ಇಲಾಖೆಯ ಪೀಠಿಕೆ ಮತ್ತು ಸಂಘಟನೆ.
ಪ್ರಾಥಮಿಕ ಶಿಕ್ಷಣ ಸಾರ್ವತ್ರೀಕರಣಕ್ಕೆ ಸ್ಪಷ್ಟ ಕಾಲಮಿತಿಯುಳ್ಳ ಒಂದು ಕಾರ್ಯಕ್ರಮ. ಉತ್ತಮ ಗುಣಮಟ್ಟದ ಮೂಲ ಶಿಕ್ಷಣಕ್ಕೆ ದೇಶಾದ್ಯಂತ ಇರುವ ಬೇಡಿಕೆಗೆ ತೋರಿಸಿದ ಪ್ರತಿಕ್ರಿಯೆ. ಮೂಲ ಶಿಕ್ಷಣದ ಮೂಲಕ ಸಾಮಾಜಿಕ ನ್ಯಾಯವನ್ನು ಪ್ರವರ್ದಿಸುವ ಅವಕಾಶ. ಪ್ರಾಥಮಿಕ ಶಾಲೆಗಳ ನಿರ್ವಹಣೆಯಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳು, ಶಾಲಾ ಆಡಳಿತ ಸಮಿತಿಗಳು, ಗ್ರಾಮ ಮತ್ತು ನಗರ ಕೊಳಚೆ ಪ್ರದೇಶದ ಶಿಕ್ಷಣ ಸಮಿತಿಗಳು, ಪೋಷಕ-ಶಿಕ್ಷಕರ ಸಂಘ ಸಂಸ್ಥೆಗಳು, ತಾಯಿ-ಶಿಕ್ಷಕಿ ಸಂಘ ಸಂಸ್ಥೆಗಳು, ಬುಡಕಟ್ಟು ಸ್ವಾಯತ್ತ ಪರಿಷತ್ತುಗಳು ಹಾಗು ಇತರೆ ಬುನಾದಿ ಮಟ್ಟದ ಶಿಕ್ಷಣದ ನಿರ್ವಹಣಾ ಸಂಸ್ಥೆಗಳನ್ನು ಪರಿಣಾಮಕಾರಿಯಾಗಿ ತೊಡಗಿಸುವ ಒಂದು ಪ್ರಯತ್ನವಾಗಿದೆ. ದೇಶಾದ್ಯಂತ ಪ್ರಾಥಮಿಕ ಶಿಕ್ಷಣವನ್ನು ಸಾರ್ವತ್ರೀಕರಿಸುವ ರಾಜಕೀಯ ಇಚ್ಚಾ ಶಕ್ತಿಯ ಅಭಿವ್ಯಕ್ತಿ. ಕೇಂದ್ರ ರಾಜ್ಯ ಮತ್ತು ಸ್ಥಳೀಯ ಸರ್ಕಾರದ ನಡುವಿನ ಪಾಲುದಾರಿಕೆ. ಪ್ರಾಥಮಿಕ ಶಿಕ್ಷಣದ ಬಗ್ಗೆ ತಮ್ಮದೇ ಆದ ನಿಲುವನ್ನು (ವಿಷನ್) ಹೊಂದಲು ರಾಜ್ಯಗಳಿಗೆ ಒಂದು ಅವಕಾಶ.
6 ರಿಂದ 14 ವರ್ಷದ ಮಕ್ಕಳ ಪ್ರಾಥಮಿಕ ಶಿಕ್ಷಣ ಸಾರ್ವತ್ರೀಕರಣಕ್ಕೆ ಸ್ಪಷ್ಟ ಕಾಲಮಿತಿಯುಳ್ಳ ಕೇಂದ್ರ ಹಾಗೂ ರಾಜ್ಯ ಸಹಭಾಗಿತ್ವದ ಕಾರ್ಯಕ್ರಮವಾಗಿದ್ದು, ಉತ್ತಮ ಗುಣಮಟ್ಟದ ಮೂಲ ಶಿಕ್ಷಣ ನೀಡುವ ಉದ್ದೇಶ ಹೊಂದಿದೆ.
ಹೊಸ ಶಾಲೆಗಳು –
1 ಕಿ.ಮೀ ವ್ಯಾಪ್ತಿಯಲ್ಲಿ ಪ್ರಾಥಮಿಕ ಶಾಲಾ ಸೌಲಭ್ಯ ಇಲ್ಲದ 6-14 ವಯೋಮಾನದ ಕನಿಷ್ಠ 10 ಮಕ್ಕಳಿರುವ ಜನವಸತಿಗಳಲ್ಲಿ ಹೊಸ ಪ್ರಾಥಮಿಕ ಶಾಲೆ ತೆರೆಯಲು ಅವಕಾಶವಿರುತ್ತದೆ.
ಕಿ.ಪ್ರಾ.ಶಾಲೆ ಉನ್ನತೀಕರಣ –
3 ಕಿ.ಮೀ ವ್ಯಾಪ್ತಿಯಲ್ಲಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲದ ಜನವಸತಿಯ ಕಿರಿಯ ಪ್ರಾಥಮಿಕ ಶಾಲೆಯನ್ನು ಹಿರಿಯ ಪ್ರಾಥಮಿಕ ಶಾಲೆಯನ್ನಾಗಿ ಉನ್ನತೀಕರಿಸಿ 6-7ನೇತರಗತಿ ಪ್ರಾರಂಭಿಸಲು ಅವಕಾಶವಿರುತ್ತದೆ.
ಶಿಕ್ಷಕರ ಅನುದಾನ –
ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ, ಒಬ್ಬರಿಗೆ ರೂ.500/- ರಂತೆ ಶಿಕ್ಷಕರ ಅನುದಾನ ನೀಡಲಾಗುವುದು. ಈ ಅನುದಾನದಲ್ಲಿ ಕಡಿಮೆ ವೆಚ್ಚದ ಕಚ್ಚಾವಸ್ತುಗಳನ್ನು ಖರೀದಿಸಿ ಶಿಕ್ಷಕರು ತಮ್ಮ ಬೋಧನೆಗೆ ಅಗತ್ಯವಿರುವ ಪಾಠೋಪಕರಣಗಳನ್ನು ತಯಾರಿಸಿಕೊಂಡು ಬೋಧನೆಯನ್ನು ಪರಿಣಾಮಕಾರಿಯಾಗಿ ಮಾಡುವರು.
ಸೇವಾನಿರತ ಶಿಕ್ಷಕರ ತರಬೇತಿಗಳು –
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬ್ಲಾಕ್ ಹಂತದಲ್ಲಿ 10 ದಿನದ ಸೇವಾ ನಿರತ ತರಬೇತಿ ಹಾಗೂ ಕ್ಲಸ್ಟರ್ ಹಂತದಲ್ಲಿ 10 ದಿನಗಳ ಸೇವಾ ತರಬೇತಿ ನೀಡಲಾಗವುದು. 3 ದಿನದ ಧನಾತ್ಮಕ ಚಿಂತನೆ ಸನಿವಾಸ ತರಬೇತಿ, ಜೀವನ ವಿಜ್ಞಾನ 2 ದಿನದ ತರಬೇತಿ, 3ನೇತರಗತಿ ಬೋಧಿಸುತ್ತಿರುವ ಶಿಕ್ಷಕರಿಗೆ 3 ದಿನದ ನಲಿ-ಕಲಿ ತರಬೇತಿ, ಮುಖ್ಯ ಶಿಕ್ಷಕರಿಗೆ (Spoken English) 4 ದಿನದ ಇಂಗ್ಲೀಷ್ ತರಬೇತಿಗಳನ್ನು ಬಿ.ಆರ್.ಸಿ ಹಂತದಲ್ಲಿ ಡಯಟ್ ಮೂಲಕ ನೀಡಲಾಗುವುದು. ಇದರಿಂದ ಶಿಕ್ಷಕರು ಬೋಧನಾ ವಿಷಯದಲ್ಲಿ ಹೆಚ್ಚಿನ ಸಾಮರ್ಥ್ಯ ಗಳಿಸಿ ಪರಿಣಾಮಕಾರಿಯಾಗಿ ಬೋಧನೆ ಮಾಡಲು ಸಹಕಾರಿಯಾಗುತ್ತದೆ.
12 ತಿಂಗಳ ವಸತಿಯುತ ಸೇತುಬಂದ –
1) ಶಾಲೆಬಿಟ್ಟ/ಶಾಲೆಗೆ ದಾಖಲಾಗಿಲ್ಲದ ಎಲ್ಲಾ ಮಕ್ಕಳಿಗೆ.
2) 2 ತಿಂಗಳ ಕಾಲ ಸೇತುಬಂಧ ನಡೆಸಿದರೂ ಅಗತ್ಯ ಕಲಿಕಾಂಶಗಳನ್ನು ಕಲಿಯಲು ಅಸಮರ್ಥರಾದ ಮಕ್ಕಳಿಗೆ ಬ್ರಿಡ್ಜ್ ಕೋರ್ಸ್ ನಂತರ ಮುಖ್ಯವಾಹಿನಿಗೆ ಬರುವ ಮಕ್ಕಳಿಗೆ.
3) ವಯಸ್ಸು ತುಂಬಿದ್ದರೂ ಶಾಲೆಗೆ ದಾಖಲಾಗಿಲ್ಲದೇ ಇದ್ದು, ಈಗ ಶಾಲೆಗೆ ಸೇರಿಸುತ್ತಿರುವ ಮಕ್ಕಳಿಗೆ.
4) ಒಂದು ಕೇಂದ್ರದಲ್ಲಿನ ಮಕ್ಕಳ ಕನಿಷ್ಠ ಸಂಖ್ಯೆ 50 ಕ್ಕಿಂತ ಕಡಿಮೆ ಮಕ್ಕಳಿದ್ದಾಗಲೂ ಕೇಂದ್ರ ನಡೆಸಬಹುದು. ಆದರೆ ಪ್ರತಿ ಮಗುವಿನ ಘಟಕ ವೆಚ್ಚ ಮೂರಬಾರದು.
3 ತಿಂಗಳ ವಸತಿಯುತ ಚಿಣ್ಣರ ಅಂಗಳ –
6-14 ವರ್ಷದ ಶಾಲೆಬಿಟ್ಟ ಮಕ್ಕಳಿಗೆ ಪ್ರತಿ ವರ್ಷ ಏಪ್ರಿಲ್ 15 ರಿಂದ ಜುಲೈ16, ರವರೆಗೆ 3 ತಿಂಗಳ ವಸತಿಯುತ ಚಿಣ್ಣರ ಅಂಗಳವನ್ನು ನಡೆಸಲಾಗುತ್ತಿದೆ. 3 ತಿಂಗಳಿಗೆ ಒಂದು ಮಗುವಿಗೆ ರೂ.2500/- ಘಟಕ ವೆಚ್ಚವಿರುತ್ತದೆ. ಇದರಲ್ಲಿ ಮಕ್ಕಳಿಗೆ ಊಟ, ವಸತಿ, ಕಲಿಕಾ ಸಾಮಗ್ರಿ, ವೈದ್ಯಕೀಯ ವೆಚ್ಚ, ಇತರೆಗಾಗಿ ಬಳಕೆ ಮಾಡಲಾಗುತ್ತದೆ.
3 ತಿಂಗಳ ವಸತಿರಹಿತ ಚಿಣ್ಣರ ಅಂಗಳ –
6-14 ವರ್ಷದ ಶಾಲೆಬಿಟ್ಟ ಮಕ್ಕಳಿಗೆ ಏಪ್ರಿಲ್ 15 ರಿಂದ ಜುಲೈ 16ರವರೆಗೆ 3 ತಿಂಗಳ ವಸತಿರಹಿತ ಚಿಣ್ಣರ ಅಂಗಳವನ್ನು ನಡೆಸಲಾಗುತ್ತಿದೆ. 3 ತಿಂಗಳಿಗೆ ಒಂದು ಮಗುವಿಗೆ ರೂ.800/- ಘಟಕ ವೆಚ್ಚವಿರುತ್ತದೆ. ಇದರಲ್ಲಿ ಮಕ್ಕಳಿಗೆ ಊಟ, ಕಲಿಕಾ ಸಾಮಗ್ರಿ, ವೈದ್ಯಕೀಯ ವೆಚ್ಚ ಇತರೆಗಾಗಿ ಬಳಕೆ ಮಾಡಲಾಗಿದೆ.
ಟೆಂಟ್ ಶಾಲೆ –
ತುಮಕೂರು ಬ್ಲಾಕಿನಲ್ಲಿ ಕೈಗಾರಿಕೆ ಮತ್ತು ಇತರೆ ಕಾಮಗಾರಿ ಕೆಲಸಗಳಿಗಾಗಿ ಬೇರೆ ಜಿಲ್ಲೆ ಅಥವಾ ರಾಜ್ಯದಿಂದ ವಲಸೆ ಬರುವ ಕುಟುಂಬದ ಮಕ್ಕಳಿಗೆ ಕೆಲಸ ನಡೆಯುತ್ತಿರುವ ಸ್ಥಳದಲ್ಲಿಯೇ ಟೆಂಟ್ ವ್ಯವಸ್ಥೆ ಮಾಡಿ ಶಾಲಾ ಶಿಕ್ಷಣ ನೀಡಲಾಗುತ್ತಿದೆ. (ಘಟಕ ವೆಚ್ಚ 1500/-)
ಮದರಸ/ಮುಕ್ತಾಬ್ –
ಪ್ರತಿ ವರ್ಷ ಮಕ್ಕಳ ಗಣತಿಯಲ್ಲಿ ಗುರುತಿಸುವ 6-14 ವರ್ಷದ ಶಾಲೆ ಬಿಟ್ಟ ಮಕ್ಕಳು ಮದರಸಗಳಲ್ಲಿ ಧಾರ್ಮಿಕ ಶಿಕ್ಷಣ ಪಡೆಯುತ್ತಿದ್ದು, ಈ ಮಕ್ಕಳಿಗೆ ಮದರಸ ಮುಕ್ತಾಬ್ ಗಳಿಗೆ ಶಾಲಾ ಶಿಕ್ಷಕರನ್ನು ನಿಯೋಜಿಸಿ ರಾಜ್ಯ ಪಠ್ಯಕ್ರಮ ಬೋಧಿಸಲು ಅವಕಾಶವಿರುತ್ತದೆ. ಒಂದು ಮಗುವಿಗೆ 1 ವರ್ಷಕ್ಕೆ ಘಟಕ ವೆಚ್ಚ 3000/- ಇರುತ್ತದೆ.
ಸಾರಿಗೆ ವೆಚ್ಚ –
1 ಕಿ.ಮೀ ವ್ಯಾಪ್ತಿಯಲ್ಲಿ ಪ್ರಾಥಮಿಕ ಶಾಲೆ ಇಲ್ಲದ, 3 ಕಿ.ಮೀ ವ್ಯಾಪ್ತಿಯಲ್ಲಿ ಹಿ.ಪ್ರಾ.ಶಾಲೆ ಇಲ್ಲದ ಜನವಸತಿಗಳ ಮಕ್ಕಳಿಗೆ ಸಮೀಪದ ಶಾಲೆಗೆ ಹೋಗಲು ಸಾರಿಎ ವೆಚ್ಚ ನೀಡಲಾಗುವುದು. 10 ತಿಂಗಳಿಗೆ ರೂ.2500/-ಗಳನ್ನು ಒಂದು ಮಗುವಿಗೆ ನೀಡಲಾಗುವುದು.
ಮೀನಾ ತಂಡ –
ಶಾಲೆಯಿಂದ ಹೊರಗುಳಿದ ಮಕ್ಕಳು ಮತ್ತು ಸತತವಾಗಿ ಗೈರು ಹಾಜರಾಗುತ್ತಿರುವ ಮಕ್ಕಳನ್ನು ಶಾಲೆಗೆ ದಾಖಲಿಸಲು ಪ್ರತಿ ಕ್ಲಸ್ಟರ್ ನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ಮಕ್ಕಳ ತಂಡವನ್ನು (10 ಬಾಲಕಿಯರು, 5 ಬಾಲಕರು, ಮತ್ತು 5 ಗೈರು ಹಾಜರಿ ಆಗಿ ಶಾಲೆಗೆ ಸೇರಿರುವ ಹೆಣ್ಣು ಮಕ್ಕಳು) ರಚಿಸಿ ತಂಡದ ಮುಖೇನ ಜಾಥಾ, ಬೀದಿ ನಾಟಕ, ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವುದು, ಪ್ರತಿ ವಾರಕ್ಕೊಮ್ಮೆ ಸಭೆ ಸೇರಿ ಪ್ರಗತಿ ಬಗ್ಗೆ ಚರ್ಚಿಸುವುದು. ಬಾಲ್ಯ ವಿವಾಹ, ಮೂಡನಂಭಿಕೆ, ಸಾಮಾಜಿಕ ಪಿಡುಗುಗಳ ಬಗ್ಗೆ ಚರ್ಚಿಸಿ ಕ್ಲಸ್ಟರ್ ಹಂತದಲ್ಲಿ ಜಾಗೃತಿ ಹಾಗೂ ಹೋರಾಟ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವುದು.
ಉಚಿತ ಪಠ್ಯ ಪುಸ್ತಕ –
1-8ನೇ ತರಗತಿಯ ಅನುದಾನಿತ ಶಾಲಾ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕಗಳನ್ನು ಒದಗಿಸಲಾಗುವುದು.
ವರ್ಕ್ ಬುಕ್ಸ್ –
ಸರ್ಕಾರಿ ಶಾಲೆಗಳಲ್ಲಿ 1-3ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗೆ ನಲಿ-ಕಲಿ ಆಧಾರಿತವಾಗಿ ಬೋಧಿಸಲು ಅವಶ್ಯಕವಾದ ನಲಿ-ಕಲಿ ಸಾಮಗ್ರಿಗಳಾದ ಕಾರ್ಡುಗಳು, ವಾಚಕಗಳು, ಅಭ್ಯಾಸ ಪುಸ್ತಕಗಳು, ಪ್ರಗತಿ ನೋಟ, ಕಲಿಕಾ ತಟ್ಟೆಗಳ ಮುದ್ರಣ ಮಾಡಿ ರಾಜ್ಯ ಹಂತದಿಂದ ಎಲ್ಲಾ ಸರ್ಕಾರಿ ಶಾಲೆಗಳಿಗೆ ವಿತರಿಸಲಾಗುವುದು.
ಸಮನ್ವಯ ಶಿಕ್ಷಣ –
ವಿಶೇಷ ಅಗತ್ಯತೆಯುಳ್ಳ ಮಕ್ಕಳ ಗಣತಿಯಲ್ಲಿ ಗುರುತಿಸುವ 6-14 ವರ್ಷದ ವಿಶೇಷ ಅಗತ್ಯತೆಯುಳ್ಳ ಮಕ್ಕಳಿಗೆ ಕೆಳಕಂಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.
1) ವೈದ್ಯಕೀಯ ತಪಾಸಣೆ
2) ಉಚಿತ ಸಾಧ-ಸಲಕರಣೆ ವಿತರಣೆ
3) ತೀವ್ರ ನ್ಯೂನತೆಯುಳ್ಳ ಮಕ್ಕಳಿಗೆ ಸ್ವಯಂ ಸೇವಕರ ಮೂಲಕ ಗೃಹಾಧಾರಿತ (ಮನೆಯಲ್ಲಿಯೇ ಶಿಕ್ಷಣ) ಶಿಕ್ಷಣ
4) ಶಾಲಾ ಶಿಕ್ಷಕರಿಗೆ 5 ದಿನದ ತರಬೇತಿ
5) 90 ದಿನದ ತರಬೇತಿ
6) ಪೋಷಕರಿಗೆ 2 ದಿನದ ತರಬೇತಿ
7) ಸಮುದಾಯ ಜಾಗೃತಿ ಕಾರ್ಯಕ್ರಮಗಳು
8) ಕರೆಕ್ಟೀವ್ ಸರ್ಜರಿ
9) ಪೂರ್ಣ ಅಂಧ ಮಕ್ಕಳಿಗೆ ಬ್ರೈಲ್ ಕಿಟ್ ವಿತರಣೆ
10) ಪೂರ್ಣ ಅಂಧ ಮಕ್ಕಳಿಗೆ ಕಂಪ್ಯೂಟರ್ ಆಧಾರಿತ ಕಲಿಕೆಗೆ ಅಗತ್ಯವಾದ ಸಾಪ್ಟ್ ವೇರ್ ಅಳವಡಿಕೆ
11) ಸಾರಿಗೆ ಭತ್ಯೆ
12) ಬ್ಲಾಕ್ ಸಂಪನ್ಮೂಲ ಕೇಂದ್ರಕ್ಕೆ ತರಬೇತಿಗಾಗಿ ಬರುವ ಮಕ್ಕಳೀಗೆ ಪ್ರಯಾಣ ಭತ್ಯೆ
13) ಶಾಲೆಗಳಿಗೆ ರಾಂಪ್ಸ್ ಮತ್ತು ವಿಶೇಷ ಶೌಚಾಲಯಗಳ ವ್ಯವಸ್ಥೆ
14) ಸಮನ್ವಯ ಶಿಕ್ಷಣ ಅನುಷ್ಠಾನಕ್ಕೆ ವಿಶೇಷ ಶಿಕ್ಷಕರ ನಿಯೋಜನೆ
15) ಮಕ್ಕಳೀಗೆ ಸಾಂಸ್ಕ್ರತಿಕ ಕ್ರೀಢಾ ಸ್ಪರ್ದೆಗಳು ಇತ್ಯಾದಿ.
ಗ್ರಂಥಾಲಯ –
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಹಾಗೂ ಸ.ಹಿ.ಪ್ರಾ.ಶಾಲೆಗಳಲ್ಲಿ ಗ್ರಂಥಾಲಯದ ಅಭಿವೃದ್ದಿಗಾಗಿ ಅಗತ್ಯ ಪುಸ್ತಕಗಳನ್ನು ಖರೀದಿಸಲು ಅವಕಾಶವಿದ್ದು, ಇದರಿಂದ ಮಕ್ಕಳಲ್ಲಿ ಓದುವ ಹವ್ಯಾಸ ಹೆಚ್ಚಿಸಲು ಸಹಕಾರಿಯಾಗುತ್ತದೆ.
ಹೆಣ್ಣು ಮಕ್ಕಳ ಶೌಚಾಲಯ –
ಸರ್ಕಾರಿ ಶಾಲೆಗಳಲ್ಲಿ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಲು ಅವಕಾಶವಿರುತ್ತದೆ.
ಮುಖ್ಯ ಶಿಕ್ಷಕರ ಕೊಠಡಿ –
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮುಖ್ಯ ಶಿಕ್ಷಕರ ಕೊಠಡಿ ಲಭ್ಯವಿಲ್ಲದೆ ಕಡೆ ಒಂದೊಂದು ಮುಖ್ಯ ಶಿಕ್ಷಕರ ಕೊಠಡಿಯನ್ನು ನಿರ್ಮಿಸಲಾಗುವುದು.
ಬೆಂಕಿ ನಂದಿಸುವ ಉಪಕರಣ –
ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಅಕ್ಷರ ದಾಸೋಹ ಜಾರಿಯಲ್ಲಿರುವುದರಿಂದ ಯಾವುದೇ ಅಗ್ನಿ ದುರಂತಗಳು, ಸಂಭವಿಸದಿರಲೆಂದು ಮುನ್ನೆಚ್ಚರಿಕೆಗಾಗಿ ಬೆಂಕಿ ನಂದಿಸುವ ಉಪಕರಣ ಅಳವಡಿಸಲಾಗಿದೆ.
ಮೇಜರ್ ರಿಪೇರಿ –
10 ವರ್ಷಕ್ಕಿಂತ ಹಿಂದೆ ನಿರ್ಮಿಸಿರುವ ದುರಸ್ಥಿ ಅಗತ್ಯವಿರುವ ಶಾಲಾ ಕೊಠಡಿಗಳನ್ನು ರಿಪೇರಿ ಮಾಡಲು ಅವಕಾಶವಿರುತ್ತದೆ.
ಕಿ.ಪ್ರಾ.ಶಾಲೆ ಮತ್ತು ಹಿ.ಪ್ರಾ.ಶಾಲೆಗಳಿಗೆ ದುರಸ್ಥಿ ಹಾಗೂ ನಿರ್ವಹಣೆ ಅನುದಾನ –
ಸ.ಕಿ.ಪ್ರಾ.ಶಾಲೆಗಳಿಗೆ 3ಕ್ಕಿಂತ ಕಡಿಮೆ ಬೋಧನಾ ಕೊಠಡಿಗಳಿದ್ದರೆ ರೂ.5000/-, ಸ.ಕಿ.ಪ್ರಾ.ಶಾಲೆಗಳಿಗೆ 3ಕ್ಕಿಂತ ಹೆಚ್ಚು ಬೋಧನಾ ಕೊಠಡಿಗಳಿದ್ದರೆ ರೂ.10000/-, ಸ.ಹಿ.ಪ್ರಾ.ಶಾಲೆಗಳಿಗೆ 6ಕ್ಕಿಂತ ಕಡಿಮೆ ಬೋಧನಾ ಕೊಠಡಿಗಳಿದ್ದರೆ ರೂ.10000/- ಸ.ಹಿ.ಪ್ರಾ.ಶಾಲೆಗಳಿಗೆ 6ಕ್ಕಿಂತ ಹೆಚ್ಚು ಬೋಧನಾ ಕೊಠಡಡಿಗಳಿದ್ದರೆ ರೂ.20000/- ದಂತೆ ಎಸ್.ಡಿ.ಎಂ.ಸಿಗಳಿಗೆ ಅನುದಾನ ಬಿಡುಗಡೆ ಮಾಡಲಾಗುವುದು. ಈ ಅನುದಾನವನ್ನು ಶಾಲೆಯಲ್ಲಿ ಕಿಟಕಿ ಬಾಗಿಲು ನೆಲ ಇವುಗಳ ಸಣ್ಣ ಪುಟ್ಟ ರಿಪೇರಿ ಸುಣ್ಣ ಬಣ್ಣ ಶೌಚಾಲಯ ಹಾಗೂ ಕುಡಿಯುವ ನೀರಿನ ನಿರ್ವಹಣೆಗಾಗಿ ಬಳಸಲಾಗುವುದು.
ಪ್ರಾಥಮಿಕ ಶಾಲಾ ಅನುದಾನ –
ಸರ್ಕಾರಿ ಹಾಗೂ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಗಳಿಗೆ ರೂ.5000 ಹಾಗೂ ಸರ್ಕಾರಿ ಹಾಗೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗಳಿಗೆ ರೂ.12000/- ಹಾಗೂ 6 ಮತ್ತು 7ನೇ ತರಗತಿ ಹೊಂದಿರುವ ಹಿರಿಯ ಪ್ರಾಥಮಿಕ ಶಾಲೆಗಳಿಗೆ ರೂ.7000/- ಎಸ್.ಡಿ.ಎಂ.ಸಿಗಳಿಗೆ ಅನುದಾನ ಬಿಡುಗಡೆ ಮಾಡಲಾಗುವುದು. ಈ ಅನುದಾನವನ್ನು ಶಾಲೆಗಳಲ್ಲಿ ಸುಣ್ಣ ಬಣ್ಣ ರಿಜಿಸ್ಟರ್ ಗಳ ಖರೀದಿ ಮತ್ತು ಶಾಲಾ ಸಾದಿಲ್ವಾರಿಗಾಗಿ ಬಳಸಲಾಗುವುದು.
ಪೂರ್ವ ಪ್ರಾಥಮಿಕ ಶಿಕ್ಷಣ –
ಅಂಗನವಾಡಿ ಮಕ್ಕಳಿಗೆ ಟಿ.ಎಲ್.ಎಂ ಕಿಟ್ಸ್ ಸರಬರಾಜು (ಆಟದ ಸಾಮಗ್ರಿಗಳು) ಹಾಗೂ ಅಂಗನವಾಡಿ ಶಿಕ್ಷಕಿಯರಿಗೆ ತರಬೇತಿ ನೀಡಲಾಗುವುದು.
ಚಿಣ್ಣರ ಜಿಲ್ಲಾ ದರ್ಶನ –
ಸರ್ಕಾರಿ ಶಾಲೆಗಳಲ್ಲಿ 5-7ನೇ ತರಗತಿಯಲ್ಲಿ ಓದುತ್ತಿರುವ 25% ಪ್ರತಿಭಾವಂತ ಮಕ್ಕಳು ಹಾಗೂ 75% ಎಸ್.ಸಿ/ಎಸ್.ಟಿ ಮಕ್ಕಳಿಗೆ 2 ದಿನಗಳ ಉಚಿತ ಶೈಕ್ಷಣಿಕ ಪ್ರವಾಸವನ್ನು ಅನುಷ್ಠಾನಗೊಳಿಸಲಾಗುತ್ತದೆ.
ಕಂಪ್ಯೂಟರ್ ಆಧಾರಿತ ಶಿಕ್ಷಣ –
ಪ್ರತಿ ವರ್ಷ ಆಯ್ದ 10 ಹಿ.ಪ್ರಾ.ಶಾಲೆಗಳಲ್ಲಿ ಕಂಪ್ಯೂಟರ್ ಆಧಾರಿತ ಕಲಿಕೆಗಾಗಿ ಪ್ರತಿ ಶಾಲೆಗೆ 5 ರಂತೆ ಕಂಪ್ಯೂಟರ್ ಗಳನ್ನು ಅಳವಡಿಸಲಾಗುವುದು. ಇದರಲ್ಲಿ ಪ್ರತಿ ತರಗತಿವಾರು, ವಿಷಯವಾರು, ಪಠ್ಯಕ್ಕೆ ಅನುಗುಣವಾಗಿ ಸಿದ್ದಪಡಿಸಿರುವ ಸಿಡಿಗಳಿದ್ದು, ಮಕ್ಕಳು ಸ್ವ-ಕಲಿಕೆ ಮಾಡಲು ಹಾಗೂ ಪ್ರಭುತ್ವ ಮಟ್ಟದ ಕಲಿಕೆಗೆ ಅವಕಾಶ ನೀಡಲಾಗಿದೆ.
ಅಲ್ಪ ಸಂಖ್ಯಾತ ಮಕ್ಕಳ ಶಿಕ್ಷಣ –
ಅಲ್ಪ ಸಂಖ್ಯಾತ ಮಕ್ಕಳ ಶಿಕ್ಷಣಕ್ಕಾಗಿ ಈ ಕೆಳಕಂಡ ಚಟುವಟಿಕೆಗಳನ್ನು ನಡೆಸಲಾಗುವುದು.
1) ಮುಸ್ಲಿಂ ಮಕ್ಕಳ ಪೋಷಕರಿಗೆ ಜಾಗೃತಿ ಶಿಬಿರಿ,
2) ಮುಸ್ಲಿಂ ಧಾರ್ಮಿಕ ಮತ್ತು ಸಮುದಾಯ ಮುಖಂಡರ ಜಾಗೃತಿ ಶಿಭಿರ.
3) 7ನೇತರಗತಿ ಮಕ್ಕಳಿಗೆ ವಿಚಾರಗೋಷ್ಠಿ.
4) ಬ್ಲಾಕುಗಳಿಗೆ ಸಾಹಿತ್ಯ ಮೇಳಗಳು, ವಿಜ್ಞಾನ ಮೇಳಗಳು.
5) ಕ್ಷೇತ್ರ ಅಧ್ಯಯನ.
6) ಶಿಕ್ಷಕರಿಗೆ ವಿಚಾರಗೋಷ್ಠಿ
7) ಉರ್ದು ಗ್ರಂಥಾಲಯ ಪುಸ್ತಕ.
ನಗರಗಳಲ್ಲಿ ಅವಕಾಶ ವಂಚಿತ ಮಕ್ಕಳ ಶಿಕ್ಷಣ –
ನಗರ ಪ್ರದೇಶದಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಸೇರಿಸಿ, ಶೇ 75% ಹಾಜರಾತಿ, ಬಿ ಶ್ರೇಣಿ ಕಲಿಕೆಯಾದ ಮಕ್ಕಳಿಗೆ ವಾರ್ಷಿಕವಾಗಿ ರೂ.2000/- ಅನುದಾನ ನೀಡಲಾಗುವುದು.
ಹದಿ ಹರೆಯದ ಹೆಣ್ಣು ಮಕ್ಕಳ ಜಾಗೃತಿ ಶಿಭಿರ –
6, 7 ಮತ್ತು 8ನೇ ತರಗತಿಯಲ್ಲಿ ಓದುತ್ತಿರುವ ಹೆಣ್ಣು ಮಕ್ಕಳಿಗೆ ಹದಿ-ಹರೆಯದ ಸಮಸ್ಯೆ ಮತ್ತು ಪರಿಹಾರಗಳ ಬಗ್ಗೆ, ಆರೋಗ್ಯ ಶುಚಿತ್ವ, ರೋಗಿಗಳ ತಡೆಕಟ್ಟುವಿಕೆ, ಮೂಢನಂಭಿಕೆ, ವೈಜ್ಞಾನಿಕ ಚಿಂತನೆಗಳ ಬಗ್ಗೆ 3 ದಿನಗಳ ಸನಿವಾಸ ತರಬೇತಿಯನ್ನು ನೀಡಲಾಗುವುದು.
ಎಸ್.ಡಿ.ಎಂ.ಸಿ ತರಬೇತಿ –
ಸರ್ವ ಶಿಕ್ಷಣ ಅಭಿಯಾನಕ್ಕೆ ಸಂಬಮಧಿಸಿದಂತೆ ಎಸ್.ಡಿ.ಎಂ.ಸಿಗೆ 3 ದಿನಗಳ ವಸತಿಯುತ ತರಬೇತಿ, ಎಸ್.ಡಿ.ಎಂ.ಸಿಗೆ 3 ದಿನಗಳ ವಸತಿರಹಿತ ತರಬೇತಿ, ಸ್ಥಳೀಯ ಸಂಸ್ಥೆಗಳ ಸದಸ್ಯರಿಗೆ 3 ದಿನದ ವಸತಿಯುತ ತರಬೇತಿ ನೀಡಲಾಗುವುದು. ಇದರಿಂದ ಎಸ್.ಡಿ.ಎಂ.ಸಿಯವರು ಶಾಲೆಗಳ ಮೇಲ್ವಿಚಾರಣೆ ಮಾಡಲು ಸಹಕಾರಿಯಾಗಿರುತ್ತದೆ
No comments:
Post a Comment