ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 ಶಾಲೆಗಳಲ್ಲಿ ಮೌಲ್ಯಾಧಾರಿತ ಶಿಕ್ಷಣದ ಅಗತ್ಯ | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Friday, February 27, 2015

ಶಾಲೆಗಳಲ್ಲಿ ಮೌಲ್ಯಾಧಾರಿತ ಶಿಕ್ಷಣದ ಅಗತ್ಯ

  Pundalik       Friday, February 27, 2015


ಮಕ್ಕಳು ದೇಶದ ಅಮೂಲ್ಯ ಆಸ್ತಿ. ಪ್ರತಿಯೊಬ್ಬ ಮಗುವನ್ನೂ ನೇತಾರನನ್ನಾಗಿಯೂ, ದಕ್ಷ ಆಡಳಿತಗಾರನನ್ನಾಗಿಯೂ, ಉದ್ಯೋಗ ಕೌಶಲಿಯನ್ನಾಗಿಯೂ, ಓರ್ವ ಉತ್ತಮ ಪ್ರಜೆಯನ್ನಾಗಿಯೂ, ಸ್ವಾವಲಂಬೀ ಬದುಕನ್ನು ನಿರ್ವಹಿಸ ಬಲ್ಲ ನಾಗರಿಕನನ್ನಾಗಿಯೂ ರೂಪಿಸ ಬೇಕಾಗಿರುವುದು ಎಲ್ಲರ ಕರ್ತವ್ಯ.ವಾಗಿದೆ, ಅದರಲ್ಲಿಯೂ ಶಿಕ್ಷಕರ ಜವಾಬ್ದಾರಿ ಅತ್ಯಂತ ಮುಖ್ಯವಾದುದಾಗಿದೆ. ತಂದೆ-ತಾಯಿ, ಪಾಲಕರು ಅದಕ್ಕಾಗಿಯೇ ಗುರುವಿನ ಬಳಿ ಮಗುವನ್ನು ತಂದು ಬಿಡುತ್ತಾರೆ. ಸರ್ವಜ್ಞ ಹೇಳುತ್ತಾನೆ " ತಂದೆಗೂ ಗುರುವಿಗೂ ಒಂದು ಅಂತರವುಂಟು |
ತಂದೆ ತೋರುವನು ಸದ್ಗುರುವ | ಗುರುರಾಯ |
ಬಂದನವ ಕಳೆವ ಸರ್ವಜ್ಞ ||
ಯಾವ ತಂದೆ-ತಾಯಿ ತನ್ನ ಮಗು ಭಯೋತ್ಪಾದಕನಾಗಲಿ, ಉಂಡಾಡಿಯಾಗಲಿ, ಕ್ರಿಮಿನಲ್ ಆಗಲಿ, ರೋಡ್‌ರೋಮಿಯೊ ಆಗಲಿ, ಕಳ್ಳನೂ ಕೊಲೆಗಾರನೂ, ಅತ್ಯಾಚಾರಿಯೂ, ಕುಡುಕನೂ, ದೇಶ ದ್ರೋಹಿಯೂ ಆಗಲಿ ಎಂದು ಬಯಸುತ್ತಾರೆ? ಹಾಳಾಗಲಿ ಎಂದು ಆಶಿಸುತ್ತಾರೆ? ಇದಾವ ಕೆಟ್ಟ ನಡತೆಗಳೂ ತಮ್ಮ ಮಗುವಿಗೆ ಬಾರದಿರಲಿ ಎಂದೇ ಎಲ್ಲರೂ ಆಶಿಡಸುತ್ತಾರೆ, ಆದರೆ ಕೆಲವು ಮಕ್ಕಳು ಕೆಟ್ಟು ಹೊಗುತ್ತಾರಲ್ಲ? ಯಾಕೆ? ಅದಕ್ಕೆ ಸರಿಯಾದ ಜೀವನ ಮೌಲ್ಯಾಧಾರಿತ ಶಿಕ್ಷಣ ( Value Oriented Education ) ದೊರಕದೇ ಇರುವುದು, ಕೆಟ್ಟ ಜನರ ಸಹವಾಸ, ಅತಿ ಮುದ್ದುಮಾಡಿ ಬೆಳೆಸಿದ್ದು, ಅತಿಯಾಗಿ ಹಣ ನೀಡಿದ್ದು ಮೊದಲಾದ ಕಾರಣಗಳು ಇವೆ. ಆದರೆ ಬಾಲ್ಯದಲ್ಲಿಯೇ ಮನೆಯಲ್ಲ್ಲಿಯೂ, ಶಾಲೆಯಲ್ಲಿಯೂ ಯುಕ್ತವಾದ ಮೌಲ್ಯಾಧಾರಿತ ಶಿಕ್ಷಣ ದೊರೆತರೆ, ಆ ರೀತಿಯಾಗಿ ಮಗು ತರಬೇತುಗೊಂಡರೆ ಖಂಡಿತ ಮಕ್ಕಳು ಕೆಟ್ಟ ದಾರಿ ತುಳಿಯುವುದಿಲ್ಲ. ಅದಕ್ಕಾಗಿ
’ಬೆಳೆವ ಸಿರಿ ಮೊಳಕೆಯಲ್ಲಿ’ ಎನ್ನುವಂತೆ ಬಾಲ್ಯದಲ್ಲಿಯೇ ಅವನು ಯಾವ ಕ್ಷೇತ್ರದಲ್ಲಿ ಕುಶಲಿಯಾಗ ಬಹುದು ಎಂಬುದನ್ನು ಕಂಡು ಹಿಡಿದು ಅದರಲ್ಲಿ ಅವನು ದಕ್ಷನಾಗುವಂತೆ, ಕೌಶಲವನ್ನು ಅಭ್ಯಾಸ ಮಾಡುವಂತೆ ಪ್ರೇರಣೆ ನೀಡಬೇಕು. ನಿಗದಿತ ಶಿಕ್ಷಣವನ್ನು ಕೊಡುವುದರ ಜೊತೆಗೆ ಮೊಟ್ಟ ಮೊದಲು ಮಗು ಉತ್ತಮ ಗುಣ, ನಡತೆ, ತ್ಯಾಗ ಮನೋಭಾವನೆ,ಸೇವಾ ಭಾವನೆ, ದ್ವೇಷವಿಲ್ಲದ ಸಹಜ ಪ್ರೀತಿಯ ವರ್ತನೆಯೇ ಮೊದಲಾದ ಜೀವನ ಮೌಲ್ಯಗಳನ್ನು ಅರಿತು, ಅದರಲ್ಲಿ ತರಬೇತಿ ಹೊಂದಿ, ಜೀವನದಲ್ಲಿ ಅಳವಡಿಸಿಕೊಳ್ಳವಂತೆ ಪ್ರೇರೇಪಿಸ ಬೇಕು. ಅಂದಾಗ ಮಾತ್ರ ಜೀವನ ನಿಹಣೆಗಾಗಿ ಆತ ಯಾವುದೇ ಉದ್ಯೋಗವನ್ನು ಅವಲಂಬಿಸಿದರೂ ಓರ್ವ ಸತ್ ಪ್ರಜೆಯಾಗಿ ಬದುಕುತ್ತಾನೆ, ಜೀವನದಲ್ಲಿ ಯಶಸ್ಸು ಕಾಣುತ್ತಾನೆ. ಸಮಾಜ ಸೇವಕನಾಗಿಯೂ, ಎಲ್ಲರಿಗೂ ಬೇಕಾದವನಾಗಿಯೂ, ಸಾಧಕನಾಗಿಯೂ ಹೆಸರು ಮಾಡುತ್ತಾನೆ. ಶಿಕ್ಷಣದ ಜೊತೆಗೆ ಬದುಕುವುದನ್ನು ’ ಮೊದಲು ಅಭ್ಯಾಸ ಮಾಡುವಂತೆ ಪರೋಕ್ಷವಾಗಿ ಪ್ರಶಿಕ್ಷಣ ನೀಡಬೇಕು.
"ರ‍್ಯಾಂಕ್ ಹುಡುಗ ; ಬದುಕಲು ಮಾತ್ರ ಅರಿಯ’ ಎನ್ನುವಂತೆ ಅನೇಕರಿರುತ್ತಾರೆ. ಅವರಿಗೆ ಸರಿಯಾದ ತರಬೇತಿ ಇಲ್ಲದಿರುವುದೇ ಅದಕ್ಕೆ ಕಾರಣ. ’ ಕೆಲವಂ ಬಲ್ಲವರಿಂದ ಕಲ್ತು, ಕೆಲವಂ ಶಾಸ್ತ್ರಂಗಳಿಂ ಕೇಳುತಂ.. .. .. ಸರ್ವಜ್ಞನಪ್ಪಂ ನರಂ..ಪಲವು ಪಳ್ಳ ಸಮುದ್ರವೈ ಹರಹರಾ ಶ್ರೀ ಚೆನ್ನ ಸೋಮೇಶ್ವರಾ’ ಎಂಬ ಸೋಮೇಶ್ವರ ವಚನವೂ,
" ಸರ್ವಜ್ಞನೆಂಬವನು ಗರ್ವದಿಂದಾದವನೆ |
ಎಲ್ಲರೊಳಗೊಂದೊಂದು ನುಡಿಗಲಿತು, ವಿದ್ಯೆಯ
ಪರ್ವತವೆ ತಾನಾದ ಸರ್ವಜ್ಞ || ಎಂಬುದೂ ಕೂಡ ಶಿಕ್ಷಣ ಹೇಗೆ ಹೇಗೆಲ್ಲ ನಡೆಯ ಬೇಕು ಎಂಬುದನ್ನು ಮನದಟ್ಟು ಮಾಡಿಕೊಡುತ್ತದೆ.

ವ್ಯಷ್ಟಿ ಜೀವನ ಮತ್ತು ಸಮಷ್ಟಿ ಜೀವನ, ಸುಖ ಶಾಂತಿಯಿಂದ ಕೂಡಿದ್ದಾಗ ಬೇಕೆಂದರೆ ಮೊದಲು ಮಕ್ಕಳನ್ನು ಆ ರೀತಿಯಲ್ಲಿ ಸಿದ್ಧಗೊಳಿಸ ಬೇಕು. ಯಾವುದೇ ದೇಶದ ಆಗುಹೋಗುಗಳನ್ನು ನಿರ್ಧರಿಸುವುದು ಆಯಾ ದೇಶದ ಶಿಕ್ಷಣ ನೀತಿಯಾಗಿದೆ. ನಾವು ವಿಷದ ಬೀಜವನ್ನು ಹಾಕಿದರೆ ವಿಷದ ಫಲವನ್ನು ಪಡೆಯುತ್ತೇವೆ ಹಾಗೆಯೇ ಅಮೃತದ ಬೀಜವನ್ನು ಹಾಕಿದರೆ ಅಮೃತ ಫಸಲನ್ನು ಪಡೆಯುತ್ತೇವೆ, ಹೊರತು ವಿಷ ಸಸಿಯನ್ನು ನೆಟ್ಟು ಅಮೃತ ಫಲವನ್ನು ಪಡೆಯಲಿಕ್ಕಾಗದು.
ಮಹಾಭಾರತವನ್ನೇ ನೋಡೋಣ.. ಕುರು ಪಾಂಡವರಲ್ಲಿ ತನ್ಮೂಲಕ ಇಡೀ ಕ್ಷತ್ರಿಯ ಸಮೂಹz ನಡುವೆ ನಡೆಯುವ ಮಹಾ ಭಾರತ ಯುದ್ಧವನ್ನು ತಪ್ಪಿಸ ಬಹುದಿತ್ತೆ? ತಪ್ಪಿಸಲಿಕ್ಕೆ ಸಾಧ್ಯವಿರಲಿಲ್ಲ, ಕೌರವ ನಿಮಿತ್ತ ಮಾತ್ರ. ಕೌರವಾದ್ಯರು ಹುಟ್ಟುವುದಕ್ಕೆ ಮೊದಲೇ ಮಹಾಭಾರತ ಯುದ್ಧ ನಿರ್ಣಯವಾಗಿತ್ತು. ಬ್ರಹ್ಮ ಕಪಾಲಕ್ಕೆ ಕುರುಕ್ಷೇತ್ರದಲ್ಲಿ ತಾಳೆಮರದೆತ್ತರಕ್ಕೆ ಹರಿಯುವ ರಕ್ತಪ್ರವಾಹವನ್ನು ಈಂಟುವ ಆಶ್ವಾಸನೆಯನ್ನು ಕೊಡಲಾಗಿತ್ತು. ಅಂದಿನ ಎಲ್ಲ ಕ್ಷತ್ರಿಯರೂ ವಿದ್ಯಾಭ್ಯಾಸಕ್ಕೆ ಗುರುಕುಲಕ್ಕೆ ಹೋಗುತ್ತಿದ್ದರೆ ಅವರ ಗಮ್ಯ ಏನಿತ್ತು ? ’ ಮುಂದೆ ಮಹಾ ಭಾರತ ಯುದ್ಧ ನಡೆಯಲಿಕ್ಕಿದೆ..ಅಲ್ಲಿ ನನ್ನ ಮಹಾ ಪ್ರತಾಪವನ್ನು ಮೆರೆಯ ಬೇಕು, ನಾನು ಜಯ ಶಾಲಿಯಾಗ ಬೇಕು.." ಒಂದೊ ಪಾಂಡವರ ಬದಿಯಿಂದ ಇಲ್ಲವೇ ಕೌರವರ ಬಣದಿಂದ ಯುದ್ಧ ಮಾಡುವುದು ಅವರ ಗುರಿಯಾಗಿತ್ತು. ಅಂದಿನ ಎಲ್ಲ ಯುವಕರ ಧ್ಯೇಯ ಒಂದೇ " ಮಹಾ ಭಾರತ ಯುದ್ಧ:; ಅಲ್ಲಿ ನನ್ನ ಪ್ರತಾಪ ಪ್ರದರ್ಶನ: ಜಯ ಇಲ್ಲವೆ ವೀರ ಸ್ವರ್ಗ ! ಇದು ಶಿಕ್ಷಣ ನೀತಿಯೂ ಆಗಿತ್ತು ಆದ ಕಾರಣ ಅಂದಿನ ಮಕ್ಕಳು-ಯುವಕರೆಲ್ಲ ಯುದ್ಧ ಮಾಡುವ, ಕೊಲ್ಲುವ, ಸಾಯುವ ಶಿಕ್ಷಣವನ್ನೇ ಪಡೆದರು ! ಊರ್ಧ್ವರೋಮ ನದಿಯ ಆಚೆ ದಡ ಈಚೆ ದಡದಲ್ಲಿ ತನ್ನ ಒಂದೊಂದು ಕಾಲನ್ನಿಟ್ಟು ಕತ್ತಿಯನ್ನು ಮಸೆಯುತ್ತಿದ್ದ ಸಂದಂದರ್ಭದಲ್ಲ್ಲಿ ಕೃಷ್ಣಾರ್ಜುನರು ಕೇಳಿದಾಗ ಆತ ಹೇಳಿದ್ದೇನು? " ನನಗೆ ಮಹಾ ಭಾರತ ಯುದ್ಧದಲ್ಲಿ ಅರ್ಜುನನ್ನು ಸೋಲಿಸ ಬೇಕಾಗಿದೆ.. ಅದಕ್ಕಾಗಿ ಈ ಸಿದ್ಧತೆ! ಎಂದು. (ಅವನನ್ನು ಕೊಂದರು ಆ ಮತು ಬೇರೆ.) ಅದಕ್ಕಾಗಿಯೇ ಶ್ರೀ ಕೃಷ್ಣ ಅರ್ಜುನನ್ನು ಕುರಿತು " ನಿಮಿತ್ತ ಮಾತ್ರಂ ಭವ ಸವ್ಯ ಸಾಚಿನ್" ಎಂದದ್ದು.

ಧನಾತ್ಮಕ ಚಿಂತನೆಯ ಶಕ್ತಿ :
ಪ್ರ.ಗ.ಸಹಸ್ರಬುದ್ಧೆಯವರು ಹೇಳುತ್ತಾರೆ: " ಪುಣೆಯಲ್ಲಿ ಒಬ್ಬ ಪ್ರೊಫೆಸರ್. ಅವರ ರ‍್ಯಾಂಕ್ ಬರುವ ಶಿಷ್ಯೆ ಪಿ.ಯು.ಸಿ.ಯಲ್ಲಿ ಫೇಲಾದಳು. ಅದರಿಂದ ಮನನೊಂದ ಆಕೆ ಆತ್ಮ ಹತ್ಯೆಗೂ ಎಳಸಿದ್ದಳು. ಆಗ ಪ್ರೊಫೆಸರ್ ಒಂದು ಪ್ರಯೋಗ ಮಾಡಿದರು. ಅವರು ದಿನಾಲೂ ವಾಕಿಂಗ್ ಹೋಗುವಾಗ ತನ್ನ ಶಿಷ್ಯೆಗೆ ’ ಈ ಕೆಲಸ ನನ್ನಿಂದ ಸಾದ್ಯ ಇಲ್ಲ’ ಎಂದು ಪಾಟಿಯ ಮೆಲೆ ಬರೆದು ’ಇಲ್ಲ’ ಎಂಬುದನ್ನು ಅಳಿಸಲು ಹೇಳಿದರು. ಹೀಗೆ ಆಕೆ ಅನೇಕ ಬಾರಿ ಮಾಡ ಬೇಕಾಗಿತ್ತು. ಪ್ರತಿದಿನ ಇದನ್ನು ಮಾಡುತ್ತ ಮಾಡುತ್ತ ವರ್ಷವಿಡೀ ಚನ್ನಾಗಿ ಓದುತ್ತ ಹೋದ ಅವಳು, ವಾರ್ಷಿಕ ಪರೀಕ್ಷೆಯಲ್ಲಿ ರ‍್ಯಾಂಕಿನೊಂದಿಗೆ ಉತ್ತೀರ್ಣಳಾದಳು! ’ ಸಾಧ್ಯ’ ಎನ್ನುವ ಸಕಾರಾತ್ಮಕ ಚಿಂತನೆ ಅವಳನ್ನು ಯಶಸ್ಸಿನ ದಾರಿಯಲ್ಲಿ ನಡೆಸಿತ್ತು. ಪ್ರೊಫೆಸರ್ ಅವಳು ಧನಾತ್ಮಕ ಚಿಂತನೆ ಮಾಡುವಂತೆ ಪ್ರೇರೇಪಿದೇ ಇದ್ದರೆ ಆಕೆ ಇನ್ನೊಂದಿನ ಆತ್ಮ ಹತ್ಯೆ ಮಾಡಿಕೊಂಡು ಬಿಡುತ್ತಿದ್ದಳು ಅಥವಾ ಶಿಕ್ಷಣವನ್ನೂ ಮುಂದುವರಿಸುತ್ತಿgಲಿಲ್ಲ.
ಗೀತೆಯಲ್ಲಿ ಶ್ರೀಕೃಷ್ಣ "ಕ್ಷುದ್ರಂ ಹೃದಯ ದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪರಂತಪ" -ಕ್ಷುದ್ರವಾದ ಹೃದಯ ದೌರ್ಬಲ್ಯವನ್ನು ಕಿತ್ತೊಗೆದು ಮೇಲೆದ್ದು ನಿಲ್ಲು, ವೈರಿಗಳನ್ನು ಹಣಿಯುವವನೆ ! ಎಂದು ಉತ್ತೇಜಿಸುತ್ತಾನೆ. ’ಪರಂತಪ’ ಎಂಬ ಸಂಬೋಧನೆ ಅರ್ಜುನನ ಶೌರ್ಯವನ್ನು ಜಾಗೃತಗೊಳಿಸುವ ಶ್ರೀಕೃಷ್ಣನ ಹೂಟ ಯಶಸ್ಸು ಪಡೆಯುತ್ತದೆ.
ಯಾವುದೇ ವ್ಯಕ್ತಿಯಲ್ಲಿರುವ ಅಧೈರ್ಯವನ್ನು ಹೋಗಲಾಡಿಸಿ, ಆಗುತ್ತದೊ ಇಲ್ಲವೊ ಎಂಬ ಹೊಯ್ದಾಟವನ್ನು ದೂರಮಾಡಿ, ಖಂಡಿತ ನೀನು ಪರೀಕ್ಷೆಯಲ್ಲಿ, ಸಂದರ್ಶನದಲ್ಲಿ ಗೆಲುವು ಸಾಧಿಸುತ್ತೀಯ ಎಂದು, ಅವನಲ್ಲಿಯ ಶಕ್ತಿಯನ್ನು ಅವಗತ ಮಾಡಿಕೊಟ್ಟು ಆತ್ಮ ವಿಶ್ವಾಸವನ್ನು ಹೆಚ್ಚಿಸಿದರೆ, ಆತ ಸಫಲನಾಗುತ್ತಾನೆ. ಕಾರ್ಯದಲ್ಲಿ ಯಶಸ್ಸು ಸಾಧಿಸುತ್ತಾನೆ.

’ ಸೀತಾನ್ವೇಷಣೆಗೆ ಕಪಿ ಸೇನೆ ತೆರಳಿತ್ತು. ವಿಸ್ತಾರವಾದ ಸಮುದ್ರದಾಚೆ ಲಂಕೆಯಿದೆಯೆಂದೂ, ಮಹಾ ಪರಾಕ್ರಮಿ ರಾವಣ ಸೀತೆಯನ್ನು ಹೊತ್ತೊಯ್ದಿದ್ದಾನೆಂದೂ ಜಟಾಯು ಮತ್ತು ಸಂಪಾತಿಯಿಂದ ತಿಳಿದು ಬಂದಿತ್ತು ಆದರೆ ಶತಯೋಜನ ವಿಸ್ತೀರ್ಣವಾದ ಸಮುದ್ರವನ್ನು ದಾಟುವುದು ಹೇಗೆ? ಯಾರು ಸಮರ್ಥರು? ಸಮರ್ಥನಾದ ಹನುಮಂತ ವಿಷಣ್ಣನಾಗಿ ಕುಳಿತಿದ್ದಾನೆ ಎಂದು ಅಂಗದನು ಮೊದಲ್ಗೊಂಡು ಎಲ್ಲರೂ ಚಿಂತಾಕ್ರಾಂತರಾಗಿದ್ದರು. ಆಗ ಹಿರಿಯನೂ, ಜ್ಞಾನಿಯೂ ಆದ ಜಾಂಬವಂತನು ಹನುಮನ ಗುಣಾತಿಶಯವನ್ನೂ, ಬಾಲ್ಯದಲ್ಲಿಯೇ ಸೂರ್ಯನನ್ನೇ ತಲುಪಲು ಜಿಗಿದ ಸಾಹಸವನ್ನೂ ನೆನೆಪು ಮಾಡಿಕೊಟ್ಟು, ಸಮುದ್ರವನ್ನು ನಿರಾಯಾಸವಾಗಿ ಹಾರ ಬಲ್ಲ ಮಹಾನ್ ಸಾಹಸಿ-ಸಮರ್ಥ ಎಂದು ವಿಸ್ಮೃತಿ ಹೊಂದಿದ ಅವನ ಆತ್ಮ ಶಕ್ತಿಯನ್ನು ಜಾಗೃತಗೊಳಿಸಿದಾಗ, ಮಾರುತಿ ನಿಲ್ಲಲಿಲ್ಲ, ’ಹಾರಿದನು ಹನುಮಂತ ಲಂಕೆಗೆ..ಎಂಬಂತೆ ಅಖಂಡ ಆತ್ಮವಿಶ್ವಾಸದಿಂದ, ವಿಸ್ಮೃತಿಯನ್ನು ಕಳೆದುಕೊಂಡು, ಅಸ್ಮಿತೆಯನ್ನು ಮರಳಿಪಡೆದು ಶತಯೋಜನ ವಿಸ್ತೀರ್ಣದ ಸಮುದ್ರವನ್ನು ಲಂಘಿಸಿ, ಶ್ರೀರಾಮನ ಮುದ್ರೆಯುಂಗುರವಿತ್ತು, ಸೀತೆ ನೀಡಿದ ಚೂಡಾಮಣಿಯನ್ನು ತಂದನು. ಬಾಲಕ್ಕೆ ಬೆಂಕಿ ಹಚ್ಚಿದ ಅನ್ಯಾಯಕ್ಕಾಗಿ ಲಂಕೆಯಯನ್ನೇ ಸುಟ್ಟನು, ಅನೆಕ ಪರಾಕ್ರಮಿಗಳನ್ನು ಕೊಂದನು! ಆ ಶಕ್ತಿ ಎಲ್ಲಿ ಅಡಗಿತ್ತು? ಅವನೆಂಥ ಪರಾಕ್ರಮಿಯಾಗಿದ್ದ? ಅದು ಬೇರೆ ಕಡೆ ಎಲ್ಲಿ ಇದ್ದೀತು? ಅವನಲ್ಲಿಯೇ ಇತ್ತು ! ಅದನ್ನು ಹೊರಗೆಳೆವ ಕೆಲಸವನ್ನು ಮಾತ್ರ ’ಮಾಸ್ಟರ್’ ಮಾಡ ಬೇಕಾಗಿತ್ತು. ಅದನ್ನು ಜಾಂಬವಂತ ಮಾಡಿದ್ದ ! ಹಾಗೆಯೇ ಮಕ್ಕಳಲ್ಲಿ ಹುದುಗಿದ ಶಕ್ತಿಯನ್ನು ಶಿಕ್ಷಕರು-ಗುರುಗಳು ಮಾಡಬೇಕಾಗಿದೆ. ಅದಕ್ಕೆ ಜೀವನ ಮೌಲ್ಯ ಆಧಾರಿತ ಶಿಕ್ಷಣ ಮಾತ್ರ ಮೂಲ ಆಶಯವನ್ನು ಪೂರೈಸ ಬಲ್ಲುದು..

ಶಿಕ್ಷಣದ ನೆಲಗಟ್ಟು ನೈತಿಕ ಆಧ್ಯಾತ್ಮಿಕ ಮೌಲ್ಯ:

ಭರತ ಖಂಡದ ಜೀವಾಳ ಆಧ್ಯಾತ್ಮಿಕ ಶಕ್ತಿ. ಚಾರಿತ್ರ್ಯಕ್ಕೆ ಅತ್ಯಂತ ಮಹತ್ವ ಕೊಟ್ಟ ದೇಶ ಭಾರತ. ಈ ನೆಲದ ಮೂಲ ದ್ರವ್ಯವಾದ ’ಆಧ್ಯಾತ್ಮಿಕತೆಯನ್ನು ನಾಶ ಮಾಡಿದರೆ, ಮರೆತರೆ ಭಾರತ ನಾಶವಾಗುತ್ತದೆ’ ಎಂಬುದನ್ನು ಸ್ವಾಮಿ ವಿವೇಕಾನಂದರು, ಟಿಳಕರು, ಮಹಾತ್ಮಾ ಗಾಂಧೀಜಿ, ರಾಧಾಕೃಷ್ಣನ್ ಮೊದಲಾಗಿ ಎಲ್ಲ ಸಾಧು-ಸಂತರು, ರಾಷ್ಟ್ರೀಯ ನೇತಾರರು, ಶಿಕ್ಷಣ ತಜ್ಞರು ಸಾರಿದರು. ಆದ ಕಾರಣ ಆಧ್ಯಾತ್ಮಿಕ-ನೈತಿಕ ಮೌಲ್ಯಗಳ ಆಧಾರದ ಮೇಲೆ ಶಿಕ್ಷಣದ ಮಹಾ ಸೌಧವನ್ನು ನಿರ್ಮಾಣ ಮಾಡ ಬೇಕಾಗಿದೆ. ನೈತಿಕ ಆಧ್ಯಾತ್ಮಿಕ ಶಿಕ್ಷಣವನ್ನು ( Moral and Spiritual Education ) ನೀಡಬೇಕಾಗಿದೆ. ಮಾನವೀಯತೆಯ ಮೂಲ ನೆಲೆಯಲ್ಲಿ ರಾಷ್ಟ್ರ ಜನಶಕ್ತಿ ಮೇಲೆದ್ದು ನಿಲ್ಲ ಬೇಕಾಗಿದೆ. ಆದರ್ಶ ಮಾನವನ ಅತ್ಯುತ್ತಮ ಮಾದರಿ ನಮ್ಮ ಯುವ ಜನಾಂಗ ಎನಿಸ ಬೇಕಾಗಿದ್ದು, ಅಹಿಂಸೆ, ಪ್ರೀತಿ,ನಿಸ್ಪೃಹತೆ, ತ್ಯಾಗ, ಅಸ್ತೇಯಗಳು ಜೀವನ ಮಂತ್ರಗಳಾಗ ಬೇಕಾಗಿದೆ.
ಹೆಚ್ಚು ಹೆಚ್ಚು ಹಣ ಗಳಿಸುವ, ಕೂಡಿಡುವ, ಐಷಾರಾಮೀ ಬದುಕು ನಡೆಸುವ ಪೈಪೋಟಿಯೇ ಭ್ರಷ್ಟಾಚಾರ, ಅಸಮಾನತೆ, ಬಡತನ ಮೊದಲಾದ ಅನಿಷ್ಟಗಳಿಗೆ ಕಾರಣವಾಗಿದೆ. ಮನುಷ್ಯನ ಮೂಲ ಮನಸ್ಸು ಬದಲಾಗದೆ ಇವನ್ನೆಲ್ಲ ನಿವಾರಣೆ ಮಾಡುತ್ತೇನೆ ಎಂದು ಹೊರಟರೆ ಅದೊಂದು ಭ್ರಮೆ ಅಷ್ಟೆ ! ಮನಃ ಪರಿವರ್ತನೆಯೊಂದೇ ಸಾಮಾಜಿಕ ಅನಿಷ್ಟ ನಿವಾರಣೆಗೆ ಇರುವ ದಾರಿಯಾಗಿದ್ದು, ಅದು ನೈತಿಕ ಆಧ್ಯಾತ್ಮಿಕ ತಳಹದಿಯ ಶಿಕ್ಷಣದಿಂದ ಮಾತ್ರ ಸಾಧ್ಯವಾಗುತ್ತದೆ.

ಆರೋಗ್ಯ ಭಾಗ್ಯ:
’ಶರೀರಮಾದ್ಯಂ ಖಲು ಧರ್ಮ ಸಾಧನಮ್’ ( Health is Wealth )ಇದು ಎಲ್ಲ ಕಾಲಕ್ಕೂ, ಎಲ್ಲೆಡೆಗೂ ಸಲ್ಲುವ, ಕಾಳಿದಾಸನ ಉಕ್ತಿ.
ಏನಿದ್ದರೇನು? ಆರೋಗ್ಯವೊಂದಿಲ್ಲದಿದ್ದರೆ..ಏನೂ ಸಾಧಿಸಲಿಕ್ಕಾಗದು. ಆರೋಗ್ಯ ಭಾಗ್ಯ ಸದಾ ನಮ್ಮದಾಗಿರ ಬೇಕು ಎಂದರೆ ಅದಕ್ಕೆ ಆಯುರ್ವೇದ ದಿವ್ಯ ಪರಿಹಾರ. ಆಯುರ್ವೇದವೆಂದರೆ ಕೇವಲ ಔಷಧವಲ್ಲ; ಅದೊಂದು ಜೀವನ ಪದ್ಧತಿ. ಹಿತಾಹಾರ, ಮಿತಾಹಾರ, ಋತಾಹಾರ- ನಾವು ಸೇವಿಸುವ ಆಹಾರಕ್ಕೆ ಇರುವ ನಿಯಮ. ಪಥ್ಯ ಎಂದರೆ ನಮಗೆ ಯುಕ್ತವಾದ ಆಹಾರ ಎಂದರ್ಥವೇ ಹೊರತು ’ಶಿಕ್ಷೆ’ ಅಲ್ಲ. ಆಸನ, ಪ್ರಾಣಾಯಾಮ, ಧ್ಯಾನ-ವ್ಯಾಯಾಮಗಳು, ಅಗತ್ಯವಾದ ಆಟೋಟಗಳು, ಯುಕ್ತ ರೀತಿಯ ಆಹಾರ ಸೇವನೆ ಉತ್ತಮ ಆರೋಗ್ಯಕ್ಕೆ ಅತ್ಯಂತ ಅಗತ್ಯವಾದ ಸಂಗತಿಯಾಗಿದೆ. ಆರೋಗ್ಯ ಪೂರ್ಣವಾದ, ದೀರ್ಘಾಯುಷ್ಯ ಆಯುರ್ವೇದ ಜೀವನ ಪದ್ಧತಿಯಿಂದ ಮಾತ್ರ ಸಾಧ್ಯವಾಗುತ್ತದೆ. ಇದನ್ನು ಮಕ್ಕಳಿಗೆ ತಿಳಿಸಿಕೊಟ್ಟು, ಅಭ್ಯಾಸ ಮಾಡಿಸುವುದರ ಮೂಲಕ ಸದೃಢ ಬಲಿಷ್ಠ ಜನಾಂಗವನ್ನು ರೂಪಿಸ ಬಹುದು. ಆರೋಗ್ಯವನ್ನು ಅಲಕ್ಷಿಸಿದರೆ ಎಲ್ಲವನ್ನೂ ಅಲಕ್ಷಿಸಿದಂತೆಯೇ ಸರಿ. ವಿಷ ಮುಕ್ತವಾದ ಆಹಾರ ಸೇವನೆ, ವಿಷ ರಹಿತ ಗಾಳಿ, ನೀರು, ವಾಸ
ಇರುವ ಹಾಗೆ ನೋಡಿಕೊಳ್ಳ ಬೇಕಾದದ್ದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಅದನ್ನು ಮನಗಾಣಿಸಿಕೊಡ ಬೇಕಾದದ್ದು ಮೊಟ್ಟ ಮೊದಲು ಶಾಲೆಯೇ ಆಗಿದೆ. ಇಲ್ಲಿ ಅದರ ಸೂಕ್ತ ಅಭ್ಯಾಸ, ತರಬೇತಿ ಆಗಬೇಕಾಗಿರುವುದರಿಂದ ಗುರುವೃಂದ ಆ ಕುರಿತು ವಿಶೇಷ ಕಾಳಜಿವಹಿಸ ಬೇಕು. ಸರಕಾರ ಆ ದಿಶೆಯಲ್ಲಿ ’ಯೋಗ’ ವನ್ನು ಒಂದು ಅನಿವಾರ್ಯ ವಿಷಯವನ್ನಾಗಿ ಅಂಗೀಕರಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ.

ಶಿಸ್ತು ಹಾಗೂ ಸಮಯ ಪಾಲನೆ:
ಜೀವನದಲ್ಲಿ ಶಿಸ್ತು ಹಾಗೂ ಸಮಯ ಪಾಲನೆ ಬಹಳ ಮಹತ್ವದ್ದು. ಇದು ಒಂದಕ್ಕೊಂದು ಸಂಬಂಧಿಸಿದ ವಿಷಯ.
ಶಿಸ್ತು ಇಲ್ಲದ ಅಸ್ತವ್ಯಸ್ತ ಬದುಕು ಆರೋಗ್ಯ, ಆಯುಷ್ಯ, ಸಾಧನೆ ಎಲ್ಲವನ್ನೂ ಹಾಳುಮಾಡುತ್ತದೆ. ನಿಗದಿತ ಸಮಯಕ್ಕೆ ಎಲ್ಲವೂ ಪ್ರಾರಂಭವಾಗ ಬೇಕು, ಮುಗಿಯ ಬೇಕು. ಮುಖ್ಯಾಧ್ಯಾಪಕ ಸರಿಯಾದ ಸಮಯಕ್ಕೆ ಶಾಲೆಗೆ ಬಂದು ಎಲ್ಲ ಕಾರ್ಯಗಳನ್ನೂ ನಿಗದಿತ ಸಮಯದಲ್ಲಿ ನಡೆಸಿದರೆ ವಿದ್ಯಾರ್ಥಿಗಳೂ ಅದನ್ನು ಪಾಲಿಸುತ್ತಾರೆ, ಸಹಶಿಕ್ಷಕರೂ ಅದನ್ನು ಅನುಸರಿಸುತ್ತಾರೆ. ಪಠ್ಯಕ್ರಮ, ಯೋಜನೆ ಸರಿಯಾಗಿ ಪೂರ್ಣಗೊಂಡು ಉದ್ದೇಶಿತ ಫಲ ನೀಡುತ್ತದೆ.
’ಮುತ್ತು ಹೋದರೆ ಮತ್ತೆ ಬಂದೀತು; ಹೊತ್ತು ಹೋದರೆ ಮತ್ತೆ ಬಾರದು’ ಎಂಬ ಗಾದೆಯಂತೆ ಕಳೆದು ಹೋದ ಸಮಯ, ಅವಕಾಶ ಮತ್ತೆ ಎಂದೂ ಬರುವುದಿಲ್ಲ; ಸಿಗುವುದಿಲ್ಲ. ಇಂಡಿಯಾದ ಜನರ ಸಮಯ ಪಾಲನೆ ಬಗ್ಗೆ ಪ್ರಸಿದ್ಧವಾದ ಒಂದು ಜೋಕ್ ಇದೆ; ’ ವಿದೇಶೀಯನೊಬ್ಬ ಟ್ರೈನಿಗಾಗಿ ಕಾಯುತ್ತ ನಿಂತಿದ್ದ, ರೈಲ್ವೇಸ್ಟೇಶನ್ ಗೆ ಸರಿಯಾಗಿ ಎರಡು ಘಂಟೆಗೆ ಟ್ರೈನು ಬಂದು ನಿಂತಿತು.
ವಾಚಮನ್ನನ್ನು ಕೇಳಿದ ’ ಇದು ಎಷ್ಟು ಘಂಟೆಗ ಬರುವ ಟ್ರೈನು? ಎಂದು. ’ಇದು ಎರಡು ಘಂಟೆಗೆ’ ಎಂದು ಆತ ಉತ್ತರಿಸಿದ. ’ಭೇಷ್ ನಿಮ್ಮಲ್ಲಿ ಎಷ್ಟು ಸರಿಯಾಗಿ ಟೈಮಿಗೆ ಟ್ರೈನು ಬರುತ್ತದೆ! ಎಂದು ಆತ ಪ್ರಶಂಸಾಪರವಾಗಿ ಉದ್ಗರಿಸಿದ! ಆಗ ವಾಚಮನ್ ಹೇಳಿದ ’ ಇದು ನಿನ್ನೆ ಎರಡು ಘಂಟೆಗೆ ಬರುವ ಬಸ್ಸಾಗಿತ್ತು! ಎಂದು. ಹೀಗಿದೆ ನಮ್ಮ ಸಮಯ ಪಾಲನೆ.
ಆಲಸ್ಯ, ದಕ್ಷತೆಯ ಕೊರತೆ, ಅಸಡ್ಡೆ, ವೇಳೆಯ ಮಹತ್ವದ ಅರಿವಿಲ್ಲದಿರುವುದು ಮೊದಲಾದ ಕಾರಣದಿಂದಾಗಿ ನಮ್ಮಲ್ಲಿ ಸಮಯ ಪಾಲನೆಯ ಬಗ್ಗೆ ನಿರ್ಲಕ್ಷ್ಯ ಕಂಡು ಬರುತ್ತದೆ. ಆದ ಕಾರಣ ಶಾಲೆಯ ದಿನಗಳಲ್ಲಿಯೇ ಮಕ್ಕಳು ಶಿಸ್ತು ಮತ್ತು ಸಮಯ ಪಾಲನೆಯನ್ನು ಅಭ್ಯಾಸ ಮಾಡಬೇಕು.
ಈ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ನಾವು ಕ್ರಮಾನುಸಾರ ಅನುಷ್ಠಾನಗೊಳಿಸ ಬಹುದಾದ ಕಾರ್ಯಗಳ ಯೋಜನೆಯನ್ನು ಹೀಗೆ ಗುರುತಿಸ ಬಹುದು.

ಅನುಷ್ಠಾನಗೊಳಿಸ ಬಹುದಾದ ಕಾರ್ಯಕ್ರಮಗಳು:
1. ಪ್ರತಿದಿನ ಬೆಳಿಗ್ಗೆ ಶಾಲೆ ಪ್ರಾರಂಭವಾಗುವ ಮೊದಲು ಅರ್ಧ ಘಂಟೆಯ ಅವಧಿಯಲ್ಲಿ ಸೂರ್ಯ ನಮಸ್ಕಾರ, ಆಸನ, ಪ್ರಾಣಾಯಾಮ, ಧ್ಯಾನ,ಪ್ರಾರ್ಥನೆ, ಭಜನೆ, ನೀತಿ ಕಥೆ, ಚಿಂತನೆ, ಗಾದೆ ಮಾತು, ಪಂಚಾಂಗ, ಪಾಸಿಟಿವ್ ಥಿಂಕಿಂಗ್ ಹೀಗೆ ವ್ಯವಸ್ಥಿತವಾಗಿ ಜೋಡಿಸಿಕೊಂಡು ಅನುಸ್ಯೂತವಾಗಿ ನಡೆಸಿಕೊಂಡು ಬರುವುದು.
2. ಮನೆಯಲ್ಲಿ ತಾಯಿ ತಂದೆಯರಿಗೆ ಏನಾದರೂ ಚಿಕ್ಕ ಸಹಾಯ ಮಾಡುವಂತೆ ಪ್ರೇರಣೆ ನೀಡುವುದು.
3. ಬಸ್ಸಿನಲ್ಲಿ ಹಿರಿಯರು, ಮಹಿಳೆಯರು, ಅಸಹಾಯಕರು ಬಂದರೆ ಸೀಟು ಬಿಟ್ಟು ಕೊಡುವಂತೆ ಪ್ರೇರೇಪಿಸುವುದು.
4. ಅನ್ಯಾಯ, ಭ್ರಷ್ಟಾಚಾರ, ಅತ್ಯಾಚಾರಗಳ ವಿರುದ್ಧ ಪ್ರತಿಭಟಿಸುವ ಮನೋಭಾವನೆಯನ್ನು ಜಾಗೃತಗೊಳಿಸುವುದು.
5. ತಮ್ಮ ಬಟ್ಟೆಯನ್ನು ತಾವೇ ತೊಳೆದುಕೊಳ್ಳುವಂತೆ, ತನ್ನೆಲ್ಲ ಕೆಲಸವನ್ನು ತಾನೆ ಮಾಡಿಕೊಳ್ಳುವಂತೆ
ಪ್ರೇರೇಪಿಸುವುದು.

6. ಶಾಲೆಗಳಲ್ಲಿ ಕೊಠಡಿ ವರಾಂಡಗಳ ಸ್ವಚ್ಛತೆ, ಶೌಚಾಲಯಗಳ ಶುಚಿತ್ವ ಕಾಪಾಡುವುದು, ಶಾಲೆಯನ್ನು
ಸಿಂಗರಿಸುವುದು, ಶ್ರಮದಾನ..
7. ವೃದ್ಧರಿಗೆ ಸಹಾಯ, ಕಾಯಿಲೆ ಮಲಗಿದವರನ್ನು ಉಪಚರಿಸುವುದು, ಸಂಕಷ್ಟದಲ್ಲಿರುವವರಿಗೆ ಕೈಲಾದ
ಸಹಾಯ ಮಾಡುವ ಪ್ರವೃತ್ತಿಯನ್ನು ಜಾಗೃತಗೊಳಿಸುವುದು.
8. ಅತಿಥಿ ಸತ್ಕಾರ ಭಾರತೀಯ ಸಂಸ್ಕೃತಿಯ ಹಿರಿಮೆಯಾಗಿದೆ. ಮನೆಗೆ ಬಂದ ಅತಿಥಿಗಳನ್ನು ನಮ್ಮ
ಅನುಕೂಲ, ಸ್ಥಿತಿ ಗತಿಗಳಿಗೆ ಅನುಸಾರ ಉಪಚರಿಸುವುದು, ಹಾಗೂ ಅತಿಥಿಗಳನ್ನು ಕಣ್ಣೆತ್ತಿಯೂ
ನೋಡದ ಅಹಂಕಾರವೊ. ನಿರ್ಲಕ್ಷ್ಯವೊ ಅಥವಾ ತನಗೆ ಸಂಬಂಧಿಸಿದ್ದಲ್ಲ ಎಂಬ ಭಾವವೊ ಬರದಂತೆ
ಸಂಸ್ಕಾರ ನೀಡುವುದು
9. ಸಾಧು ಸಂತರ, ದೇಶ ಭಕ್ತರ, ಸ್ವಾತಂತ್ರ್ಯ ಹೋರಾಟಗಾರರ, ಸಾಧಕರ ಜೀವನ ಚರಿತ್ರೆಗಳನ್ನು
ಓದಿಸುವುದು ಮತ್ತು ಅದನ್ನು ಆದರ್ಶವಾಗಿ ಸ್ವೀಕರಿಸುವಂತೆ ಪ್ರೇರೇಪಿಸುವುದು. ದೇಶ ಭಕ್ತಿಯನ್ನು
ಉದ್ದೀಪನಗೊಳಿಸುವುದು.
10. ಸ್ವಾವಲಂಬಿಯಾಗಿ ಬದುಕುವ ಬಗ್ಗೆ ದೃಢವಾದ ಸಂಕಲ್ಪ ಮಾಡುವಂತೆ ಉದ್ದೀಪಿಸುವುದು ಮತ್ತು
ಅಂತಹ ಕೌಶಲ್ಯವನ್ನು ಬೆಳೆಸುವ ಪ್ರಶಿಕ್ಷಣ ನೀಡುವುದು.
11. ಸಾಹಿತ್ಯ, ಕಲೆ, ಸಂಗೀತ, ನೃತ್ಯ, ಕುಶಲ ಕರ್ಮ, ಮೊದಲಾದ ಹವ್ಯಾಸಗಳಲ್ಲಿ ಪರಿಣತಿ ಸಾಧಿಸುವಂತೆ
ಪ್ರಯತ್ನಿಸುವುದು.
12. ತ್ಯಾಗ, ಪ್ರೀತಿ, ಧೈರ್ಯ, ಸಾಹಸ, ಅಹಿಂಸೆ ಮುಂತಾದ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಯುಕ್ತ ಕಾರ್ಯಕ್ರಮ ಹಾಕಿಕೊಡುವುದು.
13. ಆತ್ಮ ವಿಶ್ವಾಸ ಬಹಳ ಮುಖ್ಯವಾಗಿದ್ದು ಕಲಿಕೆಯ ಮತ್ತು ಯಾವುದೇ ಕೆಲಸದ ಯಶಸ್ಸಿನ ಆಧಾರ
ಸ್ತಂಭವೇ ಅದಾಗಿದೆ.
14. ಸಮಾಜದ ಜೊತೆ ಬೆರೆಯುವಂತೆ, ವಿನೀತನಾಗಿ ನಡೆದುಕೊಳ್ಳುವಂತೆ, ಪ್ರತಿಯೊಬ್ಬ ವ್ಯಕ್ತಿಯನ್ನೂ
ಗೌರವಿಸುವಂತೆ ತರಬೇತಿ ನೀಡುವುದು.
15. ಮಗುವಿಗೆ ಆದರ್ಶ ಶಿಕ್ಷಕನೇ ಆಗುವುದರಿಂದ ’ಒಂದು ಮಾದರಿ’ಯಾಗಿ ಶಿಕ್ಷಕನೇ ಇರ ಬೇಕು.
16. ಯೋಗ ಶಿಕ್ಷಣದ ಜೊತೆಗೆ ಆಯುರ್ವೇದ ಜೀವನ ಪದ್ಧತಿಯನ್ನು ಅನುಸರಿಸುವಂತೆ ಪ್ರೇರಿಸುವುದು.
17. ಸಮಯ ಪಾಲನೆಯ ಮಹತ್ವವನ್ನು ಮನದಟ್ಟು ಮಾಡಿಕೊಟ್ಟು, ಕಟ್ಟು ನಿಟ್ಟಾಗಿ ಸಮಯ ಪಾಲನೆ
ಮಾಡುವ ಮನೋಭಾವ- ದೃಢ ನಿಷ್ಠೆಯನ್ನು ಬೆಳೆಸಬೇಕು.
18. ದೀನ ದಲಿತರ ಬಗ್ಗೆ ಸಹಾನುಭೂತಿ, ಕಾಳಜಿ ಇರುವಂತೆ ಸಂಸ್ಕಾರ ನೀಡುವುದು ಮತ್ತು ರಾಷ್ಟ್ರೀಯ ಭಾವೈಕ್ಯತೆಯ
ಬಗ್ಗೆ ಪ್ರಜ್ಞೆ ಮೂಡಿಸುವುದು.
ಹೀಗೆ ಸಾಂಕೇತಿಕವಾಗಿ, ಜೀವನ ಮೌಲ್ಯಗಳ ಆಧಾರಿತವಾದ ಶಿಕ್ಷಣವನ್ನು ನೀಡ ಬೇಕಾದ ಅಗತ್ಯದತ್ತ ಗಮನ ಸೆಳೆಯುವ ಒಂದು ಪ್ರಯತ್ನವನ್ನು ಇಲ್ಲಿ ಮಾಡಲಾಗಿದ್ದು, ವಿಸ್ತೃತ ಅಧ್ಯಯನಕ್ಕೆ ಅಂತರ್ಜಾಲ, ಸ್ವಾಮಿ ರಾಮದೇವ್, ಅಸಾರಾಮ್ ಬಾಪೂಜಿ, ಓಶೋ, ರಾಮಕೃಷ್ಣಾಶ್ರಮದ ನೈತಿಕ-ಆಧ್ಯಾತ್ಮಿಕ ಶಿಕ್ಷಣದ ಪ್ರಯೋಗಗಳನ್ನು ಅಭ್ಯಸಿಸ ಬಹುದು.

logoblog

Thanks for reading ಶಾಲೆಗಳಲ್ಲಿ ಮೌಲ್ಯಾಧಾರಿತ ಶಿಕ್ಷಣದ ಅಗತ್ಯ

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *