ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 ಕರ್ನಾಟಕ : ಅಕ್ರಮ-ಸಕ್ರಮ, | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Wednesday, March 04, 2015

ಕರ್ನಾಟಕ : ಅಕ್ರಮ-ಸಕ್ರಮ,

  Pundalik       Wednesday, March 04, 2015
ಕರ್ನಾಟಕ ಸರ್ಕಾರ ನಗರ ಪ್ರದೇಶಗಳಲ್ಲಿ ನಿಯಮ ಉಲ್ಲಂಘನೆ ಮಾಡಿ ನಿರ್ಮಿಸಿದ ಕಟ್ಟಡಗಳು ಮತ್ತು ಅಕ್ರಮ ನಿವೇಶನಗಳನ್ನು ಸಕ್ರಮಗೊಳಿಸಲು ಅಧಿಸೂಚನೆ ಹೊರಡಿಸಲಿದೆ. ಮಾರ್ಚ್ 23ರಿಂದ ಒಂದು ವರ್ಷಗಳ ಕಾಲ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸೇರಿದಂತೆ ರಾಜ್ಯದ ಎಲ್ಲ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿ­ಯಲ್ಲಿನ ಅಕ್ರಮ ಬಡಾವಣೆ­ಗಳಲ್ಲಿನ ನಿವೇಶನ ಮತ್ತು ನಿಯಮ ಉಲ್ಲಂಘಿಸಿ, ನಿರ್ಮಿಸಿದ ಕಟ್ಟಡಗಳ ಸಕ್ರಮಕ್ಕೆ ಅವಕಾಶವಿದೆ. [ಅಕ್ರಮ-ಸಕ್ರಮಕ್ಕೆ ಮಾ.23ರ ನಂತರ ಅರ್ಜಿ ಸಲ್ಲಿಸಿ]
ಯಾವುದು ಒಳಪಡುತ್ತದೆ : 2013ರ ಅಕ್ಟೋಬರ್‌ 19ಕ್ಕೂ ಮೊದಲು ನಿಯಮ ಉಲ್ಲಂಘಿಸಿ ಕಟ್ಟಿದ ಕಟ್ಟಡ ಮತ್ತು ಅಕ್ರಮ ಬಡಾವಣೆ­ಗಳಲ್ಲಿನ ನಿವೇಶನದ ಸಕ್ರಮಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಸಕ್ರಮಗೊಳಿಸಿಕೊಳ್ಳಲು 2013ರ ಅಕ್ಟೋಬರ್‌ 19ರಂದು ಇದ್ದ ಮಾರ್ಗ­ಸೂಚಿ ದರದ ಆಧಾರದ ಮೇಲೆಯೇ ದಂಡ ಪಾವತಿ ಮಾಡಬೇಕು. [ಅಕ್ರಮ-ಸಕ್ರಮ ವಿಧೇಯಕ, ರಾಜ್ಯಪಾಲರ ಒಪ್ಪಿಗೆ]
ಕರ್ನಾಟಕ : ಅಕ್ರಮ-ಸಕ್ರಮ, ನಿಮಗಿದು ತಿಳಿದಿರಲಿ
ಸ್ವಯಂ ಘೋಷಣೆ ಮಾಡಿಕೊಳ್ಳಬೇಕು : ಅರ್ಜಿ ಸಲ್ಲಿಸುವಾಗ ಎಷ್ಟು ನಿವೇಶನ ಮತ್ತು ಕಟ್ಟಡ ನಿರ್ಮಾಣ ಉಲ್ಲಂಘನೆ ಮಾಡಲಾಗಿದೆ ಎಂದು ಸ್ವಯಂ ಘೋಷಣೆ ಮಾಡಿಕೊಳ್ಳಬೇಕು. ಎಷ್ಟು ದೊಡ್ಡ ನಿವೇಶನವಿದ್ದರೂ ಸಕ್ರಮಕ್ಕೆ ಅರ್ಜಿ ಸಲ್ಲಿಸಬಹುದು. ಸ್ಥಳೀಯ ಆಡಳಿತ ಅರ್ಜಿ ಪರಿಶೀಲಿಸಿ ದಂಡದ ಮೊತ್ತ ನಿರ್ಧರಿಸಲಿದೆ.
ಎಷ್ಟು ಸಕ್ರಮವಾಗಲಿದೆ : ಸರ್ಕಾರ ವಸತಿ ಉದ್ದೇಶದ ಆಸ್ತಿಗಳಲ್ಲಿನ ಶೇ 50, ವಾಣಿಜ್ಯ ಉದ್ದೇಶದ ಆಸ್ತಿಯಲ್ಲಿನ ಶೇ 25ರಷ್ಟು ಉಲ್ಲಂಘನೆಯನ್ನು ಮಾತ್ರ ಸಕ್ರಮ ಮಾಡಲಿದೆ. ಉಳಿದಂತೆ ಹೆಚ್ಚು ಉಲ್ಲಂಘನೆ ಮಾಡಿದ್ದರೆ, ಕಠಿಣ ಕ್ರಮ ಎದುರಿಸುವುದು ಅನಿವಾರ್ಯ.
ಯಾವುದು ಸಕ್ರಮವಾಗುತ್ತದೆ : ಅನಧಿಕೃತ ಬಡಾವಣೆಗಳಲ್ಲಿ ನಿವೇಶನ, ಭೂ ಉಪಯೋಗಗಳ ಉಲ್ಲಂಘನೆ, ಕಟ್ಟಡದ ಸುತ್ತ ನಿರ್ದಿಷ್ಟ ಜಾಗ ಬಿಡದಿರುವುದು, ನೆಲ ವಿಸ್ತೀರ್ಣ ಪ್ರಮಾಣ ಉಲ್ಲಂಘನೆ ಪ್ರಕರಣಗಳು ಸಕ್ರಮವಾಗಲಿವೆ.
ಇವು ಸಕ್ರಮವಾಗೋಲ್ಲ : ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ, ಉದ್ಯಾನವನ, ಕ್ರೀಡಾಂಗಣ ನಿರ್ಮಿಸಲು ಕಾಯ್ದಿರಿಸಿದ ಜಾಗದಲ್ಲಿ ಕಟ್ಟಡ ನಿರ್ಮಾಣ, ನೆಲ ಮಹಡಿಯಲ್ಲಿ ಕಟ್ಟಡ ನಿರ್ಮಾಣ ಮಾಡಿದ್ದರೆ ಸಕ್ರಮ ಮಾಡಲು ಅವಕಾಶವಿಲ್ಲ.
ದಂಡ ಎಷ್ಟು ಕಟ್ಟಬೇಕು : ಚದರ ಮೀಟರ್‌ ಆಧಾರದಲ್ಲಿ ಸ್ಥಳೀಯ ಸಂಸ್ಥೆಗಳು ದಂಡ ಶುಲ್ಕವನ್ನು ನಿಗದಿ ಮಾಡುತ್ತವೆ. ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತ್ಯೇಕ ದಂಡ ಶುಲ್ಕವಿದ್ದು, ಉಳಿದ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗೆ ಪ್ರತ್ಯೇಕ ದಂಡ ಶುಲ್ಕವಿರಲಿದೆ.
ಸಕ್ರಮಕ್ಕೆ ದಂಡ ಶುಲ್ಕ
ಚದರ ಮೀಟರ್ಬಿಬಿಎಂಪಿಮಹಾನಗರ ಪಾಲಿಕೆಪಟ್ಟಣ ಪ್ರದೇಶ
6040 ರೂ.30 ರೂ.20 ರೂ.
60-120160 ರೂ.80 ರೂ.50 ರೂ.
120 ಕ್ಕಿಂತ ಅಧಿಕವಿದ್ದರೆ600 ರೂ.250 ರೂ.150 ರೂ.
ಅರ್ಜಿ ಎಲ್ಲಿ ಸಿಗುತ್ತದೆ : ಅಕ್ರಮ ಸಕ್ರಮಕ್ಕೆ ಸಲ್ಲಿಸುವ ಅರ್ಜಿಗಳು ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಲ್ಲಿ ಲಭ್ಯ. ಆನ್‌ಲೈನ್ ಮೂಲಕವೂ ಅರ್ಜಿಗಳನ್ನು ಪಡೆಯಬಹುದಾಗಿದೆ. ನಗರಾಭಿವೃದ್ಧಿ ಇಲಾಖೆ ವೆಬ್‌ಸೈಟ್‌ನಲ್ಲೂ ಅರ್ಜಿ ಲಭ್ಯವಿದೆ. 
logoblog

Thanks for reading ಕರ್ನಾಟಕ : ಅಕ್ರಮ-ಸಕ್ರಮ,

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *