ವರ್ಗ
|
ಉದಾಹರಣೆ ಮತ್ತು ಮುಖ್ಯ ಪದಗಳು
|
ಜ್ಞಾನ: ದತ್ತಾಂಶ ಅಥವ ಮಾಹಿತಿಯನ್ನುನೆನಪುಮಾಡಿಕೊಳ್ಳುವುದು.
|
ಉದಾಹರಣೆ : ನೀತಿ ನಿರೂಪಣೆ, ಗ್ರಾಹಕರಿಗೆ ನೆನಪಿನಿಂದಲೆ ಬೆಲೆಗಳನ್ನು ತಿಳಿಸುವುದು.. ಮುಖ್ಯ ಪದಗಳು: ನಿರೂಪಣೆ, ವಿವರಣೆ, ಗುರುತಿಸುವುದು, ಅರಿಯುವುದು, ಲೇಬಲ್ ಮಾಡುವುದು, ಪಟ್ಟಿಮಾಡುವುದು, ಹೋಲಿಸುವುದು, ಹೆಸರಿಸುವುದು, ರೂಪರೇಷೆ, ನೆನಪು ಮಾಡಿಕೊಳ್ಳುವುದು, ಗುರುತಿಸುವುದು, ಪುನರುತ್ಪನ್ನ, ಆಯ್ಕೆ, ಹೇಳುವುದು.
|
ಅರ್ಥೈಸುವಿಕೆ: ಅರ್ಥವನ್ನು ತಿಳಿದು ಕೊಳ್ಳುವುದು,ಅನುವಾದ, ವ್ಯಾಖ್ಯಾನ ಸೂಚನೆಗಳ, ಸಮಸ್ಯೆಗಳ ಅರ್ಥೈಸುವಿಕೆ. ಸಮಸ್ಯೆಯನ್ನು ನಮ್ಮ ಮಾತಿನಲ್ಲೆ ಹೇಳುವುದು..
|
ಉದಾಹರಣೆ : ಪರೀಕ್ಷೆ ಬರೆವ ತತ್ವಗಳನ್ನು ಪುನರ್ ರೂಪಿಸುವುದು: ಸಂಕೀರ್ಣ ಕಾರ್ಯ ಮಾಡುವ ಬಗೆಯನ್ನು ಸ್ವಂತ ಶಬ್ದಗಳಲ್ಲಿ ಹೇಳುವುದು. ಸಮೀಕರಣವನ್ನು ಕಾಂಪ್ಯೂಟರ್ ಸ್ಪ್ರೆಡ್ ಷೀಟಿನಲ್ಲಿ ಅನುವಾದಿಸುವುದು. ಮುಖ್ಯ ಪದಗಳು: ಅರ್ಥೈಸು, ಬದಲಾಯಿಸು, ರಕ್ಷಿಸು, ವ್ಯತ್ಯಾಸ ತಿಳಿ, ಅಂದಾಜುಮಾಡು, ವಿವರಿಸು, ವಿಸ್ತರಿಸು, ಸಾಮಾನ್ಯೀಕರಣ, ಉದಾಹರಣೆ ಕೊಡು, ಮಾದರಿ, ತೀರ್ಮಾನಿಸು, ವ್ಯಾಖ್ಯಾನಮಾಡು, ಸಂಕ್ಷೇಪಿಸು , ಮುನ್ಸೂಚನೆ ನೀಡು, ಪುನಃ ಬರೆ, ಸಾರ ಸಂಗ್ರಹಿಸು, ಅನುವಾದಿಸು.
|
ಅನ್ವಯ: ಹೊಸ ಸಂದರ್ಭಕ್ಕೆ ಚಿಂತನೆಯನ್ನು ಬಳಸುವುದು, ಅಮೂರ್ತವಾದುದನ್ನು ಇತರರಿಂದ ಹೇಳಿಸಿಕೊಳ್ಳದೆ ಬಳಸುವುದು. ತರಗತಿಯಲ್ಲಿ ಕಲಿತದ್ದನ್ನು ಕಾರ್ಯ ಕ್ಷೇತ್ರದಲ್ಲಿ ಹೊಸ ಸಂದರ್ಭಕ್ಕೆಅನ್ವಯಿಸುವುದು .
|
ಉದಾಹರಣೆ: ನೌಕರನ ರಜಾ ಅವಧಿಯನ್ನು ನೀವೆ ಲೆಕ್ಕಹಾಕಿ ಸಂಖ್ಯಾಶಾಸ್ತ್ರದ ನಿಯಮಗಳನ್ನು ಅನ್ವಯಿಸಿ ಬರಹ ಪರೀಕ್ಷೆಯ ನಂಬಿಕಾರ್ಹತೆಯ ಮೌಲ್ಯ ಮಾಪನ ಮಾಡುವುದು ಮುಖ್ಯ ಪದಗಳು:ಅನ್ವಯಿಸು, ಬದಲಾಯಿಸು, ಲೆಕ್ಕಹಾಕು, ನಿರ್ಮಿಸು, ಪ್ರಾತ್ಯಕ್ಷಿಕೆ ನೀಡು, ಕಂಡುಹಿಡಿ, ಬುದ್ಧಿವಂತಿಕೆಯಿಂದ ಉಪಯೋಗಿಸು (manipulates), ವ್ಯತ್ಯಾಸಮಾಡು, ನಿರ್ವಹಿಸು, ಮುನ್ಸುಚನೆ ನೀಡು, ತಯಾರಿಸು, ಉತ್ಪಾದಿಸು, ಸಂಬಂಧಿಸು, ತೋರಿಸು, ಪರಿಹರಿಸು, ಬಳಸು.
|
ವಿಶ್ಲೇಷಣೆ: ವಸ್ತುವನ್ನು ಅಥವ ತತ್ವವನ್ನು ವಿಭಾಗಮಾಡಿ ಅದರ ಪೂರ್ಣ ರೂಪವನ್ನು ಅರಿಯುವುದು . ವಾಸ್ತವ ಮತ್ತು ಊಹೆಗಳ ವ್ಯತ್ಯಾಸ ಅರಿಯುವುದು.
|
ಉದಾಹರಣೆ : ಉಪಕರಣದ ತೊಂದರೆಯನ್ನು ತಾರ್ಕಿಕವಾಗಿ ಕಂಡುಹಿಡಿಯುವುದು, ವಿಚಾರ ಸರಣಿಯಲ್ಲಿನ ದೋಷವನ್ನು ಗುರುತಿವುದು, ಇಲಾಖೆಯಿಂದ ಮಾಹಿತಿ ಸಂಗ್ರಹಿಸಿ ಅಗತ್ಯ ಕೆಲಸವನ್ನು ತರಬೇತಿಗಾಗಿ ಆಯ್ಕೆ ಮಾಡುವುದು ಮುಖ್ಯಪದಗಳು: ವಿಶ್ಲೇಷಿಸು, ವಿಭಜಿಸು, ಹೋಲಿಸು, ವ್ಯತ್ಯಾಸ ಅರಿ, ಚಿತ್ರಿಸು, ತಾರತಮ್ಯಮಾಡು, ವಿವರಿಸು, ಗುರುತಿಸು, ಆರಿಸು, ಬೇರ್ಪಡಿಸು
|
ಸಂಸ್ಲೇಷಣೆ : ವಿಭಿನ್ನ ಅಂಶಗಳಿಂದ ರಚನೆಯನ್ನು ನಿರ್ಮಿಸುವುದು ಭಾಗಗಳನ್ನು ಸೇರಿಸಿ ಪೂರ್ಣ ಗೊಳಿಸುವುದು, ವಿರುದ್ಧವಾದವುಗಳನ್ನು ಕೂಡಿಸಿ ವಿನ್ಯಾಸ ರಚನೆ ಮತ್ತು ಹೊಸ ಅರ್ಥ ಮತ್ತು ಸಂರಚನೆಗೆ ಒತ್ತುನೀಡುವುದು.
|
ಉದಾಹರಣೆ: ಕಂಪನಿಯ ಕಾರ್ಯವಿಧಾನದ ಕೈಪಿಡಿ ಬರೆಯುವುದು, ನಿರ್ದಿಷ್ಟಕೆಲಸ ಮಾಡಲು ಯಂತ್ರ ಒಂದರ ವಿನ್ಯಾಸ, ಅನೇಕ ಮೂಲಗಳಿಂದ ತರಬೇತಿ ಪಡೆದು ಸಮಸ್ಯೆಯ ಪರಿಹಾರ, ಫಲಿತಾಂಶವನ್ನು ಉತ್ತಮಪಡಿಸುವ ಪ್ರಕ್ರಿಯೆಯ ಪರಿಷ್ಕರಣ ಮಾಡುವುದು. ಮುಖ್ಯ ಪದಗಳು;- ವರ್ಗೀಕರಿಸು, ಸೇರಿಸು, ಸಂಕಲಿಸು ರಚಿಸು, ನಿರ್ಮಿಸು, ವಿನ್ಯಾಸಮಾಡು, ವಿವರಿಸು,ಉತ್ಪಾದಿಸು, ಪುನರ್ ಜೋಡಣೆಮಾಡು, ಮಾರ್ಪಡಿಸು ಪುನರ್ ರಚನೆ ಮಾಡು, ಸಂಬಂಧಿಸು,ಪುನರಾವರ್ತನೆ ಮಾಡು, ಪನಃ ಬರೆ, ಸಾರಸಂಗ್ರಹಿಸು, ಹೇಳು, ಬರೆ.
|
ಮೌಲ್ಯಮಾಪನ: ಯೋಚನೆಗಳ ಅಥವ ವಸ್ತುಗಳ ಬಗೆಗೆ ತೀರ್ಮಾನ ಕೊಡುವುದು
|
ಉದಾಹರಣೆ ; ಬಹು ಪರಿಣಾಮಕಾರಿ ಪರಿಹಾರದ ಆಯ್ಕೆ. ಅತ್ಯಂತ ಅರ್ಹ ಅಭ್ಯರ್ಥಿಯನ್ನು ಸೇವೆಗೆ ಆರಿಸುವುದು, ಹೊಸ ಆಯವ್ಯಯ ಪತ್ರದ ವಿವರಣೆ ಮತ್ತು ಸಮರ್ಥನೆ. ಮುಖ್ಯ ಪದಗಳು: ತಿಳಿಸು, ಹೋಲಿಕೆ, ಅಂತಿಮಗೊಳಿಸು, ವ್ಯತ್ಯಾಸ ಗುರುತಿಸು, ಟೀಕಿಸು, ಟಿಪ್ಪಣಿ, ಸಮರ್ಥಿಸು, ವಿವರಿಸು, ವಿವರಣೆ ನೀಡು, ತಾರತಮ್ಯಮಾಡು, ಮೌಲ್ಯಮಾಪನಮಾಡು, ವ್ಯಾಖ್ಯಾನಿಸು, ಸಂಬಂಧಿಸು ಸಾರ ನೀಡು, ಬೆಂಬಲಿಸು
|
No comments:
Post a Comment