ರಾಜಕಾರಣ ಪ್ರವೇಶಿಸುವ ಯುವಕರಿಗೆ ರಾಜಕಾರಣದ ಪಾಠ ಹೇಳಿಕೊಡಲು ರಾಜಕೀಯ ತರಬೇತಿ ಸಂಸ್ಥೆೆಯೊಂದನ್ನು ಸ್ಥಾಪಿಸಲು ಉತ್ತರ ಪ್ರದೇಶ ಸರಕಾರ ನಿರ್ಧರಿಸಿದೆ. ಬುಧವಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದಲ್ಲಿ ಈ ಸಭೆ ಈ ತೀರ್ಮಾನ ಕೈಗೊಳ್ಳಲಾಗಿದೆ.
ದೇಶದಲ್ಲಿ ಇದೇ ಮೊದಲ ಬಾರಿಗೆ ಇಂತಹುದೊಂದು ಸಂಸ್ಥೆೆ ತಲೆ ಎತ್ತಲಿದೆ. ಗಜಿಯಾಬಾದ್‌ನಲ್ಲಿ 198 ಕೋಟಿ ರು.ಗಳ ವೆಚ್ಚದಲ್ಲಿ ಈ ಸಂಸ್ಥೆೆ ಆರಂಭವಾಗಲಿದ್ದು, ಆರಂಭದಲ್ಲಿ 50 ಕೋಟಿ ರು. ಒದಗಿಸಲು ತೀರ್ಮಾನಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಸುರೇಶ್ ಕುಮಾರ್ ಖನ್ನಾ ತಿಳಿಸಿದರು.
ರಾಜಕಾರಣ ಪ್ರವೇಶಿಸುವರಿಗೆ ಪ್ರಾಯೋಗಿಕ ತರಬೇತಿ, ಕಾನೂನು ಅರಿವು, ಸಾರ್ವಜನಿಕ ಜೀವನದಲ್ಲಿ ವರ್ತನೆ ಮತ್ತು ರಾಜಕಾರಣದ ಇತರ ಆಯಾಮಗಳನ್ನು ಕುರಿತು ತರಬೇತಿ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.
ರಾಯಭಾರಿಗಳು, ವಿವಿಧ ರಾಜ್ಯಗಳ ಮುಖ್ಯಸ್ಥರು ಮತ್ತು ತಜ್ಞರು ಸೇರಿದಂತೆ ಪ್ರಸಿದ್ಧ ರಾಜಕಾರಣಿಗಳಿಂದ ಉಪನ್ಯಾಸಗಳನ್ನು ಆಯೋಜಿಸಲಾಗುತ್ತದೆ. ಈ ಸಂಸ್ಥೆೆಗೆ ಗುರುತಿಸಲಾಗಿರುವ ಸ್ಥಳ ರಾಷ್ಟ್ರ ರಾಜಧಾನಿಗೆ ಸಮೀಪವಾಗಿರುತ್ತದೆ. ದೆಹಲಿಗೆ ಭೇಟಿ ನೀಡುವವವರು ಸುಲಭವಾಗಿ ಈ ಸಂಸ್ಥೆೆಗೆ ಭೇಟಿ ನೀಡಬಹುದಾಗಿದೆ ಎಂದು ಖನ್ನಾ ತಿಳಿಸಿದರು.
ಉತ್ತರ ಪ್ರದೇಶದ ನಗರಾಭಿವೃದ್ಧಿ ಇಲಾಖೆ ಈ ಸಂಸ್ಥೆೆಯನ್ನು ನಡೆಸಲಿದ್ದು, ಮಾನ್ಯತೆಗಾಗಿ ರಾಷ್ಟ್ರಿಯ ವಿಶ್ವವಿದ್ಯಾಲಯಗಳನ್ನು ಸಂಪರ್ಕಿಸಲಾಗುತ್ತಿದೆ. ಇದರಿಂದ ಇಲ್ಲಿ ಪಡೆದ ಪದವಿಗಳಿಗೆ ತೂಕ ಮತ್ತು ಗೌರವಗಳೆರಡೂ ಲಭ್ಯವಾಗುತ್ತವೆ. ಮುಂದಿನ ಎರಡು ವರ್ಷಗಳಲ್ಲಿ ಈ ಸಂಸ್ಥೆೆ ಕಾರ್ಯಾರಂಭ ಮಾಡಲಿದ್ದು, ಪಠ್ಯಕ್ರಮವನ್ನು ರೂಪಿಸಲು ಈಗಾಗಲೇ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ತಿಳಿಸಿದರು.
No comments:
Post a Comment