ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 ತಿರಸ್ಕಾರ ಮೆಟ್ಟಿ ನಿಂತ ಡೇವಿಡ್ | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Monday, March 09, 2015

ತಿರಸ್ಕಾರ ಮೆಟ್ಟಿ ನಿಂತ ಡೇವಿಡ್

  Pundalik       Monday, March 09, 2015
ತಿರಸ್ಕಾರ ಮೆಟ್ಟಿ ನಿಂತ ಡೇವಿಡ್


ತಿರಸ್ಕಾರ ಮನಸ್ಸನ್ನು ಕುಗ್ಗಿಸುತ್ತದೆಆತ್ಮವಿಶ್ವಾಸ ಕಡಿಮೆ ಮಾಡುತ್ತದೆತಿರಸ್ಕಾರವನ್ನು ಎದುರಿಸಿದ ಮನುಷ್ಯ ಮಾಡುವ ಒಳ್ಳೆಯ ಕಾರ್ಯವನ್ನು ತೊರೆದು ನಿಷ್ಕ್ರಿಯನಾಗುವಸಂದರ್ಭ­ಗಳೂ ಅನೇಕಬದುಕಿನಲ್ಲಿ  ತಿರಸ್ಕಾರ ಎದುರಿಸಿ ಪುಟದೆದ್ದು ನಿಲ್ಲದವನು ಯಾವನೂ ನಾಯಕನಾಗಲಾರನಾಯಕ­ರಾದ­ವರು  ತಿರಸ್ಕಾರವನ್ನೇ ಮೆಟ್ಟಲಾಗಿಮಾಡಿಕೊಂಡು ಮೇಲೆದ್ದು ಸಾಧಕ­ರಾಗುತ್ತಾರೆ.
ಬೈಬಲ್ಲಿನ ಕಥೆ­ಗಳಲ್ಲಿ ಡೇವಿಡ್ ಕಥೆ ಬಹಳ ಮಾರ್ಮಿಕ­ವಾ­ದದ್ದುಡೇವಿಡ್ ತನ್ನ ಜೀವನದಲ್ಲಿ ಅನುಭವಿಸಿದಷ್ಟು ತಿರಸ್ಕಾರ­ವನ್ನು ಯಾರೂ ಅನು­ಭವಿ­ಸಿ­ರಲಿಕ್ಕಿಲ್ಲ.ಇಸ್ರೇಲಿನ ರಾಜನಾಗಿದ್ದ ಸೌಲನ ಆಡಳಿತವನ್ನು ದೇವರು ಮೆಚ್ಚ­ಲಿಲ್ಲನಿನ್ನ ಬದಲಾಗಿ ನಾನು ಒಪ್ಪುವ ಒಬ್ಬನನ್ನು ರಾಜನನ್ನಾಗಿ ಮಾಡು­ತ್ತೇನೆ ಎಂದು ತಿಳಿಸಿ  ಕಾರ್ಯಕ್ಕೆಪ್ರವಾದಿ ಸಾಮ್ಯುವೆಲ್‌­ನನ್ನು ನಿಯಮಿಸಿದಅವನಿ­ಗಿದ್ದ ಕರ್ತವ್ಯವೆಂದರೆ ಬೆತ್ಲೆಹೆಮ್ನಲ್ಲಿದ್ದ ಜೆಸ್ಸಿಯ ಮನೆಗೆ ಹೋಗಿ ಅವನ ಒಬ್ಬ ಮಗನನ್ನು ರಾಜನನ್ನಾಗಿ ಮಾಡುವುದು.ಜೆಸ್ಸಿಗೆ ಏಳು ಜನ ಗಂಡುಮಕ್ಕಳುಅದ­ರಲ್ಲಿ ಕಡೆಯವನು ಡೇವಿಡ್ಅವನ ತಂದೆಯೇ ಅವನನ್ನು ತಿರಸ್ಕರಿಸಿ ಬಿಟ್ಟಿದ್ದ.
 ಹುಡುಗ ಕುರಿಕಾಯುವುದನ್ನು ಬಿಟ್ಟರೆ ಯಾವುದಕ್ಕೂ ಪ್ರಯೋಜನ­ವಿಲ್ಲ­­ವೆಂಬುದು ಅವನ ಮತದಯವಿಟ್ಟು ಒಂದು ಕ್ಷಣ ಡೇವಿಡ್ ಸ್ಥಾನದಲ್ಲಿ ನಿಂತು ಯೋಚಿಸಿಅದೆಂಥಹೀನ ಪರಿಸ್ಥಿತಿತಂದೆ ತನ್ನ ಏಳೂ ಮಕ್ಕಳನ್ನು ಕರೆದು ಅದ್ಭುತ­ವಾದ ವಿಷಯ ತಿಳಿಸುತ್ತಾನೆ. ‘ಇಂದು ನಮ್ಮ ಮನೆಗೆ ಪ್ರವಾದಿ ಸಾಮ್ಯು­ವೆಲ್ ಬರಲಿದ್ದಾರೆನನ್ನ ಮಕ್ಕಳಲ್ಲಿಒಬ್ಬನನ್ನು ಇಸ್ರೇಲಿನ ರಾಜನನ್ನಾಗಿ ಮಾಡು­ತ್ತಾರೆಆದ್ದರಿಂದ ನೀವೆಲ್ಲ ಚೆನ್ನಾಗಿ ಅಲಂಕಾರ ಮಾಡಿ­ಕೊಂಡು ಸಿದ್ಧರಾಗಿರಿಯಾರಿಗೆ ದೈವ ಒಲಿಯುತ್ತದೆಯೋ ಹೇಳುವುದೆಂತು?ಆದರೆ ಡೇವಿಡ್ನೀನು ಇಲ್ಲಿ ಇರಬೇಕಿಲ್ಲನಿಷ್ಪ್ರಯೋಜಕ ನೀನು.
ಹೊರಡು ನೀನು ಕಾಡಿಗೆ ಕುರಿ­ಗಳೊಂ­ದಿಗೆನಿನ್ನ ಅಣ್ಣಂದಿರು ಆರು ಜನ ಇಲ್ಲಿದ್ದರೆ ಸಾಕು’.  ಹುಡುಗ ತಲೆ ತಗ್ಗಿಸಿ ಕಾಡಿಗೆ ನಡೆದಡೇವಿಡ್ ಅಣ್ಣಂದಿರೆಲ್ಲರೂ ಅವನನ್ನುತಿರಸ್ಕರಿ­ಸಿದರುಈತ ಬೆಳೆ ಬೆಳೆಸಿ ಕಾಳುಗಳನ್ನು ತೆಗೆದುಕೊಂಡು ಅಣ್ಣಂದಿರ ಮನೆಗೆ ಹೋದರೆಕಾಳು­ಗಳನ್ನು ತೆಗೆದು­ಕೊಂಡು ಇವನನ್ನು ಹೊರಗೆ ತಳ್ಳಿಬಿಡು­ವರು,ನೀನೇಕೆ ಇಲ್ಲಿಗೆ ಬಂದೆಕುರಿ ತೆಗೆದುಕೊಂಡು ಕಾಡಿಗೆ ಹೋಗು ಎಂದು ಅಪಮಾನಿಸುವರುರಾಜ­ನಾ­ಗಿದ್ದ ಸೌಲ ಕೂಡ ತುಂಬ ಅಪಮಾನ ಮಾಡಿದತನಗೆ ಬೇಕಾದಾಗ ಇವ­­ನ್ನು ಕರೆಸಿ­ಕೊಂಡು ಇವನು ನುಡಿಸುವ ವಾದ್ಯವನ್ನು ಕೇಳಿ ಸಂತೋಷ­ಪಡುವ ಮತ್ತು ಮರುಕ್ಷಣವೇ ಭರ್ಜಿಯಿಂದ ಚುಚ್ಚಿ ಓಡಿಸಿ ಬಿಡುವ.
ಆದರೆಪ್ರವಾದಿ ಸಾಮ್ಯುವೆಲ್ ಬಂದು ಜೆಸ್ಸಿಯ ಎಲ್ಲ ಮಕ್ಕಳನ್ನು ಒಬ್ಬೊಬ್ಬ­­ನ್ನಾಗಿ ಕರೆದಅವನ ಮನಸ್ಸಿನಲ್ಲಿ ಭಗವಂತ ಕುಳಿತುಇವನಲ್ಲಇವನಲ್ಲ ಎಂದು ಹೇಳುತ್ತಲೇಬಂದಆಗ ಒಬ್ಬ ಮಗ ಎಲಿಯಾಬ್ ಎದುರು ಬಂದಅವನ ಭವ್ಯ ಆಕೃತಿಯನ್ನು ನೋಡಿ ಒಂದು ಕ್ಷಣ ಸಾಮ್ಯುವೆಲ್ ಕೂಡ ಇವನೇ ರಾಜ­ನಾಗುವವನು ಎನ್ನಿಸಿತುತಕ್ಷಣ ಅವನಮನಸ್ಸಿನಲ್ಲಿ ಭಗವಂತ ಹೇಳಿದಬಾಹ್ಯ ಆಕಾರವನ್ನು ನೋಡಿ ತೀರ್ಮಾನಿ­ಸಬೇಡಹೃದಯದ ನಿಷ್ಕಲ್ಮತೆಯನ್ನು ನೋಡುಆರು ಮಕ್ಕಳನ್ನು ನೋಡಿದ ಮೇಲೆ ಸಾಮ್ಯುವೆಲ್ಕೇಳಿದ, ‘ಜೆಸ್ಸಿನಿನ್ನ ಎಲ್ಲ ಮಕ್ಕಳೂ ಬಂದರೇ?’ ಜೆಸ್ಸಿ ಹೇಳುತ್ತಾನೆ, ‘ರಾಜನಾಗಬಹುದಾಗಿದ್ದ ಆರು ಜನ­ರನ್ನು ನೀವು ಕಂಡಿದ್ದೀರಿ.
ಇನ್ನೊಬ್ಬ ನಿರುಪಯೋಗಿ ಮಗ ಕಾಡಿ­ನಲ್ಲಿ ಕುರಿ ಮೇಯಿ­ಸಲು ಹೋಗಿದ್ದಾನೆ’. ‘ಅವನನ್ನೂ ಕರೆ’ ಎನ್ನುತ್ತಾನೆ ಸಾಮ್ಯುವೆಲ್ಡೇವಿಡ್ ಬಂದು ಮುಂದೆ ನಿಂತ ತಕ್ಷಣ ಈತನೇಭಗವಂತ ನಿಯಮಿಸಿದ ಚಕ್ರ­ವರ್ತಿ ಎಂದು ಖಾತ್ರಿಯಾಗಿ ಅವನನ್ನೇ ಸಿಂಹಾಸನದ ಮೇಲೆ ಪ್ರತಿಷ್ಠಾಪಿಸುತ್ತಾನೆಜನರು ನಮ್ಮನ್ನು ಅಳೆಯುವ ರೀತಿಭಗವಂತ ನಮ್ಮನ್ನುನೋಡುವ ರೀತಿ ಸಂಪೂರ್ಣ ಬೇರೆಯಾದದ್ದುಎಲ್ಲರೂ ನಮ್ಮನ್ನು ನಮ್ಮ ಹಣದಿಂದಅಧಿಕಾರ­ದಿಂದಜನಪ್ರಿಯತೆಯಿಂದ ಅಳೆದರೆ ಭಗವಂತ ನಮ್ಮನ್ನು ನಮ್ಮ ಹೃದಯದಶುದ್ಧತೆ­­ಯಿಂದ ಅಳೆಯುತ್ತಾನೆ.
ಉಳಿದ ವಿಷಯ­ಗಳು ಕೆಲಕಾಲ ಯಶಸ್ಸನ್ನು ನೀಡಿ­ದಂತೆ ಕಂಡರೂ ಕೊನೆಗೆ ಭಗವಂತನ ಆಯ್ಕೆಯೇ ನಿಲ್ಲುವುದುಆದ್ದರಿಂದ ಬದುಕಿ­ನಲ್ಲಿ ಜನ ತೋರುವ ತಿರಸ್ಕಾರ ಅಥವಾತೋರಿಕೆಯ ಆದರಕ್ಕೆ ಮನ ಸೋಲುವ ಬದಲು ಹೃದಯವನ್ನು ಆದಷ್ಟು ಶುದ್ಧವಾಗಿಟ್ಟುಕೊಳ್ಳುವು­ದರೆಡೆಗೆ ಮನ ನೀಡುವುದು ಕ್ಷೇಮ
logoblog

Thanks for reading ತಿರಸ್ಕಾರ ಮೆಟ್ಟಿ ನಿಂತ ಡೇವಿಡ್

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *