Title : ಈಗ ಆಧಾರ್ ಇ-ಕೆವೈಸಿ ಮೂಲಕ ಆನ್‌ಲೈನ್‌ನಲ್ಲಿ ತೆರೆಯಿರಿ ಅಟಲ್ ಪಿಂಚಣಿ ಯೋಜನೆ ಖಾತೆ
ಅಟಾಲ್ ಪಿಂಚಣಿ ಯೋಜನೆ ಅಡಿಯಲ್ಲಿ ಯೋಜನೆಗೆ ನೆಟ್ ಬ್ಯಾಂಕಿಂಗ್ ಅಥವಾ ಆಯಾ ಎಪಿವೈ ಸೇವಾ ಪೂರೈಕೆದಾರರು ನೀಡಿದ ಇತರ ಡಿಜಿಟಲ್ ವಿಧಾನಗಳ ಮೂಲಕ ಚಂದಾದಾರರನ್ನು ನೋಂದಾಯಿಸಲಾಗಿದೆ. ಆದಾಗ್ಯೂ ಅಕ್ಟೋಬರ್ 27, 2021 ರಂದು, ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ) ಆಧಾರ್ ಇ ಕೆವೈಸಿ ಬಳಸಿಕೊಂಡು ಆನ್‌ಲೈನ್‌ನಲ್ಲಿ ಎಪಿವೈಗೆ ದಾಖಲಾಗುವ ಸೌಲಭ್ಯವನ್ನು ಘೋಷಿಸಿದೆ.
ಸಿಆರ್‌ಎ (ಸೆಂಟ್ರಲ್ ರೆಕಾರ್ಡ್ ಕೀಪಿಂಗ್ ಏಜೆನ್ಸಿ) ಈಗ ಆಧಾರ್ ಇಕೆವೈಸಿ ಆಧಾರಿತ ಆನ್‌ಲೈನ್ ನೋಂದಣಿ ಪ್ರಕ್ರಿಯೆಯ ಮೂಲಕ ದಾಖಲಾತಿ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತಿದೆ. ಆನ್‌ಲೈನ್ ಮೂಲಕ ಆಧಾರ್ ಎಕ್ಸ್‌ಎಂಎಲ್-ಆಧಾರಿತ ಆನ್‌ಬೋರ್ಡಿಂಗ್‌ಗೆ ಪ್ರವೇಶ ಅವಕಾಶವನ್ನು ಈಗಾಲೇ ಚಂದಾದಾರರಿಗೆ ನೀಡಲಾಗಿದೆ. ಇನ್ನು ಈ ಆನ್‌ಲೈನ್‌ನಲ್ಲಿ ಎಪಿವೈಗೆ ದಾಖಲಾಗಲು ಯಾವುದೇ ದಾಖಲೆಗಳ ಅಗತ್ಯ ಇಲ್ಲ.
"ಇ ಕೆವೈಸಿ ತಂತ್ರಜ್ಞಾನದ ಮೂಲಕ ಚಂದಾದಾರರಿಂದ ಪಡೆದ ಆಧಾರ್ ವಿವರಗಳು, ಜನಸಂಖ್ಯಾ ಮಾಹಿತಿ, ಪಿಂಚಣಿ ಮೊತ್ತ, ಪಾವತಿ ವಿಧಾನ, ಸಂಗಾತಿಯ / ನಾಮಿನಿ ಹೆಸರು ಮತ್ತು ಬ್ಯಾಂಕ್ ಖಾತೆ ಮಾಹಿತಿ ಇತ್ಯಾದಿ ಮಾಹಿತಿಯನ್ನು ಚಂದಾದಾರರ ಈ ಚಂದಾದಾರರ ಉಳಿತಾಯ ಬ್ಯಾಂಕ್ ಖಾತೆಯನ್ನು ನಿರ್ವಹಣೆ ಮಾಡುವ ಬ್ಯಾಂಕುಗಳಿಗೆ ನೀಡಬಹುದು. ಎಪಿವೈ ಖಾತೆಯನ್ನು ತೆರೆದ ನಂತರ ಚಂದಾದಾರರ ನಂತರದ ಸೇವೆಯನ್ನು ಆಯಾ ಎಪಿವೈ-ಎಸ್‌ಪಿ ಮೂಲಕ ನೀಡಲಾಗುವುದು.
