ನವದೆಹಲಿ (ಪಿಟಿಐ): ಮ್ಯೂಚುವಲ್ ಫಂಡ್‌ಗಳು ನಿರ್ವಹಿಸುವ ಸಂಪತ್ತಿನ (ಎಯುಎಂ) ಮೊತ್ತವು ಸೆಪ್ಟೆಂಬರ್ ತಿಂಗಳಾಂತ್ಯಕ್ಕೆ ₹ 22 ಲಕ್ಷ ಕೋಟಿಗೆ ಇಳಿದಿದೆ.
ಆಗಸ್ಟ್ ತಿಂಗಳ ‘ಎಯುಎಂ’ಗೆ ಹೋಲಿಸಿದರೆ, ಶೇ 12.5ರಷ್ಟು ಕಡಿಮೆಯಾಗಿದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ.
ವಹಿವಾಟಿನಲ್ಲಿ ತೊಡಗಿರುವ 41 ಸಂಸ್ಥೆಗಳ ಒಟ್ಟಾರೆ ‘ಎಯುಎಂ’ ಆಗಸ್ಟ್‌ನಲ್ಲಿ ₹ 25.20 ಲಕ್ಷ ಕೋಟಿಗಳಷ್ಟಿತ್ತು ಎಂದು ಭಾರತದ ಮ್ಯೂಚುವಲ್ ಫಂಡ್‌ಗಳ ಸಂಘ (ಎಎಂಎಫ್‌ಐ) ತಿಳಿಸಿದೆ.
ಮ್ಯೂಚುವಲ್ ಫಂಡ್ ಯೋಜನೆಗಳಿಂದ ₹ 2.3 ಲಕ್ಷ ಕೋಟಿ ವಾಪಸ್ ಪಡೆದಿರುವುದರಿಂದ ‘ಎಯುಎಂ’ ಕಡಿಮೆಯಾಗಿದೆ. ಟ್ರೆಷರಿ ಬಿಲ್, ಠೇವಣಿ ಪ್ರಮಾಣಪತ್ರ ಮತ್ತು ಸಾಲಪತ್ರಗಳಂತಹ ನಗದು ಸಂಪತ್ತಿನಲ್ಲಿ (ಲಿಕ್ವಿಡ್ ಫಂಡ್ಸ್) ತೊಡಗಿಸಿದ್ದ ₹ 2.11 ಲಕ್ಷ ಕೋಟಿ ವಾಪಸ್ ಪಡೆಯಲಾಗಿದೆ. ಸ್ಥಿರ ಆದಾಯ ನೀಡುವ ಆದಾಯ ಯೋಜನೆಗಳಿಂದ ₹ 32,504 ಕೋಟಿ ಹಿಂದೆ ಪಡೆಯಲಾಗಿದೆ. ಚಿನ್ನದ
ಇಟಿಎಫ್‌ಗಳಲ್ಲಿನ ಹೊರ ಹರಿವು ₹ 33 ಕೋಟಿಗಳಷ್ಟಾಗಿದೆ.
ಇಟಿಎಫ್‌ಗಳಲ್ಲಿನ ಹೊರ ಹರಿವು ₹ 33 ಕೋಟಿಗಳಷ್ಟಾಗಿದೆ.
‘ಇನ್‌ಫ್ರಾಸ್ಟ್ರಕ್ಚರ್ ಲೀಸಿಂಗ್ ಆ್ಯಂಡ್ ಫೈನಾನ್ಸ್ ಸರ್ವಿಸಸ್’ ಸಾಲ ಮರುಪಾವತಿಸದ ಬಿಕ್ಕಟ್ಟಿಗೆ ಒಳಗಾಗಿರುವುದು ಮಾರುಕಟ್ಟೆಯಲ್ಲಿ ನಕಾರಾತ್ಮಕ ಭಾವನೆ ಮೂಡಿಸಿರುವುದರಿಂದ ಹೊರ ಹರಿವು ನಡೆದಿದೆ’ ಎಂದು ಮಾರ್ನಿಂಗ್‌ಸ್ಟಾರ್‌ನ ಸಂಶೋಧನಾ ನಿರ್ದೇಶಕ ಕೌಸ್ತುಭ್ ಬಿ. ಹೇಳಿದ್ದಾರೆ.
ಷೇರು ಮತ್ತು ಷೇರು ಸಂಬಂಧಿಸಿದ ಉಳಿತಾಯ ಯೋಜನೆಗಳಲ್ಲಿ (ಇಎಲ್‌ಎಸ್‌ಎಸ್) ₹ 11,250 ಕೋಟಿ ಹೂಡಿಕೆಯಾಗಿದೆ. ಬ್ಯಾಲನ್ಸ್ಡ್ ಫಂಡ್‌ಗಳಲ್ಲಿ ₹ 731 ಕೋಟಿ ಹೂಡಿಕೆಯಾಗಿದೆ.
ಷೇರುಪೇಟೆಯ ಏರಿಳಿತದ ಹೊರ
ತಾಗಿಯೂ ಷೇರುಗಳಲ್ಲಿನ ಸಾಮಾನ್ಯ ಹೂಡಿಕೆದಾರರ ಹೂಡಿಕೆಯು
ಸಕಾರಾತ್ಮಕವಾಗಿದೆ. ₹ 12 ಸಾವಿರ ಕೋಟಿಗಳಷ್ಟು ಹೂಡಿಕೆಯಾಗಿದೆ.
ತಾಗಿಯೂ ಷೇರುಗಳಲ್ಲಿನ ಸಾಮಾನ್ಯ ಹೂಡಿಕೆದಾರರ ಹೂಡಿಕೆಯು
ಸಕಾರಾತ್ಮಕವಾಗಿದೆ. ₹ 12 ಸಾವಿರ ಕೋಟಿಗಳಷ್ಟು ಹೂಡಿಕೆಯಾಗಿದೆ.
‘ವ್ಯವಸ್ಥಿತ ಹೂಡಿಕೆ ಯೋಜನೆ (ಸಿಪ್) ಮೂಲಕ ಸೆಪ್ಟೆಂಬರ್ ತಿಂಗಳಲ್ಲಿ ₹ 7,727 ಕೋಟಿ ಹೂಡಿಕೆಯಾಗಿದೆ’ ಎಂದು ‘ಎಎಂಎಫ್‌ಐ’ನ ಸಿಇಒ ಎನ್. ಎಸ್. ವೆಂಕಟೇಶ್ ತಿಳಿಸಿದ್ದಾರೆ.
ಮಾರುಕಟ್ಟೆಯ ಏರಿಳಿತದ ಕಾರಣಕ್ಕೆ ಹೂಡಿಕೆದಾರರು ಷೇರುಗಳಲ್ಲಿ ಹೊಸದಾಗಿ ಹಣ ತೊಡಗಿಸುತ್ತಿದ್ದಾರೆ.
ಹೆಚ್ಚಿನ ಸಂಖ್ಯೆಯ ಹೂಡಿಕೆದಾರ
ರಿಂದ ಹಣ ಒಟ್ಟುಗೂಡಿಸುವ ಮ್ಯೂಚುವಲ್ ಫಂಡ್‌ಗಳು ಷೇರು, ಬಾಂಡ್ ಮತ್ತು ಹಣದ ಮಾರುಕಟ್ಟೆಯ ಇತರ ಹೂಡಿಕೆ ಬಗೆಗಳಲ್ಲಿ ತೊಡಗಿಸುತ್ತವೆ.
ರಿಂದ ಹಣ ಒಟ್ಟುಗೂಡಿಸುವ ಮ್ಯೂಚುವಲ್ ಫಂಡ್‌ಗಳು ಷೇರು, ಬಾಂಡ್ ಮತ್ತು ಹಣದ ಮಾರುಕಟ್ಟೆಯ ಇತರ ಹೂಡಿಕೆ ಬಗೆಗಳಲ್ಲಿ ತೊಡಗಿಸುತ್ತವೆ.
No comments:
Post a Comment