‘ತಿತ್ಲಿ’ ಚಂಡಮಾರುತ ಭಾರಿ ವಿನಾಶಕಾರಿಯಾಗಿದ್ದು, ಹಿಂದಿಯಲ್ಲಿ ‘ತಿತ್ಲಿ’ ಎಂದರೆ ಚಿಟ್ಟೆ ಎಂದು ಅರ್ಥ. ಈ ಚಂಡಮಾರುತವನ್ನು ಹವಾಮಾನ ಇಲಾಖೆಯು ‘ಅತ್ಯುಗ್ರ’ (veಡಿಥಿ seveಡಿe ಛಿಥಿಛಿಟoಟಿiಛಿ sಣoಡಿm) ಎಂದು ವರ್ಗೀಕರಿಸಿದೆ. ಒಡಿಶಾದ ಐದು ಕರಾವಳಿ ಜಿಲ್ಲೆಗಳ ಸಮುದ್ರ ತೀರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಚಂಡಮಾರುತದ ಪ್ರಭಾವವಿರುವ ನಾಲ್ಕು ಜಿಲ್ಲೆಗಳಲ್ಲಿ ಶಾಲೆ, ಕಾಲೇಜು ಮತ್ತು ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ.
ವಿನಾಶಕಾರಿ ‘ತಿತ್ಲಿ’ ಚಂಡಮಾರುತ ಒಡಿಶಾಗೆ ಅಪ್ಪಳಿಸಿದೆ. ಒಡಿಶಾದ ದಕ್ಷಿಣ ಕರಾವಳಿ, ಆಂಧ್ರ ಪ್ರದೇಶದ ಉತ್ತರ ಕರಾವಳಿ ಮತ್ತು ಪಶ್ಚಿಮ ಬಂಗಾಳದ ಕೆಲ ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರಗಳು ಕಟ್ಟೆಚ್ಚರ ಘೋಷಿಸಿದ್ದು, ಸಂಭವನೀಯ ಅವಘಡಗಳನ್ನು ನಿಭಾಯಿಸಲು ಸಿದ್ಧತೆ ಮಾಡಿಕೊಂಡಿವೆ. ತ್ಲಿ ಸೈಕ್ಲೋನ್ ನಿಂದಾಗಿ 3 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಗಂಟೆಗೆ 130ಕಿಮೀ ವೇಗದಲ್ಲಿ ಚಲಿಸುತ್ತಿರುವ ತಿತ್ಲಿ ಚಂಡಮಾರುತ ಉಭಯ ರಾಜ್ಯಗಳ ಜನರಲ್ಲೂ ಭೀತಿ ಹುಟ್ಟಿಸಿದೆ.
No comments:
Post a Comment