ಸತತ ಸಮಗ್ರ ಮೌಲ್ಯಮಾಪನ ಕಮ್ಮಟ-ಒಂದು ಚಿಂತನೆ
ಇಂದು ನಾವು ಮೌಲ್ಯಮಾಪನವನ್ನು ನೋಡುವ ರೀತಿಯಲ್ಲೇ ಒಂದು ಮಹತ್ವದ ಬದಲಾವಣೆ ಉಂಟಾಗಿದೆ. ಪೆನ್ನು ಪೇಪರಿನ ಹಳೇ ಪರೀಕ್ಷಾ ಪದ್ಧತಿಯಲ್ಲಿ (ಸಾಂಪ್ರದಾಯಿಕ ಪರೀಕ್ಷಾ ಪದ್ಧತಿಯಲ್ಲಿ) ಉರುಹಚ್ಚುವುದಕ್ಕೇ ಮತ್ತು ನೆನಪಿನಲ್ಲಿಟ್ಟು ಕೊಳ್ಳುವುದಕ್ಕೆ ಮನ್ನಣೆಇತ್ತು. ಇದು ಮಗುವಿನ ಜ್ಞಾನಾರ್ಜನೆ ಮತ್ತು ಅರ್ಥಮಾಡಿಕೊಂಡಿರುವ ಮಟ್ಟವನ್ನು ಅಳೆಯುವುದಕ್ಕೆ ಹೆಚ್ಚು ಗಮನ ನೀಡುತ್ತಿತ್ತು. ಮಗುವಿಗೆ ಕೊಟ್ಟ ಅಂಕ, rank ಗಳೆಲ್ಲಾ ಸೆಮಿಷ್ಟರ್ ಕೊನೆಯಲ್ಲಿ ಮಗುವಿನ ಕಲಿಕೆಯ ಸ್ಥಾನ ಏನು ಮತ್ತು ಅವನ ಸಹಪಾಠಿಗಳೊಂದಿಗೆ ಹೋಲಿಸಿದಾಗ ಅವನ ಕಲಿಕೆಯ ಮಟ್ಟ ಏನು ಎಂಬುದನ್ನು ಸಾರಿಹೇಳುವ ವಿಧಾನವಾಗಿತ್ತು. ಕಲಿಯುವಾಗ ತೋರಿದ ನ್ಯೂನತೆಗಳನ್ನು ಗಮನಿಸಿ ಮಗುವನ್ನುಅಲ್ಲಲ್ಲೇ ತಿದ್ದುವುದಕ್ಕೆ ಅವಕಾಶವೇ ಇರಲಿಲ್ಲ. ಮಗುವಿನ ಸರ್ವಾಂಗೀಣ ವ್ಯಕ್ತಿತ್ವದ ಬೆಳವಣಿಗೆ, ಕೌಶಲ್ಯದ ಬೆಳವಣಿಗೆ, ಬೌದ್ಧಿಕ ಪ್ರೌಢಿಮೆಗೆ ಪ್ರಾಮುಖ್ಯವೇ ಇರಲಿಲ್ಲ. ನಿರ್ದಿಷ್ಟ ಕಾಲಾವಧಿಯಲ್ಲಿ ಕಲಿಕೆಯಲ್ಲಿ ಮಗುವೊಂದು ತೋರಿದ ಪ್ರಗತಿಯನ್ನು ಇದು ಅಳೆಯತ್ತಿರಲೇ ಇಲ್ಲ. ಇದು ಮಕ್ಕಳಲ್ಲಷ್ಟೆ ಅಲ್ಲ, ಹೆತ್ತವರಲ್ಲೂ ಆತಂಕ, ಹತಾಶೆ, ಅವಮಾನ ಒತ್ತಡಗಳನ್ನು ಸೃಷ್ಟಿಸುತ್ತಿತ್ತು. ಮಕ್ಕಳು ಸವಾಲುಗಳನ್ನೆದುರಿಸಿ ಗೆಲ್ಲುವ ಧೀಮಂತರಾಗಬೇಕೆಂದು ಬಯಸುವ ಈ ಜ್ಞಾನಾಧಾರಿತ 21 ನೇ ಶತಮಾನದ ಸಮಾಜಕ್ಕಂತೂ ಇದು ಹೊಂದುವುದೇ ಇಲ್ಲ. ಆದ್ದರಿಂದಲೇ ಈ ಓಬೀರಾಯನ ಪದ್ಧತಿಯನ್ನು ಬದಲಾಯಿಸಬೇಕಾದ ತುರ್ತು ಆವಶ್ಯಕತೆ ಉಂಟಾಯಿತು.
ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು ಸತತ ಸಮಗ್ರ ಮೌಲ್ಯಮಾಪನ(CCE) ಎಂಬ ಹೊಸ ವಿಧಾನವನ್ನು 2009ರಲ್ಲಿ ಆರಂಭಿಸಿದೆ. ಇದು ಬೋಧನೆ-ಕಲಿಕೆ ಪ್ರಕ್ರಿಯೆಯ ಜೊತೆಜೊತೆಯಲ್ಲೇ ನಡೆಯುವ ಶಾಲಾಧಾರಿತ ಮೌಲ್ಯಮಾಪನದ ವ್ಯವಸ್ಥೆ. ಮೌಲ್ಯಮಾಪನವೆಂಬುದು ಬೋಧನೆ-ಕಲಿಕೆಯಿಂದ ಪ್ರತ್ಯೇಕವಾದ, ವರ್ಷದಲ್ಲಿ ಒಂದು ಬಾರಿ ಮಾಡಿ ಮುಗಿಸುವ ಚಟುವಟಿಕೆ ಅಲ್ಲ; ಬೋಧನೆ-ಕಲಿಕೆಯೊಳಗೇ ಹೆಣೆದುಕೊಂಡಿರುವ ನಿರಂತರ ಪ್ರಕ್ರಿಯೆ ಎಂದು ಈ ವಿಧಾನ ಭಾವಿಸುತ್ತದೆ. ಮಗುವಿನ ಸರ್ವಾಂಗೀಣ ಬೆಳವಣಿಗೆಯನ್ನು ಈ ಪದ್ಧತಿ ಗಮನದಲ್ಲಿಟ್ಟುಕೊಂಡಿದೆ. ತರಗತಿಯ ಕಲಿಕೆ (ವಿಷಯ ನಿರ್ದಿಷ್ಟ) ಮತ್ತು ಪೂರಕ ಸಹ-ಕಲಿಕೆ (ಜೀವನ ಕೌಶಲ್ಯ, ನಿಲುವುಗಳು, ಮೌಲ್ಯಗಳು ಮತ್ತು ಸಹಪಠ್ಯ ಇತ್ಯಾದಿ) ಇವೆರಡೂ ಬಗೆಯ ಮೌಲ್ಯಮಾಪನವನ್ನು ಅದು ರೂಪಣ ಮತ್ತು ಸಮಗ್ರ ಕಲಿಕಾ ನಿರ್ಧರಣೆಯ ಮೂಲಕ ಅಳೆಯುತ್ತದೆ. ಅಂಕಗಳು ಮತ್ತು rank ಗಳನ್ನು ನೀಡುವ ಬದಲಾಗಿ ಗ್ರೇಡು ಪದ್ಧತಿ ಮತ್ತು ಶೇಖಡಾವಾರು ಶ್ರೇಣಿ ನೀಡುವುದನ್ನು ಇದರಲ್ಲಿ ಶಿಫಾರಸು ಮಾಡಲಾಗಿದೆ.
ಈ ಪದ್ಧತಿಯು ಶಿಕ್ಷಕನಿಂದ ಏನನ್ನು ನಿರೀಕ್ಷಿಸುತ್ತದೆ?
ಈಗ ಶಿಕ್ಷಕನ ಪಾತ್ರ ಮತ್ತು ಜವಾಬ್ದಾರಿ ಹೆಚ್ಚಿದೆ ಎನ್ನುವುದು ಸ್ಪಷ್ಟ. ಶಿಕ್ಷಕನ ಕೆಲಸವು ಕೇವಲ ಪಾಠ ಮಾಡುವುದಕ್ಕಷ್ಟೇ ಸೀಮಿತವಾಗಿಲ್ಲ. ಹೊಸ ವ್ಯವಸ್ಥೆಯಲ್ಲಿ ಆತ/ಆಕೆ ಮಗುವನ್ನು ವಾಡಿಕೆಯ ಮತ್ತು ವಾಡಿಕೆಯೇತರ ಸಂದರ್ಭಗಳಲ್ಲಿ ಸಮಗ್ರವಾಗಿ ಗಮನಿಸಬೇಕಾಗಿದೆ. ದಿನವೂ ಮಗುವಿನ ನಡತೆಯನ್ನು ಯಾವುದೇ ಪೂರ್ವಗ್ರಹವಿಲ್ಲದೆ ಗಮನಿಸಿ ದಾಖಲಿಸಬೇಕು. ಬೋಧನೆಯ ಸಂದರ್ಭದಲ್ಲಿ ಮಗುವಿನ ಕಲಿಕೆಯ ಕಷ್ಟಗಳನ್ನು ಗಮನಿಸಿ ಅದಕ್ಕೆ ಪರಿಹಾರ ನೀಡುವುದಲ್ಲದೇ ಹೆತ್ತವರ ಗಮನಕ್ಕೂ ಇದನ್ನು ತರಬೇಕು; ಇದರಿಂದ ತಿದ್ದುವ ಕೆಲಸ ಸಮರ್ಪಕವಾಗಿ ಆಗಿ ಮಗುವು ನಿರೀಕ್ಷಿತ ಮಟ್ಟ ತಲುಪುವುದಕ್ಕೆ ಸಹಾಯವಾಗುತ್ತದೆ.
ಪ್ರತಿಯೊಂದು ಮಗುವಿನ ಕಲಿಕೆಯ ವೇಗ ಬೇರೆ ಬೇರೆಯಾಗಿರುತ್ತದೆ. ಪ್ರತಿ ಮಗುವಿನ ಅಗತ್ಯಕ್ಕನುಗುಣವಾಗಿ ಶಿಕ್ಷಕನೊಬ್ಬ ಹಲವಾರು ಸಾಧನಗಳನ್ನು, ಮಾನದಂಡಗಳನ್ನು ಕಲಿಕೆ ನಿರ್ಧರಣೆಗೆ ಸಿದ್ಧಪಡಿಸಬೇಕಾಗುತ್ತದೆ. ಪ್ರತಿ ಚಟುವಟಿಕೆಗೂ ಮಗುವಿನ ಕಲಿಕಾನಿರ್ಧರಣೆಗಾಗಿ ಶಿಕ್ಷಕನು ವಿವರಣಾತ್ಮಕ ಸೂಚಿಗಳನ್ನು ತಯಾರಿಸಿಕೊಳ್ಳಬೇಕು.
ಆದರೆ, ಸಿಸಿಇ ಶಿಫಾರಸಿನನ್ವಯ ಪ್ರಗತಿ ಪತ್ರದಲ್ಲಿ ಗ್ರೇಡ್‍ಗಳನ್ನು ಮತ್ತು ಶೇಖಡಾವಾರು ಶ್ರೇಣಿಯನ್ನು ದಾಖಲಿಸುವುದಕ್ಕೆ ಶಿಕ್ಷಕನೊಬ್ಬನ ಕೆಲಸದ ವ್ಯಾಪ್ತಿ ಜಾಸ್ತಿಯಾಗುತ್ತದೆ ಮತ್ತು ಅದಕ್ಕೆ ಬಹುಪಾಲು ಸಮಯ ವಿನಿಯೋಗವಾಗುತ್ತದೆ.
ಈ ಹೊಸ ಮೌಲ್ಯಮಾಪನವನ್ನು ಜಾರಿಗೆ ತರಲು ಶಿಕ್ಷಕರು ಸಜ್ಜಾಗಿದ್ದಾರಾ?
ಶಿಕ್ಷಕ–ವಿದ್ಯಾರ್ಥಿ ಅನುಪಾತ ಹೆಚ್ಚಿರುವ ನಮ್ಮ ದೇಶದ ಶಾಲೆಗಳಲ್ಲಿ ಇದೊಂದು ದೊಡ್ಡ ಸವಾಲೇ ಸರಿ. ಹೆಚ್ಚಿನ ಶಿಕ್ಷಕರು (ತಾವು ಶಾಲೆಗಳಲ್ಲಿ ಕಲಿಯುತ್ತಿದ್ದಾಗ) ಸಾಂಪ್ರದಾಯಿಕ ಕಂಠಪಾಠದ ವಿಧಾನದ ಮೂಲಕವೇ ಕಲಿತು ಬಂದವರು.ಹೀಗಾಗಿ ಕಾಗದ ಮತ್ತು ಪೆನ್ಸಿಲ್ಲು ವಿಧಾನದಲ್ಲಿ ಮಕ್ಕಳ ಪರೀಕ್ಷೆ ಮಾಡುವುದು ಅವರಿಗೆ ರೂಢಿಯಾಗಿ ಬಿಟ್ಟಿದೆ. ಈಗ ಅವರಿಗೆ ಏನೇನೂ ಪರಿಚಯವಿಲ್ಲದ ಅಥವಾ ಸ್ವಲ್ಪಮಾತ್ರವೇ ಪರಿಚಯವಿರುವ ವೈವಿಧ್ಯಮಯ ಸಾಧನ ತಂತ್ರಗಳ ಮೂಲಕ ವಿದ್ಯಾರ್ಥಿಯ ಸತತ ಸಮಗ್ರ ಮೌಲ್ಯಮಾಪನ ಮಾಡಲು ಹೇಳಲಾಗುತ್ತಿದೆ.
ಸಿಸಿಇ ತರಬೇತಿಯಲ್ಲಿ, ಅನೌಪಚಾರಿಕವಾಗಿ ಶಿಕ್ಷಕರೊಂದಿಗೆ ಸಂವಾದಿಸಿದಾಗ ಪ್ರಮುಖವಾಗಿ ಗೋಚರಿಸಿದ್ದು ಅವರ ಒತ್ತಡದ ಪ್ರಮಾಣ. ಹೊಸ ಪದ್ಧತಿಯ ಬಗ್ಗೆ ಕೈಪಿಡಿಯಲ್ಲಿ ಓದುವುದಕ್ಕೂ ಅದನ್ನು ಜಾರಿಗೊಳಿಸುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಆರಂಭಿಕ ಹೆಜ್ಜೆಗಳಲ್ಲಿ ಅವರಿಗೆ ತುಂಬಾ ಮಾರ್ಗದರ್ಶನದ ಅಗತ್ಯವಿದೆ. ಶಿಕ್ಷಕರಂತೂ ಈ ತರಬೇತಿ, ಕಮ್ಮಟಗಳನ್ನು ಮಂತ್ರದಂಡವೆಂಬಂತೆ ನೋಡುತ್ತಾರೆ. ನಾನು ಗಮನಿಸಿದ ಹಾಗೆ, ಹೆಚ್ಚಿನ ಶಿಕ್ಷಕರು ಮೌಲ್ಯಮಾಪನದ ಆರಂಭಿಕ ತಯಾರಿಗೆ ಬೇಕಾದ ಚಟುವಟಿಕೆಗಳನ್ನು ಯೋಜಿಸುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸೂಚಿಗಳ ಬಗ್ಗೆಯೂ ಅವರಿಗೆ ಸ್ಪಷ್ಟತೆಯಿಲ್ಲ.
ರೂಪಣ (formative)ಕಲಿಕಾ ನಿರ್ಧರಣೆಯ ಪ್ರಕ್ರಿಯೆಯ ಒಂದು ಸೋದಾಹರಣ ಮಾರ್ಗ ಸೂಚಿ ಇಲ್ಲಿದೆ.

ಮೊದಲನೆ ಹಂತವೆಂದರೆ ತರಗತಿಯಲ್ಲಿ ಪಾಠ ಮಾಡಲಿರುವ ಪರಿಕಲ್ಪನೆಯ ಆಯ್ಕೆ. ಉದಾ: ಉಪಾಧ್ಯಾಯರು "ಪ್ರಾಣಿ ಪ್ರಪಂಚ" ಎಂಬ ವಿಷಯ ಆರಿಸಿಕೊಂಡಿದ್ದಾರೆ. ಎಂದಿಟ್ಟುಕೊಳ್ಳೋಣ,
ತರುವಾಯ ಆಯ್ದುಕೊಂಡ ವಿಷಯದ ಬಗ್ಗೆ ಪಾಠದ ಅನಂತರ ಮಕ್ಕಳು ಏನೇನು ಕಲಿತುಕೊಂಡಿರಬೇಕು ಎಂಬುದನ್ನು ಮೊದಲು ಗುರುತಿಸಿಕೊಳ್ಳಬೇಕು. ಮೇಲೆ ಹೇಳಿದ ಚಟುವಟಿಕೆಯ ಬಳಿಕ ವಿದ್ಯಾರ್ಥಿಗಳು ಈ ಕೆಳಕಂಡದ್ದನ್ನು ಕಲಿಯಬೇಕೆಂದು ನಿರೀಕ್ಷಿಸಲಾಗಿದೆ.
• ಪ್ರಾಣಿ-ಪಕ್ಷಿಗಳ ಹೆಸರುಗಳ ಪಟ್ಟಿ ಮಾಡುವುದು.
• ನೀಡಲಾದ ವಿವರಣೆ ಮೂಲಕ ಪ್ರಾಣಿಪಕ್ಷಿಗಳನ್ನು ಗುರುತಿಸುವುದು.
• ಪ್ರಾಣಿಗಳ ವರ್ಗೀಕರಣ(ಹಕ್ಕಿಗಳು,ಉರಗಗಳು,ಕೀಟಗಳು ಮತ್ತು ಸಸ್ಥನಿಗಳು).
• ಪ್ರತಿ ಪ್ರಾಣಿಯು ಜೀವಿಸುವ ಪ್ರದೇಶದ ಬಗ್ಗೆ ಪ್ರಾಥಮಿಕ ಜ್ಞಾನ.
• ಯಾಕೆ, ಹೇಗೆ ಎಂಬಿತ್ಯಾದಿ ಪ್ರಶ್ನಿಸುವ ಸಾಮರ್ಥ್ಯದ ಉದ್ದೀಪನ.
• ಅರಿತುಕೊಂಡಿದ್ದನ್ನು ಜರ್ನಲ್ ಮೂಲಕ ಹೇಳುವ/ಅಭಿವ್ಯಕ್ತಿಸುವ ಕಲೆ.
• ಗುಂಪಿನಲ್ಲಿ ಜೊತೆಗೂಡಿ ಕಲಿಯುವುದು.
ಈ ಫಲಿತಾಂಶಗಳ ಆಧಾರದ ಮೇಲೆ ಮೌಲ್ಯಮಾಪನದ ವಿಧಾನವೊಂದನ್ನು ( ಅಂದರೆ ಒಂದು ಚಟುವಟಿಕೆಯನ್ನು) ಶಿಕ್ಷಕನು ರೂಪಿಸಬೇಕು. ಮಗುವಿನಲ್ಲಿ ಯಾವ ಕೌಶಲ ಮತ್ತು ಸಾಮರ್ಥ್ಯಬೆಳೆಯಬೇಕೆಂದು ಶಿಕ್ಷಕ ನಿರೀಕ್ಷಿಸುತ್ತಾನೋ ಅದರ ಆಧಾರದ ಮೇಲೆ ಈ ಚಟುವಟಿಕೆಯನ್ನು ರೂಪಿಸಬೇಕು. ಇದೇ ಉದಾಹರಣೆಯ ಮುಂದುವರಿಕೆಯಾಗಿ, ಪ್ರಾಣಿ ಪ್ರಪಂಚದ ಬಗ್ಗೆ ಕಲಿಸಲು ಪ್ರಾಣಿ ಸಂಗ್ರಹಾಲಯಕ್ಕೆ ಶಿಕ್ಷಕ ಮಕ್ಕಳನ್ನು ಕರೆದುಕೊಂಡು ಹೋಗುತ್ತಾನೆ ಎಂದಿಟ್ಟುಕೊಳ್ಳಿ.
ಪ್ರಾಣಿಸಂಗ್ರಹಾಲಯದ ಅಧಿಕಾರಿಯಲ್ಲಿ ಕೇಳಬೇಕಾದ ಪ್ರಶ್ನೆಗಳನ್ನು ಮಕ್ಕಳು ಮೊದಲೇ ಸಿದ್ಧಪಡಿಸಿಕೊಳ್ಳುವಂತೆ ನೋಡಿಕೊಳ್ಳಬೇಕು. ಪ್ರವಾಸದ ಬಳಿಕ, ತಮಗೆ ದೊರೆತ ಮಾಹಿತಿಯನ್ನು ಆಧರಿಸಿ ಮಕ್ಕಳು ಪ್ರಬಂಧವೊಂದನ್ನು ತಯಾರಿಸಿ, ಉಳಿದ ಮಕ್ಕಳ ಗುಂಪಿನೆದುರು ಮಂಡಿಸಬೇಕು.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಮಗುವಿನಲ್ಲಿ ಇರಬೇಕಾದ (ವಿದ್ಯಾ ಸಂಬಂಧಿ ಮತ್ತು ಸಹ-ವಿದ್ಯಾಸಂಬಂಧಿ) ವಿವಿಧ ಸಾಮರ್ಥ್ಯಗಳನ್ನು ನಿರ್ಧರಿಸಲು ಶಿಕ್ಷಕನು ವಿವರಣಾತ್ಮಕ ಸೂಚಿಗಳನ್ನು ರೂಪಿಸಿಕೊಳ್ಳಬೇಕು.
ಯಾವುದೇ ಸೂಚಿ ಗಮನಿಸ ಬಹುದಾದದ್ದು ಮತ್ತು ಅಳೆಯಬಹುದಾದದ್ದು ಆಗಿರಬೇಕು. ಉದಾ: ಮಗುವು "ಅರ್ಥಮಾಡಿಕೊಂಡಿದೆಯೇ" ಎಂಬುದನ್ನು ಅಳೆಯುವ ಸೂಚಿ ಇರಲೇಬಾರದು. ಯಾಕೆಂದರೆ, ತರಗತಿಯಲ್ಲಿ ಶಿಕ್ಷಕನೊಬ್ಬ ಒಂದು ಪರಿಕಲ್ಪನೆಯನ್ನು ಬೋಧಿಸುತ್ತಿದ್ದಾಗ "ಪಾಠ ಅರ್ಥವಾಯಿತಾ" ಎಂದು ಕೇಳಿದರೆ, ಅರ್ಥವಾಗದಿದ್ದರೂ ಅಥವಾ ತಪ್ಪಾಗಿ ಅರ್ಥಮಾಡಿಕೊಂಡಿದ್ದರೂ ಅರ್ಥ ಆಗಿದೆಯೆಂದು ಮಕ್ಕಳು ತಲೆಯಾಡಿಸುತ್ತಾರೆ. ಅದಕ್ಕೆ ಬದಲಾಗಿ ಮಗು ಎಷ್ಟು ಅರ್ಥ ಮಾಡಿಕೊಂಡಿದೆಯೆಂಬುದನ್ನು ಖಚಿತಪಡಿಸಿಕೊಳ್ಳಲು ಬೇರೆ ತಂತ್ರೋಪಾಯಗಳನ್ನು ಶಿಕ್ಷಕನೊಬ್ಬ ವಿನ್ಯಾಸಗೊಳಿಸಿಕೊಳ್ಳಬೇಕಾಗುತ್ತದೆ. ‘ವಿವರಿಸು’, ‘ಮಾಡಿ ತೋರಿಸು’ 'ಪರಿಕಲ್ಪನೆಯನ್ನು ಚಿತ್ರ ಬರೆದು ತೋರಿಸು' ಎಂಬಿತ್ಯಾದಿ ಕೇಳುವ ಮೂಲಕ ಇದನ್ನು ಸಾಧಿಸಬಹುದು. ಮಗುವು ಅದನ್ನು ಮಾಡಿ ತೋರಿಸಿದರೆ ಅದು ಅರ್ಥ ಮಾಡಿಕೊಂಡಿದೆಯೆಂದು ಅರ್ಥ. ಅದೇ ರೀತಿ ಸಹ-ವಿದ್ಯಾಸಂಬಂಧಿ ಸೂಚಿಯ ವಿಚಾರಕ್ಕೆ ಬಂದಾಗ, ಮಗು ನಾಯಕತ್ವದ ಗುಣ ಹೊಂದಿದೆಯೇ ಎಂಬ ಸೂಚಿಯನ್ನು ಹೊಂದಿರಬಾರದು. ಅದರ ಬದಲು ನಾಯಕತ್ವದ ಲಕ್ಷಣಗಳನ್ನು ವಿಷದಪಡಿಸಬೇಕು. 'ತಾನೆ ಮುಂದೆ ಬಂದು ಕೆಲಸಮಾಡುತ್ತಾನೆ' 'ಇತರರ ಅಭಿಪ್ರಾಯಗಳನ್ನು ಗಮನವಿಟ್ಟು ಕೇಳುತ್ತಾನೆ' 'ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವಿದೆ' ಇತ್ಯಾದಿ ಸೂಚಿಗಳನ್ನು ರೂಪಿಸಬಹುದು. ಸೂಚಿಗಳು ಒಂದು ಆಯ್ದ ಚಟುವಟಿಕೆಯ ಉದ್ದಿಶ್ಯ, ಅದರ ಕಲಿಕೆಯ ಫಲಿತಾಂಶಗಳೊಂದಿಗೆ ಸಂಬಂಧ ಹೊಂದಿದ್ದರೆ ಸೂಚಿಗಳನ್ನು ರೂಪಿಸುವುದೂ ಸುಲಭ. ಕೆಳಗೆ ನೀಡಿರುವ ಕೋಷ್ಟಕದಲ್ಲಿ ಒಂದು ಉದಾಹರಣೆಯನ್ನು ನೀಡಲಾಗಿದೆ.
ಕಲಿಕೆಯ ಫಲಿತಾಂಶ/ಉದ್ದೇಶ | ವಿವರಣಾತ್ಮಕ ಸೂಚಿಗಳು |
ತಮ್ಮ ಸುತ್ತಮುತ್ತ ಕಂಡುಬರುವ ಪ್ರಾಣಿಗಳ ದೈಹಿಕ ಗುಣ ಲಕ್ಷಣಗಳನ್ನು ವಿವರಿಸಿರಿ | ಮಗುವು ತನ್ನ ಸುತ್ತಮುತ್ತಲ ಪರಿಸರದಲ್ಲಿ ಕಂಡುಬರುವ ಪ್ರಾಣಿಗಳನ್ನು ಅವುಗಳ ದೈಹಿಕ ಗುಣ ಲಕ್ಷಣದ ಆಧಾರದ ಮೇಲೆ ಗುರುತಿಸಲು ಸಮರ್ಥವಾಗುತ್ತದೆ. ಮಗುವು ತಾನು ವಿವರಿಸಿದ ಪ್ರಾಣಿಯ ಚಿತ್ರ ಬರೆದು ತೋರಿಸಲು ಸಮರ್ಥವಾಗುತ್ತದೆ. |
ವಿವಿಧ ಬಗೆಯ ಪ್ರಾಣಿಗಳನ್ನು ವರ್ಗೀಕರಿಸಿ (ಸಸ್ಥನಿ,ಉಭಯಚರಿ,ಉರಗಗಳು,ಕೀಟಗಳು ಮತ್ತು ಪಕ್ಷಿಗಳು) | ಮಗುವು ಅವುಗಳ ಬಗೆಗೆ ಅನುಸಾರವಾಗಿ ಪ್ರಾಣಿಗಳನ್ನು ವಿಂಗಡಿಸುವುದನ್ನು ಕಲಿಯುತ್ತದೆ. |
ವಿವಿಧ ಪ್ರಾಣಿಗಳ ವಾಸಸ್ಥಳಗಳ ಬಗ್ಗೆ ಮೂಲಭೂತ ಜ್ಞಾನವನ್ನು ಪಡೆಯುತ್ತವೆ. | ಪ್ರಾಣಿಗಳು ಮತ್ತು ಅವುಗಳ ವಾಸಸ್ಥಾನವನ್ನು ತೋರಿಸುವ ಮಿಂಚು ಕಾರ್ಡು ಗಳನ್ನು ಬಳಸಿ ಪ್ರಾಣಿ ಮತ್ತು ಅದರ ವಾಸಸ್ಥಳವನ್ನು ಮಕ್ಕಳು ಹೊಂದಿಸಿ ತೋರಿಸಬಹುದು. |
ಪ್ರಾಣಿಗಳ ಆಹಾರ ವಿಧಾನದ ಬಗ್ಗೆ ಅರ್ಥಮಾಡಿಕೊಳ್ಳಬಹುದು. | ಮಗು ಆಹಾರ ಸರಪಳಿ ಬಗ್ಗೆ ಬರೆಯಬಲ್ಲದು. |
ಭೇಟಿ ಕಾಲದಲ್ಲಿ ಕೇಳಲು ಪ್ರಶ್ನಾವಳಿಯನ್ನು ರಚಿಸುವುದು. | ಮಗುವು ಎ) ಕೇಳಲು ಸರಿಯಾದ ಸಂಬಂಧಪಟ್ಟ ಪ್ರಶ್ನೆಗಳನ್ನು ಗುರುತಿಸುತ್ತದೆ. ಬಿ)ಸಂದರ್ಶಿತರಿಗೆ ಬಲು ಆತ್ಮ ವಿಶ್ವಾಸದಿಂದ ಪ್ರಶ್ನೆ ಕೇಳಲು ಕಲಿಯುತ್ತದೆ. |
ಜರ್ನಲ್ ತಯಾರಿಸುವುದು. | ಮಗುವು ಎ) ಸಂಗ್ರಹಿಸಿದ ಮಾಹಿತಿಗಳನ್ನು ಸರಿಯಾದ ಸರಣಿಯಲ್ಲಿ ಜೋಡಿಸಲು ಕಲಿಯುತ್ತದೆ. ಬಿ) ತನ್ನ ಬರವಣಿಗೆಯಲ್ಲಿ ಸೃಜನ ಶೀಲತೆ /ಪ್ರಾಮಾಣಿಕತೆ ತೋರಿಸುತ್ತದೆ. |
ಗುಂಪುಗಳಾಗಿ ಕೆಲಸಮಾಡುವುದು. | ಮಗುವು ಎ) ಗುಂಪಿನ ಇತರರೊಡನೆ ಬೆರೆತು ಕೆಲಸ ಮಾಡುವುದನ್ನು ಕಲಿಯುತ್ತದೆ. ಬಿ) ಗುಂಪಿನಕೆಲಸದಲ್ಲಿ ಮುನ್ನುಗ್ಗಿ ಕೆಲಸ ಮಾಡುತ್ತದೆ ಸಿ)ಅಗತ್ಯವಿದ್ದ ಇತರರಿಗೆ ಸಹಾಯ ಮಾಡುತ್ತದೆ. ಡಿ)ತನ್ನ ಸಹಪಾಠಿಗಳೊಂದಿಗೆ ಸಂವೇದನಾ ಶೀಲವಾಗಿ ವರ್ತಿಸುತ್ತದೆ.. |
ವಿವರಣಾತ್ಮಕ ಸೂಚಿಗಳನ್ನು ತಯಾರಿಸಿಕೊಂಡ ಅನಂತರ ಉಪಾಧ್ಯಾಯರು ಅದನ್ನು ವಿದ್ಯಾ ಸಂಬಂಧಿ ಮತ್ತು ಸಹ-ವಿದ್ಯಾಸಂಬಂಧಿ ಎಂದು ವರ್ಗೀಕರಿಸಿಕೊಳ್ಳಬೇಕು ಇದರಿಂದ ಶಿಕ್ಷಕರು ಮಗುವಿನ ಪರಿಪೂರ್ಣ ಕಲಿಕಾ ನಿರ್ಧರಣೆ ಮಾಡಲು ಸಹಾಯ ಮಾಡುತ್ತದೆ.
ಮೇಲಿನ ಉದಾಹರಣೆ ಬೋಧನೆ ಕಲಿಕೆಯೊಂದಿಗೆ ಕಲಿಕಾನಿರ್ಧರಣೆಯನ್ನು ಹೇಗೆ ವಿಲೀನ ಗೊಳಿಸಲಾಗಿದೆ ಎಂಬುದನ್ನು ತಿಳಿಸುತ್ತದೆ.
ರೂಪಣಾ ಕಲಿಕಾನಿರ್ಧರಣೆಯನ್ನು ಅನೇಕ ರೀತಿಯಲ್ಲಿ ಮಾಡಬಹುದು.ಪಾತ್ರಾಭಿನಯ,ರಸಪ್ರಶ್ನೆ, ಚರ್ಚೆ,ಪ್ರಾಜೆಕ್ಟು ಕೆಲಸ ಮುಂತಾದವುಗಳ ಮೂಲಕ ಮಾಡಬಹುದು.ಒಳಾಂಶ ಮತ್ತು ಉದ್ದೇಶಕ್ಕೆ ಅನುಸಾರವಾಗಿ ಶಿಕ್ಷಕರು ಚಟುವಟಿಕೆಯನ್ನು ಆಯ್ಕೆ ಮಾಡಬಹುದು ಮತ್ತು ಕಲಿಕಾನಿರ್ಧರಣೆಗೆ ಸೂಚಿಗಳು ಅಥವಾ ತಾಳೆ ಪಟ್ಟಿ ಅಥವಾ ರೂಬರಿಕ್ಸ್ ರಚಿಸಿಕೊಳ್ಳಬಹುದು.
ಉಪಸಂಹಾರ
ಸಿಸಿಇಯ ಯಶಸ್ಸು ಶಿಕ್ಷಕರ ಮೇಲೆ ಅವಲಂಬಿಸಿದೆ. ಏಕೆಂದರೆ ಅದನ್ನು ಶಾಲೆಗಳಲ್ಲಿ ಜಾರಿಗೊಳಿಸುವವರು ಅವರೇ ತಾನೇ. ಅವರಿಗೆ ನೀಡುವ ತರಬೇತಿ ಶಿಬಿರದಲ್ಲಿ ಸಿಸಿಇ ಬಗ್ಗೆ ಅವರಲ್ಲಿ ಸರಿಯಾದ ದೃಷ್ಟಿಕೋನ ಬೆಳಸುವುದರ ಜೊತೆಗೆ
ಎ) ಚಟುವಟಿಕೆಗಳನ್ನು ಹೇಗೆ ಯೋಜಿಸಿ ಮಗುವಿನ ಕಲಿಕಾನಿರ್ಧರಣೆ ಮಾಡಬೇಕು
ಬಿ)ಸೂಚಕಗಳನ್ನು ರೂಪಿಸುವುದು,ದಸ್ತಾವೇಜುಗಳನ್ನು ರಚಿಸುವುದು,ದಾಖಲೆಗಳನ್ನು ಇರಿಸಿಕೊಂಡು ಬರುವುದು.
ಸಿ) ತಾಳೆ ಪಟ್ಟಿಗಳನ್ನು, ರೂಬರಿಕ್ ಗಳನ್ನು ತಯಾರಿಸಲು, ಗ್ರೇಡ್ ಗಳನ್ನು ಅಂಕಗಳಾಗಿ ಪರಿವರ್ತಿಸಲು,ಶೇಖಡಾವಾರನ್ನು ಲೆಕ್ಕ ಹಾಕಲು ಮುಂತಾದವಕ್ಕೆ ಸೂಕ್ತ ಗಣನಾಂಶಗಳನ್ನು ರೂಪಿಸುವುದು.
ಒಂದೇ ಒಂದು ಕಾರ್ಯಾಗಾರ ಸಾಕಾಗುವುದಿಲ್ಲವಾದ್ದರಿಂದ ಉಪಾಧ್ಯಾಯರು ಮತ್ತು ತರಬೇತಿದಾರರೊಡನೆ ಕಾರ್ಯಾಗಾರಗಳ ಸರಣಿಯನ್ನು ಯೋಜಿಸಬೇಕು ಹಾಗು ತರಬೇತಿನೀಡುವವರು ಚೆನ್ನಾಗಿ ಅರ್ಥಮಾಡಿಕೊಂಡು ಮನದಟ್ಟಾಗಿಸಲು 1ನೇ ದಿನದಿಂದ ಶಿಕ್ಷಕರಿಗೆ CCE ನ ವಿಧಾನಗಳ (ಸಿದ್ದಾಂತಗಳನ್ನಷ್ಟೇ ಅಲ್ಲದೆ)ಪ್ರಾಯೋಗಿಕ ಅಂಶಗಳನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಡಬೇಕು.
ಮೊದಲ ಒಂದು-ಎರಡು ಕಾರ್ಯಾಗಾರಗಳು ಪ್ರಾಯೋಗಿಕ ಅಂಶಗಳ ಬಗ್ಗೆ ಒತ್ತು ನೀಡಬೇಕು.ಅದರ ಜೊತೆಗೆ ದೃಷ್ಟಿಕೋನವನ್ನು ಬೆಳೆಸಲು ಸಿದ್ದಾಂತಗಳನ್ನು ಹೇಳಿಕೊಡಬೇಕು. ಇವುಗಳ ಸಂಧರ್ಭಗಳಲ್ಲಿ ಅಅಇ ಕಾರ್ಯವಿಧಾನ ಅನ್ವಯಿಸುವಾಗ ಬೇಕಾದ ಅನುಭವ ಕಲ್ಪಿಸಿಕೊಡಲು ತರಬೇತಿನೀಡುವವರು ಅವರ ಕೈ ಹಿಡಿದು ನಡೆಸಬೇಕಾಗುತ್ತದೆ.
ಮುಂದಿನ ಕಾರ್ಯಾಗಾರಗಳಲ್ಲಿ ಶಿಕ್ಷಕರಿಗೆ CCE ಕಾರ್ಯವಿಧಾನ ಚೆನ್ನಾಗಿ ಮನವರಿಕೆ ಆದ ಮೇಲೆ ಅವರಿಗೆ ಹೇಳಿಕೊಟ್ಟ ಚಟುವಟಿಕೆಗಳನ್ನು ಮಾಡಿ ಮುಗಿಸಲು ಅವರೆಷ್ಟು ಸಿದ್ದ ಎಂಬುದರ ಕಡೆಗೆ ಗಮನ ಹರಿಸಬೇಕು. ತರಬೇತಿದಾರರು ಸುಗಮಕಾರರು/ಮಾರ್ಗದರ್ಶಿಗಳ ಪಾತ್ರವನ್ನು ವಹಿಸಬೇಕು.
ಇತ್ತೀಚಿನ ದಿನಗಳಲ್ಲಿ ತಮ್ಮ ತಮ್ಮ ಶಾಲೆಗಳಲ್ಲಿ CCE ನಿಬಂಧನೆಗಳನ್ನು ಅವರು ಜಾರಿಗೆ ತರಬೇಕಾದ ಕಾರಣ ಉಪಾಧ್ಯಾಯರ ಮೇಲಿನ ಒತ್ತಡವು ಹೆಚ್ಚಾಗುತ್ತಿದೆ. ಹೀಗಾಗಿ ಉಪಾಧ್ಯಾಯರು ತರಬೇತಿಗೆ ಬರುವಾಗ ತಮ್ಮ ದೈನಂದಿನ ಕೆಲಸಕಾರ್ಯಗಳಲ್ಲಿ ಸುಲಭವಾಗಿ ಬಳಸಬಹುದಾದ ಸಂಬಂಧಪಟ್ಟ ತಂತ್ರಗಳನ್ನು ಉದಾಹರಣೆಗಳ ಜೊತೆಗೆ ನೀಡಬೇಕೆಂದು ಬಯಸುತ್ತಾರೆ ಎಂಬುದನ್ನು ಅರಿತುಕೊಳ್ಳಬೇಕು.

No comments:
Post a Comment