ದೆಹಲಿ: ಜಾಗತಿಕ ಆರ್ಥಿಕತೆಯಲ್ಲಿ 2030ರ ವೇಳೆಗೆ ಭಾರತ ಜಪಾನ್ ಹಿಂದಿಕ್ಕಿ ಮೂರನೇ ಸ್ಥಾನವನ್ನು ಏರಲಿದೆ ಎಂದು ಅಮೆರಿಕಾದ ಅರ್ಥಶಾಸ್ತ್ರ ಅಧ್ಯಯನ ಸಂಸ್ಥೆಯಾದ ಎಚ್ಎಸ್ಬಿಸಿ ವರದಿ ನೀಡಿದೆ.
ಜಾಗತಿಕ ಆರ್ಥಿಕತೆಯ ಬಗ್ಗೆ ವರದಿ ನೀಡಿರುವ ಎಚ್ಎಸ್ಬಿಸಿ, 2017ರ ಜಾಗತಿಕ ಆರ್ಥಿಕತೆಯಲ್ಲಿ 6ನೇ ಸ್ಥಾನದಲ್ಲಿರುವ ಭಾರತವು ಜಪಾನ್, ಜರ್ಮನಿಯನ್ನು ಹಿಂದಿಕ್ಕಿ 2030ರ ವೇಳೆಗೆ 3ನೇ ಸ್ಥಾನವನ್ನು ತಲುಪಲಿದೆ ಎಂದು ವರದಿ ನೀಡಿದೆ.
2030ರ ವೇಳೆಗೆ 26 ಟ್ರಿಲಿಯನ್ (1,889.16 ಲಕ್ಷ ಕೋಟಿ ರೂಪಾಯಿ) ಆರ್ಥಿಕತೆಯ ಮೂಲಕ ಚೀನಾ ಪ್ರಥಮ ಸ್ಥಾನ ಪಡೆದುಕೊಂಡರೆ, 25.2 ಟ್ರಿಲಿಯನ್ (1,831.03 ಲಕ್ಷ ಕೋಟಿ ರೂಪಾಯಿ) ಮೂಲಕ ಅಮೆರಿಕ ಎರಡನೇ ಸ್ಥಾನದಲ್ಲಿರುತ್ತದೆ. ಭಾರತ 5.9 ಟ್ರಿಲಿಯನ್ (428.69 ಲಕ್ಷ ಕೋಟಿ ರೂಪಾಯಿ) ಆರ್ಥಿಕತೆ ಹೊಂದುವ ಮೂಲಕ ಮೂರನೇ ಸ್ಥಾನಕ್ಕೆ ಏರಲಿದೆ ಎಂದು ಅಂದಾಜಿಸಿದೆ.
ವಿಶ್ವದ ಐದು ದೊಡ್ಡ ಅರ್ಥವ್ಯವಸ್ಥೆಯ ದೇಶಗಳ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, ನಂತರ ಸ್ಥಾನದಲ್ಲಿ ಅನುಕ್ರಮವಾಗಿ ಇಂಗ್ಲೆಂಡ್, ಚೀನಾ, ಜಪಾನ್, ಜರ್ಮನಿ ಪಡೆದುಕೊಂಡಿವೆ.
ಭಾರತದ ಅರ್ಥವ್ಯವಸ್ಥೆಯ ಬೆಳವಣಿಗೆ ಈ ವರ್ಷವೇ ಬ್ರಿಟನ್ ಮತ್ತು ಫ್ರಾನ್ಸ್ ಅನ್ನು ಮೀರಿಸಲಿದೆ. ಇದೇ ಬೆಳವಣಿಗೆಯನ್ನು ಕಾಯ್ದುಕೊಂಡರೆ 2032ರ ವೇಳೆಗೆ ಭಾರತ ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವ ಸಾಧ್ಯತೆಯಿದೆ ಎಂದು ಲಂಡನ್ ಮೂಲದ ಸೆಂಟರ್ ಫಾರ್ ಎಕನಾಮಿಕ್ಸ್ ಆ್ಯಂಡ್ ಬಿಸಿನೆಸ್ ರೀಸರ್ಚ್ 2017ರಲ್ಲಿ ಭವಿಷ್ಯ ನುಡಿದಿತ್ತು.
Telegram Link https://t.me/joinchat/AAAAAE9lq2X6z4BbgUUCnw Friends, If you like this post,kindly comment below the post and do share your Response, (Thanks for Reading....)
No comments:
Post a Comment