಕೆ
    11) ಸಾರಿಗೆ ಭತ್ಯೆ
    12) ಬ್ಲಾಕ್ ಸಂಪನ್ಮೂಲ ಕೇಂದ್ರಕ್ಕೆ ತರಬೇತಿಗಾಗಿ ಬರುವ ಮಕ್ಕಳೀಗೆ ಪ್ರಯಾಣ ಭತ್ಯೆ
    13) ಶಾಲೆಗಳಿಗೆ ರಾಂಪ್ಸ್ ಮತ್ತು ವಿಶೇಷ ಶೌಚಾಲಯಗಳ ವ್ಯವಸ್ಥೆ
    14) ಸಮನ್ವಯ ಶಿಕ್ಷಣ ಅನುಷ್ಠಾನಕ್ಕೆ ವಿಶೇಷ ಶಿಕ್ಷಕರ ನಿಯೋಜನೆ
    15) ಮಕ್ಕಳೀಗೆ ಸಾಂಸ್ಕ್ರತಿಕ ಕ್ರೀಢಾ  ಸ್ಪರ್ದೆಗಳು ಇತ್ಯಾದಿ.

    ಗ್ರಂಥಾಲಯ –
    ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಹಾಗೂ ಸ.ಹಿ.ಪ್ರಾ.ಶಾಲೆಗಳಲ್ಲಿ ಗ್ರಂಥಾಲಯದ ಅಭಿವೃದ್ದಿಗಾಗಿ ಅಗತ್ಯ ಪುಸ್ತಕಗಳನ್ನು ಖರೀದಿಸಲು ಅವಕಾಶವಿದ್ದು, ಇದರಿಂದ ಮಕ್ಕಳಲ್ಲಿ ಓದುವ ಹವ್ಯಾಸ ಹೆಚ್ಚಿಸಲು ಸಹಕಾರಿಯಾಗುತ್ತದೆ.

    ಹೆಣ್ಣು ಮಕ್ಕಳ ಶೌಚಾಲಯ –
    ಸರ್ಕಾರಿ ಶಾಲೆಗಳಲ್ಲಿ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಲು ಅವಕಾಶವಿರುತ್ತದೆ.

    ಮುಖ್ಯ ಶಿಕ್ಷಕರ ಕೊಠಡಿ –
    ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮುಖ್ಯ ಶಿಕ್ಷಕರ ಕೊಠಡಿ ಲಭ್ಯವಿಲ್ಲದೆ ಕಡೆ ಒಂದೊಂದು ಮುಖ್ಯ ಶಿಕ್ಷಕರ ಕೊಠಡಿಯನ್ನು ನಿರ್ಮಿಸಲಾಗುವುದು.

    ಬೆಂಕಿ ನಂದಿಸುವ ಉಪಕರಣ –
    ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಅಕ್ಷರ ದಾಸೋಹ ಜಾರಿಯಲ್ಲಿರುವುದರಿಂದ ಯಾವುದೇ ಅಗ್ನಿ ದುರಂತಗಳು, ಸಂಭವಿಸದಿರಲೆಂದು ಮುನ್ನೆಚ್ಚರಿಕೆಗಾಗಿ ಬೆಂಕಿ ನಂದಿಸುವ ಉಪಕರಣ ಅಳವಡಿಸಲಾಗಿದೆ.

    ಮೇಜರ್ ರಿಪೇರಿ –
    10 ವರ್ಷಕ್ಕಿಂತ ಹಿಂದೆ ನಿರ್ಮಿಸಿರುವ ದುರಸ್ಥಿ ಅಗತ್ಯವಿರುವ ಶಾಲಾ ಕೊಠಡಿಗಳನ್ನು ರಿಪೇರಿ ಮಾಡಲು ಅವಕಾಶವಿರುತ್ತದೆ.

    ಕಿ.ಪ್ರಾ.ಶಾಲೆ ಮತ್ತು ಹಿ.ಪ್ರಾ.ಶಾಲೆಗಳಿಗೆ ದುರಸ್ಥಿ ಹಾಗೂ ನಿರ್ವಹಣೆ ಅನುದಾನ –
    ಸ.ಕಿ.ಪ್ರಾ.ಶಾಲೆಗಳಿಗೆ 3ಕ್ಕಿಂತ ಕಡಿಮೆ ಬೋಧನಾ ಕೊಠಡಿಗಳಿದ್ದರೆ ರೂ.5000/-, ಸ.ಕಿ.ಪ್ರಾ.ಶಾಲೆಗಳಿಗೆ 3ಕ್ಕಿಂತ ಹೆಚ್ಚು ಬೋಧನಾ ಕೊಠಡಿಗಳಿದ್ದರೆ ರೂ.10000/-, ಸ.ಹಿ.ಪ್ರಾ.ಶಾಲೆಗಳಿಗೆ 6ಕ್ಕಿಂತ ಕಡಿಮೆ ಬೋಧನಾ ಕೊಠಡಿಗಳಿದ್ದರೆ ರೂ.10000/- ಸ.ಹಿ.ಪ್ರಾ.ಶಾಲೆಗಳಿಗೆ 6ಕ್ಕಿಂತ ಹೆಚ್ಚು ಬೋಧನಾ ಕೊಠಡಡಿಗಳಿದ್ದರೆ ರೂ.20000/- ದಂತೆ ಎಸ್.ಡಿ.ಎಂ.ಸಿಗಳಿಗೆ ಅನುದಾನ ಬಿಡುಗಡೆ ಮಾಡಲಾಗುವುದು. ಈ ಅನುದಾನವನ್ನು ಶಾಲೆಯಲ್ಲಿ ಕಿಟಕಿ ಬಾಗಿಲು ನೆಲ ಇವುಗಳ ಸಣ್ಣ ಪುಟ್ಟ ರಿಪೇರಿ ಸುಣ್ಣ ಬಣ್ಣ ಶೌಚಾಲಯ ಹಾಗೂ ಕುಡಿಯುವ ನೀರಿನ ನಿರ್ವಹಣೆಗಾಗಿ ಬಳಸಲಾಗುವುದು.

    ಪ್ರಾಥಮಿಕ ಶಾಲಾ ಅನುದಾನ –
    ಸರ್ಕಾರಿ ಹಾಗೂ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಗಳಿಗೆ  ರೂ.5000 ಹಾಗೂ ಸರ್ಕಾರಿ ಹಾಗೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗಳಿಗೆ ರೂ.12000/- ಹಾಗೂ 6 ಮತ್ತು 7ನೇ ತರಗತಿ ಹೊಂದಿರುವ ಹಿರಿಯ ಪ್ರಾಥಮಿಕ ಶಾಲೆಗಳಿಗೆ ರೂ.7000/- ಎಸ್.ಡಿ.ಎಂ.ಸಿಗಳಿಗೆ ಅನುದಾನ ಬಿಡುಗಡೆ ಮಾಡಲಾಗುವುದು. ಈ ಅನುದಾನವನ್ನು ಶಾಲೆಗಳಲ್ಲಿ ಸುಣ್ಣ ಬಣ್ಣ ರಿಜಿಸ್ಟರ್ ಗಳ ಖರೀದಿ ಮತ್ತು ಶಾಲಾ ಸಾದಿಲ್ವಾರಿಗಾಗಿ ಬಳಸಲಾಗುವುದು.

    ಪೂರ್ವ ಪ್ರಾಥಮಿಕ ಶಿಕ್ಷಣ –
    ಅಂಗನವಾಡಿ ಮಕ್ಕಳಿಗೆ ಟಿ.ಎಲ್.ಎಂ ಕಿಟ್ಸ್ ಸರಬರಾಜು (ಆಟದ ಸಾಮಗ್ರಿಗಳು) ಹಾಗೂ ಅಂಗನವಾಡಿ ಶಿಕ್ಷಕಿಯರಿಗೆ  ತರಬೇತಿ ನೀಡಲಾಗುವುದು.

    ಚಿಣ್ಣರ ಜಿಲ್ಲಾ ದರ್ಶನ –
    ಸರ್ಕಾರಿ ಶಾಲೆಗಳಲ್ಲಿ 5-7ನೇ ತರಗತಿಯಲ್ಲಿ ಓದುತ್ತಿರುವ 25% ಪ್ರತಿಭಾವಂತ ಮಕ್ಕಳು ಹಾಗೂ 75% ಎಸ್.ಸಿ/ಎಸ್.ಟಿ ಮಕ್ಕಳಿಗೆ 2 ದಿನಗಳ ಉಚಿತ ಶೈಕ್ಷಣಿಕ ಪ್ರವಾಸವನ್ನು ಅನುಷ್ಠಾನಗೊಳಿಸಲಾಗುತ್ತದೆ.

    ಕಂಪ್ಯೂಟರ್ ಆಧಾರಿತ ಶಿಕ್ಷಣ –
    ಪ್ರತಿ ವರ್ಷ ಆಯ್ದ 10 ಹಿ.ಪ್ರಾ.ಶಾಲೆಗಳಲ್ಲಿ ಕಂಪ್ಯೂಟರ್ ಆಧಾರಿತ ಕಲಿಕೆಗಾಗಿ ಪ್ರತಿ ಶಾಲೆಗೆ 5 ರಂತೆ ಕಂಪ್ಯೂಟರ್ ಗಳನ್ನು ಅಳವಡಿಸಲಾಗುವುದು. ಇದರಲ್ಲಿ ಪ್ರತಿ ತರಗತಿವಾರು, ವಿಷಯವಾರು, ಪಠ್ಯಕ್ಕೆ ಅನುಗುಣವಾಗಿ ಸಿದ್ದಪಡಿಸಿರುವ ಸಿಡಿಗಳಿದ್ದು, ಮಕ್ಕಳು ಸ್ವ-ಕಲಿಕೆ ಮಾಡಲು ಹಾಗೂ ಪ್ರಭುತ್ವ ಮಟ್ಟದ ಕಲಿಕೆಗೆ ಅವಕಾಶ ನೀಡಲಾಗಿದೆ.

    ಅಲ್ಪ ಸಂಖ್ಯಾತ ಮಕ್ಕಳ ಶಿಕ್ಷಣ –
    ಅಲ್ಪ ಸಂಖ್ಯಾತ ಮಕ್ಕಳ ಶಿಕ್ಷಣಕ್ಕಾಗಿ ಈ ಕೆಳಕಂಡ ಚಟುವಟಿಕೆಗಳನ್ನು ನಡೆಸಲಾಗುವುದು.
    1) ಮುಸ್ಲಿಂ ಮಕ್ಕಳ ಪೋಷಕರಿಗೆ ಜಾಗೃತಿ ಶಿಬಿರಿ,
    2) ಮುಸ್ಲಿಂ ಧಾರ್ಮಿಕ ಮತ್ತು ಸಮುದಾಯ ಮುಖಂಡರ ಜಾಗೃತಿ ಶಿಭಿರ.
    3) 7ನೇತರಗತಿ ಮಕ್ಕಳಿಗೆ ವಿಚಾರಗೋಷ್ಠಿ.
    4) ಬ್ಲಾಕುಗಳಿಗೆ ಸಾಹಿತ್ಯ ಮೇಳಗಳು, ವಿಜ್ಞಾನ ಮೇಳಗಳು.
    5) ಕ್ಷೇತ್ರ ಅಧ್ಯಯನ.
    6) ಶಿಕ್ಷಕರಿಗೆ ವಿಚಾರಗೋಷ್ಠಿ
    7) ಉರ್ದು ಗ್ರಂಥಾಲಯ ಪುಸ್ತಕ.

    ನಗರಗಳಲ್ಲಿ ಅವಕಾಶ ವಂಚಿತ ಮಕ್ಕಳ ಶಿಕ್ಷಣ –
    ನಗರ ಪ್ರದೇಶದಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಸೇರಿಸಿ, ಶೇ 75% ಹಾಜರಾತಿ, ಬಿ ಶ್ರೇಣಿ ಕಲಿಕೆಯಾದ ಮಕ್ಕಳಿಗೆ ವಾರ್ಷಿಕವಾಗಿ ರೂ.2000/- ಅನುದಾನ  ನೀಡಲಾಗುವುದು.

    ಹದಿ ಹರೆಯದ ಹೆಣ್ಣು ಮಕ್ಕಳ ಜಾಗೃತಿ ಶಿಭಿರ –
    6, 7 ಮತ್ತು 8ನೇ ತರಗತಿಯಲ್ಲಿ ಓದುತ್ತಿರುವ ಹೆಣ್ಣು ಮಕ್ಕಳಿಗೆ ಹದಿ-ಹರೆಯದ ಸಮಸ್ಯೆ ಮತ್ತು ಪರಿಹಾರಗಳ ಬಗ್ಗೆ, ಆರೋಗ್ಯ ಶುಚಿತ್ವ, ರೋಗಿಗಳ ತಡೆಕಟ್ಟುವಿಕೆ, ಮೂಢನಂಭಿಕೆ, ವೈಜ್ಞಾನಿಕ ಚಿಂತನೆಗಳ ಬಗ್ಗೆ 3 ದಿನಗಳ ಸನಿವಾಸ ತರಬೇತಿಯನ್ನು ನೀಡಲಾಗುವುದು.

    ಎಸ್.ಡಿ.ಎಂ.ಸಿ ತರಬೇತಿ –
    ಸರ್ವ ಶಿಕ್ಷಣ ಅಭಿಯಾನಕ್ಕೆ ಸಂಬಮಧಿಸಿದಂತೆ ಎಸ್.ಡಿ.ಎಂ.ಸಿಗೆ 3 ದಿನಗಳ ವಸತಿಯುತ ತರಬೇತಿ, ಎಸ್.ಡಿ.ಎಂ.ಸಿಗೆ 3 ದಿನಗಳ ವಸತಿರಹಿತ ತರಬೇತಿ, ಸ್ಥಳೀಯ ಸಂಸ್ಥೆಗಳ ಸದಸ್ಯರಿಗೆ 3 ದಿನದ ವಸತಿಯುತ ತರಬೇತಿ ನೀಡಲಾಗುವುದು. ಇದರಿಂದ ಎಸ್.ಡಿ.ಎಂ.ಸಿಯವರು ಶಾಲೆಗಳ ಮೇಲ್ವಿಚಾರಣೆ ಮಾಡಲು ಸಹಕಾರಿಯಾಗಿರುತ್ತದೆ.

ಯಾರು ಯಾವ ಇಲಾಖೆಯವರು.

    ಜಿಲ್ಲಾ ಸ.ಶಿ.ಅ ಕಛೇರಿಯ ಡಿ.ವೈ.ಪಿ.ಸಿ, ಎ.ಪಿ.ಸಿ, ಪ್ರ.ದ.ಸ, ಡಿ ದರ್ಜೆ ನೌಕರರು. ಬ್ಲಾಕಿನ ಬಿ.ಆರ್.ಸಿ.ಕಛೇರಿಗಳಲ್ಲಿನ ಬಿ.ಆರ್.ಸಿ, ಬಿ.ಆರ್.ಪಿ, ಸಿ.ಆರ್.ಪಿ, ಐ.ಇ.ಆರ್.ಟಿಗಳು ಶಿಕ್ಷಣ ಇಲಾಖೆಯವರು
    ಜಿಲ್ಲಾ ಸ.ಶಿ.ಅ ಕಛೇರಿಯ ಲೆಕ್ಕಾಧೀಕ್ಷಕರು ರಾಜ್ಯ ಲೆಕ್ಕ ಪತ್ರ ಇಲಾಖೆಯಿಂದ ನಿಯೋಜನೆ ಮೇಲೆ ಇರುವವರು. ಉಳಿದ ಸಿಬ್ಬಂದಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವವರು.

ಇಲಾಖೆಯ ಗುರಿ ಮತ್ತು ಸಾಧನೆಗಳು.

    ಗುರಿ.
    ಪ್ರಾಥಮಿಕ ಶಿಕ್ಷಣ ಸಾರ್ವತ್ರೀಕರಣಕ್ಕೆ ಸ್ಪಷ್ಠ ಕಾಲಮಿತಿಯುಳ್ಳ ಕೇಂದ್ರ ಹಾಗೂ ರಾಜ್ಯದ ಸಹಭಾಗಿತ್ವದ ಒಂದು ಕಾರ್ಯಕ್ರಮವಾಗಿದ್ದು, ಉತ್ತಮ ಗುಣಮಟ್ಟದ ಮೂಲ ಶಿಕ್ಷಣ ನೀಡುವ ಒಂದು ಅಭಿಯಾನವಾಗಿದೆ.

    ಉದ್ದೇಶ.
    6-14 ವರ್ಷದ ಎಲ್ಲಾ ಮಕ್ಕಳು ಶಾಲೆಯಲ್ಲಿರಬೇಕು ಮತ್ತು ಆಯಾಯ ಹಂತದ ಶಿಕ್ಷಣವನ್ನು ತನ್ನ ವಯಸ್ಸಿಗನುಗುಣವಾಗಿ ಪೂರ್ಣಗೊಳಿಸುವಂತೆ ಮಾಡುವುದು.
    ಬದುಕಿಗಾಗಿ ಶಿಕ್ಷಣ ಮತ್ತು ಗುಣಾತ್ಮಕ ಶಿಕ್ಷಣಕ್ಕೆ ಒತ್ತು ಮತ್ತು ಶಾಲೆಗಳಿಗೆ ಮೂಲಭೂತ ಸೌಲಭ್ಯ ಒದಗಿಸುವುದು.
    ಸಾಮಾಜಿಕ ಉಳಿಕೆ ಮತ್ತು ಹಾಜರಾತಿ ಹೆಚ್ಚಳ.
    ಶಿಕ್ಷಕರ ಬೋಧನಾ ಸಾಮರ್ಥ್ಯ ಹೆಚ್ಚಿಸುವುದು.
    ಶಾಲಾ ಶಿಕ್ಷಣವನ್ನು ಸಮುದಾಯದ ಸಹಭಾಗಿತ್ವದಲ್ಲಿ ನಿರ್ವಹಿಸುವುದು.

    ಸಾಧನೆಗಳು

    2001 ರಿಂದ ಜಿಲ್ಲೆಯಲ್ಲಿ ಸರ್ವಶಿಕ್ಷಣ ಅಭಿಯಾನ ಅನುಷ್ಠಾನವಾಗಿದ್ದು, ಇದರಡಿಯಲ್ಲಿ ಪ್ರಮುಖವಾಗಿ ಕೆಳಕಂಡ ಸಾಧನೆಗಳು ಮಾಡಲಾಗಿದೆ.

    2001 ರಿಂದ ಇಲ್ಲಿಯವರೆಗೆ 152 ಕಿರಿಯ ಪ್ರಾಥಮಿಕ ಶಾಲೆಗಳನ್ನು ತೆರೆಯಲಾಗಿದೆ.

    2001 ರಿಂದ ಇಲ್ಲಿಯವರೆಗೆ  49 ಕಿರಿಯ ಪ್ರಾಥಮಿಕ ಶಾಲೆಗಳನ್ನು ಉನ್ನತೀಕರಿಸಲಾಗಿದೆ.

    2001 ರಿಂದ ಇಲ್ಲಿಯವರೆಗೆ 776 ಶಿಕ್ಷಕರ ಹುದ್ದೆಗಳು ಮಂಜೂರಾಗಿದ್ದು, ಹುದ್ದೆಗಳನ್ನು ಭರ್ತಿ ಮಾಡಲಾಗಿದೆ.

    ಎಲ್ಲಾ ಸರ್ಕಾರಿ ಶಾಕೆಗಳಲ್ಲಿ 1 ರಿಂದ 3ನೇ ತರಗತಿಯವರೆಗೆ ನಲಿ-ಕಲಿ ಬೋಧನಾ ವಿದಾನ ಅಳವಡಿಸಲಾಗಿದೆ.

    ಎಲ್ಲಾ ಸರ್ಕಾರಿ ಶಾಕೆಗಳನ್ನು ಅಗತ್ಯ ಮೂಲಭೂತ ಸೌಕರ್ಯಗಳನ್ನು ನೀಡಿ ಮಕ್ಕಳಿಗೆ ಆಕರ್ಷಣೀಯವಾಗಿ ಮಾಡಲಾಗಿದೆ.

    ಎಲ್ಲಾ ಸರ್ಕಾರಿ ಶಾಲಾ ಶಿಕ್ಷಕರುಗಳಿಗೆ ಸೇವಾ ನಿರತ ತರಬೇತಿಗಳನ್ನು ನೀಡುವ ಮೂಲಕ ಅವರ ಸಾಮರ್ಥ್ಯವನ್ನು ಹೆಚ್ಚಿಸಿ ಗುಣಾತ್ಮಕ ಶಿಕ್ಷಣದ ಗುರಿ ಸಾಧಿಸಲಾಗಿದೆ.
    2001 ರಿಂದ ಇಲ್ಲಿಯವರೆಗೆ 10 ಬಿ.ಆರ್.ಸಿ ಕಟ್ಟಡ, 140 ಸಿ.ಆರ್.ಸಿ ಕಟ್ಟಡ, 1597 ಹೆಚ್ಚುವರಿ ಕೊಠಡಿ, 265 ಮುಖ್ಯ ಶಿಕ್ಷಕರ ಕೊಠಡಿ, 1410 ಶಾಲೆಗಳಿಗೆ ವಿದ್ಯುತ್ ಸೌಲಭ್ಯ, 175 ಶಾಲೆಗಳಿಗೆ ಕಾಂಪೌಂಡ್ ವ್ಯವಸ್ಥೆ, 1147 ಶಾಲೆಗಳಿಗೆ ಹೆಣ್ಣು ಮಕ್ಕಳ ಶೌಚಾಲಯ ವ್ಯವಸ್ಥೆ, 140 ಶಾಲೆಗಳಿಗೆ ವಿಶೇಷ ಶೌಚಾಲಯ ವ್ಯವಸ್ಥೆ, 60500 ಶಾಲೆಗಳಿಗೆ 2001-02 ರಿಂದ 2010-11ರವರೆಗೆ ಪೀಠೋಪಕರಣಗಳ ಸೌಲಭ್ಯ ನೀಡಲಾಗಿದೆ. 371 ಕಿರಿಯ ಪ್ರಾಥಮಿಕ ಶಾಲೆಗಳಿಗೆ ದೊಡ್ಡ ಪ್ರಮಾಣದ ದುರಸ್ಥಿ ಮಾಡಲಾಗಿದೆ. 2206 ಕಿರಿಯ ಪ್ರಾಥಮಿಕ ಶಾಲೆಗಳಿಗೆ ದೊಡ್ಡ ಪ್ರಮಾಣದ ದುರಸ್ಥಿ ಮಾಡಲಾಗಿದೆ. 1340 ಹಿರಿಯ ಪ್ರಾಥಮಿಕ ಶಾಲೆಗಳಿಗೆ ಗ್ರಂಥಾಲಯ ವ್ಯವಸ್ಥೆ ಮಾಡಲಾಗಿದೆ. 3556 ಶಾಲೆಗಳಿಗೆ ಅಗ್ನಿನಂದಕ ಉಪಕರಣಗಳನ್ನು ನೀಡಲಾಗಿದೆ.

    ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹಾಗೂ ಹಾಜರಾತಿ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಚಟುವಟಿಕೆಯಾದಾರಿತ ಬೋಧನೆ, ಪೂರಕ ಬೋದನೆ, ಪ್ರಾಯೋಗಿಕ ಬೋಧನೆಗಳನ್ನು ಅಳವಡಿಸಿ ಕಲಿಕೆಯನ್ನು ಸರಳೀಕರಿಸಲಾಗಿದೆ.

    163 ಹಿ.ಪ್ರಾ.ಶಾಲೆಗಳಲ್ಲಿ ಕಂಪ್ಯೂಟರ್ ಆಧಾರಿತ ಕಲಿಕೆಯನ್ನು ಅಳವಡಿಸಲಾಗಿದೆ.

    ಎಲ್ಲಾ ರೀತಿಯ ಮಕ್ಕಳ ಪೋಷಕರಿಗೆ ಜಾಗೃತಿ ಶಿಭಿರಗಳನ್ನು ನಡೆಸಿ ಶಿಕ್ಷಣದ ಮಹತ್ವವನ್ನು ತಿಳಿಸಲಾಗಿದೆ.

    ಪ್ರತಿ ವರ್ಷ ಶಾಲೆ ಬಿಟ್ಟ ಮಕ್ಕಳ ಗಣತಿ ಮಾಡಿ ಗಣತಿಯಲ್ಲಿ ಗುರ್ತಿಸುವ ಮಕ್ಕಳನ್ನು ವಿವಿದ ಕಾರ್ಯಕ್ರಮಗಳ ಮೂಲಕ ಶಾಲಾ ಮುಖ್ಯವಾಹಿನಿಗೆ ದಾಖಲಿಸಲಾಗಿದೆ.

    ವಿಶೇಷ ಅಗತ್ಯತೆಯುಳ್ಳ ಮಕ್ಕಳಿಗೆ ಸಾಧನ ಸಲಕರಣೆ ಶಾಲೆಗಳಲ್ಲಿ ರಾಂಪ್ಸ್ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ನೀಡಿ ಸಮನ್ವಯ ಶಿಕ್ಷಣ ಜಾರಿಗೊಳಿಸಲಾಗಿದೆ.

    ಅಲ್ಪ ಸಂಖ್ಯಾತ ಸಮುದಾಯದ ಮಕ್ಕಳಿಗೆ ಸೆಮಿನಾರ್ ಗಳು ಮೇಳಗಳು ಪೋಷಕರಿಗೆ ತರಬೇತಿ, ಮುಖಂಡರಿಗೆ ತರಬೇತಿ ಮಕ್ಕಳಿಗೆ ಶೈಕ್ಷಣಿಕ ಪ್ರವಾಸ ಕಾರ್ಯಕ್ರಮಗಳನ್ನು ನಡೆಸಲಾಗಿದೆ


ಹೆಣ್ಣು ಮಗುವಿನ ಶಿಕ್ಷಣ

ಭಾರತ ಸರ್ಕಾರವು ಸರ್ವರಿಗೂ ಶಿಕ್ಷಣ ನೀಡುವ ಬಗ್ಗೆ ದೃಢವಾದ ಬದ್ಧತೆಯನ್ನು ವ್ಯಕ್ತಪಡಿಸಿದೆ. ಹಾಗಿದ್ದರೂ, ಭಾರತದಲ್ಲಿ ಈಗಲೂ ಕೂಡ ಏಷಿಯಾದಲ್ಲೆ ಅತ್ಯಂತ ಕಡಿಮೆ ಮಹಿಳಾ ಸಾಕ್ಷರತೆ ಹೊಂದಿರುವ ದೇಶಗಳಲ್ಲಿ ಒಂದಾಗಿದೆ. 1991 ರಲ್ಲಿ, ಏಳು ವರ್ಷ ಮತ್ತು ಮೇಲ್ಪಟ್ಟ 330 ದಶಲಕ್ಷ ಮಹಿಳೆಯರಲ್ಲಿ ಶೇಕಡಾ 4೦ ಜನ ಮಾತ್ರ ಅಕ್ಷರಸ್ಥರಾಗಿದ್ದರು. ಅಂದರೆ ಈಗ ಭಾರತದಲ್ಲಿ 200 ದಶಲಕ್ಷ ಕ್ಕೂ ಹೆಚ್ಚು ಮಹಿಳೆಯರು ಅನಕ್ಷರಸ್ಥರಾಗಿದ್ದಾರೆ ಎಂದು ಅರ್ಥ.

ಈ ಕಡಿಮೆ ಮಟ್ಟದ ಸಾಕ್ಷರತಾ ಪ್ರಮಾಣವು ಮಹಿಳೆಯರ ಜೀವನದ ಮೇಲೆ ಮಾತ್ರವಲ್ಲದೆ ಅವರ ಕುಟುಂಬದ ಜೀವನದ ಮೇಲೆ ಮತ್ತು ದೇಶದ ಆರ್ಥಿಕ ಅಭಿವೃದ್ಧಿಯ ಮೇಲೂ ನಕಾರಾತ್ಮಕ ಪರಿಣಾಮ ಬಿರುತ್ತದೆ. ಅನೇಕ ಅಧ್ಯಯನಗಳ ಪ್ರಕಾರ ಅನಕ್ಷರಸ್ಥ ಮಹಿಳೆಯರು ಸಾಮಾನ್ಯವಾಗಿ ಹೆಚ್ಚಿನ ಪ್ರಮಾಣದ ಮಾತೃತ್ವ ಮರಣಕ್ಕೆ ಒಳಗಾಗುವರಲ್ಲದೆ, ಪೌಷ್ಟಿಕಾಂಶದ ಕೊರತೆ, ಕಡಿಮೆ ಗಳಿಕೆಯ ಶಕ್ತಿ ಮತ್ತು ಮನೆಯೊಳಗೆ ಕಡಿಮೆ ಸ್ವಾತಂತ್ರ್ಯವನ್ನು ಹೊಂದಿರುವರು. ಮಹಿಳೆಯ ಶಿಕ್ಷಣದ ಕೊರತೆಯು ಅವಳ ಆರೋಗ್ಯ ಮತ್ತು ಅವಳ ಮಕ್ಕಳ ನೆಮ್ಮದಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಉದಾಹರನೆಗೆ, ಭಾರತದಲ್ಲಿ ಇತ್ತೀಚೆಗೆ ಮಾಡಿದ ಸಮೀಕ್ಷೆಯಂತೆ ಶಿಶು ಮರಣ ಪ್ರಮಾಣವು ತಾಯಿಯ ಶಿಕ್ಷಣ ಮಟ್ಟಕ್ಕೆ ವಿಪರ್ಯಾಯ ಸಂಬಂಧದಲ್ಲಿ ಇರುವುದು ಕಂಡು ಬಂದಿದೆ. ಅದರ ಜೊತೆ ಸುಶಿಕ್ಷಿತ ಜನ ಸಮುದಾಯದ ಅಭಾವವು ರಾಷ್ಟ್ರದ ಆರ್ಥಿಕ ಅಭಿವೃದ್ಧಿಗೆ ಅಡಚಣೆ ಉಂಟುಮಾಡಬಹುದು.

ಹೆಣ್ಣು ಮಗುವಿನ ಮತ್ತು ಸಾಮಾನ್ಯವಾಗಿ ಮಹಿಳೆಯರ ಶಿಕ್ಷಣವು ಭಾರತ ಸರ್ಕಾರದ ಹೆಚ್ಚಿನ ಆದ್ಯತೆಯ ವಿಷಯವಾಗಿದೆ. ಹೊಸ ಸಹಸ್ರಮಾನದಲ್ಲಿ, ಎಲ್ಲಾ ಮಕ್ಕಳಿಗೆ, ನಿರ್ದಿಷ್ಟವಾಗಿ ಹೆಣ್ಣು ಮಕ್ಕಳಿಗೆ, ಪ್ರಾಥಮಿಕ ಶಿಕ್ಷಣ ನೀಡುವುದನ್ನು ನೆರವೇರಿಸಲು, ಭಾರತವು ಈವರೆಗೆ ಆಗಿರುವ ಶೈಕ್ಷಣಿಕ ಸುಧಾರಣೆಗಳನ್ನು ಹೆಚ್ಚಿನ ಸಮಪನ್ಮೂಲಗಳು ಹಾಗೂ ಸದ್ರಢ ನಿಯಮ ಬದ್ಧತೆಗಳೊಂದಿಗೆ ಕ್ರೋಢೀಕರಿಸಿದೆ,
6-14 ವರ್ಷ ವಯಸ್ಸಿನ ಎಲ್ಲಾ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡುವ ರಾಷ್ಟ್ರೀಯ ಬದ್ಧತೆ ಈಗ 2002 ಡಿಸೆಂಬರ್ ನಿಂದ, ಸಂವಿಧಾನ (86 ನೇ ತಿದ್ದುಪಡಿ) ಕಾಯ್ದೆ ಜಾರಿಗೆ ಬಂದ ನಂತರ ಪ್ರತಿ ಮಗುವಿನ ಮೂಲಭೂತ ಹಕ್ಕಾಗಿರುತ್ತದೆ.

ಪ್ರಾಥಮಿಕ ಹಂತದಲ್ಲಿ ಹೆಣ್ಣು ಮಗುವಿನ ಶಿಕ್ಷಣ

    6-14 ವರ್ಷ ವಯಸ್ಸಿನ ಎಲ್ಲಾ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡುವ ರಾಷ್ಟ್ರೀಯ ಬದ್ಧತೆ ಈಗ 2002 ಡಿಸೆಂಬರ್ ನಿಂದ, ಸಂವಿಧಾನ (86 ನೇ ತಿದ್ದುಪಡಿ) ಕಾಯ್ದೆ ಜಾರಿಗೆ ಬಂದ ನಂತರ ಪ್ರತಿ ಮಗುವಿನ ಮೂಲಭೂತ ಹಕ್ಕಾಗಿರುತ್ತದೆ.
    ಅದನ್ನು ಒದಗಿಸುವುದು  ರಾಷ್ಟ್ರೀಯ ಬದ್ಧತೆಯಾಗಿದೆ. ಪ್ರಾಥಮಿಕ ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸುವ ಪ್ರಯತ್ನದ ಕೇಂದ್ರ ಬಿಂದುವು ಹೆಣ್ಣು ಮಗುವನ್ನು ತಲುಪುವುದು. ಸರ್ವಶಿಕ್ಷಣ ಅಭಿಯಾನ, ಅಥವ ’ಎಲ್ಲರಿಗೂ ಶಿಕ್ಷಣ ’  ಕಾರ್ಯಕ್ರಮವು ಈ ಅಂಶವನ್ನು ಗುರುತಿಸಿದೆ.
    ಬಾಲಕಿಯರ ಶಿಕ್ಷಣಕ್ಕೆ ಅಗತ್ಯವಾಗಿರುವುದು ಶೈಕ್ಷಣಿಕ ವ್ಯವಸ್ಥೆಯ ಬದಲಾವಣೆ ಮಾತ್ರವಲ್ಲ ಸಾಮಾಜಿಕ ಚೌಕಟ್ಟು (norms) ಮತ್ತು ಸಾಮಾಜಿಕ ದೃಷ್ಟಿಕೋನವೂ ಬದಲಾಗಬೇಕು.  ಶಿಕ್ಷಣ ವ್ಯವಸ್ಥೆಯು ಬಾಲಕಿಯರ ಅಗತ್ಯಕ್ಕೆ ಅನುಗುಣವಾಗಿ ಪ್ರತಿಕ್ರಿಯಿಸಬೇಕು, ಅದು  ಉದ್ದೇಶಿತ ಮಧ್ಯವರ್ತನೆಗಳ ಮೂಲಕ ಬಾಲಕಿಯರನ್ನು ತಲುಪಿ  ಅವರನ್ನು ಶಾಲೆಯಲ್ಲಿ ಉಳಿಸಿಕೊಳ್ಳುವ ಆಕರ್ಷಕ ಅಂಶವಾಗಬೇಕು. ಅದಕ್ಕಾಗಿ ಎರಡು ವಿಧಾನದ ಜೆಂಡರ್  ಕಾರ್ಯತಂತ್ರವನ್ನು  ಅಳವಡಿಸಿಕೊಳ್ಳಲಾಗಿದೆ. ಅದರ ಜೊತೆಗೆ ಸಮುದಾಯವು ಬಾಲಕಿಯರ ಶಿಕ್ಷಣಕ್ಕೆ ಬೇಡಿಕೆ ಸಲ್ಲಿಸುವಂತೆ ಮಾಡಲು

    ಸರ್ವ ಶಿಕ್ಷಣ ಅಭಿಯಾನವು ಬಾಲಕಿಯರಿಗೆ  ಒದಗಿಸಲು ಉದ್ದೇಶಿತ ಅವಕಾಶಗಳು : ಹೀಗಿವೆ:

        ಎಂಟನೆ ತರಗತಿಯವರೆಗೆ ಉಚಿತ ಪುಸ್ತಕಗಳು
        ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯಗಳು
        ಶಾಲೆ ಬಿಟ್ಟ ಬಾಲಕಿಯರಿಗಾಗಿ ಮರಳಿ ಶಾಲೆಗೆ ಶಿಬಿರಗಳು
        ಹಿರಿಯ ಬಾಲಕಿಯರಿಗಾಗಿ ಸೇತು ಬಂಧ ಕೋರ್ಸ
        ೫೦% ಶಿಕ್ಷಕಿಯರ ನೇಮಕಾತಿ
         ಶಾಲೆಯ ಹತ್ತಿರ ಶಿಶು ಪಾಲನೆ ಮತ್ತು ಶಿಕ್ಷಣ ಕೇಂದ್ರಗಳು/ ICDS (ಸಮಗ್ರ ಶಿಶು ಆಭಿವೃದ್ಧಿ  )ಕಾರ್ಯಕ್ರಮದ ಅಡಿಯಲ್ಲಿ
        ಸಮಾನ ಶಿಕ್ಷಣ ಅವಕಾಶ ಉತ್ತೇಜಿಸಲು ಶಿಕ್ಷರನ್ನು ಸಂವೇದನಾ ಶೀಲರನ್ನಾಗಿಸುವ ಕಾರ್ಯಕ್ರಮಗಳು.
        ಜೆಂಡರ್ ಸಂವೇದನಾ  ಬೋಧನ ಮತ್ತು ಕಲಿಕಾ ಸಾಮಗ್ರಿಗಳು, ಪಠ್ಯ ಪುಸ್ತಕಗಳು
        ಸಮುದಾಯದ ಕ್ರೋಢೀಕರಣಕ್ಕೆ ತೀವ್ರ ಪ್ರಯತ್ನ
        ಬಾಲಕಿಯರ ಹಾಜರಾತಿ ಮತ್ತು ಉಳಿಸಿಕೊಳ್ಳಲು ಅವಶ್ಯಕ ಮಧ್ಯವರ್ತನೆಗೆ ಅಗತ್ಯವಾದ ಜಿಲ್ಲಾವಾರು “ ವಿಶೇಷ ನಿಧಿ”

    ಸಮುದಾಯವೇ ಬಾಲಕಿಯರ ಶಿಕ್ಷಣಕ್ಕೆ ಬೇಡಿಕೆ ಸಲ್ಲಿಸುವ ವಾತಾವರಣ ಸೃಷ್ಟಿಗಾಗಿ ಪ್ರಯತ್ನ.ಮತ್ತು ಜನರ ಮತ್ತು ಮಹಿಳೆಯರು ಪಾಲ್ಗೊಳ್ಳುವಿಕೆಯಿಂದ ಉತ್ತೇಜನಾಕಾರಕ ಅಂಶಗಳನ್ನು ಉಂಟುಮಾಡಲು ಪರಿಸರ ನಿರ್ಮಾ ಣ.
    .ಬಾಲಕಿಯರ ಶಿಕ್ಷಣಕ್ಕೆ ಅಗತ್ಯವಾದ ಖಾತರಿ. ಪೋಷಕರ ಮತ್ತು ಸಮುದಾಯದ ಉತ್ತೇಜನ ಮತ್ತು ಕ್ರೋಢಿಕರಣ, ಶಾಲೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಮಹಿಳೆಯರ ಮತ್ತು ತಾಯಂದಿರ ಪಾಲಗೊಳ್ಳುವಿಕೆಯನ್ನು ಹೆಚ್ಚಿಸುವುದು, ಶಾಲಾ ಸಮಿತಿಗಳಲ್ಲಿ ಭಾಗವಹಿಸುವುದರಿಂದ, ಶಾಲೆ, ಶಿಕ್ಷಕರು,ಸಮುದಾಯದ ನಡುವಿನ ಸಂಬಂಧವನ್ನು ಬೆಳೆಸುವುದರಿಂದ ಸೂಕ್ತ ವಾತಾವರಣ ಮೂಡುತ್ತದೆ.
    ಶಿಶುಗಳ ಪಾಲನೆ ಮತ್ತು ಶಿಕ್ಷಣವು  ಬಾಲಕಿಯರ ತಮ್ಮ ತಂಗಿಯರ ಲಾಲನೆ ಪಾಲನೆಯ ಹೊಣೆಯಿಂದ ಮುಕ್ತಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುವುದು. ಇದರಿಂದ ಅವರು ನಿಯಮಿತವಾಗಿ ಶಾಲೆಗೆ ಹಾಜರಾಗಲು ಅನುವಾಗುವುದು. ಅಲ್ಲದೆ ಈ ತರಬೇತಿಯೀಂದ  ಶಾಲಾ ಪೂರ್ವ ವಯಸಿನ ಮಕ್ಕಳು ಶಾಲೆಗೆ ಬರಲು ಸನ್ನದ್ಧರಾಗುವರು. SSA (ಸರ್ವ ಶಿಕ್ಷಣ ಅಭಿಯಾನ) ಮತ್ತು ಸಮಗ್ರ ಶಿಶು ಕಲ್ಯಾಣ ಯೋಜನೆಗಳು (ICDS) ಪರಸ್ಪರ ಪೂರಕವಾಗಿ ಕೆಲಸಮಾಡಲು ಅಂಗನವಾಡಿ ಕಾರ್ಯಕರ್ತರು, ಪ್ರಾಥಮಿಕ, ಶಿಕ್ಷಕರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಶಾಲಾಪೂರ್ವ ಶಿಕ್ಷಣ, ECCE ಪೂರಕವಾಗಿರುವ ಬಗ್ಗೆ ತಿಳುವಳಿಕೆ ಮೂಡಿಸಬೇಕು. SSA (ಸಶಿಅ)ಕ್ಕೆ   ಹಿಂದಿನ ಇತರ ಯೋಜನೆಗಳಂತೆ ವಿಶೇಷ ಶೀರ್ಷಿಕೆಯ ಅಡಿಯಲ್ಲಿ ಹಣ ಬಿಡುಗಡೆ ಮಾಡುವುದು.      (ಪ್ರತಿ ಜಿಲ್ಲೆಗೆ 15 ಲಕ್ಷ ರೂಪಾಯಿಗಳು) ಮತ್ತು NPEGEL ಕಾಂಪೊನೆಂಟ (ಶೈಕ್ಷಣಿಕವಾಗಿ ಹಿಂದುಳಿದ 3೦೦೦ ಕ್ಷೇತ್ರಗಳಿಗೆ) .  ICDS   ( ಸಮಗ್ರ ಶಿಶು ಅಭಿವೃದ್ಧಿ ಸೇವೆ) ನ  ಶಾಲಾ ಪೂರ್ವ ಕಾಂಪೊನಂಟ ಒತ್ತಾಸೆ ನೀಡಲು ಕೊಡುವುದು ಅಥವಾ ICDS ಇಲ್ಲದ ಕಡೆ ಅಗತ್ಯವಿದ್ದರೆ  ತಾತ್ಕಾಲಿಕ ಶಾಲಾಪೂರ್ವ ಕೇಂದ್ರ ತೆರೆಯಲು ನೆರವು ನೀಡುವುದು. ಇದರ ಜೊತೆಗೆ ಬಾಲಕಿಯರ ಶಿಕ್ಷಣವು ಹಿಂದೆ ಬಿದ್ದಿರುವ ಸ್ಥಳಗಳನ್ನ್ನು  ಗುರಿಯಾಗಿಸಿಕೊಂಡು, ಭಾರತ ಸರ್ಕಾರವು  ಬಾಲಕಿಯರಿಗಾಗಿಯೇ ಎರಡು ಕೇಂದ್ರಿಕೃತ  ಮಧ್ಯವರ್ತನೆಗಳನ್ನು  ಪ್ರಾರಂಭಿಸಿದೆ- ರಾಷ್ಟ್ರೀಯ ಹೆಣ್ಣುಮಕ್ಕಳ ಪ್ರಾಥಮಿಕ  ಶಿಕ್ಷಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮ (NPEGEL) National Programme for Education  of Girls at Elementary Level ಮತ್ತು 3272 ಶೈಕ್ಷಣಿಕವಾಗಿ ಹಿಂದುಳಿದ ಕ್ಷೇತ್ರಗಳಲ್ಲಿ  ರಾಷ್ಟ್ರಾದ್ಯಂತ  ದುರ್ಬಲ ಅಂಚಿಗೆಸರಿಸಿದ  ಸಾಮಾಜಿಕ ಸಮುದಾಯದ ಬಾಲಕಿಯರಿಗಾಗಿ ಕಸ್ತೂರಿಬಾ        ಗಾಂಧಿ ಬಾಲಿಕಾ ವಿದ್ಯಾಲಯ  (KGBV) ಗಳನ್ನು ಸ್ಥಾಪಿಸಿದೆ. ಅದರಲ್ಲೂ ಮಹಿಳಾ ಸಾಕ್ಷರತೆಯು  ರಾಷ್ಟ್ರೀಯ ಸರಾಸರಿಗಿಂತ ಕಡಿಮೆಯಿರುವ ಮತ್ತು ಶಿಕ್ಷಣದಲ್ಲಿ ಜೆಂಡರ್ ತಾರತಮ್ಯವು ರಾಷ್ಟ್ರೀಯ ಸರಾಸರಿಗಿಂತ ಅಧಿಕವಿರುವ ಕ್ಷೇತ್ರಗಳನ್ನು ಆರಿಸಿದೆ.
    ಹೆಣ್ಣುಮಕ್ಕಳ ಪ್ರಾಥಮಿಕ  ಶಿಕ್ಷಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮ

    NPEGEL, ಕಾರ್ಯ ಕ್ರಮವು ಸೆಪ್ಟಂಬರ್  2೦೦3 ರಲ್ಲಿ ಶುರುವಾಯಿತು. ಇದು ಸರ್ವ ಶಿಕ್ಷಣ ಅಭಿಯಾನದ ಸಮಗ್ರ ಆದರೆ ಅತಿ ವಿಶಿಷ್ಟವಾದ ಭಾಗವೆನಿಸಿದೆ. ಇದು ಸೌಕರ್ಯ ವಂಚಿತ ಮತ್ತು ಅವಕಾಶ ವಂಚಿತ ಬಾಲಕಿಯರ ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚು ಒತ್ತುಕೊಡುವುದು. ಸಮುದಾಯದ ತೀವ್ರ ಕ್ರೋಢಿಕರಣ, ಕ್ಲಷ್ಟರ ಗಳಲ್ಲಿ ಮಾದರಿಶಾಲೆಗಳ ಅಭಿವೃದ್ಧಿ, ಶಿಕ್ಷಕರಲ್ಲಿ  ಜೆಂಡರ್ ಸಂವೇದನೆ   ಬೆಳಸುವುದು, ಜೆಂಡರ್ ಸಂವೆದನಾ ಪಾಠೋಪಕರಣಗಳ ಅಭಿವೃದ್ದಿ,  ಶಿಶು ಪಾಲನೆ, ಶಿಕ್ಷಣ ಸೌಲಭ್ಯ ಒದಗಿಸುವುದು.
    ಅಗತ್ಯವಾದರೆ ಬೆಂಗಾವಲಿನ ಪೂರೈಕೆ, ಬರಹ ಸಾಮಗ್ರಿಗಳು,ವರ್ಕ ಬುಕ್ಸು, ಸಮವಸ್ತ್ರ ಒದಗಿಸಲು ಅವಕಾಶವಿದೆ
     ಶೈಕ್ಷಣಿಕವಾಗಿ ಹಿಂದುಳಿದ ಎಲ್ಲ  ಕ್ಷೇತ್ರಗಳೂ NPEGEL.ನ ಅಡಿಯಲ್ಲ್ಲಿ ಬರುವವು. NPEGEL ನ ವ್ಯಾಪ್ತಿಯಲ್ಲಿ 40,187  ಕ್ಲಷ್ಟರ‍ಗಳಲ್ಲಿ ಮಾದರಿ ಶಾಲೆಗಳನ್ನು ತೆರೆಯಲಾಗಿದೆ.   .38,686  ECCE ಗಳಿಗೆ ಸಹಾಯ ಒದಗಿಸಲಾಗಿದೆ.  38,626 ಹೆಚ್ಚುವರಿ ತರಗತಿಯ ಕೋಣೆಗಳನ್ನು ಕಟ್ಟಲಾಗಿದೆ.ಮತ್ತು   2,11,215 ಶಿಕ್ಷಕರನ್ನು  ಜೆಂಡರ್  ಸಂವೇದನಾ ತರಬೇತಿಗೆ ಒಳಪಡಿಸಲಾಗಿದೆ.  ಪರಿಹಾರ ಭೋದನೆಯ ತರಬೇತಿಯು 11,44,370 ಜನರಿಗೆ ಸಿಕ್ಕಿದೆ.  89, 462 ಬಾಲಕಿಯರು ಸೇತುಬಂಧ  ಬೋಧನೆಯ ಲಾಭ ಪಡೆದಿದ್ದಾರೆ.  31 ಜನವರಿ, 2009 ರವರೆಗೆ  ಸುಮಾರು 1,60,73,048  ಬಾಲಕಿಯರಿಗೆ ಸಮವಸ್ತ್ರ ಇತ್ಯಾದಿ ಸೌಲಭ್ಯ ದೊರಕಿದೆ.  NPEGEL  ಅಡಿಯಲ್ಲಿ 578.18 ಕೋಟಿ ರುಪಾಯಿಯ ಯೋಜನಾ ವೆಚ್ಚ 2008-09 ನೇ ಸಾಲಿಗೆ ಮಂಜೂರು ಮಾಡಲಾಗಿದೆ.
    ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯ (ಕಗಾಬಾವಿ )
      (KGBV)
    ಕಸ್ತೂರ ಬಾ ಗಾಂಧಿ ಬಾಲಿಕಾ ವಿದ್ಯಾಲಯ(KGBV) (ಕಗಾಬಾವಿ) ಯೋಜನೆಯು ಜೂಲೈ೨೦೦೪ರಲ್ಲಿ ಪ್ರಾರಂಭಿಸಲಾಯಿತು. ಹಿರಿಯ ಪ್ರಾಥಮಿಕ ಹಂತದ ಬಾಲಕಿಯರಿಗಾಗಿ ಅದೂ ವಿಶೇಷವಾಗಿ ಎಸ್ಸಿ, ಎಸ್ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತ ಬಾಲಕಿಯರಿಗೆ ವಸತಿ ಶಾಲೆ ಶುರು ಮಾಡಲಾಯಿತು. ಈ ಯೋಜನೆಯನ್ನು ಶೈಕ್ಷಣಿಕವಾಗಿ ಹಿಂದುಳಿದ,  ರಾಷ್ತ್ರದ ಸರಾಸರಿಗಿಂತ ಮಹಿಳಾ ಸಾಕ್ಷರತೆ ಕಡಿಮೆ ಇರುವ, ಜೆಂಡರ್  ಸಾಕ್ಷರತಾ ವ್ಯತ್ಯಾಸವು ಅಧಿಕವಿರುವ ಕ್ಷೇತ್ರಗಳಲ್ಲಿ ಸ್ಥಾಪಿಸಲಾಯಿತು.
    ಈ ಯೋಜನೆಯು ಎಸ್ಸಿ, ಎಸ್ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತ ಬಾಲಕಿಯರಿಗೆ ಕನಿಷ್ಟ 75% ಸ್ಥಳಗಳನ್ನು ಮೀಸಲಾಗಿರುವುದು. ಮಿಕ್ಕ 25% ಸ್ಥಳಗಳನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಬಾಲಕಿಯರಿಗೆ ಆದ್ಯತೆಯ ಮೇಲೆ ಕೊಡುವುದು  ಎಂದು ನಿರ್ಧರಿಸಿದೆ.
    ಈ ಯೋಜನೆಯನ್ನು 27 ರಾಜ್ಯಗಳಲ್ಲಿ/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಂದರೆ ಅಸ್ಸಾಂ, ಆಂಧ್ರ ಪ್ರಧೇಶ, ಅರುಣಾಚಲ ಪ್ರದೇಶ, ಬಿಹಾರ, ಚತ್ತೀಸ ಘಡ, ದಾದರ್ & ನಗರ ಹವೇಲಿ ,ದೆಹಲಿ, ಗುಜರಾತ್, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ,  ಜಾರ್ಖಂಡ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ರ, ಮಣಿಪುರ, ಮೇಘಾಲಯ, ಮಿಝೋರಾಂ, ನಾಗಲ್ಯಾಂಡ್, ಒರಿಸ್ಸಾ, ಪಂಜಾಬ, ರಾಜಸ್ತಾನ, ತಮಿಳುನಾಡು, ತ್ರಿಪುರ, ಉತ್ತರಖಂಡ ಮತ್ತು ಪಶ್ಚಿಮ ಬಂಗಾಲಗಳಲ್ಲಿ ಜಾರಿ ಮಾಡಿದೆ
    ಈವರೆಗೆ ಭಾರತ ಸರ್ಕಾರವು 2578   KGBV  ( ಕಗಾಬಾವಿ) ಮಂಜೂರು ಮಾಡಿದೆ. ಇದರಲ್ಲಿ ಮುಸ್ಲಿಂ ಸಮುದಾಯ ಹೆಚ್ಚಾಗಿರುವ  ಕ್ಷೇತ್ರಗಳಿಗೆ 427 KGV ( ಕಗಾಬಾವಿ)ಗಳನ್ನು,  688 ಎಸ್ಸಿ ಕ್ಷೇತ್ರಕ್ಕೆ, 612  ಎಸ್ಟಿ ಕ್ಷೇತ್ರಗಳಿಗೆ ಜನವರಿ 2೦೦9 ರವರೆಗೆ ಮಂಜೂರುಮಾಡಲಾಗಿದೆ.
    ಇವುಗಳಲ್ಲಿ  2578 ಶಾಲೆಗಳು  ರಾಜ್ಯಗಳಲ್ಲಿ ಕಾರ್ಯಾರಂಭ ಮಾಡಿರುವುದಾಗಿ ವರದಿಯಾಗಿದೆ (94%) ಮತ್ತು 1,90,404 ಬಾಲಕಿಯರು ಅವುಗಳಲ್ಲಿ ಸೇರಿದ್ದಾರೆ. ಎಸ್ ಸಿ ಬಾಲಕಿಯರು 5೦,63೦( 27%); ಎಸ್ಟಿ ಬಾಲಕಿಯರು 58,682(31%), ಹಿಂದುಳಿದ ವರ್ಗದ ಬಾಲಕಿಯರು 18,2೦6 (9%), ಅಲ್ಪಸಂಖ್ಯಾತ ಬಾಲಕಿಯರು 12.725 (7%) . ಒಟ್ಟು  ಮಂಜೂರಾದ 1578 KGBV  ( ಕಗಾಬಾವಿ) ಶಾಲಾ ಕಟ್ಟಡಗಳಲ್ಲಿ , 547  KGBV ( ಕಗಾಬಾವಿ) ಶಾಲಾ ಕಟ್ಟಡಗಳು ಪೂರ್ಣವಾಗಿವೆ. +1262  KGBV (ಕಗಾಬಾವಿ) ಕಟ್ಟಡದ ಕೆಲಸ ಪ್ರಗತಿಯ ಹಂತದಲ್ಲಿವೆ ಮತ್ತು 769 KGBV  (ಕಗಾಬಾವಿ ) ಕೆಲಸ ಪ್ರಾರಂಭವಾಗಿಲ್ಲ ಕಸ್ತೂರಬಾ ಬಾಲಿಕಾ ವಿದ್ಯಾಲಯ (KGBV)   (ಕಗಾಬಾವಿ)   .ಕಾರ್ಯಕ್ರಮವನ್ನು
      XIನೇ ಯೋಜನೆಯ ಅವಧಿಯಲ್ಲಿ  2೦೦7 ಆಗಷ್ಟ 1 ರಿಂದ ಜಾರಿಗೆ ಬರುವಂತೆ ಸರ್ವ ಶಿಕ್ಷಣ  ಅಭಿಯಾನ ಯೋಜನೆಯಲ್ಲಿ ಸೇರಿಸಲಾಗಿದೆ.
    ಕಸ್ತೂರಬಾ ಬಾಲಿಕಾ ವಿದ್ಯಾಲಯ   (ಕಗಾಬಾವಿ). ಕಾರ್ಯಕ್ರಮದ
     ರಾಷ್ಟ್ರೀಯ ಮೌಲ್ಯ ಮಾಪನವನ್ನು ಜನವರಿ 29 ರಿಂದ ಫೆಬ್ರವರಿ 2೦೦7ರ ನಡುವೆ  ಕರ್ನಾಟಕ, ಆಂಧ್ರಪ್ರದೇಶ, ಮಧ್ಯಪ್ರದೇಶ, ರಾಜಾಸ್ತಾನ, ಗುಜರಾತ, ಜಾರ್ಖಂಡ, ಅರುಣಾಚಲ ಪ್ರದೇಶ ಮತ್ತು ಒರಿಸ್ಸಾ ರಾಜ್ಯಗಳಲ್ಲಿ ಕೈಗೊಳ್ಳಲಾಯಿತು.  ಹೆಣ್ಣು ಮಕ್ಕಳ ಶಿಕ್ಷಣದಲ್ಲಿ ಪರಿಣಿತರಾದ 12 ಜನ ಸ್ವತಂತ್ರ ತಜ್ಞರು ಕಾರ್ಯ ಮಾಡಿದರು. ಇನ್ನೊಂದು ಜಂಟಿ ಮೌಲ್ಯಮಾಪನವನ್ನು 19 ನೇ ನವಂಬರ, 2೦೦7 ರಿಂದ  ೧೪ನೇ ಡಿಸೆಂಬರ, 2೦೦7ರವರೆಗೆ  ಕಾರ್ಯಕ್ರಮ   NPEGEL ಹೆಣ್ಣುಮಕ್ಕಳ ಪ್ರಾಥಮಿಕ  ಶಿಕ್ಷಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮ  & ಕಸ್ತೂರಬಾ ಗಾಂಧಿ  ಬಾಲಿಕಾ ವಿದ್ಯಾಲಯ KGBV (ಕಗಾಬಾವಿ) ಯೋಜನೆಗಳ  ಬಗ್ಗೆ ಮಾಡಲಾಯಿತು.
    ಅಸ್ಸಾಂ, ಮಣಿಪುರ, ಚತ್ತೀಸಘಡ, ಮಹರಾಷ್ಟ್ರ, ಹರಿಯಾಣ,  ಪಂಜಾಬ. ಜಮ್ಮು ಮತ್ತು ಕಾಶ್ಮೀರ, ಉತ್ತರಖಂಡ. ಮೇಘಾಲಯ, ಪಶ್ಚಿಮ ಬಂಗಾಳ, ಮಿಝೋರಾಂ, ತ್ರಿಪುರ, ಮತ್ತು ದಾದರ & ಹವೇಲಿಗಳಲ್ಲಿ ಮೌಲ್ಯ ಮಾಪನ ಮಾಡಿದರು.
    ಬಾಲಿಕೆಯರ ಶಿಕ್ಷಣ ಉತ್ತೇಜಿಸಲು ರಾಜ್ಯಗಳ ತೊಡಗುವಿಕೆ
    
    ಉತ್ತರ ಪ್ರದೇಶ:  ಮೀನಾ ಮಂಚ್:       ಹದಿಹರೆಯದ ಹುಡುಗಿಯರಿಗೆ ತಮ್ಮ ಸಮಸ್ಯೆಗಳನ್ನು ಚರ್ಚಿಸಲು ಇರುವ ವೇದಿಕೆ. ಅವರು ಬಾಲಕಿಯರಿಗೆ  ಶಾಲೆಗೆ ಹೋಗಲು ಉತ್ತೇಜನ ನೀಡುವರು
    ಹರಿಯಾಣ : ಹುಡುಗಿಯರಿಗೆ  ತಾವು ಇರುವ ಊರಿನಲ್ಲಿರದ   ಹೊರಗಿನ ಸರಕಾರಿ ಶಾಲೆ ಸೇರಿದರೆ ೬ನೇ ತರಗತಿ ಸೇರಿದರೆ ಸೈಕಲ್ ನೀಡುವರು. ಅವರು ಶಾಲೆ ಬಿಡುವುದನ್ನು ತಪ್ಪಿಸಲು  ೫ನೇ  ತರಗತಿ ಪಾಸಾದ ಮೇಲೆ ಕೊಡುವರು. 2೦೦4-೦5 ರಲ್ಲಿ 16171  ಹುಡುಗಿಯರು 2೦೦5-೦6 ರಲ್ಲಿ 21,100 ಹುಡುಗಿಯರು ಈ ಯೋಜನೆಯ ಲಾಭ ಪಡೆದಿರುವರು.
    ಉತ್ತರ ಪ್ರದೇಶ :  ಸಮುದಾಯ ಕ್ರೋಡೀಕರಣಕ್ಕಾಗಿ ಆಯ್ದ ಗ್ರಾಮಗಳಲ್ಲಿ ಪ್ರಚಾರಾಂದೋಲನ: ಇಪ್ಪತ್ತೊಂದು ದಿವಸದ ತರಬೇತಿ. TLM ಬಾಲಕಿಯರಿಗೆ ಊಟಸಹಿತ  ವಸತಿ ವ್ಯವಸ್ಥೆ, ಕ್ರೀಡೆ,   ಸಾಂಸ್ಕೃತಿಕ ಕಾರ್ಯಕ್ರಮ, ಜೀವನ ಕೌಶಲ್ಯ ತರಬೇತಿಗೆ ವ್ಯವಸ್ಥೆ ಮಾಡಲಾಗಿದೆ.
    ಹೆಣ್ಣುಮಕ್ಕಳ ಪ್ರಾಥಮಿಕ  ಶಿಕ್ಷಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮ ಮ.ಪ್ರ. : ಹೆಚ್ಚವರಿ ಉತ್ತೇಜನಗಳ  ಪೂರೈಕೆಯನ್ನು ವಿಕೇಂದ್ರಿಕರಿಸಲಾಗಿದೆ : ಶಾಲಾ ಸಮವಸ್ತ್ರಗಳನ್ನು ಸ್ಥಳೀಯ ಸಂಸ್ಥೆಗಳು ನೀಡುವವು. ಬಾಲಕಿಯರನ್ನು ಶಾಲೆಯಲ್ಲಿ ಉಳಿಸಿ ಕೊಳ್ಳಲು ಇದು ಪ್ರೋತ್ಸಾಹ ದಾಯಕವಾಗಿದೆ.
    ಉತ್ತರಾಂಚಲ : ICDS; SSA  (ಸಶಿಅ)ಗಳ ಸಹಕಾರದೊಂದಿಗೆ  ECE  ಪೂರೈಕೆ,
    ಹೆಚ್ಚುವರಿಯಾಗಿ    ಪುನರ್ ವ್ಯವಸ್ಥೆ ಮಾಡುವುದು ಅದಕ್ಕಾಗಿ ಶಾಲೆಯನ್ನು ಏಕಕಾದಲ್ಲಿ ನೆಡಸುವರು TLM;  ಶಕ್ತಿ ಬೆಳೆಸುವುದು, ಗೌರವಧನ, ಪ್ರಾಥಮಿಕ ಶಾಲೆಗಳಲ್ಲಿ  ECE   ಕೇಂದ್ರಗಳನ್ನು ನೆಡೆಸಲು ಕೊಠಡಿ ನಿರ್ಮಾಣ ಮಾಡಲಾಗಿದೆ,   ICDS ಕೇಂದ್ರಗಳನ್ನು ಪ್ರಾಥಮಿಕ ಶಾಲೆಯಲ್ಲಿ /ಹತ್ತಿರ ನಡೆಸಲಾಗಿದೆ. ಅಲ್ಲಿ ಶಾಲೆಗಳನ್ನು ಏಕ ಕಾಲದಲ್ಲಿ ನಡೆಸುವಂತೆ ಹೊಂದಾಣಿಕೆ ಮಾಡಿದೆ.
    ಒರಿಸ್ಸಾ : ಕಳಸಿ ಧಾರಾ ( ಮಣ್ಣಿನ ಮಡಿಕೆಯನ್ನು ಒಯ್ಯುವುದು) : ಸಮುದಾಯವನ್ನು, ತಾಯಿಯರನ್ನು ,ಶಿಕ್ಷಕಿಯರ ಸಂಘಗಳನ್ನು ಸನ್ನದ್ಧಗೊಳಿಸಿದೆ. ಅವುಗಳು ಶಿಕ್ಷಕರ ಹಾಜರಾತಿ, ಮಕ್ಕಳ ಹಾಜರಾತಿಗಳ ಬಗ್ಗೆ  ಮೇಲುಸ್ತುವಾರಿ ಮಾಡುತ್ತವೆ. ಸ್ವಚ್ಛತೆ, ಸಕ್ರಮವಾಗಿ ತರಗತಿಗಳನ್ನು ನಡೆಸುವುದನ್ನು ಮೇಲುಸ್ತುವಾರಿ ಮಾಡುತ್ತವೆ. ಈ ಕೆಲಸದಲ್ಲಿ ನಿಯುಕ್ತರಾದ ತಾಯಂದಿರು ಶಾಲೆಗೆ ಬಾರದ ಮಕ್ಕಳ ಮನೆಗೆ ಹೋಗಿ ಪೋಷಕರನ್ನು ಸಂಪರ್ಕಿಸಿ ಅವರ ಮನ ಒಲಸಿ  ಮಕ್ಕಳನ್ನು ಶಾಲೆಗೆ ಕರೆತರುವರು.
    ಬಿಹಾರ  :  ಬೇಸಿಗೆಯಲ್ಲಿ ಬಾಲಕಿಯರಿಗಾಗಿ ಬೇಸಿಗೆ ಶಿಬಿರಗಳನ್ನು ಏರ್ಪಡಿಸುವರು. ಅಲ್ಲಿ ಪರಿಹಾರ ಬೋಧನೆ ಮಾಡಲಾಗುವುದು.
    ಮಧ್ಯ ಪ್ರದೇಶ :   ಶಾಲೆಯು ದೂರದಲ್ಲಿ  ಇರುವುದರಿಂದ  ಪ್ರಾಥಮಿಕ ಶಿಕ್ಷಣ ಪೂರೈಸದ ಅನೇಕ ಬಾಲಕಿಯರಿಗೆ ಮುಕ್ತ ಶಿಕ್ಷಣದ ಅವಕಾಶ ಕಲ್ಪಿಸಲಾಗಿದೆ. ರಾಜ್ಯ ಸರ್ಕಾರದ ಸಹಯೋಗದೊಂದಿಗೆ SSA (ಸಶಿಅ)  ಮತ್ತು  ರಾಜ್ಯ ಸರ್ಕಾರದ ಮುಕ್ತ ಶಾಲೆಗಳ  ಬಾಲಕಿಯರ ಶುಲ್ಕವನ್ನು ೫೦:೫೦ ಆಧಾರದಲ್ಲಿ ಹಂಚಿಕೊಳ್ಳಲಾಗಿದೆ.
      ಬಾಲಕಿಯರ ಶಿಕ್ಷಣದ ಭರವಸೆಯ ಸೂಚಕಗಳು: Promising Indicators in respect of Girls

    ಬಾಲಕಿಯರ ಪ್ರಾಥಮಿಕ ಹಂತದ ಶಾಲಾ ಸೇರ್ಪಡೆಯಲ್ಲಿ  ಆಗಿರುವ ಏರಿಕೆ 8.67% (2೦೦1-೦2 ರಲ್ಲಿನ 86.91% ನಿಂದ  2೦೦4-೦5 ರವರಗೆ 94.7%)
    ಹಿರಿಯ ಪ್ರಾಥಮಿಕ ಶಾಲಾ ಮಟ್ಟದಲ್ಲಿ  13% ಏರಿಕೆ ಯಾಗಿದೆ. (2೦೦1 -೦2 ರಲ್ಲಿ 52.1% ರಿಂದ 2೦೦4-೦ 5 ಲ್ಲಿ   65.1%)
    ಪ್ರಾಥಮಿಕ ಹಂತದಲ್ಲಿನ ಒಟ್ಟು ಸೇರ್ಪಡೆಯಲ್ಲಿ  ಬಾಲಕಿಯರು 48.09% ಇದ್ದಾರೆ ಮತ್ತು ಹಿರಿಯ ಪ್ರಾಥಮಿಕ ಹಂತದಲ್ಲಿ 46.51% ಇದ್ದಾರೆ ( DISE 2006-07)
    ಶಾಲೆ ಬಿಡುವವರ ಪ್ರಮಾಣವು 14.46% ನಷ್ಟು ಇಳಿಕೆ ಯಾಗಿದೆ. ( 2001-02 ರಲ್ಲಿನ 39.9% ರಿಂದ 2004-05 ರಲ್ಲ್ಲಿನ 25.42% ವರೆಗೆ)
    ಜೆಂಡರ್ ಸಮಾನತೆ

         ಪ್ರಾಥಮಿಕ  ಶಾಲೆಯಲ್ಲಿ  GPI  0.93,   ಹಿರಿಯ  ಪ್ರಾಥಮಿಕ ಶಾಲೆಯಲ್ಲಿ  0.87 (  DISE- 2006-07)
        ಪ್ರಾಥಮಿಕ ಹಂತದಲ್ಲಿ 28 ರಾಜ್ಯಗಳಲ್ಲಿ ಜೆಂಡರ್‌ ಸಮಾನತೆ ಸೂಚ್ಯಂಕವು 0.90 ಗಿಂತ ಹೆಚ್ಚು ಹೊಂದಿವೆ.
        ಮಹಿಳಾ ಶಿಕ್ಷಕರ ಸಂಖ್ಯೆಯು  2006-07 ರಲ್ಲಿ 41.86% ನಷ್ಟು ಹೆಚ್ಚಳವಾಗಿದೆ ( DISE)
        ಬಾಲಕಿಯರ ಶೌಚಾಲಯಗಳು- ಈಗ 42.58% (  DISE) ಶಾಲೆಗಳಲ್ಲಿ ಇವೆ. ಇದನ್ನು ಸರ್ವ ಶಿಕ್ಷಣ ಅಭಿಯಾನ ಮತ್ತು ಸಂಪೂರ್ಣ ನೈರ್ಮಲ್ಯ ಯೋಜನೆ, ಗ್ರಾಮೀಣ ಅಭಿವೃದ್ಧಿ ಸಚಿವಾಲಯದ ಸಹಯೊಗದಲ್ಲಿ ಸಾಧಿಸಲಾಗಿದೆ .

ಮಗುವಿನ ಹಕ್ಕುಗಳು

ಭಾರತದಲ್ಲಿನ 300 ದಶಲಕ್ಷ ಮಕ್ಕಳಲ್ಲಿ ಬಹುತೇಕ ಮಕ್ಕಳು ತಮ್ಮ ಶಾರೀರಕ ಹಾಗೂ ಬೌದ್ಧಿಕ ಅಭಿವೃದ್ಧಿಗೆ ತಡೆಯೊಡ್ಡುವ ಸಾಮಾಜಿಕ ಮತ್ತು ಆರ್ಥಿಕ ಪರಿಸರದಲ್ಲಿ ಜೀವಿಸುತ್ತಿದ್ದಾರೆ ಎಂಬುದು ವಾಸ್ತವ. ಭವಿಷ್ಯದ ವಿಚಾರಪೂರಿತ, ಸದೃಢ ಭಾರತವನ್ನು ನಿರ್ಮಾಣ ಮಾಡಲು ಮಕ್ಕಳ ಇಂತಹ ಅಗತ್ಯಗಳಿಗೆ ಸ್ಪಂದಿಸಲು ನಾವೆಲ್ಲಾ ಸಿದ್ಧರಾಗಬೇಕಾದುದು ಸದ್ಯದ ಆವಶ್ಯಕತೆಯಾಗಿದೆ.
ಭಾರತದಲ್ಲಿ ಸ್ವಾತಂತ್ರ್ಯೋತ್ತರ ದಶಕಗಳು ಮಕ್ಕಳ ಅಗತ್ಯಗಳ ಸಂವೈಧಾನಿಕ ನೀಡಿಕೆಗಳು, ನೀತಿಗಳು, ಕಾರ್ಯಕ್ರಮಗಳು ಮತ್ತು ಕಾಯಿದೆ ರಚನೆಗಳ ಮೂಲಕ ಸರ್ಕಾರದ ಬದ್ಧತೆಯ ಸ್ಪಷ್ಟ ಅಭಿವ್ಯಕ್ತಿಯನ್ನು ಕಂಡಿದೆ. ಈ ಶತಮಾನದ ಹಿಂದಿನ ದಶಕದಲ್ಲಿ ನಾಟಕೀಯ ತಾಂತ್ರಿಕ ಅಭಿವೃದ್ದಿಯು, ಮಕ್ಕಳನ್ನು ಉದ್ದೇಶಿಸಿದ, ಆರೋಗ್ಯ, ಪೌಷ್ಟಿಕಾಂಶ, ಶಿಕ್ಷಣ ಮತ್ತು ಇತರ ಸಂಬಂಧಿಸಿದ ಕ್ಷೇತ್ರಗಳಲ್ಲಿ ಅವಕಾಶಗಳ ನವೀನ ಆಯಾಮವನ್ನೇ ತೆರೆದಿಟ್ಟಿದೆ.

ಭಾರತದಲ್ಲಿ, ಮಕ್ಕಳನ್ನೇ ಉದ್ದೇಶಿಸಿದ, ಅವರ ಸಮಸ್ಯೆಗಳಿಗೆ ಗಮನ ಕೇಂದ್ರೀಕರಿಸಿದ ಕಾರ್ಯಗಳಿಗಾಗಿ ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳೆಲ್ಲಾ ಈಗ ಕೈಜೋಡಿಸಿವೆ. ಇದರಲ್ಲಿ ಮಕ್ಕಳು ಮತ್ತು ದುಡಿಮೆಗೆ ಸಂಬಂಧಿಸಿದ ವಿಷಯಗಳು, ಬಾಲದುಡಿಮೆಯ ಸವಾಲುಗಳನ್ನು ಪರಿಹರಿಸುವುದು, ಹೆಣ್ಣು ಶಿಶುವಿಗೆ ತೋರುವ ತಾರತಮ್ಯದ ನಿವಾರಣೆ, ಬೀದಿ ಮಕ್ಕಳನ್ನು ಮೇಲೆತ್ತುವುದು, ವಿಕಲ ಚೇತನ ಮಕ್ಕಳ ವಿಶೇಷ ಅಗತ್ಯಗಳನ್ನು ಗುರುತಿಸಿ ಪೂರೈಸುವುದು ಮತ್ತು ಅವರ ಮೂಲಭೂತ ಹಕ್ಕಾದ ಶಿಕ್ಷಣವು ಪ್ರತೀ ಮಗುವಿಗೆ ಪೂರೈಕೆಯಾಗುವಂತೆ ನೋಡಿಕೊಳ್ಳುವುದು, ಇದೆಲ್ಲಾ ಸೇರಿವೆ.

* ಮೂಲಭೂತ ಮತ್ತು ಮಾನವ ಹಕ್ಕಾಗಿ ಶಿಕ್ಷಣ
ಭಾರತದ ಪ್ರತೀ ನಾಗರೀಕನೂ ಶಿಕ್ಷಣದ ಹಕ್ಕನ್ನು ಪಡೆದಿದ್ದಾನೆ. ನಮ್ಮನ್ನು ನಿರ್ದೇಶಿಸುವ ಕೆಲವು ಮಾರ್ಗ ಸೂಚಿಗಳೆಂದರೆ – ಕನಿಷ್ಠ ಪ್ರಾಥಮಿಕ ಹಂತದಲ್ಲಿಯಾದರೂ ಖರ್ಚಿಲ್ಲದ ಶಿಕ್ಷಣ, ಪ್ರಾಥಮಿಕ ಹಂತದಲ್ಲಿ ಶಿಕ್ಷಣ ಕಡ್ಡಾಯ, ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣವನ್ನು ಎಲ್ಲರಿಗೂ ಎಟಕುವಂತೆ ಮಾಡುವುದು, ಉನ್ನತ ಶಿಕ್ಷಣವು ಎಲ್ಲರಿಗೂ ಸಮಾನವಾಗಿ, ಅರ್ಹತೆಯ ಆಧಾರದ ಮೇಲೆ ದೊರೆಯುವಂತೆ ಮಾಡುವುದು. ಶಿಕ್ಷಣವು ಮಾನವ ವ್ಯಕ್ತಿತ್ವದ ಪೂರ್ಣ ವಿಕಸನಕ್ಕಾಗಿರುವಂತೆ, ಮಾನವೀಯ ಸ್ವಾತಂತ್ಯ್ರ ಮತ್ತು ಹಕ್ಕುಗಳನ್ನು ಗೌರವಿಸುವ ಭಾವನೆಯನ್ನು ದೃಢಗೊಳಿಸುವ ದಿಕ್ಕಿನಲ್ಲಿ ನಿರ್ದೇಶಿತವಾಗಬೇಕು. ಅವರ ಮಕ್ಕಳಿಗೆ ನೀಡುವ ಶಿಕ್ಷಣದ ವಿಧವನ್ನು ಆಯ್ದುಕೊಳ್ಳಲು ತಂದೆತಾಯಿಗಳಿಗೆ ಆದ್ಯ ಅವಕಾಶವಿರುತ್ತದೆ.

ಎಲ್ಲ ಮಕ್ಕಳು, ಯುವಕ-ಯುವತಿಯರು ಮತ್ತು ವಯಸ್ಕರಿಗೆ ಉತ್ತಮ ಗುಣಮಟ್ಟದ ಮೂಲಶಿಕ್ಷಣವನ್ನು ನೀಡುವ ಬದ್ಧತೆಯುಳ್ಳ ಜಾಗತಿಕ ಅಭಿಯಾನವೇ ’ಸರ್ವರಿಗೂ ಶಿಕ್ಷಣ’. 1990 ರ ಸರ್ವರಿಗೂ ಶಿಕ್ಷಣ, ಜಾಗತಿಕ ಸಮ್ಮೇಳನದಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಅದಾದ ಹತ್ತು ವರ್ಷಗಳ ಬಳಿಕವೂ ಜಗತ್ತಿನ ಹಲವಾರು ದೇಶಗಳು ಲಕ್ಷ್ಯದಿಂದ ದೂರದಲ್ಲಿಯೇ ಇವೆ. ವಿವಿಧ ದೇಶಗಳ ಪ್ರತಿನಿಧಿಗಳು ಸೆನೆಗಲ್ ನ ಡಕಾರ್ ನಲ್ಲಿ ಮತ್ತೆ ಸಮಾವೇಶಗೊಂಡು 2005 ರ ಒಳಗೆ “ಸರ್ವರಿಗೂ ಶಿಕ್ಷಣ” ಗುರಿಯನ್ನು ತಲುಪುವುದಾಗಿ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಅವರು 2005 ರ ಒಳಗೆ ಎಲ್ಲ ಮಕ್ಕಳ, ಯುವಕ-ಯುವತಿಯರ, ವಯಸ್ಕರ ಕಲಿಕೆಯ ಅಗತ್ಯಗಳನ್ನು ಪೂರೈಸಲು ಮುಖ್ಯವಾದ ಶಿಕ್ಷಣದ ಆರು ಲಕ್ಷಣಗಳನ್ನು ಗುರುತಿಸಿದರು.

    * ಸರ್ವರಿಗೂ ಶಿಕ್ಷಣ
ಎಲ್ಲ ಮಕ್ಕಳು, ಯುವಕ-ಯುವತಿಯರು ಮತ್ತು ವಯಸ್ಕರಿಗೆ ಉತ್ತಮ ಗುಣಮಟ್ಟದ ಮೂಲಶಿಕ್ಷಣವನ್ನು ನೀಡುವ ಬದ್ಧತೆಯುಳ್ಳ ಜಾಗತಿಕ ಅಭಿಯಾನವೇ ’ಸರ್ವರಿಗೂ ಶಿಕ್ಷಣ’. 1990 ರ ಸರ್ವರಿಗೂ ಶಿಕ್ಷಣ, ಜಾಗತಿಕ ಸಮ್ಮೇಳನದಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಅದಾದ ಹತ್ತು ವರ್ಷಗಳ ಬಳಿಕವೂ ಜಗತ್ತಿನ ಹಲವಾರು ದೇಶಗಳು ಲಕ್ಷ್ಯದಿಂದ ದೂರದಲ್ಲಿಯೇ ಇವೆ. ವಿವಿಧ ದೇಶಗಳ ಪ್ರತಿನಿಧಿಗಳು ಸೆನೆಗಲ್ ನ ಡಕಾರ್ ನಲ್ಲಿ ಮತ್ತೆ ಸಮಾವೇಶಗೊಂಡು 2005 ರ ಒಳಗೆ “ಸರ್ವರಿಗೂ ಶಿಕ್ಷಣ” ಗುರಿಯನ್ನು ತಲುಪುವುದಾಗಿ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಅವರು 2005 ರ ಒಳಗೆ ಎಲ್ಲ ಮಕ್ಕಳ, ಯುವಕ-ಯುವತಿಯರ, ವಯಸ್ಕರ ಕಲಿಕೆಯ ಅಗತ್ಯಗಳನ್ನು ಪೂರೈಸಲು ಮುಖ್ಯವಾದ ಶಿಕ್ಷಣದ ಆರು ಲಕ್ಷಣಗಳನ್ನು ಗುರುತಿಸಿದರು.
’ಸರ್ವರಿಗೂ ಶಿಕ್ಷಣ’ದ ದಿಕ್ಕಿನಲ್ಲಿ ನಡೆದ ಎಲ್ಲ ಅಂತಾರಾಷ್ಟ್ರೀಯ ಪ್ರಯತ್ನಗಳನ್ನು ಸಮನ್ವಯಗೊಳಿಸುವ, ಪ್ರಯತ್ನಗಳಿಗೆ ಚಾಲನೆ ನೀಡುವ ಕಾರ್ಯದಲ್ಲಿ ಯುನೆಸ್ಕೊ ಮುಂದಾಳತ್ವ ವಹಿಸಿದೆ. ಈ ಗುರಿಗಳನ್ನು ತಲುಪುವೆಡೆಗೆ ದೇಶೀಯ ಸರ್ಕಾರಗಳು, ಅಭಿವೃದ್ಧಿ ಸಂಸ್ಥೆಗಳು, ನಾಗರೀಕ ಸಮಾಜ, ಸರ್ಕಾರೇತರ ಸಂಸ್ಥೆಗಳು ಹಾಗೂ ಮಾಧ್ಯಮಗಳು ಪಾಲುಗಾರಿಕೆ ವಹಿಸಿವೆ.ಸರ್ವರಿಗೂ ಶಿಕ್ಷಣದ ಗುರಿಗಳನ್ನು ಸಾಧಿಸಲು ಹಮ್ಮಿಕೊಂಡ ಕಾರ್ಯಕ್ರಮಗಳು ಸಹಸ್ರಮಾನ ಅಭಿವೃದ್ಧಿಯ ಲಕ್ಷ್ಯಗಳನ್ನು (MDGs) 2015 ರ ಒಳಗೆ ತಲುಪಲು ನೆರವಾಗುತ್ತವೆ. ಅದರಲ್ಲಿಯೂ ಸಹಸ್ರಮಾನ ಅಭಿವೃದ್ಧಿಯ ಲಕ್ಷ್ಯ   2 (MDG2) – ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣ ಹಾಗೂ MDG3 - ಶಿಕ್ಷಣದಲ್ಲಿ ಜೆಂಡರ್ ಸಮಾನತೆ.

* ಆರು ನಿರ್ಧಿಷ್ಟ ಶಿಕ್ಷಣದ ಗುರಿಗಳು
        1.ಶೈಶವದಲ್ಲಿ ಸಮಗ್ರ ಆರೈಕೆ ಮತ್ತು ಶಿಕ್ಷಣದ ವಿಸ್ತರಣೆ ಅದೂ ಅತ್ಯಂತ ದುರ್ಬಲ ಮತ್ತು ಅನುಕೂಲವಿಲ್ಲದ ವರ್ಗದ ಮಕ್ಕಳಿಗೆ .
        2. ಎಲ್ಲ ಮಕ್ಕಳಿಗೆ 2015 ರ ಹೊತ್ತಿಗೆ ಅದರಲ್ಲೂ ನಿರ್ಧಿಷ್ಟವಾಗಿ ತೊಂದರೆಯಲ್ಲಿರುವ ಮತ್ತು ಬುಡಕಟ್ಟಿನ ಅಲ್ಪ ಸಂಖ್ಯಾತ ಹೆಣ್ಣು ಮಕ್ಕಳಿಗೆ ಸಂಪೂರ್ಣ, ಉಚಿತ ಕಡ್ಡಾಯ, ಮತ್ತು ಉತ್ತಮ ಗುಣಮಟ್ಟದ ಪ್ರಾಥಮಿಕ ಶಿಕ್ಷಣಕ್ಕೆ ಅವಕಾಶದ ಖಾತ್ರಿ.
        3. ಎಲ್ಲ ಮಕ್ಕಳ ಮತ್ತು ವಯಸ್ಕರ ಕಲಿಕಾ ಅಗತ್ಯಗಳು, ಸೂಕ್ತ ಕಲಿಕೆ ಮತ್ತು ಜೀವನ ಕೌಶಲ್ಯ ಕಾರ್ಯಕ್ರಮಗಳಿಗೆ ಸಮಾನ ಅವಕಾಶದ ಖಾತ್ರಿ .
        4. ವಯಸ್ಕರ ಶಿಕ್ಷಣದಲ್ಲಿ 50 % ಸುಧಾರಣೆ ೨೦೧೫ ರ ಹೊತ್ತಿಗೆ ಆಗಬೇಕು. ಅದರಲ್ಲೂ ಮಹಿಳೆಯರಿಗೆ ಮತ್ತು ವಯಸ್ಕರಿಗೆ ಮೂಲ ಮತ್ತು ಮುಂದುವರೆದ ಶಿಕ್ಷಣಕ್ಕೆ ಸಮಾನ ಅವಕಾಶವಿರಬೇಕು.
        5. ಲಿಂಗ ಸಮಾನತೆಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಗಳಲ್ಲಿ 2015ರ ಹೊತ್ತಿಗೆ ಸಾಧಿಸಬೇಕು.ಹುಡುಗಿಯರಿಗೆ ಉತ್ತಮಗುಣಮಟ್ಟದ ಮೂಲ ಶಿಕ್ಷಣಕ್ಕೆ ಅವಕಾಶದ ಖಾತ್ರಿ
        6. ಶಿಕ್ಷಣದ ಎಲ್ಲ ಅಂಶ ಗಳ ಗುಣ ಮತ್ತ ಸುಧಾರಿಸಬೇಕು. ಮತ್ತು ಎಲ್ಲ ಗುರುತಿ ಸಲಾಗುವ ಮತ್ತು ಅಳೆಯ ಬಹುದಾದ ಕಲಿಕಾ ಫಲಿತಗಳಲ್ಲಿ ಶ್ರೇಷ್ಟ ಸಾಧನೆಗಳ ಸುಧಾರಣೆಯಾಗಬೇಕು., ಅದರಲ್ಲೂ ಸಾಕ್ಷರತೆ ,ಅಂಕೆಗಳು ಮತ್ತು ಜೀವನದ ಅಗತ್ಯ ಕೌಶಲ್ಯಗಳಿಗೆ ಒತ್ತು ಇರಬೇಕು.

* ಇ ಎಪ್ಹ್ ಎ ಏಕೆ ಮುಖ್ಯವಾಗಿವೆ?
ಸರ್ವರಿಗೂ ಶಿಕ್ಷಣದ ಎಲ್ಲ ಗುರಿ ಸಾಧಿಸುವುದು 8 ಎಂ ಡಿ ಜಿ ಗಳ ಸಾಧನೆಗೆ ಅಗತ್ಯ.— ಇದು ಮಗುವಿನ ಸಂತಾನೋತ್ಪತ್ತಿ ಆರೋಗ್ಯದ ಮೇಲೆ ತುಸು ಪರಿಣಾಮ ಬೀರುವುದು. ಜತೆಗೆ ಎಲ್ಲರಿಗು ಶಿಕ್ಷಣವು ಬಹು ಸಹಭಾಗಿತ್ವದಿಂದ ಅನುಭವಗಳ ಮೊತ್ತವನ್ನು ನಿರ್ಮಿಸಿ 2015 ರ ಗುರಿ ಸಾಧನೆಗೆ ಪೂರಕವಾಗಿದೆ ಜತೆಗೆ ಇತರ ಎಂ ಡಿ ಜಿ ಗಳನ್ನೂ ತಲುಪಲು ಸಹಾಯಕವಾಗಿದೆ. ಸುಧಾರಿಸಿದ ಆರೋಗ್ಯ, ಶುದ್ಧ ಕುಡಿಯುವ ನೀರಿನ ಲಭ್ಯತೆ ಬಡತನದ ನಿರ್ಮೂಲನೆ , ಪರಿಸರದ ಸುಸ್ಥಿರತೆ ಗಳು ಕೂಡಾ ಶಿಕ್ಷಣದ ಎಂ ಡಿ ಜಿ ಗಳ ಸಾಧನೆಗ ಅಗತ್ಯವಾಗಿವೆ.
ಅನೇಕ ಇ ಎಪ್ಹ್ ಎ ಗುರಿಗಳನ್ನು ಸಾಧಿಸುವಲ್ಲಿ ಸತತ ಪ್ರಯತ್ನಗಳು ಸಾಗುತಿದ್ದರೂ ಇನ್ನೂಅನೇಕ ಸವಾಲುಗಳು ಇವೆ. ಈಗಲೂ ಶಾಲಾ ವಯಸ್ಸಿನ ಮಕ್ಕಳು ಅರ್ಥಿಕ, ಸಾಮಾಜಿಕ ಅಥವಾ ದೈಹಿಕ ಬದಲಾವಣೆ, ಹೆಚ್ಚಿನ ಫಲವತ್ತತೆ ಎಚ್ ಆಯ ವಿ/ ಎಡ್ಸ್ ಮತ್ತು ಸಂಘರ್ಷ ಗಳಿಂದಾಗಿ ಶಾಲೆಗೇ ಹೋಗುತ್ತಿಲ್ಲ.

ಶಾಲಾ ಸೌಲಭ್ಯವು ಅಭಿವೃದ್ಧಿಶೀಲ ದೇಶಗಳಲ್ಲಿ ೧೯೯೦ ರಿಂದ ಸುಧಾರಿಸಿದೆ. ಈಗಾಗಲೇ 163 ದೇಶಗಳಲ್ಲಿ 47 ದೇಶಗಳು ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣವನ್ನು ಸಾಧಿಸಿವೆ ಮತ್ತು (MDG 2) ಹೆಚ್ಚುವರಿಯಾಗಿ 20 ದೇಶಗಳು ಗುರಿಯನ್ನು ೨೦೧೫ ರ ಒಳಗೆ ಸಾಧಿಸುವ ಹಾದಿಯಲ್ಲಿವೆ . ಆದರೆ ಸಬ್ ಸಹಾರ ಪ್ರದೇಶದಲ್ಲಿರುವ 23 ದೇಶಗಳು ೨೦೧೫ ರ ದೇಶದಲ್ಲಿ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಪ್ರಯತ್ನ ನಡೆಯದಿದ್ದರೆ ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣದ ಗುರಿ ಸಾಧಿಸುವ ಸಂಭವ ಕಡಿಮೆ

ಶಿಕ್ಷಣದಲ್ಲಿ ಲಿಂಗ ವ್ಯತ್ಯಾಸವು ಕಡಿಮೆ ಯಾಗುತಿದ್ದರೂ (MDG 3), ಬಾಲಕಿಯರು ಇನ್ನೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆಯುವಲ್ಲಿ ಮತ್ತು ಮುಗಿಸುವಲ್ಲಿ ಎಡರು ತೊಡರು ಎದುರಿಸುತ್ತಿರುವರು . ಬಾಲಕಿಯರ ನೋಂದಣಿಯು ಪ್ರಾ ಥಮಿಕ ಮತ್ತು ಪ್ರೌಢ ಶಿಕ್ಷಣ ಮಟ್ಟದಲ್ಲಿ ಸುಧಾರಿಸಿದ್ದರೂ, ಅದರಲ್ಲೂ ಕಡಿಮೆ ಆದಾಯದ ದೇಶಗಳಾದ ಸಬ್ ಸಹಾರಾ ಅಫ್ರಿಕಾಮತ್ತು ದಕ್ಷಿಣ ಎಶಿಯಾದ —24 ರಾಷ್ಟ್ರಗಳು ಲಿಂಗ ಸಮಾನತೆಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಟ್ಟದಲ್ಲಿ 2015.ರ ಹೊತ್ತಿಗೆ ಸಾಧಿಸುವುದು ಆಗದು. ಹೆಚ್ಚಿನ ದೇಶಗಳು (13) ಸಬ್ ಸಹರಾ ಆಫ್ರಿಕಾದಲ್ಲಿವೆ

ಶಿಕ್ಷಣ ರಂಗದಲ್ಲಿ ಕನಿಷ್ಠ ಕಲಿಕಾ ಫಲಿತಗಳು ಮತ್ತು ಕಳಪೆ ಗುಣ ಮಟ್ಟದ ಶಿಕ್ಷಣವೂ ಹೆಚ್ಚಿನ ಕಾಳಜಿಗೆ ಕಾರಣವಾಗಿವೆ. ಕಾರಣವಾಗಿವೆ. ಉದಾ: ಅನೇಕ ಅಬಿವೃದ್ಧಿ ಶೀಲ ರಾಷ್ಟ್ರಗಳಲ್ಲಿ, ಪ್ರಾಥಮಿಕ ಶಾಲೆಗೆ ಸೇರುವ ಮಕ್ಕಳಲ್ಲಿ ಅಂತಿಮ ತರಗತಿಯವರೆಗೆ ಇರುವ ಮಕ್ಕಳು ಶೇಕಡಾ 60 ಕ್ಕಿಂತ ಕಡಿಮೆ. ಜತೆಗೆ ಶಿಕ್ಷಕ ಮತ್ತು ವಿದ್ಯಾರ್ಥಿಗಳ ಅನುಪಾತವು 40:1 ಕ್ಕೂ ಹೆಚ್ಚಿದೆ. ಮತ್ತು ಅನೇಕ ಪ್ರಾಥಮಿಕ ಶಿಕ್ಷ ಕರು ಸಾಕಷ್ಟು ಶಿಕ್ಷಣ ಪಡೆದಿರುವುದಿಲ್ಲ.

ಬಾಲ ಕಾರ್ಮಿಕರು

 ಬಾಲ ಕಾರ್ಮಿಕ ಪದ್ಧತಿಯು ದೇಶದ ಮುಂದಿನ ದೊಡ್ಡ ಸವಾಲಾಗಿ ಮುಂದುವರೆದಿದೆ. ಸರ್ಕಾರವೂ ಈ ಸಮಸ್ಯೆಯನ್ನು ಎದುರಿಸಲು ಅನೇಕ  ಕ್ರಮಗಳನ್ನು  ತೆಗೆದು ಕೊಂಡಿದೆ. ಆದ್ದಾಗ್ಯೂ ಈ ಸಮಸ್ಯೆಯ ಪ್ರಮಾಣ ಮತ್ತು ವ್ಯಾಪ್ತಿಯನ್ನು ಪರಿಗಣಿಸಿದರೆ ಇದು ಮೂಲಭೂತವಾಗಿ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆ ಎನಿಸುವುದು. ಇದು ಬಡತನ, ಅನಕ್ಷರತೆಗಳೊಂದಿಗೆ ಗಾಢವಾದ ಸಂಬಂಧ ಹೊಂದಿದೆ. ಈ ಸಮಸ್ಯೆಯನ್ನು ಪರಿಹರಿಸಲು ಸಮಾಜದ ಎಲ್ಲ ವರ್ಗದ ಜನರ ಗಂಭೀರ ಪ್ರಯತ್ನ ಅಗತ್ಯ.
ಬಾಲಕಾರ್ಮಿಕ ವಿಷಯವನ್ನು ಅಧ್ಯಯನ ಮಾಡಿ, ಅದರ ನಿವಾರಣೆಗೆ ತೆಗೆದುಕೊಳ್ಳ ಬೇಕಾದ ಕ್ರಮಗಳನ್ನು ಸೂಚಿಸಲು ಸರಕಾರವು ೧೯೭೯ ರಷ್ಟು ಹಿಂದೆಯೇ ಗುರುಪಾದಸ್ವಾಮಿ ಸಮಿತಿಯನ್ನು ರಚಿಸಿತು.  ಸಮಿತಿಯು ಸಮಸ್ಯೆಯನ್ನು ಸವಿವರವಾಗಿ ಪರಿಶೀಲಿಸಿ, ಕೆಲವು ದೂರಗಾಮಿ ಶಿಫಾರ್ಸುಗಳನ್ನು ಮಾಡಿತು. ಬಡತನ ಇರುವವರೆಗೂ  ಬಾಲ ಕಾರ್ಮಿಕ ಸಮಸ್ಯೆಯನ್ನು ಸಂಪೂರ್ಣವಾಗಿ ನಿವಾರಿಸುವುದು ಕಷ್ಟ. ಅದನ್ನು ಕಾಯಿದೆಯ ಮೂಲಕ ನಿಷೇಧಿಸುವ ಯಾವುದೆ ಪ್ರಯತ್ನವೂ ಕಾರ್ಯಸಾಧುವಲ್ಲ. ಈ ಸನ್ನಿವೇಶದಲ್ಲಿ ಉಳಿದಿರುವ ಏಕೈಕ ಪರ್ಯಾಯ ಮಾರ್ಗವೆಂದರೆ ಅಪಾಯಕಾರಿ ರಂಗಗಳಲ್ಲಿ ಬಾಲಕಾರ್ಮಿಕರ ಬಳಕೆಯ ನಿಷೇಡಿಸುವುದು , ಎಂದು  ಸಮಿತಿಯು ಭಾವಿಸಿತು. ಇತರೆರಂಗಗಳಲ್ಲಿ ಕೆಲಸಮಾಡುವ ಜಾಗದಲ್ಲಿನ ವಾತಾವರಣದ ಸುಧಾರಣೆ ಮತ್ತು  ಪರಿಸ್ಥಿತಿಯ ನಿಯಂತ್ರಣವನ್ನು  ಮಾಡಬಹುದು ಎಂದು ತಿಳಿಸಿತು. ಸಮಿತಿಯು ಬಾಲ ಕಾರ್ಮಿಕರ  ಸಮಸ್ಯೆಗಳನ್ನು ಪರಿಹರಿಸಲು ಬಹುಮುಖಿ ನೀತಿಯ ಅನುಸರಣೆಯನ್ನು  ಶಿಫಾರ್ಸು ಮಾಡಿತು.
ಗುರುಪಾದಸ್ವಾಮಿ ಸಮಿತಿಯ ಶಿಫಾರಸ್ಸಿನ ಆಧಾರದ ಮೇಲೆ ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯಿದೆಯನ್ನು ೧೯೮೬ ರಲ್ಲಿ ಜಾರಿಗೆ ತಂದಿತು. ಈ ಕಾಯಿದೆಯು ಕೆಲವು ನಿರ್ದಿಷ್ಟ ನಮೂದಿತ ವೃತ್ತಿಗಳಲ್ಲಿ  ಮತ್ತು ಕಾರ್ಯವಿಧಾನದಲ್ಲಿ ಮಕ್ಕಳು  ಕೆಲಸ ಮಾಡುವುದನ್ನು ನಿಷೇಧಿಸಿತು. ಇತರ ಕಡೆ ಕೆಲಸ ಮಾಡುವಲ್ಲಿನ ವಾತಾವರಣವನ್ನು ನಿಯಂತ್ರಿಸಲಾಯಿತು. ಅಪಾಯಕಾರಿ ವೃತ್ತಿಗಳು ಮತ್ತು ಕಾರ್ಯ ವಿಧಾನಗಳ ಪಟ್ಟಿಯನ್ನು  ಕಾಯ್ದೆಯಡಿಯಲ್ಲಿ ರಚಿಸಲಾಗಿರುವ ಬಾಲಕಾರ್ಮಿಕ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸ್ಸುಗಳಂತೆ ಅಗಿಂದಾಗ  ವಿಸ್ತರಿಸಲಾಗುವುದು.
ಮೇಲೆ  ತಿಳಿಸಿದ ವಿಧಾನದ ಮೇರೆಗೆ, ಬಾಲಕಾರ್ಮಿಕ ರಾಷ್ಟ್ರೀಯ ನೀತಿಯನ್ನು ೧೯೮೭ ರಲ್ಲಿ ರೂಪಿಸಲಾಯಿತು. ಈ ನೀತಿಯು ಕ್ರಮವಾಗಿ, ಸರದಿಯ ಮೇರೆಗೆ ಮೊದಲು ಅಪಾಯಕಾರಿ ವೃತ್ತಿ  ಮತ್ತು ಕಾರ್ಯ ವಿಧಾನದಲ್ಲಿ ತೊಡಗಿರುವ ಮಕ್ಕಳ ಪುನರ್ವಸತಿಗೆ ಆದ್ಯತೆ ನೀಡಲಾಯಿತು   ಹಾಗೂ  ಬಾಲ ಕಾರ್ಮಿಕರ ಜನಗಣತಿಗೆ ಆದ್ಯತೆ ಕೊಡಲಾಯಿತು.

ಸೇತು ಬಂಧ  ಕೋರ್ಸುಗಳು
ಎಂ. ವಿ. ಫೌಂಡೇಷನ್  ಒಂದು  ಪ್ರಗತಿಪರ  ವಿಭಿನ್ನ ವಿಧಾನವನ್ನು ಅಭಿವೃದ್ಧಿ ಪಡಿಸಿದೆ.  ಇದು ಶಾಲೆ ಬಿಟ್ಟ, ಶಾಲೆಯಿಂದ ಹೊರಗುಳಿದ ಮತ್ತು ಬೇರೆಡೆ ಕೆಲಸ ಮಾಡುತ್ತಿರುವ  ಮಕ್ಕಳಿಗೆ ತರಬೇತಿ ನೀಡಲು ವಸತಿ ಸಹಿತ ಸೇತು ಬಂಧ ಕೋರ್ಸುಗಳನ್ನು ನಡೆಸುವುದು.  ನಂತರ ಶಾಲೆಯಲ್ಲಿ  ಅವರ ವಯೋಮಾನಕ್ಕೆ ಅನುಗುಣವಾದ  ತರಗತಿಗೆ  ಸೇರಲು ಅವಕಾಶ ಕಲ್ಪಿಸುತ್ತದೆ.  ಈ ತಂತ್ರವು  ಬಾಲ ಕಾರ್ಮಿಕರು  ಶೈಕ್ಷಣಿಕ  ವ್ಯವಸ್ಥೆಯಲ್ಲಿ  ಒಂದಾಗುವ  ಕೆಲಸವನ್ನು ಸರಳಗೊಳಿಸುವಲ್ಲಿ   ಬಹಳಷ್ಟು ಮಟ್ಟಿಗೆ  ಯಶಸ್ವಿಯಾಗಿದೆ. ಈ  ನೀತಿಯನ್ನು ಆಂಧ್ರ ಪ್ರದೇಶ ಸರಕಾರ ಮಾತ್ರವಲ್ಲದೆ, ಸರಕಾರೇತರ ಸಂಸ್ಥೆಗಳಾದ  ಪ್ರಥಮ್, ಸಿನಿ-ಆಶಾ, ಲೋಕ ಜಂಬಿಷ ಮತ್ತು ಇನ್ನೂ ಅನೇಕರು ಅನುಸರಿಸಿಸುತ್ತಿದ್ದಾರೆ.

* ಕಾರಣಗಳು
    ಯೂನಿಸೆಫ್ ಪ್ರಕಾರ ಮಕ್ಕಳನ್ನು ಕೆಲಸಕ್ಕೆ ತೆಗೆದು ಕೊಳ್ಳವುದಕ್ಕೆ ಕಾರಣ ಅವರನ್ನು ಶೋಷಣೆ ಮಾಡುವುದು ಸುಲಭ ಎಂದು. ಬಡತನ ಮೊದಲ ಮುಖ್ಯ ಕಾರಣವಾಗಿದ್ದು, ಮಕ್ಕಳು ತಮ್ಮ ವಯಸ್ಸಿನ ಪ್ರಮಾಣಕ್ಕಿಂತ ವಿರುದ್ಧವಾಗಿ ಏಕೆ ಕೆಲಸ ಮಾಡುತ್ತಾರೋ ಎನ್ನುವ ಪ್ರಶ್ನೆಗೆ ಉತ್ತರವಾಗಿದೆ. ಅದೂ ಅಲ್ಲದೆ ಇನ್ನೂ ಇತರ ಕಾರಣಗಳೂ ಇವೆ. ಜನಸಂಖ್ಯಾ ಸ್ಪೋಟ, ಅಗ್ಗದ ಕೆಲಸಗಾರರು ಇರುವ ಕಾನೂನುಗಳನ್ನು ಸರಿಯಾಗಿ ಪಾಲಿಸದೆ ಇರುವುದು, ತಾಯಿ ತಂದೆಯರಿಗೆ ಮಕ್ಕಳನ್ನು ಶಾಲೆಗೆ ಕಳುಹಿಸಲು ಮನಸ್ಸಿಲ್ಲದೆ ಇರುವುದು (ಬದಲಾಗಿ ಅವರು ಮಕ್ಕಳನ್ನು ಕೆಲಸಕ್ಕೆ ಕಳುಹಿಸಿದರೆ ಕುಟುಂಬದ ಆದಾಯವು ಹೆಚ್ಚುವುದು) ಗ್ರಾಮೀಣ ಪ್ರದೇಶದಲ್ಲಿನ ಕಡು ಬಡತನವೂ ಕಾರಣವಾಗಿವೆ. ಮಗುವೂ ಕೆಲಸ ಮಾಡುವುದು ಆ ಕುಟುಂಬದ ಉಳಿವಿಗೆ ಅಗತ್ಯವಾದರೆ ಯಾರು ತಾನೆ ಏನು ಮಾಡಬಲ್ಲರು?

*ಬಾಲ ಕಾರ್ಮಿಕ ಸಮಸ್ಯೆ ನಿವಾರಿಸಲು ಏನು ಮಾಡಲಾಗಿದೆ?
    ಬಾಲ ಕಾರ್ಮಿಕ ಸಮಸ್ಯೆಯನ್ನು ನಿವಾರಿಸಲು, ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನೆಯ ಕಾರ್ಯಕ್ರಮದ ಅಡಿಯಲ್ಲಿ ೭೬  ಬಾಲ ಕಾರ್ಮಿಕ  ಯೋಜನೆಗಳನ್ನು ಮಂಜೂರು ಮಾಡಲಾಗಿದೆ.  ಅದು  ೧೫೦,೦೦೦ ಮಕ್ಕಳಿಗೆ  ಉಪಯುಕ್ತವಾಗುತ್ತಿದೆ.   ಈಗಾಗಲೇ ೧೦೫,೦೦೦ ಮಕ್ಕಳು ವಿಶೇಷ ಶಾಲೆಗಳಲ್ಲಿ ದಾಖಲಾಗಿದ್ದಾರೆ. ಕಾರ್ಮಿಕ ಸಚಿವಾಲಯವು ಯೋಜನಾ ಆಯೋಗವನ್ನು ರಾಷ್ಟ್ರೀಯ  ಬಾಲ ಕಾರ್ಮಿಕ  ಯೋಜನೆಯ (NCLP) ಕೆಳಗೆ  ಈಗಿರುವ ೨೫೦ ಜಿಲ್ಲೆಯ ಜೊತೆಗೆ ಇನ್ನೂ ೬೦೦ ಜಿಲ್ಲೆಗಳಲ್ಲಿ ಕಾರ್ಯಗತ  ಮಾಡಲು ೧,೫೦೦ಕೋಟಿ ರೂಪಾಯಿಗಳ ಬೇಡಿಕೆ ಸಲ್ಲಿಸಿದೆ. ಮಕ್ಕಳು(೯-೧೪ ವರ್ಷ ವಯೋಮಾನದವರು)   ೫೭ ಅಪಾಯಕಾರಿ ಕೈಗಾರಿಕೆಗಳಲ್ಲಿ, ಡಾಬಾಗಳಲ್ಲಿ, ಮನೆಗಳಲ್ಲಿ   ಕೆಲಸ ಮಾಡುವವರು  ಈ ಯೋಜನೆ ಲಾಭವನ್ನು ಪಡೆಯಬಹುದಾಗಿದೆ.

ಅತ್ಯುತ್ತಮ ಶೈಕ್ಷಣಿಕ ಆಚರಣೆಗಳು
ಜೀವನೋಪಾಯ ಮಾರ್ಗದರ್ಶನ
ಮಾಹಿತಿ ತಂತ್ರಜ್ಞಾನ ಸಾಕ್ಷರತೆ
ಪರಿಹಾರಗಳ ವಿನಿಮಯ
ಸಂಪನ್ಮೂಲ ಕೊಠಡಿಗಳು
ಚರ್ಚಾ ವೇದಿಕೆ

==============
   
ಶೈಕ್ಷಣಿಕ ಅತ್ಯೂತ್ತಮ ರೂಢಿಗಳು (ಪದ್ಧತಿಗಳು)
* ಮಕ್ಕಳು ಚಟುವಟಿಕೆ ಆಧಾರಿತ ಕಲಿಕೆಯ ಶಾಲೆಗಳಲ್ಲಿ ಸಂತೋಷದಿಂದ ಕಲಿಯುವರು

    ಯುನಿಸೆಫ್ ಬೆಂಬಲಿತ ಸರ್ವ ಶಿಕ್ಷಣ ಅಭಿಯಾನದ ಅಡಿಯಲ್ಲಿ ಚಟುವಟಿಕೆ ಆಧಾರಿತ ಕಲಿಕೆಯನ್ನು (ABL), ಮಧ್ಯಪ್ರದೇಶದ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಪ್ರಾರಂಭಿಸಲಾಯಿತು.    ಭೋಪಾಲ, ಮಧ್ಯ ಪ್ರದೇಶ, 12 ಜನವರಿ 2010 – ಶಿವರಾಜ ಸಿಂಗ್ (10) ಮತ್ತು ಅವನ ಏಳುವರ್ಷದ ಸೋದರ ಅಕಲ್ ಸಿಂಗ್ ತಮ್ಮ ರೈತರಾದ ತಾಯಿತಂದೆಯರ ಜೊತೆ ಸಿಲೆಪ್ಟಿಬರ್ವಾಲ ಗ್ರಾಮದಲ್ಲಿ ವಾಸಿಸುವರು. ಅವರಿಗೆ ಹತ್ತಿರದ ನಗರ  16 ಕಿಲೋ ಮೀಟರ್ ದೂರದಲ್ಲಿದೆ. ಅದು ಕೇಂದ್ರ   ಭಾರತದ ರಾಜ್ಯವಾದ ಮಧ್ಯಪ್ರದೇಶದಲ್ಲಿದೆ.    ಅವರು ಅದೆ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಓದುವರು- ಶಿವರಾಜನು ಐದನೆ ತರಗತಿಯಲ್ಲಿ ಮತ್ತು ಅಕಲ್ ಎರಡನೆ ತರಗತಿಯಲ್ಲಿ ಇದ್ದಾರೆ.    ಆದರೆ ಶಿವರಾಜನು  ಪುಸ್ತಕಗಳಿಂದ ಕೂಡಿದ ಭಾರವಾದ ಚೀಲವನ್ನು ಹೊತ್ತು ಶಾಲೆಗೆ ಹೋದರೆ ಅವನ ತಮ್ಮ ಏನೂ ಇಲ್ಲದೆ ಕೈ ಬೀಸಿಕೊಂಡು ಹೋಗುತ್ತಾನೆ. ಕೊನೆಗೆ ವರ್ಣ ಮಾಲೆಯ ಪುಸ್ತಕವನ್ನೂ ಒಯ್ಯುವುದಿಲ್ಲ.
    “ನಾನು ಎರಡನೆ ತರಗತಿಯಲ್ಲಿ ಇದ್ದಾಗ, ನಾವು ಶಾಲೆಗೆ ಪುಸ್ತಕಗಳನ್ನು ಒಯ್ದು ಅವುಗಳಿಂದ ಓದ ಬೇಕಿತ್ತು. ನಮಗೆ ಹಿಂದಿ, ಇಂಗ್ಲಿಷ್ ಮತ್ತು ಗಣಿತದ ಪಠ್ಯ ಪುಸ್ತಕಗಳಿದ್ದವು. ಜೊತೆಗೆ  ಬರೆದು ಕೊಳ್ಳಲು ಮತ್ತು ಅಭ್ಯಾಸ ಮಾಡಲು ಪ್ರತಿ ವಿಷಯಕ್ಕೂ ಅಭ್ಯಾಸ (ಎಕ್ಸರ್ ಸೈಜು) ಪುಸ್ತಕಗಳೂ ಇರುತ್ತಿದ್ದವು ”  ಶಿವರಾಜ ನೆನಪಿಸಿಕೊಂಡ..
    “ಆದರೆ ಅಕಲ್ ಗೆ ಪುಸ್ತಕಗಳೆ ಇಲ್ಲ ಮತ್ತು ಎಲ್ಲ ಪಾಠಗಳೂ ಗೊತ್ತು, ಅವನು ಓದ ಬಲ್ಲ, ಬರೆಯುತ್ತಾನೆ ಮತ್ತು ನಾನು ನಾಲಕ್ಕನೆ ತರಗತಿಯಲ್ಲಿ ಮಾಡುವ ಲೆಕ್ಕ ಈಗಲೇ ಮಾಡುತ್ತಾನೆ. ಅವನು ಉರು ಹೊಡೆಯಬೇಕಿಲ್ಲ ಮತ್ತು ಅವನು ನಂತರ ಪಾಠಗಳನ್ನು ನೆನಪಿಟ್ಟುಕೊಳ್ಳ ಬೇಕಿಲ್ಲ. ಶಾಲೆಯಂದರೆ ಅವನಿಗೆ ಖುಷಿ ಮತ್ತು ಕಲಿಯುವುದು ಆಟ ಆಗಿದೆ.
    “ನನ್ನ ತಮ್ಮ ಸಹಪಾಠಿಗಳ ಗುಂಪಿನೊಡನೆ ಕುಳಿತು ಬಣ್ಣ ಬಣ್ದದ ಚಿತ್ರವಿರುವ ಕಾರ್ಡುಗಳನ್ನು ನೋಡುತ್ತಿರುತ್ತಾನೆ,” ಅವನು ಹೇಳಿದ.


