ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 feb | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Sunday, March 01, 2015

feb

  Pundalik       Sunday, March 01, 2015
ಮಾಂಝಿ ಹೊಸ ಸಂಘಟನೆ 'ಹಮ್ ಆರಂಭ
maanjhi hosa sanghatane 'ham aarambha (28 Feb) ಪಟನಾ: ಬಿಹಾರಿನ ಮಾಜಿ ಮುಖ್ಯಮಂತ್ರಿ ಜಿತನ್ ರಾಂ ಮಾಂಝಿ ಅವರು ಶನಿವಾರ 'ಹಿಂದುಸ್ತಾನಿ ಆವಾಮ್​ವೋರ್ಚಾ (ಎಚ್​ಎಎಂ- ಹಮ್' ಎಂಬ ಹೊಸ ಸಂಘಟನೆಯನ್ನು ಹುಟ್ಟು ಹಾಕಿದರು. ಸಾರ್ವಜನಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಸಲುವಾಗಿ ಈ ಸಂಘಟನೆ ಹುಟ್ಟು ಹಾಕಿದ ಮಾಂಝಿ, ಯುವಕರು ಮತ್ತು ಸಾಮಾನ್ಯ ಜನರಿಗೆ ರಾಜಕೀಯ ಮತ್ತು ಸಾಮಾಜಿಕ ಸೇವೆಗೆ ಧುಮುಕುವಂತೆ ಕರೆ ನೀಡಿದರು





ಬೆಂಗಳೂರಿನ ಹೃದಯಕ್ಕೆ ಹೈದರಾಬಾದ್‌ನಲ್ಲಿ ಹೊಸ ಜೀವ

 ಬೆಂಗಳೂರಿನಿಂದ 2014ರಲ್ಲಿ ಎರಡು ಬಾರಿ ಚೆನ್ನೈಗೆ ಜೀವಂತ ಹೃದಯವನ್ನು ತೆಗೆದುಕೊಂಡು ಹೋಗಿ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. 2015ರ ಜನವರಿಯಲ್ಲಿ ಎಂಎಸ್ ರಾಮಯ್ಯ ಆಸ್ಪತ್ರೆಯಿಂದ ಜೀವಂತ ಹೃದಯವನ್ನು ಬಿಜಿಎಸ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಯಶಸ್ವಿಯಾಗಿ ಕಸಿ ಮಾಡಲಾಗಿತ್ತು

