ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 Mar 1 | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Sunday, March 01, 2015

Mar 1

  Pundalik       Sunday, March 01, 2015


ಮುಫ್ತಿ ಜಮ್ಮು ಮತ್ತು ಕಾಶ್ಮೀರ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ

mufti jammu mattu kaashmira siem aagi(1 Mar) ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿ ಮತ್ತು ಬಿಜೆಪಿ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ ಪಿಡಿಪಿ ನಾಯಕ ಮುಫ್ತಿ ಮೊಹಮ್ಮದ್ ಸಯೀದ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 

* ಜಮ್ಮುವಿನಲ್ಲಿ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ಮುಫ್ತಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು. 

* ಬಿಜೆಪಿ ಶಾಸಕ ನಿರ್ಮಲ್ ಸಿಂಗ್ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. 

* ನಿರ್ಮಲ್ ಸಿಂಗ್ ಬಿಜೆಪಿ ಪಕ್ಷದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮೊದಲಿಗರಾದರು. 

*ಪ್ರಮಾಣ ವಚನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ, ಎಂ.ಎಂ.ಜೋಷಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ, ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಉಪಸ್ಥಿತರಿದ್ದರು.

ಸಾರ್ಕ್ ರಾಷ್ಟ್ರಗಳ ಪ್ರವಾಸ: ಥಿಂಪುಗೆ ಬಂದ ಜೈಶಂಕರ್


saark raashtragala pravaasa: thimpuge bandha jaishankar(1 Mar) ಥಿಂಪು: ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘದ (ಸಾರ್ಕ್) ನಾಲ್ಕು ರಾಷ್ಟ್ರಗಳ ಪ್ರವಾಸದ ಮೊದಲ ಹಂತವಾಗಿ
* ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಅವರು ಭಾನುವಾರ ಭೂತಾನ್ ರಾಜಧಾನಿ ಥಿಂಪುವಿನಲ್ಲಿ ಬಂದಿಳಿದರು. 
* ಜೈಶಂಕರ್ ಅವರು ಭೂತಾನ್ ದೊರೆ ಜಿಗ್ಮೆ ಖೇಸರ್ ನಂಗ್ಯೆಲ್ ವಾಂಗ್​ಚುಕ್ ಮತ್ತು ಪ್ರಧಾನಿ ತ್ಶೆರಿಂಗ್ ತೊಬ್ಗೇ ಅವರನ್ನು ಭೇಟಿ ಮಾಡಲಿದ್ದಾರೆ. 
* ಜನವರಿ 28ರಂದು ಅಧಿಕಾರ ವಹಿಸಿಕೊಂಡ ಜೈಶಂಕರ್ ಅವರು ಸೋಮವಾರ 
ಭೂತಾನ್
2 ಬಾಂಗ್ಲಾದೇಶ, 
3 ಪಾಕಿಸ್ತಾನ, 
4 ಆಫ್ಘಾನಿಸ್ತಾನಕ್ಕೆ ಭೇಟಿ ನೀಡುವರು. 
* ನೆರೆಹೊರೆಯ ರಾಷ್ಟ್ರಗಳನ್ನು ತಲುಪುವುದಕ್ಕೆ ಒತ್ತು ನೀಡುವ ಭಾರತದ ನೀತಿಗೆ ಅನುಗುಣವಾಗಿ ಜೈಶಂಕರ್ ಅವರ ಈ ಭೇಟಿ ನಿಗದಿಯಾಗಿದೆ. 
* ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಮೇ ತಿಂಗಳಲ್ಲಿ ತಮ್ಮ ವಿದೇಶ ಪ್ರವಾಸದ ಮೊದಲ ರಾಷ್ಟ್ರವಾಗಿ ಭೂತಾನ್​ನ್ನು ಆಯ್ಕೆ ಮಾಡಿಕೊಂಡಿದ್ದರು. ಆ ಸಮಯದಲ್ಲಿ ಮೋದಿ ಅವರು 600 ಮೆವಾ ಸಾಮರ್ಥ್ಯ ಖೊಲೊಂಗ್ಚು ಜಲವಿದ್ಯುತ್ ಯೋಜನೆಗೆ ಶಿಲಾನ್ಯಾಸ ನೆರವೇರಿಸಿದ್ದರು. 
* ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಕಳೆದ ನವೆಂಬರ್ ತಿಂಗಳಲ್ಲಿ ಭೂತಾನ್​ಗೆ ಭೇಟಿ ನೀಡಿದ್ದರು.


ಲೋಕಪಾಲ ಸಂಸ್ಥೆ ಅನುದಾನ ಮೂರು ಪಟ್ಟು ಹೆಚ್ಚಳ


lokapaala samsthe anudaana muru pattu hechhala(1 Mar) ನವದೆಹಲಿ: ಭ್ರಷ್ಟಾಚಾರ ನಿಗ್ರಹಕ್ಕಾಗಿ ಸ್ಥಾಪಿಸಲಾಗಿರುವ ಲೋಕಪಾಲ ಸಂಸ್ಥೆಗೆ 2015-16ರ ಸಾಲಿನಲ್ಲಿ 7 ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚಿನ ಅನುದಾನವನ್ನು ಅಂದರೆ ಹಾಲಿ ಹಣಕಾಸು ವರ್ಷದಲ್ಲಿ ಒದಗಿಸಲಾಗಿರುವ ಅನುದಾನದ ಮೂರು ಪಟ್ಟಿನಷ್ಟು ಹೆಚ್ಚು ಮೊತ್ತವನ್ನು 2015-16ರ ಕೇಂದ್ರ ಮುಂಗಡಪತ್ರದಲ್ಲಿ ಒದಗಿಸಲಾಗಿದೆ.
* ಲೋಕಪಾಲಕ್ಕೆ ಸಂಬಂಧಿಸಿದಂತೆ ಮುಂದಿನ ಹಣಕಾಸು ವರ್ಷದಲ್ಲಿ ಸ್ಥಾಪನೆ ಮತ್ತು ನಿರ್ಮಾಣ ಸಂಬಂಧಿತ ವೆಚ್ಚಕ್ಕಾಗಿ 7.18 ಕೋಟಿ ರೂಪಾಯಿ ವೆಚ್ಚಕ್ಕೆ ಅವಕಾಶ ಒದಗಿಸಲಾಗಿದೆ ಎಂದು ಸಿಬ್ಬಂದಿ ಸಚಿವಾಲಯ ತಿಳಿಸಿದೆ. 
* 2014-15ರ ಸಾಲಿನಲ್ಲಿ ಭ್ರಷ್ಟಾಚಾರ ನಿಗ್ರಹ ಸಂಸ್ಥೆಗೆ ಕೇವಲ 2 ಕೋಟಿ ರೂಪಾಯಿಗಳ ಸಾಂಕೇತಿಕ ಅನುದಾನವನ್ನು ಒದಗಿಸಲಾಗಿತ್ತು. 
* 2013ರ ಲೋಕಪಾಲ ಮತ್ತು ಲೋಕಾಯುಕ್ತರ ಕಾಯ್ದೆಯು ಕೇಂದ್ರದಲ್ಲಿ ಲೋಕಪಾಲ ಮತ್ತು ರಾಜ್ಯಗಳಲ್ಲಿ ಲೋಕಾಯುಕ್ತ ಸಂಸ್ಥೆಗಳನ್ನು ಸ್ಥಾಪಿಸಲು ಅವಕಾಶ ನೀಡುತ್ತದೆ.
* ಸಾರ್ವಜನಿಕ ನೌಕರರ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಬಗ್ಗೆ ಈ ಸಂಸ್ಥೆಗಳು ತನಿಖೆ ನಡೆಸಬಹುದು.
* ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಕಳೆದ ವರ್ಷ ಜನವರಿ 1ರಂದು ಲೋಕಪಾಲ ಮತ್ತು ಲೋಕಾಯುಕ್ತ ಮಸೂದೆಗೆ ತಮ್ಮ ಅಂಗೀಕಾರ ನೀಡಿದ್ದರು. 
* ಲೋಕಪಾಲ ಸಂಸ್ಥೆಗೆ ಅಧ್ಯಕ್ಷ ಹಾಗೂ ಸದಸ್ಯರ ನೇಮಕಾತಿ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಲೋಕಸಭೆಯಲ್ಲಿ ಶನಿವಾರ 2015-16ರ ಮುಂಗಡಪತ್ರ ಮಂಡಿಸುತ್ತಾ ಕೇಂದ್ರ ಹಣಕಾಸು ಸಚಿವ ಅರುಣ್

ಬ್ಯಾಂಕ್ ನೌಕರರ ಬೇಡಿಕೆ ಇತ್ಯರ್ಥ; 15% ವೇತನ ಹೆಚ್ಚಳಕ್ಕೆ ಸಮ್ಮತಿ


byaank noukarara bedike ityartha; 15% vetana(23 Feb) ನವದೆಹಲಿ: ಸಾರ್ವಜನಿಕ ವಲಯದ ಬ್ಯಾಂಕುಗಳ ನೌಕರರು ಫೆಬ್ರವರಿ 25 ರಿಂದ 28ರವರೆಗೆ ಹಮ್ಮಿಕೊಂಡಿದ್ದ 4 ದಿನಗಳ ಮುಷ್ಕರವನ್ನು ಹಿಂಪಡೆದಿದ್ದು, 
* ಭಾರತೀಯ ಬ್ಯಾಂಕುಗಳ ಒಕ್ಕೂಟವು ವೇತನವನ್ನು 15% ಏರಿಕೆ ಮಾಡಲು ಒಪ್ಪಿಗೆ ಸೂಚಿಸಿದೆ. 
* ಇಂದು ಭಾರತೀಯ ಬ್ಯಾಂಕುಗಳ ಒಕ್ಕೂಟದೊಂದಿಗೆ ಮುಂಬೈನಲ್ಲಿ ನಡೆದ ಮಾತುಕತೆಯಲ್ಲಿ ನೌಕರರ ಸಂಘದ ಬೇಡಿಕೆಗೆ ಒಪ್ಪಿಗೆ ಸೂಚಿಸಿರುವ ಒಕ್ಕೂಟ ಒಟ್ಟು ವೇತನದಲ್ಲಿ 15% ಹೆಚ್ಚಳ ಮಾಡಿದೆ. 
* ಈ ಸಂಬಂಧ ಬ್ಯಾಂಕುಗಳ ಒಕ್ಕೂಟ ಮತ್ತು ನೌಕರರ ಸಂಘ ಎಂಒಯುಗೆ ಸಹಿ ಹಾಕಿವೆ. ನವೆಂಬರ್ 2012ರಿಂದ ವೇತನ ಹೆಚ್ಚಳ ಜಾರಿಗೆ ಬರಲಿದ್ದು, ಇದರಿಂದಾಗಿ ಬ್ಯಾಂಕುಗಳಿಗೆ ವಾರ್ಷಿಕ 4,725 ಕೋಟಿ ಹೊರೆ ಬೀಳಲಿದೆ. 
* ಜತೆಗೆ ಬ್ಯಾಂಕುಗಳ ಒಕ್ಕೂಟವು ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ಬ್ಯಾಂಕಿಗೆ ರಜೆ ನೀಡಲು ಒಪ್ಪಿಗೆ ಸೂಚಿಸಿದೆ. 
* ಇದಕ್ಕೆ ಪ್ರತಿಯಾಗಿ ಉಳಿದ ಶನಿವಾರಗಳಂದು ಬ್ಯಾಂಕು ದಿನವಿಡೀ ಕಾರ್ಯ ನಿರ್ವಹಿಸಲಿದೆ. 
* ಬ್ಯಾಂಕುಗಳ ಒಕ್ಕೂಟವು ವೇತನದಲ್ಲಿ 15% ಹೆಚ್ಚಳಕ್ಕೆ ಒಪ್ಪಿಗೆ ಸೂಚಿಸಿದೆ, ಉಳಿದ ಬೇಡಿಕೆಗಳ ಕುರಿತು ಮುಂದಿನ 90 ದಿನಗಳ ಒಳಗಾಗಿ ಮಾತುಕತೆ ನಡೆಸಿ ಒಪ್ಪಂದಕ್ಕೆ ಬರಲಾಗುವುದು ಎಂದು ಯುಎಫ್​ಬಿಯು ಸಂಚಾಲಕ ಎಂ.ವಿ. ಮುರಳಿ ತಿಳಿಸಿದ್ದಾರೆ. 
* ಒಕ್ಕೂಟದ ನಿಧಾರದಿಂದ ಸಾರ್ವಜನಿಕ ವಲಯದ 45 ಬ್ಯಾಂಕುಗಳ 8.5 ಲಕ್ಷ ನೌಕರರು ಮತ್ತು ಅಧಿಕಾರಿಗೆ ಅನುಕೂಲವಾಗಲಿದೆ. ಬ್ಯಾಂಕ್ ನೌಕರರಿಗೆ 5 ವರ್ಷಕ್ಕೆ ಒಂದು ಸಲ

ನೂತನ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ಯಾರು?

nutana polis mahaanirdeshaka omprakaash yaaru? (1 Mar) ಬೆಂಗಳೂರು, ಮಾ. 1 : ಪೊಲೀಸ್ ಮಹಾನಿರ್ದೇಶಕ ಹುದ್ದೆಗೆ ಎದ್ದಿದ್ದ ಗೊಂದಲಗಳಿಗೆ ಅಂತಿಮವಾಗಿ ತೆರೆ ಬಿದ್ದಿದೆ. ಹಿರಿಯ ಐಪಿಎಸ್ ಅಧಿಕಾರಿ ಓಂಪ್ರಕಾಶ್ ನೂತನ ಪೊಲೀಸ್ ಮಹಾನಿರ್ದೇಶಕರಾಗಿ (ಡಿಜಿಪಿ-ಐಜಿಪಿ) ಅಧಿಕಾರ ಸ್ವೀಕರಿಸಿದ್ದಾರ

* ನಿವೃತ್ತರಾದ ಲಾಲ್ ರುಖುಮೋ ಪಚಾವೋ ಅವರು ಬೇಟನ್ ನೀಡುವ ಮೂಲಕ ಓಂಪ್ರಕಾಶ್ ಅಧಿಕಾರ ಅವರಿಗೆ ಅಧಿಕಾರನ ಹಸ್ತಾಂತರಿಸಿದರು.
* ಗೃಹ ರಕ್ಷಕದಳ ಹಾಗೂ ಅಗ್ನಿ ಶಾಮಕದ ಪೊಲೀಸ್ ಮಹಾನಿರ್ದೇಶಕರಾಗಿದ್ದ ಓಂಪ್ರಕಾಶ್ ಅವರನ್ನು ನೂತನ ಡಿಜಿಪಿಯಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿತ್ತು.[ಬೆಂಗಳೂರು: ಶಾಲೆಗಳಲ್ಲಿ ವಿದ್ಯಾರ್ಥಿ ಪೊಲೀಸ್ ವ್ಯವಸ್ಥೆ] ಡಿಜಿಪಿ ಐಜಿಪಿ ಹುದ್ದೆಗೆ ನಾಲ್ವರು ಅಧಿಕಾರಿಗಳ ನಡುವೆ ಪೈಪೋಟಿಯಿತ್ತು.   

*ಸಿಬಿಐ ಜಂಟಿ ಪೊಲೀಸ್ ಮಹಾ ನಿರ್ದೇಶಕರಾಗಿರುವ ರೂಪ್ ಕುಮಾರ್ ದತ್ತಾ ಮತ್ತು ಸೇವಾ ಹಿರಿತನದ ಆಧಾರದಲ್ಲಿ ಸುಶಾಂತ್ ಮಹಾಪಾತ್ರರ ಜತೆಗೆ ಓಂಪ್ರಕಾಶ್ ಅವರ ಹೆಸರೂ ರೇಸ್‌ನಲ್ಲಿತ್ತು. ಆದರೆ ಸರ್ಕಾರ ಅಂತಿಮವಾಗಿ ಓಂಪ್ರಕಾಶ್ ಅವರನ್ನು ನೇಮಕ ಮಾಡಿದೆ. ಓಂಪ್ರಕಾಶ್ ಯಾರು? 

1957ರ ಜನವರಿ 17 ರಂದು ಬಿಹಾರದ ಚಂಪಾರಣ್ ಜಿಲ್ಲೆಯ ಪಿಪ್ರಾಸಿ ಗ್ರಾಮದಲ್ಲಿ ಜನಿಸಿದ ಓಂಪ್ರಕಾಶ್, 1979ರಲ್ಲಿ ಬನಾರಸ್‌ನ ಹಿಂದು ವಿಶ್ವ ವಿದ್ಯಾಲಯದಿಂದ ಭೂಗರ್ಭಶಾಸ್ತ್ರದಲ್ಲಿ ಎಂಎಸ್ಸಿ ಪದವಿ ಪಡೆದರು. 1981ರಲ್ಲಿ ಐಪಿಎಸ್ ತೇರ್ಗಡೆಗೊಂಡು ಕರ್ನಾಟಕ ಕೇಡರ್‌ನಲ್ಲಿ ನೇಮಕಗೊಂಡರು. ದಕ್ಷಿಣ ಕನ್ನಡ ಮತ್ತು

ಅಮೆರಿಕದ ಪನಾಯಾ ಕಂಪನಿ ಇನ್ಫೋಸಿಸ್‍ಗೆ

amerikadha panaaya  kampani infosisge 17 Feb 2015 05:40 PM IST ನವದೆಹಲಿ: ಐಟಿ ದಿಗ್ಗಜ ಇನ್ಫೋಸಿಸ್‍ ಕಂಪನಿಯು ಬರೋಬ್ಬರಿ ರು. 1,250 ಕೋಟಿ (200 ದಶಲಕ್ಷ ಡಾಲರ್) ಮೊತ್ತಕ್ಕೆ ಅಮೆರಿಕ ಮೂಲದ ಪನಾಯಾ ಕಂಪನಿಯನ್ನು ಖರೀದಿಸಿದೆ. 
* ಸೆ. 2012ರಲ್ಲಿ ಜ್ಯೂರಿಕ್ ಮೂಲದ ಲೋಡ್‍ಸ್ಟೋನ್ ಕಂಪನಿಯ ಖರೀದಿಯ ಬಳಿಕ ಇನ್ಫೋಸಿಸ್‍ ಮಾಡುತ್ತಿರುವ ಎರಡನೇ ಅತಿ ದೊಡ್ಡ ಸ್ವಾಧೀನ ಇದಾಗಿದೆ. 
* ಈ ಮೂಲಕ ತನ್ನ ಪ್ರತಿಸ್ಪರ್ಧಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್)ಗೆ ಪ್ರಬಲ ಪೈಪೋಟಿ ನೀಡಲು ಇನ್ಫಿ ಮುಂದಾಗಿದೆ. 
* ನ್ಯೂಜೆರ್ಸಿ ಮೂಲದ ಪನಾಯ್ ಕಂಪನಿಯು ಉದ್ಯಮ ಅಪ್ಲಿಕೇಷನ್‍ಗಳಿಗೆ ಕ್ಲೌಡ್ ಆಧರಿತ ಗುಣಮಟ್ಟ ನಿರ್ವಹಣಾ ಸೇವೆಯನ್ನು ಒದಗಿಸುತ್ತಿದೆ. 
* ಕೋಕಾ-ಕೋಲಾ, ಮರ್ಸಿಡಿಸ್ ಬೆನ್ಝ್, ಯೂನಿಲಿವರ್ ಸೇರಿದಂತೆ ಅನೇಕ ಖ್ಯಾತ ಕಂಪನಿಗಳು ಪನಾಯಾ ದ ಕ್ಲೈಂಟ್‍ಗಳಾಗಿವೆ. ಈಗ ಈ ಕಂಪನಿಯನ್ನು ಇನ್ಫೋಸಿಸ್‍ ಖರೀದಿಸಿದ್ದು, ಪೂರ್ಣ ನಗದು ಡೀಲ್ ಮಾರ್ಚ್ 31ರಂದು ನಡೆಯಲಿದೆ

ಮತ್ತೆ ಬರಲಿದೆ ಒಂದು ರುಪಾಯಿ ನೋಟು


matte baralide ondu rupaayi notu ದಿಲ್ಲಿ: 20 ವರ್ಷಗಳ ನಂತರ ಒಂದು ರುಪಾಯಿ ನೋಟು ಮತ್ತೆ ಚಲಾವಣೆಗೆ ಬರುತ್ತಿದೆ. 
* ಒಂದು ರುಪಾಯಿಯ ಕರೆನ್ಸಿ ನೋಟನ್ನು ಮತ್ತೆ ಚಲಾವಣೆಗೆ ತರಲು ಭಾರತೀಯ ರಿಸರ್ವ್ ಬ್ಯಾಂಕ್ ತೀರ್ಮಾನಿಸಿದೆ. 
* ಹೊಸ ನೋಟು ಗುಲಾಬಿ ಹಾಗು ಹಸಿರು ಬಣ್ಣದ್ದಾಗಿರುವುದು. 
* 1994ರಲ್ಲಿ ರಿಸರ್ವ್ ಬ್ಯಾಂಕ್ ಒಂದು ರುಪಾಯಿ ನೋಟು ಮುದ್ರಣವನ್ನು ನಿಲ್ಲಿಸಿತ್ತು. 
* ಕರೆನ್ಸಿ ನೋಟುಗಳನ್ನು ಮುದ್ರಿಸುವುದಕ್ಕೆ ಖರ್ಚು ಹೆಚ್ಚಾದ ಕಾರಣ ಮುದ್ರಣವನ್ನು ನಿಲ್ಲಿಸಲಾಗಿತ್ತು. 
* ಹೊಸ ನೋಟು ಹಳೆಯ ಒಂದು ರುಪಾಯಿ ನೋಟಿನಂತೆಯೇ ಇರಲಿದ್ದು, ಇಲ್ಲಿ ರಿಸರ್ವ್ ಬ್ಯಾಂಕ್ ಗವರ್ನರ್‌ನ ಸಹಿ ಬದಲು ವಿತ್ತ ಕಾರ್ಯದರ್ಶಿಯ ಸಹಿ ಇರುತ್ತದೆ.

ನವೀನ್ ಛೋಪ್ರಾ ವೊಡಾಫೋನ್ ನೂತನ ಸಿಒಒ


navin chopra vodaafon nutana sioo ಮುಂಬೈ: ಪ್ರಮುಖ ಮೊಬೈಲ್ ಸೇವಾ ಸಂಸ್ಥೆ ವೊಡಾಫೋನ್ ಇಂಡಿಯಾದ ನೂತನ ಸಿಒಒ ಆಗಿ ನವೀನ್ ಛೋಪ್ರಾ ಆಯ್ಕೆಯಾಗಿದ್ದಾರೆ. ಇಂದು ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬಿದ್ದಿದ್ದು, 
* ಸದ್ಯ ಸಿಒಒ ಆಗಿರುವ ಸುನೀಲ್ ಸೂದ್ ಅವರ ಸ್ಥಾನಕ್ಕೆ ವೋಡಾಫೋನ್ ಬಿಸಿನಸ್ ಸರ್ವೀಸ್ ನಿರ್ದೇಶಕರಾಗಿರುವ ಛೋಪ್ರಾ ನೇಮಕಗೊಂಡಿದ್ದಾರೆ. 
* ನವೀನ್ ಛೋಪ್ರಾ ಅವರು ಇದೇ ಏಪ್ರಿಲ್ 1 ರಿಂದ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 
* 2004 ರಲ್ಲಿ ವೋಡಾಫೋನ್ ಕಾರ್ಪೊರೇಟ್ ಮಾರ್ಕೆಟಿಂಗ್ ಉಪಾಧ್ಯಕ್ಷರಾಗಿ ಸೇರಿದ್ದ ಛೋಪ್ರಾ ಕಳೆದ ಹತ್ತು ವರ್ಷಗಳಲ್ಲಿ ಕಂಪನಿಯ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. 
* ಸಿಒಒ ಆಗಿದ್ದ ಸುನೀಲ್ ಸೂದ್ ಅವರಿಗೆ ಕಂಪನಿಯ ಮುಖ್ಯಸ್ಥರ ಜವಾಬ್ದಾರಿ ನೀಡಲಾಗಿದ್ದು, ಛೋಪ್ರಾ ಸಿಒಒ ಆಗಿ ಕಾರ್ಯನಿರ್ವಹಿಸಲಿದ್ದಾರೆ. 
* ಛೋಪ್ರಾ ಸ್ಥಾನಕ್ಕೆ ಯಾರು ನೇಮಕವಾಗಿದ್ದಾರೆ ಎಂಬುದನ್ನು ಸಂಸ್ಥೆ ಇನ್ನೂ ಬಹಿರಂಗ ಪಡಿಸಿಲ್ಲ

ಬಿಸಿಸಿಐ ಅಧ್ಯಕ್ಷರಾಗಿ ಜಗ್`​ಮೋಹನ್ ದಾಲ್ಮಿಯಾ ಅವಿರೋಧ ಆಯ್ಕೆ


bisisiai adhyaksharaagi jag`​mohan daalmiya avirodha aayke01 Mar ಚೆನ್ನೈ(ಮಾ.01): ಬಿಸಿಸಿಐ ನೂತನ ಅಧ್ಯಕ್ಷರಾಗಿ ಜಗ್​ಮೋಹನ್ ದಾಲ್ಮಿಯಾ ಆಯ್ಕೆಯಾಗಿದ್ದಾರೆ. 
* ಚೆನ್ನೈನಲ್ಲಿ ನಾಳೆ ಬಿಸಿಸಿಐ ಆಡಳಿತ ಮಂಡಳಿ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿತ್ತು. 
* ಆದರೆ, ಅಧ್ಯಕ್ಷ ಸ್ಥಾನಕ್ಕೆ ದಾಲ್ಮಿಯಾ ಬಿಟ್ಟರೆ ಬೇರೆ ಯಾರು ನಾಮಪತ್ರ ಸಲ್ಲಿಸಿಲ್ಲ. ಹೀಗಾಗಿ, ದಾಲ್ಮಿಯಾ ಅವಿರೋಧವಾಗಿ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 
* ದಾಲ್ಮಿಯಾ ಈ ಮುನ್ನ ಬಿಸಿಸಿಐ ಮತ್ತು ಐಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
* ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಗಂಗರಾಜು ಹಾಗೂ ಗೌತಮ್​ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 
* ನಾಳೆ ಬಿಸಿಸಿಐನ ವಿಶೇಷ ಸಾಮಾನ್ಯ ಸಭೆ ನಡೆಯಲಿದ್ದು, ನಾಳೆ ಚುನಾವಣೆ ಬಳಿಕ ಅಧ್ಯಕ್ಷರ ಘೋಷಣೆಯಾಗಲಿದೆ

ಇಂದು ಮಂಗಳೂರು-ಹುಬ್ಬಳ್ಳಿಗಳಲ್ಲಿ ವಿರಾಟ್ ಹಿಂದೂ ಸಮಾಜೋತ್ಸವ


indu mangaluru-hubballigalalli viraat hindu samaajotsava 01 Mar ಮಂಗಳೂ ರು-ಹುಬ್ಬಳ್ಳಿ (ಮಾರ್ಚ್ 1) : ಕಡಲನಗರಿ ಮಂಗಳೂರು ಸಂಪೂರ್ಣ ಕೇಸರಿಮಯ.. ಎಲ್ಲಿ ನೋಡಿದ್ರೂ ಬ್ಯಾನರ್.. ತಳಿರು ತೋರಣ.. ಯಾಕಂದ್ರೆ, ಇಂದು ಮಂಗಳೂರು ವಿರಾಟ್ ಹಿಂದೂ ಸಮಾಜೋತ್ಸವಕ್ಕೆ ಸಾಕ್ಷಿಯಾಗಲಿದೆ. ಜಿಲ್ಲೆಯ ಒಂದು ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಮೆರವಣಿಗೆ, 4 ಗಂಟೆಗೆ ಬಹಿರಂಗ ಸಭೆ ನಡೆಯಲಿದೆ. ಉತ್ತರ ಪ್ರದೇಶದ 20ರ ಹರೆಯದ ಸಾದ್ವಿ ಬಾಲಿಕಾ ಸರಸ್ವತಿ ದಿಕ್ಸೂಚಿ ಭಾಷಣ ಮಾಡಲಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಪೇಜಾವರ ಸ್ವಾಮೀಜಿ ಸೇರಿದಂತೆ ಅನೇಕರು ಸಮಾಜೋತ್ಸವದಲ್ಲಿ ಮಾತನಾಡಲಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚು ಬಂದೋಬಸ್ತ್ ಕೈಗೊಳ್ಳಲಾಗಿದೆ. ಆಯ್ದ ಪ್ರದೇಶದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸುವ ಮೂಲಕ ಕಟ್ಟೆಚ್ಚರ ವಹಿಸಲಾಗ್ತಿದೆ. ಅತ್ತ ಹುಬ್ಬಳ್ಳಿಯ ನೆಹರೂ ಮೈದಾನದಲ್ಲೂ ವಿರಾಟ ಹಿಂದೂ ಸಮಾವೇಶ ನಡೆಯುತ್ತಿದೆ. 50 ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಉತ್ತರ ಪ್ರದೇಶದ ಗೋರಖಪುರ ಸಂಸದ ಹಾಗೂ ಯೋಗಿ ಆದಿತ್ಯನಾಥ ಮುಖ್ಯ ಬಾಷಣಕಾರರಾಗಿ ಪಾಲ್ಗೊಳ್ಳಲಿದ್ದಾರೆ. 3 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. 150 ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಇನ್ನು ಇಂದೇ ಅಸಾರ್ ಹೊಂಡಾದಲ್ಲಿ ಮುಸ್ಲಿಂ ಸಮುದಾಯದಿಂದ ಬೃಹತ್ ಧಾರ್ಮಿಕ ಸಮ್ಮೇಳನ ಕೂಡ ನಡೆಯಲಿದೆ. ಹೀಗಾಗಿ ಹುಬ್ಬಳಿಯಲ್ಲಿ


ಮೈಸೂರಿನಲ್ಲಿ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ - ಸಿಂಗಾರಗೊಂಡಿದೆ ಮಹಾರಾಜ ಕಾಲೇಜಿನ ಆವರಣ - ಯಾವ ಸಿನಿಮಾಗಳಿಗೆ ಪ್ರಶಸ್ತಿ??


maisurinalli raajya chalanachitra prashasti pradaana samaarambha28 Feb ಮೈಸೂರು (ಫೆಬ್ರವರಿ 28) : ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಮಹಾರಾಜ ಕಾಲೇಜು ಮೈದಾನ ಸಿಂಗಾರಗೊಳ್ಳುತ್ತಿದೆ. 
* ಎರಡು ದಶಕಗಳ ನಂತರ ಅರಮನೆ ನಗರಿಯಲ್ಲಿ ನಡೆಯುತ್ತಿರುವ ಸಮಾರಂಭಕ್ಕೆ ಸಕಲ ಸಿದ್ಧತೆಯನ್ನು ಮಾಡಲಾಗುತ್ತಿದೆ. 
* ಬರೋಬ್ಬರಿ 23 ವರ್ಷದ ನಂತರ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. 
* ಇದಕ್ಕಾಗಿ ಅರಮನೆ ನಗರಿಯ ಮಹಾರಾಜ ಕಾಲೇಜು ಮೈದಾನ ಸಜ್ಜಾಗಿದೆ. 2012 ಹಾಗೂ 2013 ಎರಡೂ ವರ್ಷದ ಪ್ರಶಸ್ತಿ ವಿಜೇತರಿಗೆ ಇಂದು ಸಂಜೆ ಸಿಎಂ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. 
2012 ಮತ್ತು 2013ರ ಟಾಪ್-3 ಚಿತ್ರಗಳು
1. ಪ್ರಥಮ ಅತ್ಯತ್ತಮ ಚಿತ್ರ : ತಲ್ಲಣ, 
2.ಹಜ್ ದ್ವಿತೀಯ ಅತ್ಯುತ್ತಮ ಚಿತ್ರ : ಭಾರತ್​ಸ್ಟೋರ್ಸ್, 
3.ಜಟ್ಟ ತೃತೀಯ ಅತ್ಯುತ್ತಮ ಚಿತ್ರ : ಎದೆಗಾರಿಕೆ, ಪ್ರಕೃತಿ ಅತ್ಯುತ್ತಮ ನಟ: (ಸುಬ್ಬಯ್ಯ ನಾಯ್ಡು ಪ್ರಶಸ್ತಿ) ದರ್ಶನ್, ನಿಖಿಲ್​ಮಂಜೂ ಅತ್ಯುತ್ತಮ ನಟಿ: ನಿರ್ಮಲ ಚೆನ್ನಪ್ಪ, ಕುಮಾರಿ ನಿವೇದಿತಾ ಇದಿಷ್ಟೇ ಅಲ್ಲದೇ ಕಾರ್ಯಕ್ರಮದಲ್ಲಿ 60ಕ್ಕೂ ಹೆಚ್ಚು ಕಲಾವಿದರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುತ್ತೆ. ಅದ್ರಲ್ಲೂ 6 ಮಂದಿ ಮೈಸೂರಿನವರೇ ಫಿಲ್ಮ್ ಅವಾರ್ಡ್​ಪಡೆಯುತ್ತಿದ್ದಾರೆ. ಇನ್ನು ಕಾರ್ಯಕ್ರಮಕ್ಕೆ 10 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ

ಈ ವರ್ಷ ಅತೀಹೆಚ್ಚು ಮಾರಾಟವಾಗಿರುವ ಟಾಪ್ 10 ಕಾರುಗಳು


ee varsha atihechhu maaraatavaagiruva taap 1012 Feb ಭಾರತದಲ್ಲಿ ಕಾರುಗಳ ಮಾರಾಟಕ್ಕೆ ಒಳ್ಳೆಯ ಪುಷ್ಟಿ ಸಿಕ್ಕಿದೆ. ಈ ವರ್ಷದ ಜನವರಿ ತಿಂಗಳಲ್ಲಿ ಕಾರುಗಳ ಮಾರಾಟದಲ್ಲಿ ಶೇ. 3ರಿಂದ 4ರಷ್ಟು ಹೆಚ್ಚಳವಾಗಿದೆ. ವರ್ಷದ ಮೊದಲ ತಿಂಗಳಲ್ಲಿ ಮಾರಾಟವಾದ ಒಟ್ಟು ಕಾರುಗಳ ಪ್ರಮಾಣ 1,69,300 ಆಗಿದೆ. ಯಾವ್ಯಾವ ಕಾರುಗಳು ಎಷ್ಟೆಷ್ಟು ಮಾರಾಟವಾಗಿವೆ ಎಂಬ ವಿವರ ಇಲ್ಲಿದೆ... 
1) ಮಾರುತಿ ಸುಜುಕಿ ಆಲ್ಟೋ: 22,889 ಕಾರುಗಳು
 2) ಮಾರುತಿ ಸುಜುಕಿ ಸ್ವಿಫ್ಟ್: 19,669 
3) ಮಾರುತಿ ಸುಜುಕಿ ಡಿಜೈರ್: 19,533 
4) ಮಾರುತಿ ಸುಜುಕಿ ವ್ಯಾಗನ್'ಆರ್: 12,861 
5) ಹ್ಯುಂಡೈ ಐ20: 9,541 
6) ಹ್ಯುಂಡೈ ಗ್ರ್ಯಾಂಡ್ ಐ10: 8,724 
7) ಮಹೀಂದ್ರ ಬೊಲೇರೋ: 8,515 
8) ಹೊಂಡಾ ಸಿಟಿ: 7,667 
9) ಹ್ಯುಂಡೈ ಇಯಾನ್: 6,820 
10) ಹೊಂಡಾ ಅಮೇಜ್: 6,709


ಲೈಕನ್ ಹೈಪರ್ ವಿಶ್ವದ ಅತ್ಯಂತ ದುಬಾರಿ ಸ್ಪೋರ್ಟ್ಸ್ ಕಾರು


laikan haipar vishvadha atyanta dubaari sports21 Jan ವಿಶ್ವದ ಅತಿ ದುಬಾರಿ ಸ್ಪೋರ್ಟ್ಸ್ ಕಾರು ಸುಮಾರು 21.48 ಕೋಟಿ ರೂಪಾಯಿ (3.4 ಮಿಲಿಯನ್ ಅಮೆರಿಕನ್ ಡಾಲರ್) ಬೆಲೆ ಬಾಳುವ ಸೂಪರ್ ಕಾರನ್ನು ದುಬೈನಲ್ಲಿ ಮಾರಾಟಕ್ಕಿಡಲಾಗಿದೆ. 
*ಜಗತ್ತಿನ ದುಬಾರಿ ಕಾರೆಂದು ಗುರುತಿಸಿಕೊಂಡಿರುವ ಲೈಕನ್ ಹೈಪರ್ ಸ್ಪೋರ್ಟ್ಸ್ ಕಾರಿನಲ್ಲಿ ವಜ್ರದಿಂದ ಆವೃತವಾಗಿರುವ ಹೆಡ್'ಲೈಟ್ ಜತೆಗೆ 420 ವಜ್ರಗಳ ಟೈಟಾನಿಯಂ ಎಲ್ ಇಡೀ ಸ್ಪರ್ಶ ಕೂಡ ಪಡೆದಿದೆ. 
ಈ ಕಾರು 740 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಗಂಟೆಗೆ ಗರಿಷ್ಠ 394 ಕಿಮೀ ವೇಗ ಹಾಗೂ 2.8 ಸೆಕಂಡುಗಳಲ್ಲೇ ಗಂಟೆಗೆ ಗರಿಷ್ಠ 0-100 ಕಿಮೀ ವೇಗ ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ. ಲೈಕನ್ ಹೈಪರ್ ಆರು ಸ್ಪೀಡ್ ಸೀಕ್ವೆನ್ಷಿಯಲ್ ಗೇರ್ ಬಾಕ್ಸ್'ನಿಂದಲೂ ಲಭ್ಯವಿರುತ್ತದೆ. ಇನ್ನು, ಕಾರ್ಬನ್ ಫೈಬರ್ ಚಾಸಿ, ಹೋಲೋಗ್ರಾಫಿಕ್ ಡಿಸ್'ಪ್ಲೇ ಸಿಸ್ಟಂ ಹೊಂದಿದೆ

logoblog

Thanks for reading Mar 1

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *