ಟೇಕಾಫ್ ಮಾಡಿದ ಮೊದಲ ಸೌರಶಕ್ತಿ ವಿಮಾನ

(9 Mar) * ಸೌರಶಕ್ತಿ ಚಾಲಿತ ವಿಮಾನ ಯಶಸ್ವಿಯಾಗಿ ಗಗನಕ್ಕೆ ಚಿಮ್ಮುವ ಮೂಲಕ ವಿಶ್ವ ಪರ್ಯಟನೆಗೆ ಚಾಲನೆ ಪಡೆದುಕೊಂಡಿದೆ.
* ಸ್ವಿಜರ್ಲೆಂಡ್ನ ಪೈಲಟ್ ಇದಕ್ಕೆ ಸಾಕ್ಷಿಯಾಗಿದ್ದಾರೆ... ಅಬುಧಾಬಿ: ವಿಮಾನ ಹಾರಾಟ ಮತ್ತಷ್ಟು ಸುಲಭಗೊಳ್ಳಲಿದೆ.
* ಕಾರಣ ಸೌರಶಕ್ತಿ ಚಾಲಿತ ವಿಮಾನ ಯಶಸ್ವಿಯಾಗಿ ಗಗನಕ್ಕೆ ಚಿಮ್ಮುವ ಮೂಲಕ ವಿಶ್ವ ಪರ್ಯಟನೆಗೆ ಚಾಲನೆ ಪಡೆದುಕೊಂಡಿದೆ! ಹೌದು, ಸೋಮವಾರ ಬೆಳಗ್ಗೆ ಅಬುಧಾಬಿಯಲ್ಲಿ ನಡೆಸಲಾದ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
* ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿರುವುದು ಸಹಜವಾಗಿಯೇ ಎಲ್ಲರಲ್ಲೂ ಕುತೂಹಲ ಕೆರಳಿಸಿದೆ. ಬೇರಾವುದೇ ಇಂಧನದ ಸಹಾಯವಿಲ್ಲದೇ ಕೇವಲ ಸೌರಶಕ್ತಿಯಿಂದ ಹಾರಾಟ ನಡೆಸುತ್ತದೆನ್ನುವುದೇ ಇದರ ವಿಶೇಷ.
* ಸೌರಶಕ್ತಿಯನ್ನು ವಿಮಾನ ಹಾರಾಟಕ್ಕೂ ಬಳಸಿಕೊಳ್ಳಲು ಸಾಧ್ಯ ಎನ್ನುವುದು ಈ ಮೂಲಕ ಇನ್ನೊಮ್ಮೆ ಸಾಬೀತು ಪಡಿಸಲಾಗಿದೆ.
* 'ದ ಸೋಲಾರ್ ಇಂಪಲ್ಸ್ 2' ವಿಮಾನವನ್ನು ಸ್ವಿಜರ್ಲೆಂಡ್ನ ಆಂಡ್ರೆ ಬಾರ್ಶ್ಚ್ಬರ್ಗ್ ಗಗನದೆತ್ತರಕ್ಕೆ ಕೊಂಡೊಯ್ದು ಹಾರಾಟ ನಡೆಸುವಲ್ಲಿ ಯಶಸ್ವಿಯಾದರು. ಸೋಮವಾರ ಬೆಳಗ್ಗೆ 7.12ರ ಸಮಯದಲ್ಲಿ ಅಲ್-ಬಾಟೀನ್ ವಿಮಾನ ನಿಲ್ದಾಣದಿಂದ ಓಮನ್ನ ಮಸ್ಕಟ್ಗೆ ಪ್ರಯಾಣ ಬೆಳೆಸುವ ಮೂಲಕ ಮೊದಲ ಬಾರಿಗೆ ವಿಶ್ವ ಪರ್ಯಟನೆಗೆ ಟೇಕಾಫ್ ಮಾಡಿದೆ. ಸೋಮವಾರ ಮಧ್ಯಾಹ್ನದ ನಂತರ ಲ್ಯಾಂಡ್ ಆಗಲಿದೆ ಎಂದು ಹೇಳಲಾಗಿದೆ.(ಚಿತ್ರ ಕೃಪೆ: ಎ ಎಫ್ ಪಿ
ಭೂಸ್ವಾಧೀನ ಮಸೂದೆಗೆ ಲೋಕಸಭೆ ಅಂಗೀಕಾರ

(10 Mar) ನವದೆಹಲಿ: ಭಾರೀ ವಿವಾದವನ್ನು ಹುಟ್ಟು ಹಾಕಿದ್ದ ಭೂಸ್ವಾಧೀನ ಮಸೂದೆಗೆ ಲೋಕಸಭೆಯು ಇಂದು ಅಂಗೀಕಾರ ನೀಡಿದ್ದು, ಮಸೂದೆಯನ್ನು ರಾಜ್ಯಸಭೆಗೆ ಕಳುಹಿಸಲಾಗಿದೆ.
* ಇಂದು ಲೋಕಸಭೆಯಲ್ಲಿ ಭೂಸ್ವಾಧೀನ ಮಸೂದೆಯ ಕುರಿತು ನಡೆದ ಚರ್ಚೆಯನ್ನು ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ಆರ್ಜೆಡಿ ಮತ್ತು ಬಿಜೆಡಿ ಪಕ್ಷಗಳು ವಿರೋಧಿ ಸಭಾತ್ಯಾಗ ಮಾಡಿದವು.
* ಸರ್ಕಾರವು ಭೂಸ್ವಾಧೀನ ಮಸೂದೆಯಲ್ಲಿ 9 ತಿದ್ದುಪಡಿಗಳನ್ನು ಮಾಡುವ ಮೂಲಕ ಎನ್ಡಿಎ ಮಿತ್ರ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಸೂದೆಯನ್ನು ಅಂಗೀಕರಿಸಿತು.
* ಭೂಸ್ವಾಧೀನ, ಪುನರ್ವಸತಿ ಮತ್ತು ರಿಸೆಟಲ್ವೆುಂಟ್ನಲ್ಲಿ ಸೂಕ್ತ ಪರಿಹಾರ ಮತ್ತು ಪಾರದರ್ಶಕತೆ (ತಿದ್ದುಪಡಿ) ಕಾಯ್ದೆ 2015 ನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.
* ಮಸೂದೆಯಲ್ಲಿ 9 ಅಧಿಕೃತ ತಿದ್ದುಪಡಿಗಳನ್ನು ತರಲಾಗಿದ್ದು, 2 ವಿಧಿಗಳನ್ನು ಸೇರಿಸಲಾಗಿದೆ. ಮಸೂದೆಯು ರಾಜ್ಯಸಭೆಯಲ್ಲಿ ಚರ್ಚೆಗೆ ಬರಲಿದ್ದು, ಎನ್ಡಿಎ ಸರ್ಕಾರಕ್ಕೆ ರಾಜ್ಯಸಭೆಯಲ್ಲಿ ಬಹುಮತದ ಕೊರತೆ ಇರುವುದರಿಂದ ಸರ್ಕಾರವು ಅಗ್ನಿ ಪರೀಕ್ಷೆಯನ್ನು ಎದುರಿಸಲಿದೆ
ಮತ್ತೆ ಚಲಾವಣೆಗೆ ಬಂದಿದೆ 1 ರೂ. ನೋಟು!

(9 Mar) ನವದೆಹಲಿ: ಸುಮಾರು 20 ವರ್ಷಗಳ ನಂತರ 1 ರೂಪಾಯಿ ನೋಟನ್ನು ಸರ್ಕಾರವು ಮತ್ತೆ ಚಲಾವಣೆಗೆ ತಂದಿದೆ. ಮಾರ್ಚ್ 6ರಂದು ಈ ನೋಟು ಬಿಡುಗಡೆಯಾಗಿದ್ದು, ನೋಟಿನ ಮೇಲೆ ಹಣಕಾಸು ಕಾರ್ಯದರ್ಶಿ ರಾಜೀವ್ ಮೆಹರ್ಷಿ ಅವರ ಸಹಿ ಇರಲಿದೆ. ಉಳಿದ ನೋಟುಗಳ ಮೇಲೆ ಆರ್ಬಿಐ ಗವರ್ನರ್ ಅವರ ಸಹಿ ಇರುತ್ತದೆ. ಕಳೆದ ವಾರ ಆರ್ಬಿಐ ಮತ್ತೆ 1 ರೂ. ನೋಟನ್ನು ಚಲಾವಣೆಗೆ ತರುವುದಾಗಿ ತಿಳಿಸಿತ್ತು. 1994ರ ನವೆಂಬರ್ನಲ್ಲಿ ಒಂದು ರೂ. ನೋಟಿನ ಮುದ್ರಣವನ್ನು ನಿಲ್ಲಿಸಲಾಗಿತ್ತು. 1 ರೂ. ನೋಟಿನ ಮುದ್ರಣಕ್ಕೆ ಹೆಚ್ಚು ಖರ್ಚಾಗುತ್ತಿದ್ದ ಕಾರಣ ಮುದ್ರಣ ನಿಂತಿತ್ತು. ಅದೇ ರೀತಿ 2 ರೂ. ಮತ್ತು 5 ರೂ. ನೋಟಿನ ಮುದ್ರಣವನ್ನೂ ಸಹ 1995ರಲ್ಲಿ ನಿಲ್ಲಿಸಲಾಗಿತ್ತು. ಅಂದಿನಿಂದ 1, 2 ಮತ್ತು 5 ರೂ.ನ ನಾಣ್ಯಗಳ ಚಲಾವಣೆ ಚಾಲ್ತಿಯಲ್ಲಿದೆ
ಕರುಣ್ ತ್ರಿಶತಕ; ಕರ್ನಾಟಕಕ್ಕೆ ಭಾರೀ ಮುನ್ನಡೆ

(10 Mar) ಮುಂಬೈ: ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಫೈನಲ್ ಪಂದ್ಯದಲ್ಲಿ ಕೆ.ಎಲ್.ರಾಹುಲ್ ಮತ್ತು ಕರುಣ್ ನಾಯರ್ ಅವರ ಅಮೋಘ ಬ್ಯಾಟಿಂಗ್ ಬಲದಿಂದ ಕರ್ನಾಟಕ ತಂಡವು ತಮಿಳುನಾಡು ವಿರುದ್ಧ 484 ರನ್ ಮುನ್ನಡೆ ಸಾಧಿಸಿದೆ. ಅಮೋಘ ತ್ರಿಶತಕ ಸಿಡಿಸಿದ ಕರುಣ್ ನಾಯರ್ (310* ರನ್, 45 ಬೌಂಡರಿ, 1 ಸಿಕ್ಸ್) ಮತ್ತು ಸ್ವಲ್ಪದರಲ್ಲೇ ದ್ವಿಶತಕ ವಂಚಿತರಾದ ಕೆ.ಎಲ್.ರಾಹುಲ್ (188 ರನ್, 17 ಬೌಂಡರಿ, 3 ಸಿಕ್ಸ್) 6 ನೇ ವಿಕೆಟ್ಗೆ ದಾಖಲೆಯ 386 ರನ್ ಜತೆಯಾಟವಾಡಿದರು. ನಾಯಕ ವಿನಯ್ ಕುಮಾರ್ ತಾಳ್ಮೆಯ ಆಟವಾಡಿ (41* ರನ್, 4 ಬೌಂಡರಿ, 1 ಸಿಕ್ಸ್) ಕರುಣ್ ನಾಯರ್ಗೆ ಉತ್ತಮ ಸಾಥ್ ನೀಡಿದರು. ಎರಡನೇ ದಿನದಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 323 ರನ್ ಗಳಿಸಿದ್ದ ಕರ್ನಾಟಕ ಮೂರನೇ ದಿನವೂ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಕರ್ನಾಟಕವು ಮೂರನೇ ದಿನದಂತ್ಯಕ್ಕೆ 189 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 618 ರನ್ ಗಳಿಸಿದ್ದು, ಮೊದಲ ಇನ್ನಿಂಗ್ಸ್ನಲ್ಲಿ 484 ರನ್ ಮುನ್ನಡೆ ಪಡೆದಿದೆ. ಸಂಕ್ಷಿಪ್ತ ಸ್ಕೋರ್: ತಮಿಳುನಾಡು ಮೊದಲ ಇನ್ನಿಂಗ್ಸ್ 62.4 ಓವರ್ 134 ಆಲ್ಔಟ್ (ಅಭಿನವ್ ಮುಕುಂದ್ 35, ಬಾಬಾ ಇಂದ್ರಜಿತ್ 27, ಎ.ಅಶ್ವಿನ್ 21, ವಿನಯ್ ಕುಮಾರ್ 34 ಕ್ಕೆ 5, ಅಭಿಮನ್ಯು ಮಿಥುನ್ 54 ಕ್ಕೆ 3, ಎಚ್.ಎಸ್.ಶರತ್ 17 ಕ್ಕೆ 1) ಕರ್ನಾಟಕ ಮೊದಲ ಇನ್ನಿಂಗ್ಸ್ 189 ಓವರ್ 7 ವಿಕೆಟ್ ನಷ್ಟಕ್ಕೆ 618 (ಕರುಣ್ ನಾಯರ್ 310 *, ಕೆ.ಎಲ್.ರಾಹುಲ್
ದಾಖಲೆ ಸೃಷ್ಟಿಸಿದ ಟೀಂ ಇಂಡಿಯಾ

(10 Mar) ಹ್ಯಾಮಿಲ್ಟನ್: ಆರಂಭಿಕ ಶಿಖರ್ ಧವನ್ (100ರನ್,85ಎಸೆತ,11ಬೌಂಡರಿ,5ಸಿಕ್ಸರ್) ಶತಕ ಮತ್ತು ರೋಹಿತ್ ಶರ್ಮ (64ರನ್,66ಎಸೆತ,3ಬೌಂಡರಿ,3ಸಿಕ್ಸರ್) ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ ಐರ್ಲೆಂಡ್ ವಿರುದ್ಧದ ವಿಶ್ವಕಪ್ ಟೂರ್ನಿ ಪಂದ್ಯದಲ್ಲಿ ಇನ್ನೂ 79 ಎಸೆತ ಬಾಕಿ ಇರುವಾಗಲೇ 8 ವಿಕೆಟ್ ಜಯ ದಾಖಲಿಸಿದೆ. ಈಗಾಗಲೇ ಕ್ವಾರ್ಟರ್ ಫೈನಲ್ ಪ್ರವೇಶವನ್ನು ಖಚಿತ ಪಡಿಸಿಕೊಂಡಿದ್ದ ಮಹೇಂದ್ರ ಸಿಂಗ್ ಧೋನಿ ಪಡೆ ಈ ಗೆಲುವಿನ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಸತತವಾಗಿ 9ನೇ ಜಯ ದಾಖಲಿಸಿ ಹೊಸದೊಂದು ಇತಿಹಾಸ ನಿರ್ವಿುಸುವಲ್ಲಿ ಯಶಸ್ವಿಯಾಗಿದೆ. ಎದುರಾಳಿ ಐರ್ಲೆಂಡ್ ನೀಡಿದ 260ರನ್ ಸಾವಾಲಿಗೆ ಪ್ರತಿಯಾಗಿ ಭಾರತ ತಂಡ 36.5 ಓವರ್ನಲ್ಲಿ 2 ವಿಕೆಟ್ಗೆ 260 ರನ್ ಗಳಿಸಿ ಗೆಲುವಿನ ಕೇಕೆ ಹಾಕಿತು. ಭಾರತಕ್ಕೆ ಆರಂಭಿಕರಾದ ರೋಹಿತ್ ಶರ್ಮ ಮತ್ತು ಧವನ್ ಉತ್ತಮ ಅಡಿಪಾಯ ಹಾಕಿಕೊಟ್ಟು ಔಟಾದ ಬಳಿಕ ಜೊತೆಯಾದ ವಿರಾಟ್ ಕೊಹ್ಲಿ (44*) ಮತ್ತು ಅಜಿಂಕ್ಯಾ ರಹಾನೆ (33) ಜೋಡಿ ಗೆಲುವಿನ ದಡ ಸೇರಿಸಿ ಅಜೇಯರಾಗಿ ಉಳಿದರು. ಐರ್ಲೆಂಡ್ ಪರ ಸ್ಟುವರ್ಟ್ ಥಾಂಪ್ಸನ್ (45ಕ್ಕೆ2) ಉತ್ತಮ ಬೌಲಿಂಗ್ ಪ್ರದರ್ಶಿಸಿದರು. ಶತಕ ಗಳಿಸಿದ ಧವನ್ ಪಂದ್ಯಶ್ರೇಷ್ಠರೆನಿಸಿಕೊಂಡರು. ಫೀಲ್ಡ್, ನೀಲ್ ಶೈನ್: ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ಭಾರತೀಯ ಬೌಲರ್ಗಳ ಉತ್ತಮ ಪ್ರದರ್ಶನದ ನಡುವೆಯೂ ನಾಯಕ ವಿಲಿಯಮ್ಪೋರ್ಟರ್ಫೀಲ್ಡ್ (67), ನೀಲ್ ಓಬ್ರಿಯೆನ್ (75
ಇಂದು ಅಹಮದಾಬಾದ್'ಗೆ ಬರಲಿದೆ ವಿಶ್ವದ ಮೊಟ್ಟಮೊದಲ ಸೌರಶಕ್ತಿ ಚಾಲಿತ ವಿಮಾನ

10 Mar ಅಹಮದಾಬಾದ್ (ಮಾರ್ಚ್ 10) : ಪ್ರಪಂಚ ಪರ್ಯಟನೆಯಲ್ಲಿರುವ ವಿಶ್ವದ ಮೊದಲ ಸೌರಶಕ್ತಿ ಚಾಲಿತ ವಿಮಾನ ಮಂಗಳವಾರ ಅಹಮದಾಬಾದ್'ಗೆ ಬರಲಿದೆ. ''ಅಬುಧಾಬಿಯಿಂದ ಟೇಕಾಫ್ ಆಗಲಿರುವ ವಿಮಾನ ಮಸ್ಕತ್'ನ ಒಮಾನ್'ನಲ್ಲೊಮ್ಮೆ ಇಳಿದು ನಂತರ ಅಹಮದಾಬಾದ್ ತಲುಪಲಿದೆ,'' ಎಂದು ವಿಮಾನ ಯೋಜನೆಯ ಪ್ರಚಾರ ಸಂಸ್ಥೆ ಪ್ರಕಟಣೆ ತಿಳಿಸಿದೆ. ಯೋಜನೆಯಂತೆ ವಿಮಾನ ಮಾರ್ಚ್ 9ರಂದೇ ಅಹಮದಾಬಾದ್ ತಲುಪಬೇಕಿತ್ತು. ಆದರೆ, ಪ್ರತಿಕೂಲ ಹವಾಮಾನದ ಕಾರಣ ಸ್ವಿಸ್'ನ ಸೌರಶಕ್ತಿ ಚಾಲಿತ ವಿಮಾನ ಯುಎಇಯಿಂದ ಒಂದು ದಿನ ತಡವಾಗಿ ಅಹಮದಾಬಾದ್ ತಲುಪಲಿದೆ. ವಿಮಾನದ ಸ್ಥಾಪಕ ಬರ್ಟ್ರೆಂಡ್ ಪಿಕಾರ್ಡ್ ಹಾಗೂ ಪೈಲಟ್ ಆಂಡ್ರೂ ಬೋರ್ಶ್'ಬರ್ಗ್ ನಗರದಲ್ಲಿ ಎರಡು ದಿನ ತಂಗಲಿದ್ದು, ನಂತರ ಉತ್ತರ ಪ್ರದೇಶದ ವಾರಾಣಸಿಗೆ ಪ್ರಯಾಣ ಮುಂದುವರಿಸಲಿದ್ದಾರೆ. ಎರಡು ದಿನಗಳ ವಾಸ್ತವ್ಯದ ವೇಳೆ ಸರಕಾರಿ ಕಚೇರಿ, ಎನ್'ಜಿಓ, ವಿಶ್ವವಿದ್ಯಾಲಯಗಳು ಹಾಗೂ ಶಾಲೆಗಳಿಗೆ ಭೇಟಿ ನೀಡಲಿರುವ ಪಿಕಾರ್ಡ್, ಬೋರ್ಶ್'ಬರ್ಗ್ ಶುದ್ಧ ತಂತ್ರಜ್ಞಾನದ ಸಂದೇಶ ತಲುಪಿಸಲಿದ್ದಾರೆ. ವಾರಾಣಸಿಯಲ್ಲಿ ಗಂಗಾ ನದಿ ಮೇಲೆ ವಿಮಾನ ಹಾರಾಟ ನಡೆಸಲಿದ್ದು, ಈ ಭೇಟಿ ವೇಳೆ ಸ್ವಚ್ಛತೆ ಹಾಗೂ ಶುದ್ಧ ಇಂಧನ ಬಳಕೆಯ ಸಂದೇಶ ನೀಡಲಿದ್ದಾರೆ. ಸೌರಶಕ್ತಿ ವಿಮಾನ ಹಾರಾಟ ಹೇಗೆ ? ಒಂದು ಹನಿ ಪೆಟ್ರೋಲನ್ನೂ ಬಳಸದ ವಿಮಾನ, ಸೌರಶಕ್ತಿಯಿಂದಲೇ ಹಗಲಿರುಳು ಹಾರಾಟ ನಡೆಸುವುದು. 2013ರಲ್ಲೇ ಅಮೆರಿಕದಲ್ಲಿ ವಿಮಾನದ
ಮಂಗಳ ಗ್ರಹದಲ್ಲಿ ವಿದ್ಯುತ್ ಉತ್ಪಾದನೆ ಹೇಗೆ ಸಾಧ್ಯ..? ವಿಜ್ಞಾನಿಗಳಿಗೆ ಸಿಕ್ಕಿದೆ ಹೊಸ ಐಡಿಯಾ

09 Mar ಲಂಡನ್(ಮಾರ್ಚ್ 09): ಕಾರ್ಬನ್ ಡೈಆಕ್ಸೈಡ್'ನಿಂದ ವಿದ್ಯುತ್ ಉತ್ಪಾದನೆ ಮಾಡುವ ಹೊಸ ಎಂಜಿನ್ ಅನ್ನು ವಿಜ್ಞಾನಿಗಳು ಸಂಶೋಧಿಸಿದ್ದಾರೆ. ದ್ರವ ಪದಾರ್ಥ ತನ್ನ ಕುದಿಯುವ ಬಿಂದುವಿಗಿಂತ ಹೆಚ್ಚು ಬಿಸಿಯಾಗಿರುವ ಮೇಲ್ಮೈ ಜೊತೆ ಸಂಪರ್ಕಕ್ಕೆ ಬಂದರೆ ಉಂಟಾಗುವ ಲೇಡೆನ್'ಫ್ರಾಸ್ಟ್ ಪರಿಣಾಮದ (Leidenfrost Effect) ಆಧಾರದ ಮೇಲೆ ಹೊಸ ವಿದ್ಯುತ್ ಉತ್ಪಾದನಾ ಸಾಧನವನ್ನ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಉದಾಹರಣೆಗೆ, ಬಿಸಿ ತವೆಯ ಮೇಲೆ ನೀರಿ ಚಿಮುಕಿಸಿದಾಗ ಸಿಡಿಯುತ್ತಲ್ಲ, ಇದನ್ನೇ ಲೇಡೆನ್'ಫ್ರಾಸ್ಟ್ ಎಫೆಕ್ಟ್ ಎಂದು ಕರೆಯುತ್ತಾರೆ. ಒಣ ನೀರಿನಗೆಡ್ಡೆ ಎಂದೇ ಕರೆಯಲ್ಪಡುವ ಕಾರ್ಬನ್ ಡೈ ಆಕ್ಸೈಡ್'ಗೂ ಕೂಡ ಇದನ್ನ ಅನ್ವಯಿಸಬಹುದು. ವಿಜ್ಞಾನಿಗಳು ಮಾಡಿರುವ ಈ ಹೊಸ ಆವಿಷ್ಕಾರ ಮಂಗಳ ಗ್ರಹದಲ್ಲಿ ಸಹಾಯಕ್ಕೆ ಬರಲಿದೆ. ಅಲ್ಲಿ ಕಾರ್ಬನ್ ಡೈ ಆಕ್ಸೈಡ್ ತೀರಾ ಸಾಮಾನ್ಯವಾಗಿ ಲಭ್ಯವಿರುವುದರಿಂದ ಇಂಥ ಸಾಧನಗಳ ಮೂಲಕ ವಿದ್ಯುತ್ ಉತ್ಪಾದನೆ ಮಾಡಬಹುದು ಎಂಬುದು ವಿಜ್ಞಾನಿಗಳ ಲೆಕ್ಕಾಚಾರ. ಮಂಗಳಗ್ರಹದಲ್ಲಿ ವಸಾಹತು ನಿರ್ಮಿಸಲು ಯತ್ನಿಸುತ್ತಿರುವ ಮನುಷ್ಯನಿಗೆ ಈ ಹೊಸ ವಿದ್ಯುತ್ ಉತ್ಪಾದನಾ ಸಾಧನ ಸಹಾಯಕ್ಕೆ ಬರಬಹುದು. (ಮಾಹಿತಿ: ಪಿಟಿಐ)
ಬಲೂನ್ ಮೂಲಕ ಇಂಟರ್ನೆಟ್; ಗಾಳಿಪಟದಿಂದ ವಿದ್ಯುತ್ - ಕೇಂದ್ರ ಸರ್ಕಾರಕ್ಕೆ ಗೂಗಲ್ ಪ್ರಸ್ತಾವ

14 Feb ನವದೆಹಲಿ(ಫೆ.14): ಸೃಜನಶೀಲತೆಗೆ ಆದ್ಯತೆ ಕೊಡುವ ಗೂಗಲ್ ಸಂಸ್ಥೆ ಸದಾ ಏನಾದರೂ ಅನ್ವೇಷಣೆ ಮಾಡುತ್ತಲೇ ಇರುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಗೂಗಲ್ ವಿಶೇಷ ಸಂಶೋಧನೆಗಳನ್ನ ಮಾಡಿ ವಿನೂತನ ತಂತ್ರಜ್ಞಾನಗಳನ್ನ ಪರಿಚಯಿಸಿದೆ. ಬಲೂನ್ ಮೂಲಕ ಇಂಟರ್ನೆಟ್ ಸಂಪರ್ಕ; ಗಾಳಿಪಟಗಳ ಮೂಲಕ ವಿದ್ಯುತ್ ಉತ್ಪಾದನೆ ಇತ್ಯಾದಿಗಳೂ ಗೂಗಲ್ ಸೃಜನಶೀಲತೆಯ ಫಲಶೃತಿಗಳೇ. ಗೂಗಲ್ ಈ ಎರಡು ಯೋಜನೆಗಳನ್ನ ಕಾರ್ಯಗತಗೊಳಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಏನಿದು ಬಲೂನ್ ಯೋಜನೆ..? ಎರಡು ವರ್ಷಗಳ ಹಿಂದೆ ಗೂಗಲ್ ಸಾಧಿಸಿದ ಲೂನ್ ಯೋಜನೆಯಂತೆ ಆಗಸದ ಎತ್ತರದಲ್ಲಿ ಬಲೂನುಗಳನ್ನ ಹಾರಿಬಿಟ್ಟು ಅದರಿಂದ ಇಂಟರ್ನೆಟ್ ಸಂಪರ್ಕ ಸಾಧಿಸಲಾಗುತ್ತದೆ. ಇದರ ಮೂಲಕ ತೀರಾ ಕಡಿಮೆ ವೆಚ್ಚದಲ್ಲಿ ಇಂಟರ್ನೆಟ್ ಲಭ್ಯವಾಗುತ್ತದೆ. ಇಂಟರ್ನೆಟ್ ಸಂಪರ್ಕ ಕಷ್ಟವಾದ ದೂರದ ಪ್ರದೇಶಗಳಲ್ಲಿ ಇದು ಚಮತ್ಕಾರ ಮಾಡಬಲ್ಲುದು. ಗಾಳಿಪಟ ಯೋಜನೆ: ವಿಮಾನದ ಮಾದರಿಯಲ್ಲಿ ಗಾಳಿಪಟಗಳನ್ನ ತಯಾರಿಸಿ ಸುಮಾರು 300 ಮೀಟರ್ ಎತ್ತರಕ್ಕೆ ಹಾರಿಬಿಡಲಾಗುತ್ತದೆ. ಗಾಳಿಯ ದಿಕ್ಕಿಗೆ ಈ ಗಾಳಿಪಟಗಳು ತನ್ನಂತಾನೆ ಹಾರಲಾರಂಭಿಸುತ್ತವೆ. ಈ ಗಾಳಿಪಟಗಳ ಚಲನೆಯಿಂದ ಸಿಗುವ ವಾಯುಶಕ್ತಿ ಮೂಲಕ ವಿದ್ಯುತ್ ಉತ್ಪಾದನೆ ಮಾಡುವ ತಂತ್ರಜ್ಞಾನವನ್ನ ಗೂಗಲ್ ಅನ್ವೇಷಿಸಿದೆ. ಒಂದು ವೇಳೆ, ಮೋದಿ ಸರ್ಕಾರ ಗೂಗಲ್'ನ ಈ ಪ್ರಸ್ತಾವಗಳಿಗೆ ಓಕೆ ಎಂದರೆ ಮುಂದಿನ ವರ್ಷವೇ ಯೋಜನೆಗಳು ಕಾರ್ಯಗತವಾಗಲು
Thanks for reading
Popular Posts
-
Title : Spardha Atlas File Type : See Link File Language : Kannada/English State : Karnataka Publish Date :...
-
Title : Spardha itihasa | ಸ್ಪರ್ಧಾ ಇತಿಹಾಸ File Type : See Link File Language : Kannada/English State : Karnataka...
-
Title : Summary of Poems 10th | ಪದ್ಯಗಳ ಸಾರಾಂಶ 10th File Type : See Link File Language : Kannada/English State : ...
-
Best Government Exam Prepartion group on Whats-app Add our number ‘ 8618351162 ‘ and name it ‘Spardha vin ‘ in your phone list. Se...
-
Title : PUC Kannada grammar File Type : See Link File Language : Kannada/English State : Karnataka Publish Da...
-
Title : PSI General Knowledge File Type : See Link File Language : Kannada/English State : Karnataka Publish ...
-
Title : Good news for aspiring teachers | ಶಿಕ್ಷಕ ಹುದ್ದೆಯ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ File Type : See Link File Lang...
-
Title : Important Geogrophy | ಪ್ರಮುಖ ಭೌಗೋಳಿಕತೆ File Type : See Link File Language : Kannada/English State : Karn...
-
Title :FDA General Kannada Question Paper 28-02-21 File Type : See Link File Language : Kannada/English State : ...
-
Title : 📖 ಸ್ಟ್ಯಾಟಿಕ್ Gk ನೊಂದಿಗೆ ಪರೀಕ್ಷೆಗೆ ಸಂಬಂಧಿಸಿದ ಪ್ರಸ್ತುತ ವ್ಯವಹಾರಗಳು : ೦೭ ನವೆಂಬರ್ ೨೦೨೧ 1) ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಪ್ರತಿಷ್...
No comments:
Post a Comment