ಬಂಗಾಳ ಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತದಿಂದ ಒಡಿಶಾ ಹಾಗೂ ಆಂಧ್ರಪ್ರದೇಶ ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಈ ಚಂಡಮಾರುತಕ್ಕೆ ತಿತ್ಲಿ ಎಂದು ನಾಮಕರಣ ಮಾಡಲಾಗಿದ್ದು, ಎರಡು ರಾಜ್ಯಗಳಲ್ಲಿ ಭಾರಿ ಪ್ರಮಾಣದ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಒಡಿಶಾದಲ್ಲಿ ಚಂಡಮಾರುತದ ಪ್ರಭಾವ ಹೆಚ್ಚಾಗಿದ್ದು, ಇಲ್ಲಿನ ಗೋಪಾಲಪುರ ಹಾಗೂ ಕಾಳಿಂಗಪಟ್ಟಣದಲ್ಲಿ ಭೂ ಕುಸಿತ ಸಂಭವಿಸಿದೆ. ಗೋಪಾಲಪುರದಿಂದ ಚಂಡಮಾರುತವು 560 ಕಿ.ಮೀ ವೇಗದಲ್ಲಿ ಆಂಧ್ರ ಕಾಳಿಂಗಪಟ್ಟಣದತ್ತ ಸಾಗುತ್ತಿದೆ.
ಈ ಚಂಡಮಾರುತವನ್ನು ನಿಭಾಯಿಸಲು ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇನ್ನು ಗಂಜಮ್ ಗಜಪತಿ, ಪುರಿ, ಜಗತ್‌ಸಿಂಗ್‌ಪುರದ ಶಾಲಾ ಕಾಲೇಜುಗಳಿಗೆ ಎರಡು ದಿನ ರಜೆ ನೀಡಲಾಗಿದೆ. ಇನ್ನು ಅನಾಹುತ ಸಂಭವಿಸಿದರೆ ತಕ್ಷಣವೇ ವೈದ್ಯಕೀಯ, ಮನೆ ನಿರ್ಮಾಣ ಸೇರಿದಂತೆ ಎಲ್ಲರೀತಿಯ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ.
ತಿತ್ಲಿಯ ಪ್ರಮುಖ ಬೆಳವಣಿಗೆಗಳು
- ಕರಾವಳಿ ಭಾಗದ ಪ್ರದೇಶಗಳಲ್ಲಿ ಪರಿಸ್ಥಿತಿ ಅವಲೋಕಿಸಿರುವ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ.
- ಗಂಜಾಮ್ ಜಿಲ್ಲೆಯಲ್ಲಿ ಸುಮಾರು 1000ಕ್ಕೂ ಹೆಚ್ಚು ಜನರ ಸ್ಥಳಾಂತರ.
- ಮುಂದಿನ 18 ಗಂಟೆಗಳಲ್ಲಿ ಒಡಿಶಾ ಹಾಗೂ ಆಂಧ್ರ ಪ್ರದೇಶದ ಭಾಗಗಳಲ್ಲಿ ಬಿರುಗಾಳಿಯ ತೀವ್ರತೆ ಹೆಚ್ಚಾಗುವ ಸಾಧ್ಯತೆ.
- ಒಡಿಶಾದ ಈಶಾನ್ಯ ಭಾಗದ ಜಿಲ್ಲೆಗಳ ಮಾರ್ಗವಾಗಿ ಪಶ್ಚಿಮ ಬಂಗಾಳವನ್ನು ಪ್ರವೇಶಿಸುವಾಗ ಬಿರುಗಾಳಿಯ ವೇಗ ಕಡಿಮೆಯಾಗುವ ನಿರೀಕ್ಷೆ.
- ತುರ್ತು ಪರಿಸ್ಥಿತಿ ನಿಭಾಯಿಸಲು ಸಜ್ಜಾಗಿರುವ 300 ಮೋಟಾರ್ ಬೋಟ್‌ಗಳು ಮತ್ತು ರಕ್ಷಣಾ ಪಡೆಗಳು .
- ಬಿರುಗಾಳಿಯ ಪರಿಣಾಮ ಎರಡು ಕಾಲ ತೀವ್ರ ಮಳೆ ಬೀಳುವ ನಿರೀಕ್ಷೆ ಮುನ್ನೆಚ್ಚರಿಕೆ ಕ್ರಮವಾಗಿ 879 ಸೈಕ್ಲೋನ್ ಮತ್ತು ಪ್ರವಾಹ ನಿರಾಶ್ರಿತರ ಕೇಂದ್ರಗಳ ಸ್ಥಾಪನೆ.
- ಪರಿಸ್ಥಿತಿ ನಿಭಾಯಿಸಲು ಸಿದ್ಧಗೊಂಡಿರುವ ರಾಷ್ಟ್ರೀಯ ವಿಪತ್ತು ನಿರ್ವಾಹಣಾ ಪಡೆ ಮತ್ತು ಒಡಿಶಾ ವಿಪತ್ತು ತುರ್ತು ಕಾರ್ಯ ಪಡೆ ಮತ್ತು ಅಗ್ನಿ ಶಾಮಕ ದಳ.
No comments:
Post a Comment