ಶಿಬಿರದಲ್ಲಿ ಟ್ಯಾಬ್ ಬಳಸುತ್ತಿರುವ ವಿದ್ಯಾರ್ಥಿಗಳು
ಪ್ರಜಾವಾಣಿ ವಾರ್ತೆ
ರಾಮನಗರ: ಡಿಜಿಟಲ್ ತಂತ್ರಜ್ಞಾನ ಬಳಕೆ ಮೂಲಕ ಸರ್ಕಾರಿ ಶಾಲೆಗಳ ಮಕ್ಕಳ ಕಲಿಕೆಯನ್ನು ಆಸಕ್ತಿದಾಯಕ
ವಾಗಿಸುವ ವಿಶೇಷ ಶಿಬಿರವು ಆಯ್ದ ಸರ್ಕಾರಿ ಶಾಲೆಗಳಲ್ಲಿ ನಡೆದಿದೆ.
ಶಿಕ್ಷಣ ಫೌಂಡೇಷನ್ ಹಾಗೂ ಸರ್ವಶಿಕ್ಷಣ ಅಭಿಯಾನದ ಸಹಯೋಗದಲ್ಲಿ ನಡೆದಿರುವ ಈ ಶಿಬಿರವು ದಸರಾ ರಜೆ ಅವಧಿಯಲ್ಲಿ ಮಕ್ಕಳಿಗೆ ವಿಶೇಷ ಶಿಕ್ಷಣ ನೀಡುವ ಗುರಿ ಹೊಂದಿದೆ. ಇದೇ 6ರಿಂದ ತರಗತಿಗಳು ಆರಂಭಗೊಂಡಿದ್ದು, 20ರವರೆಗೆ ನಡೆಯಲಿದೆ. ತಾಲ್ಲೂಕಿನ ಆಯ್ದ 9 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಬೆಳಿಗ್ಗೆ 9 ರಿಂದ 12ರವರೆಗೆ ಈ ತರಗತಿಗಳು ನಡೆಯಲಿವೆ.
ನಗರದ ಸರ್ಕಾರಿ ಮೇಯಿನ್ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಈ ಶಿಬಿರ ನಡೆದಿತ್ತು. ವಿಜ್ಞಾನ, ಸಮಾಜ ವಿಜ್ಞಾನ, ಗಣಿತ ವಿಷಯವನ್ನು ಭಾವಚಿತ್ರ ಮತ್ತು ವಿಡಿಯೋ ಪ್ರದರ್ಶನ ಮೂಲಕ ಬೋಧಿಸಲಾಗುತ್ತಿದೆ.
ಈ ಕುರಿತು ಮಾಹಿತಿ ನೀಡಿದ ಶಿಕ್ಷಣ ಫೌಂಡೇಷನ್ ಮಾರ್ಗದರ್ಶಿ ಎನ್.ಮಹಾದೇವಿ ‘ಸರ್ಕಾರಿ ಶಾಲಾ ಮಕ್ಕಳು ತಂತ್ರಜ್ಞಾನ ಆಧಾರಿತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅವರಿಗೂ ಅದರ ಅರಿವು ಬೇಕು ಎನ್ನುವ ಉದ್ದೇಶದಿಂದ ಈ ಶಿಬಿರ ಹಮ್ಮಿಕೊಳ್ಳಲಾಗಿದೆ’ ಎಂದರು.
ಶಿಬಿರದಲ್ಲಿ ಯೋಗ ತರಬೇತಿ, ಕಂಪ್ಯೂಟರ್ ಶಿಕ್ಷಣದ ಜೊತೆಗೆ ಟ್ಯಾಬ್ ಮತ್ತು ಲ್ಯಾಪ್‌ಟಾಪ್‌ಗಳ ಮೂಲಲ ಪ್ರಾಥಮಿಕ ಶಿಕ್ಷಣದ ಪಠ್ಯಕ್ರಮಗಳನ್ನು ಬೋಧಿಸಲಾಗುವುದು. ದಸರಾ ರಜೆ ಇದ್ದರೂ ಮಕ್ಕಳು ಉತ್ಸಾಹದಿಂದ ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ’ ಎಂದರು.
ಫೌಂಡೇಶನ್ ವತಿಯಿಂದ 64 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್ ಹಾಗೂ 16 ಶಾಲೆಗಳಿಗೆ ಪ್ರಾಜೆಕ್ಟರ್‌ಗಳನ್ನು ವಿತರಿಸಲಾಗಿದೆ ಎಂದರು.
No comments:
Post a Comment