ವಿಮಾನ ಪ್ರಯಾಣ, ಧೂಮಪಾನ, ಹೊಟೆಲ್ ತಿಂಡಿ ತಿನಿಸು ತುಟ್ಟಿ

vimaana prayaana, dhumapaana, hotel tindi tinisu(28 Feb) ನವದೆಹಲಿ: ಇಂದು ಅರುಣ್ ಜೇಟ್ಲಿ ಮಂಡಿಸಿದ ಬಜೆಟ್​ನಲ್ಲಿ ಕೆಲವು ವಸ್ತುಗಳು ತುಟ್ಟಿಯಾಗಿದ್ದರೆ, ಕೆಲವೊಂದು ಅಗ್ಗವಾಗಿದೆ. ಮುಖ್ಯವಾಗಿ 
*ಧೂಮಪಾನ ಮತ್ತು ತಂಬಾಕು ಉತ್ಪನ್ನಗಳು ತುಟ್ಟಿಯಾಗಲಿದ್ದು,  
*ಸೇವಾ ತೆರಿಗೆ ಹೆಚ್ಚಳದಿಂದಾಗಿ ವಿಮಾನ ಪ್ರಯಾಣ ಮತ್ತು ಹೊಟಲ್ ಊಟ ತಿಂಡಿ ದುಬಾರಿಯಾಗಲಿದೆ
.*ಬಜೆಟ್​ನಲ್ಲಿ ತುಟ್ಟಿಯಾದ ಮತ್ತು ಅಗ್ಗವಾದ ವಸ್ತುಗಳು: ತುಟ್ಟಿ: 
* ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳು 
* ಪೂರ್ಣ ಪ್ರಮಾಣದಲ್ಲಿ ನಿರ್ಮಿತ ಆಮದು ವಾಣಿಜ್ಯ ವಾಹನಗಳು
* ಸಿಮೆಂಟ್ 
* ತಂಪು ಪಾನೀಯ (ಏರಿನೇಟೆಡ್), ಸುವಾಸನೆ ಹೊಂದಿದ ಪಾನೀಯ ಮತ್ತು ಬಾಟಲಿ ನೀರು
* ಪ್ಲಾಸ್ಟಿಕ್ ಬ್ಯಾಗ್ ಮತ್ತು ಪ್ಲಾಸ್ಟಿಕ್ ಚೀಲಗಳು
* ಬ್ಯುಸಿನೆಸ್ ಮತ್ತು ಎಕ್ಸಿಕ್ಯೂಟೀವ್ ಕ್ಲಾಸ್ ವಿಮಾನ ಪ್ರಯಾಣ 
* ಥೀಮ್​ಪಾರ್ಕ್ ಮತ್ತು ಅಮ್ಯೂಸ್​ವೆುಂಟ್ ಪಾರ್ಕ್ ಪ್ರವೇಶ ದರ 
* ಸಂಗೀತ ಗೋಷ್ಠಿ * ಮದ್ಯ, ಚಿಟ್​ಫಂಡ್ ಮತ್ತು ಲಾಟರಿ ಅಗ್ಗ: 
* 1000 ರೂ.ಗಿಂತ ಹೆಚ್ಚಿನ ಬೆಲೆಯ ಚರ್ಮದ ಪಾದರಕ್ಷೆ 
* ಸ್ಥಳೀಯವಾಗಿ ತಯಾರಿಸಿದ ಮೊಬೈಲ್ ಫೋನ್, ಎಲ್​ಇಡಿ/ಎಲ್​ಸಿಡಿ ಪ್ಯಾನೆಲ್, ಎಲ್​ಇಡಿ ಲೈಟ್ ಮತ್ತು ಎಲ್​ಇಡಿ ಲ್ಯಾಂಪ್ 
* ಸೋಲಾರ್ ವಾಟರ್ ಹೀಟರ್ * ಪೇಸ್​ವೆುೕಕರ್, ಆಂಬ್ಯುಲೆನ್ಸ್ ಮತ್ತು ಆಂಬ್ಯುಲೆನ್ಸ್ ಸೇವೆ 
* ಕಂಪ್ಯೂಟರ್, ಟ್ಯಾಬ್ಲೆಟ್ಸ್ 
* ಅಗರಬತ್ತಿ 
* ಮೈಕ್ರೋವೇವ್ ಓವನ್ 
* ರೆಫ್ರಿಜಿರೇಟರ್ ಕಂಪ್ರೆಸರ್ 
* ಪೀನಟ್ ಬಟರ್, ಪ್ಯಾಕ್

ಸೌರಮಂಡಲದಿಂದ ಓಡಿ ಹೋಗಿದ್ದ ನಕ್ಷತ್ರ ವಾಪಸ್ ಬಂತು!

souramandaladindha odi hogiddha nakshatra vaapas bantu!(18 Feb) ನವದೆಹಲಿ, ಫೆ. 18: ಬ್ರಹ್ಮಾಂಡದ ಸೌರ ವ್ಯವಸ್ಥೆಯಲ್ಲಿ ಹಲವು ನಕ್ಷತ್ರಗಳು ಹಾಗೂ ಗ್ರಹಗಳು ನಿಗದಿತ ಕಕ್ಷೆಯಲ್ಲಿ ನಿರ್ಲಿಪ್ತವಾಗಿ ಸುತ್ತುತ್ತವೆ. ಆದರೆ, ಇಲ್ಲಿಯೂ ಅಂಕೆ ಮೀರಿ ಕೆಲವು ನಕ್ಷತ್ರಗಳು ದಾರಿ ತಪ್ಪಿ ಕಣ್ಮರೆಯಾಗುತ್ತವೆ. ಹೀಗೆಯೇ ಸೌರಮಂಡಲದಿಂದ ಸುಮಾರು 70,000 ವರ್ಷಗಳ ಹಿಂದೆ ಕಣ್ಮರೆಯಾಗಿದ್ದ ನಕ್ಷತ್ರವೊಂದು ಮತ್ತೆ ವಾಪಸ್ ಬಂದಿದೆ ಎಂದು ಅಂತಾರಾಷ್ಟ್ರೀಯ ಖಗೋಳಶಾಸ್ತ್ರಜ್ಞರ ತಂಡವೊಂದು ತಿಳಿಸಿದೆ. "Scholz's star" ಎಂದು ಹೆಸರಿಸಲಾಗಿದೆ. [ಮಂಗಳಗ್ರಹದಲ್ಲಿ ವಾಸಕ್ಕೆ ತಯಾರಿ] ಇದು ಸೌರಮಂಡಲದ ಅತ್ಯಂತ ಹೊರಪದರವಾದ ಊರ್ಟ್ ಕ್ಲೌಡ್ ಎಂಬಲ್ಲಿ ಒಳಕ್ಕೆ ತೂರಿಕೊಂಡಿದೆ. ಧೂಮಕೇತುಗಳ ಉಗಮವಾಗುವುದು ಕೂಡ ಇದೇ ಸ್ಥಳದಲ್ಲಿ ಎಂಬುದು ಗಣನೀಯ ಅಂಶ. ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ರೊಚೆಸ್ಟರ್ ವಿಶ್ವವಿದ್ಯಾಲಯದ ಪ್ರೊ. ಎರಿಕ್ ಮಾಮಾಜೆಕ್ ನೇತೃತ್ವದ ಖಗೋಳ ಶಾಸ್ತ್ರಜ್ಞರ ತಂಡ ಈ ನಕ್ಷತ್ರವನ್ನು ಪತ್ತೆ ಹಚ್ಚಿದೆ. [ಮಂಗಳನ ಅಂಗಳಕ್ಕೆ 3 ಭಾರತೀಯರು] ಸುಮಾರು 70 ಸಾವಿರ ವರ್ಷಗಳ ಹಿಂದೆ 0.8 ಜ್ಯೋತಿರ್ವರ್ಷ (8 ಲಕ್ಷ ಕಿ.ಮೀ.) ಗಳಷ್ಟು ದೂರ ಓಡಿ ಹೋಗಿತ್ತು. ನಮ್ಮ ಸೌರ ಮಂಡಲಕ್ಕೆ ಅತ್ಯಂತ ಹತ್ತಿರದಲ್ಲಿ ಅಂದರೆ 4.2 ಜ್ಯೋತಿರ್ವರ್ಷಗಳಷ್ಟು ದೂರವಿರುವ ಮತ್ತೊಂದು ನಕ್ಷತ್ರ Proxima Centauri ಗೆ ಅತ್ಯಂತ ಹತ್ತಿರದಲ್ಲಿದೆ. [ಮಂಗಳನಲ್ಲಿ ಮೋಡವಿದೆಯಂತೆ] ಸೌರಮಂಡಲದೊಳಕ್ಕೆ ಬಂದ ನಂತರ Scholz's ನಕ್ಷತ್ರವು

ಮಂಗಳ ಗ್ರಹದಲ್ಲಿ ಮೋಡ ಕವಿದ ವಾತಾವರಣ!

mangala grahadalli moda kavidha vaataavarana! (18 Feb) ಲಂಡನ್, ಫೆ. 18 : ಮಂಗಳ ಗ್ರಹದಲ್ಲಿ ಮೋಡ ಕವಿದ ವಾತಾವರಣವಿರುವ ಚಿತ್ರ ವಿಜ್ಞಾನಿಗಳಿಗೆ ಲಭ್ಯವಾಗಿದೆ. ವಿಜ್ಞಾನಿಗಳು ಚಿತ್ರದ ಸತ್ಯಾಸತ್ಯತೆ ಹುಡುಕಾಟದಲ್ಲಿ ನಿರತರಾಗಿದ್ದಾರೆ. 2014 ಮಾರ್ಚ್ ವೇಳೆಯಲ್ಲಿ ಇಂಥ ವೈಚಿತ್ರ ಕಂಡುಬಂದಿದೆ ಎಂದು ಹೇಳಲಾಗಿದೆ. ಈ ಮಂಗಳನ ನೆಲ ಮಟ್ಟದಿಂದ ಸುಮಾರು 250 ಕಿಮೀ ಎತ್ತರದಲ್ಲಿ ಇಂಥದ್ದೊಂದು ಆಕೃತಿ ಪತ್ತೆಯಾಗಿತ್ತು ಎಂದು ಹವ್ಯಾಸಿ ಖಗೋಳ ಶಾಸ್ತ್ರಜ್ಞರು ಹೇಳಿದ್ದಾರೆ.[ಮಂಗಳನ ಅಂಗಳಕ್ಕೆ ಹಾರಲು ಟಿಕೆಟ್ ಪಡೆದ ಭಾರತೀಯರು] ಹವ್ಯಾಸಿ ಶಾಸ್ತ್ರಜ್ಞರು ಹೇಳುವಂತೆ ಮಂಗಳನಲ್ಲಿ ಇಂಥ ಆಕೃತಿ ಹಿಂದೆಯೂ ಮೂಡಿತ್ತು. ಆದರೆ ಈಗ ಸೆರೆ ಸಿಕ್ಕ ಮೋಡದ ಆಕೃತಿ 5 ಲಕ್ಷ ಕಿಮೀ ವ್ಯಾಪ್ತಿಯಷ್ಟು ಅಗಲವಾಗಿ ಬೆಳೆದಿತ್ತು ಎಂದು ತಿಳಿಸಿದ್ದಾರೆ. ಆದರೆ ಮಂಗಳನ ಸುತ್ತ ಇರುವ ಯಾವ ಪ್ರಮುಖ ಬಾಹ್ಯಾಕಾಶ ನೌಕೆಯೂ ಸಹ ಇಂಥದ್ದೊಂದು ಆಕೃತಿಯನ್ನು ತನ್ನ ಸೆರೆಹಿಡಿದಿಲ್ಲ. ಆದರೆ ಹಬಲ್ ಬಾಹ್ಯಾಕಾಶ ದೂರದರ್ಶಕವು 1995ರಿಂದ 1999 ಇಸವಿ ನಡುವೆ ಸೆರೆಹಿಡಿದಿದ್ದ ಚಿತ್ರಗಳಲ್ಲಿ ಮತ್ತು ಕೆಲ ಹವ್ಯಾಸಿ ಖಗೋಳ ಶಾಸ್ತ್ರಜ್ಞರು 2011 ರಿಂದ 2014 ರವರೆಗೆ ಸೆರೆಹಿಡಿದ ಚಿತ್ರಗಳಲ್ಲಿ ಮಾತ್ರ ಮೋಡದ ಮಾದರಿಯ ಆಕೃತಿ ಕಂಡುಬಂದಿದೆ.[ಮಂಗಳನ ಅಂಗಳದಲ್ಲಿ ಕೆರೆ ಕಂಡ ಕ್ಯೂರಿಯಾಸಿಟಿ] ಒಟ್ಟಿನಲ್ಲಿ ಇದು ಕ್ಯಾಮರಾ ದೋಷದಿಂದ ಬಂದ ಚಿತ್ರವೋ? ಅಥವಾ ನಿಜಕ್ಕೂ ಮಂಗಳನಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತೋ? ಎಂಬುದಕ್ಕೆ

ಮಂಗಳನ ಅಂಗಳಕ್ಕೆ ಹಾರಲಿದ್ದಾರೆ ಮೂವರು ಭಾರತೀಯರು

mangalana angalakke haaraliddaare muvaru bhaaratiyaru (17 Feb) ನವದೆಹಲಿ, ಫೆ, 16: ಮಂಗಳನ ಅಂಗಳಕ್ಕೆ ತೆರಳಲು ಮೂವರು ಭಾರತೀಯರಿಗೆ ಅವಕಾಶ ಒದಗಿ ಬಂದಿದೆ.
* 2024 ರಲ್ಲಿ ಮಂಗಳ ಗ್ರಹಕ್ಕೆ ಯಾತ್ರೆ ಮಾಡಲಿರುವ 100 ಜನರ ಪಟ್ಟಿಯಲ್ಲಿ ಮೂವರು ಭಾರತೀಯರಿಗೆ ಸ್ಥಾನ ಸಿಕ್ಕಿದೆ. 
1.ಕೇರಳದ ಪಾಲಕ್ಕಾಡ್ ನಿವಾಸಿ ಶ್ರದ್ಧಾ ಪ್ರಸಾದ್ , 
ಶ್ರದ್ಧಾ ಕೊಯಂಬತ್ತೂರ್ ಮೆಕಾನಿಕಲ್ ಇಂಜಿನಿಯರಿಂಗ್ ಓದುತ್ತಿದ್ದಾರೆ
2.ಫ್ಲೋರಿಡಾದಲ್ಲಿರುವ ವಿಶ್ವವಿದ್ಯಾಲಯ ಕೇಂದ್ರದಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯದ ಡಾಕ್ಟರೇಟ್ ಪಡೆದಿರುವ ತರಣಜಿತ್ ಸಿಂಗ್ ಭುಟಿಯಾ, 3.ದುಬೈನಲ್ಲಿ ನೆಲೆಸಿರುವ ರಿತಿಕಾ ಸಿಂಗ್ ಮಂಗಳನಲ್ಲಿಗೆ ತೆರಳಲಿದ್ದಾರೆ.
[ಮಂಗಳನ ಅಂಗಳದಲ್ಲಿ ಕೆರೆ ಕಂಡ ಕ್ಯೂರಿಯಾಸಿಟಿ] . ಎರಡನೇ ಪಟ್ಟಿಯಲ್ಲಿ 3 ಮಲಯಾಳಿಗಳು ಸೇರಿದಂತೆ 44 ಭಾರತೀಯರು ಇದ್ದರು. ಕೊನೆಯ 100 ಜನರ ಪಟ್ಟಿ ತಯಾರಿಸಲಾಗಿದ್ದು ಅದರಲ್ಲಿ ಮೂವರು ಭಾರತೀಯರಿಗೆ ಮಾತ್ರ ಸ್ಥಾನ ದೊರೆತಿದೆ.[ಮಂಗಳನಿಂದ ಬಂದ ವಿಡಿಯೋ ನೋಡಿದ್ದೀರಾ?] ಈ ಯಾತ್ರೆಗೆ ಆನ್ ಲೈನ್ ಮೂಲಕ 202, 586 ಅರ್ಜಿಗಳು ಬಂದಿದ್ದವು. ಇದರಲ್ಲಿ ಆಯ್ಕೆ ಮಾಡಿ, 
*100 ಜನರ ಪಟ್ಟಿ ತಯಾರಿಸಲಾಗಿತ್ತು. 
*50 ಗಂಡಸರು ಮತ್ತು 
*50 ಮಹಿಳೆಯರನ್ನು ಅಂತಿಮ ಪಟ್ಟಿಯಲ್ಲಿರಿಸಿಕೊಳ್ಳಲಾಗಿದೆ. 
*ಯುಎಸ್ ನ 39, 
*
ಯುರೋಪ್ ನ 31, 
*ಏಷ್ಯಾದ 16, 
*ಆಫ್ರಿಕಾದ 7 ಹಾಗೂ
* ಒಷೇನಿಯಾದ 7 ಜನ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.[ಗಗನಕ್ಕೆ ಹಾರಲಿದ್ದಾನೆ ಭಾರತದ ಮಾನವ] ಮೊದಲ ಹಂತದಲ್ಲಿ ನಾಲ್ಕು

ಮಂಗಳನ ಅಂಗಳದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡ ಕ್ಯೂರಿಯಾಸಿಟಿ

mangalana angaladalli selfi klikkisikonda kyuriyaasiti (26 Feb) ವಾಷಿಂಗ್ ಟನ್, ಫೆ. 26 : ಕೆಂಪು ಗ್ರಹದಲ್ಲಿ ಕಳೆದ 5 ತಿಂಗಳಿಂದ ಬೀಡುಬಿಟ್ಟಿರುವ ನಾಸಾದ ಕ್ಯೂರಿಯಾಸಿಟಿ ರೋವರ್ ತನ್ನ ಸೆಲ್ಫಿ ಕ್ಲಿಕ್ಕಿಸಿದೆ. ಮಂಗಳ ಗ್ರಹದ ಮೌಂಟ್ ಶಾರ್ಪ್ ಪರ್ವತವನ್ನು ಕೊರೆದು ಅಲ್ಲಿನ ಪರಿಸರದ ವಸ್ತುಗಳನ್ನು ಸಂಗ್ರಹಿಸಿರುವ ಫೋಟೋವನ್ನು ವಿಜ್ಞಾನಿಗಳಿಗೆ ರವಾನಿಸಿದೆ. ಐದು ತಿಂಗಳಿನಿಂದ ಮಂಗಳ ಗ್ರಹದ "ಪಹ್ರುಂಪ್ ಬೆಟ್ಟ'ಗಳ ಮೇಲೆ ಸಂಶೋಧನೆ ಮಾಡುತ್ತಿರುವ ರೋವರ್ ಕಳುಹಿಸಿರುವ ಈ ಚಿತ್ರ ಮಂಗಳನ ಅಂಗಳದ ಚಿತ್ರಣವನ್ನು ಸ್ಪಷ್ಟವಾಗಿ ಸೆರೆಹಿಡಿದು ನೀಡಿದೆ. ರೋವರ್ ನ ರೋಬೋಟಿಕ್ ಕೈಯ ಮೇಲಿರುವ ಮಾರ್ಸ್ ಹ್ಯಾಂಡ್ ಲೆನ್ಸ್ ಇಮೇಜರ್ (ಎಂಎಎಚ್‌ಎಲ್‌ಐ) ಈ ಚಿತ್ರವನ್ನು ತೆಗೆದಿದೆ. [ಮಂಗಳನ ಅಂಗಳದಲ್ಲಿ ಕೆರೆ ಕಂಡ ಕ್ಯೂರಿಯಾಸಿಟಿ] ಈ ಚಿತ್ರಗಳನ್ನು ಜನವರಿ ಕೊನೆಯ ಭಾಗದಲ್ಲಿ ತೆಗೆಯಲಾಗಿದೆ. ಮಂಗಳ ಗ್ರಹದ ಮೇಲೆ ಜೀವ ವೈವಿಧ್ಯತೆ ಸಾಧ್ಯವೇ ಎಂಬುದರ ಸಂಶೋಧನೆಗೆ ಈ ಸ್ಯಾಂಪಲ್ ಗಳು ಮತ್ತಷ್ಟು ಉತ್ತೇಜನ ನೀಡಲಿವೆ ಎಂದು ರೋವರ್ ತಂಡದ ಕರ್ಥನ್ ಸ್ಟಾಕ್ ತಿಳಿಸಿದ್ದಾರೆ.[ಸೆಲ್ಫಿ ತೆಗೆಯೋದು ಕಲಿಯೋಕೆ 10 ಸಾವಿರ ರು?!] ಮಂಗಳ ಗ್ರಹದ ಮೇಲ್ಮೈ ಪರಿಸರ, ವಾತಾವರಣ ಮತ್ತು ಭೂಮಿಯ ಗುಣ ಅರಿಯಲು ಈ ಚಿತ್ರಗಳು ನೆರವಾಗಲಿದೆ. ಕಳಿಸಿರುವ ಚಿತ್ರಗಳನ್ನು ಆಧರಿಸಿ ಅಧ್ಯಯನ ನಡೆಸಲು ಸಾಧ್ಯವಾಗುತ್ತದೆ ಎಂದು ನಾಸಾ ತಿಳಿಸಿದೆ. ಮಂಗಳ ಗ್ರಹದ ಮಣ್ಣಿನ ವಿವಿಧ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಅಲ್ಲದೇ ಕೆಲವಡೆ ರಂಧ್ರ

ಅಮೆರಿಕದ ದೇಗುಲ ಮೇಲೆ ದಾಳಿ, ಶಿವರಾತ್ರಿ ದಿನ ಆತಂಕ

amerikadha degula mele daali, shivaraatri dina(17 Feb) ವಾಷಿಂಗ್ಟನ್, ಫೆ.17: ಇಲ್ಲಿನ ಹಿಂದೂ ದೇಗುಲವೊಂದರ ಮೇಲೆ ಸ. ಸಿಯಾಟಲ್ ಮೆಟ್ರೋಪಾಲಿಟನ್ ಪ್ರದೇಶದ ದೇಗುಲದ ಗೋಡೆ ಮೇಲೆ 'ಗೆಟ್ ಔಟ್' ಎಂದು ಅಪರಿಚಿತರು ಬರೆದು ಹೋಗಿದ್ದಾರೆ. ಶಿವರಾತ್ರಿ ಆಚರಣೆಗೆ ಸಿದ್ಧವಾಗುತ್ತಿದ್ದ ಹಿಂದೂಗಳು ಆತಂಕಗೊಂಡಿದ್ದಾರೆ. ಸ್ನೊಹೊಮಿಷ್ ಕೌಂಟಿ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯಿಂದ ಈ ಪ್ರದೇಶದ ಹಿಂದೂಗಳು ಸಹಜವಾಗಿ ಆತಂಕಕ್ಕೆ ಒಳಗಾಗಿದ್ದಾರೆ. ದುಷ್ಕರ್ಮಿಗಳು ಸ್ವಸ್ತಿಕ್ ಚಿನ್ಹೆ ಬರೆದು ಜೊತೆಗೆ ಗೆಟ್ ಔಟ್ ಎಂದು ಹಾಕಿದ್ದಾರೆ. 

ಕ್ರೈಸ್ತ ದೇಶಗಳಿಗೆ ಇಸ್ಲಾಮಿಕ್ ಸ್ಟೇಟ್ ಉಗ್ರರ ರಕ್ತಸಿಕ್ತ ಸಂದೇಶ

kraista deshagalige islaamik stet ugrara raktasikta(16 Feb) ಕೈರೋ, ಫೆ 16: ಈಜಿಪ್ಟ್ ದೇಶದ 21 ಕ್ರಿಶ್ಚಿಯನ್ ಸಮುದಾಯದ ನಾಗರೀಕರ ಶಿರಚ್ಛೇದ ಮಾಡಿರುವ ವಿಡಿಯೋವನ್ನು ಇಸ್ಲಾಮಿಕ್ ಸ್ಟೇಟ್ (ISIS) ಉಗ್ರರು ಭಾನುವಾರ (ಫೆ 15) ಬಿಡುಗಡೆ ಮಾಡಿದ್ದಾರೆ. ಉಗ್ರರ ಈ ಪೈಶಾಚಿಕ ಕೃತ್ಯವನ್ನು ಕಂಡು ವಿಶ್ವವೇ ಬೆಚ್ಚಿಬಿದ್ದಿದೆ. ಅಪಹೃತಗೊಂಡಿದ್ದ 21 ಮಂದಿಯನ್ನು ಲಿಬಿಯಾದ ರಾಜಧಾನಿ ಟ್ರಿಪೋಲಿಯಾ ಕಡಲ ತೀರದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರು ಸಾಲಾಗಿ ಕೂರಿಸಿ ಅತ್ಯಂತ ಭೀಕರವಾಗಿ ಹತ್ಯೆಗೈದಿರುವ ವಿಡಿಯೋವನ್ನು ಈಜಿಪ್ಟ್ ಅಧ್ಯಕ್ಷ ಅಬ್ದೆಲ್-ಫತಾ-ಅಲ್-ಸಿಸಿ ಅವರಿಗೆ ಉಗ್ರರು ಕಳುಹಿಸಿದ್ದಾರೆ. ಜೊತೆಗೆ ರೋಮ್ ನಗರವನ್ನೂ ಸದ್ಯದಲ್ಲೇ ವಶಪಡಿಸಿಕೊಳ್ಳಲಿದ್ದೇವೆ ಎನ್ನುವ ಸಂದೇಶವನ್ನೂ ರವಾನಿಸಿದ್ದಾರೆ. (ಒಬಾಮಾ ರುಂಡ ಚೆಂಡಾಡುವೆವು) ಇದು ಕ್ರೈಸ್ತ ದೇಶಗಳಿಗೆ ನಾವು ನೀಡುತ್ತಿರುವ ಎಚ್ಚರಿಕೆಯ ಸಂದೇಶ ಎನ್ನುವ ಶಿರೋನಾಮೆಯನ್ನೂ ವಿಡಿಯೋ ಜೊತೆ ಉಗ್ರರು ಕಳುಹಿಸಿದ್ದಾರೆಂದು ರಾಯ್ಟರ್ಸ್ ವರದಿ ಮಾಡಿದೆ. ಉಗ್ರರ ಕೃತ್ಯಕ್ಕೆ ತೀವ್ರ ವಿಷಾದ ವ್ಯಕ್ತ ಪಡಿಸಿರುವ ಈಜಿಪ್ಟ್ ಅಧ್ಯಕ್ಷರು ದೇಶಾದ್ಯಂತ ಏಳುದಿನಗಳ ಶೋಕಾಚರಣೆಯನ್ನು ಘೋಷಿಸಿದ್ದಾರೆ. 21 ಮಂದಿಗೆ ಕಿತ್ತಳೆ ಬಣ್ಣದ ಉಡುಪುಗಳನ್ನು ತೊಡಿಸಿ, ಮುಖಕ್ಕೆ ಕಪ್ಪು ಬಟ್ಟೆಯನ್ನು ಹಾಕಿ, ಅವರೆಲ್ಲರನ್ನೂ ಮಂಡಿಯೂರಿ ಕೂರಿಸಿ ಶಿರಚ್ಛೇದ ಮಾಡುತ್ತಿರುವ ದೃಶ್ಯವನ್ನು ಚಿತ್ರೀಕರಿಸಿ, ಅಂತರ್ಜಾಲದಲ್ಲಿ ಮೊದಲು ಬಿಡುಗಡೆಗೊಳಿಸಿದ ಉಗ್ರರು ನಂತರ ಈಜಿಪ್ಟ್







logoblog

Thanks for reading feb

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *