ಹಂಪಿ ಕನ್ನಡ ವಿಶ್ವವಿದ್ಯಾಲಯ ನೀಡುವ ನಾಡೋಜ ಗೌರವ ಪದವಿಗೆ ಡಾ.ಪಿ.ಎಸ್.ಶಂಕರ್, ಪ್ರೊ.ಎಂ.ಎಚ್.ಕೃಷ್ಣಯ್ಯ ಹಾಗೂ ಎಸ್.ಆರ್.ರಾಮಸ್ವಾಮಿ ಅವರು ಆಯ್ಕೆಯಾಗಿದ್ದಾರೆ. ಮಾರ್ಚ್ 6ರಂದು ನಾಡೋಜ ಪದವಿ ಪ್ರದಾನ ಮಾಡಲಾಗುತ್ತದೆ.
ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ ಹಿ.ಚಿ. ಬೋರಲಿಂಗಯ್ಯ ಅವರು ಈ ಕುರಿತು ಮಾಹಿತಿ ನೀಡಿದರು. ಕಲಬುರ್ಗಿಯ ವೈದ್ಯ ಸಾಹಿತಿ ಡಾ.ಪಿ.ಎಸ್. ಶಂಕರ್, ಸಾಹಿತಿ ಹಾಗೂ ಕಲಾ ವಿಮರ್ಶಕ ಪ್ರೊ.ಎಂ.ಎಚ್. ಕೃಷ್ಣಯ್ಯ, ಸಾಹಿತಿ ಮತ್ತು ಪತ್ರಕರ್ತ ಎಸ್.ಆರ್. ರಾಮಸ್ವಾಮಿ ಅವರಿಗೆ ನಾಡೋಜ ಪದವಿ ಪ್ರದಾನ ಮಾಡಲಾಗುತ್ತಿದೆ ಎಂದರು.
ಮಾರ್ಚ್ 6ರಂದು ಸಂಜೆ ವಿಶ್ವವಿದ್ಯಾಲಯದ 'ನವರಂಗ' ಬಯಲು ರಂಗಮಂದಿರದಲ್ಲಿ ನಡೆಯಲಿರುವ 23ನೇ ಘಟಿಕೋತ್ಸವ (ನುಡಿಹಬ್ಬ) ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ನಾಡೋಜ ಗೌರವವನ್ನು ಪ್ರದಾನ ಮಾಡಲಿದ್ದಾರೆ. [ನಾಡೋಜ ದರೋಜಿ ಈರಮ್ಮ ಅಸ್ತಂಗತ]
23ನೇ ಘಟಿಕೋತ್ಸವ ಸಮಾರಂಭದಲ್ಲಿ 56 ಪಿಎಚ್‌ಡಿ, 62 ಎಂ.ಫಿಲ್, 907 ಸ್ನಾತಕೋತ್ತರ, 381 ಪದವಿ ಸೇರಿದಂತೆ ಒಟ್ಟು 1,742 ಪದವಿಗಳನ್ನು ಪ್ರದಾನ ಮಾಡಲಾಗುತ್ತದೆ ಎಂದು ಪ್ರೊ ಹಿ.ಚಿ. ಬೋರಲಿಂಗಯ್ಯ ಅವರು ತಿಳಿಸಿದರು.
No comments:
Post a Comment