ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Thursday, March 19, 2015

  Pundalik       Thursday, March 19, 2015
 * ವ್ಯವಸ್ಥೆಯು 1793 ಕಾರ್ನ್ವಾಲೀಸ್ ರಿಂದ ಪ್ರಾರಂಭವಾಯಿತು. ಇದು ಬಂಗಾಳ, ಬಿಹಾರ, ಒರಿಸ್ಸಾ ರಾಜ್ಯಗಳಲ್ಲಿ ಮುಖ್ಯವಾಗಿ ಈ ವ್ಯವಸ್ಥೆಯು ಜಾರಿಯಲ್ಲಿತ್ತು,

* ರಾಯತ್ವಾರಿ ವ್ಯವಸ್ಥೆ ಇದು ಲಾರ್ಡ್ ಮುನ್ರೋ ಮತ್ತು ಚಾರ್ಲ್ಸ್ ರೀಡ್ ರವರಿಂದ ಪ್ರಾರಂಭವಾಯಿತು. ಈ ವ್ಯವಸ್ಥೆಯ ಪ್ರಕಾರ ರಿಕಾರ್ಡಿಯೋ ಸಿದ್ದಾಂತದಂತೆ ನೇರವಾಗಿ ರೈತರು ಮತ್ತು ಸರ್ಕಾರದ ನಡುವೆ ಮಣ್ಣಿನ ಗುಣ ಮತ್ತು ಬೆಳೆಯ ವಿಧದಂತೆ ಸುಮಾರು 30 ವರ್ಷಗಳ ಒಪ್ಪಂದದಂತೆ ಕಂದಾಯ ನಿರ್ಧರಿಸಲಾಗುತ್ತಿತ್ತು. ಈ ವ್ಯವಸ್ಥೆಯು ಬಾಂಬೆ, ಮದ್ರಾಸ್ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಜಾರಿಯಲ್ಲಿದ್ದಿತು


* ಮಹಲ್ವಾರಿ ವ್ಯವಸ್ಥೆ ಇದು ಜಮೀನ್ದಾರಿ ವ್ಯವಸ್ಥೆಯ ಮುಂದುವರೆದ ಭಾಗವಾಗಿದ್ದು ಕಂದಾಯವನ್ನು ಕಾಲಕಾಲಕ್ಕೆ ತಕ್ಕಂತೆ ಪಾವತಿಸಬೇಕಾಗಿತ್ತು ಈ ವ್ಯವಸ್ಥೆಯು ಗಂಗಾ ತೀರದ ಪ್ರದೇಶಗಳು, ಪಂಜಾಬ್ ಮತ್ತು ಪಶ್ಚಿಮ ಉತ್ತರ ಪ್ರದೇಶ ಮುಂತಾದ ಕಡೆ ಜಾರಿಯಲ್ಲಿತ್ತು

* 1857 ಮಾರ್ಚ್ 29ರಂದು ಸಿಪಾಯಿದಂಗೆಯು 19ನೇ ಇನ್ಫಾಂಟ್ರಯಲ್ಲಿದ್ದ ಮಂಗಲ್ ಪಾಂಡೆಯ ಮುಖಾಂತರ ಪ್ರಾರಂಭವಾಯಿತು ಇದಕ್ಕೆ ಪ್ರಮುಖ ಕಾರಣಗಳು ರಾಜಕೀಯ ಕಾರಣ, ಆರ್ಥಿಕ ಕಾರಣ, ಸೈನಿಕ ಕಾರಣ, ಧಾರ್ಮಿಕ ಕಾರಣ, ಸಾಮಾಜಿಕ ಕಾರಣ ಮುಂತಾದವು ಈ ದಂಗೆಯಲ್ಲಿ ಭಾಗವಹಿಸಿದ್ದ ಪ್ರಮುಖ ವ್ಯಕ್ತಿಗಳು 
    *ದೆಹಲಿಯಿಂದ ಭಕ್ತಖಾನ್, 
    *ಕಾನ್ಪುರದಿಂದ ನಾನಾಸಹೇಬ, 
    *ಅವಧ್ ಯಿಂದ ತಾತ್ಯಾಟೋಪಿ, ಝಾನ್ಸಿಯಿಂದ ರಾಣಿ ಲಕ್ಷೀಬಾಯಿ, 
    *ಬಿಹಾರದಿಂದ ಕುನ್ವರ್ ಸಿಂಗ್ ಮತ್ತು ಅಮರ್ ಸಿಂಗ್, 
     *ಮಥುರದಿಂದ ದೇವಿಸಿಂಗ್ ಮತ್ತು
      *ಮೀರತ್ ನಿಂದ ಕದಮ್ ಸಿಂಗ್. ಈ ದಂಗೆಯು ವಿಫಲವಾಯಿತು ಇದಕ್ಕೆ ಮುಖ್ಯ ಕಾರಣಗಳು ಭಾರತದವರೇ ಆದ ಅನೇಕ ರಾಜರುಗಳು ಬ್ರಿಟೀಷರಿಗೆ ಸಹಾಯಮಾಡಿ ದಂಗೆ ಹತ್ತಿಕ್ಕಲು ಕಾರಣರಾದರು, ದಂಗೆಕಾರರಲ್ಲಿ ಸರಿಯಾದ ಸುಧಾರಿತ ಆಯುಧಗಳಿರಲಿಲ್ಲ, ಸರಿಯಾದ ನಾಯಕತ್ವದ ಕೊರತೆ, ದಂಗೆಕಾರರಲ್ಲಿ ಸಂವಹನದ ಕೊರತೆ ಮುಂತಾದವು. ಈ ದಂಗೆಯ ಕಾರಣದಿಂದ ಭಾರತದ ಒಕ್ಕೂಟ ಮೂಡಲು ಸಹಾಯವಾಯಿತು ಮತ್ತು 1858ರಲ್ಲಿ ಬ್ರಿಟೀಷರಿಂದ ಗೌರ್ನಮೆಂಟ್ ಆಫ್ ಇಂಡಿಯಾ ಕಾಯ್ದೆ ಜಾರಿಯಾಯಿತು.



ಸ್ವತಂತ್ರ ಪೂರ್ವದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಉದಯಗಳು

ಬ್ರಹ್ಮ ಸಮಾಜ ಇದು 1828ರಲ್ಲಿ ರಾಜಾರಾಂ ಮೋಹನ್ ರಾಯ್ ರವರಿಂದ ಸ್ಥಾಪಿಸಲ್ಪಟ್ಟಿತು ಮತ್ತು ಡೇವಿಡ್ ಹರೆಯವರ ಜೊತೆಗೂಡಿ ಹಿಂದು ಕಾಲೇಜನ್ನು ಸ್ಥಾಪಿಸಿದರು ಮತ್ತು ವೇದಾಂತ ಕಾಲೇಜನ್ನು ಸ್ಥಾಪಿಸಿದರು, ಮತ್ತು ಇವರು ಮೀರತ್ ಉಲ್ ಅಕ್ಬರ್ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು
ಪ್ರಾರ್ಥನ ಸಮಾಜ ಕೇಸಬ್ ಚಂದ್ರ ಸೇನ್ ರವರಿಂದ ಪ್ರಾರಂಭವಾಯಿತು, ಪ್ರಾರ್ಥನ ಸಭಾವು ಎಂ.ಜಿ. ರಾನಡೆಯವರಿಂದ ಪ್ರಾರಂಭವಾಯಿತು, ಆನಂದ್ ಮೋಹನ್ ಬೋಸ್ ರಿಂದ ಸಾಧಾರಣ ಬ್ರಹ್ಮಸಮಾಜ ಸ್ಥಾಪಿತವಾಯಿತು.
ಆರ್ಯ ಸಮಾಜ ಇದು 1875ರಲ್ಲಿ ಸ್ವಾಮಿ ದಯಾನಂದ ಸರಸ್ವತಿಯವರಿಂದ ಪ್ರಾರಂಭವಾಯಿತು ಇದರ ಧ್ಯೇಯವಾಕ್ಯ ವೇದಗಳಿಗೆ ಹಿಂದಿರುಗಿ ಎಂದು ಮತ್ತು ಇವರು ಸಿದ್ದಿ ಆಂದೋಲನವನ್ನು ಪ್ರಾರಂಭಿಸಿ ಇದರ ಮೂಲಕ ಹಿಂದು ಧರ್ಮದಿಂದ ಬೇರೆಯಾದವರನ್ನು ಮತ್ತೆ ಹಿಂದು ಧರ್ಮಕ್ಕೆ ಸೇರಿಸಿಕೊಳ್ಳವುದಾಗಿತ್ತು.
ರಾಜಕೃಷ್ಣ ಆಶ್ರಮ ಇದು 1893ರಲ್ಲಿ ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ಬಂದ ನಂತರ ವಿವೇಕಾನಂದರು 1897 ರಲ್ಲಿ ಪ್ರಾರಂಭಿಸಿದರು
ವೇದ ಸಮಾಜ ಇದು ದಕ್ಷಿಣಭಾರತದಲ್ಲಿ ಶ್ರೀಧರಲು ನಾಯ್ಡುರಿಂದ ಸ್ಥಾಪಿತವಾಯಿತು
ಧರ್ಮ ಸಭಾ ಇದು ರಾಧಾಕಾಂತ ದೇವರಿಂದ ಪ್ರಾರಂಭವಾಯಿತು
ರಾಷ್ಟ್ರೀಯ ಸಾಮಾಜಿಕ ಸಭೆ ಎಂ.ಜಿ. ರಾನಡೆಯವರಿಂದ ಪ್ರಾರಂಭವಾಯಿತು.
ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ 1915 ರಲ್ಲಿ ಗೋಪಾಲ ಕೃಷ್ಣ ಗೋಖಲೆಯವರಿಂದ ಪ್ರಾರಂಭವಾಯಿತು
ದೇವ ಸಮಾಜ ಶಿವ ನಾರಾಯಣ್ ಅಗ್ನಿಹೋರ್ತಿಯವರಿಂದ ಪ್ರಾರಂಭವಾಯಿತು
ಥಿಯಾಸಫಿಕಲ್ ಸೊಸೈಟಿ ಇದು 1875ರಲ್ಲಿ ಮೇಡಂ ಬ್ಲಾವಟ್ಸ್ಕಿಯವರಿಂದ ಪ್ರಾರಂಭವಾಯಿತು ಇದು ಭಾರತದಲ್ಲಿ ಆನಿಬೆಸೆಂಟ್ ರವರಿಂದ 1882ರಲ್ಲಿ ಪ್ರಾರಂಭವಾಯಿತು, ಅನಿಬೆಸೆಂಟ್ ರವರು ಸೆಂಟ್ರಲ್ ಹಿಂದು ಕಾಲೇಜನ್ನು ಪ್ರಾರಂಭಿಸಿದರು ನಂತರ ಇದು ಬನಾರಸ್ ಹಿಂದು ಕಾಲೇಜ್ ಎಂದು ಪ್ರಸಿದ್ಧಿಪಡೆಯಿತು
ಅಲಿಘರ್ ಚಳುವಳಿ ಇದು ಸಯ್ಯದ್ ಅಹಮದ್ ಖಾನ್ ರಿಂದ ಪ್ರಾರಂಭಿಸಲ್ಪಟ್ಟು ಮುಸ್ಲಿಮರಿಗೆ ಪಾಶ್ಚಾತ್ಯ ಮತ್ತು ಉನ್ನತ ಶಿಕ್ಷಣ ನೀಡುವುದು ಇದರ ಪ್ರಮುಖ ಗುರಿಯಾಗಿದ್ದಿತು
ಸತ್ಯ ಶೋಧಕ ಸಮಾಜ ಇದು 1873ರಲ್ಲಿ ಜ್ಯೋತಿಬಾ ಫುಲೆಯವರಿಂದ ಪ್ರಾರಂಭವಾಗಿ ಬ್ರಾಹ್ಮಣಿಕೆಯ ವಿರುದ್ಧದ ಧ್ವನಿಯಾಗಿ ಹಿಂದುಳಿದ ಮತ್ತು ಕೆಳವರ್ಗಗಳಿಗೆ ಶಿಕ್ಷಣ ನೀಡುವುದರ ಜೊತೆಗೆ ಅವರ ಹಕ್ಕುಗಳನ್ನು ಎತ್ತಿಹಿಡಿಯುವುದಾಗಿತ್ತು


ಜಸ್ಟೀಸ್ ಪಾರ್ಟಿ ಮೂಮೆಂಟ್ ಈ ಚಳುವಳಿಯು ಟಿ.ಎಂ.ನಾಯರ್ ಮತ್ತು ಆರ್.ಟಿ.ಚೆಟ್ಟಿಯವರಿಂದ ಪ್ರಾರಂಭವಾಗಿ ಇವರು ಸ್ಥಾಪಿಸಿದ ಸೌತ್ ಇಂಡಿಯನ್ ಲಿಬರಲ್ ಫೆಡರೇಷನ್ ಸಂಘದ ಮೂಲಕ ಆಡಳಿತದಲ್ಲಿ ಮತ್ತು ಸಮಾಜದಲ್ಲಿ ಬ್ರಾಹ್ಮಣಿಕೆಯ ಪ್ರಾಭಲ್ಯ ತಡೆಯುವುದಾಗಿತ್ತು


ಸೆಲ್ಫ್ ರೆಸ್ಪೆಕ್ಟ್ ಮೂಮೆಂಟ್ ಇದು ತಮಿಳುನಾಡಿನಲ್ಲಿ 1925ರಲ್ಲಿ ಇ.ವಿ.ರಾಮಸ್ವಾಮಿ ನಾಯ್ಕರ್ ರವರಿಂದ ಪ್ರಾರಂಭವಾಯಿತು.


ಡಾ: ಅಂಬೇಡ್ಕರ್ ರವರು ಬಹಿಷ್ಕೃತ ಹಿತಕಾರಿಣಿ ಸಭಾ, ಬಹಿಷ್ಕೃತ ಭಾರತ ಮತ್ತು ಸಮಾಜ ಸಮತಾ ಸಭ ಎಂಬ ಸಂಸ್ಥೆಯನ್ನು ಹಿಂದುಳಿದ ವರ್ಗದವರಿಗಾಗಿ ಪ್ರಾರಂಭಿಸಿದರು, ಇವರು ಪರಿಶಿಷ್ಟ ಜಾತಿಗಳ ಫೆಡರೇಷನ್ ಎಂಬ ರಾಜಕೀಯ ಪಾರ್ಟಿಯನ್ನು ಸ್ಥಾಪಿಸಿದರು.


ನೀಲಿ ಬೆಳೆಗಾರರ ದಂಗೆ ಈ ದಂಗೆಯು 1860ರಲ್ಲಿ ಬಂಗಾಳದ ನೀಲಿ ಬೆಳೆಗಾರರು ಮತ್ತು ಬ್ರಿಟೀಷ್ ಕಾರ್ಖಾನೆಗಳ ವಿರುದ್ಧ ನೆಡೆಯಿತು ಇದರ ನೇತೃತ್ವವನ್ನು ವಹಿಸಿದವರು ದಿಗಂಬರ ಬಿಸ್ವಾಸ್ ಮತ್ತು ವಿಷ್ಣು ಬಿಸ್ವಾಸ್ ಈ ದಂಗೆಗೆ ಸಂಬಂಧ ಪಟ್ಟಂತೆ ದೀನ ಬಂಧುಮಿತ್ರರವರು ನೀಲ ದರ್ಪಣ್ ಮಿತ್ರ ಎಂಬ ಕೃತಿ ರಚಿಸಿದರು.


ಭಾರತೀಯ ರಾಷ್ಟ್ರೀಯ ಕಾಂಗ್ರೆಸ್: 1885ರಲ್ಲಿ ಏ.ಓ.ಹ್ಯೂಂ ರವರಿಂದ ಪ್ರಾರಂಭಿಸಲ್ಪಟ್ಟಿತು "Safety Volve" ಎಂಬುದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಗೆ ಸಂಬಂಧಪಟ್ಟಿದೆ. ಇದರ ಮೊದಲ ಸಮ್ಮೇಳನವು ಬಾಂಬೆಯಲ್ಲಿ ಡಬ್ಲ್ಯೂ.ಸಿ.ಬ್ಯಾನರ್ಜಿಯವರ ಅಧ್ಯಕ್ಷತೆಯಲ್ಲಿ ಲಾರ್ಡ್ ಡರ್ಫಿನ್ ವೈಸ್ರಾಯ್ ಕಾಲದಲ್ಲಿ ಆಯಿತು. ಈ ಸಮ್ಮೇಳನಕ್ಕೆ 72 ಜನ ಪ್ರತಿನಿಧಿಗಳು ಆಗಮಿಸಿದ್ದರು. 1907ರ ಸೂರತ್ ಅಧಿವೇಷಣದಲ್ಲಿ ಸೌಮ್ಯವಾದಿಗಳು ಮತ್ತು ಉಗ್ರಗಾಮಿಗಳೆಂದು ಇಬ್ಬಾಗವಾಯಿತು. ಉಗ್ರಗಾಮಿಗಳ ಗುಂಪಿನಲ್ಲಿ ಲಾಲ್, ಬಾಲ್ ಪಾಲ್ ಎಂದು ಹೆಸರಾಗಿದ್ದ ಲಾಲ ಲಜಪತರಾಯ್, ಬಾಲಗಂಗಾಧರ ತಿಲಕ್, ಬಿಪಿನ್ ಚಂದ್ರಪಾಲ್ ಪ್ರಮುಖವಾಗಿದ್ದರು ಇವರ ಅಧ್ಯಕ್ಷತೆಯನ್ನು ಅರವಿಂದೋ ಘೋಷ್ ವಹಿಸಿದ್ದರು. ಇದರ ಮೊದಲ ಮುಸ್ಲಿಂ ಅಧ್ಯಕ್ಷರು ಬಹ್ರುದ್ದೀನ್ ತಯ್ಯಬ್ಜಿ. ಇದರ ಮೊದಲ ಮಹಿಳಾ ಅಧ್ಯಕ್ಷರು ಆನಿಬೆಸೆಂಟ್. 1929ರ ಲಾಹೋರ್ ಅಧಿವೇಷಣದಲ್ಲಿ ಜವಾಹರ್ ಲಾಲ್ ನೆಹರುರವರ ಅಧ್ಯಕ್ಷತೆಯಲ್ಲಿ ಪೂರ್ಣಸ್ವರಾಜ ಘೋಷಣೆಯನ್ನು ಕೈಗೊಳ್ಳಲಾಯಿತು. 1931ರ ಕರಾಚಿ ಅಧಿವೇಷಣದಲ್ಲಿ ವಲ್ಲಭಬಾಯಿ ಪಾಟೀಲರ ಅಧ್ಯಕ್ಷತೆಯಲ್ಲಿ ಮೂಲಭೂತಹಕ್ಕು ಮತ್ತು ರಾಷ್ಟ್ರೀಯ ವಿತ್ತ ಕಾರ್ಯಕ್ರಮದ ನಿರ್ಣಯ ತೆಗೆದುಕೊಳ್ಳಲಾಯಿತು. 1938 ರ ಹರಿಪುರ ಅಧಿವೇಷಣದಲ್ಲಿ ಸುಭಾಷ್ ಚಂದ್ರ ಬೋಸರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಯೋಜನಾ ಆಯೋಗ ಸ್ಥಾಪಿತವಾಯಿತು ಮತ್ತು 1939ರಲ್ಲಿ ತ್ರಿಪುರ ಅಧಿವೇಷಣದಲ್ಲಿ ಬೋಸರು ಪುನ: ಆಯ್ಕೆಯಾದಾಗ ಗಾಂಧೀಜಿಯವರು ಅಸಮದಾನಗೊಂಡಿದ್ದರಿಂದ ಬೋಸರು ರಾಜಿನಾಮೆನೀಡಿದರು, ಅವರ ಜಾಗದಲ್ಲಿ ರಾಜೇಂದ್ರ ಪ್ರಸಾದರು ಅಧ್ಯಕ್ಷತೆ ವಹಿಸಿದ್ದರು. 1906 ಕಲ್ಕತ್ತಾ ಅಧಿವೇಷಣದಲ್ಲಿ ಸ್ವರಾಜ್ ಅಂದರೆ ಸಂಪೂರ್ಣ ಸ್ವಸರ್ಕಾರವು ಭಾರತೀಯರ ಗುರಿಎಂದು ನಿರ್ಣಯ ಅಂಗೀಕರಿಸಲಾಯಿತು.


ಬಂಗಾಳದ ವಿಭಜನೆ: 16-10-1905ರಂದು ಲಾರ್ಡ್ ಕರ್ಜನ್ ಕಾಲದಲ್ಲಿ ರಾಷ್ಟ್ರೀಯ ಚಳುವಳಿಯನ್ನು ಹತ್ತಿಕ್ಕಲು ವಿಭಜಿಸಲಾಯಿತು. ನಂತರ ರಾಷ್ಟ್ರಪ್ರೇಮಿಗಳ ತೀವ್ರ ಒತ್ತಡದಿಂದ 1911ರಲ್ಲಿ ಮತ್ತೆ ಒಂದುಗೂಡಿಸಲಾಯಿತು.

ಸ್ವದೇಶಿ ಚಳುವಳಿ: 1905ರಲ್ಲಿ ಬನಾರಸ್ ಅಧಿವೇಷಣದಲ್ಲಿ ಮೊದಲಬಾರಿಗೆ ಕರೆನೀಡಲಾಯಿತು. ಈ ಕರೆಯ ಪ್ರಕಾರ ಬ್ರಿಟೀಷರ ವಸ್ತುಗಳನ್ನು ಮತ್ತು ಬಟ್ಟೆಗಳನ್ನು ಉಪಯೋಗಿಸದಂತೆ ಮತ್ತು ಸುಡುವಂತೆ ಪ್ರತಿಜ್ಞೆ ಕೈಗೊಳ್ಳಲಾಯಿತು. 


ಮುಸ್ಲಿಂ ಲೀಗ್ ಇದು ಅಗಾಖಾನ್ ರವರ ಅಧ್ಯಕ್ಷತೆಯಲ್ಲಿ 1906ರಲ್ಲಿ ಪ್ರಾರಂಭಿಸಲಾಯಿತು. ಇದರ ಪ್ರಕಾರ ಮುಸ್ಲಿಮರಿಗೆ ಪ್ರತ್ಯೇಕ ಚುನಾವಣೆಗೆ ಆದೇಶಿಸಲಾಯಿತು. 


ಗದ್ದಾರ್ ಪಕ್ಷ ಇದು 1913ರಲ್ಲಿ ಲಾಲ ಹರದಯಾಳ್, ತಾರಕನಾಥ್ ದಾಸ್ ಮತ್ತು ಸೋಹನ್ ಸಿಂಗರಿಂದ ಪ್ರಾರಂಭವಾಯಿತು ಇದರ ಮುಖ್ಯಕಛೇರಿಯು ಸ್ಯಾನ್ ಫ್ರಾನ್ಸಿಸ್ಕೋದಲ್ಲಿತ್ತು. 
ಹೋಂ ರೂಲ್ ಚಳುವಳಿ - ತಿಲಕರು ಮಾಂಡಲೆ ಜೈಲಿನಿಂದ ಹಿಂತಿರುಗಿದ ನಂತರ 1916ರಲ್ಲಿ ಆನಿಬೆಸಂಟರೊಡಗೂಡಿ ಹೋಂರೂಲ್ ಚಳುವಳಿಯನ್ನು ಸ್ಥಾಪಿಸಿದರು ಇದರ ಮುಖ್ಯ ಉದ್ದೇಶ ಬ್ರಿಟೀಷರಿಂದ ಸಂಪೂರ್ಣ ಆಡಳಿತವನ್ನು ಕಿತ್ತುಕೊಂಡು ದೇಶೀಯವಾಗಿ ಆಡಳಿತ ನೆಡೆಸುವುದಾಗಿತ್ತು. ಈ ಚಳುವಳಿಯಲ್ಲಿ ತಿಲಕರು ಸ್ವರಾಜ್ಯ ನನ್ನ ಜನ್ಮಸಿದ್ದಹಕ್ಕು ಇದನ್ನು ಪಡೆದೇ ತೀರುತ್ತೇನೆ ಎಂಬ ಘೋಷಣೆಯನ್ನು ಮಾಡಿದರು. 
ಲಕ್ನೋ ಒಪ್ಪಂದ 1916ರಲ್ಲಿ ನೆಡೆದು ಇದು ಟರ್ಕಿಯ ರಾಜನ ಮೇಲೆ ಬ್ರಿಟೀಷರು ಹೂಡಿದ ಯುದ್ಧದ ವಿರುದ್ಧವಾಗಿದ್ದಿತು. 
ಆಗಸ್ಟ್ ಘೋಷಣೆ: 1917ರಲ್ಲಿ ಬ್ರಿಟೀಷರಿಂದ ಘೋಷಿಸಲ್ಪಟ್ಟು ಇದರ ಪ್ರಕಾರ ಬ್ರಿಟೀಷ್ ಆಡಳಿತದಲ್ಲಿ ಭಾರತೀಯರನ್ನು ಹೆಚ್ಚಾಗಿ ಸೇರಿಸಿಕೊಳ್ಳುವುದಾಗಿತ್ತು. 


ರೌಲತ್ ಕಾಯ್ದೆ ಇದು 18-3-1919 ರಲ್ಲಿ ಜಾರಿಯಾಗಿ ಇದರ ಪ್ರಕಾರ ಬ್ರಿಟೀಷರಿಗೆ ಅನುಮಾನ ಬಂದ ವ್ಯಕ್ತಿಯನ್ನು ದೇಶದ್ರೋಹದ ಆಪಾದನೆಯ ಮೇಲೆ ಯಾವುದೇ ವಿಚಾರಣೆಯಿಲ್ಲದೆ 2 ವರ್ಷಗಳವರೆಗೆ ಜೈಲಿನ ಶಿಕ್ಷೆಯನ್ನು ನೀಡಬಹುದಾಗಿತ್ತು. ಮುಂದೆ ಈ ಕಾಯ್ದೆಯು ಗಾಂಧೀಜಿಯವರಿಗೆ ಅಸಹಕಾರ ಚಳುವಳಿ ನಡೆಸಲು ಕಾರಣವಾಯಿತು.
ಜಲಿಯನ್ ವಾಲಾಬಾಗ್ ದುರಂತ ಇದು 13-4-1919ರಲ್ಲಿ ನಡೆಯಿತು ಇದಕ್ಕೆ ಕಾರಣ ಪಂಜಾಬಿನಲ್ಲಿ ರೌಲತ್ ಕಾಯ್ದೆಯ ವಿರುದ್ಧ ಪ್ರತಿಭಟಿಸುತಿದ್ದಾಗ ಬ್ರಿಟೀಷರು ಡಾ|| ಕಿಚ್ಲು & ಸತ್ಯಪಾಲ್ ಅವರನ್ನು ಬಂಧಿಸಿದರು ಇದರ ವಿರುದ್ಧ ಜನರು ಜಲಿಯನ್ ವಾಲಾಬಾಗ್ ನಲ್ಲಿ ಸಭೆ ಸೇರಿದಾಗ ಆ ಸಭೆಯನ್ನು ಹತ್ತಿಕ್ಕಲು ಜನರಲ್ ಓ ಡಯರ್ ನನ್ನು ನೇಮಿಸಲಾಯಿತು ಇವನು ಆ ಜನರಿಗೆ ಯಾವುದೇ ಆದೇಶ ನೀಡದೆ ಬೇಕಾಬೆಟ್ಟಿ ಗುಂಡುಹಾರಿಸಿದಾಗ ಸಭೆ ಸೇರಿದ್ದ ನೂರಾರು ಜನರು ಹತ್ಯೆಯಾದರು ಮತ್ತು ಸಾವಿರಾರು ಜನರು ಗಾಯಾಳುಗಳಾದರು. ಈ ಘಟನೆಯ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳಾದಾಗ ಬ್ರಿಟೀಷರು ಇದರ ವಿಚಾರಣೆಗಾಗಿ ಹಂಟರ್ ಆಯೋಗವನ್ನು ನೇಮಿಸಿದರು. ಇದನ್ನು ಪ್ರತಿಭಟಿಸಿ ರವೀಂದ್ರನಾಥ ಟ್ಯಾಗೂರರು ತಮಗೆ ನೀಡಿದ್ದ ನೈಟ್ ಹುಡ್ ಪ್ರಶಸ್ತಿಯನ್ನು ಹಿಂತಿರುಗಿಸಿದರು. 
ಈ ಘಟನೆಗೆ ಪ್ರತಿಕಾರವಾಗಿ ಸರ್ದಾರ್ ಉಧಮ್ ಸಿಂಗರು ಲಂಡನ್ನಿನಲ್ಲಿದ್ದ ಜನರಲ್ ಓ ಡಯರ್ ನನ್ನು ಹುಡುಕಿಕೊಂಡು ಹೋಗಿ ಲಂಡನ್ನಿನಲ್ಲಿ ಹತ್ಯೆಗೈದರು.


ಕಿಲಾಫತ್ ಚಳುವಳಿ 1920 ರಲ್ಲಿ ಮೊಹಮ್ಮದ್ದ ಆಲಿ ಮತ್ತು ಶೌಕತ್ ಆಲಿ ಅವರಿಂದ ಪ್ರಾರಂಭವಾಯಿತು.
ಅಸಹಕಾರ ಚಳುವಳಿ ಸೆಪ್ಟೆಂಬರ್ 1920 ಇದು ರೌಲತ್ ಕಾಯ್ದೆ ಮತ್ತು ಬ್ರಿಟೀಷರ ಧೋರಣೆಯ ವಿರುದ್ಧ ಗಾಂಧೀಜಿಯವರು ಬ್ರಿಟೀಷ್ ಸರ್ಕಾರದ ವಿರುದ್ಧ ನೀಡಿದ ಕರೆಯಾಗಿತ್ತು ಇದರ ಪ್ರಕಾರ ಎಲ್ಲಾ ಭಾರತೀಯರಿಗೆ ಬ್ರಿಟೀಷರು ನೀಡಿದ್ದ ಪದಕ ಮತ್ತು ಬಿರುದುಗಳನ್ನು ವಾಪಸ್ ನೀಡುವುದು, ಸರ್ಕಾರದಲ್ಲಿ ಕೆಲಸ ನಿರ್ವಹಿಸುವ ಎಲ್ಲಾ ಭಾರತೀಯರು ರಾಜಿನಾಮೆ ನೀಡುವುದು, ಕೋರ್ಟು ಕಛೇರಿಗಳಿಗೆ ಬಹಿಷ್ಕಾರ ಹಾಕುವುದು, ಸೇನೆಯ ಭಾರತೀಯರು ಸೇನೆ ಬಿಟ್ಟುಬರುವುದು ಮತ್ತು ವಿದೇಶಿ ವಸ್ತುಗಳನ್ನು ಬಹಿಷ್ಕರಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು. ಮುಂದೆ ಚೌರಿ ಚೌರ ಘಟನೆಯ ನಂತರ ಈ ಚಳುವಳಿಯನ್ನು ಹಿಂತೆಗೆದುಕೊಳ್ಳಲಾಯಿತು.


ಚೌರಿ-ಚೌರ ಘಟನೆ 1922ರಲ್ಲಿ ಗೋರಖ್ ಪುರದ ಚೌರಿ-ಚೌರ ಎಂಬಲ್ಲಿ ಚಳುವಳಿಯಲ್ಲಿ ಭಾಗವಹಿಸಿದ್ದವರಮೇಲೆ ಪೊಲೀಸರು ವಿನಾಕಾರಣ ಹೊಡೆದ ಪರಿಣಾಮ ಚಳುವಳಿಗಾರರು ಅಲ್ಲಿದ್ದ ಪೊಲೀಸರನ್ನು ಕೂಡಿಹಾಕಿ ಸುಟ್ಟುಬಿಟ್ಟರು ಇದರ ಪರಿಣಾಮವಾಹಿ ಗಾಂಧೀಜಿಯವರು ತಮ್ಮ ಅಹಿಂಸಾ ಚಳುವಳಿಗೆ ಧಕ್ಕೆ ಬಂದಿತೆಂದು ಅಸಹಕಾರ ಚಳುವಳಿಯನ್ನು ನಿಲ್ಲಿಸಿದರು
ಸ್ವರಾಜ್ ಪಕ್ಷ 1923ರಲ್ಲಿ ಮೋತಿಲಾಲ್ ನೆಹರು, ಚಿತ್ತರಂಜನ್ ದಾಸ್ ಮತ್ತು ಕೇಲ್ಕರ್ ರವರು ಬ್ರಿಟೀಷ್ ಸರ್ಕಾರದ ವಿರುದ್ಧ ಚುನಾವಣೆಯಲ್ಲಿ ಸ್ಪರ್ದಿಸಲು ಸ್ಥಾಪಿಸಿದರು


ಸೈಮನ್ ಆಯೋಗ ಭಾರತದಲ್ಲಿ ರಾಜಕೀಯ ಪರಿಸ್ಥಿಯನ್ನು ಅವಲೋಕಿಸಲು ಬ್ರಿಟೀಷ್ ಸರ್ಕಾರವು 1927ರಲ್ಲಿ ಜಾನ್ ಸೈಮನ್ ರ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಿ ಭಾರತಕ್ಕೆ ಕಳುಹಿಸಿಕೊಟ್ಟಿತು ಆ ಆಯೋಗದಲ್ಲಿ ಭಾರತೀಯರಾರು ಇಲ್ಲದಿದ್ದರಿಂದ ಎಲ್ಲಾ ಭಾರತೀಯರು ಇದನ್ನು ಪ್ರತಿಭಟಿಸಿದರು.

ನೆಹರುವರದಿ 1928ರಲ್ಲಿ ಸೈಮನ್ ಆಯೋಗವನ್ನು ಪ್ರತಿಭಟಿಸಿದನಂತರ ಭಾರತದಲ್ಲಿ ಸ್ವಂತವಾಗಿಯೇ ಸಂವಿಧಾನವನ್ನು ರಚಿಸಲು ಮೊತಿಲಾಲ್ ನೆಹರುರವರ ಅಧ್ಯಕ್ಷತೆಯಲ್ಲಿ ವರದಿಯನ್ನು ಸಲ್ಲಿಸಲಾಯಿತು ಈ ವರದಿಯು ನೆಹರು ವರದಿಯೆಂದು ಪ್ರಖ್ಯಾತವಾಗಿದೆ


ಲಾಹೋರ್ ಸಮಾವೇಶ 19-12-1929 ರಲ್ಲಿ ಜವಾಹರ್ ಲಾಲ್ ನೆಹರು ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಅಧಿವೇಷಣ ನೆಡೆಯಿತು. ಈ ಸಮಾವೇಶದಲ್ಲಿ ನೆಹರುರವರು 26-1-1930ರಂದು ಪೂರ್ಣಸ್ವರಾಜ್ಯ ಘೋಷಣೆಮಾಡಿದರು. 31-12-1929ರಂದು ಈ ಸಮಾವೇಶದಲ್ಲಿ ಮೊದಲ ಬಾರಿಗೆ ತ್ರಿಮರ್ಣ ಧ್ವಜ ಹಾರಿಸಲಾಯಿತು ಲಾಹೋರ್ ನ ರಾವಿ ನದಿಯ ದಡದಲ್ಲಿ ಮತ್ತು 26-1-1930ರಂದು ಸ್ವತಂತ್ರದಿನ ಎಂದು ಘೋಷಿಸಲಾಯಿತು.


ಭಾರತದ ಹೊರಗಿನ ಸ್ವತಂತ್ರ ಕ್ರಾಂತಿಕಾರಿ ಸಂಘಗಳು

ಇಂಡಿಯಾ ಹೌಸ್ ಇದನ್ನು ಸ್ವಾಮಿ ಕೃಷ್ಣ ವರ್ಮರು ಲಂಡನ್ನಿನಲ್ಲಿ ಸ್ಥಾಪಿಸಿದರು, ಅಭಿನವ ಭಾರತ ಇದನ್ನು ವಿ.ಡಿ.ಸಾವರ್ಕರ್ ರವರು 1906ರಲ್ಲಿ ಲಂಡನ್ನಿನಲ್ಲಿ ಸ್ಥಾಪಿಸಿದರು.
ಗದ್ದರ್ ಪಾರ್ಟಿ ಇದನ್ನು 1913ರಲ್ಲಿ ಲಾಲಾ ಹರದಯಾಳ್ ಮತ್ತು ತಾರಕ್ ನಾಥ್ ದಾಸ್ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಸ್ಥಾಪಿಸಿದರು. ಲೀಗ್ ಮತ್ತು ಗೌರ್ನಮೆಂಟ್ ಇಂಡಿಯನ್ ಇಂಡಿಪೆಂಡೆನ್ಸ್ ಇದನ್ನು 1942 ರಲ್ಲಿ ರಾಸ್ ಬಿಹಾರಿ ಬೋಸರು ಟೋಕಿಯೋದಲ್ಲಿ ಸ್ಥಾಪಿಸಿದರು, ಲೀಗ್ ಆಫ್ ಇಂಡಿಯನ್ ನ್ಯಾಷನಲ್ ಆರ್ಮಿ ಇದನ್ನು 1942ರಲ್ಲಿ ರಾಸ್ ಬಿಹಾರಿ ಬೋಸರು ಟೋಕಿಯೋದಲ್ಲಿ ಸ್ಥಾಪಿಸಿದರು.
ಇಂಡಿಯನ್ ನ್ಯಾಷನಲ್ ಆರ್ಮಿ ಇದು ಸುಭಾಷ್ ಚಂದ್ರ ಭೋಸರಿಂದ ಸ್ಥಾಪಿತವಾಗಿದ್ದು ಇದರ ಪ್ರಧಾನ ಕಛೇರಿಗಳು ರಂಗೂನ್ ಮತ್ತು ಸಿಂಗಪೂರದಲ್ಲಿತ್ತು ಇದರ ಮಹಿಳಾ ಘಟಕದ ಹೆಸರು ಝಾನ್ಸಿ ರೆಜಿಮೆಂಟ್ ಇದರ ಕಮ್ಯಾಂಡರ್ ಲಕ್ಷ್ಮಿ ಸೆಹಗಲ್ 


ಸ್ವತಂತ್ರ ಪೂರ್ವ ಭಾರತದ ಪ್ರಮುಖ ಪತ್ರಿಕೆ ಮತ್ತು ಸಂಪಾದಕರು


ಬಂಗಾಳಗೆಜೆಟ್ ಇದು ಭಾರತದ ಮೊದಲ ಸಮಾಚಾರ ಪತ್ರಿಕೆಯಾಗಿದ್ದು ಇದರ ಸಂಪಾಕರು ಹಿಕಿ. ಕೇಸರಿ ಮತ್ತು ಮರಾಠ ಪತ್ರಿಕೆಗಳ ಸಂಪಾದಕರು ಬಾಲಗಂಗಾಧರನಾಥ ತಿಲಕರು, ವಂದೇ ಮಾತರಂ ಪತ್ರಿಕೆಯ ಸಂಪಾದಕರು ಅರವಿಂದೋ ಘೋಷ್, ಹಿಂದು ಪತ್ರಿಕೆಯ ಸಂಪಾದಕರು ರಾಘವಾಚಾರ್ಯ & ಅಯ್ಯರ್, ಸೋಮ್ ಪ್ರಕಾಶ ಪತ್ರಿಕೆಯ ಸಂಪಾದಕರು ಈಶ್ವರಚಂದ್ರ ವಿದ್ಯಾಸಾಗರ, ಹಿಂದುಸ್ಥಾನ್ಪತ್ರಿಕೆಯ ಸಂಪಾದಕರು ಮಾಳವೀಯ, ಮೂಕನಾಯಕ್ ಪತ್ರಿಕೆಯ ಸಂಫಾದಕರು ಡಾ|| ಬಿ.ಆರ್.ಅಂಬೇಡ್ಕರ್, ಅಲ್ ಹಿಲಾಲ್ ಪತ್ರಿಕೆಯ ಸಂಫಾದಕರು ಅಬ್ದುಲ್ ಕಲಾಂ ಅಜಾದ್, ಇಂಡಿಪೆಂಡೆಂಟ್ ಪತ್ರಿಕೆಯ ಸಂಪಾದಕರು ಮೊತಿಲಾಲ್ ನೆಹರು, ಪಂಜಾಬಿಪತ್ರಿಕೆಯ ಸಂಪಾದಕರು ಲಾಲ ಲಜಪತರಾಯ್, ನ್ಯೂ ಇಂಡಿಯಾ ಪತ್ರಿಕೆಯ ಸಂಪಾದಕರು ಆನಿಬೆಸೆಂಟ್, , ಸೌಮತ್ ಕುಮಿದಿ ಮತ್ತು ಮೀರತ್ - ಉಲ್ - ಅಕ್ಬರ್ಪತ್ರಿಕೆಯ ಸಂಪಾದಕರು ರಾಜಾ ರಾಮ ಮೊಹನರಾಯ್, ಇಂಡಿಯನ್ ಮಿರರ್ ಪತ್ರಿಕೆಯ ಸಂಪಾದಕರು ದೇವೇಂದ್ರನಾಥ ಟ್ಯಾಗೂರ್, ನವಜೀವನ, ಯಂಗ್ ಇಂಡಿಯಾ, ಹರಿಜನಪತ್ರಿಕೆಯ ಸಂಪಾದಕರು ಗಾಂದೀಜಿ, ಪ್ರಬುಧ್ಧ ಭಾರತ ಮತ್ತು ಉದ್ಬೋದನ ಪತ್ರಿಕೆಯ ಸಂಪಾದಕರು ಸ್ವಾಮಿ ವಿವೇಕಾನಂದ, 


ಪ್ರಮುಖ ಸ್ವತಂತ್ರ ಹೋರಾಟಗಾರರ ಲೇಖನಗಳು:


ಗುಲಾಮಗಿರಿ- ಜ್ಯೋತಿಬಾಪುಲೆ, ಫಕ್ತೂನ್-ಖಾನ್ಅಬ್ದುಲ್ ಗಫರ್ ಖಾನ್, ಎಕನಾಮಿಕ್ ಹಿಸ್ಟರ್ ಆಫ್ ಇಂಡಿಯಾ - ಆರ್.ಸಿ.ದತ್ತ್, ಪಾತೇರ್ ಪಾಂಚಾಲಿ - ಬಿ.ಬಿ.ಬ್ಯಾನರ್ಜಿ, ಎ ಗಿಫ್ಟ್ ಆಫ್ ಮನೋಥಿಸೀಸ್ - ರಾಜಾ ರಾಮ್ ಮೋಹನ್ ರಾಯ್, ಆನಂದ ಮಠ ಮತ್ತು ಸೀತಾರಾಮ - ಬಂಕಿಮ ಚಂದ್ರ ಚಟರ್ಜಿ, ಇಂಡಿಯನ್ ಸ್ಟ್ರಗಲ್ - ಸುಭಾಷ ಚಂದ್ರ ಭೋಸ್, ಪಾವರ್ಟಿ ಅಂಡ್ ಅನ್ ಬ್ರಿಟೀಷ್ ರೂಲ್ ಇನ್ ಇಂಡಿಯಾ - ದಾದಾ ಬಾಯಿ ನವರೋಜಿ, ಅನ್ ಹ್ಯಾಪಿ ಇಂಡಿಯಾ - ಲಾಲಾ ಲಜಪತರಾಯ್, ದಿ ಇಂಡಿಯನ್ ವಾರ್ ಆಫ್ ಇಂಡಿಪೆಂಡೆನ್ಸ್ - ವಿ.ಡಿ.ಸಾವರ್ಕರ್, ಇಂಡಿಯಾ ಡಿವೈಡೆಡ್ - ರಾಜೇಂದ್ರ ಪ್ರಸಾದ್, ದಿ ಡಿಸ್ಕವರಿ ಆಫ್ ಇಂಡಿಯಾ, ಗ್ಲಿಂಪ್ಸಸ್ ಆಫ್ ವರ್ಲ್ಡ್ ಹಿಸ್ಟರಿ, ಎ ಬಂಚ್ ಆಫ್ ಓಲ್ಡ್ ಲೆಟರ್ಸ್, ಇಂಡಿಪೆಂಡೆನ್ಸ್ ಅಂಡ್ ಆಫ್ಟರ್, ಇಂಡಿಯಾ ಅಂಡ್ ದಿ ವರ್ಲ್ಡ್ - ನೆಹರೂ, ನೀಲ್ ದರ್ಪಣ್ - ದೀನಬಂಧುಮಿತ್ರ, ಹಿಂದ್ ಸ್ವರಾಜ್ - ಎಂ,ಕೆ.ಗಾಂಧಿ, ವಾಟ್ ಕಾಂಗ್ರೆಸ್ ಅಂಡ್ ಗಾಂಧಿ ಹ್ಯಾವ್ ಡೂ ಅನ್ಟಚಬಲ್ಸ್ - ಡಾ|| ಅಂಬೇಡ್ಕರ್, ಭಾರತದ ಆರ್ಥಶಾಸ್ತ್ರದ ಪ್ರಬಂಧಗಳು ಇದರ ಲೇಖಕರು ಎಂ.ಜಿ.ರಾನಡೆ, ಆರ್ಕ್ಟಿಕ್ ಹೋಂ ಆಫ್ ಇಂಡಿಯಾ ಮತ್ತು ಗೀತರಹಸ್ಯ - ಬಾಲಗಂಗಾಧರ ತಿಲಕರು, ಇಂಡಿಯಾ ವಿನ್ಸ್ ಫ್ರೀಡಂ ಇದು ವಿವಾದಾತ್ಮಕ ಲೇಖನವಾಗಿದ್ದು ಇದರ ಲೇಖಕರು ಮೌಲಾನ ಅಬ್ದುಲ್ ಕಲಾಂ ಅಜಾದ್, 


ಉಪ್ಪಿನ ಸತ್ಯಾಗ್ರಹ: 12-3-1930ರಂದು ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ (ಬ್ರಿಟೀಷ್ ಆಢಳಿತದ ದೌರ್ಜನ್ಯದ ವಿರುದ್ಧ ಸಾಂಕೇತಿಕವಾಗಿ) ಉಪ್ಪಿನ ಮೇಲೆ ವಿಧಿಸಿದ್ದ ಕರದ ವಿರುದ್ಧವಾಗಿ ಉಪ್ಪಿನ ಸತ್ಯಾಗ್ರಹವನ್ನು ಆರಂಭಿಸಿದರು ಸುಮಾರು 78 ಜನ ಅನುಯಾಯಿಗಳೊಡನೆ ಸಬರಮತಿ ಆಶ್ರಮದಿಂದ ದಂಡಿಯ ಸಮುದ್ರ ತೀರದವರೆಗೆ ಸುಮಾರು 290 ದಿನಗಳ ಕಾಲ ಪಾದಯಾತ್ರೆಮಾಡಿ 6-4-1930ರಂದು ಸ್ವತ: ಉಪ್ಪನ್ನು ತಯಾರಿಸುವ ಮೂಲಕ ಬ್ರಿಟೀಷರ ಕಾನೂನನ್ನು ಬಹಿಷ್ಕರಿಸಿ ನಾಗರೀಕ ಅಸಹಕಾರ ಚಳುವಳಿಗೆ ನಾಂದಿಹಾಡಿದರು.


ಮೊದಲ ದುಂಡು ಮೇಜಿನ ಸಭೆ 12-11-1930ರಂದು ಸೈಮನ್ ಕಮಿಷನ್ನಿನ ವಿಚಾರವಾಗಿ ಲಂಡನ್ನಿನಲ್ಲಿ ನೆಡೆಯಿತು, ಎರಡನೆ ದುಂಡು ಮೇಜಿನ ಸಭೆ 1931 ರಲ್ಲಿ ಗಾಂಧೀಜಿಯವರು ಮತ್ತು ರಾಮ್ಸೆ ಮ್ಯಾಕ್ ಡೊನಾಲ್ಡ್ ಉಪಸ್ಥಿಯಲ್ಲಿ ಲಂಡನ್ನಿನಲ್ಲಿ ನೆಡೆಯಿತು ಈ ಸಭೆಯಲ್ಲಿ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಚುನಾವಣೆ ನೆಡೆಸಲು ಆಗ್ರಹಿಸಲಾಯಿತು ಇದರಿಂದ ಸಭೆಯು ಯಶಸ್ವಿಯಾಗಲಿಲ್ಲ. ಸಭೆಮುಗಿಸಿಕೊಂಡು ಬಂದ ಗಾಂಧೀಜಿಯವರು 1932ರಲ್ಲಿ ಅಸಹಕಾರ ಚಳುವಳಿಗೆ ಕರೆನೀಡಿದರು ಈ ಚಳುವಳಿಯು ನ್ಯಾಯಬಾಹಿರವೆಂದು ಬ್ರಿಟೀಷರು ಗಾಂಧೀಜಿಯವರನ್ನು ಯರವಾದ ಜೈಲಿಗೆ ಹಾಕಿದರು. ನಂತರ ಬ್ರಿಟೀಷರ ಕುಮ್ಮಕ್ಕಿನಿಂದ ದೇಶದಲ್ಲಿ ಜನಾಂಗೀಯ ಗಲಬೆಯುಂಟಾಗಿ ಅಪಾರ ಸಾವುನೋವು ಉಂಟಾದ್ದರಿಂದ ಗಾಂಧೀಜಿಯವರು ಯರವಾಡ ಜೈಲಿನಲ್ಲಿ ಆಮರಣಾಂತ ಉಪವಾಸ ಕೈಗೊಂಡರು. ಮೂರನೆ ದುಂಡುಮೇಜಿನ ಸಭೆ 1932ರಲ್ಲಿ ನೆಡಯಿತು ಇದು ಗೌರ್ನಮೆಂಟ್ ಆಫ್ ಇಂಡಿಯಾ ಆಕ್ಟ್ 1935 ಜಾರಿಯಾಗಲು ದಾರಿಯಾಯಿತು. ಡಾ|| ಬಿ.ಆರ್. ಅಂಬೇಡ್ಕರರು ಮೂರು ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ ಏಕೈಕ ಸದಸ್ಯರಾಗಿದ್ದರು.


ದಾದಾಬಾಯಿ ನವರೋಜಿಯವರು ಹೌಸ್ ಆಫ್ ಕಾಮನ್ಸ್ ನ ಸದಸ್ಯರಾದ ಮೊದಲ ಭಾರತೀಯರು, ಖುದೈ ಖಿದ್ಮತ್ ದಾರ್ ಅಂದರ ಕೆಂಪಂಗಿ ದಳವನ್ನು ಪ್ರಾರಂಭಿಸಿದವರು ಖಾನ್ ಅಬ್ದುಲ್ ಗಫಾರ್ ಖಾನ್, 


ಪ್ರಮುಖ ಸ್ವತಂತ್ರ ಹೋರಾಟಗಾರರ ಘೊಷಣೆಗಳು


ಸತ್ಯಮೇವ ಜಯತೆ : ಮದನ ಮೋಹನ ಮಾಳವೀಯ, ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು ಅದನ್ನು ಪಡೆದೇ ತೀರುವೆ - ಬಾಲಗಂಗಾಧರ ತಿಲಕರು, ಜೈ ಜವಾನ್ ಜೈ ಕಿಸಾನ್ ಲಾಲ್ ಬಹದ್ದೂರ್ ಶಾಸ್ತ್ರಿ, ನೀವು ನನಗೆ ರಕ್ತಕೊಡಿ ನಾನು ನಿಮಗೆ ಸ್ವಾತಂತ್ರ ಕೊಡುತ್ತೇನೆ, ದಿಲ್ಲಿ ಚಲೊ ಮತ್ತು ಜೈಹಿಂದ್ - ಸುಭಾಷ್ ಚಂದ್ರ ಬೋಸ್, ಮಾಡು ಇಲ್ಲವೇ ಮಡಿ - ಗಾಂಧೀಜಿ, ಸೆಕ್ಯೂರ್ ದಿ ಫ್ರೀಡಂ ಆಫ್ ಇಂಡಿಯಾ ಅಟ್ ಎನಿ ಕಾಸ್ಟ್ - ಅರವಿಂದೋ ಘೋಷ್, ಇನ್ಕಿಲಾಬ್ ಜಿಂದಾಬಾದ್ - ಭಗತ್ ಸಿಂಗ್, 



ಕ್ರಿಪ್ಸ್ ನಿಯೋಗ: 1939 ರಿಂದ 1945ರ ವರೆಗೆ ನೆಡೆದ ಎರಡನೇ ಮಹಾಯುದ್ಧದಲ್ಲಿ ಶತೃಸೈನ್ಯದ ಎದುರು ಬ್ರಿಟೀಷರ ಪ್ರಾಬಲ್ಯ ಕಡಿಮೆಯಾದಾಗ ಬ್ರಿಟೀಷರು ತಮ್ಮ ಪರ ಯುದ್ಧದಲ್ಲಿ ಭಾರತೀಯರು ಭಾಗವಹಿಸುವಂತೆ ಪ್ರೇರೇಪಿಸಿ ಅದಕ್ಕೆ ಪ್ರತಿಯಾಗಿ ಯುಧ್ಧ ಮುಗಿದ ನಂತರ ಭಾರತೀಯರಿಗೆ ಸಂಪೂರ್ಣ ರಾಷ್ಟ್ರದ ಪ್ರಭುತ್ವವನ್ನು ನೀಡುತ್ತೇವೆ ಎಂದು ತಿಳಿಸಿ ಆ ಒಪ್ಪಂದಕ್ಕಾಗಿ 1942ರಲ್ಲಿ ಹೌಸ್ ಆಫ್ ಕಾಮನ್ಸ್ ಅಧ್ಯಕ್ಷರಾಗಿದ್ದ ಸ್ಟಾಫರ್ಡ್ ಕ್ರಿಪ್ಸ್ ನಿಯೋಗವನ್ನು ಭಾರತಕ್ಕೆ ಕಳುಹಿಸಿತು. ಈ ನಿಯೋಗವು ಬ್ರಿಟೀಷರ ಅಧೀನದಲ್ಲಿ ಕೆಲವು ಭಾಗದಲ್ಲಿ ಮಾತ್ರ ಅಂದರೆ ಮಿಲಿಟರಿ ಮುಂತಾದ ಮುಖ್ಯ ಇಲಾಖೆಗಳು ಬ್ರಿಟೀಷರ ಅಧೀನದಲ್ಲಿದ್ದು ಕೆಲವನ್ನು ಮಾತ್ರ ಭಾರತೀಯರಿಗೆ ಸ್ವತಂತ್ರ ನೀಡಲು ಒಪ್ಪಿತು ಮತ್ತು ಭಾರತದ ಸಂವಿಧಾನವು ಸಂಫೂರ್ಣ ಬ್ರಟೀಷರಿಂದ ಮಾಡಲ್ಪಟ್ಟಿರಬೇಕೆಂದು ಹೇಳಿತು ಈ ಒಪ್ಪಂದವನ್ನು ಭಾರತೀಯರು ತೀವ್ರವಾಗಿ ವಿರೋಧಿಸಿದರು ಮತ್ತು ಗಾಂಧೀಜಿಯವರು ಇದನ್ನು ಪೋಸ್ಟ್ ಡೇಟೆಡ್ ಚೆಕ್ ಇನ್ ಎ ಕ್ರಾಷಿಂಗ್ ಬ್ಯಾಂಕ್ ಎಂದು ಟೀಕಿಸಿದರು ಮತ್ತು ಇದರ ವಿರುದ್ಧವಾಗಿ ಕ್ವಿಟ್ ಇಂಡಿಯಾ ಚಳುವಳಿಯನ್ನು ಪ್ರಾರಂಭಿಸಿದರು.




ಕ್ವಿಟ್ ಇಂಡಿಯಾ ಚಳುವಳಿ : ಕ್ರಿಪ್ಸ್ ನಿಯೋಗದ ವೈಫಲ್ಯದ ನಂತರ ಬ್ರಿಟೀಷರ ನೀತಿಗೆ ವಿರುದ್ಧವಾಗಿ 08-08-1942ರಲ್ಲಿ ಗಾಂಧೀಜಿಯವರು ಬಾಂಬೆಯಲ್ಲಿ ಬ್ರಿಟೀಷರೆ ಭಾರತಬಿಟ್ಟು ತೊಲಗಿ ಚಳುವಳಿಗೆ ಕರೆನೀಡಿದರು. ಈ ಚಳುವಳಿಯಲ್ಲಿ ಗಾಂಧೀಜಿಯವರು ಮಾಡು ಇಲ್ಲವೆ ಮಡಿ ಘೋಷಣೆಮಾಡಿದರು ಇದಕ್ಕೆ ಪ್ರತಿಯಾಗಿ ಬ್ರಿಟೀಷರು ಗಾಂಧೀಜಿಯವರನ್ನು ಅಗಾಖಾನ್ ಅರಮನೆಯಲ್ಲಿ ಗೃಹಬಂಧನದಲ್ಲಿಟ್ಟರು ನಂತರ ಜೆ.ಪಿ.ನಾರಾಯಣ್, ಲೋಹಿಯಾ ಮತ್ತು ಅರುಣಾ ಆಸಿಫ್ ಆಲಿಯವರು ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದರು, ಈ ಚಳುವಳಿಯು ಕಾಂಗ್ರೆಸ್ ರೇಡಿಯೋದಲ್ಲಿ ವಾಚಕಿಯಾಗಿದ್ದ ಉಷಾಮೆಹ್ತಾರವರಿಂದ ತೀವ್ರ ಸ್ವರೂಪ ಪಡೆಯಲು ಸಹಕಾರಿಯಾಯಿತು. ಆದರೆ ಚಳುವಳಿಯ ನೇತೃತ್ವ ವಹಿಸಬೇಕಾಗಿದ್ದ ನಾಯಕರಲ್ಲಿ ಹೆಚ್ಚಿನವರು ಜೈಲಿನಲ್ಲಿದ್ದಿದ್ದರಿಂದ ನಾಯಕತ್ವದ ಕೊರತೆಯಿಂದಾಗಿ ಚಳುವಳಿಗೆ ಹಿನ್ನೆಡೆಯಾಯಿತು.


ವೇವೆಲ್ ಪ್ಲಾನ್ 1945 ನಲ್ಲಿ, ಕ್ಯಾಬಿನೆಟ್ ಮಿಷನ್ ಪ್ಲಾನ್ 1946ನಲ್ಲಿ, ಮೌಂಟ್ ಬ್ಯಾಟನ್ ಪ್ಲಾನ್ 1947ರಲ್ಲಿ, ರೆಗ್ಯುಲೇಟಿಂಗ್ ಆಕ್ಟ್ 1773ರಲ್ಲಿ, ಪಿಟ್ಸ್ ಇಂಡಿಯಾ ಆಕ್ಟ್ 1784ರಲ್ಲಿ, ಇಂಡಿಯನ್ ಕೌನ್ಸಿಲ್ ಆಕ್ಟ್ 1861ರಲ್ಲಿ, ಮಾರ್ಲೆ-ಮಿಂಟೋ ಆಕ್ಟ್ 1909ರಲ್ಲಿ, ಮಾಂಟೆಗೊ-ಚೆಲ್ಮ್ಸ್ ಫೋರ್ಡ್ ರೀಫಾರ್ಮ್ಸ್ 1919ರಲ್ಲಿ, ಗೌರ್ನಮೆಂಟ್ ಆಫ್ ಇಂಡಿಯಾ ಆಕ್ಟ್ 1935ರಲ್ಲಿ, ಶಾರದ ಆಕ್ಟ್ - 1929ರಲ್ಲಿ ಜಾರಿಯಾಯಿತು



ಭೂಗೋಳ

ಭೂ ಬಿಂದುವಿನಿಂದ ಭೂಕವಚದ ತ್ರಿಜ್ಯ ಸುಮಾರು ಅಂತರ

ಎ)12700ಕಿಮೀ, ಬಿ) 6900ಕಿಮೀ, ಸಿ)6400ಕಿಮೀ, ಡಿ)11600ಕಿಮೀ


ಭೂಮಿಯ ಸುತ್ತಳತೆ ಸುಮಾರು
ಎ)25000ಕಿಮೀ, ಬಿ) 16000ಕಿಮೀ, ಸಿ) 40000ಕಿಮೀ, ಡಿ)50000ಕಿಮೀ




ಭೂಮಿಯು ತನ್ನ ಒಂದು ಸುತ್ತನ್ನು ಸುತ್ತುವ ವೇಳೆ
ಎ) 23ಗಂ30ನಿ5ಸೆ, ಬಿ)23ಗಂ56ನಿ4.9ಸೆ, ಸಿ)24ಗಂ, ಡಿ) 23ಗಂ50ನಿ10ಸೆಕೆಂಡು


ಭೂಮದ್ಯ ರೇಖೆಗೆ ಹೋಲಿಸಿದಲ್ಲಿ ದೃವದ ಸುತ್ತಳತೆ ಎಷ್ಟು ಕಡಿಮೆಯಿದೆ
ಎ) 25ಕಿಮೀ, ಬಿ)80ಕಿಮೀ, ಸಿ)43ಕಿಮೀ, ಡಿ)30ಕಿಮೀ


ಇವುಗಳಲ್ಲಿ ಮಣ್ಣಿನ ಸವೆತಕ್ಕೆ ಪ್ರಮುಖ ಕಾರಣ ಯಾವುದು
ಎ) ಗಾಳಿ & ನೀರು, ಬಿ) ಕಲ್ಲುಗಳು, ಸಿ)ಮರಳು, ಡಿ)ಮಾನವ




ಇವುಗಳಲ್ಲಿ ಭೂಮಿಯಲ್ಲಿರುವ ಹೇರಳವಾದ ಧಾತು ಯಾವುದು
ಎ) ಆರ್ಗನ್, ಬಿ) ನೈಟ್ರೋಜನ್, ಸಿ) ಆಕ್ಸಿಜನ್, ಡಿ) ಕ್ರಿಪ್ಟಾನ್




ಭೂಮಿಗೆ ಹತ್ತಿರವಾದ ಪದರ ಯಾವುದು
ಎ) ಸ್ಟ್ರಾಟೋಸ್ಪಿಯರ್, ಬಿ) ಟ್ರೋಪೋಸ್ಪಿಯರ್, ಸಿ) ಅಯನೋಸ್ಪಿಯರ್, ಡಿ) ಎಕ್ಸೋಸ್ಪಿಯರ್




ಅತಿ ಹೆಚ್ಚು ಮಂಜುಗಡ್ಡೆ ಆಕ್ರಮಿತ ಭೂಪ್ರದೇಶ ಯಾವುದು
ಎ) ಕೆನಡಾ, ಬಿ) ಐಸ್ಲ್ಯಾಂಡ್, ಸಿ) ಅಂಟಾರ್ಟಿಕ, ಡಿ) ಗ್ರೀನ್ ಲ್ಯಾಂಡ್




ಭೂಮಿಯು ಸುಮಾರು ಶೇಕಡಾ ಎಷ್ಟು ಭಾಗ ನೀರಿನಿಂದ ಆವೃತವಾಗಿದೆ
ಎ) 50% ಬಿ) 60%, ಸಿ)70%, ಡಿ) 80%


ದೃವಪ್ರದೇಶದಲ್ಲಿ ರೇಖಾಂಶಗಳ ದೂರದ ವ್ಯತ್ಯಾಸ
ಎ) 0, ಬಿ) 18ಕಿಮೀ, ಸಿ) 25ಕಿಮೀ, ಡಿ) 10ಕಿಮೀ




ಮಾನ್ಸೂನ್ ಮಾರುತಗಳು ಈ ಕಾರಣದಿಂದ ಉಂಟಾಗುತ್ತದೆ
ಎ) ಋತುಮಾರುತಗಳ ಪುನರಾವರ್ತನೆಯಿಂದ, ಬಿ) ಮೋಡಗಳ ಚಲನೆಯಿಂದ, ಸಿ) ಭೂಮಿಯ ವಾರ್ಷಿಕ ಚಲನೆಯಿಂದ, ಡಿ) ತಾಪಮಾನದ ಏರಿಕೆಯಿಂದ




ಈ ಭೂಭಾಗದಲ್ಲಿ ಹಗಲು ಮತ್ತು ರಾತ್ರಿಗಳು ಸಮನಾಗಿರುತ್ತದೆ
ಎ) ಭೂಮಧ್ಯ ರೇಖೆಪ್ರದೇಶದಲ್ಲಿ, ಬಿ) ದೃವಗಳಲ್ಲಿ, ಸಿ) ಅಂಟಾರ್ಟಿಕದಲ್ಲಿ, ಡಿ) ಪರ್ವತಪ್ರದೇಶದಲ್ಲಿ




Equinox ಎಂದರೆ
ಎ) ಹಗಲು ರಾತ್ರಿಗಿಂತ ಹೆಚ್ಚಾಗಿರುವುದು, ಬಿ) ರಾತ್ರಿ ಹಗಲಿಗಿಂತ ಹೆಚ್ಚಾಗಿರುವುದು, ಸಿ)ಹಗಲು ರಾತ್ರಿ ಸಮನಾಗಿರುವುದು, ಡಿ) ಯಾವುದು ಅಲ್ಲ




ಅತಿಹೆಚ್ಚು ಪ್ರಕಾಶ ಮಾನವಾಗಿರುವ ಗ್ರಹ
ಎ) ಗುರು, ಬಿ) ಶುಕ್ರ, ಸಿ) ಮಂಗಳ, ಡಿ) ಶನಿ




ಅತಿ ಭಾರವಾಗಿರುವ ಗ್ರಹ
ಎ) ಬುಧ, ಬಿ) ಗುರು, ಸಿ) ಶನಿ, ಡಿ) ಫ್ಲೂಟೋ




ಅತಿ ದೊಡ್ಡಗ್ರಹ
ಎ) ಶುಕ್ರ, ಬಿ) ಗುರು, ಸಿ) ಶನಿ, ಡಿ) ಮಂಗಳ




ಅತಿ ತಾಪಮಾನ ಗ್ರಹ
ಎ) ಶುಕ್ರ, ಬಿ) ನೆಫ್ಚೂನ್, ಸಿ) ಮಂಗಳ, ಡಿ) ಗುರು




ಸಂಜೆಯ ನಕ್ಷತ್ರ ಎಂದು ಕರೆಯಲ್ಪಡುವ ಗ್ರಹ
ಎ) ಶನಿ, ಬಿ) ಶುಕ್ರ, ಸಿ) ಗುರು, ಡಿ) ಮಂಗಳ




ಇವುಗಳಲ್ಲಿ ಯಾವಗ್ರಹ ಪೂರ್ವದಿಂದ ಪಶ್ಚಿಮಕ್ಕೆ ಸುತ್ತುತ್ತದೆ
ಎ) ಭೂಮಿ, ಬಿ) ಶನಿ, ಸಿ) ಯುರೇನಸ್ ಡಿ) ವೀನಸ್




ಧೂಮಕೇತು ಇದನ್ನು ಸುತ್ತುತ್ತದೆ
ಎ) ಚಂದ್ರ, ಬಿ) ಗುರು, ಸಿ) ಸೂರ್ಯ, ಡಿ) ಭೂಮಿ




ಭೂಮಿ ಈ ಎರಡು ಗ್ರಹಗಳ ನಡುವೆ ಸುತ್ತುತ್ತದೆ
ಎ) ಮಂಗಳ & ಗುರು, ಬಿ) ಮಂಗಳ & ಭೂಮಿ, ಸಿ) ಮಂಗಳ & ಶುಕ್ರ, ಡಿ) ಮಂಗಳ & ಶನಿ




ಇವುಗಳಲ್ಲಿ ಅಂತರರಾಷ್ಟ್ರೀಯ ದಿನರೇಖೆ ಎಂದು ಕರೆಯಲ್ಪಡುವುದು
ಎ) 0' ರೇಖಾಂಶ, ಬಿ)90' ರೇಖಾಂಶ, ಸಿ) 180' ರೇಖಾಂಶ, ಡಿ) 360' ರೇಖಾಂಶ




ಒಂದೇ ರೀತಿಯ ಮಳೆಬೀಳುವ ಪ್ರದೇಶಗಳನ್ನು ಸೇರಿಸುವುದನ್ನು ಕಾಲ್ಪನಿಕವಾಗಿ ಕರೆಯುವುದು
ಎ) ಐಸೋಬಾರ್, ಬಿ) ಐಸೋಹೈಟ್ಸ್, ಸಿ) ಐಸೋಥರ್ಮ್, ಡಿ) ಐಸೋಹೆಲೈನ್




ಬೃಹತ್ ವೃತ್ತ ಎಂದು ಕರೆಯಲ್ಪಡುವುದು
ಎ) ಕರ್ಕಾಟಕ ಸಂಕ್ರಾಂತಿ ವೃತ್ತ, ಬಿ) ಮಕರ ಸಂಕ್ರಾಂತಿ ವೃತ್ತ, ಸಿ) ಸಮಭಾಜಕ ವೃತ್ತ, ಡಿ) ಅಂಟಾರ್ಟಿಕ ವೃತ್ತ




ಮ್ಯಾಕ್ ಮೋಹನ್ ರೇಖೆ ಈ ರಾಷ್ಟ್ರಗಳ ಗಡಿ ತಿಳಿಸುತ್ತದೆ
ಎ) ಭಾರತ & ಚೀನಾ, ಬಿ) ಭಾರತ & ನೇಪಾಳ, ಸಿ) ಭಾರತ & ಪಾಕಿಸ್ಥಾನ, ಡಿ) ಭಾರತ & ಶ್ರೀಲಂಕ




ಒಂದೇ ರೀತಿಯ ಉಷ್ಣಾಂಶ ಪ್ರದೇಶಗಳನ್ನು ಸೂಚಿಸುವ ಕಾಲ್ಪನಿಕ ರೇಖೇಯ ಹೆಸರು
ಎ) ಐಸೋಥರ್ಮ್ಸ್, ಬಿ) ಐಸೋಬಾರ್, ಸಿ) ಐಸೋಹೈಟ್ಸ್, ಡಿ) ಐಸೋಮಿಟ್ಸ್




ಒಂದೇ ರೀತಿಯ ಭೂಕಂಪನ ಪ್ರದೇಶಗಳನ್ನು ಸೂಚಿಸುವುದು
ಎ) ಐಸೋಬೆಲ್ಟ್, ಬಿ) ಐಸೋಬಾರ್, ಸಿ) ಸಿಸ್ಮಿಕ್ ಲೈನ್, ಡಿ) ಅರ್ಥ್ ಲೈನ್




ದಿ ಗ್ರೇಟ್ ಬ್ಯಾರಿಯರ್ ರೀಫ್ ಎಂದರೆ
ಎ) ಸಮನಾದ ಬೆಟ್ಟಪ್ರದೇಶ, ಬಿ) ಹವಳ ನಿರ್ಮಿತ ಪ್ರದೇಶ, ಸಿ) ಮಾನವ ನಿರ್ಮಿತ ಮಹಾಗೋಡೆ, ಡಿ) ಆಳವಾದ ಕಂದರ



ದಿ ಗ್ರೇಟ್ ಬ್ಯಾರಿಯರ್ ರೀಫ್ ಇದಕ್ಕೆ ಸಮನಾಂತರವಾಗಿದೆ
ಎ) ಕ್ವೀನ್ಸ್ ಲ್ಯಾಂಡ್, ಬಿ) ಗ್ರೀನ್ ಲ್ಯಾಂಡ್, ಸಿ) ಐರ್ಲೆಂಡ್, ಡಿ) ಇಂಗ್ಲೆಂಡ್




ಡೋಲ್ ಡ್ರಮ್ಸ್ ಎಂದರೆ
ಎ) ಪೆಸಿಫಿಕ್ ಸಾಗರದ ಆಳಪ್ರದೇಶ, ಬಿ) ಸಾಗರ ಪ್ರವಾಹ, ಸಿ) ಸಮಭಾಜಕ ವೃತ್ತದ ಬಳಿಯ ಮಾರುತಪ್ರದೇಶ, ಡಿ) ಸಹರ 
ಮರುಭೂಮಿಯ ಬಿಸಿಗಾಳಿ




ಒಂದು ಪ್ರಕಾಶ ವರ್ಷ (light year)ಎಂದರೆ
ಎ) ಒಂದು ವರ್ಷದಲ್ಲಿ ಬೆಳಕು ಚಲಿಸುವ ದೂರ, ಬಿ) ಸೂರ್ಯ & ಭೂಮಿಯ ಅಂತರ, ಸಿ) ಚಂದ್ರ & ಭೂಮಿಯ ಅಂತರ, 
ಡಿ) ಯಾವುದು ಅಲ್ಲ




ಬೃಹತ್ ಅಲೆಗಳು ಏಳುವುದು
ಎ) ಹುಣ್ಣಿಮೆಯಲ್ಲಿ ಮಾತ್ರ, ಬಿ) ಅಮಾವಾಸ್ಯೆಯಲ್ಲಿ ಮಾತ್ರ, ಸಿ) ಅಮಾವಾಸ್ಯೆಯ ನಂತರದ 15 ದಿನಗಳು, ಡಿ) ಅಮಾವಾಸ್ಯೆ & ಹುಣ್ಣಿಮೆ ದಿನದಂದು




ಭೂಮಿಗೆ ಸಂಬಂಧಿಸಿದಂತೆ ಪೆರಿಹೆಲಿಯನ್ ಎಂದರೆ
ಎ) ಚಂದ್ರನಿಗೆ ಹತ್ತಿರ ಇದೆ ಎಂದರ್ಥ, ಬಿ) ಸೂರ್ಯ ಚಂದ್ರರಿಗೆ ಹತ್ತಿರಯಿದೆ ಎಂದರ್ಥ, ಸಿ) ಚಂದ್ರನಿಗೆ ದೂರಯಿದೆ ಎಂದರ್ಥ, ಡಿ) ಸೂರ್ಯನಿಗೆ ಹತ್ತಿರಯಿದೆ ಎಂದರ್ಥ




ಸಮಭಾಜಕ ವೃತ್ತದಲ್ಲಿ ಹಗಲಿನ ಅವಧಿ
ಎ) 6ಗಂ, ಬಿ) 12ಗಂ, ಸಿ) 18ಗಂ, ಡಿ) 24ಗಂ




ಇವುಗಳಲ್ಲಿ ಸೂರ್ಯರಶ್ಮಿಯು ನೇರವಾಗಿ ಬೀಳುವುದು
ಎ) ಮಕರ ಸಂಕ್ರಾಂತಿ ವೃತ್ತಕ್ಕೆ, ಬಿ) ಉತ್ತರ ದೃವ ಪ್ರದೇಶಕ್ಕೆ, ಸಿ) ಸಮಭಾಜಕ ವೃತ್ತಕ್ಕೆ, ಡಿ) ದಕ್ಷಿಣ ದೃವಪ್ರದೇಶಕ್ಕೆ




ಜೂನ್ 21ರಂದು ಸೂರ್ಯ ರಶ್ಮಿಯು ನೇರವಾಗಿ ಬೀಳುವುದು
ಎ) ಮಕರ ಸಂಕ್ರಾಂತಿ ವೃತ್ತಕ್ಕೆ, ಬಿ) ಉತ್ತರ ದೃವ ಪ್ರದೇಶಕ್ಕೆ, ಸಿ) ಕರ್ಕಾಟಕ ಸಂಕ್ರಾಂತಿ ವೃತ್ತಕ್ಕೆ, ಡಿ) ಯಾವುದು ಅಲ್ಲ




ಸಮುದ್ರದಲ್ಲಿ ಅಲೆಗಳಿಗೆ ಮುಖ್ಯ ಕಾರಣ
ಎ) ಸೂರ್ಯನ ಆಕರ್ಶಣೆ, ಬಿ) ಭೂಮಿಯ ಗೋಳಾಕಾರ, ಸಿ) ಭೂಮಿಯ ಗುರುತ್ವ, ಡಿ)ಸೂರ್ಯ ಚಂದ್ರರ ಗುರುತ್ವಾಕರ್ಶಣೆ




ಸೂರ್ಯನು ಪೂರ್ವದಲ್ಲಿ ಹುಟ್ಟಿ ಪಶ್ಚಿಮದಲ್ಲಿ ಮುಳುಗಲು ಕಾರಣ
ಎ) ಭೂಮಿ ಪಶ್ಚಿಮದಿಂದ ಪೂರ್ವಕ್ಕೆ ಸುತ್ತುವುದು, ಬಿ) ಸೂರ್ಯನ ಚಲನೆ, ಸಿ) ಚಂದ್ರನ ಚಲನೆ, ಡಿ) ಯಾವುದು ಅಲ್ಲ




ಭಾರತದ ನಿರ್ದಿಷ್ಟ ಕಾಲಮಾನ ಈ ರೇಖಾಂಶಕ್ಕೆ ಹೊಂದಿಕೊಂಡಿದೆ
ಎ) 82.5ಡಿಗ್ರಿ ಪೂರ್ವ, ಬಿ) 180ಡಿಗ್ರಿ ಪಶ್ಚಿಮ, ಸಿ) 90ಡಿಗ್ರಿ ಪೂರ್ವ, ಡಿ) 90ಡಿಗ್ರಿ ಪಶ್ವಿಮ




ರೇಖಾಂಶಗಳಲ್ಲಿ 1 ಘಂಟೆಯ ವ್ಯತ್ಯಾಸವು ಡಿಗ್ರಿಗಳಲ್ಲಿ ಇದಕ್ಕೆ ಸಮ
ಎ) 15, ಬಿ) 30, ಸಿ) 45, ಡಿ) 60




IST ಎಂದರೆ
ಎ)ಭಾರತದ ಎಲ್ಲಾ ಭಾಗದಲ್ಲಿಯು ಒಂದೇ ವೇಳೆಯ ಅಳವಡಿಕೆ, ಬಿ) ಭಾರತದ 2 ರಾಜ್ಯಗಳ ವೇಳೆಯ ವ್ಯತ್ಯಾಸ, ಸಿ) ಉತ್ತರ & ದಕ್ಷಿಣ ಭಾರತದ ವೇಳೆಯ ವ್ಯತ್ಯಾಸ, ಡಿ) ಯಾವುದು ಅಲ್ಲ




ಅಂತರ ರಾಷ್ಟ್ರೀಯ ದಿನರೇಖೆ
ಎ) 360ಡಿಗ್ರಿ ರೇಖಾಂಶ, ಬಿ) 90ಡಿಗ್ರಿ ರೇಖಾಂಶ, ಸಿ) 180ಡಿಗ್ರಿ ರೇಖಾಂಶ, ಡಿ) 0ಡಿಗ್ರಿ ರೇಖಾಂಶ


IST ಯು GMT ಗಿಂತಲೂ ಎಷ್ಟು ಮುಂದಿದೆ
ಎ) 2 ಗಂ, ಬಿ) 5ಗಂ50ನಿ, ಸಿ) 5ಗಂ30ನಿ, ಡಿ) 12ಗಂಟೆ





ಲಾರ್ಡ್ ಕ್ಯಾನಿಂಗ್ (1856 -1862)
ಕಡೆಯ ಗೌರ್ನರ್ ಜನರಲ್ ಮತ್ತು ಮೊದಲ ವೈಸರಾಯ್, ಸಿಪಾಯಿ ದಂಗೆ ಇರವ ಕಾಲದಲ್ಲಿ ಪ್ರಾರಂಭವಾಯಿತು, ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಕಾನೂನನ್ನು ಹಿಂತೆಗೆತುಕೊಳ್ಳಲಾಯಿತು, ಕಲ್ಕತ್ತ, ಬಾಂಬೆ ಮತ್ತು ಮದ್ರಾಸ್ ವಿಶ್ವವಿದ್ಯಾಲಯಗಳು ಸ್ಥಾಪಿಸಲ್ಪಟ್ಟತು, 1861ರಲ್ಲಿ ಇಂಡಿಯನ್ ಕೌನ್ಸಿಲ್ ಆಕ್ಟ್ ಜಾರಿಯಾಯಿತು


ಲಾರ್ಡ್ ಎಲ್ಜಿನ್ (1862-1863)



ಲಾರ್ಡ್ ಲಾರೆನ್ಸ್ (1864-1869)
1865ರಲ್ಲಿ ಬಾಂಬೆ, ಮದ್ರಾಸ್ ಮತ್ತು ಕಲ್ಕತ್ತಾ ದಲ್ಲಿ ಹೈಕೋರ್ಟ್ ಸ್ಥಾಪನೆಯಾಯಿತು, ಭಾರತೀಯ ಅರಣ್ಯ ಇಲಾಖೆ ಸ್ಥಾಪನೆ ಆಯಿತು



ಲಾರ್ಡ್ ಮಯೋ (1869-1872)
ಆರ್ಥಿಕ ವಿಕೇಂದ್ರೀಕರಣ ಭಾರತದಲ್ಲಿ ಪ್ರಾರಂಭವಾಯಿತು, 1871ರಲ್ಲಿ ಮೊದಲಬಾರಿಗೆ ಜನಗಣತಿಕಾರ್ಯ ಪ್ರಾರಂಭವಾಯಿತು, ಭಾರತೀಯ ಅಂಕಿಅಂಶಗಳ ಸಮೀಕ್ಷೆ ಪ್ರಾರಂಭವಾಯಿತು


ಲಾರ್ಡ್ ನಾರ್ತ್ಬ್ರೂಕ್ (1872-1876)



ಲಾರ್ಡ್ ಲಿಟ್ಟನ್ನ್ (1876-1890)
1877ರಲ್ಲಿ ಡೆಲ್ಲಿದರ್ಬಾರ್ಅನ್ನು ನೆಡೆಸಿ ವಿಕ್ಟೋರಿಯಾ ರಾಣಿಗೆ ಕೈಸರ್-ಎ-ಹಿಂದ್ ಬಿರುದನ್ನು ನೀಡಲಾಯಿತು, 1878ರಲ್ಲಿ ಆಯುಧಗಳ ಕಾಯ್ದೆಯನ್ನು ಜಾರಿಗೆತರಲಾಯಿತು, 1878ರಲ್ಲಿ ವರ್ನಾಕ್ಯುಲರ್ ಪ್ರೆಸ್ ಕಾಯ್ದೆ ಜಾರಿಯಾಯಿತು


ಲಾರ್ಡ್ ರಿಪ್ಪನ್ (1880-1894)(ಸ್ಥಳೀಯ ಸರ್ಕಾರಗಳ ಕಾಯ್ದೆಯ ಪಿತಾಮಹ)
1882ರಲ್ಲಿ ವರ್ನಾಕ್ಯುಲರ್ ಪ್ರೆಸ್ ಕಾಯ್ದೆಯನ್ನು ಪುನರಾವರ್ತಿಸಲಾಯಿತು ಮತ್ತು ಸ್ಥಳೀಯ ಸರ್ಕಾರಗಳ ಕಾಯ್ದೆಯನ್ನು ಪ್ರಾರಂಭಿಸಲಾಗಿತು, ಹಂಟರ್ ಕಮಿಷನಿನಂತೆ ಪ್ರಾಥಮಿಕ ವಿದ್ಯಾಭ್ಯಾಸವನ್ನು ಉತ್ತಮಪಡಿಸಲಾಯಿತು, ಕಾರ್ಖಾನೆಗಳ ಕಾಯ್ದೆ ಜಾರಿಗೆತಂದು ಬಾಲ ಕಾರ್ಮಿಕ ಪದ್ದತಿಯನ್ನು ನಿರ್ಮೂಲನೆ ಗೊಳಿಸಲಾಯಿತು, 1883ಯಲ್ಲಿ ಇಲ್ಬಿರ್ಟ್ ಬಿಲ್ ಜಾರಿಯಾಯಿತು


ಲಾರ್ಡ್ ಡರ್ಫಿನ್ (1884-1888)
1885ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರಾರಂಭವಾಯಿತು


ಲಾರ್ಡ್ ಲ್ಯಾನ್ಸ್ಡೌನ್ (1888-1894)
2ನೇ ಕಾರ್ಖಾನೆ ಕಾಯ್ದೆಪ್ರಕಾರ ವಾರದ ರಜಾದಿನ ಮಂಜೂರಾಗಿ ಕಾರ್ಖಾನೆ ವೇಳಾಪಟ್ಟಿ ಪ್ರಾರಂಭವಾಯಿತು, 1892ರ ಇಂಡಿಯನ್ ಕೌನ್ಸಿಲ್ ಆಕ್ಟ್ ಜಾರಿಯಾಯಿತು, ಡ್ಯುರಾಂಡ್ ಆಯೋಗದಂತೆ ಭಾರತ ಮತ್ತು ಆಫ್ಘಾನಿಸ್ಥಾನದ ಸೀಮೆ ಗುರುತಿಸಲಾಯಿತು


ಲಾರ್ಡ್ ಎಲ್ಜಿನ್ 2 (1894-1899)



ಲಾರ್ಡ್ ಕರ್ಜನ್ (1899-1905)
1905ರಲ್ಲಿ ಬಂಗಾಳದ ವಿಭಜನೆಯಾಯಿತು, ಪೋಲೀಸ್ ಆಡಳಿತದಲ್ಲಿನ ಪರಿಶೀಲನೆಗಾಗಿ ಫ್ರೇಜರ್ ನನ್ನು ನೇಮಿಸಲಾಯಿತು, 1904ರಲ್ಲಿ ಪುರಾತನ ಪರಿಕರಗಳ ರಕ್ಷಣಾ ಕಾಯ್ದೆ ಜಾರಿಗೆತರಲಾಯಿತು, ಆರ್ಕಾಲಾಜಿಕಲ್ ಸರ್ವೇ ಆಫ್ ಇಂಡಿಯಾ ಸ್ಥಾಪಿಸಲಾಯಿತು, 1899ರಲ್ಲಿ ಭಾರತೀಯ ನಾಣ್ಯ ಮತ್ತು ಕಾಗದ ಹಣದ ಕಾಯ್ದೆ ಜಾರಿಮಾಡಲಾಯಿತು


ಲಾರ್ಡ್ ಮಿಂಟೋ (1905-1910)
ಕ್ರಾಂತಿಕಾರಿಗಳ ವಿರುದ್ಧ ಅನೇಕ ಪ್ರತಿಬಂಧಕ ಕಾಯ್ದೆಯನ್ನು ಜಾರಿಮಾಡಲಾಗಿತು, 1909 ರಲ್ಲಿ ಮಾರ್ಲೆ-ಮಿಂಟೋ ಕಾಯ್ದೆಯನ್ನು ಜಾರಿಮಾಡಲಾಯಿತು



ಲಾರ್ಡ್ ಹರ್ಡಿಂಜ್ (1910-1916)
1911ರಲ್ಲಿ ರಾಜ 5ನೇ ಜಾರ್ಜ್ ದರ್ಬಾರ್ ನೆಡೆಯಿತು ಮತ್ತು ಬಂಗಾಳದ ವಿಭಜನೆ ಕೊನೆಗೊಂಡಿತು, 1911ರಲ್ಲಿ ರಾಜಧಾನಿ ಕಲ್ಕತ್ತದಿಂದ ಡೆಲ್ಲಿಗೆ ಸ್ಥಳಾಂತರಗೊಂಡಿತು, 1915ರಲ್ಲಿ ಗಾಂಧೀಜಿ ದ.ಆಫ್ರಿಕಾದಿಂದ ಭಾರತಕ್ಕೆ ವಾಪಸ್ಸಾದರು, ಅನಿಬೆಸೆಂಟ್ ಹೋಂ ರೂಲ್ ಚಳುವಳಿ ಪ್ರಾರಂಭಿಸಿದರು


ಲಾರ್ಡ್ ಚೆಲ್ಮ್ಸ್ ಫೋರ್ಡ್ (1916-1921)
1917ರಲ್ಲಿ ಆಗಸ್ಟ್ ಘೋಷಣೆ ಮಾಡಲಾಯಿತು, 1919ರಲ್ಲಿ ಗೌರ್ನಮೆಂಟ್ ಆಫ್ ಇಂಡಿಯಾ(ಮಾಂಟೆಗೋ-ಚೆಲ್ಮ್ಸ್ ಫರ್ಡ್) ಆಕ್ಟ್ ಘೋಷಣೆ, ರೌಲತ್ ಆಕ್ಟ್ ಜಾರಿ ಮತ್ತು ಏಪ್ರಿಲ್ 13ರಂದು ಜಲಿಯನ್ ವಾಲಾಬಾಗ್ ದುರಂತ ನೆಡೆಯಿತು, ಅಸಹಾಕಾರ ಚಳುವಳಿ ನೆಡೆಯಿತು, 1917ರಲ್ಲಿ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟಂತೆ ಸಡ್ಲರ್ ಆಯೋಗ ಸ್ಥಾಪನೆ.


ಲಾರ್ಡ ರೀಡಿಂಗ್ (1921-1926)
ಅಸಹಕಾರ ಚಳುವಳಿಯನ್ನು ಮಟ್ಟಹಾಕಲಾಯಿತು, 1921ರಲ್ಲಿ ವೇಲ್ಸ್ ರಾಜಕುಮಾರ ಭಾರತಕ್ಕೆ ಭೇಟಿನೀಡಿದನು, ಮೋಪ್ಲ ದಂಗೆಯನ್ನು ಅಡಗಿಸಲಾಯಿತು, ಸ್ವರಾಜ್ ಪಕ್ಷ ಸ್ಥಾಪನೆ, 1921ರಲ್ಲಿ ಎಂ.ಎನ್.ರಾಯ್ ರ ಕಮ್ಯುನಿಸ್ಟ್ ಪಾರ್ಟಿ ಸ್ಥಾಪನೆ, 1925 ಕಕ್ರಾಯಿ ರೈಲು ದರೋಡೆ, 1923ರಲ್ಲಿ ಕೋಮುಗಲಭೆ, 


ಲಾರ್ಡ್ ಇರ್ವಿನ್ (1926-1931)
1928ರಲ್ಲಿ ಸೈಮನ್ ಆಯೋಗದ ಭಾರತದ ಭೇಟಿ, 1929 ಕಾಂಗ್ರೆಸ್ ನಿಂದ ಭಾರತೀಯ ಸಂಕಲ್ಪ ನಿರ್ಣಯ, 1930 ಮಾರ್ಚ್ 12 ಉಪ್ಪಿನ ಸತ್ಯಾಗ್ರಹ, 1930 ಅಸಹಕಾರ ಚಳುವಳಿ ಮತ್ತು ಇಂಗ್ಲೆಂಡಿನಲ್ಲಿ ಮೊದಲ ದುಂಡುಮೇಜಿನ ಸಭೆ, 1931 ಗಾಂಧಿ-ಇರ್ವಿನ್ ಒಪ್ಪಂದ, 1929 64ದಿನಗಳ ಉಪವಾಸದ ನಂತರ ಜತಿನ್ ದಾಸ್ ಅವರ ಮರಣ


ಲಾರ್ಡ್ ವಿಲ್ಲಿಂಗ್ಟನ್ (1931-1936)
1931 ಲಂಡನ್ ನಲ್ಲಿ 2ನೇ ದುಂಡುಮೇಜಿನ ಸಭೆ, 1932 ಕೋಮುಗಲಭೆ ಇದರ ವಿರುದ್ಧ ಗಾಂಧೀಜಿಯ ಉಪವಾಸ ಸತ್ಯಾಗ್ರಹ, 1932ರಲ್ಲಿ 3ನೇ ದುಂಡುಮೇಜಿನ ಸಭೆ, 1953 ಗೌರ್ನಮೆಂಟ್ ಆಫ್ ಇಂಡಿಯಾ ಆಕ್ಟ್ ಚಾಲನೆಗೆ ತೀರ್ಮಾನ


ಲಾರ್ಡ್ ಲಿಂಗ್ಲಿತ್ಗೋ (1936-1944)
1942 ಕ್ರಿಪ್ಸ್ ಮಿಷನ್ ಜಾರ್, 1942 ಆಗಸ್ಟ್ 8 ಭಾರತ ಬಿಟ್ಟು ತೊಲಗಿ ಚಳುವಳಿ ಪ್ರಾರಂಭ


ಲಾರ್ಡ್ ವೇವೆಲ್ (1944-1947)
1945 ಜೂನ್25 ಶಿಮ್ಲಾ ಸಮಾವೇಶ, ಕ್ಯಾಬಿನೆಟ್ ಮಿಷನ್ ಪ್ಲಾನ್ 1946 ಮೇ 16, 


ಲಾರ್ಡ್ ಮೌಂಟ್ ಬ್ಯಾಟನ್ (1947)
ಕಡೆಯ ಬ್ರಿಟೀಷ್ ವೈಸ್ರಾಯ್ ಮತ್ತು ಸ್ವತಂತ್ರ ಭಾರತದ ಮೊದಲ ಗೌರ್ನರ್ ಜನರಲ್, ಜೂನ್3 ಭಾರತ ವಿಭಜನೆಯ ನಿರ್ಧಾರ, ಜುಲೈ4 ಭಾರತ ಸ್ವಾತಂತ್ರ ಕಾಯ್ದೆಯ ಅನುಷ್ಠಾನ ಇದರ ಪ್ರಕಾರ ಆಗಸ್ಟ್ 15, 1947ರಂದು ಭಾರತಕ್ಕೆ ಸ್ವಾತಂತ್ರ, ಇವರ ನಂತರ ಸ್ವತಂತ್ರ ಭಾರತದ ಮೊದಲ ಗೌರ್ನರ್ ಜನರಲ್ಲರಾಗಿ ಸಿ.ರಾಜಗೋಪಾಲಚಾರಿ ನೇಮಕ ಇವರೇ ಕಡೆಯ ಗೌರ್ನರ್ ಜನರಲ್





ಬ್ರಿಟೀಷ್ ಕಾಲದ ಕೆಲವು ಮುಖ್ಯ ಘಟನೆಗಳು


ಸತಿ ಪದ್ದತಿಯ ನಿರ್ಮೂಲನೆ ವಿಲಿಯಂ ಬಂಟಿಕ್
ದತ್ತು ಮಕ್ಕಳಿಗೆ ಹಕ್ಕಿಲ್ಲ ಡಾಲ್ ಹೌಸಿ
ಭಾರತೀಯ ಶಾಸನಗಳ ಕೌನ್ಸಿಲ್ ಆಕ್ಟ್ ಲಾರ್ಡ್ ಕ್ಯಾನಿಂಗ್
ಇಲ್ಬಿರ್ಟ್ ಬಿಲ್ ರಿಪ್ಪನ್
ಭಾರತೀಯ ಕೌನ್ಸಿಲ್ ಆಕ್ಟ್ ಲ್ಯಾನ್ಸ್ಡೌನ್
ಮಾರ್ಲೆ-ಮಿಂಟೋ ಸುಧಾರಣೆ ಮಿಂಟೋ
ರೌಲತ್ ಕಾಯ್ದೆ ಚೆಲ್ಮ್ಸ್ ಫೋರ್ಡ್
ಸೈಮನ್ ಕಮಿಷನ್ ಇರ್ವಿನ್
ಗಾಂಧಿ - ಇರ್ವಿನ್ ಮಾತುಕತೆ ಇರ್ವಿನ್
ಕಮ್ಯುನಲ್ ಅವಾರ್ಡ್ ವಿಲ್ಲಿಂಗ್ಟನ್
ಗೌರ್ನಮೆಂಟ್ ಆಫ್ ಇಂಡಿಯಾ ಆಕ್ಟ್ ವಿಲ್ಲಿಂಗ್ಟನ್
ಕ್ರಿಪ್ಸ್ ಕಾಯ್ದೆ ಲಿಂಗ್ನಿತ್ಗೋ
INA ವಿಚಾರಣೆ ವೇವೆಲ್
ವೇವೆಲ್ ಯೋಜನೆ ವೇವೆಲ್
ಕ್ಯಾಬಿನೆಟ್ ಮಿಷನ್ ಪ್ಲಾನ್ ವೇವೆಲ್
ಭಾರತೀಯ ಸ್ವಾತಂತ್ರಕಾಯ್ದೆ ಮೌಂಟ್ ಬ್ಯಾಟನ್
ಎರಡನೇ ದುಂಡುಮೇಜಿನ ಸಭೆ ವಿಲ್ಲಿಂಗ್ಟನ್
ರೆಗ್ಯುಲೇಟಿಂಗ್ ಕಾಯ್ದೆ - 1773 ವಾರೆನ್ ಹೇಸ್ಟಿಂಗ್ಸ್ ( ಭಾರತದ ಮೊದಲ ಗೌರ್ನರ್ ಜನರಲ್)
ಜಮೀನ್ದಾರಿ ಕಾಯ್ದೆ ಕಾರ್ನ್ ವಾಲಿಸ್
ಸಹಾಯಕ ಸೈನ್ಯ ಪದ್ದತಿ ವೆಲ್ಲೆಸ್ಲಿ




ಕೈಗಾರಿಕಾ ಕ್ರಾಂತಿ ಮೊದಲು ಪ್ರಾರಂಭವಾದದು
ಎ) ಅಮೇರಿಕಾ, ಬಿ) ಜಪಾನ್, ಸಿ)ಇಂಗ್ಲೆಂಡ್, ಡಿ) ರಷ್ಯಾ

ಬುದ್ಧ ಚರಿತ ಬರೆದವರು
ಎ) ಬಾಣಭಟ್ಟ, ಬಿ) ಅಶ್ವಘೋಷ, ಸಿ) ಕಾಳಿದಾಸ, ಡಿ) ತುಳಸಿದಾಸ್

1612ರಲ್ಲಿ ಭಾರತದಲ್ಲಿ ಬ್ರಿಟೀಷರ ಮೊದಲ ಕಾರ್ಖಾನೆ ಸ್ಥಾಪಿತವಾದದು ಎಲ್ಲಿ
ಎ) ಪಾಂಡಿಚೆರಿ, ಬಿ) ಸೂರತ್, ಸಿ) ಕೊಚ್ಚಿನ್, ಡಿ) ಕಲ್ಕತ್ತಾ

ಕಳಿಂಗ ಯುದ್ಧ ನೆಡೆದ ವರ್ಷ
ಎ) ಕ್ರಿ.ಪೂ 58, ಬಿ) ಕ್ರಿ.ಪೂ 78, ಸಿ) ಕ್ರಿ.ಪೂ 599, ಡಿ) ಕ್ರಿ.ಪೂ 261

ಬರ್ಲಿನ್ ಗೋಡೆ ಕಟ್ಟಿದ ವರ್ಷ
ಎ) 1917, ಬಿ) 1961, ಸಿ) 1921 ಡಿ) 1963

ಕೆಳಗಿನವುಗಳಲ್ಲಿ ಯಾವುದು ವಿಶ್ವಸಂಸ್ಥೆ ಆಡಳಿತ ಭಾಷೆಅಲ್ಲಿ
ಎ) ಸ್ಪಾನಿಷ್, ಬಿ) ಅರೇಬಿಕ್, ಸಿ) ಚೈನೀಸ್, ಡಿ) ಜಪಾನೀಸ್

ವಿಶ್ವಸಂಸ್ಥೆಯ ಹೆಸರನ್ನು ಸೂಚಿಸಿದವರು
ಎ) ಕೆನಡಿ, ಬಿ) F.D.ರೋಸ್ವೆಲ್ಟ್, ಸಿ) ಜಿಮ್ಮಿ ಕಾರ್ಟರ್, ಡಿ) ನೆಪೋಲಿಯನ್

ವಿಶ್ವಸಂಸ್ಥೆಯ ಸ್ಥಾಪನ ದಿನ
ಎ) 30 ಅಕ್ಟೋಬರ್ 1945, ಬಿ) 24 ಅಕ್ಟೋಬರ್ 1945, ಸಿ) 6 ಆಗಸ್ಟ್ 1942. ಡಿ) 9 ಆಗಸ್ಟ್ 1942

ಅಂತರ ರಾಷ್ಟ್ರೀಯ ನ್ಯಾಯಾಲಯದ ನ್ಯಾಯಾದೀಶರ ಅವಧಿ
ಎ) 3, ಬಿ) 5, ಸಿ) 7, ಡಿ) 9


WHOದ ಅಧಕ್ಷ್ಯೆಯಾಗಿದ್ದ ಭಾರತದ ಏಕೈಕ ಮಹಿಳೆ
ಎ) ಆರ್.ಕೆ.ಅಮೃತ್ ಕೌರ್, ಬಿ) ವಿಜಯಲಕ್ಷ್ಮಿ ಪಂಡಿತ್, ಸಿ) ಸುಚೇತ ಕೃಪಲಾನಿ, ಡಿ) ಸರೋಜಿನಿ ನಾಯ್ಡು

ದೃತರಾಷ್ಟ್ರನ 100 ಮಕ್ಕಳಲ್ಲಿ ಏಕೈಕ ಮಗಳ ಹೆಸರು
ಎ) ತ್ರಿಷಲ, ಬಿ) ಕುಂತಿ, ಸಿ) ದುಶ್ಯಲ, ಡಿ) ಮಾದ್ರಿ

ಭಾರತೀಯ ಪರಂಪರೆಯಲ್ಲಿ ಕುಬೇರನ ಪತ್ನಿ
ಎ) ರಂಭ, ಬಿ) ಮೇನಕ, ಸಿ) ಊರ್ವಶಿ, ಡಿ) ತಿಲೋತ್ತಮೆ

ಆದಿಗ್ರಂಥ ಬರೆದವರು
ಎ) ಗುರುನಾನಕ್, ಬಿ) ಗುರು ಗೋವಿಂದಸಿಂಗ್, ಸಿ) ಗುರು ಅರ್ಜುನ್ ದೇವ್, ಡಿ) ಗುರು ತೇಗ್ ಬಹದ್ದೂರ್

ರಾಜತರಂಗಿಣಿ ರಚಿಸಿದವರು 
ಎ) ಕಲ್ಹಣ, ಬಿ) ಕಾಳಿದಾಸ, ಸಿ) ಚಾಣಕ್ಯ, ಡಿ) ಬಾಣಭಟ್ಟ


ಎಲ್ಲೋರಾದ ಕೈಲಾಸ ದೇವಾಲಯವನ್ನು ಕಟ್ಟಿದವರು
ಎ) ರಾಷ್ಟ್ರಕೂಟರು, ಬಿ) ಚಾಲುಕ್ಯರು, ಸಿ) ಚೋಳರು, ಡಿ) ಪಲ್ಲವರು

ಜೀಲಂ ನದಿಯ ದಡದಲ್ಲಿ ಅಲೆಗ್ಸಾಂಡರ್ ಪುರೂರವನನ್ನು ಸೋಲಿಸಿದ್ದು ಯಾವ ಯುದ್ಧದಲ್ಲಿ
ಎ) ವಾಂಡಿವಾಷ್, ಬಿ) ಹೆಡಾಪ್ಸೆಸ್, ಸಿ) ಚೌಸ, ಡಿ) ಹಲ್ಡಿಘಾಟಿ

ಭಾರತದಲ್ಲಿ ಸತಿ ಪದ್ದತಿ ನಿರ್ಮೂಲನ ಮಾಡಿದ ಗೌರ್ನರ್ ಜನರಲ್
ಎ) ಡಾಲ್ ಹೌಸಿ, ಬಿ) ವಿಲಿಯಂ ಬೆಂಟಿಕ್, ಸಿ) ಲಾರ್ಡ್ ಕಾರ್ನ್ವಾಲೀಸ್, ಡಿ) ವಾರೆನ್ ಹೇಸ್ಟಿಂಗ್ಸ್

ಈ ಕೆಳಗಿನವುಗಳಲ್ಲಿ ಲಾರ್ಡ್ ಕರ್ಜನ್ ಯಾವುದಕ್ಕೆ ಸಂಬಂಧಿಸಿದ್ದಾರೆ
ಎ) ಹಂಟರ್ ಆಯೋಗ, ಬಿ) ದತ್ತು ಮಕ್ಕಳಿಗೆ ಹಕ್ಕಿಲ್ಲ, ಸಿ) ಬಂಗಾಳದ ವಿಭಜನೆ, ಡಿ) ಜಲಿಯನ್ ವಾಲಾಭಾಗ್ ದುರಂತ

ಗಾಂಧೀಜಿ ತಮ್ಮ ಮೊಟ್ಟಮೊದಲ ಸತ್ಯಾಗ್ರಹ ಎಲ್ಲಿ ಆರಂಭಿಸಿದರು
ಎ) ಪೀಟರ್ ಮ್ಯಾಟಿಜ್ ಬರ್ಗ್-ಆಫ್ರಿಕ, ಬಿ) ಸಬರಮತಿ-ಭಾರತ, ಸಿ) ಜೋಹಾನ್ಸ್ ಬರ್ಗ್-ಆಫ್ರಿಕಾ ಡಿ) ದಂಡಿ-ಭಾರತ

ಯಾವ ವೇದದಲ್ಲಿ ಆಯುರ್ವೇದದ ಬಗ್ಗೆ ಮಾಹಿತಿಯಿದೆ
ಎ) ಋಗ್ವೇದ, ಬಿ) ಸಾಮವೇದ, ಸಿ) ಅಥರ್ವವೇದ, ಡಿ) ಯಜುರ್ವೇದ

ಎಕಾನಾಮಿಕ್ ಡ್ರೈನ್ ಥಿಯರಿ ಯಾರಿಗೆ ಸಂಬಂಧಿಸಿದೆ
ಎ) ಲಾರ್ಡ್ ಲಿಟ್ಟನ್, ಬಿ) ಸ್ವಾಮಿ ದಯಾನಂದ, ಸಿ) ದಾದಾಬಾಯಿ ನವರೋಜಿ, ಡಿ) ಮೌಲಾನ ಅಬ್ದುಲ್ ಕಲಾಂ ಅಜಾದ್

ಭಾರತದ ರಾಜಧಾನಿಯನ್ನು ಬಂಗಾಳದಿಂದ ದೆಹಲಿಗೆ ವರ್ಗಾಯಿಸಿದ ವರ್ಷ
ಎ) 1905, ಬಿ) 1911, ಸಿ) 1920, ಡಿ) 1919

ಗುಪ್ತರ ಕಾಲದಲ್ಲಿ ವೈದ್ಯಕೀಯ ಮೂಲಪುರುಷ ಎಂದು ಖ್ಯಾತನಾಗಿದ್ದವನು
ಎ) ಶೂದ್ರಕ, ಬಿ) ಶುಶ್ರುತ, ಸಿ) ಶೌನಕ, ಡಿ) ಆರ್ಯಭಟ

ಭಾರತ ರಾಷ್ಟ್ರೀಕ ಕಾಂಗ್ರೆಸ್ ನ ಸ್ಥಾಪಕ
ಎ) ದಾದಾಬಾಯಿ ನವರೋಜಿ, ಬಿ) ಏ.ಓ.ಹ್ಯೂಂ, ಸಿ) ಡಬ್ಲ್ಯೂ.ಸಿ. ಬ್ಯಾನರ್ಜಿ, ಡಿ) ಬಹ್ರುದ್ದೀನ್ ತಯ್ಯಬ್ಜಿ

ಜಲಿಯನ್ ವಾಲಾಭಾಗ್ ದುರಂತವು ಯಾವ ವರ್ಷದಲ್ಲಿ ನೆಡೆಯಿತು
ಎ) 1927, ಬಿ) 1942, ಸಿ) 1920, ಡಿ) 1919

ಬ್ರಹ್ಮಸಮಾಜದ ಸ್ಥಾಪಕರು
ಎ) ರಾಜಾರಾಂ ಮೋಹನ್ ರಾಯ್, ಬಿ) ಕೇಶವ್ ಚಂದ್ರ ಸೇನ್, ಸಿ) ಸ್ವಾಮಿ ವಿವೇಕಾನಂದ, ಡಿ) ಸ್ವಾಮಿ ದಯಾನಂದ

ಸಹಾಯಕ ಸೈನ್ಯ ಪದ್ದತಿಯನ್ನು ಸ್ಥಾಪಿಸಿದವರು
ಎ) ಕಾರ್ನ್ ವಾಲೀಸ್, ಬಿ) ವೆಲ್ಲೆಸ್ಲಿ, ಸಿ) ಕ್ಯಾನಿಂಗ್, ಡಿ) ಹೇಸ್ಟಿಂಗ್ಸ್

ಮೊಘಲ್ ಸಾಮ್ರಾಜ್ಯದ ಕಡೆಯ ದೊರೆ
ಎ) ಬಹದ್ದೂರ್ ಷಾ-II, ಬಿ) ಷಾ ಆಲಂ-II, ಸಿ) ಅಕ್ಬರ್-II, ಡಿ) ಅಲಂಗೀರ್-II

ಸರ್.ಥಾಮಸ್ ರೋ ಯಾರ ಕಾಲದಲ್ಲಿ ಪ್ರತಿನಿಧಿಯಾಗಿ ಬಂದಿದ್ದನು
ಎ) ಅಕ್ಬರ್, ಬಿ) ಜಹಂಗೀರ್, ಸಿ) ಷಹಜಹಾನ್, ಡಿ) ಔರಂಗಜೇಬ್

ವಾಸ್ಕೋಡಗಾಮ ಯಾವ ಸಾಮ್ರಾಜ್ಯದ ಯತ್ರಿಕ
ಎ) ಡಚ್ಚರು, ಬಿ) ಫ್ರೆಂಚರು, ಸಿ) ಪೋರ್ಚುಗ್ರೀಸರು, ಡಿ) ಡ್ಯಾನಿಷರು

ಅಮೇರಿಕಾವು ಸ್ವತಂತ್ರವಾದದ್ದು
ಎ) 1776, ಬಿ) 1756, ಸಿ) 1736, ಡಿ) 1746

ಭಾರತವು ಸ್ವಾತಂತ್ರ್ಯ ಪಡೆದಾಗ ಬ್ರಿಟನ್ನಿನ ಪ್ರಧಾನಿಯಾಗಿದ್ದವರು
ಎ) ಹೆರಾಲ್ಡ್ ವಿಲ್ಸನ್, ಬಿ) ಲಾಯ್ಡ್ ಜಾರ್ಜ್, ಸಿ) ಚಂಬರ್ ಲೈನ್, ಡಿ) ಕ್ಲೆಮೆಂಟ್ ಅಟ್ಲಿ

ಕೆಳಗಿನ ಯಾವ ಆಚಾರ್ಯರು ಭಾರತದಲ್ಲಿ 4 ಕಡೆ ಪ್ರಖ್ಯಾತ ಮಠಗಳನ್ನು ಸ್ಥಪಿಸಿದರು
ಎ) ರಾಮಾನುಜರು, ಬಿ) ಶಂಕರರು, ಸಿ) ಮಧ್ವರು, ಡಿ) ವಲ್ಲಭರು

ಸ್ವತಂತ್ರ ಭಾರತದ ಮೊದಲ ವಿದ್ಯಾಮಂತ್ರಿ ಯಾರು
ಎ) ಎಂ.ಸಿ. ಚಾಗ್ಲ, ಬಿ) ಮೌಲಾನ ಅಬ್ದುಲ್ ಕಲಾಂ ಅಜಾದ್, ಸಿ) ರಾಧಾಕೃಷ್ಣನ್, ಡಿ) ಅಂಬೇಡ್ಕರ್

ಭಾರತದ ಮೊದಲ ವೈಸ್ರಾಯ್ ಯಾರು
ಎ) ಲಾರ್ಡ್ ಕ್ಲೈವ್, ಬಿ) ವಾರನ್ ಹೇಸ್ಟಿಂಗ್ಸ್, ಸಿ) ಕ್ಯಾನಿಂಗ್, ಡಿ) ಕಾರ್ನ್ವಾಲೀಸ್

ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ ಇವರಿಂದ ಸ್ಥಾಪಿಸಲ್ಪಟ್ಟಿತು
ಎ) ಮೇಡಂ ಬ್ಲಾವಟ್ಸ್ಕಿ ಬಿ) ಗೋಪಾಲ ಕೃಷ್ಣ ಗೋಖಲೆ, ಸಿ) ಎಂ.ಜಿ.ರಾನಡೆ, ಡಿ) ಅಲಿಖಾನ್

ಯಾವ ವೈಸ್ರಾಯ್ ಆಡಳಿತದಲ್ಲಿ ಟಿಪ್ಪುಸುಲ್ತಾನ್ ಸೋಲಿಸಲ್ಪಟ್ಟನು
ಎ) ಕಾರ್ನ್ ವಾಲೀಸ್, ಬಿ) ವೆಲ್ಲೆಸ್ಲಿ, ಸಿ) ಲಾರ್ಡ್ ಹೇಸ್ಟಿಂಗ್ಸ್, ಡಿ) ಲಾರ್ಡ್ ಕ್ಯಾನಿಂಗ್

ಭಾರತದ ಇತಿಹಾಸದಲ್ಲಿ ಅಲ್ಬರೂನಿ ಕೆಳಗಿನ ಯಾರೊಂದಿಗೆ ಗುರುತಿಸಲ್ಪಡುತ್ತಾನೆ
ಎ) ಮೊಹಮದ್ ಬಿನ್ ತೊಗಲಕ್, ಬಿ) ಮೊಹಮದ್ ಘೋರಿ, ಸಿ) ಮೊಹಮದ್ ಘಸ್ನಿ, ಡಿ) ಅಲ್ಲಾವುದ್ದೀನ್ ಖಿಲ್ಜಿ

ಬಕ್ಸಾರ್ ಕದನ ಯಾವ ವರ್ಷದಲ್ಲಿ ನೆಡೆಯಿತು
ಎ) 1757, ಬಿ) 1764, ಸಿ) 1576, ಡಿ) 1565

ಕಾಳಿದಾಸ ಯಾರ ಆಸ್ಥಾನ ಕವಿಯಾಗಿದ್ದನು
ಎ) ಚಂದ್ರಗುಪ್ತ-II, ಬಿ) ಚಂದ್ರಗುಪ್ತ ಮೌರ್ಯ, ಸಿ) ಹರ್ಷವರ್ಧನ, ಡಿ) ಖಾರವೇಲ

ಪೃಥ್ವಿರಾಜ್ ಮತ್ತು ಘೋರಿ ಮೊಹಮ್ಮದ್ ನಡುವೆ ಉಂಟಾದ ಯುದ್ಧ
ಎ) ಹಲ್ಡಿಘಾಟಿ, ಬಿ) ತಾಳಿಕೋಟೆ, ಸಿ) ಮೊದಲ ಮರಾಠಯುದ್ಧ, ಡಿ) ಟೆರೈನ್ ಯುದ್ಧ 

ಎರಡನೆ ಪಾಣಿಪಟ್ ಯುದ್ಧ ಯಾರ ಅಧ್ಯಕ್ಷತೆಯಲ್ಲಿ ಮತ್ತು ಯಾವ ವರ್ಷದಲ್ಲಿ ನೆಡೆಯಿತು
ಎ) ಬಾಬರ್ 1526, ಬಿ) ಹುಮಾಯೂನ್ 1556, ಸಿ) ಅಕ್ಬರ್ 1556, ಡಿ) ಜಹಂಗೀರ್ 1605

ಮೊದಲ ದುಂಡು ಮೇಜಿನ ಸಭೆ ಯಾವ ಅಧ್ಯಕ್ಷತೆಯಲ್ಲಿ ನೆಡೆಯಿತು
ಎ) ರೀಡಿಂಗ್, ಬಿ) ಇರ್ವಿನ್, ಸಿ) ವಿಲ್ಲಿಂಗ್ಟನ್, ಡಿ) ಮೌಂಟ್ ಬ್ಯಾಟನ್

ಇವರಲ್ಲಿ ಯಾರು ಭಾರತದ ನೆಪೋಲಿಯನ್ ಎಂದು ಕರೆಯಲ್ಪಡುತ್ತಿದ್ದರು
ಎ) ಚಂದ್ರಗುಪ್ತ-1, ಬಿ) ಸಮುದ್ರಗುಪ್ತ, ಸಿ) ಚಂದ್ರಗುಪ್ತ-II, ಡಿ) ಹರ್ಷವರ್ಧ
logoblog

Thanks for reading

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *