ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Monday, March 02, 2015

  Pundalik       Monday, March 02, 2015

ಆದರ್ಶ ಗ್ರಾಮ: 661 ಸಂಸದರಿಂದ ದತ್ತು

aadarsha graama: 661 samsadarindha dattu (2 Mar) : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸಂಸದರ 
* ಆದರ್ಶ ಗ್ರಾಮ ಯೋಜನೆಯಡಿ ಈವರೆಗೂ 661 ಸಂಸದರು ಗ್ರಾಮಗಳನ್ನು ದತ್ತು ಪಡೆದಿದ್ದಾರೆ. 
* ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಯ ಗುರಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಅಕ್ಟೋಬರ್ 11 ರಂದು ಈ ಯೋಜನೆಯನ್ನು ಉದ್ಘಾಟಿಸಿದ್ದರು. 
* 661ರ ಸಂಸದರ ಪೈಕಿ 485 ಲೋಕಸಭೆ ಹಾಗೂ 176 ರಾಜ್ಯಸಭೆ ಸದಸ್ಯರು ದತ್ತು ಗ್ರಾಮಗಳನ್ನು ಪಡೆದಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಬಿರೇಂದ್ರ ಸಿಂಗ್ ಅವರು ರಾಜ್ಯಸಭೆಗೆ ಸೋಮವಾರ ತಿಳಿಸಿದರು.  
*' ಸಂಸದರ ಆದರ್ಶ ಗ್ರಾಮ ಯೋಜನೆಗೆ ಉತ್ತಮ ಸ್ಪಂದನೆ ದೊರೆತಿದೆ. ಯೋಜನೆಯತ್ತ ಶೇಕಡ 84 ರಷ್ಟು ಸಂಸದರು ಆಸಕ್ತಿ ತೋರಿದ್ದಾರೆ' ಎಂದು ಪ್ರಶ್ನೋತ್ತರ ವೇಳೆಯಲ್ಲಿ ಅವರು ಸದನಕ್ಕೆ ತಿಳಿಸಿದರು. 
* ಸಾಮಾಜಿಕ ಹಾಗೂ ಸಾಂಸ್ಕೃತಿಕ ವಲಯ ಸೇರಿದಂತೆ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಯನ್ನು ಕೇಂದ್ರೀಕರಿಸುವ ಗ್ರಾಮೀಣಾಭಿವೃದ್ಧಿಯ ಯೋಜನೆಯೇ ಸಂಸದರ ಆದರ್ಶ ಗ್ರಾಮ ಯೋಜನೆ

ಚೀನಾ: 4 ಲಕ್ಷ ಕೋಟಿ ರಸ್ತೆ ಯೋಜನೆಗೆ ಚಾಲನ

(2 Mar) ಬೀಜಿಂಗ್‌  ಚೀನಾ ಮತ್ತು ಮಧ್ಯ ಏಷ್ಯಾ ದೇಶಗಳ ನಡುವೆ ವ್ಯಾಪಾರ ಮತ್ತು ಜನ ಸಂಚಾರಕ್ಕಾಗಿ ದೇಶದ ವಾಯವ್ಯ ಭಾಗದ ಗನ್ಸು ಪ್ರಾಂತ್ಯದಲ್ಲಿ ಮಹತ್ವದ ರಸ್ತೆ ಯೋಜನೆಯೊಂದಕ್ಕೆ ಚಾಲನೆ ನೀಡಲಾಗಿದೆ. 

* ಚೀನಾದ ಮಹತ್ವಾಕಾಂಕ್ಷಿ ಸಿಲ್ಕ್‌ ರೂಟ್‌ ಯೋಜನೆಯ ಭಾಗವಾಗಿರುವ ಇದಕ್ಕೆ 6,400 ಕೋಟಿ ಡಾಲರ್‌ (₨ಸುಮಾರು ₨ 4 ಲಕ್ಷ ಕೋಟಿ) ವೆಚ್ಚವಾಗಲಿದೆ. 

* ಆರು ವರ್ಷಗಳ ಅವಧಿಯ ಈ ಯೋಜನೆಯಲ್ಲಿ 4,070 ಕಿ.ಮೀ. ಎಕ್ಸ್‌ಪ್ರೆಸ್‌ ವೇ ಸೇರಿ 60,000 ಕಿ.ಮೀ ರಸ್ತೆ ನಿರ್ಮಿಸಲಾಗುತ್ತದೆ. ಈಗಾಗಲೇ ಇರುವ ರಸ್ತೆ ಸಂಪರ್ಕ ಜಾಲ ಅಭಿವೃದ್ಧಿ ಪಡಿಸಲಾಗುತ್ತದೆ. 

* ಗನ್ಸು ಪ್ರಾಂತ್ಯದೊಂದಿಗೆ ಯಾವುದೇ ಕೇಂದ್ರ ಏಷ್ಯಾ ದೇಶಗಳ ಗಡಿಗಳು ಸಂಪರ್ಕ ಹೊಂದಿಲ್ಲದಿದ್ದರೂ ಇದೊಂದು ಮಹಾತ್ವಕಾಂಕ್ಷಿ ಯೋಜನೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. 

* ಇದಕ್ಕೆ ಎಲ್ಲಿಂದ ಹಣ ಹೊಂದಿಸಲಾಗುವುದು ಎಂಬ ಬಗ್ಗೆ ಸರ್ಕಾರ ಯಾವುದೇ ಮಾಹಿತಿ ನೀಡಿಲ್ಲ. ಈ ಯೋಜನೆಯಡಿ 12 ವಿಮಾನ ನಿಲ್ದಾಣಗಳನ್ನು ಮುಂದಿನ 6 ವರ್ಷಗಳಲ್ಲಿ ನಿರ್ಮಿಸಲಾಗುತ್ತದೆ. 

* ಇದರಿಂದ ಪ್ರಾಂತ್ಯದ ಶೇ 82 ರಷ್ಟು ಜನರಿಗೆ ವಿಮಾನಸೇವೆ ಒದಗಿಸಲು ಸಾಧ್ಯವಾಗುತ್ತದೆ. ಏಷ್ಯಾ, ಆಫ್ರಿಕಾ ಮತ್ತು ಯುರೋಪ್‌ನ ದೇಶಗಳನ್ನು ರಸ್ತೆ ಮತ್ತು ಜಲ ಮಾರ್ಗದ ಮೂಲಕ ಸಂಪರ್ಕಿಸುವ ಸಿಲ್ಕ್‌ ರೂಟ್‌ ಯೋಜನೆಯಲ್ಲಿ ಭಾಗವಹಿಸುವಂತೆ ಭಾರತವನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಕೋರಿದ್ದಾರೆ


ಆಯವ್ಯಯದಲ್ಲಿ ಚಾಣಕ್ಯ ನೀತಿ

* (2 Mar) ರಾಜ್ಯ ಸರ್ಕಾರಗಳು ಮಾಮೂಲಿನಂತೆ 2015-16ನೇ ಸಾಲಿನ 'ಆಯವ್ಯಯ' ಮಂಡಿಸುವ ಕಾಲ ಸಮೀಪಿಸುತ್ತಿದೆ. 

* ಪುರಾತನ ಆರ್ಥಿಕ ತಜ್ಞ ಚಾಣಕ್ಯನ ಆಡಳಿತ ನೀತಿಯಂತೆ, 'Government should tax its people like a bee gets nectar' ಎಂಬುದನ್ನು ನೆನಪಿಟ್ಟುಕೊಂಡು ತೆರಿಗೆಗಳನ್ನು ಶ್ರೀಸಾಮಾನ್ಯನ ಮೇಲೆ ಹೊರಿಸಲಿವೆಯೇ? ಕಾದು ನೋಡುವ ಕಾಲ ಸನ್ನಿಹಿತವಾಗಿದೆ. ಸರ್ಕಾರದ ವಿತ್ತೀಯ ಹೊರೆಗಳು ಸುಕೋಮಲ ಪುಷ್ಪದಿಂದ (ಶ್ರೀಸಾಮಾನ್ಯನ) ಜೇನು ನೊಣವು (ಸರ್ಕಾರ) ನೋವಾಗದ ರೀತಿಯಲ್ಲಿ ಹೀರುತ್ತದೆಯೋ ಅಥವಾ ಪುಷ್ಪವನ್ನೇ ಹಿಂಡುತ್ತದೆಯೋ ಕಾದು ನೋಡೋಣ

ಯಶಸ್ವಿನಿ ಆರೋಗ್ಯ ಯೋಜನೆ ವಿಸ್ತರಿಸಿ

* ಯಶಸ್ವಿನಿ ಆರೋಗ್ಯ ಯೋಜನೆಯನ್ನು ಗ್ರಾಮ ಹಾಗೂ ನಗರ ಪ್ರದೇಶಗಳಿಗೂ ವಿಸ್ತರಿಸಿ ಬಡವರಿಗೆ ಅನುಕೂಲ ಮಾಡಿಕೊಡಬೇಕೆಂದು ಸರ್ಕಾರದ ಉದ್ದೇಶ ಸರಿಯಷ್ಟೆ. 

* ಆದರೆ ಅದನ್ನು ಕೇವಲ 70 ವರ್ಷ ವಯಸ್ಸಿನೊಳಗಿರುವವರಿಗೆ ಮಾತ್ರ ಎಂಬ ಷರತ್ತು ವಿಧಿಸಲಾಗಿದೆ. 

* ಗ್ರಾಮಾಂತರ ನೌಕರರು, ವಿಮಾ ಯೋಜನೆ, ಭವಿಷ್ಯನಿಧಿ, ಪಿಂಚಣಿ ಸೌಲಭ್ಯವಿದ್ದು ಆಸ್ಪತ್ರೆ ವೆಚ್ಚವನ್ನು ಹೇಗಾದರೂ ನಿಭಾಯಿಸಿಯಾರು. ಆದರೆ ಗ್ರಾಮಾಂತರ ಪ್ರದೇಶದ ಕೃಷಿಕರು ಏನು ಮಾಡುವುದು? 

* ಅವರು 70ರ ನಂತರ ಬದುಕಿರದೆ ಸಾಯಬೇಕೆಂಬುದು ಸರ್ಕಾರದ ನಿರ್ಧಾರವೇ? 

* ಅಥವಾ 70 ವರ್ಷದ ನಂತರ ಇಚ್ಛಾಮರಣಿಗಳಾಗಬಹುದೆ? ಸರ್ಕಾರ ದಯವಿಟ್ಟು ವೃದ್ಧರಿಗೆ 70 ವರ್ಷ ವಯಸ್ಸಿನ ನಂತರವೂ ಯಶಸ್ಸಿನಿ ಯೋಜನೆಯ ಲಾಭ ದೊರೆಯುವಂತೆ ಮಾಡಬೇಕಾಗಿ ವಿನಂತಿ

ಸುಕನ್ಯಾ' ಸಮೃದ್ಧಿಯಿಂದ ಬೆಳಗಲಿ

* (2 Mar) ಇತ್ತೀಚೆಗೆ ಅಂಚೆ ಕಚೇರಿಗಳಲ್ಲಿ 'ಸುಕನ್ಯಾ ಸಮೃದ್ಧಿ ಖಾತೆ' ಎಂಬ ಅತ್ಯುತ್ತಮ ಉಳಿತಾಯ ಯೋಜನೆಯನ್ನು ಪ್ರಾರಂಭಿಸಲಾಗಿದೆ. 
* ವಿದ್ಯಾವಂತರು ಇದರ ಅನುಕೂಲ ಪಡೆಯುವುದು ಅಷ್ಟೇನೂ ಕಷ್ಟವಲ್ಲ. 
* ಆದರೆ, ಗ್ರಾಮೀಣ ಜನರು ಹಾಗೂ ಅವಿದ್ಯಾವಂತ ನಗರವಾಸಿಗಳಿಗೆ ಇದರ ಪ್ರಯೋಜನ ಪಡೆಯುವುದು ಸುಲಭವಲ್ಲ. ಈ ಉತ್ತಮ ಯೋಜನೆಯನ್ನು ಅರ್ಹರೆಲ್ಲರಿಗೂ ತಲುಪಿಸಿ ಅವರಿಗೆ ಹಾಗೂ ಅಂಚೆ ಕಚೇರಿಗಳಿಗೆ ಲಾಭವಾಗುವಂತೆ, ಅಂಚೆ ಕಚೇರಿಯ ಏಜೆಂಟರ ಮೂಲಕ ಈ ಕೆಲಸವನ್ನು ಮಾಡಿಸಬಹುದು. ಪ್ರತೀ ಖಾತೆಗೆ ಇಂತಿಷ್ಟು ಎಂದು ಪ್ರೋತ್ಸಾಹಧನ ಪ್ರಕಟಿಸಿದರೆ ಅವರೂ ಉತ್ಸಾಹದಿಂದ ತೊಡಗಿಕೊಳ್ಳುವರು. 

ಶಾಲಾ ಮಕ್ಕಳ ಬಿಸಿಯೂಟದ ಮೆನು ಬದಲಾವಣೆ

shaala makkala bisiyutadha menu badalaavane (2 Mar) ಬೆಂಗಳೂರು, ಮಾ.2 : ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ನೀಡುವ ಬಿಸಿಯೂಟದ ಮೆನುವಿನಲ್ಲಿ ಬದಲಾವಣೆ ಮಾಡಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. 
* ಮಕ್ಕಳಿಗೆ ಊಟದಲ್ಲಿ ಪೌಷ್ಠಿಕಾಂಶಯುಕ್ತ ಅಂಶಗಳನ್ನು ಸೇರಿಸಲು ಮೆನುವನ್ನು ಸಿದ್ಧಪಡಿಸಲಾಗಿದೆ. 
*ಸದ್ಯ, ನೀಡುತ್ತಿರುವ ಮಧ್ಯಾಹ್ನದ ಬಿಸಿಯೂಟದ ಮೆನುವಿನಲ್ಲಿ ವಾರದ 4 ದಿನ ಬೇಳೆ, ತರಕಾರಿ ಬಳಸಿದ ಅನ್ನ-ಸಾಬಾರ್ ನೀಡಲಾಗುತ್ತಿತ್ತು. ಇದರಲ್ಲಿ ಸ್ವಲ್ಪ ಬದಲಾವಣೆ ಮಾಡಿ, ಯಾವ ದಿನ ಯಾವ ಪದಾರ್ಥ ಬಳಸಿ ಸಾಂಬಾರ್ ಮಾಡಬೇಕು ಎನ್ನುವ ಪಟ್ಟಿಯನ್ನು ತಯಾರು ಮಾಡಲಾಗಿದೆ. 
*ಶನಿವಾರ ನೀಡುತ್ತಿದ್ದ ಉಪ್ಪಿಟ್ಟು, ಪೊಂಗಲ್ ಬದಲಾಗಿ ಚಪಾತಿ ಸೇರಿದಂತೆ ಗೋಧಿ ಉತ್ಪನ್ನಗಳ ಆಹಾರವನ್ನು ನೀಡಲು ಚಿಂತನೆ ನಡೆಸಲಾಗಿದೆ. 
* ಅಡುಗೆ ಮಾಡಲು ಬಳಸುವ ಸಾಂಬಾರ್ ಪುಡಿಗಳು ಪ್ರಮಾಣೀಕರಿಸಿದ್ದಾಗಿರಬೇಕು ಎಂದು ಸೂಚನೆ ನೀಡಲು ನಿರ್ಧರಿಸಲಾಗಿದೆ. [ಸಿಎಂ ತವರು ಜಿಲ್ಲೆಯಲ್ಲಿ ಸಮಸ್ಯೆ ತಂದ ಬಿಸಿಯೂಟ]
* ಮಕ್ಕಳ ಆರೋಗ್ಯ, ಶಕ್ತಿ ವೃದ್ಧಿಗೆ ಸಹಾಯಕವಾಗುವಂತೆ ಕೋಳಿ ಮೊಟ್ಟೆ ಹಾಗೂ ಬಾಳೇಹಣ್ಣು ನೀಡಲು ಇಲಾಖೆ ಚಿಂತನೆ ನಡೆಸಿದೆ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾದ ಮೊಹಮದ್ ಮೊಹಸಿನ್ ತಿಳಿಸಿದ್ದಾರೆ.

ಮಂದೀರ-ಮಸೀದಿ ಕಾದಂಬರಿ ಪ್ರೀ ಬುಕ್ಕಿಂಗ್ ಮಾಡ್ಕೊಳಿ

mandira-masidi kaadambari pri bukking maadkoli (2 Mar) ಬೆಂಗಳೂರು, ಮಾ.2: 'ಮಂದಿರ-ಮಸೀದಿ', ಪ್ರೇಮ - ಧರ್ಮ - ರಾಜಕೀಯ - ಸಾಹಿತ್ಯ - ಇತಿಹಾಸ ಇವೆಲ್ಲವನ್ನು ಆಧಾರವಾಗಿಟ್ಟುಕೊಂಡು ಯುವ ಬರಹಗಾರ ಸುಪ್ರೀತ್ ಕೆ.ಎನ್ ಬರೆದಿರುವ ಹೊಚ್ಚ ಹೊಸ ಕಾದಂಬರಿ ಮಾ.8ರಂದು ಲೋಕಾರ್ಪಣೆಯಾಗಲಿದೆ.
* ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಸುಪ್ರೀತ್ ಕೆಎನ್ ಅವರು ಪತ್ರಿಕೋದ್ಯಮ ವಿದ್ಯಾರ್ಥಿಯಾಗಿದ್ದ ಕಾಲದಿಂದಲೇ ತಮ್ಮ ಲೇಖನಗಳ ಮೂಲಕ ಗಮನ ಸೆಳೆದವರು. ಸದ್ಯಕ್ಕೆ: 'ವಿವೇಕ ಹಂಸ' ಪತ್ರಿಕೆಯಲ್ಲಿ ಅಂಕಣ ಬರಹಗಾರ. 
* ಕಾದಂಬರಿ (?), ಟಿ.ಕೆ.ಹಳ್ಳಿ ಅಂಡ್ ಮಳವಳ್ಳಿ ಮತ್ತು ಸ್ವ್ಯಾಪಿಂಗ್ ಇವರ ಕೃತಿಗಳು. 'ಮಂದಿರ-ಮಸೀದಿ' ಇವರ ನಾಲ್ಕನೆಯ ಕೃತಿ. ಮೀಡಿಯಾ ಪಬ್ಲಿಕೇಷನ್ ಹೊರ ತಂದಿರುವ ಈ ಕಾದಂಬರಿ ಬಿಡುಗಡೆ ಸಮಾರಂಭದ ವಿವರ

ವಿಶ್ವದ ಮೊದಲ ವಿದ್ಯುತ್ ಸಂವಹನ ಉಪಗ್ರಹ ಕಕ್ಷೆಗೆ

vishvadha modala vidyut samvahana upagraha kakshege(2 Mar) ವಾಷಿಂಗ್ಟನ್, ಮಾ. 2: ಅಮೆರಿಕ ಮೂಲದ ಅಂತರಿಕ್ಷ ಸಂಸ್ಥೆ (ಸ್ಪೇಸ್ ಎಕ್ಸ್) ವಿಶ್ವದ ಮೊದಲ ವಿದ್ಯುತ್ ಸಂವಹನ ಮಾದರಿಯ ಉಪಗ್ರಹವನ್ನು ಕಕ್ಷೆಗೆ ಯಶಸ್ವಿಯಾಗಿ ಬಿಟ್ಟಿದೆ. 
* 'ಫಾಲ್ಕನ್ 9' ರಾಕೆಟ್ ಗಳ ಮೂಲಕ ಉಪಗ್ರಹವನ್ನು ಕಕ್ಷೆಗೆ ಸೇರಿಸಲಾಗಿದೆ. ಕ್ಯಾಲಿಫೋರ್ನಿಯಾದ ಕೇಪ್ ಕಾನ್ ವೆರಲ್ ಉಪಗ್ರಹ ಉಡಾವಣಾ ಕೇಂದ್ರದಿಂದ ಮೇ 1 ರಂದು ಉಪಗ್ರಹ ಹಾರಿಸಿ ಬಿಡಲಾಗಿದೆ. 
* ಫ್ರೆಂಚ್ ಮೂಲದ ಬೋಯಿಂಗ್ ಮತ್ತು ಏಷ್ಯಾ ಬ್ರೋಡ್ ಕಾಸ್ಟ್ ಸೆಟ್ ಲೈಟ್ ಸಂಸ್ಥೆ ತಯಾರಿಸಿರುವ ರಾಕೆಟ್ ಗಳ ಮೂಲಕ ಉಪಗ್ರಹ ಉಡಾವಣೆ ಮಾಡಲಾಗಿದೆ.
* [ಸಂವಹನ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ದಾಟಿದ ಭಾರತ] ಶಕ್ತಿಯ ಪರಿಪೂರ್ಣ ಬಳಕೆ ಆಧಾರದಲ್ಲಿ ತಯಾರಾಗಿರುವ ಉಪಗ್ರಹ ಭೂಮಿಯ ಕಕ್ಷೆಯಲ್ಲಿ 2 ದಶಕ ಕಾಲ ಸುತ್ತುವರಿಯಲಿದೆ. 
* ಸಾಂಪ್ರದಾಯಿಕ ಅಥವಾ ಸಾಮಾನ್ಯವಾಗಿ ನಿರ್ಮಾಣವಾಗುವ ರಾಕೆಟ್ ಗಳಿಗಿಂತ ಭಿನ್ನವಾಗಿ ಇದನ್ನು ತಯಾರು ಮಾಡಲಾಗಿದೆ.  
*
ಉಪಗ್ರಹದ ಹೊರಭಾಗವನ್ನು ಸಂಪೂರ್ಣವಾಗಿ ವಿದ್ಯುತ್ ಉಪಕರಣಗಳಿಂದಲೇ ಕೂಡಿದೆ ಎಂದು ಪೋರ್ಬ್ಸ್ ತನ್ನ ವರದಿಯಲ್ಲಿ ತಿಳಿಸಿದೆ.
*[ಜಿಎಸ್‌ಎಲ್‌ವಿ ಎಂಕೆ 3 ಯಶಸ್ಸಿನ 10 ಬೆಳವಣಿಗೆಗಳು] ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿರುವ ಸ್ಪೇಸ್ ಎಕ್ಸ್ ಈ ವರ್ಷದ ಅಂತ್ಯದ ವೇಳೆಗೆ ಇನ್ನು ಎರಡು 'ಫಾಲ್ಕನ್ 9' ರಾಕೆಟ್ ತಯಾರು ಮಾಡುವ ಇಂಗಿತ ವ್ಯಕ್ತಪಡಿಸಿದೆ. ಮಾರ್ಚ್ 21 ಕ್ಕೆ ಇದೇ ರೀತಿಯ ಇನ್ನೊಂದು ಉಪಗ್ರಹವನ್ನು ಉಡಾವಣೆ ಮಾಡಲಾಗುತ್ತಿದೆ

ಉಲ್ಕಾಪಾತ ಧೃಢೀಕರಿಸಿದ ವಿಜ್ಞಾನಿಗಳು

ulkaapaata dhrudhikarisidha vignaanigalu ಕೊಚ್ಚಿ: ಕಾಸರುಗೋಡು ಸೇರಿದಂತೆ ಕೇರಳದ ಹಲವೆಡೆ ಬಾನಂಗಳದಲ್ಲಿ ಬೆಂಕಿ ಚೆಂಡು ಪ್ರತ್ಯಕ್ಷಗೊಂಡು ವಿಸ್ಮಯ ಹಾಗೂ ಅಚ್ಚರಿ ಮೂಡಿಸಿದ್ದ ಘಟನೆಯನ್ನು ವಿಜ್ಞಾನಿಗಳು ಉಲ್ಕಾಪಾತವೆಂದು ದೃಢೀಕರಿಸಿದ್ದಾರೆ.
* ಕೇರಳದಲ್ಲಿ ಶುಕ್ರವಾರ ರಾತ್ರಿ ಕರಿಮಲ್ಲೂರು ಗ್ರಾಮದ ಜನತೆಗೆ ಆಗಸದಲ್ಲಿ ಬೃಹತ್ ಬೆಂಕಿಯುಂಡೆಯೊಂದು ಕಂಡುಬಂದಿತ್ತು. 
* ಇದೇ ರೀತಿಯ ದೃಶ್ಯ ಅಲ್ಲಿನ ಸುತ್ತಮುತ್ತಲಿನ ಪ್ರದೇಶದಲ್ಲಿಯೂ ಗೋಚರವಾಗಿತ್ತು. 
* ಈ ಬೆಂಕಿಯುಂಡೆಗಳು ಹಾದುಹೊಗುವಾಗ ಭಾರಿ ಶಬ್ಧ ಹಾಗೂ ಭೂಕಂಪದ ಅನುಭವವಾಗುವಂತೆ ಅಲ್ಲಿನ ಜನರಿಗೆ ಭಾಸವಾಗಿತ್ತಲ್ಲದೆ ಜನರಲ್ಲಿ ಆತಂಕವನ್ನುಂಟು ಮಾಡಿತ್ತು. 
* ಕೆಲವು ಗಂಟೆಗಳ ನಂತರ ಈ ಶಬ್ಧ ಕಂಡುಬಂದಿರಲಿಲ್ಲ. 
* ಶನಿವಾರ ಬೆಳಿಗ್ಗೆ ಎರ್ನಾಕುಲಂ ಜಿಲ್ಲೆಯ ಎರಡು ಪ್ರದೇಶಗಳಲ್ಲಿ ದೊಡ್ಡದಾದ ಗುಂಡಿಗಳು ಬಿದ್ದಿದ್ದವು. ರಾತ್ರಿ ಕಂಡ ಬೆಂಕಿ ಉಂಡೆಗಳೇ ಭೂಮಿಗೆ ಬಿದ್ದಿರುವುದರಿಂದ ಗುಂಡಿಯಾಗಿದೆ ಎಂದು ಅಲ್ಲಿನ ಸ್ಥಳೀಯರ ವಾದವಾಗಿತ್ತು.
* ಘಟನೆ ತಿಳಿದ ಸ್ಥಳೀಯ ವಿಪತ್ತು ನಿರ್ವಹಣಾ ಪಡೆಯ ಅಧಿಕಾರಿಗಳು ಉಲ್ಕಾಪಾತದಿಂದ ಗುಂಡಿಯಾಗಿದೆ ಎಂದು ಅಂದಾಜು ಮಾಡಿದ್ದರು. ಸ್ಥಳದಲ್ಲಿ ಸಿಕ್ಕ ಉಲ್ಕಾಪಾತದ ಎಲ್ಲಾ ಸ್ಯಾಂಪಲ್‌ಗಳನ್ನು ಭಾರತೀಯ ಭೂಗರ್ಭ ಇಲಾಖೆಗೆ ಕಳುಹಿಸಿದ್ದರು. ಧರಗೆ ಬಿದ್ದ ಉಲ್ಕಾಪಾತದ ಕೆಲವು ಸ್ಯಾಂಪಲ್‌ಗಳನ್ನು ಪರಿಶೀಲಿಸಿರುವ ಭಾರತೀಯ ಭೂಗರ್ಭ ಇಲಾಖೆಯ ವಿಜ್ಞಾನಿಗಳು ಬಾನಂಗಳದಿಂದ ಧರೆಗೆ ಬಿದ್ದಿರುವುದು ಆಗಸದಲ್ಲಿನ ಉಲ್ಕೆಗಳೇ ಎಂದು

ಅಜಿತ್ ಜೈನ್ ಮುಖ್ಯಸ್ಥ?

ajit jain mukhyastha? ನ್ಯೂಯಾರ್ಕ್: ಮೈಕ್ರೋಸಾಫ್ಟ್ , ನೋಕಿಯಾ ಆಯ್ತು. ಈಗ ಜಗತ್ತಿನ ಮತ್ತೊಂದು ಪ್ರಮುಖ ಉದ್ಯಮ ಸಮೂಹದ ಮುಖ್ಯಸ್ಥ ಸ್ಥಾನ ಭಾರತೀಯನ ಪಾಲಾಗುವ ಸಾಧ್ಯತೆಯಿದೆ. 
* ವಿಶ್ವದ ಬಹುಕೋಟಿ ಉದ್ಯಮಿ ವಾರನ್ ಬಫೆಟ್ ರ ಉದ್ಯಮ ಸಮೂಹಕ್ಕೆ ಬಫೆಟ್ ಗೆ ಆಪ್ತರಾದ ಭಾರತೀಯ ಮೂಲದ ಅಜಿತ್ ಜೈನ್ ಮುಖ್ಯಸ್ಥರಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ. 
* ಈ ಮೂಲಕ ಜಗತ್ತಿನ ಉದ್ಯಮ ಲೋಕದಲ್ಲಿ ಭಾರತೀಯರ ಹಿಡಿತ ಇನ್ನಷ್ಟು ಹೆಚ್ಚಲಿದೆ. 
* ಜೈನ್ ಮತ್ತು ತಮ್ಮ ಸಂಸ್ಥೆಯ ಮತ್ತೊಬ್ಬ ಹಿರಿಯ ಅಧಿಕಾರಿ ಗ್ರೆಗ್ ಅಬೆಲ್ ಹೆಸರನ್ನು ಮುಂಚೂಣಿಯಲ್ಲಿರಿಸಲಾಗಿದೆ.
* ಅದು ಹೀಗಿದ್ದರೂ ಷೇರುದಾರರಿಗೆ, ಉದ್ಯೋಗಿಗಳಿಗೆ ವಾರ್ಷಿಕವಾಗಿ ಬರೆಯಲಿರುವ ಪತ್ರದಲ್ಲಿ ಬಫೆಟ್ ಅವರು ಜೈನ್ ವೃತ್ತಿಪರತೆ ಬಗ್ಗೆ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ ಎನ್ನಲಾಗಿದೆ





logoblog

Thanks for reading

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *