ಉದ್ಯೋಗ ನೀಡುವ ಜವಾಬ್ದಾರಿ ಪೂರ್ಣ ಸರಕಾರದ್ದೇ ಎಂದು ನಂಬಿರುವವರು ನಾವು. ‘ನಿರುದ್ಯೋಗಕ್ಕೆ ಯಾವ ಸರಕಾರ ಹೊಣೆ’? ಎಂಬ ಲೇಖನ ಬರೆದಲ್ಲಿ, ಬಹಳಷ್ಟು ಜನರಿಗೆ ಸೂಕ್ತವೆನಿಸೀತು. ಒಂದಿಷ್ಟು ಪರ-ವಿರೋಧಿ ಚರ್ಚೆಯೂ ನಡೆಯಬಹುದು. ಸೇರಿದಂತೆ ಹಲವಾರು ಸಮಸ್ಯೆಗಳನ್ನು ಯಾವ ಸರಕಾರವೂ ಪೂರ್ತಿ ಪರಿಹರಿಸಲಾರದು. ಇದಕ್ಕೆ ಕಾಲವೇ ಸಾಕ್ಷಿಯಾಗಿದೆ. ನಿರುದ್ಯೋಗ ಸಮಸ್ಯೆ 80ರ ದಶಕದಿಂದಲೂ ಇದೆ. ವರ್ಷದಿಂದ ವರ್ಷಕ್ಕೆ ತೀವ್ರಗೊಳ್ಳುತ್ತಲೇ ಇದೆ.
ಸಮಸ್ಯೆ ತೀವ್ರವಾದ 80ರ ದಶಕದ ಒಂದು ಸಂದರ್ಭದಲ್ಲಿ ಸರಕಾರ ಸ್ಟೈಪಂಡರಿ ಆಧಾರದ ಮೇಲೆ ತಾತ್ಕಾಲಿಕ ನೌಕರಿ ಕೊಟ್ಟು ಒಂದಿಷ್ಟು ಹೆಚ್ಚಿನ ಸಮಸ್ಯೆ ತಂದುಕೊಂಡಿದ್ದೂ ಆಯಿತು. 2000ರ ಅಸು-ಪಾಸಿನಲ್ಲಾದ ಮಾಹಿತಿ ತಂತ್ರಜ್ಞಾನ ಕ್ರಾಂತಿ ಸಾಕಷ್ಟು ಭರವಸೆ ಮೂಡಿಸಿದರೂ, ನಂತರದ ದಿನಗಳಲ್ಲಿ ಯುವಕರಲ್ಲಿ ಕೆಲಸದ ಹೊಸ ರೀತಿಯ, ಅತಿಯಾದ ನಿರೀಕ್ಷೆ ಗಳನ್ನು ಹುಟ್ಟು ಹಾಕಿತು. ಬಹುರಾಷ್ಟ್ರೀಯ ಕಂಪನಿಗಳು ಕೊಡುವ ಸಂಬಳ ಹಾಗೂ ಕೆಲಸದ ವಾತಾವರಣದಿಂದ ಅದಕ್ಕೆ ಸಮಾಜದಲ್ಲಿ ಮಾನ್ಯತೆ ಹೆಚ್ಚೇ ದೊರಕಿತು. ಇದರಿಂದ ಬೇರೆ ಕೆಲಸಗಳು ಆಕರ್ಷಣೆ ಕಳೆದುಕೊಡವು. ಸಣ್ಣ ಪುಟ್ಟ ಕಂಪನಿಗಳಿಗೆ ಕೆಲಸಗಾರರ ಕೊರತೆ ಎದುರಾಯಿತು. ಗ್ರಾಮೀಣ ಯುವಕರು ವ್ಯವಸಾಯ ನಿರ್ಲಕ್ಷಿಸಿದರು ಹಾಗೂ ಸ್ವ ಉದ್ಯೊಗಿಗಳು ಕೂಡ ಐಟಿ ಉದ್ಯೊಗಕ್ಕಾಗಿ ನಿರುದ್ಯೋಗದ ಹಣೆಪಟ್ಟಿ ಅಂಟಿಸಿಕೊಂಡರು! ಇವರಲ್ಲನೇಕರು ‘ಕಾಲ್ ಸೆಂಟರ್’ ತರಬೇತಿ ಪಡೆದು ‘ಟೆಲಿ ಮೂಲಕ ಮಾರಾಟಗಾರರಾದರು. ಹೀಗೆ ಎನೆಲ್ಲ ಬೆಳವಣಿಗೆಯ ನಂತರವೂ ನಿರುದ್ಯೊಗ ಸಮಸ್ಯೆ ಇನ್ನೂ ನಮ್ಮ ಮುಂದಿದೆ. ಸರಕಾರದ ಲೆಕ್ಕದ ಪ್ರಕಾರ ಇದರ ಪ್ರಮಾಣ ಸುಮಾರು 3 ಕೋಟಿ. ವಾಸ್ತವ ಚಿತ್ರ ಬೇರೆಯೇ ಇದೆ.
ಈ ಸಮಸ್ಯೆ ಬರುವ ದಿನಗಳಲ್ಲಿ ಇನ್ನಷ್ಟು ಜಟಿಲವಾಗಲಿದೆ. ಇದರಲ್ಲಿ ಸಮಾಜದ ಪಾತ್ರವೆಷ್ಟು ಎಂಬ ಚಿಂತನೆ ನಡೆಸಬೇಕಿದೆ. ಹಲವಾರು ಅನುಕೂಲಗಳಿರುವ ಸರಕಾರಿ ಕೆಲಸದ ಪ್ರಮುಖ ಆಕರ್ಷಣೆಗಳಲ್ಲೊಂದು ಸಮಾಜದಲ್ಲಿ ಅದಕ್ಕಿರುವ ಗೌರವ. ಖಾಸಗಿ ಕೆಲಸಗಳಲ್ಲಿ ಉತ್ತಮ ವೇತನವಿದ್ದರೂ, ಅಸುರಕ್ಷಿತತೆ, ಹೆಚ್ಚು. ಇದರ ಪರಿಣಾಮ ಕೌಟುಂಬಿಕ ಜೀವನದಮೇಲಾಗುವ ಸಾಧ್ಯತೆ ಇಲ್ಲದಿಲ್ಲ. ಇಷ್ಟಾಗಿಯೂ ಸರಕಾರಿ ಹಾಗೂ ಉತ್ತಮವೆನಿಸುವ ಖಾಸಗಿ ಕೆಲಸಗಳು ಒಟ್ಟಾರೆ ದೇಶದ ಜನಸಂಖ್ಯೆಯ ಶೇ.5ರಷ್ಟು ದಾಟುವುದಿಲ್ಲ.
ಕೆಲಸದ ಆಯ್ಕೆಯಲ್ಲಿ ಬಹುತೇಕರು ಪ್ರಮುಖವಾಗಿ ಗಮನಿಸುವುದು ಆರ್ಥಿಕ ಲಾಭ ಹಾಗೂ ಸಮಾಜದಲ್ಲಿ ಅದಕ್ಕಿರುವ ಗೌರವ. ಶೈಕ್ಷಣಿಕ ವಿದ್ಯಾರ್ಹತೆ ಆಧಾರಿತ ಉದ್ಯೋಗಗಳಿಗೆಲ್ಲ ಸಮಾಜದಲ್ಲಿ ಮಾನ್ಯತೆ ಹೆಚ್ಚು. ಇದು ಬ್ರಿಟಿಷ್ ಸಾಮ್ರಾಜ್ಯದ ಬಳುವಳಿ! ಅಲ್ಪ-ಸ್ವಲ್ಪ ಓದಿದವರಿಗೂ ಬ್ರಿಟಿಷ್ ಸರಕಾರ ಗುಮಾಸ್ತನ ಕೆಲಸ ಕೊಡುತಿತ್ತು. ಇವರೆಲ್ಲ ಬ್ರಿಟಿಷ್ ಜತೆ ಸೇರಿ ಭಾರತೀಯರ ಮೇಲೆ ಸವಾರಿ ನಡೆಸುತಿದ್ದರು ಹಾಗೇ ಹೆದರಿಸಿ ಗೌರವ ಪಡೆಯುತ್ತಿದ್ದರು.
ಸಾಂಪ್ರದಾಯಿಕ ಶಿಕ್ಷಣ ಹೊಂದದೇ ಕೌಶಲಾಧಾರಿತವಾಗಿ ಅಥವಾ ದೈಹಿಕ ಶ್ರಮದ ಆಧಾರದ ಮೇಲೆ ಜೀವನ ನಡೆಸುತ್ತಿರುವವರ ಸಂಖ್ಯೆಯೇ ಅಂದಿಗೂ, ಇಂದಿಗೂ ನಮ್ಮ ದೇಶದಲ್ಲಿ ಹೆಚ್ಚು. ಇವರಲ್ಲಿ ಅನೇಕರು ಈಗ ಪದವಿ, ಇತರೆ ವಿದ್ಯಾರ್ಹತೆ ಹೊಂದಿದ್ದರೂ, ಆ ಕೆಲಸಕ್ಕೆ ವಿದ್ಯೆ ಅನವಶ್ಯವಾದ್ದರಿಂದ ಅವರಿಗೆ ಸಿಗುತ್ತಿರುವ ಸಾಮಾಜಿಕ ಗೌರವ ಕಡಿಮೆ. ಹೆಚ್ಚಿನ ಸರಕಾರಿ ಕ್ಲರ್ಕ್ ಕೆಲಸವೂ ಸೇರಿದಂತೆ ಅನೇಕ ಕೌಶಲ್ಯ ಅವಶ್ಯವಿಲ್ಲದಿದ್ದರೂ ಗೌರವ ಹೆಚ್ಚು.
ಯಾವುದೇ ಶೈಕ್ಷಣಿಕ ಪದವಿ ಕೆಲಸದ ಖಾತ್ರಿ ಒದಗಿಸಲಿಕ್ಕಾಗಿ ಇರುವುದಲ್ಲ. ವಾಸ್ತವವಾಗಿ ಇಂದು ಕಾಲೇಜುಗಳಿಂದ ಹೊರಬರುತ್ತಿರುವ ಪದವೀಧರರಲ್ಲಿ ಶೇ.95ರಷ್ಟು ಜನರು ನೇರವಾಗಿ ಯಾವುದೇ ಕೆಲಸ ನಿರ್ವಹಿಸುವ ಸಾಮರ್ಥ್ಯ ಹೊಂದಿಲ್ಲ. ವಿದ್ಯೆ ನಿಮಗೆ ಪ್ರಾಪಂಚಿಕ ಜ್ಞಾನ ನೀಡಲು, ಶೋಷಣೆಯಿಂದ ತಡೆಯಲು ಅವಶ್ಯಕ.
ದುಡಿಮೆಗೆ ಹಲವಾರು ದಾರಿಗಳಿದ್ದರೂ ಪದವೀಧರರು ಕೆಲವೇ ವರ್ಗದ ಕೆಲಸಗಳಿಗಾಗಿ ಪ್ರಯತ್ನಿಸುವುದು ಈ ಸಮಾಜ ನೀಡುವ ಮನ್ನಣೆಗಾಗಿ. ಆದರೆ ನಮ್ಮ ದಿನನಿತ್ಯದ ಅವಶ್ಯಕತೆ ಪೂರೈಸುವ, ಜಿ.ಡಿ.ಪಿ ಗೂ ಕಾರಣವಾಗುವ, ನಿರುದ್ಯೋಗದಂತಹ ಸಾಮಾಜಿಕ ಸಮಸ್ಯೆಯನ್ನು ಕಡಿಮೆಮಾಡುವ ಅನೇಕ ಉದ್ಯೊಗಗಳಿಗೆ ನಾವು ಕೊಡುತ್ತಿರುವ ಗೌರವ ತೀರಾ ಕಡಿಮೆ.
ಇನ್ನು ಕೃಷಿ ವೃತ್ತಿಗೆ ಸಂಬಂಧಪಟ್ಟಂತೆ ಕ್ರಾಂತಿಕಾರಕ ಬದಲಾವಣೆಯೇ ಆಗಬೇಕಿದೆ. ಹಸಿವು, ರುಚಿಗಾಗಿ, ಸಾಮಾಜಿಕ ಕಾರ್ಯಕ್ರಮದ ಭಾಗವಾಗಿ ಬಹುರೂಪದಲ್ಲಿ ಆಹಾರ ವಿಜೃಂಭಿಸಿದರೂ, ಕೃಷಿಕ ವೃತ್ತಿಗೆ ಸಿಗುತ್ತಿರುವ ಪ್ರಾಮುಖ್ಯತೆ ಎಷ್ಟು? ಕೃಷಿಯೂ ಸೇರಿದಂತೆ ಅನೇಕ ಗ್ರಾಮೊದ್ಯೋಗಗಳು ಲಾಭದಾಯಕವಾಗಿ ಮಾಡಲು ಸಾಧ್ಯವಿದ್ದರೂ ನಗರದಲ್ಲಿ ಕೆಲಸ ಮಾಡುವ ಯುವಕರಿಗಿರುವ ಬೆಲೆಯೇ ಬೇರೆ.
ಇನ್ನು ಕೃಷಿ ವೃತ್ತಿಗೆ ಸಂಬಂಧಪಟ್ಟಂತೆ ಕ್ರಾಂತಿಕಾರಕ ಬದಲಾವಣೆಯೇ ಆಗಬೇಕಿದೆ. ಹಸಿವು, ರುಚಿಗಾಗಿ, ಸಾಮಾಜಿಕ ಕಾರ್ಯಕ್ರಮದ ಭಾಗವಾಗಿ ಬಹುರೂಪದಲ್ಲಿ ಆಹಾರ ವಿಜೃಂಭಿಸಿದರೂ, ಕೃಷಿಕ ವೃತ್ತಿಗೆ ಸಿಗುತ್ತಿರುವ ಪ್ರಾಮುಖ್ಯತೆ ಎಷ್ಟು? ಕೃಷಿಯೂ ಸೇರಿದಂತೆ ಅನೇಕ ಗ್ರಾಮೊದ್ಯೋಗಗಳು ಲಾಭದಾಯಕವಾಗಿ ಮಾಡಲು ಸಾಧ್ಯವಿದ್ದರೂ ನಗರದಲ್ಲಿ ಕೆಲಸ ಮಾಡುವ ಯುವಕರಿಗಿರುವ ಬೆಲೆಯೇ ಬೇರೆ.
ಈ Dignity of labor ಬಗ್ಗೆ ಮಹಾತ್ಮ ಗಾಂಧಿಯವರು ಸ್ವತಂತ್ರಪೂರ್ವದಲ್ಲೇ ದನಿ ಎತ್ತಿದ್ದರು. ಆದಿನಗಳಲ್ಲಿ ‘ವೃತ್ತಿ’, ವಿದ್ಯಾರ್ಹತೆಗಿಂತ ಜಾತಿ ಆಧಾರಿತವಾಗಿರುತ್ತಿದ್ದುದೇ ಹೆಚ್ಚು. ಆಗ ಅದು ವೃತ್ತಿಗಿಂತ ಜಾತಿಗೆ ನೀಡುವ ಪರೋಕ್ಷ ಗೌರವವಾಗಿತ್ತು. ಇಂದು ಕಾಲ ಸಾಕಷ್ಟು ಬದಲಾಗಿ ವೃತ್ತಿ, ಶೈಕ್ಷಣಿಕ ಅರ್ಹತೆ ಪ್ರತಿನಿಧಿಸುತಿದ್ದು , ಅದೇ ಸಮಸ್ಯೆ ಬೇರೆ ಸ್ವರೂಪ ಹಾಗೂ ಕಾರಣ ಹೊಂದಿದೆ.
ರೈತರು, ತರಕಾರಿ ಮಾರುವವರು, ದುರಸ್ತಿಗಾರರು, ಸ್ವ ಉದ್ಯೊಗಿಗಳು, ಆಟೋ ಚಾಲಕರು, ಮೆಕ್ಯಾನಿಕ್, ಸಣ್ಣ ಗುತ್ತಿಗೆದಾರರು, ಕ್ಯಾಂಟೀನ್ ನಡೆಸುವವರು ಹೀಗೆ ಉದ್ಯೊಗ ನಡೆಸುತ್ತಿರುವವರಲ್ಲಿ ಇಂದು ವಿದ್ಯಾವಂತರಿದ್ದಾರೆ. ಇವರ ಆದಾಯವೂ ಚೆನ್ನಾಗಿಯೇ ಇದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾವಂತರು ಈ ರೀತಿಯ ಕೆಲಸಗಳಿಗೆ ಬರಲಿದ್ದಾರೆ. ಇವರನ್ನೆಲ್ಲ ಸಮಾಜ ನೋಡುವ ದೃಷ್ಟಿ ಬದಲಾಗದಿದ್ದಲ್ಲಿ, ಸಮಾಜದಲ್ಲಿ ಉಳಿದ ವೃತ್ತಿಯೆಂತೆಯೇ ಮಾನ್ಯತೆ ಗೌರವ ಸಿಗದಿದ್ದಲ್ಲಿ,ನಿರುದ್ಯೊಗ ಸಮಸ್ಯೆ ಯಾವ ಮಟ್ಟ ತಲುಪ ಬಹುದೆಂದು ಊಹಿಸಬಹುದು. ಇದರೊಂದಿಗೆ ಈಗಲೇ ದುಸ್ತರವಾಗಿರುವ ಅನೇಕ ಸೇವೆ ಗಳು ಅಲಭ್ಯ ವೂ ಆಗಬಹುದು. ಇದರಿಂದ ಜೀವನ ವೆಚ್ಚ ವೂ ಹೆಚ್ಚಬಹುದು. ವಿದ್ಯಾವಂತ ನಿರುದ್ಯೋಗಿಗಳು ಕಂಟಕವಾಗಬಹುದು.
ಇದಕ್ಕೆ ನಾವೇನು ಮಾಡಬಹುದು? ಯಾವುದೇ ವೃತ್ತಿಯಲ್ಲಿರಲಿ ಅವರನ್ನು ಇತರರಂತೆಯೇ ಗೌರವಿಸಿ. ಇದರಿಂದ ಅವರಲ್ಲೂ ಜವಾಬ್ದಾರಿ ಪ್ರಜ್ಞೆ ಹೆಚ್ಚುತ್ತದೆ.ಅವರ ಸಮಯವೂ ಅಮೂಲ್ಯ. ಹಣಕಾಸಿನ ವಿಚಾರದಲ್ಲಿದಲ್ಲಿ ಅತೀ ಚೌಕಾಸಿ ಬೇಡ. ಸ್ಪರ್ಧಾತ್ಮಕ ಜಗತ್ತು, ದರ ಮತ್ತು ಸೇವಾ ದರ್ಜೆಯನ್ನು ನಿಯಂತ್ರಿಸುತ್ತದೆ. ನಿರಾಕರಿಸುವ ಸ್ವಾತಂತ್ರ್ಯ ನಿಮಗಿದ್ದೇ ಇದೆ. ಪಿಜ್ಜಾ ಮೇಲಿನ ಕೆಲ ಗ್ರಾಮ್‌ಗಳ ‘ವೆಜಿಟೆಬಲ್ ಟಾಪಿಂಗ್’ಗಾಗಿ ನೂರಾರು ರೂಪಾಯಿ ತೆರುವ ನಮಗೆ , ಬಿಸಿಲಿನಲ್ಲಿ ದಿನವಿಡೀ ತರಕಾರಿ ಮಾರುವವರೊಡನೆ ಚೌಕಾಸಿ ಮಾಡುವ ಹಲವು ಬಾರಿ ಅನೇಕ ಸೇವೆಗಳು ನಮಗೆ ದುಬಾರಿ ಎನಿಸಿದರೂ, ಅದು ಅವರಿಗೆ ಜೀವನ ನಡೆಸಲು, ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಲು ಅವಶ್ಯವಿರಬಹುದು. ಅಲ್ಲದೇ ಆದಾಯದ ತೀವ್ರ ಅನಿಶ್ಚಿತತೆ ಅವರಿಗಿದೆ. ಅನಾರೋಗ್ಯ ಇನ್ನಿತರ ಅವಗಡಗಳು ಅವರ ಆದಾಯದ ಮೂಲವನ್ನೇ ನಾಶಗೊಳಿಸುವ ಸಾಧ್ಯತೆ ಇದ್ದೇ ಇದೆ. ಇದು ಅಪರೂಪದವಾದರೂ, ಇಂಥ ಸಾಧ್ಯತೆ ಬಗ್ಗೆ ಎಚ್ಚರಿಕೆಯಿಂದ ಇರಬೇಕಿರುತ್ತದೆ.
ಇನ್ನು ಅನೇಕ ಈ ರೀತಿಯ ವೃತ್ತಿಗಳನ್ನು ನಡೆಸುತ್ತಿರುವವರಿಗೂ ಕಿವಿ ಮಾತು ಹೇಳಲೇಬೇಕು. ಮೊದಲು ನಿಮ್ಮ ನೀವು ಗೌರವಿಸಿ. ಕೆಲಸವನ್ನು ಶ್ರದ್ಧೆಯಿಂದ ಮಾಡಿ. ಕೆಲಸದ ಸ್ಥಳ ಹಾಗೂ ವೈಯಕ್ತಿಕ ಸ್ವಚ್ಛತೆ ಹಾಗೂ ಶಿಸ್ತು ಇದನ್ನು ಸಮಾಜ ನಿರೀಕ್ಷಿಸುತ್ತದೆ. ತಮ್ಮದೇ ಸಮವಸ್ತ್ರವನ್ನು ಅನೇಕ ಆಟೊಚಾಲಕರು ಇಟ್ಟುಕೊಂಡಿರುವ ಹಾಗೂ ಧರಿಸುವ ರೀತಿ ನೋಡಿ ಬೇಸರಪಟ್ಟಿದ್ದೇನೆ. ಇದು ತರಕಾರಿ ಮಾರುವವರ, ಕ್ಯಾಂಟೀನ್ ನಡೆಸುವವರು, ಎಲೆಕ್ಟ್ರಿಷಿಯನ್.. ಹೀಗೆ ಅನೇಕರಿಗೆ ಅನ್ವಯಿಸುತ್ತದೆ. ಸಭ್ಯ ಮಾತು, ವಿನಯ ಇವು ನಿಮ್ಮ ಬಗ್ಗೆ ವಿಶ್ವಾಸವನ್ನು ಹೆಚ್ಚಿಸುತ್ತವೆ. ವೃತ್ತಿಯಲ್ಲಿ ಲಾಭ ಮಾಡುವುದು ತಪ್ಪಲ್ಲ, ಮೋಸ ಮಾಡುವುದು ತಪ್ಪು. ಅಥವಾ ಯಾವುದೇ ಗುರುತಿನ ಪತ್ರ ಇದ್ದಲ್ಲಿ ತಪ್ಪದೇ ಪ್ರದರ್ಶಿಸಿ. ದರ, ಸೇವೆ, ಸಮಯದಲ್ಲಿ ಬದ್ಧತೆ ಮುಖ್ಯ. ವಿದ್ಯಾವಂತರು ಮೊಬೈಲ್ ಇತರ ತಂತ್ರಜ್ಞಾನ ಬಳಸಬಹುದು. ಯಾವುದೇ ಕೆಲಸವನ್ನು ನಿರ್ವಹಿಸುವ ರೀತಿಯಿಂದ ಮೌಲ್ಯವನ್ನು ಹೆಚ್ಚಿಸಬಹುದು. ಅನೇಕ ಬಹುರಾಷ್ಟ್ರೀಯ ಕಂಪನಿಗಳು ಮಾಡುತ್ತಿರುವುದು ಇದನ್ನೇ. ರಿಲಯನ್‌ಸ್ ಕಂಪನಿ ತರಕಾರಿ ಮಾರುತ್ತಿಲ್ಲವೆ?
ಸಮಾಜಕ್ಕಾಗಿ ವ್ಯಕ್ತಿ ಹಾಗೂ ವ್ಯಕ್ತಿ ಸಮಾಜಕ್ಕಾಗಿ ಎಂಬ ಭಾವನೆಯಲ್ಲಿ ಪರಸ್ಪರ ಸಹಕಾರದಲ್ಲಿ ನಡೆದಲ್ಲಿ, ನೂರಾರು ಉದ್ಯೊಗಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲಿದೆ. ವಿದ್ಯಾವಂತರ ಆಗಮನದಿಂದ ಈ ರೀತಿಯ ಉದ್ಯೊಗಗಳು ಹೊಸ ರೂಪ ಪಡೆಯಲಿದೆ. ಪ್ರೋತ್ಸಾಹಿಸುವ ಕೆಲಸ ಸಮಾಜದಿಂದ ಆಗಬೇಕು. ವಿದ್ಯಾವಂತರಾಗಿ ಈ ಕೆಲಸ ಮಾಡಬೇಕೆ? ಎಂಬ ಭಾವನೆಯಿಂದ ಹೊರಬರುವ ಅನಿವಾರ್ಯತೆ ಎದುರಾಗಲಿದೆ. ಸಮಾಜದ ದೃಷ್ಟಿ ಕೋನ ಬದಲಾವಣೆ ಈ ದಿಸೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಸಮಾಜ ಸೇವಾ ಸಂಸ್ಥೆಗಳು ಈ ಕಡೆಯೂ ದೃಷ್ಟಿ ಹರಿಸಬೇಕಿದೆ
No comments:
Post a Comment