ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Saturday, March 07, 2015

  Pundalik       Saturday, March 07, 2015
ರಾಜ್ಯ ಶೈಕ್ಷಣಿಕ ಮೌಲ್ಯಮಾಪನ ಮತ್ತು ಶೈಕ್ಷಣಿಕ ವೃತ್ತಿ ಮಾರ್ಗದರ್ಶನ
ಹಿಂದಿನ ಪುಟಮುಂದಿನ ಪುಟ
ಅ) ರಾಜ್ಯ ಶೈಕ್ಷಣಿಕ ಮೌಲ್ಯ ಮಾಪನ : ಇದರ ಮುಖ್ಯ ಕಾರ್ಯಕ್ರಮಗಳೆಂದರೆ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವುದು, ಶಿಕ್ಷಕರಿಗೆ ವಿಷಯ ಕಾರ್ಯಾಗಾರ ತರಬೇತಿ ಸಂಚಿಕೆಗಳ ತಯಾರಿಕೆ, ಸೆಮಿಸ್ಟರ್ ಪದ್ಧತಿಯ ಮಾರ್ಗದರ್ಶನ ಮುಂತಾದವುಗಳನ್ನೊಳಗೊಂಡಿದೆ. 
NCF 2005, RTE 2009 ರ ಸೆಕ್ಷನ್(4) ಮತ್ತು ಸೆಕ್ಷನ್ 30 ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನಕ್ಕೆ ವಿಶೇಷ ಪ್ರಾಮುಖ್ಯತೆಯನ್ನು ನೀಡಿವೆ. RTE 2009 ರ ಶಿಕ್ಷಣ ಹಕ್ಕು ಕಾಯ್ದೆಯನ್ವಯ 6 ರಿಂದ 14 ರ ವಯೋಮಾನದ ಪ್ರತಿಯೊಂದು ಮಗುವಿಗೂ ಉಚಿತ, ಕಡ್ಡಾಯ ಹಾಗೂ ಗುಣಾತ್ಮಕ ಶಿಕ್ಷಣ ನೀಡುವುದು ಸರ್ಕಾರದ ಹೊಣೆಯಾಗಿರುವುದರಿಂದ, ಈ ಸಾಲಿನಲ್ಲಿ ರಾಜ್ಯದ ಎಲ್ಲ ಶಾಲೆಗಳಲ್ಲಿ 1 ರಿಂದ 9 ನೇ ತರಗತಿಯವರಿಗೆ ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನ (CCE- Continuous & Comprehensive Evaluation) ಅನುಷ್ಠಾನಕ್ಕೆ ತರಲು ಕ್ರಮ ವಹಿಸಲಾಗಿದೆ. ಈ ಮೌಲ್ಯಮಾಪನ ಪದ್ಧತಿಯಲ್ಲಿ ಶಾಲೆಯ ಪಠ್ಯ ಹಾಗೂ ಸಹ ಪಠ್ಯ, ವಿವಿಧ ಚಟುವಟಿಕೆಗಳಲ್ಲಿ ಸಹಜ ಪಾಲ್ಗೊಳ್ಳುವಿಕೆ ಮತ್ತು ಪ್ರಗತಿಯನ್ನು ವಿವಿಧ ತಂತ್ರಗಳ ಮೂಲಕ ಗಮನಿಸಿ ಸಮಗ್ರವಾಗಿ ದಾಖಲಿಸುವುದಾಗಿದೆ. 
ಈ ಮೌಲ್ಯಮಾಪನ ಪದ್ಧತಿ ಅನುಷ್ಠಾನಗೊಳಿಸುವ ಹಿನ್ನೆಲೆಯಲ್ಲಿ ಶಿಕ್ಷಕ ತರಬೇತಿ ಸಾಹಿತ್ಯ, "ಸಾಧನ”, ಸಂಪನ್ಮೂಲ ಸಾಹಿತ್ಯ ರಚಿಸಿ ರಾಜ್ಯದ ಎಲ್ಲಾ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಿಗೆ ವಿತರಿಸಲಾಗಿದೆ. ಅಲ್ಲದೆ ರಾಜ್ಯದ ಬೋಧಕ ಶಿಕ್ಷಕರಿಗೆ 3 ದಿನಗಳ ಸನಿವಾಸ ತರಬೇತಿ ಮತ್ತು ದೈಹಿಕ ಶಿಕ್ಷಣ ಶಿಕ್ಷಕರಿಗೆ ರಾಜ್ಯ ಮಟ್ಟದ ತರಬೇತಿ ನೀಡಲಾಗಿದೆ. ಇದಕ್ಕಾಗಿ ಎಸ್.ಎಸ್.ಎ. ಮತ್ತು ಆರ್.ಎಂ.ಎಸ್.ಎ. ವತಿಯಿಂದ ಅನುದಾನ ಭರಿಸಲಾಗಿದೆ. RMSA ನಿಂದ ಒಟ್ಟು ರೂ. 14.15 ಲಕ್ಷ ಬಿಡುಗಡೆಯಾಗಿದ್ದು, CCE ಅನುಷ್ಠಾನಕ್ಕಾಗಿ ಶಿಕ್ಷಕರಿಂದ ಮಾಹಿತಿ, ಪೂರಕ ಸಾಹಿತ್ಯ ರಚನೆ ಇತ್ಯಾದಿಗಳಿಗಾಗಿ ಪ್ರತಿ ಡಯಟ್ ಗಳಿಗೆ ಅಂದಾಜು ರೂ.38,000/- ಬಿಡುಗಡೆ ಮಾಡಲಾಗಿದೆ. ಆಯುಕ್ತರ ಕಛೇರಿಯಿಂದ ರೂ. 5.00 ಲಕ್ಷ ಅನುದಾನ ನೀಡಿದ್ದು, ಈ ಹಣವನ್ನು "ಸೌರಭ" ಸಾಹಿತ್ಯ ಮುದ್ರಣಕ್ಕೆ ಹಾಗೂ ಮೌಲ್ಯಮಾಪನ ಕಾರ್ಯಾಗಾರಕ್ಕೆ ಬಳಸಲಾಗಿದೆ. 
(ಆ) ಶೈಕ್ಷಣಿಕ ವೃತ್ತಿ ಮಾರ್ಗದರ್ಶನ : ವಿದ್ಯಾರ್ಥಿ ಮತ್ತು ಶಿಕ್ಷಕರ ಮಧ್ಯೆ ಮನೋವಿಜ್ಞಾನ ಪ್ರಯೋಗಾಲಯ ಸ್ಥಾಪಿಸಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸುವ ವಿನೂತನ ಯೋಜನೆಯೇ ಮನೋವಿಜ್ಞಾನ ಪ್ರಯೋಗಾಲಯ. ಇದನ್ನು ಶೈಕ್ಷಣಿಕ ವೃತ್ತಿ ಮಾರ್ಗದರ್ಶನ ಶಾಖೆಯಿಂದ ಹಂತ ಹಂತವಾಗಿ ಕಾರ್ಯಗತಗೊಳಿಸಲಾಗುತ್ತಿದ್ದು, ಶಿಕ್ಷಕರು ವಿದ್ಯಾರ್ಥಿಗಳ ಮಾನಸಿಕ ಮತ್ತು ವರ್ತನಾ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮತ್ತು ಭಾವನಾತ್ಮಕ ವಿಷಯಗಳಿಗೆ ಸಂಬಂಧಿಸಿದಂತೆ ಸೂಕ್ತ ಸಲಹೆಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳಿಗೆ ನೆರವಾಗಲು ದೂರಗಾಮಿ ಪರಿಕಲ್ಪನೆಯನ್ನು ರೂಪಿಸಲಾಗುತ್ತಿದೆ. 2012-13 ನೇ ಸಾಲಿನಲ್ಲಿ ರಾಜ್ಯದಲ್ಲಿನ ಎಲ್ಲಾ ಸರ್ಕಾರಿ ಪ್ರೌಢ ಶಾಲೆಗಳಲ್ಲಿ (4278) ಪ್ರತಿ ಪ್ರೌಢ ಶಾಲೆಗೆ ರೂ. 2000/- ರಂತೆ 85.56 ಲಕ್ಷಗಳನ್ನು ಬಿಡುಗಡೆ ಮಾಡಿ ಶೈಕ್ಷಣಿಕ ವೃತ್ತಿ ಮಾರ್ಗದರ್ಶನ ಮತ್ತು ಆಪ್ತ ಸಲಹಾ ಕೇಂದ್ರಗಳನ್ನು ಸ್ಥಾಪಿಸಿ ಅವುಗಳು ಕಾರ್ಯಾರಂಭ ಮಾಡುವಂತೆ ಕ್ರಮವಹಿಸಲಾಗಿದೆ. 
2012-13 ನೇ ಸಾಲಿನಲ್ಲಿ ಸಿ.ಸಿ.ಆರ್.ಟಿ., ನವದೆಹಲಿ ಇವರು ಆಯೋಜಿಸಿರುವ ತರಬೇತಿಗಳಿಗೆ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ. ಪ್ರತಿ ಮಾಹೆಯೂ 4 ತರಬೇತಿಗಳಲ್ಲಿ ಒಂದು ತರಬೇತಿಗೆ 10 ಜನರಂತೆ ವರ್ಷಕ್ಕೆ 480 ಜನ ಶಿಕ್ಷಕರು ತರಬೇತಿ ಪಡೆಯುತ್ತಿದ್ದಾರೆ.
ಇ) ದೈಹಿಕ ಶಿಕ್ಷಣ ಘಟಕ :
ಈ ಘಟಕದ ವತಿಯಿಂದ ಬ್ರಹ್ಮಕುಮಾರಿ ಸಂಸ್ಥೆಯ ಸಹಯೋಗದೊಂದಿಗೆ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರಿಗೆ ಯೋಗ ಶಿಕ್ಷಣ ಜ್ಞಾನವನ್ನು ನೀಡುವುದು, ಶಿಕ್ಷಕರಿಗೆ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಏಕಾಗ್ರತೆ ಮೂಡಿಸುವುದು, ಮತ್ತು ಆಧ್ಯಾತ್ಮಿಕ ಮೌಲ್ಯ ಶಿಕ್ಷಣ ತರಬೇತಿಗಳನ್ನು ನೀಡಲಾಗಿದೆ. ಇದಕ್ಕಾಗಿ ಈ ಸಾಲಿನಲ್ಲಿ ರೂ. 13.00 ಲಕ್ಷಗಳನ್ನು ಖರ್ಚು ಮಾಡಲಾಗಿದೆ. 
ದೈಹಿಕ ಶಿಕ್ಷಣ ಶಿಕ್ಷಕರ ಕೈಪಿಡಿ, ಮೌಲ್ಯ ಮಾಪನ ಸಂಚಿ ರಚನೆ ಹಾಗೂ ಪಠ್ಯ ಪುಸ್ತಕಗಳ ಭಾಷಾಂತರ ಕೆಲಸಗಳನ್ನು ನಿರ್ವಹಿಸಲಾಗಿದೆ. ಶಿಕ್ಷಕರ ಕೈಪಿಡಿ ಹಾಗೂ ಮೌಲ್ಯಮಾಪನ ಸಂಚಿಯಿಂದ ಶಿಕ್ಷಕರು ಹಿಕ ಶಿಕ್ಷಣವನ್ನು ಶಾಲೆಗಳಲ್ಲಿ ಪರಿಣಾಮಕಾರಿಯಾಗಿ ಬೋಧನೆ ಮಾಡುವ ಬಗ್ಗೆ ಹಾಗೂ ಮಾಡಿದ ಬೋಧನೆಯನ್ನು ಪರಿಣಾಮಕಾರಿಯಾಗಿ ಮೌಲ್ಯಮಾಪನ ಮಾಡುವ ಬಗ್ಗೆ ತಿಳುವಳಿಕೆ ಮೂಡಿಸುವಲ್ಲಿ ಪ್ರಯೋಜನಕಾರಿಯೆನಿಸಿದೆ
ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆ (NTSE) :
NTSE ಪರೀಕ್ಷೆಯು 2 ಹಂತದ್ದಾಗಿದ್ದು, ಮೊದಲನೇ ಹಂತದ ರಾಜ್ಯ ಮಟ್ಟದ ಪರೀಕ್ಷೆಯನ್ನು DSERT ವತಿಯಿಂದ ನಡೆಸಲಾಗುತ್ತದೆ. 2 ನೇ ಹಂತದ ಪರೀಕ್ಷೆಯನ್ನು NCERT ನವದೆಹಲಿಯವರು ನಡೆಸುತ್ತಾರೆ. ಈ ಪರೀಕ್ಷೆಯ ಮುಖ್ಯ ಉದ್ದೇಶವು ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪೋಷಿಸುವುದು ಹಾಗೂ ಅವರ ಮುಂದಿನ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿವೇತನ ನೀಡುವ ಮೂಲಕ ಅವರಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸುವುದು. 
ರಾಜ್ಯದಲ್ಲಿರುವ ಸರ್ಕಾರಿ ಅನುದಾನಿತ, ಅನುದಾನರಹಿತ ರಾಜ್ಯ ಹಾಗೂ ಕೇಂದ್ರ ಪಠ್ಯ ವಸ್ತು ಅನುಸರಿಸುತ್ತಿರುವ ಶಾಲೆಗಳಲ್ಲಿ 10 ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಮಾತ್ರ ಈ ಪರೀಕ್ಷೆಯನ್ನು ತೆಗೆದುಕೊಳ್ಳಬಹುದಾಗಿರುತ್ತದೆ. 2012-13 ನೇ ಸಾಲಿನ ಪ್ರಥಮ ಹಂತದ ಪರೀಕ್ಷೆಯು ರಾಜ್ಯದ 204 ಕೇಂದ್ರಗಳಲ್ಲಿ ನವಂಬರ್ 18 ರಂದು ನಡೆಯಿತು. ಇದರಲ್ಲಿ 53,863 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ ಆಯ್ಕೆಯಾಗಲಿರುವ 223 ವಿದ್ಯಾರ್ಥಿಗಳು ಮೇ ತಿಂಗಳಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಪರೀಕ್ಷೆಗೆ ಅರ್ಹರಾಗಲಿದ್ದಾರೆ. ರಾಷ್ರ್ಟ ಮಟ್ಟದ ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅವರ ಕಲಿಕೆಯ ಕೊನೆಯ ಹಂತದವರೆಗೆ ಮಾಸಿಕ ರೂ. 500/-ರಂತೆ (MHRD ಪುರಸ್ಕೃತ) ಹಾಗೂ ರಾಜ್ಯ ಮಟ್ಟದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಎರಡು ವರ್ಷಗಳಿಗೆ ರೂ. 2000/- ರಂತೆ (SWF & TBF ಪುರಸ್ಕೃತ) ವಿದ್ಯಾರ್ಥಿವೇತನ ನೀಡಿ ಪ್ರೋತ್ಸಾಹಿಸಲಾಗುವುದು. 
ನ್ಯಾಶನಲ್ ಮೀನ್ಸ್ -ಕಮ್- ಮೆರಿಟ್ ವಿದ್ಯಾರ್ಥಿವೇತನ ಪರೀಕ್ಷೆ (NMMS) :
ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ವತಿಯಿಂದ ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಸ್ಥಳೀಯ ಸಂಸ್ಥೆಗಳ ಪ್ರೌಢ ಶಾಲೆಗಳಲ್ಲಿ 8 ನೇ ತರಗತಿಯಲ್ಲಿ ಓದುತ್ತಿರುವ ಆಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾಸಿಕ ರೂ.500/- ರಂತೆ 4 ವರ್ಷಗಳ ಕಾಲ ವಿದ್ಯಾರ್ಥಿವೇತನ ನೀಡುವ ಯೋಜನೆಯನ್ನು ಅನುಷ್ಠಾನಗೊಳಿಸಿರುತ್ತಾರೆ. ರಾಜ್ಯದ 5534 ವಿದ್ಯಾರ್ಥಿಗಳು ಇದರ ಸದಿಪಯೋಗ ಪಡೆಯಬಹುದಾಗಿದೆ. 
ಈ ಯೋಜನೆಗೆ ಅರ್ಹರಾಗಲು ಪೋಷಕರ ವಾರ್ಷಿಕ ವರಮಾನ ರೂ.1,50,000ಗಳ ಮಿತಿಯೊಳಗಿರಬೇಕು ಹಾಗೂ ಎನ್.ಟಿ.ಎಸ್.ಇ. ಮಾದರಿಯಲ್ಲಿ ಜರುಗುವ ರಾಜ್ಯ ಮಟ್ಟದ ಪರೀಕ್ಷೆಯಲ್ಲಿ ಭಾಗವಹಿಸಿ ಅರ್ಹತೆಯನ್ನು ಗಳಿಸಬೇಕು. ಈ ಯೋಜನೆಯ ಮುಖ್ಯ ಉದ್ದೇಶ 8ನೇ ತರಗತಿಯ ನಂತರ ಶಾಲೆ ಬಿಡುವ ವಿದ್ಯಾರ್ಥಿಗಳ ಸಂಖ್ಯೆಯನ್ನು ತಡೆಯುವುದು ಹಾಗೂ 8 ರಿಂದ 12ನೇ ತರಗತಿಯವರೆಗೆ ನಿರಂತರ ವ್ಯಾಸಂಗ ಮುಂದುವರೆಯುವಂತೆ ಮಾಡುವುದಾಗಿದೆ. ಈ ಸಾಲಿನ ನವಂಬರ್ 18 ರಂದು ರಾಜ್ಯದ 204 ಕೇಂದ್ರಗಳಲ್ಲಿ ಪರೀಕ್ಷೆಯು ನಡೆದಿದ್ದು, 1,28,854 ವಿದ್ಯಾರ್ಥಿಗಳು ಭಾಗವಹಿಸಿ ಫಲಿತಾಂಶದ ನಿರೀಕ್ಷೆಯಲ್ಲಿರುತ್ತಾರೆ. ಇದರಲ್ಲಿ 5534 ವಿದ್ಯಾರ್ಥಿಗಳು ಆಯ್ಕೆಯಾಗಲಿದ್ದು, ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಪ್ರಗತಿಯಲ್ಲಿದೆ.
ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ
ಹಿಂದಿನ ಪುಟಮುಂದಿನ ಪುಟ
ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ (ಆರ್.ಎಂ.ಎಸ್.ಎ.) : ಪ್ರೌಢ ಶಾಲಾ ಶಿಕ್ಷಣ ಸಾರ್ವತ್ರೀಕರಣ ಹಿನ್ನೆಲೆಯಲ್ಲಿ 14 ರಿಂದ 18 ವರ್ಷ ವಯೋಮಿತಿಯಲ್ಲಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಗುಣಮಟ್ಟದ ಪ್ರೌಢ ಶಾಲಾ ಶಿಕ್ಷಣ ಲಭ್ಯವಾಗುವಂತೆ ಅವಶ್ಯ ಸೌಲಭ್ಯಗಳನ್ನು ಕಲ್ಪಿಸುವ ಕಾಣ್ಕೆಯನ್ನು ಹೊಂದಿರುವ ಕಾರ್ಯಕ್ರಮ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ. ಈ ಯೋಜನೆಯ ತರಬೇತಿ ಕೆಲಸವನ್ನು ಮಾತ್ರ ಡಿ.ಎಸ್.ಇ.ಆರ್.ಟಿ.ಮೂಲಕ ನಿರ್ವಹಿಸಲಾಗುತ್ತಿದೆ. ರಾಜ್ಯ ಮಟ್ಟದ ಪ್ರಧಾನ ಸಂಪನ್ಮೂಲ ವ್ಯಕ್ತಿಗಳ ತರಬೇತಿಯನ್ನು ಆಗಸ್ಟ್ 27, 2012 ರಿಂದ 21 ರ ನವಂಬರ್ 2012 ರವರೆಗೆ ಡಿ.ಎಸ್.ಇ.ಆರ್.ಟಿಯಲ್ಲಿ ನಡೆಸಲಾಗಿದೆ. ಗಣಿತ, ವಿಜ್ಞಾನ, ಸಾಮಾಜಿಕ ವಿಜ್ಞಾನ ಮತ್ತು ಇಂಗ್ಲೀಷ್ ವಿಷಯಗಳ 192 ಪಾಥಮಿಕ ಶಾಲಾ ಶಿಕ್ಷಕರು ಇದರಲ್ಲಿ ಪಾಲ್ಗೊಂಡಿದ್ದರು. ಈ ಯೋಜನೆಯಲ್ಲಿ ಎಸ್.ಟಿ.ಎಫ್. ತರಬೇತಿ, ಕಂಟೆಂಟ್ ಎನ್ರಿಚ್ಮೆಂಟ್ ಮತ್ತು ದೈಹಿಕ ಶಿಕ್ಷಕರ ತರಬೇತಿಗಳು ಇದ್ದು ಇವುಗಳನ್ನು ಜಿಲ್ಲಾ ಮಟ್ಟದಲ್ಲಿ ನೀಡಲಾಗಿದೆ. 29,914 ಎಸ್.ಡಿ.ಎಂ.ಸಿ ಸದಸ್ಯರು ಆರ್.ಎಂ.ಎಸ್.ಎ. ತರಬೇತಿಗಳ ಫಲಾನುಭವಿಗಳಾಗಿದ್ದಾರೆ. ಈ ಸಾಲಿನಲ್ಲಿ ಈ ಯೋಜನೆಯಡಿ ಸುಮಾರು ರೂ.3.86/- ಕೋಟಿ ಹಣವನ್ನು ವೆಚ್ಚ ಮಾಡಲಾಗಿದೆ. 




logoblog

Thanks for reading

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *