‘ಬಿಗ್ ಬಿ’ಗೂ ತಟ್ಟಿದ ‘ಮೀ ಟೂ’ ಬಿಸಿ
ಪ್ರಜಾವಾಣಿ ವಾರ್ತೆ
ಮುಂಬೈ: ಲೈಂಗಿಕ ಕಿರುಕುಳ, ದೌರ್ಜನ್ಯದ ವಿರುದ್ಧ ಮಹಿಳೆಯರು ಸಾಮಾಜಿಕ ಜಾಲತಾಣದಲ್ಲಿ ಆರಂಭಿಸಿ ರುವ ‘ಮೀ ಟೂ’ ಅಭಿಯಾನದ ಪಟ್ಟಿಗೆ ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ಹೊಸದಾಗಿ ಸೇರ್ಪಡೆಯಾಗಿದ್ದಾರೆ.
ಪತ್ರಿಕೋದ್ಯಮ, ರಾಜಕಾರಣ, ಸಿನಿಮಾ, ಕ್ರೀಡೆ ಹೀಗೆ ಸಮಾಜದ ವಿವಿಧ ರಂಗಗಳ ಗಣ್ಯರ ಮುಖವಾಡ ಕಳಚಿ ಹಾಕುತ್ತಿರುವ ‘ಮೀ ಟೂ’ ಅಭಿಯಾನದ ಬಿಸಿ ’ಬಿಗ್ ಬಿ’ಗೂ ತಟ್ಟುವ ಲಕ್ಷಣ ಗೋಚರಿಸುತ್ತಿವೆ.
ಮುಂಬೈನ ಪ್ರಸಿದ್ಧ ಕೇಶ ವಿನ್ಯಾಸಕಿ ಸಪ್ನಾ ಮೋತಿ ಭವಾನಿ ಅವರು ಅಮಿತಾಬ್ ಬಚ್ಚನ್ ವಿರುದ್ಧ ಶನಿವಾರ ಟ್ವಿಟರ್‌ನಲ್ಲಿ ಸಿಡಿಸಿರುವ ಬಾಂಬ್ ಈ ಅನುಮಾನ ಹುಟ್ಟುಹಾಕಿದೆ.
ಅಮಿತಾಬ್ ಬಚ್ಚನ್ ತಮ್ಮ ಜನ್ಮದಿನದ ಪ್ರಯುಕ್ತ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದ ಆಯ್ದ ಭಾಗವನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪ್ರಕಟಿಸಿದ್ದರು. ‘ಮೀ ಟೂ’ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದ ಅವರು, ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಸುರಕ್ಷಿತ ವಾತಾವರಣ ಕಲ್ಪಿಸಬೇಕು ಎಂದು ಅಭಿಪ್ರಾಯಪಟ್ಟಿದ್ದರು.
ಇದನ್ನು ಲೇವಡಿ ಮಾಡಿ ಟ್ವೀಟ್ ಮಾಡಿರುವ ಸಪ್ನಾ ಭವಾನಿ, ‘ಸರ್, ಇದೊಂದು ದೊಡ್ಡ ಸುಳ್ಳು. ನಿಮ್ಮ ಸಾಮಾಜಿಕ ಹೋರಾಟದ ಮುಖವಾಡ ಶೀಘ್ರದಲ್ಲಿಯೇ ಕಳಚಿ ಬೀಳಲಿದೆ’ ಎಂದು ಸುಳಿವು ನೀಡಿದ್ದಾರೆ.
ಇದು ಬಾಲಿವುಡ್‌ನಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿದೆ.
ನಾನು ಸಂತ್ರಸ್ತೆ ಅಲ್ಲ: ‘ಅಮಿತಾಬ್ ಬಚ್ಚನ್ ಅವರಿಂದ ನಾನು ಎಂದಿಗೂ ಲೈಂಗಿಕ ಪೀಡನೆಗೆ ಒಳಗಾಗಿಲ್ಲ. ಆದರೆ, ಅವರಿಂದ ತೊಂದರೆಗೆ ಒಳಗಾದ ಅನೇಕ ಮಹಿಳೆಯರು ನನಗೆ ಗೊತ್ತು. ಅವರ ಪರವಾಗಿ ನಾನು ಧ್ವನಿ ಎತ್ತಿದ್ದೇನೆ’ ಎಂದು ಸಪ್ನಾ ಹೇಳಿದ್ದಾರೆ. ‘ಬಚ್ಚನ್ ಅವರು ಮಹಿಳೆಯ ರೊಂದಿಗೆ ಅಸಭ್ಯವಾಗಿ ನಡೆದುಕೊಂಡ ಬಗ್ಗೆ ಅನೇಕ ವರ್ಣರಂಜಿತ ಕತೆಗಳನ್ನು ಬಲ್ಲೆ. ಅವರಿಂದ ತೊಂದರೆಗೆ ಒಳಗಾದ ಮಹಿಳೆಯರು ತಮಗಾದ ಕಹಿ ಅನುಭವವನ್ನು ಹಂಚಿಕೊಳ್ಳಲು ಮುಂದೆ ಬರಬೇಕು’ ಎಂದು ಅವರು ಮನವಿ ಮಾಡಿದ್ದಾರೆ.
ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪದ ಬಗ್ಗೆ ಬಚ್ಚನ್ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ನಾನಾಗೆ ಕಂಟಕ: ನಾನಾ ಪಾಟೇಕರ್ ಮತ್ತು ಇತರ ನಾಲ್ವರನ್ನು ಸುಳ್ಳು ಪತ್ತೆ ಮತ್ತು ಮಂಪರು ಪರೀಕ್ಷೆಗೆ ಒಳಪಡಿಸುವಂತೆ ನಟಿ ತನುಶ್ರೀ ದತ್ತಾ ಅವರು ಒತ್ತಾಯಿಸಿದ್ದಾರೆ.
ಈ ಆರೋಪದ ಹಿನ್ನೆಲೆಯಲ್ಲಿ ನಟ ನಾನಾ ಪಾಟೇಕರ್ ಅವರು ಹೌಸ್‌ಫುಲ್ 4 ಚಿತ್ರದಿಂದ ಅವರು ಹೊರ ನಡೆದಿದ್ದಾರೆ.
ಇದಕ್ಕೂ ಮೊದಲು ಚಿತ್ರದ ನಿರ್ದೇಶಕ ಸಾಜಿದ್ ಖಾನ್ ಕೂಡ ಚಿತ್ರದಿಂದ ಹೊರ ನಡೆದಿದ್ದರು. ಫರ್ಹಾದ್ ಸಮ್ಜಿ ಚಿತ್ರದ ಹೊಸ ನಿರ್ದೇಶಕನ ಹೊಣೆ ಹೊತ್ತಿದ್ದಾರೆ.
ಮಾನನಷ್ಟ ಮೊಕದ್ದಮೆ: ಬಾಲಿವುಡ್‌ನಲ್ಲಿ ‘ಸಂಸ್ಕಾರಿ ನಟ’ ಎಂದು ಹೆಸರಾಗಿರುವ ಅಲೋಕ್‌ನಾಥ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ ಲೇಖಕಿ, ನಿರ್ಮಾಪಕಿ ವಿಂತಾ ನಂದಾ ವಿರುದ್ಧ ಅಲೋಕ್‌ನಾಥ ಮತ್ತು ಅವರ ಪತ್ನಿ ಶನಿವಾರ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ವಿಶಾಖಾ ಮಾರ್ಗಸೂಚಿ ಅನುಷ್ಠಾನಕ್ಕೆ ಒತ್ತಾಯ
ಕೆಲಸ ಮಾಡುವ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ತಡೆಗಟ್ಟಲು ವಿಶಾಖಾ ಮಾರ್ಗಸೂಚಿಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಿರಣ್ ಖೇರ್ ಒತ್ತಾಯಿಸಿದ್ದಾರೆ.
ಮೀ– ಟೂ ಅಭಿಯಾನ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಮಹಿಳೆಯರ ಮೇಲೆ ಅಧಿಕಾರ ಚಲಾಯಿಸಬಹುದು ಎಂಬ ಸಮಾಜದಲ್ಲಿರುವ ಮನೋಭಾವ ಬದಲಾಗಬೇಕು. ಮಹಿಳೆಯರ ಬಗ್ಗೆ ಗೌರವ ಬೆಳೆಸಿಕೊಳ್ಳಬೇಕು ಎಂದು ಹೇಳಿದ್ದಾರೆ.
‘ವಿಶಾಖಾ ಮಾರ್ಗಸೂಚಿಗಳನ್ನು ಪ್ರತಿಯೊಂದು ಸಂಸ್ಥೆಯು ಅನುಸರಿಸಬೇಕು. ದೌರ್ಜನ್ಯಕ್ಕೊಳಗಾಗುವವರು ಕೂಡಲೇ ದೂರು ನೀಡಬೇಕು’ ಎಂದು ಹೇಳಿದ್ದಾರೆ.
ಏನಿದು ವಿಶಾಖಾ ಮಾರ್ಗಸೂಚಿ?
1990ರ ಸಮಯದಲ್ಲಿ ರಾಜಸ್ಥಾನದಲ್ಲಿ ಬಾಲ್ಯ ವಿವಾಹ ತಡೆಗಟ್ಟಲು ಹೋರಾಟ ನಡೆಸಿದ ರಾಜ್ಯ ಸರ್ಕಾರದ ಮಹಿಳಾ ಉದ್ಯೋಗಿ ಮೇಲೆ ಜಮೀನ್ದಾರರಿಂದ ಬಲಾತ್ಕಾರ ನಡೆಯುತ್ತದೆ.
ರಾಜಸ್ಥಾನ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದರೂ ಮಹಿಳೆಗೆ ನ್ಯಾಯ ಸಿಗುವುದಿಲ್ಲ. ನಂತರ ವಿಶಾಖಾ ಎಂಬ ಹೆಸರಿನ ಮಹಿಳಾ ಹಕ್ಕುಗಳ ಗುಂಪೊಂದು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ 1997ರಲ್ಲಿ ವಿಶಾಖಾ ಮಾರ್ಗಸೂಚಿಗಳನ್ನು ಸಿದ್ಧಪಡಿಸಿ ಇವುಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ಆದೇಶಿಸಿತ್ತು.
ಲೈಂಗಿಕ ಕಿರುಕುಳದ ಪ್ರಕರಣಗಳಲ್ಲಿ ಭಾರತದಲ್ಲಿ ಬಳಕೆಗಾಗಿ ಕಾರ್ಯವಿಧಾನದ ಬಗ್ಗೆ ವಿಶಾಖಾ ಮಾರ್ಗಸೂಚಿಗಳು ಹೊಂದಿದ್ದವು. 2013 ರಲ್ಲಿ ಕೆಲಸ ಮಾಡುವ ಸ್ಥಳಗಳಲ್ಲಿ (ಲೈಂಗಿಕ ದೌರ್ಜನ್ಯ ತಡೆಗಟ್ಟುವಿಕೆ, ನಿಷೇಧ ಮತ್ತು ನಿವಾರಣೆ) ಕಾಯ್ದೆಗೆ ತಿದ್ದುಪಡಿ ತಂದು ಈ ಮಾರ್ಗಸೂಚಿಗಳನ್ನು ಅನುಷ್ಠಾನಗಳಿಸಲು ಸೂಚಿಸಲಾಯಿತು.
ಮೀ–ಟೂ ಚಳವಳಿ ಕ್ರಿಕೆಟ್‌ಲೋಕದ ಬಾಗಿಲನ್ನೂ ಬಡಿದಿದ್ದು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಜೋಹ್ರಿ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಲಾಗಿದೆ.
ಲೇಖಕಿ ಹರ್ನೀದ್ ಕೌರ್ ಅವರು ತಮ್ಮ ಟ್ವಿಟರ್ ಹ್ಯಾಂಡ್ಲರ್
@PedestrianPoet ನಲ್ಲಿ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ.
‘ರಾಹುಲ್ ಜೋಹ್ರಿ ಅವರ ಹಿಂದಿನ ಸಹೋದ್ಯೋಗಿಯೊಬ್ಬರು ಇ–ಮೇಲ್‌ನಲ್ಲಿ ಇದನ್ನು ನನಗೆ ಕಳುಹಿಸಿದ್ದಾರೆ. ಸಂತ್ರಸ್ತೆ ತಮ್ಮ ಹೆಸರನ್ನು ಗೋಪ್ಯವಾಗಿಡುವಂತೆ ಕೇಳಿಕೊಂಡಿದ್ದಾರೆ. ರಾಹುಲ್ ಜೋಹ್ರಿ ನಿಮ್ಮ ಸಮಯ ಈಗ ಶುರುವಾಗಿದೆ. #metoo’ ಎಂದು ಕೌರ್ ಟ್ವೀಟ್ ಮಾಡಿದ್ದಾರೆ. ಸಂತ್ರಸ್ತೆ ತಮಗೆ ಕಳುಹಿಸಿರುವ ಇ–ಮೇಲ್ ಬರಹದ ಸ್ಕ್ರೀನ್‌ಶಾಟ್‌ಗಳನ್ನೂ ಕೌರ್ ಟ್ವೀಟ್ ಮಾಡಿದ್ದಾರೆ.
ಅವುಗಳ ಸಂಗ್ರಹ ಬರಹ ಈ ಮುಂದಿನಂತಿದೆ.‘ನನ್ನ ಹಳೆಯ ಸಹೋದ್ಯೋಗಿಯಾಗಿದ್ದ ಕಾರಣ ರಾಹುಲ್ ಜೋಹ್ರಿ ಅವರ ಕುಟುಂಬದೊಂದಿಗೂ ಒಡನಾಟವಿತ್ತು. ಡಿಸ್ಕವರಿ ವಾಹಿನಿಯ ದಕ್ಷಿಣ ಏಷ್ಯಾ ಪ್ರಧಾನ ವ್ಯವಸ್ಥಾಪಕ ಹುದ್ದೆಗೆ ರಾಹುಲ್ ನೇಮಕವಾಗಿದ್ದರು. ನನಗೂ ಬೇರೆ ಉದ್ಯೋಗದ ಅವಶ್ಯಕತೆ ಇತ್ತು. ಹೀಗಾಗಿ ಉದ್ಯೋಗದ ಬಗ್ಗೆ ಚರ್ಚಿಸಲು ರಾಹುಲ್ ಅವರನ್ನು ಕಾಫಿ ಷಾಪ್‌ನಲ್ಲಿ ಭೇಟಿ ಮಾಡಿದ್ದೆ. ಉದ್ಯೋಗದ ಬಗ್ಗೆ ಮಾತನಾಡುತ್ತಲೇ ರಾಹುಲ್ ತಮ್ಮ ಮನೆಗೆ ಹೋಗೋಣ ಎಂದರು. ಆದರೆ ಅವರ ಪತ್ನಿ ಮನೆಯಲ್ಲಿರಲಿಲ್ಲ. ಅವರು ಎಲ್ಲಿದ್ದಾರೆ ಎಂದು ಕೇಳಿದಾಗ ರಾಹುಲ್ ಹಾರಿಕೆಯ ಉತ್ತರ ನೀಡಿದರು. ಡಿಸ್ಕವರಿ ವಾಹಿನಿಯಲ್ಲೇ ತಮ್ಮ ಅಧೀನ ಅಧಿಕಾರಿಯ ಹುದ್ದೆ ಖಾಲಿ ಇದೆ, ನನ್ನ ಕೆಳಗೆ ಕೆಲಸ ಮಾಡಲು ಅಭ್ಯಂತರವಿಲ್ಲದಿದ್ದರೆ ನಿನಗೆ ಆ ಕೆಲಸ ಸಿಗುತ್ತದೆ ಎಂದರು. ದಿಢೀರ್ ಎಂದು ನಡೆದ ಈ ಬೆಳವಣಿಗೆಗಳಿಂದ ಸುಧಾರಿಸಿಕೊಳ್ಳುವ ಮುನ್ನವೇ ರಾಹುಲ್ ತಮ್ಮ ಪ್ಯಾಂಟ್ ಬಿಚ್ಚಿದರು. ನನ್ನನ್ನೂ ವಿವಸ್ತ್ರಗೊಳಿಸಿದರು. ಇದು ನಿನ್ನ ಉದ್ಯೋಗದ ಸಂದರ್ಶನದ ಕೊನೆಯ ಭಾಗ ಎಂದರು’ ಎಂದು ಸಂತ್ರಸ್ತೆ ವಿವರಿಸಿದ್ದಾರೆ.
ಮೀ–ಟೂ ಪ್ರಕರಣಗಳ ಪರಿಶೀಲನೆಗೆ ಸುಪ್ರೀಂ ಕೋರ್ಟ್ ರಚಿಸಿರುವ ಸಮಿತಿಯು ಇದರ ಬೆನ್ನಲ್ಲೇ ರಾಹುಲ್ ಜೋಹ್ರಿಗೆ ನೋಟಿಸ್ ನೀಡಿದೆ. ಒಂದು ವಾರದಲ್ಲಿ ವಿವರಣೆ ನೀಡುವಂತೆ ಸೂಚಿಸಿದೆ.
ಪತ್ರಕರ್ತರ ಬೆಂಬಲ
ನವದೆಹಲಿ (ಪಿಟಿಐ): ಮೀ–ಟೂ ಚಳವಳಿಗೆ ಬೆಂಬಲ ಸೂಚಿಸಿ ದೆಹಲಿಯ ಜಂತರ್‌ಮಂತರ್‌ನಲ್ಲಿ ಹಲವು ಪತ್ರಕರ್ತರು ಶನಿವಾರ ಪ್ರತಿಭಟನೆ ನಡೆಸಿದ್ದಾರೆ.
‘ಆರೋಪಿಗಳ ವಿರುದ್ಧ ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು. ಉದ್ಯೋಗದ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು’ ಎಂದು ಇಂಡಿಯನ್ ವುಮೆನ್ಸ್ ಪ್ರೆಸ್ ಕಾರ್ಪ್ಸ್ (ಐಡಬ್ಲ್ಯುಪಿಸಿ) ಸದಸ್ಯರು ಪ್ರತಿಭಟನೆಯಲ್ಲಿ ಒತ್ತಾಯಿಸಿದರು.
ಮಾರ್ಗಸೂಚಿಗೆ ಒತ್ತಾಯ
ಕೆಲಸ ಮಾಡುವ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ತಡೆಗಟ್ಟಲು ವಿಶಾಖಾ ಮಾರ್ಗಸೂಚಿಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಿರಣ್ ಖೇರ್ ಒತ್ತಾಯಿಸಿದ್ದಾರೆ. ‘ವಿಶಾಖಾ ಮಾರ್ಗಸೂಚಿಗಳನ್ನು ಪ್ರತಿಯೊಂದು ಸಂಸ್ಥೆಯು ಅನುಸರಿಸಬೇಕು. ದೌರ್ಜನ್ಯಕ್ಕೊಳಗಾಗುವವರು ಕೂಡಲೇ ದೂರು ನೀಡಬೇಕು’ ಎಂದು ಹೇಳಿದ್ದಾರೆ.
ಏನಿದು ವಿಶಾಖಾ ಮಾರ್ಗಸೂಚಿ?: 1990ರ ಸಮಯದಲ್ಲಿ ರಾಜಸ್ಥಾನದಲ್ಲಿ ಬಾಲ್ಯ ವಿವಾಹ ತಡೆಗಟ್ಟಲು ಹೋರಾಟ ನಡೆಸಿದ ರಾಜ್ಯ ಸರ್ಕಾರದ ಮಹಿಳಾ ಉದ್ಯೋಗಿ ಮೇಲೆ ಜಮೀನ್ದಾರರಿಂದ ಬಲಾತ್ಕಾರ ನಡೆಯುತ್ತದೆ.
ರಾಜಸ್ಥಾನ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದರೂ ಮಹಿಳೆಗೆ ನ್ಯಾಯ ಸಿಗುವುದಿಲ್ಲ. ನಂತರ ವಿಶಾಖಾ ಎಂಬ ಹೆಸರಿನ ಮಹಿಳಾ ಹಕ್ಕುಗಳ ಗುಂಪೊಂದು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ 1997ರಲ್ಲಿ ವಿಶಾಖಾ ಮಾರ್ಗಸೂಚಿಗಳನ್ನು ಸಿದ್ಧಪಡಿಸಿ ಇವುಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ಆದೇಶಿಸಿತ್ತು.
ಮಹಿಳೆ ಆಟದ ವಸ್ತು ಅಲ್ಲ. ಮಹಿಳೆಯರನ್ನು ಗೌರವಿಸುವ ಕುರಿತು ಮಕ್ಕಳಿಗೆ ಪಾಲಕರು ತಿಳಿಹೇಳಬೇಕು. ಸಂಪ್ರದಾಯಸ್ಥರ ಮನೋಭಾವ ಸಹ ಬದಲಾಗಬೇಕು ಮಲೈಕಾ ಅರೋರಾ, ಬಾಲಿವುಡ್ ನಟಿ
No comments:
Post a Comment