ಎಲ್ಲಾ ಎಪಿವೈ ಖಾತೆಗಳನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಿರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಈ ಆನ್‌ಲೈನ್‌ನ ಕಾರ್ಯವಿಧಾನದ ಮೂಲಕ ಅಸ್ತಿತ್ವದಲ್ಲಿರುವ ಎಪಿವೈ ಚಂದಾದಾರರ ಆಧಾರ್ ಲಿಂಕ್ ಕಾರ್ಯವನ್ನು ಸುಲಭಗೊಳಿಸಲಾಗಿದೆ. ಹೆಚ್ಚುವರಿಯಾಗಿ ಎಪಿವೈ-ಎಸ್‌ಪಿಗಳು ತಮ್ಮ ಸಂಬಂಧಿತ ಚಂದಾದಾರರಿಂದ ಆಧಾರ್ ವಿವರಗಳನ್ನು ಒಪ್ಪಿಗೆಯೊಂದಿಗೆ ಸಂಗ್ರಹ ಮಾಡಬಹುದು. ಎಲ್ಲಾ ಎಪಿವೈ-ಎಸ್‌ಪಿಗಳೊಂದಿಗೆ ತೊಡಗಿಸಿಕೊಳ್ಳಲು ಸೆಂಟ್ರಲ್ ರೆಕಾರ್ಡ್ ಕೀಪಿಂಗ್ ಏಜೆನ್ಸಿಗೆ ಸಲಹೆ ನೀಡಲಾಗಿದೆ.
File Type : See Link
ಜೂನ್ 1, 2015 ರಿಂದ ಜಾರಿಗೆ ಬರುವಂತೆ, ಭಾರತ ಸರ್ಕಾರವು ಅಟಲ್ ಪಿಂಚಣಿ ಯೋಜನೆಯನ್ನು ಆರಂಭ ಮಾಡಿದೆ. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ತನ್ನ ರಾಷ್ಟ್ರೀಯ ಪಿಂಚಣಿ ಯೋಜನೆಯ ಆಡಳಿತಾತ್ಮಕ ಮತ್ತು ಸಾಂಸ್ಥಿಕ ರಚನೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ರಾಷ್ಟ್ರೀಯ ಪಿಂಚಣಿ ಯೋಜನೆ ಅಥವಾ ಇಪಿಎಫ್ ಅಥವಾ ಯಾವುದೇ ಇತರ ಪಿಂಚಣಿ/ಸಾಮಾಜಿಕ ಭದ್ರತಾ ಯೋಜನೆಯ ಚಂದಾದಾರರು 18- 40 ವರ್ಷದೊಳಗಿನವರಾಗಿದ್ದರೆ ಅಟಲ್ ಪಿಂಚಣಿ ಯೋಜನೆಗೆ ಚಂದಾದಾರರಾಗಬಹುದು.
ಇನ್ನು ಈ ನಡುವೆ ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ ಚಂದಾದಾರರ ಸಂಖ್ಯೆ 31 ಆಗಸ್ಟ್ 2021 ರ ವೇಳೆಗೆ ಶೇ.33.20 ರಷ್ಟು ಅಂದರೆ 304.51 ಲಕ್ಷಕ್ಕೆ ಏರಿಕೆಯಾಗಿದೆ. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಪಿಎಫ್‌ಆರ್‌ಡಿಎ) ಪ್ರಮುಖ ಪಿಂಚಣಿ ಯೋಜನೆಗಳ ಅಡಿಯಲ್ಲಿ ಚಂದಾದಾರರ ಸಂಖ್ಯೆ ಶೇ.24 ರಷ್ಟು ಅಂದರೆ 4.53 ಕೋಟಿಗೆ ಹೆಚ್ಚಾಗಿದೆ ಎಂದು ವರದಿ ಆಗಿದೆ.
ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ 18 ವರ್ಷದ ವ್ಯಕ್ತಿ ತಿಂಗಳಿಗೆ ಕೇವಲ 42 ರಿಂದ 210 ರೂ.ಗಳನ್ನು ಠೇವಣಿ ಮಾಡಿದರೆ, ತಮ್ಮ 60 ವರ್ಷ ವಯಸ್ಸಿನ ಬಳಿಕ 1 ಸಾವಿರದಿಂದ 5 ಸಾವಿರ ರೂಪಾಯಿಗಳವರಗೆ ಪಿಂಚಣಿ ಪಡೆಯಲು ಸಾಧ್ಯವಾಗುತ್ತದೆ. ಪ್ರೀಮಿಯಂ ಮೊತ್ತವು ವಯಸ್ಸು ಹೆಚ್ಚಾದಂತೆ ಹೆಚ್ಚಳವಾಗುತ್ತದೆ. ಉದಾಹರಣೆಗೆ ನೀವು 40 ವರ್ಷ ವಯಸ್ಸಿನವರಾಗಿದ್ದರೆ, 1 ರಿಂದ 5 ಸಾವಿರ ಪಿಂಚಣಿಗಾಗಿ ನೀವು ತಿಂಗಳಿಗೆ 291 ರಿಂದ 1454 ರೂ.ಗಳನ್ನು ಜಮಾ ಮಾಡಬೇಕಾಗುತ್ತದೆ.
State : Karnataka
Publish Date : 2021
File Format : PDF
File Size : link
Number of Pages : link
Scanned Copy : Yes
Editable Text : No
Password Protected : No
Image Available : Yes
Download Link Available : Yes
File size Reduced : No
Password : No
Cost : Free of cost
For Personal Use Only
👇👇👇👇👇👇👇👇
CLICK HERE TO DOWNLOAD
No comments:
Post a Comment