* ಮಗು ಕೇಂದ್ರಿತ ಶಿಕ್ಷಣ
    ತನ್ನ ತರಗತಿಯಲ್ಲಿರುವ ಪ್ರತಿ ವಿದ್ಯಾರ್ಥಿಯಂತೆ, ಅಕಲ್ ಕೂಡ ತರಗತಿಗೆ ಹೋಗುತ್ತಾನೆ. ಸೀದಾ ಹಾಜರಾತಿ ಪಟ್ಟಿ ಹಚ್ಚಿದ ಗೋಡೆಯ ಬಳಿ ಹೋಗುತ್ತಾನೆ. ಅವನ ಬೆರಳುಗಳು ಆ ಪಟ್ಟಿಯಮೇಲೆ ಅವನ ಹೆಸರು ಬರುವವರೆಗೆ ಚಲಿಸುವುದು. ನಂತರ ಯಾರ ಸಹಾಯವೂ ಇಲ್ಲದೆ ದಿನಾಂಕವನ್ನು ಗುರುತಿಸುವನು. ಅಲ್ಲಿ ಹಾಜರಾತಿ ಗುರುತು ಮಾಡುವನು. ಅಲ್ಲಿಂದ ಇನ್ನೊಂದು ಚಾರ್ಟನ ಕಡೆ ಹೋಗುತ್ತಾನೆ. ಅಲ್ಲಿ ಇಂಗ್ಲಿಷ್ ಪಾಠದಲ್ಲಿನ ತನ್ನ ಪ್ರಗತಿ ತಿಳಿಯುತ್ತಾನೆ     ಅಕಲ್ ಮಧ್ಯ ಪ್ರದೇಶದಲ್ಲಿರುವ  ಚಟುವಟಿಕೆ ಆಧಾರಿತ  ಶಿಕ್ಷಣ ಪಡೆಯುತ್ತಿರುವ ಸಾವಿರಾರು ಮಕ್ಕಳಲ್ಲಿ ಒಬ್ಬ.  ಈ ಹೊಸ ಚಟುವಟಿಕೆ ಆಧಾರಿತ ಕಲಿಕೆಯ ಕಲ್ಪನೆಯನ್ನು ಸರ್ವ ಶಿಕ್ಷಣ ಅಭಿಯಾನವು ಯುನಿಸಿಫ್ ನ ಬೆಂಬಲದಿಂದ ಪ್ರಾರಂಭಿಸಿದೆ      ಈ ಕಾರ್ಯಕ್ರಮವು  50 ಜಿಲ್ಲೆಗಳ 4000 ಪ್ರಾಥಮಿಕ ಶಾಲೆಗಳಲ್ಲಿ ಒಂದು ಮತ್ತು ಎರಡನೆ ತರಗತಿಗಳಿಗೆ ಮೊದಲು ಪ್ರಾರಂಭವಾಯಿತು. ಇದರಲ್ಲಿ ಮಕ್ಕಳು ಮಗು ಸ್ನೇಹಿ ಬೋಧನೆ–ಕಲಿಕೆಯ ಪರಿಸರದಲ್ಲಿ ತಮಗೆ ಹೊಂದುವ ಕಲಿಕೆಯ ವೇಗದಲ್ಲಿ ಅಭ್ಯಾಸ ಮಾಡುವರು.      ಪಠ್ಯವನ್ನು ಪ್ರತಿ ವಿಷಯದ ವ್ಯಾಪ್ತಿಯಲ್ಲಿ  20 ಸಾಧನಾ ಹಂತಗಳಾಗಿ ವಿಂಗಡಿಸಿದೆ.– ಭಾಷೆಗಳು, ಪರಿಸರ ಅಧ್ಯಯನ, ಗಣಿತ ಮತ್ತು ಇಂಗ್ಲಿಷ್.   ಪ್ರತಿ ಕಲಿಕೆಯ ಹಂತವು ಮಗುವು ಗಳಿಸಲೇ ಬೇಕಾದ ಸಾಮರ್ಥ್ಯದ ಕಲಿಕೆಯನ್ನು ಹೆಚ್ಚಿಸುವ  ಚಟುವಟಿಕೆಗಳ ಗುಚ್ಛವನ್ನು ಹೊಂದಿವೆ..       ಪ್ರಾಣಿಗಳನ್ನು ಮತ್ತು ಪಕ್ಷಿಗಳನ್ನು ಗುರುತಿಸುವುದು, ಅಕ್ಷರಗಳನ್ನು ಕಲಿಯುವುದು, ಹಿಂದಿ ಮತ್ತು ಇಂಗ್ಲಿಷ್ ಪಾಠ ಓದುವುದು, ಸಂಖ್ಯೆಗಳನ್ನು ಏಣಿಸುವುದು, ಚಿತ್ರ ಹಾಕುವುದು ಮತ್ತು  ಗಣಿತದ ಸಮಸ್ಯೆಗಳನ್ನು ಪರಿಹರಿಸುವುದು ಕಲಿಕೆಯಲ್ಲಿ ಸೇರಿದೆ.
    ಒಂದು ಎಲ್ಲರಿಗೂ ಸಾಮಾನ್ಯವಾದ ಚಾರ್ಟನಲ್ಲಿ, ಸಾಧನೆಯ ಹಂತಗಳನ್ನು ಏಣಿಯ ಮಾದರಿಯಲ್ಲಿ ಜೋಡಿಸಲಾಗಿರುವುದು. ಅದರಿಂದ  ಮಗುವು ತಾನು ಹಿಂದಿನ ಪಾಠದಲ್ಲಿ  ಯಾವಸಾಧನಾ ಹಂತವನ್ನು  ದಾಟಿದೆ ಎಂಬುದನ್ನು ಖಚಿತವಾಗಿ ಅರಿತಿರುತ್ತಾನೆ. ಇದು ಮಗು ಸ್ನೇಹಿಯಾದ ಮೌಲ್ಯಮಾಪನ ವಿಧಾನ ಮತ್ತು ಕಲಿಕೆಯನ್ನು ಗಟ್ಟಿಗೊಳಿಸುತ್ತದೆ.     “ಸಾಂಪ್ರದಾಯಿಕ ವಿಧಾನವು ಯಾವಾಗಲೂ ಶಿಕ್ಷಕ ಕೇಂದ್ರಿತವಾಗಿತ್ತು. ಕಲಿಕೆಯು ಯಾವಾಗಲೂ ಶಿಕ್ಷಕನ ಕಲಿಸುವ ವೇಗವನ್ನು ಅವಲಂಬಿಸಿತ್ತು. “ ಒಬ್ಬ ವಿದ್ಯಾರ್ಥಿಯು ಎರಡು ದಿನ ಶಾಲೆಗೆ ಬರದಿದ್ದರೆ ಅವನು / ಅವಳು ಆ ಪಾಠಗಳನ್ನು  ಕಲಿಯುವುದು ಸಾಧ್ಯವಾಗುತ್ತಿರಲಿಲ್ಲ. ಆ ಪಾಠಗಳನ್ನು ಮತ್ತೆ ಬೋಧಿಸುತ್ತಲೇ ಇರಲಿಲ್ಲ ಎಂದು ವಿವರಿಸುತ್ತಾರೆ ಮಧ್ಯಪ್ರದೇಶದ  ಯುನಿಸೆಫ್ ನ  ಶಿಕ್ಷಣ ಮತ್ತು ಮಗುವಿನ ರಕ್ಷಣೆಯ ಪರಿಣಿತರಾದ ಕು. ಪಿ.ಎಸ್.ಉಮಾಶ್ರೀ.       “ಎ ಬಿ ಎಲ್ ಪದ್ದತಿಯಲ್ಲಿ, ಮಗುವು ತನ್ನದೇ ಆದ ವೇಗದಲ್ಲಿ ಕಲಿಯಲು ಸಾಧ್ಯ. ಒಂದು ಮಗುವು ಶಾಲೆಗೆ ಎರಡು ದಿನ ಬರದೇ ಇದ್ದರೆ, ಬಂದ ನಂತರ  ತಾನು ಎಲ್ಲಿಯವರೆಗೆ ಕಲಿತು ಬಿಟ್ಟಿದ್ದನೋ ಅಲ್ಲಿಂದಲೇ ಪುನಃ ಕಲಿಯಲು ಶುರುಮಾಡುವನು. ಸಹಪಾಠಿಗಳು ತಮ್ಮ ಸಾಮರ್ಥ್ಯದ ಅನುಸಾರ ಬೇರೆ ಬೇರೆ ಸಾಧನಾ ಹಂತದಲ್ಲಿ ಇರಬಹುದು. ಶಿಕ್ಷಕನು ಬರಿ ಕಲಿಕೆಯ ಸೌಲಭ್ಯ ಒದಗಿಸಲು ಮಾತ್ರ ಇರುವನು,” ಉಮಾಶ್ರೀ ಹೇಳುತ್ತಾರೆ.


* ಸಹಪಾಠಿಗಳೊಡನೆ ಕಲಿಕೆ

    ಸಾಧನಾ ಹಂತದ ಚಾರ್ಟನ ಸಹಾಯದಿಂದ, ಅಕಲ್  ತಾನು  11ನೆ ಸಾಧನಾ ಹಂತ ದಾಟಿರುವುದನ್ನು ಅರಿತುಕೊಳ್ಳುತ್ತಾನೆ. ಅವನು ಕಲಿಕೆಯ ಕಾರ್ಡುಗಳಿರುವ ತಟ್ಟೆಯ ಕಡೆ ಧಾವಿಸುತ್ತಾನೆ ಮತ್ತು ಮುಂದಿನ  ಹಂತ ತಲುಪಲು ಅಗತ್ಯವಾದ  ಸರಳ ಇಂಗ್ಲಿಷ್ ಪದಗಳಿರುವ ಕಲಿಕಾ ಸಾಮಗ್ರಿಯನ್ನು ಆಯ್ದು ಕೊಳ್ಳುತ್ತಾನೆ. ಕಲಿಕಾ ಸಾಮಗ್ರಿಯೊಡನೆ ತರಗತಿಯ ಮೂಲೆಯಲ್ಲಿ ಕುಳಿತು ಕೊಳ್ಳುವನು. ಅವನಲ್ಲಿಗೆ ಅದೇ ಸಾಧನಾ ಹಂತದಲ್ಲಿರುವ ಇತರ ಸಹಪಾಠಿಗಳು ಬಂದು ಸೇರುವುರು. ಅವರು ಜೊತೆಯಾಗಿ ಒಂದೊಂದೆ ಪದ ಕಲಿಯುವರು. ಪಾಠವು ಕಠಿನ ವೆನಿಸಿದಾಗ ಶಿಕ್ಷಕರು ಸಹಾಯಮಾಡಲು ಬರುವರು.      ಈ ವಿಧಾನದಿಂದ ಮಕ್ಕಳು ಒಬ್ಬರಿಂದ ಒಬ್ಬರು ಕಲಿಯಲು ಅನುಕೂಲವಾಗುವುದು ಮತ್ತು ತರಗತಿ ಯಲ್ಲಿ ಸಹಪಾಠಿಗಳನ್ನು ಅವರ ನಡುವೆ ಯಾವುದೆ ಸಂವಹನವಿಲ್ಲದೆ ಸಾಲಾಗಿ ಕೂಡ್ರಿಸಿ ಪಾಠ ಮಾಡಿದಾಗ ಇರಬಹುದಾದ ಸಾಮಾಜಿಕ ತಡೆಗಳು ಮುರಿದು ಬೀಳುವವು.       “ಈ ಚಿಕ್ಕ ಮಕ್ಕಳು ಪ್ರಾಯೋಗಿಕ ವಿಧಾನದಲ್ಲಿ ಕಲಿಯುವರು. ಅವರು ತಮ್ಮ ಸಹಪಾಠಿಗಳ ಜೊತೆ ಕುಳಿತು  4+5 = 9 ಎಂಬುದನ್ನ  ಕಲಿಯುವರು. ಅವರು ಒಂದು ಪದವಾದ ಮೇಲೆ ಇನ್ನೊಂದನ್ನು ಆರಿಸಿಕೊಂಡು ಓದಲು ಕಲಿಯುವರು,”  ಹತ್ತಿರದ ಗ್ರಾಮ ಮೊರ್ಚಾ ಖೇಡಿಯ ಎ.ಬಿ. ಎಲ್ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಕೈಲಾಸ್ ಟೇಲರ್ ರವರು ಹೀಗೆ ವಿವರಿಸುತ್ತಾರೆ     “ಈ ಹಿಂದೆ, ನಾವು ಯಾವ ಶಬ್ದ ಎಂದು ಅವರಿಗೆ ಹೇಳುತ್ತಿದ್ದೆವು ಮತ್ತು ಅದನ್ನು ಕಂಠ ಪಾಠಮಾಡಲು ತಿಳಿಸುತ್ತಿದ್ದೆವು ಮತ್ತು ಅವರು ಅದನ್ನು ನಾವು ಕೇಳಿದಾಗ ನೆನಪಿಸಿಕೊಂಡು ಪುನರುಚ್ಚರಿಸ ಬೇಕಿತ್ತು.   ಬಹಳ ಸಲ ಸಂಪ್ರದಾಯಿಕ ವಿಧಾನದಲ್ಲಿ ಬೋಧನೆ ಪಡೆದ  ವಿದ್ಯಾರ್ಥಿಯು  ಹಿಂದಿನ ಪಾಠವನ್ನು ಮರೆತು ಬಿಡುತ್ತಿದ್ದ.  ಆದರೆ ಈ ಮಕ್ಕಳು ಮರೆಯುವುದಿಲ್ಲ. ಕಾರಣ ಅವರು ಪ್ರತಿ ಪಾಠದ ಮೇಲೆ ತಾವೆ ಕೆಲಸ ಮಾಡುತ್ತಾರೆ ಮತ್ತು ಪ್ರಾಯೋಗಿಕವಾಗಿ ಪರಿಹಾರ ಕಂಡುಕೊಳ್ಳುತ್ತಾರೆ. ಇದರ ಫಲಿತಾಂಶವು ತುಂಬ ಆಶಾದಾಯಕವಾಗಿದೆ” ಎಂದು   ಟೇಲರ ಅವರು ಹೇಳಿದರು.
         ಈ ರೀತಿಯ ನವನವೀನ ವಿಧಾನಗಳು ಭಾರತದ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯಿದೆ 2009   ನಿಗದಿಪಡಿಸಿದ ಬದ್ಧತೆಯನ್ನು ಯಶಸ್ವಿಯಾಗಿ ನಿರ್ವಹಿಸಲು ಸಹಾಯವಾಗುವ  ಕೀಲಿಕೈ ಆಗಿವೆ. ಇದರಿಂದ  ಎಲ್ಲ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬಹು
logoblog

Thanks for reading ಪ್ರಾಥಮಿಕ ಶಿಕ್ಷಣ – ಸರ್ವ ಶಿಕ್ಷಣ ಅಭಿಯಾನ

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *