ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Saturday, March 07, 2015

  Pundalik       Saturday, March 07, 2015
ಶಿಕ್ಷಕ ರಾಷ್ಟ್ರವನ್ನು ನಿರ್ಮಾಣ ಮಾಡುವ ಶಿಲ್ಪಿ. ಪೂಜಾರಿಯ ಪ್ರಭಾವದಿಂದ ಒಂದು ಕಲ್ಲು ಹೇಗೆ ಶಿವ ಸ್ವರೂಪವನ್ನು ಪಡೆಯುತ್ತದೆಯೋ ಅದೇ ರೀತಿ ಒಬ್ಬ ಶಿಕ್ಷಕನ ಪ್ರಭಾವದಿಂದ ಶಿಷ್ಯನು ಸುಶಿಕ್ಷಿತ ವ್ಯಕ್ತಿಯಾಗಿ ಮಾರ್ಪಾಡಾಗುತ್ತಾನೆ.ಇಂತಹ ಸುಶಿಕ್ಷಿತ ಸಮಾಜದಲ್ಲಿ ಗೌರವ ಸ್ಥಾನ ಮಾನಗಳು ಇರುವುದರಿಂದ ಶಿಕ್ಷಕನ ಮಹತ್ವ ಪ್ರಧಾನವಾದುದಾಗಿದೆ.
ಪ್ರಾಚೀನ ಕಾಲದಲ್ಲಿ ಶಿಕ್ಷಕನನ್ನು ಗುರು ಎಂದು ಕರೆಯುತ್ತಿದ್ದರು. ಅಂದಿನ ಗುರುವೇ ಇಂದಿನ ಶಿಕ್ಷಕ. ಶಿಕ್ಷಕ ಎಂದರೆ ಕಲಿಸುವವ ಅಥವಾ ತಿಳಿಸುವವ ಎಂದಾಗುತ್ತದೆ. ಇದಲ್ಲದೆ ಗುರು, ಭೋಧಕ, ಅಧ್ಯಾಪಕ ಉಪಾಧ್ಯಾಯ, ಆಚಾರ್ಯ ಎಂಬ ನಾನಾರ್ಥಗಳಿವೆ. ಅದುದರಿಂದ ಶಿಕ್ಷಕ ಉತ್ಸಾಹಿಯು, ದಯಾಮಯಿಯು, ಹೊಂದಿಕೊಳ್ಳುವ ಗುಣವುಳ್ಳವನು, ಸಹಕಾರಿಯು, ತಾಳ್ಮೆಯುಳ್ಳವನು, ಎಲ್ಲ ವಿಷಯವನ್ನು ತಿಳಿದವನು, ಜವಾಬ್ದಾರಿಯನ್ನು ಅರಿತವನು, ಸಮಯನಿಷ್ಟನು, ಪ್ರಾಮಾಣಿಕನು, ಧೈರ್ಯಶಾಲಿಯೂ ಆಗಿರಬೇಕು. ತನ್ನ ತನವನ್ನು ಬೆಳಸಿಕೊಂಡು ವಿಚಾರಲೋಚನೆ, ಪ್ರಯೋಗ, ಸಂಶೋಧನೆ, ವೀಕ್ಷಣೆಗಳಿಂದ ಜ್ಞಾನದ ದಿಗಂತವನ್ನು ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕನಾಗಿ ಹಿರಿದಾಗಿಸುತ್ತ ತನ್ನ ಶೀಲವಂತಿಕೆಯಿಂದ ವಿದ್ಯಾರ್ಥಿಗಳಲ್ಲಿ ನೈತಿಕ ಜಾಗೃತಿಯನ್ನುಂಟುಮಾಡುವವನೇ ಶಿಕ್ಷಕ.
ಶಿಕ್ಷಣ ಎಂಬ ಸೌರವ್ಯೂಹದಲ್ಲಿ ಶಿಕ್ಷಕ ಸುರ್ಯನಿದ್ದಂತೆ. ಆದರೆ ಪ್ರತಿಯೊಂದು ಜೀವರಾಶಿ ಬದುಕಲು ಸೂರ್ಯ ಹೇಗೆ ಅವಶ್ಯವೋ ಹಾಗೆಯೇ ಶಿಕ್ಷಕ ಮನುಕುಲಕ್ಕೆ ಚೇತನ ತುಂಬುವ ಸಂಜೀವಿನಿ. ಶಿಕ್ಷಕನು ಮಗುವನ್ನು ವಿಶ್ವಮಾನವನನ್ನಾಗಿ ಪರಿವತರ್ಿಸುತ್ತಾನೆ. ನವ ಸಮಾಜವನ್ನು ಸೃಷ್ಟಿಸುತ್ತಾನೆ. ಆದುದರಿಂದ TEACHER IS A REAL MAKER OF HISTORY ಎಂದು ಹೇಳುವುದು.
ಶಿಕ್ಷಕರು ವಿದ್ಯಾರ್ಥಿಗಳಿಗೆ ಮೌಲ್ಯಗಳನ್ನು ಬೆಳಸಿಕೊಳ್ಳುವಂತೆ ಮಾರ್ಗದರ್ಶನ ನೀಡಬೇಕು. ಕೆಟ್ಟದ್ದು ಯಾವುದು? ಒಳ್ಳೆಯದ್ದು ಯಾವುದು? ಎಂಬುದರ ಬಗ್ಗೆ ಶಿಕ್ಷಕರು ಮಕ್ಕಳಿಗೆ ಮಾರ್ಗದರ್ಶನ ನೀಡಬೇಕು. ಹೇಗೆ ಕಲಿಯಬೇಕು? ಕಲಿತದ್ದನ್ನು ಹೇಗೆ ಮನನ ಮತ್ತು ಸ್ಮರಣೆ ಮಾಡಬೇಕು? ಹೇಗೆ ಪರೀಕ್ಷೆ ಎದುರಿಸಬೇಕು? ಎಂಬುದರ ಬಗ್ಗೆ ಸುದೀರ್ಘ ಮಾರ್ಗದರ್ಶನ ನೀಡುವುದು ಶಿಕ್ಷಕನ ಕರ್ತವ್ಯವಾಗಿದೆ.
ಮಕ್ಕಳ ಪ್ರತಿಭೆಗಳನ್ನು ಗುರ್ತಿಸುವಂತಹ, ಹಾಗೂ ಮಕ್ಕಳ ಅಭಿವೃದ್ದಿಯನ್ನು ಶ್ರೇಯಸನ್ನು ಕಂಡು ಹೆಮ್ಮೆ ಪಡುವಂತಹ ಪ್ರೋತ್ಸಾಹಗಾರ ಶಿಕ್ಷಕ. ಅಷ್ಟೇ ಅಲ್ಲದೆ ವಿವಿಧ ಕಾರ್ಯಗಳ ಬಗ್ಗೆ ಮಾರ್ಗದರ್ಶನವನ್ನು ನೀಡುವಂತಹ ನಿರ್ದೇಶಕ. ಶಾಲಾ-ಅಭಿವೃದ್ಧಿ ಕಾರ್ಯದಲ್ಲಿ ಭಾಗವಹಿಸುವಂತಹ ಸಮಾಜದ ಅವಶ್ಯಕತೆಗಳನ್ನು ಪೂರೈಸುವಂತಹ ಮಧ್ಯವರ್ತಿ. ಶಿಕ್ಷಕನು ಶಿಕ್ಷಣ ಕ್ಷೇತ್ರದ ಮಹಾನ್ ಸಾಧಕ.
ಶಿಕ್ಷಕ ಮಕ್ಕಳು ಮತ್ತು ಸಮುದಾಯದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುವಂತಹ ಸಮಾಜದ ಅತಿ ದೊಡ್ಡ ನೆಂಟ. ಸಮಾಜ ಸೇವೆಯಲ್ಲಿ ನಿರತನಾದ ಸಮಾಜ ಸೇವಕ. ಶಿಕ್ಷಕನು ಹಲವು ಕೌಶಲ್ಯಗಳುಳ್ಳ ವ್ಯಕ್ತಿ ಇವನು ಮಾರ್ಗದರ್ಶಕನಾಗಿ, ತತ್ವಜ್ಞಾನಿಯಾಗಿ, ಆಡಳಿತಗಾರನಾಗಿ,ಭೋಧಕನಾಗಿ ಸಮಾಜ ಸೇವಕನಾಗಿ ಸ್ನೇಹಿತನಾಗಿ, ಮಾರ್ಗದರ್ಶಕನಾಗಿ, ಮೇಲ್ವಿಚಾರಕನಾಗಿಯೂ ತನ್ನ ವಿವಿಧ ಪಾತ್ರವನ್ನೂ ನಿರ್ವಹಿಸುತ್ತಾನೆ.
ಅರ್ಚಕನು ಯಾವ ರೀತಿ ತನ್ನ ಪ್ರಭಾವದಿಂದ ಶಿಲೆಯನ್ನು ದೇವರನ್ನಾಗಿಸುತ್ತಾನೆಯೋ, ಅದೆ ರೀತಿ ಶಿಕ್ಷಕ ತನ್ನ ಪರಿಶ್ರಮದಿಂದ ಅಂಧಕಾರ ತುಂಬಿದ ಮಕ್ಕಳನ್ನು ಬುದ್ಧಿವಂತರನ್ನಾಗಿಸುತ್ತಾನೆ. ಆದ್ದರಿಂದಲೇ ಪುರಂದರದಾಸರು ತಮ್ಮ ಕೀರ್ತನೆಯಲ್ಲಿ ಹೇಳಿದ್ದಾರೆ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕ್ತಿ. ಆದುದರಿಂದ ಶಿಕ್ಷಕನನ್ನು ಸುಶಿಕ್ಷಿತ ಸಮಾಜದ ಕರ್ತೃ ಎನ್ನಬಹುದು.
ಲಿಯಲು ಉತ್ಸಾಹ ಉಳ್ಳವರೇ ಕಲಿಸಲು ಯೋಗ್ಯರು' ರಾಮಕೃಷ್ಣ ಆಶ್ರಮದ ಸ್ವಾಮಿ ಪುರುಷೋತ್ತಮಾನಂದರು ವಿದ್ಯೆಯ ವೈಭವವನ್ನು, ಮಹತ್ವನ್ನು ಕುರಿತು ಬರೆದ ಹೊತ್ತಿಗೆಯ ಸಾಲುಗಳಿವು. ಹೌದು, ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಯೋಗ್ಯ ಗುರುಗಳನ್ನು ಹುಡುಕುವುದೇ ಕಷ್ಟ. ಶಿಕ್ಷಕರಿಗೆ ಶಿಕ್ಷಣದ ಬಗ್ಗೆ ಒಲವು, ವಿದ್ಯಾರ್ಥಿಗಳಿಗೆ ಓದಿನ ಬಗ್ಗೆ ಕಾಳಜಿ ಕಡಿಮೆಯಾಗಿರುವುದು ಕಂಡು ಬರುತ್ತದೆ.
ಕೇವಲ ಪದವಿ ಸಂಪಾದನೆಗಾಗಿ ಓದುವ ವಿದ್ಯಾರ್ಥಿಗಳು, ಹಣದ ಮೋಹಕ್ಕೋ ಅಥವಾ ಒಣಪ್ರತಿಷ್ಠೆಗಾಗಿಯೊ ಪಾಠ ಮಾಡುವ ಶಿಕ್ಷಕರು ಹೆಚ್ಚಾಗಿದ್ದಾರೆ. ಇವೆಲ್ಲದರ ನಡುವೆ ಬದಲಾವಣೆಯೇ ಕಾಣದ ಪಠ್ಯಕ್ರಮ. ಒಟ್ಟಿನಲ್ಲಿ ಭಾರತೀಯ ಶಿಕ್ಷಣ ವ್ಯವಸ್ಥೆ ಅಧೋಗತಿ ಕಾಣುತ್ತಿರುವುದಂತೂ ಸತ್ಯ.
ಹಳಸಿದ ಗುರು-ಶಿಷ್ಯರ ಸಂಬಂಧ: ದಿನ ಬೆಳಗಾದರೆ ವಿದ್ಯಾರ್ಥಿ ಸಂಘಟನೆಗಳಿಂದ ಸರ್ಕಾರದ ವಿರುದ್ಧ ಧರಣಿ. ಶಿಕ್ಷಕರಿಂದಲೂ ನಾನಾ ಹಕ್ಕುಗಳಿಗಾಗಿ ಪ್ರತಿಭಟನೆಗಳನ್ನು ಕಾಣುತ್ತಿರುತ್ತೇವೆ. ಶಿಕ್ಷಣವು ಇಂದು ವ್ಯಾಪರೀಕರಣವಾಗಿ ಮಾರ್ಪಟ್ಟಿದೆ. ಹಣವಂತರಿಗೆ ಸುಲಭವಾಗಿ ಸಿಗುವ ಸೀಟುಗಳು, ಓದಿನಲ್ಲಿ ಯಶಸ್ಸು ಗಳಿಸಿದ ವಿದ್ಯಾರ್ಥಿಗೆ ಸಿಗದಂತಾಗಿದೆ. ತಮ್ಮ ಅಗತ್ಯಕ್ಕೆ ತಕ್ಕಂತೆ ಮೀಸಲಾತಿಯನ್ನು ಸೃಷ್ಟಿಸುವ ಸರ್ಕಾರ. ಭಾರತದ ಇತಿಹಾಸವನ್ನೇ ಅಳಿಸಿ, ಹೊಸ ರೀತಿಯ ಇತಿಹಾಸ ರಚಿಸಿ ಅದನ್ನೇ ಸತ್ಯವೆಂದು ಪಠ್ಯಕ್ರಮದಲ್ಲಿ ಅಳವಡಿಸುವ ಇಲಾಖೆ ಇವರೆಲ್ಲರ ನಡುವೆ ಕತ್ತರಿಯ ನಡುವೆ ಸಿಕ್ಕ ಅಡಿಕೆಯಂತಾಗಿದೆ ವಿದ್ಯೆ.
ಪರಿಸ್ಥಿತಿ ಹೀಗಿರುವಾಗ ಗುರು-ಶಿಷ್ಯರ ಸಂಬಂಧ ಹೇಗೆ ವೃದ್ಧಿಸುತ್ತದೆ ಹೇಳಿ. ಹಿಂದೆಲ್ಲಾ ಹೀಗಿರಲಿಲ್ಲ ಗುರುಶಿಷ್ಯರ ಸಂಬಂಧ. ವಿಶ್ವದಲ್ಲೇ ಭಾರತದ ಶಿಕ್ಷಣ ವ್ಯವಸ್ಥೆ ಶ್ರೇಷ್ಠಮಟ್ಟದಲ್ಲಿತ್ತು. ಬಂಗಾಳ, ನಲಂದಾ, ಕಂಚಿಯಲ್ಲಿ ಅಷ್ಟೇ ಏಕೆ ಧಾರವಾಡ, ಬಿಜಾಪುರ ಹಾಗೂ ಅರಸೀಕೆರೆಯೂ ಕೂಡ ಪ್ರಮುಖ ವಿದ್ಯಾಕೇಂದ್ರವಾಗಿತ್ತೆಂದರೆ ನಿಮಗೆ ಆಶ್ಚರ್ಯವಾಗಬಹುದು.
ಗುರುಕುಲ ಪದ್ಧತಿ ಪುನರುತ್ಥಾನ:ನಾನಾ ವಿಷಯಗಳಲ್ಲಿ ವಿಶ್ವಮಟ್ಟದಲ್ಲಿ ಬೆಳಗಬಲ್ಲ ಶ್ರೇಷ್ಠ ವಿದ್ವಾಂಸರು ನಮ್ಮಲ್ಲಿದ್ದರು. ಅವರೆಲ್ಲರ ಸಾಧನೆ ಹಿಂದೆ ಗುರುಗಳ ಮಾರ್ಗದರ್ಶನ ಇರುವುದನ್ನು ಕಾಣಬಹುದು. ಆದರೆ ಅವರ ಸಂಶೋಧನೆಗಳು ಬರೀ ಕಡತದಲ್ಲಿ ಕೊಳೆಯುವಂತಾಗಿದ್ದು ವಿಪರ್ಯಾಸ. ಎಲ್ಲಾ ಕ್ಷೇತ್ರದಲ್ಲಿ ಅನೇಕ ಸಂಶೋಧನೆಗಳನ್ನು ಮಾಡಿದ್ದ ಭಾರತೀಯರಿಗೆ ಕಡೆಗೆ ವಿಶ್ವಮಟ್ಟದಲ್ಲಿ ಸಿಗಿದ್ದು 'ಸೊನ್ನೆ'ಯೇ.
ಹಿಂದೆ ಗುರುಕುಲ ಪದ್ಧತಿಯಲ್ಲಿ ಗುರುಶಿಷ್ಯರು ಒಂದೆಡೆ ನೆಲೆಸಿ, ಒಂದೇ ಬಗೆಯ ಆಹಾರ ಸೇವಿಸಿ, ಸಮವಸ್ತ್ರ ಧರಿಸಿಕೊಳ್ಳುತ್ತಿದ್ದರು. ಮುಂಜಾನೆಯಿಂದ ಮುಸ್ಸಂಜೆಯವರೆಗೂ ಕಟ್ಟುನಿಟ್ಟಿನ ಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ಬಗೆಯ ವಿದ್ಯೆಯನ್ನು ಕಲಿಯುವ ಅವಕಾಶವಿತ್ತು.
ಜಾತಿ ಭೇದವಿಲ್ಲದ ವಾತಾವರಣದಲ್ಲಿ, ಪ್ರಕೃತಿಯ ಮಡಿಲಲ್ಲಿ ಸದ್ವಿದ್ಯೆಯನ್ನು ಪಡೆಯಬಹುದಾಗಿತ್ತು. ಈಗ ಈ ರೀತಿಯ ವಾತಾವರಣ ನವೋದಯ ಶಾಲೆಯಲ್ಲಿ, ಬೆಳೆಗೆರೆ ಕೃಷ್ಣಶಾಸ್ತ್ರಿಗಳ ಶಾಲೆಯಲ್ಲಿ, ಕೆಲವು ಮಿಲಿಟರಿ ಶಾಲೆಗಳಲ್ಲಿ ಹಾಗೂ ನಗರದ ಕೆಲ ವಸತಿ ಶಾಲೆಯಲ್ಲಿ ಮಾತ್ರ ನೋಡಬಹುದಾಗಿದೆ. ಶಿಕ್ಷಕರ ಮೇಲಿನ ಅಕ್ಕರೆಗಿಂತ ಶಿಕ್ಷಕರ ಶಿಕ್ಷೆಗೆ ಹೆದರಿ ಅವರಿಗೆ ಗೌರವ ಕೊಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
'ಶ್ರದ್ಧಾವಾನ್ ಲಭತೇ ಜ್ಞಾನಂ' ಎಂಬ ಮಾತಿದೆ. ಶ್ರದ್ಧೆಯಿಂದ ಕಲಿಯುವವರಿಗೆ ಯಾವ ವಿದ್ಯೇನೂ ಕಷ್ಟ ಅನಿಸದು. ಏಕಲವ್ಯನಂತಹ ಕೆಲವರು ಮಾತ್ರ ಗುರುವನ್ನು ಕಲ್ಪಿಸಿಕೊಂಡು ಶ್ರದ್ಧಾಪೂರ್ವಕವಾಗಿ ವಿದ್ಯೆಯನ್ನು ಗಳಿಸಬಲ್ಲರು. ಸತ್ಯಕಾಮ ಜಾಬಲನಂತಹ ಶ್ರದ್ಧೆವುಳ್ಳವರಿಗೆ ಪ್ರಕೃತಿಯೇ ಗುರುವಾಗಬಲ್ಲದು. ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಏಕಾಗ್ರತೆಯ ಜೊತೆಗೆ ಸ್ವಂತ ಪರಿಶ್ರಮದ ಅಗತ್ಯವಿರುತ್ತದೆ.
ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ
ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀಗುರುವೆ ನಮ:
-ಜ್ಞಾನವೆಂಬ ಸಲಾಕೆಯಿಂದ, ಶಿಷ್ಯರ ಅಜ್ಞಾನವೆಂಬ ಅಹಂಕಾರವನ್ನೂ ತೊಡೆದು
ಜ್ಞಾನಚಕ್ಷುವನ್ನು ತೆರೆಸಿ ಕಾಪಾಡುವ ಗುರುವಿಗೆ ನಮಸ್ಕಾರ ನಮ್ಮಲ್ಲಿಡಗಿರಬಹುದಾದ ಜ್ಞಾನವೆಂಬ ಬೆಳಕನ್ನು ಹೊರಜಗತ್ತಿಗೆ ತೋರುವ ಕೆಲಸವಾಗಬೇಕಾಗಿದೆ. ನಮ್ಮಲ್ಲಿರುವ ಶಕ್ತಿಯನ್ನು ನಮಗರಿವಾಗುವಂತೆ ಮಾಡುವುದೇ ಗುರುವಿನ ಕಾಯಕ.

ದಾಸರು ಹೇಳಿದ ಹಾಗೆ 'ಗುರುವಿನ ಗುಲಾಮನಾಗುವ ತನಕ ದೊರೆಯಣ್ಣ ಮುಕುತಿ' ಗುರುವಿನ ಸಾಮೀಪ್ಯದಿಂದ ಕಲಿಯಬೇಕಾದ್ದು ಸಾಕಷ್ಟಿದೆ. ಅವತಾರ ಪುರುಷರಾದ ಶ್ರೀಕೃಷ್ಣ, ಶ್ರೀರಾಮಚಂದ್ರರೇ ಗುರುವಿನ ಮೊರೆ ಹೊಕ್ಕರು. ಸಾಂದೀಪನಿ ಮುನಿಗಳ ಹತ್ತಿರ ನೆಲೆಸಿ ಕೃಷ್ಣ ವಿದ್ಯೆಯನ್ನು ಕಲಿತರೆ. ರಾಮ ವಸಿಷ್ಟರ ಪ್ರಿಯ ಶಿಷ್ಯನಾಗಿದ್ದ.
ಜ್ಞಾನ ಬೋಧನೆ ಯಾರಿಂದಾದರೂ ಅದನ್ನು ಸ್ವೀಕರಿಸುವ ಮನೋಭಾವ ಎಲ್ಲರಲ್ಲೂ ಇದ್ದರೆ ಒಳಿತು
'ವಿದ್ಯೆಯಂ ಕಲಿಸಿದಾತಂ ಗುರು' ಎನ್ನುವಾಗ ಜ್ಞಾನ ಬೋಧನೆ ಯಾರಿಂದಾದರೂ ಅದನ್ನು ಸ್ವೀಕರಿಸುವ ಮನೋಭಾವ ಎಲ್ಲರಲ್ಲೂ ಇದ್ದರೆ ಒಳಿತು. ಶಂಕರಾಚಾರ್ಯರಿಗೆ ಒಮ್ಮೆ ಚಂಡಾಲನೋರ್ವನಿಂದ ಉಪದೇಶವಾಯಿತಂತೆ (ಚಂಡಾಲ ರೂಪದಲ್ಲಿ ಶಿವನೇ ಬಂದಿದ್ದ ಅನ್ನೋದು ಇರಲಿ) ಚಂಡಾಲನು ಮಾತುಗಳನ್ನು ನಾನೇಕೆ ಕೇಳಬೇಕು ಎಂದು ಶಂಕರರು ನಿರ್ಧರಿಸಬಹುದಾಗಿತ್ತು. ಆದರೆ ಚಂಡಾಲನ ಮಾತುಗಳನ್ನು ಆಲಿಸುವ ವ್ಯವಧಾನ ಹಾಗೂ ಪರರ ಬಗ್ಗೆ ಗೌರವ ನೀಡುವ ಸಂಸ್ಕಾರವಿತ್ತು ಅವರಲ್ಲಿ.
ಹೌದು, ಇಂದು ನಮ್ಮಲ್ಲಿ ಕಮ್ಮಿಯಾಗಿರುವುದು ಇದೇ. ಗುರುಗಳ ಮಾತನ್ನು ಆಲಿಸದ ವಿದ್ಯಾರ್ಥಿವೃಂದ. ತಾನು ಹೇಳಿದ್ದೇ ಸರಿಯೆಂಬ ಗರ್ವದಿ ಮೆರೆವ ಕೆಲ ಶಿಕ್ಷಕರು. ಶಿಕ್ಷಕ ಹಾಗೂ ವಿದ್ಯಾರ್ಥಿಗಳ ನಡುವೆ ಪರಸ್ಪರ ಗೌರವ ಕಡಿಮೆಯಾಗಿದೆ ಎಂದರೆ ಅದರಲ್ಲಿ ಅತಿಶಯೋಕ್ತಿ ಇಲ್ಲವೆನ್ನಿಸುತ್ತದೆ. ಶಿಷ್ಯಂದಿರು ಗುರು ಹೇಳಿಕೊಟ್ಟದ್ದನ್ನು ಸರಿಯಾಗಿ ಆಲಿಸಿ, ನಂತರ ಅದನ್ನು ಮನನ ಮಾಡಿ ಅದರ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯೋಗ್ಯವಾದ ಗುರುವನ್ನು ಆರಿಸುವ ಹಕ್ಕು ಶಿಷ್ಯನಿಗೆ ಇರುತ್ತದೆಯಾದರೂ ಗುರುಗಳಲ್ಲಿ ಶ್ರೇಷ್ಠ, ಕನಿಷ್ಠ ಎಂಬ ಭೇದ ಸಲ್ಲದು.
ಗುರುಗಳ ಮಹತ್ವ ಕಡಿಮೆ?: ಇಂದಿನ ವೇಗದ ಯುಗದ ವ್ಯವಸ್ಥೆಯಿಂದ ಗುರುಗಳ ಮಹತ್ವ ಕಡಿಮೆಯಾಗಿದೆ ಎಂದರೆ ನಿಮಗೆ ಅಚ್ಚರಿಯಾಗಬಹುದು. ಶಿಕ್ಷಕರನ್ನೇ ನೋಡದೆ ಆನ್‌ಲೈನ್ ಶಿಕ್ಷಣ, ವರ್ಚ್ಯುಯಲ್ ಶಿಕ್ಷಣ ವ್ಯವಸ್ಥೆ ಪ್ರಚಲಿತವಾಗುತ್ತಿದೆ. ಎಲ್ಲಾ ಕ್ಷೇತ್ರದಲ್ಲೂ ಹೊಸ ಹೊಸ ಆವಿಷ್ಕಾರಗಳಾಗುತ್ತಿವೆ. ವಿದ್ಯಾರ್ಥಿಗಳು ತಮ್ಮ ಹೊಸ ಸಂಶೋಧನೆಗಳನ್ನು ರಚನಾತ್ಮಕ ಕೆಲಸಗಳಿಗೆ ಉಪಯೋಗಿಸದೇ ವಿಧ್ವಂಸಕ ಕೃತ್ಯಗಳಿಗೆ ಪ್ರಯೋಗಿಸುತ್ತಿರುವುದು ಆತಂಕಕಾರಿ ವಿಷಯ.
ಉಗ್ರರು, ನಕ್ಸಲೀಯರ ಹಿಂದೆ ಪ್ರಜ್ಞಾವಂತರಾದ ಎಷ್ಟೊ ವಿದ್ಯಾರ್ಥಿಗಳು ಇದ್ದಾರೆಂಬುದು ವಿಷಾದದ ಸಂಗತಿ. ಈ ರೀತಿಯ ದಾರಿ ತಪ್ಪಿದ ಮಕ್ಕಳಿಗೆ ಯೋಗ್ಯ ಗುರುವಿನಿಂದ ಸರಿಯಾದ ಮಾರ್ಗದರ್ಶನ ದೊರೆಯದೆ ಇರುವುದೇ ಕಾರಣವೆನಿಸುತ್ತದೆ. ಇನ್ನೊಂದೆಡೆ ಶಿಕ್ಷಕರ ಕೊರತೆಯಿಂದ ಕೂಡಿದ ಗ್ರಾಮೀಣ ಶಾಲೆಗಳು, ಮೂಲಭೂತ ಸೌಲಭ್ಯವನ್ನು ಕಾಣದ ಅನೇಕ ಶಾಲೆಗಳು ಇವೆ. ಆದರೆ ಎಲ್ಲೂ ಶಿಕ್ಷಕರು ಅಧಿಕ ಸಂಖ್ಯೆಯಿಂದ ಕೂಡಿದ ಶಾಲೆಗಳನ್ನು ಕಾಣೆ.
ವಿದ್ಯೆ ನೀಡಿದ ಗುರುವಿಗೆ ಪ್ರತಿಯಾಗಿ ಗುರುದಕ್ಷಿಣೆ ನೀಡುವ ಕಾಯಕ ಹಿಂದಿನಿಂದ ಬಂದಿದೆ. ಆದರೆ ಹಿಂದೆಲ್ಲಾ ಗುರುವಿಗೆ ಗೌರವಪೂರ್ವಕವಾಗಿ ಗುರುದಕ್ಷಿಣೆ ಸಲ್ಲುತ್ತಿತ್ತು. ಕಾಣದ ಗುರುವು ತನ್ನೆಡೆಗೆ ಬಂದು ಗುರುದಕ್ಷಿಣೆ ಕೇಳಿದಾಗ ಕೈಬೆರಳನಿತ್ತ ಏಕಲವ್ಯನ ಕತೆ ಜನಜನಿತ. ಗುರುಗಳಲ್ಲಿ ಹೇಗೆ ಅರ್ಪಣಾ ಮನೋಭಾವ ಅಗತ್ಯವೋ ಹಾಗೆ ಶಿಷ್ಯರಲ್ಲಿ ಗುರುವನ್ನು ಸತ್ಕರಿಸುವ ಮನಸ್ಸಿರಬೇಕು. ಸತ್ಕಾರವೆಂದರೆ ದ್ರವ್ಯರೂಪದಲ್ಲಿ ಸಂತೋಷಪಡಿಸುವುದಷ್ಟೇ ಅಲ್ಲ. ವರ್ಷಕ್ಕೊಂದು ದಿನವಾದರೂ (ಗುರುವಿನ ಹುಟ್ಟುಹಬ್ಬದ ದಿನವಾದರೆ ಇನ್ನು ಚೆನ್ನ) ಗುರುವಿಗೆ ನಮ್ಮ ನಮನ ಸಲ್ಲಿಸುವ ಕಾಯಕವನ್ನು ಇಟ್ಟುಕೊಂಡರೆ ಎಷ್ಟು ಚೆನ್ನಾಗಿರುತ್ತದೆ ಅಲ್ಲವೇ.
ಸಾವಿರಾರು ಶಿಷ್ಯರಿದ್ದರೂ ಗುರು ಮಾತ್ರ ಒಬ್ಬನೇ. ಶಿಷ್ಯರ ಏಳಿಗೆಯನ್ನು ಸದಾ ಬಯಸುವ ಗುರುಗಳನ್ನು ಒಮ್ಮೆಯೂ ನೆನಪಿಸಿಕೊಳ್ಳದವನು ಮನುಷ್ಯನೇ ಅಲ್ಲಾ ಬಿಡಿ. ಭಾರತದಲ್ಲಿ ಗುರುವನ್ನು ನೆನಪಿಕೊಳ್ಳುವಂತೆ ಮಾಡಿದ ಕೀರ್ತಿ ರಾಷ್ಟ್ರಾಧ್ಯಕ್ಷರಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣರಿಗೆ ಸಲ್ಲುತ್ತದೆ. ಉದಾರ ಮನೋಭಾವನೆಯಿಂದ ತಾವು ಹುಟ್ಟಿದ ದಿನವನ್ನು (ಸೆಪ್ಟೆಂಬರ್ 5) ಶಿಕ್ಷಕರ ದಿನವೆಂದು ಆಚರಿಸಲು ತಮ್ಮ ಶಿಷ್ಯ ವೃಂದಕ್ಕೆ ಕರೆಯನ್ನಿತ್ತರು. ಈಗಿನ ರಾಷ್ಟ್ರಪತಿ ಅಬ್ದುಲ್ ಕಲಾಮ್ ರವರು ಕೂಡ ತಮ್ಮ ಗುರುವಾದ ಶಿವಶಂಕರ್ ಅಯ್ಯರ್ ಅವರನ್ನು ನೆನಪಿಕೊಳ್ಳದ ವೇದಿಕೆ ಇಲ್ಲವೆನ್ನಬಹುದು. ತಾವು ಹೋದೆಡೆಯೆಲ್ಲ ಮಕ್ಕಳಿಗೆ ವಿದ್ಯೆಯ ಮಹತ್ವ, ಗುರುವಿನ ಅಗತ್ಯತೆಯ ಬಗ್ಗೆ ತಿಳಿಹೇಳುತ್ತಿರುತ್ತಾರೆ.
ಶಾಲಾಕಾಲೇಜಿನ ದಿನಗಳು ಮುಗಿದ ಮೇಲೆ ವಿದ್ಯಾರ್ಥಿ/ನಿಯರು ಶಿಕ್ಷಕರನ್ನು ಮರೆಯುವುದು ಸಹಜ. ಇಂದು ಮಾಧ್ಯಮಗಳಲ್ಲಿ ಶಿಕ್ಷಕರ ಮಹತ್ವವನ್ನು ತೋರಿಸುವ ಕಾರ್ಯಕ್ರಮಗಳು ಕಾಣೆಯಾಗಿವೆ. ಜೊತೆಗೆ ಚಲನಚಿತ್ರಗಳಲ್ಲಿ ಶಿಕ್ಷಕರನ್ನು ಸರ್ಕಸ್‌ನ ಬಫೂನ್‌ಗಳಂತೆ ಚಿತ್ರಿಸುತ್ತಿರುವುದು ವಿಷಾದನೀಯ ಸಂಗತಿ. ಗುರು ಶಿಷ್ಯರ ನಡುವಿನ ಅಂತರವನ್ನು ಹೆಚ್ಚಿಸುವಲ್ಲಿ ಇಂತಹ ಕೆಟ್ಟ ಅಭಿರುಚಿಯ ಚಿತ್ರಗಳು ಪ್ರಮುಖ ಪಾತ್ರವಹಿಸುತ್ತವೆಂದರೆ ತಪ್ಪಾಗಲಾರದು.
ಭಾರತದಲ್ಲಿ ಗುರು ಶಿಷ್ಯರ ಪರಂಪರೆಯ ದೊಡ್ಡ ಪಟ್ಟಿಯೇ ಇದೆ. ಯಮಧರ್ಮ-ನಚೀಕೇತ, ದ್ರೋಣಾಚಾರ್ಯ- ಆರ್ಜುನ, ಕೃಷ್ಣ-ಅರ್ಜುನ, ಚಾಣಕ್ಯ- ಚಂದ್ರಗುಪ್ತ, ರಾಮಕೃಷ್ಣ ಪರಮಹಂಸ-ಸ್ವಾಮಿ ವಿವೇಕಾನಂದ, ಗೋಪಾಲಕೃಷ್ಣಗೋಖಲೆ-ಮಹಾತ್ಮ ಗಾಂಧಿ, ಟಿ.ಎಸ್. ವೆಂಕಣ್ಣಯ್ಯ-ಕುವೆಂಪು ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
'ತಾಯಿಯೇ ಮೊದಲ ಗುರು' ಎನ್ನುತ್ತಾರೆ. ಇದು ನಿಜ ಕೂಡ. ಮಗುವಿಗೆ ಮೊದಲು ಕೇಳಿಸುವುದು ತನ್ನಮ್ಮನ ಮಾತುಗಳೇ. ತಾಯಿಯಾದವಳು ಮಕ್ಕಳನ್ನು ಸನ್ಮಾರ್ಗದಲ್ಲಿ ಬೆಳೆಸಿದರೆ ಗುರುವಿನ ಕೆಲಸಕ್ಕೆ ಸಹಕಾರಿಯಾಗುತ್ತದೆ. ತಾಯಿಯ ಮಮತೆಯನ್ನು, ತಂದೆಯಂತೆ ಜವಾಬ್ದಾರಿಯಿಂದ ಪೋಷಣೆ ಮಾಡಬಲ್ಲವನೇ ನಿಜವಾದ ಗುರು. ಗುರುವಾದವನು ತನ್ನ ಶಿಷ್ಯನಿಗೆ ತಂದೆ-ತಾಯಿ ಎರಡೂ ಆಗಬಲ್ಲ. ಒಳ್ಳೆಯ ಮಾರ್ಗದಲ್ಲಿ ನಡೆಯುವವರು, ನಡೆದವರು, ನಡೆಯಬಯಸುವವರು ಇನ್ನಾದರೂ ತಮ್ಮ ಮಾರ್ಗದರ್ಶಕರನ್ನು ಮರೆಯದೇ ನೆನಪಿಸಿಕೊಳ್ಳುವುದು ಅಗತ್ಯ. 'ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ನಮ್ಮನ್ನು ಪೋಷಿಸಿದವರನ್ನು ಒಮ್ಮೆ ಹಿಂದುರಿಗಿ ನೋಡಿದಾಗಲೇ ತೃಪ್ತಿ ದೊರೆಯುವುದು.'
ನೀವು ನಿಮ್ಮ ಕಾಲೇಜಿನ ಅಥವಾ ಶಾಲೆಯ ಅದರಲ್ಲೂ ಪ್ರಾಥಮಿಕ ಶಾಲೆಯ ಗುರುಗಳನ್ನು ಭೇಟಿ ಮಾಡಿ ಮಾತನಾಡಿಸಿ. ಅವರಿಗೆ ನಿಮ್ಮ ನೋಡಿದಾಗ ಆಗುವ ಸಂತೋಷದ ಪರಿಯನ್ನು ನೋಡಿ ವಿಸ್ಮಿತರಾಗಿರಿ.... ಪ್ರಯತ್ನಿಸಿ.ಬಾಗಲಕೋಟ : ಶಿಕ್ಷಕ ವೃತ್ತಿ ಹೊಟ್ಟೆಪಾಡು ಅಲ್ಲ, ದೇಶ ಭಾವಿ ನಾಯಕರನ್ನು ನಿರ್ಮಿಸುವ ಹೊಣೆಗಾರಿಕೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅಭಿಪ್ರಾಯಪಟ್ಟರು.

ನವನಗರದ ಕಲಾ ಭವನದಲ್ಲಿ ಬುಧವಾರ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮ ದಿನಾಚರಣೆ ನಿಮಿತ್ತ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಜಾತೀಯತೆ, ಅಸ್ಪೃಶ್ಯತೆ ಸೇರಿದಂತೆ ನಾನಾ ಸಮಸ್ಯೆಗಳಿವೆ. ಇವುಗಳು ನಿವಾರಣೆಯಾಗಬೇಕಾದರೆ ಉತ್ತಮ ವಿದ್ಯೆ ನೀಡುವುದರಿಂದ ಮಾತ್ರ ಸಾಧ್ಯ. ಶಿಕ್ಷಕರು ಮಕ್ಕಳಲ್ಲಿ ಆದರ್ಶ, ಉತ್ತಮ ಗುಣಗಳನ್ನು ರೂಪಿಸಿದರೆ ಭಾವಿ ನಾಗರಿಕರಾಗುವ ಮಕ್ಕಳು ದೇಶದ ಉತ್ತಮ ಪ್ರಜೆಗಳಾಗುತ್ತಾರೆ. ಒಬ್ಬ ಶಿಕ್ಷಕನಿಂದ ಏನೆಲ್ಲ ಬದಲಾವಣೆ ಸಾಧ್ಯ ಎಂಬುದಕ್ಕೆ ರಾಧಾಕೃಷ್ಣನ್ ಉತ್ತಮ ಉದಾಹರಣೆಯಾಗಿದ್ದಾರೆ, ಅವರು ಶಿಕ್ಷಕರಿಗೆಲ್ಲ ಮಾದರಿಯಾದರೆ ಬದಲಾವಣೆ ಬಯಸಬಹುದು ಎಂದರು.

ರಾಜ್ಯ ಸರಕಾರ 2008ರಿಂದ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿದೆ. ಬಜೆಟ್‌ನಲ್ಲಿ 15 ಸಾವಿರ ಕೋಟಿ ರೂ. ಮೀಸಲಿರಿಸಲಾಗಿದೆ. ಜಿಲ್ಲೆಯಲ್ಲಿ 104 ಹೊಸ ಪ್ರಾಥಮಿಕ ಶಾಲೆಗಳು, 90 ಪ್ರೌಢಶಾಲೆಗಳು, 84 ಕನ್ನಡ ಶಾಲೆ, 6 ಆದರ್ಶ ಶಾಲೆಗಳನ್ನು ಪ್ರಾರಂಭಿಸಲಾಗಿದೆ. ಶಿಕ್ಷಣದಿಂದ ದೂರ ಉಳಿದ ಮಕ್ಕಳಿಗಾಗಿ ಪ್ರತಿ ತಾಲೂಕಿನಲ್ಲಿ ಕಸ್ತೂರಬಾ ವಸತಿ ಶಾಲೆ ಸ್ಥಾಪನೆ, ಅಧ್ಯಯನಕ್ಕಾಗಿ 2, 277 ಶಾಲೆ ಕೊಠಡಿಗಳು, 1, 43, 208 ಸೈಕಲ್ ವಿತರಣೆ, 17 ಲಕ್ಷ 16, 912 ಸಮವಸ್ತ್ರ ವಿತರಣೆ, 69 ಲಕ್ಷ 54, 702 ಪಠ್ಯಪುಸ್ತಕ ವಿತರಿಸಲಾಗಿದೆ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಗೋಕಾಕ ತಾಲೂಕಿನ ಕುಂದರಗಿಯ ಅಮರೇಶ್ವರ ದೇವರು ಉಪನ್ಯಾಸ ನೀಡಿ, ರಾಧಾಕೃಷ್ಣನ್ ಆದರ್ಶಗಳ ಬಗ್ಗೆ ಗುಣಗಾನ ಮಾಡಿ ತೆರಳಿದರೆ ಉದ್ದೇಶ ಈಡೇರುವುದಿಲ್ಲ. ಶೂನ್ಯ ಸಂಪಾದಿಸುವ ವಿದ್ಯಾರ್ಥಿಗಳನ್ನು ಪ್ರತಿಭಾವಂತ ವಿದ್ಯಾರ್ಥಿಗಳನ್ನಾಗಿಸುವ ಶ್ರಇಂದು ಸಾಮಾಜಿಕ ವಲಯದಲ್ಲಿ ಮೇಷ್ಟ್ರುಗಳು ಟೀಕೆಗೆ ಒಳಗಾದಷ್ಟು ಬೇರೆ ಯಾರೂ ಆಗಿರಲಾರರು. `ನಮ್ ಕಾಲದಲ್ಲಿ ಮೇಷ್ಟ್ರು ಹೇಗಿದ್ರು, ಈಗ ಬರೀ ಬಿಲ್ಲು-ಬೆಲ್ಲು ನೋಡ್ತಾರೆ' ಎಂದೋ; `ಪಾಪ ಮೇಷ್ಟ್ರು ಅವನಿಗೇನು ಗೊತ್ತು' ಎಂದೋ; `ಮೇಷ್ಟ್ರ ಕೆಲಸ ಆರಾಮಪ್ಪ, ಯಾವಾಗ ನೋಡಿದ್ರೂ ರಜೆ. ಪಾಠ ಮಾಡಿದ್ರೆ ಮಾಡಿದ್ರು, ಇಲ್ಲಾಂದ್ರೆ ಇಲ್ಲ.
ಹೇಳೋರೂ ಇಲ್ಲ, ಕೇಳೋರೂ ಇಲ್ಲ' ಎಂದೋ; `ಮೇಷ್ಟ್ರಂತೆ ಮೇಷ್ಟ್ರು, ಅವನೇನು ಹೇಳೋದು, ನಮಗೆ ಗೊತ್ತಿಲ್ವಾ?' ಎಂದೋ ಹೀಗೆ ಹತ್ತಾರು ವಿಧದಲ್ಲಿ ನಿಂದೆಗೆ, ನಿರ್ಲಕ್ಷ್ಯಕ್ಕೆ ತುತ್ತಾಗಿ ಬದುಕುತ್ತಿರುವವರು ಇಂದಿನ ಶಿಕ್ಷಕರು. ಅದರಲ್ಲೂ ಸರ್ಕಾರಿ ಶಾಲಾ ಶಿಕ್ಷಕರೆಂದರೆ ಏನೂ ಗೊತ್ತಿರದ, ಏನೂ ಕೆಲಸ ಮಾಡದ ವೇಸ್ಟ್ ಬಾಡಿಗಳೆಂದೇ ಬಿಂಬಿಸಲಾಗುತ್ತಿದೆ.
ಬಾಲ್ಯದಲ್ಲಿ ನನ್ನ ಮೇಲೆ ಗಾಢ ಪ್ರಭಾವ ಬೀರಿದವರು ನನ್ನ ಶಿಕ್ಷಕರು. ಶಾಲೆಯೇ ಪ್ರಪಂಚವಾಗಿದ್ದ ಆ ದಿನಗಳಲ್ಲಿ ನಮ್ಮ ಮೇಷ್ಟ್ರೇ ನಮಗೆ ಆದರ್ಶ. ಅವರಂತೆ ನಾವೂ ಮೇಷ್ಟ್ರರಾಗಬೇಕು ಎಂಬುದೇ ಭವಿಷ್ಯದ ಧ್ಯೇಯ. ಅಷ್ಟು ದಟ್ಟವಾಗಿತ್ತು ಆ ಪ್ರಭಾವ. ಇಂದು ಆ ಗುರಿಯನ್ನು ಸೇರಿಯಾಗಿದೆ. ಆದರೆ, ನನ್ನೊಳಗಿನ ಆ ಆದರ್ಶ ಶಿಕ್ಷಕತನ ಎಲ್ಲೋ ಕಳೆದುಹೋದ ಅನುಭವ. ನಮ್ಮ ಗುರುಗಳ ಬಗ್ಗೆ ನಮಗಿದ್ದ ಭಯ, ಪ್ರೀತಿ, ಗೌರವಗಳು ನಮ್ಮ ವಿದ್ಯಾರ್ಥಿಗಳಿಗೆ ನಮ್ಮಲ್ಲಿ ಯಾಕಿಲ್ಲ? ಅಂದು ಶಿಕ್ಷಕರಿಗೆ ಸಿಗುತ್ತಿದ್ದ ಸಾಮಾಜಿಕ ಮನ್ನಣೆ ಇಂದು ನಮಗೇಕೆ ಸಿಗುತ್ತಿಲ್ಲ? ಇದಕ್ಕೆ ನಾವೆಷ್ಟು ಕಾರಣ ಎಂಬುದು ಇಂದಿನ ಬಹಳಷ್ಟು ಶಿಕ್ಷಕರ ಮುಂದಿರುವ ಪ್ರಶ್ನೆ.
ಅಂದು ಕಲಿಯುವ ಆಸಕ್ತಿ ಇರುವ ಮಕ್ಕಳು ಮಾತ್ರ ಶಾಲೆಗೆ ಬರುತ್ತಿದ್ದರು. ಆದರೆ ಇಂದು, ಹುಟ್ಟಿದ ಎಲ್ಲ ಮಕ್ಕಳನ್ನೂ ಶಾಲೆಗೆ ಎಳೆದುಕೊಂಡು ಬಂದು ಕಲಿಸಬೇಕಾದ ಅನಿವಾರ್ಯ ಸ್ಥಿತಿ ಶಿಕ್ಷಕರದ್ದು. ವಿದ್ಯೆ ಅಭ್ಯಾಸಿಯ ವಶ. ವಿದ್ಯಾರ್ಥಿಯ ಲಕ್ಷಣವೇ ಇಲ್ಲದವರಿಗೆ (ವಿದ್ಯೆಯ ಅರ್ಥಿ ಎಂದರೆ ವಿದ್ಯೆಯನ್ನು ಯಾಚಿಸುವವನು, ಬೇಡುವವನು ಎಂದರ್ಥ) ಕಲಿಸುವುದು ಹೇಗೆ? ಇದು ಇಂದಿನ ಸರ್ಕಾರಿ ಶಾಲಾ ಶಿಕ್ಷಕರ ಮುಂದಿರುವ ದೊಡ್ಡ ಸವಾಲು. ತೀವ್ರ ನಿರಾಸಕ್ತಿ ಇರಲಿ, ಬುದ್ಧಿ ಮಂದವೇ ಆಗಿರಲಿ ಕಲಿಸಬೇಕಾದ ಹೊಣೆ ಅವರದ್ದು.
ಅದಕ್ಕಾಗಿ ಶಿಕ್ಷಕರ ಶ್ರಮ, ಸಮಯ, ಜ್ಞಾನವೆಲ್ಲ ವ್ಯರ್ಥವಾಗುತ್ತಿದೆ. ಆದರೂ `ವರ್ಷವೆಲ್ಲ ಏನು ಮಾಡಿದಿರಿ?' ಎಂಬ ಪ್ರಶ್ನೆ. ವಿದ್ಯಾರ್ಥಿಯಲ್ಲಿ ಏನೇ ನ್ಯೂನತೆ ಇದ್ದರೂ ವೈಫಲ್ಯಕ್ಕೆ ಕಾರಣ ಶಿಕ್ಷಕರು ಎನ್ನಲಾಗುತ್ತಿದೆ. ಇದು ಶಿಕ್ಷಕರ ಪಾಲಿಗೆ ಎಷ್ಟು ಒತ್ತಡ, ಎಂಥಾ ನಿರಾಶಾದಾಯಕ ವಾತಾವರಣವನ್ನು ತಂದೊಡ್ಡುತ್ತಿದೆ ಎಂಬುದರ ಅರಿವು ಬಹುತೇಕರಿಗೆ ಇಲ್ಲ.
ಇಂದಿನ ಸರ್ಕಾರಿ ಶಿಕ್ಷಕರಿಗಂತೂ ಬೋಧಿಸುವುದಷ್ಟೇ ಕೆಲಸವಲ್ಲ. ಶಾಲೆಗೆ ಹೋಗುವಾಗಲೇ ಅಂದಿನ ಬಿಸಿಯೂಟಕ್ಕೆ ಬೇಕಾಗುವ ತರಕಾರಿ, ಉಪ್ಪು, ಬೇಳೆಯನ್ನೆಲ್ಲ ಹೊತ್ತುಕೊಂಡು ಹೋಗಬೇಕು. ಅಲ್ಲಿ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಬೇಕು. ದಿನದಿನದ ಲೆಕ್ಕ ಬರೆದಿಡಬೇಕು. ಜೊತೆಗೆ ಇಲಾಖೆ ದಿಢೀರನೆ ಕೇಳುವ ಮಾಹಿತಿಯನ್ನು ಒದಗಿಸಬೇಕು. ಎಲ್ಲೆಡೆ ಶಿಕ್ಷಕರ ಕೊರತೆ. ಹೀಗೆ ಬದಲಾಗಿರುವ ವ್ಯವಸ್ಥೆಯಲ್ಲಿ ಶಿಕ್ಷಕ ಕೇವಲ ಬೋಧಕ ಮಾತ್ರ ಆಗಿಲ್ಲ. ಹಲವು ಕೆಲಸಗಳ ಮೇಲುಸ್ತುವಾರಿ ಅವರದು.
ತರಗತಿಗೆ ಹೋಗಿ ಮಕ್ಕಳ ಮುಖ ನೋಡಲಾಗದೆ ಇತರ ಕೆಲಸಗಳಲ್ಲೇ ಕಳೆದುಹೋಗುವ ದಿನಗಳು ಹಲವು. ಆದ್ದರಿಂದ ಬೋಧನೆಯ ಹಂಬಲ ಹೊತ್ತು ಬಂದ ಶಿಕ್ಷಕರು `ಯಾಕಪ್ಪಾ ಈ ಕೆಲಸಕ್ಕೆ ಬಂದೆವು' ಎಂದು ನಿಟ್ಟುಸಿರು ಬಿಡುವಂತಾಗಿದೆ. ಜೊತೆಗೆ `ಮೇಷ್ಟ್ರು ಪಾಠಾನೇ ಮಾಡಲ್ಲ, ಯಾವಾಗ್ಲೂ ಅಡ್ಡಾಡ್ತಾ ಇರ‌ತಾರೆ' ಎಂಬ ಆರೋಪ ಬೇರೆ. ಇದಕ್ಕೆ ಶಿಕ್ಷಕರು ಎಷ್ಟರ ಮಟ್ಟಿಗೆ ಕಾರಣ?
ಹಿಂದೆ ಖಾಸಗಿ ಶಾಲೆ, ಸರ್ಕಾರಿ ಶಾಲೆ ಎಂಬ ಭೇದವಾಗಲೀ, ಕನ್ನಡ ಮಾಧ್ಯಮ, ಆಂಗ್ಲ ಮಾಧ್ಯಮ ಎಂಬ ಪೈಪೋಟಿಯಾಗಲೀ ಇರಲಿಲ್ಲ.
ಆದರೆ ಇಂದು ಖಾಸಗಿ ಶಾಲಾ ಮಕ್ಕಳೊಂದಿಗೆ ಸರ್ಕಾರಿ ಶಾಲಾ ಮಕ್ಕಳ ಪ್ರಗತಿಯನ್ನು ಹೋಲಿಸಲಾಗುತ್ತಿದೆ. ಖಾಸಗಿ ಶಾಲಾ ಮಕ್ಕಳ ಬುದ್ಧಿಮಟ್ಟ, ಆರ್ಥಿಕ ಪರಿಸ್ಥಿತಿ, ಪೋಷಕರ ಕಲಿಕಾ ಮಟ್ಟ, ಅವರ ಸಹಕಾರ ಉತ್ತಮವಾಗಿದ್ದು, ಅವು ಕಲಿಕೆಯ ಮೇಲೆ ಪರಿಣಾಮ ಬೀರುತ್ತವೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಆದರೂ ಅದನ್ನೆಲ್ಲ ಕಡೆಗಣಿಸಿ, ಶಿಕ್ಷಕರೇ ಸರಿಯಾಗಿ ಕಲಿಸುತ್ತಿಲ್ಲ, ಹಾಗಾಗಿ ಸರ್ಕಾರಿ ಶಾಲಾ ಮಕ್ಕಳು ಕಲಿಯುವುದಿಲ್ಲ ಎಂಬ ಧೋರಣೆ ವ್ಯಕ್ತಪಡಿಸುವುದು ಶಿಕ್ಷಕರಿಗೆ ನೋವು ಉಂಟು ಮಾಡುತ್ತಿದೆ.
ಒಂದು ಕಾಲದಲ್ಲಿ ಅನಕ್ಷರಸ್ಥರ ಸಂಖ್ಯೆ ಅಧಿಕವಾಗಿತ್ತು. ಅಂದಿನ ಪೋಷಕರು, ಅಕ್ಷರ ಕಲಿಸುವ ಗುರುವೆಂದರೆ ದೇವರ ಸಮಾನ ಎಂಬಂತಹ ಕಲ್ಪನೆಯನ್ನು ತಮ್ಮ ಮಕ್ಕಳಲ್ಲಿ ಕಲ್ಪಿಸಿಕೊಟ್ಟಿದ್ದರು. ಇಂದು ಎಲ್ಲರೂ ಅಕ್ಷರಸ್ಥರೇ. ಜ್ಞಾನದ ಮೂಲ ಶಾಲೆ ಮಾತ್ರ ಆಗಿಲ್ಲ. ದೂರದರ್ಶನ, ಕಂಪ್ಯೂಟರ್, ಮೊಬೈಲ್ ಮೊದಲಾದ ಮಾಧ್ಯಮಗಳಿಂದ ವಿಪುಲ ಮಾಹಿತಿ ಗ್ರಹಿಸುವ ವಿದ್ಯಾರ್ಥಿಗೆ/ ಪೋಷಕರಿಗೆ ತಮ್ಮಂತೆಯೇ ಓದಿದ ಅಥವಾ ತಮಗಿಂತ ಸ್ವಲ್ಪ ಹೆಚ್ಚು ಓದಿದ ಮೇಷ್ಟ್ರು ಅದ್ಭುತ ಎನಿಸುತ್ತಿಲ್ಲ.
ಪರಿಣಾಮವಾಗಿ ಶಿಕ್ಷಕರನ್ನು ಎಲ್ಲರಂತೆಯೇ ಸಾಮಾನ್ಯ ವ್ಯಕ್ತಿಗಳು ಎಂದು ಅವರು ಪರಿಗಣಿಸುತ್ತಾರೆ. `ಗುರುವೇ ನಮಃ' ಎಂಬ ಕಾಲ ಹೋಗಿ `ಗುರುವೇನು ಮಹಾ' ಎಂಬ ಕಾಲ ಬಂದಿದೆ. ಇದು ಶಿಕ್ಷಕರ ವರ್ತನೆಯ ವೈಪರೀತ್ಯಗಳಿಂದಲ್ಲ; ಬದಲಾದ ಸಾಮಾಜಿಕ ವಾತಾವರಣದ ಪ್ರಭಾವದಿಂದ. ರಕ್ತ ಸಂಬಂಧಗಳೇ ಅಲ್ಲಾಡುತ್ತಿರುವ ಈ ದಿನಗಳಲ್ಲಿ ಗುರು-ಶಿಷ್ಯ ಸಂಬಂಧದ ಪೂಜ್ಯ ಭಾವನೆಗೆ ಧಕ್ಕೆ ಬಂದಿದ್ದರೆ ಆಶ್ಚರ್ಯವೇನಿಲ್ಲ.
ಇಂದಿನ ಶಿಕ್ಷಕರು ಮಗುವನ್ನು ಕೇವಲ ಪಠ್ಯ ವಿಷಯಗಳಿಗಷ್ಟೇ ಸಿದ್ಧಗೊಳಿಸುತ್ತಿಲ್ಲ. ಬದಲಾದ ಪರಿಸರಕ್ಕೆ ಅನುಗುಣವಾಗಿ ಕ್ರೀಡೆ, ಪ್ರತಿಭಾ ಕಾರಂಜಿ, ಗಣಕ ಯಂತ್ರ, ಪ್ರವಾಸ, ವೃತ್ತಿ ಮಾರ್ಗದರ್ಶನ, ಕೈದೋಟ... ಹೀಗೆ ಬಹುಮುಖ ಬೋಧನೆ ಮಾಡುತ್ತಿದ್ದಾರೆ. ಆಕರ್ಷಕ ತಂತ್ರ, ಕೌಶಲ, ಶೈಲಿ, ಹಾಡು, ನೃತ್ಯ, ಕಥೆ, ಸ್ಥಳ ಭೇಟಿ, ಬೋಧನೋಪಕರಣ ಬಳಸುತ್ತಿದ್ದಾರೆ.
ಇದಕ್ಕಾಗಿ ಅವರೆಷ್ಟು ಪೂರ್ವಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಗೊತ್ತೇ? ನಿರಂತರ ತರಬೇತಿ ಪಡೆಯುತ್ತಾ, ಪುನಶ್ಚೇತನಗೊಳ್ಳುತ್ತಾ ಎಷ್ಟು ಕ್ರಿಯಾಶೀಲರಾಗಿರುತ್ತಾರೆ ಗೊತ್ತೇ? ಆದರೂ `ಹಿಂದೆಲ್ಲ ಮೇಷ್ಟ್ರು ಎಷ್ಟು ತಿಳ್ಕೊಂಡಿರ‌್ತಿದ್ರು, ಇವತ್ತು ಮೇಷ್ಟ್ರಿಗೆ ವಿಷಯ ಜ್ಞಾನವೇ ಇಲ್ಲ; ಆಳವಾಗಿ ಅಧ್ಯಯನ ಮಾಡೋಲ್ಲ' ಎಂಬ ಆರೋಪ.
ಬಡ ವಿದ್ಯಾರ್ಥಿಗಳಿಗೆ ಪೆನ್ನು, ಪುಸ್ತಕ ಕೊಡಿಸುವ, ಸಮವಸ್ತ್ರ ಹೊಲಿಸುವ, ಫೀಸು ಭರಿಸುವ, ಪ್ರವಾಸ ಕರೆದೊಯ್ಯುವ, ಬಹುಮಾನ ನೀಡುವ ಸಾವಿರಾರು ಶಿಕ್ಷಕರು ನಮ್ಮ ನಡುವೆ ಇದ್ದಾರೆ. ಹಿಂದೆ ಇದನ್ನು ಶಿಕ್ಷಕರ ಉದಾರತೆ, ಕಾಳಜಿ, ಜವಾಬ್ದಾರಿ ಎಂದು ಗುರುತಿಸಿ ಮೆಚ್ಚುತ್ತಿದ್ದ ಸಮಾಜದ ದೃಷ್ಟಿ ಇಂದು ಬೇರೆಯೇ ಆಗಿದೆ. `ಅದು ಸರ್ಕಾರದ್ದು, ಮೇಷ್ಟ್ರದ್ದಲ್ಲ, ಅವರ‌ಯಾಕೆ ಉಚಿತವಾಗಿ ಕೊಡ್ತಾರೆ?' ಎಂದೋ;  `ಮೇಷ್ಟ್ರಿಗೇನೋ ಲಾಭ ಇರ‌ಬೇಕು, ಅದಕ್ಕೆ ಸಹಾಯ ಮಾಡ್ತಾರೆ' ಎಂದೋ; `ಯಾವುದರಲ್ಲಿ ಎಷ್ಟು ಹೊಡ್ಕೊಂಡಿದ್ನೋ, ಅದಕ್ಕೆ ಸ್ವಲ್ಪ ದಾನ ಮಾಡಿದ್ದಾನೆ' ಎಂದೋ ಲಘುವಾಗಿ ಮಾತನಾಡುವ, ಅನುಮಾನಿಸುವ, ಪ್ರಶ್ನಿಸುವ ಪೋಷಕರೇ ಅಧಿಕ.
ಔದಾರ‌ಯಕ್ಕೆ ಕನಿಷ್ಠ ಕೃತಜ್ಞತೆಯನ್ನೂ ಸೂಚಿಸುವ ಸೌಜನ್ಯವೂ ಹಲವು ಪೋಷಕರಿಗೆ ಇಲ್ಲ. ಇಂತಹ ಟೀಕೆ, ಅನುಭವಗಳು ಪದೇ-ಪದೇ ಆದಾಗ ಶಿಕ್ಷಕರು ತಾವಾಯಿತು, ತಮ್ಮ ಕೆಲಸವಾಯಿತು ಎಂದು ತಮ್ಮ ಸುತ್ತ ಬೇಲಿ ಹಾಕಿಕೊಳ್ಳದೆ ಇರುತ್ತಾರೆಯೇ?
ಹಾಗೆಂದು ಎಲ್ಲ ಶಿಕ್ಷಕರೂ ಪ್ರಾಮಾಣಿಕರು; ಆತ್ಮ ಗೌರವ ಉಳ್ಳವರು; ವೃತ್ತಿ ಧರ್ಮ ಕಾಪಾಡುವವರು ಎಂದಲ್ಲ. ಅಪವಾದಗಳು ಇರಬಹುದು.
ಆದರೆ ಅದೇ ಶಿಕ್ಷಕ ವರ್ಗದ ಮೌಲ್ಯ ನಿರ್ಧರಿಸುವ ಮಾನದಂಡ ಆಗಬಾರದು. ಅಂತಹವರನ್ನು ಶಿಕ್ಷಿಸುವ, ತಿದ್ದುವ ಹೊಣೆ ಖಂಡಿತಾ ಇಲಾಖೆಯದು, ಸಮಾಜದ್ದು. ಆದರೆ ಪ್ರಾಮಾಣಿಕತೆಯನ್ನು ಮೆಚ್ಚಿ, ಪ್ರೋತ್ಸಾಹಿಸದಿದ್ದರೆ ಉತ್ತಮ ಶಿಕ್ಷಕರೂ ದಕ್ಷತೆ ಕಳೆದುಕೊಳ್ಳುವ ಸಂಭವ ಇರುತ್ತದೆ ಎಂಬ ಅರಿವು ಸಮಾಜದ್ದಾಗಬೇಕು.
ಹೀಗೆ ಶಿಕ್ಷಣ ಅಥವಾ ಶಿಕ್ಷಕ ಪಾವಿತ್ರ್ಯ ಕಾಪಾಡಿಕೊಂಡಿಲ್ಲ ಎನಿಸಿದರೆ ಅದಕ್ಕೆ ಸಾಮಾಜಿಕ ವಾತಾವರಣ ಕಾರಣವೇ ಹೊರತು ಶಿಕ್ಷಕ ಅಲ್ಲ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಹಿಂದಿನದಕ್ಕೆ ಹೋಲಿಸಿ, ಈಗ ಕಾಲ ಬದಲಾಗಿದೆ, ಹಿಂದೆ ಬಹಳ ಚೆನ್ನಾಗಿತ್ತು ಎಂದು ಅಭಿಪ್ರಾಯ ಪಡುವುದು ಮಾನವನ ಸಹಜ ಗುಣ. ಅಂತೆಯೇ ಶಿಕ್ಷಕ ಮತ್ತು ಶಿಕ್ಷಣ ವ್ಯವಸ್ಥೆ ಕೂಡ ಹಿಂದಿನಂತೆ ಈಗ ಇಲ್ಲ ಎಂಬುದು ಸಹ ಒಪ್ಪಿಕೊಳ್ಳಬೇಕಾದ ಸಂಗತಿ.
ಆದ್ದರಿಂದ ಶಿಕ್ಷಕ ಬಾಂಧವರು ನಿರಾಶಾದಾಯಕವಾಗಿ ಬದುಕದೇ, ವೃತ್ತಿಯ ಬಗ್ಗೆ ಅಸಮಾಧಾನ ಬೆಳೆಸಿಕೊಳ್ಳದೇ ಬದಲಾದ ಪರಿಸ್ಥಿತಿಗೆ ಹೊಂದಿಕೊಳ್ಳುವ, ಒಪ್ಪಿಕೊಳ್ಳುವ ಜಾಣ್ಮೆ ತೋರಬೇಕು. ವೃತ್ತಿಯಲ್ಲಿ ಆಸಕ್ತಿ ಇದ್ದರೆ ಕೀರ್ತಿ, ತೃಪ್ತಿ ಸಿಕ್ಕೇ ಸಿಗುತ್ತದೆ. ಸರ್ವ ಹಿತದ ದೃಷ್ಟಿಯಿಂದ ಯೋಚಿಸುವ ಉದಾರ ಪ್ರವೃತ್ತಿ ಶಿಕ್ಷಕರದ್ದಾಗಬೇಕು.

ಟೀಕೆ, ನಿಂದೆ ಸಾವಿರ ಬರಲಿ ಕರ್ತವ್ಯ ಲೋಪ ಮಾಡಬಾರದು. ಶ್ರದ್ಧೆ, ನಿಷ್ಠೆಯಿಂದ ಕ್ರಿಯಾಶೀಲರಾಗಿರಬೇಕು. ಯಾರೋ ಮೆಚ್ಚುವುದು ಮುಖ್ಯವಲ್ಲ. ಆತ್ಮ ತೃಪ್ತಿ ಮುಖ್ಯ. ವಿದ್ಯಾರ್ಥಿಯು ಗುರು ಬ್ರಹ್ಮ ಗುರು ವಿಷ್ಣು...  ಎಂದು ಪೂಜಿಸುವುದು ಬೇಕಿಲ್ಲ; ನನ್ನೊಳಗಿನ ವಿದ್ಯೆ ಮತ್ತು ಬುದ್ಧಿಯನ್ನು ನಿರ್ವಂಚನೆಯಿಂದ ಧಾರೆ ಎರೆದಿರುವೆ ಎಂಬ ಧನ್ಯತೆ ಸಿಗಬೇಕು. ಅದೇ ಸಾರ್ಥಕ ಕ್ಷಣ. ಆದ್ದರಿಂದ ಬಾಹ್ಯ ಒತ್ತಡಗಳಿಗೆ ಬಲಿಯಾಗದೇ, ತನ್ನತನ ಕಳೆದುಕೊಳ್ಳದೇ ಸದೃಢ ಚಿತ್ತದಿಂದ ಕರ್ತವ್ಯ ನಿರ್ವಹಿಸಿ, ಗುರು ಪರಂಪರೆಯ ನಿರಂತರತೆಗೆ ಶಿಕ್ಷಕ ವರ್ಗ ಕಾರಣವಾಗಬೇಕು.
ದ್ಧೆ, ಹಠ ಶಿಕ್ಷಕರಲ್ಲಿರಬೇಕು. ಬ್ರಹ್ಮ ಬರೆದ ಹಣೆಬರಹ ಎಂಬುದು ಗಾದೆ, ಆದರೆ ಬ್ರಹ್ಮನಿಗೂ ಶಿಕ್ಷಕನಿದ್ದ ಎನ್ನುವುದನ್ನು ಮರೆಯಬಾರದು. ಶಿಕ್ಷಕರು ಬ್ರಹ್ಮ ಬರೆದ ಹಣೆಬರಹವನ್ನೂ ಬದಲಾಯಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಚರಂತಿಮಠದ ಪ್ರಭುಸ್ವಾಮೀಜಿ, ಶಿಕ್ಷಕರು ಮಕ್ಕಳಲ್ಲಿ ಉತ್ತಮ ಗುಣಗಳನ್ನು ಮೈಗೂಡಿಸಿಕೊಳ್ಳಲು ಪ್ರೇರಣೆಯಾಗಬೇಕು ಎಂದರು.


logoblog

Thanks for reading

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *