ಪ್ರಜಾವಾಣಿ ವಾರ್ತೆ
ನವದೆಹಲಿ: ಕರ್ನಾಟಕ ಹೈಕೋರ್ಟ್‌ನ ಏಳು ಹೆಚ್ಚುವರಿ ನ್ಯಾಯಮೂರ್ತಿಗಳನ್ನು ಕಾಯಂಗೊಳಿಸಲು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಕೊಲಿಜಿಯಂ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಕರ್ನಾಟಕ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಗಳಾದ ಕೆಂಪಯ್ಯ ಸೋಮಶೇಖರ್, ಶ್ರೀಮತಿ ಕೊಟ್ರವ್ವ ಸೋಮಪ್ಪ ಮುದಗಲ್, ಶ್ರೀನಿವಾಸ್ ಎಚ್. ಕುಮಾರ್, ಜಾನ್ ಮೈಕೆಲ್ ಕುನ್ಹಾ, ಬಸವರಾಜ ಎ. ಪಾಟೀಲ (ಬಿ.ಎ. ಪಾಟೀಲ), ಎನ್.ಕೆ. ಸುಧೀಂಧ್ರ ರಾವ್ ಮತ್ತು ಎಚ್.ಬಿ.ಪಿ ಶಾಸ್ತ್ರಿ ಅವರನ್ನು ಕಾಯಂ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲು ಶಿಫಾರಸು ಮಾಡಲಾಗಿದೆ.
ಬಾಂಬೆ, ಉತ್ತರಾಖಂಡ, ಗುವಾಹಟಿ, ಕೋಲ್ಕತ್ತ ಮತ್ತು ಸಿಕ್ಕಿಂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆಗಳಿಗೂ ಇತ್ತೀಚೆಗೆ ನಡೆದ ಕೊಲಿಜಿಯಂ ಸಭೆಯಲ್ಲಿ ಹಲವು ಹೆಸರುಗಳನ್ನು ಅಂತಿಮಗೊಳಿಸಲಾಗಿದೆ.
ಎನ್.ಎಚ್. ಪಾಟೀಲ ಅವರನ್ನು ಬಾಂಬೆ ಹೈಕೋರ್ಟ್, ಡಿ.ಕೆ. ಗುಪ್ತಾ ಅವರನ್ನು ಕೋಲ್ಕತ್ತ, ಆಂಧ್ರ ಪ್ರದೇಶ ಮತ್ತು ತೆಲಂಗಾಣದ ರಮೇಶ್ ರಂಗನಾಥ್ ಅವರನ್ನು ಉತ್ತರಾಖಂಡ, ಉತ್ತರಾಖಂಡದ ವಿಜಯ್ ಕುಮಾರ್ ಭಿಷ್ಠ್ ಅವರನ್ನು ಸಿಕ್ಕಿಂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಶಿಫಾರಸು ಮಾಡಲಾಗಿದೆ.
ನ್ಯಾಯಮೂರ್ತಿಗಳಾದ ಮದನ್ ಬಿ. ಲೋಕುರ್ ಮತ್ತು ಕುರಿಯನ್ ಜೋಸೆಫ್ ಅವರು ಕೊಲಿಜಿಯಂ ಸದಸ್ಯರಾಗಿದ್ದಾರೆ.
No comments:
Post a Comment