ಅಹಮಾದಾಬಾದ್: ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲರ 182 ಮೀಟರ್ ಎತ್ತರದ ಉಕ್ಕಿನ ಪ್ರತಿಮೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಕನಸಿನ ಯೋಜನೆ ಇದಾಗಿದೆ. ವಲ್ಲಭಭಾಯಿ ಪಟೇಲರ 143ನೇ ಹುಟ್ಟುಹಬ್ಬದ ದಿನವಾದ ಅಕ್ಟೋಬರ್ 31ರಂದು ‘ಏಕತೆಯ ಪ್ರತಿಮೆ’ ಲೋಕಾರ್ಪಣೆಗೊಳ್ಳಲಿದೆ. ಗುಜರಾತ್ನ ನರ್ಮದಾ ನದಿಯ ಸರ್ದಾರ್ ಸರೋವರ ಅಣೆಕಟ್ಟು ಸಮೀಪ ಈ ಮೂರ್ತಿ ನಿರ್ಮಾಣವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಲಿದ್ದಾರೆ. ಪ್ರತಿಷ್ಠಿತ ಎಲ್ ಆಂಡ್ ಟಿ ಸಂಸ್ಥೆಯು ಪಟೇಲ್ ಮೂರ್ತಿಯನ್ನು ನಿರ್ಮಿಸುತ್ತಿದೆ.
No comments:
Post a Comment