ವಾರಣಾಸಿ-ಕಠ್ಮಂಡು ನಡುವೆ ಗುರುವಾರ ಬಸ್ ಸಂಚಾರ ಪ್ರಾರಂಭ
* ಕಳೆದ ವರ್ಷ ದೆಹಲಿ-ಕಠ್ಮಂಡು ನಡುವೆ ಬಸ್ ಸಂಚಾರವನ್ನು ಪ್ರಾಂಭಿಸಲಾಗಿತ್ತು, ಆನಂತರ ಪ್ರಾರಂಭವಾಗುತ್ತಿರುವ ಎರಡನೇ ಬಸ್ ಸಂಚಾರ ಮಾರ್ಗ ಇದಾಗಿದೆ.
* ಕಳೆದ ವರ್ಷ ನವೆಂಬರ್ನಲ್ಲಿ ಕಠ್ಮಂಡುವಿನಲ್ಲಿ ನಡೆದ 18ನೇ ಸಾರ್ಕ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು. ಆಗ ದೆಹಲಿ-ಕಠ್ಮಂಡು ನೇರ ಬಸ್ ಸಂಚಾರವನ್ನು ಪ್ರಾರಂಭಿಸಲಾಗಿತ್ತು. ಹೊಸ ಬಸ್ ಮಾರ್ಗವು ಯಾತ್ರಾರ್ಥಿಗಳಿಗೆ ಅನುಕೂಲ ಕಲ್ಪಿಸಲಿದೆ. ಎರಡು ಯಾತ್ರಾಸ್ಥಳಗಳ ನಡುವೆ ಸಂಚರಿಸಲು ಯಾತ್ರಾರ್ಥಿಗಳಿಗೆ ಅನುಕೂಲವಾಗಿಲಿದೆ,
* ನೇರವಾಗಿ ತಲುಪಲು ಸಾಧ್ಯವಾಗಲಿದೆ. 35 ಸೀಟುಗಳ ಸಾಮರ್ಥ್ಯದ ಎರಡು ಬಸ್ಗಳು ಪ್ರಾರಂಭದಲ್ಲಿ ಸಂಚರಿಸಲಿವೆ. ಮುಂದಿನ ದಿನಗಳಲ್ಲಿ ಕಠ್ಮಂಡುವಿನಿಂದ ಬಿಹಾರ ರಾಜಧಾನಿ ಪಟನಾಗೆ ನೇರ ಬಸ್ ಸಂಚಾರ ಕಲ್ಪಿಸುವ ಪ್ರಸ್ತಾವನೆ ಇದೆ ಎಂದು ನೇಪಾಳದ ಅಧಿಕಾರಿಗಳು ತಿಳಿಸಿದ್ದಾರೆ
ಇಂಡೋನೇಷ್ಯಾದಲ್ಲಿ ಭೂಕಂಪನ
* ಆದರೆ ಸುನಾಮಿ ಭಯ ಕಂಡು ಬಂದಿಲ್ಲ, ಭೂಕಂಪನದಿಂದ ಸಾವುನೋವು, ಆಸ್ತಿಪಾಸ್ತಿ ಹಾನಿ ಬಗೆಗೂ ಯಾವುದೇ ವರದಿಗಳು ಬಂದಿಲ್ಲ ಎಂದು ಅದು ಹೇಳಿದೆ.
* ಸುಮಾತ್ರಾ ದ್ವೀಪದ ಪಶ್ಚಿಮ ಕರಾವಳಿ ದೂರ ಸಮುದ್ರದಲ್ಲಿರುವ ಮೆಂಟಾವಾಯಿ ದ್ವೀಪಗಳ ಭಾಗವಾಗಿರುವ ಪುಲಾವು ಸಿಬೆರೂತ್ ಸಮೀಪ 37 ಕಿಮೀ ಆಳದಲ್ಲಿ ಸ್ಥಳೀಯ ಕಾಲಮಾನ ರಾತ್ರಿ 5.37ಕ್ಕೆ ಭೂಕಂಪನ ಸಂಭವಿಸಿದೆ.
* ಈ ಭೂಕಂಪನಕ್ಕೆ ಸುನಾಮಿ ಎಬ್ಬಿಸುವಷ್ಟು ಸಾಮರ್ಥ್ಯಇರಲಿಲ್ಲ ಎಂದು ವರದಿ ಹೇಳಿದೆ.
* 2004ರಲ್ಲಿ ಸಂಭವಿಸಿದ್ದ ಸಮುದ್ರದೊಳಗಿನ ಭೂಕಂಪನದಿಂದ ಉಂಟಾದ ಸುನಾಮಿ ಹೊಡೆತಕ್ಕೆ ಸಿಲುಕಿ ಇಂಡೋನೇಷ್ಯಾದ ಪಶ್ಚಿಮ ಸುಮಾತ್ರಾ ದ್ವೀಪದಲ್ಲಿ 1, 70,000 ಮಂದಿ ಅಸು ನೀಗಿದ್ದರು.
ತೈವಾನ್ನಲ್ಲಿ ಭೂಕಂಪನ
* ಆದರೆ ಭೂಕಂಪನದಿಂದ ಯಾವುದೇ ಸಾವು-ನೋವು, ಹಾನಿ ಸಂಭವಿಸಿದ ವರದಿಗಳು ಬಂದಿಲ್ಲ ಎಂದು ಅವರು ಹೇಳಿದ್ದಾರೆ.
* ನಸುಕಿನ 4.06 ಗಂಟೆ (20.06 ಜಿಎಂಟಿ) ವೇಳೆಗೆ ಈ ಭೂಕಂಪನ ಸಂಭವಿಸಿದೆ.
* ತೈವಾನಿನ ಎರಡನೇ ದೊಡ್ಡ ನಗರ ಮತ್ತು ಪ್ರಮುಖ ಬಂದರು ಕವೊಸಿಯಾಂಗ್ ನಿಂದ 110 ಕಿಮೀ ಪೂರ್ವಕ್ಕೆ 25 ಕಿಮೀ ಆಳದಲ್ಲಿ ಕಂಪನದ ಕೇಂದ್ರವಿತ್ತು ಎಂದು ಭೂಕಂಪ ತಜ್ಞರು ಹೇಳಿದ್ದಾರೆ.
* ಕಳೆದ ವರ್ಷ ಜೂನ್ ತಿಂಗಳಲ್ಲಿ ಕೇಂದ್ರ ತೈವಾನ್ನಲ್ಲಿ ಸಂಭವಿಸಿದ್ದ ಭೂಕಂಪನದಲ್ಲಿ 4 ಮೃತರಾಗಿ ಹಲವಾರು ಕಡೆ ಭೂಕುಸಿತಗಳು ಉಂಟಾಗಿದ್ದವು.
* 1999ರ ಸೆಪ್ಟೆಂಬರ್ನಲ್ಲಿ ಸಂಭವಿಸಿದ್ದ 6.3 ಪ್ರಮಾಣದ ಭೂಕಂಪದಲ್ಲಿ 2400 ಮಂದಿ ಅಸು ನೀಗಿದ್ದರು
ಎವರೆಸ್ಟ್ನಲ್ಲಿ ಮಾನವ ತ್ಯಾಜ್ಯದ್ದೇ ದೊಡ್ಡ ಸಮಸ್ಯೆ: ನೇಪಾಳ
* ಪ್ರತೀ ವರ್ಷದ ಪರ್ವತಾರೋಹಣ ಋತುವಿನಲ್ಲಿ ಎರಡು ತಿಂಗಳ ಕಾಲ ಸುಮಾರು 700 ಪರ್ವತಾರೋಹಿಗಳು ಮತ್ತು ಅವರ ಮಾರ್ಗದರ್ಶಿಗಳು ಪರ್ವತದಲ್ಲಿ ಕಾಲ ಕಳೆಯುತ್ತಾರೆ.
* ಈ ಸಂದರ್ಭದಲ್ಲಿ ಪರ್ವತದ ಮೇಲೆ ಸಂಗ್ರಹವಾಗುವ ಮನುಷ್ಯರ ಮಲ ಮತ್ತು ಮೂತ್ರ ಈಗ ಸಮಸ್ಯೆಯಾಗಿ ಪರಿಣಮಿಸುತ್ತಿದೆ ಎಂದು ಪರ್ವತಾರೋಹಣ ಸಂಸ್ಥೆ ತಿಳಿಸಿದೆ. ಪ್ರತೀ ವರ್ಷ ನೂರಾರು ವಿದೇಶಿ ಪರ್ವತಾರೋಹಿಗಳು ಎವರೆಸ್ಟ್ ಪರ್ವತ ಏರಲು ಆಗಮಿಸುತ್ತಾರೆ.
* ಮಾರ್ರ್ಚ್ ನಿಂದ ಮೇ ತಿಂಗಳವರೆಗೆ ಪರ್ವತವನ್ನು ಏರಲು ಅನುಮತಿ ನೀಡಲಾಗುತ್ತದೆ.
* ಪರ್ವತವನ್ನು ಏರಲು ನಾಲ್ಕು ಹಂತಗಳಾಗಿ ವಿಭಾಗಿಸಿದ್ದು, ಪರ್ವತಾರೋಹಿಗಳು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ನಿರ್ದಿಷ್ಟ ಎತ್ತರದಲ್ಲಿರುವ ಕ್ಯಾಂಪ್ಗಳಲ್ಲಿ ವಾರಗಳ ಕಾಲ ಕಾಲ ಕಳೆಯುತ್ತಾರೆ.
* ಬೇಸ್ ಕ್ಯಾಂಪ್ 5,300 ಮೀಟರ್ (17,380) ಅಡಿ ಎತ್ತರದಲ್ಲಿದೆ. ನಂತರ ನಿರ್ದಿಷ್ಟ ಎತ್ತರದಲ್ಲಿ 3 ಕ್ಯಾಂಪ್ಗಳಿವೆ.
* ಕ್ಯಾಂಪ್ಗಳಲ್ಲಿ ಪರ್ವತಾರೋಹಿಗಳು ಉಳಿದುಕೊಳ್ಳಲು ಟೆಂಟ್ ವ್ಯವಸ್ಥೆ ಇದೆ ಆದರೆ ಶೌಚಗೃಹದ ವ್ಯವಸ್ಥೆ ಇಲ್ಲ. ಹಾಗಾಗಿ ಪರ್ವತಾರೋಹಿಗಳು ಹಿಮದಲ್ಲಿ ಸ್ವಲ್ಪ ಹಳ್ಳಮಾಡಿ ಶೌಚದ ನಂತರ ಅದರ ಮೇಲೆ ಹಿಮವನ್ನು ಮುಚ್ಚುತ್ತಿದ್ದಾರೆ. ಹಾಗಾಗಿ ನಾಲ್ಕು ಕ್ಯಾಂಪ್
30 ಸಾವಿರ ಗಡಿದಾಟಿದ ಸೆನ್ಸೆಕ್ಸ್; ಹೊಸ ದಾಖಲೆ
* ಮೊದಲಬಾರಿಗೆ 30 ಸಾವಿರ ಗಡಿದಾಟಿ ದಾಖಲೆ ಸೃಷ್ಟಿಸಿದೆ.
* ಆರ್ಬಿಐನ ಈ ಕ್ರಮದಿಂದಾಗಿ ಸೆನ್ಸೆಕ್ಸ್ ಹಠಾತ್ತನೆ 431 ಅಂಕ ಏರಿಕೆ ಕಂಡಿತು.
* ಅಂತೆಯೇ ನಿಫ್ಟಿ ಕೂಡ ಚೇತರಿಸಿಕೊಂಡಿದೆ. 122 ಅಂಕಗಳ ಏರಿಕೆಯಿಂದ 9119.20ರ ಗಡಿಯಲ್ಲಿ ತನ್ನ ದಾಖಲೆಯನ್ನು ಇನ್ನಷ್ಟು ಉತ್ತಮ ಪಡಿಸಿಕೊಂಡಿತು.
* ಮಂಗಳವಾದ ವಹಿವಾಟಿನಲ್ಲಿ ನಿಫ್ಟಿ 9 ಸಾವಿರದ ಗಡಿ ದಾಟಿ ದಾಖಲೆ ಸೃಷ್ಟಿಸಿತ್ತು.
* ಬೆಳಗ್ಗೆ 9.20ರ ವಹಿವಾಟಿನ 30 ಷೇರುಗಳಿಂದ 315 ಅಂಕಗಳಷ್ಟು ಹೆಚ್ಚಿಸಿಕೊಂಡ ಸೆನ್ಸೆಕ್ಸ್ 29,909.62 ರಿಂದ 30,024.74ಕ್ಕೆ ಏರಿಕೆ ಕಂಡು ದಾಖಲೆ ಸೃಷ್ಟಿಸಿದೆ.
* ನಿಫ್ಟಿ 9081ರಿಂದ ಹೆಚ್ಚಿನ 81 ಅಂಕಗಳಿಂದ 9119.20ರಷ್ಟು ಏರಿಕೆ ಕಂಡಿತು.
ರೆಪೋ ದರ ಇಳಿಸಿದ ಆರ್ಬಿಐ; ಸಾಲದ ಬಡ್ಡಿದರವೂ ಇಳಿಯುವ ಸಾಧ್ಯತೆ
* ಇದರಿಂದ ಗೃಹಸಾಲದ ಮೇಲಿನ ಬಡ್ಡಿದರಗಳು ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ ಹೆಚ್ಚಿದೆ.
* ಆರ್ಬಿಐ ರೆಪೋ ದರ ಕಡಿತ ಗೊಳಿಸಿದ ಬೆನ್ನಿಗೇ ಷೇರು ಮಾರುಕಟ್ಟೆ ಚೇತರಿಸಿಕೊಂಡಿದೆ.
* ಸಂಕ್ರಾಂತಿ ಸಂದರ್ಭದಲ್ಲಿ ರೆಪೋ ದರ ಕಡಿತಗೊಳಿಸಿದ್ದ ಆರ್ಬಿಐ ಬುಧವಾರ ಬೆಳಗ್ಗೆ ಶೇಕಡಾ 0.25ರಷ್ಟು ಕಡಿಮೆ ಮಾಡಿರುವುದನ್ನು ಪ್ರಕಟಿಸಿತು.
* ಈತನಕ ಇದ್ದ ರೆಪೋ ದರವನ್ನು ಶೇಕಡಾ 7.75ರಿಂದ 7.50ಕ್ಕೆ ಇಳಿಸಿದ್ದು, ಪರಿಷ್ಕೃತ ದರ ಈ ಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ತಿಳಿಸಿದೆ.
* ಈ ಬಗ್ಗೆ ಪ್ರತಿಕ್ರಿಯಿಸಿರುವ ಆರ್ಬಿಐ ಗವರ್ನರ್ ರಘೂರಾಮ್ರಾಜನ್, ಇದರಿಂದ ಹಣದುಬ್ಬರಕ್ಕೆ ಕಡಿವಾಣ ಬೀಳಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
* ಜತೆ ಜೊತೆಗೆ ಈಗ ಬ್ಯಾಂಕ್ ಸಾಲದ ಮೇಲಿನ ಬಡ್ಡಿದರಗಳು ಕಡಿಮೆಯಾಗುತ್ತದೆನ್ನುವ ಆಶಾವಾದ ಎಲ್ಲರಲ್ಲಿ ಮೂಡಲಾರಂಭಿಸಿದೆ.
* ಅದರಲ್ಲೂ ಗೃಹ ಸಾಲದ ಮೇಲಿನ ಬಡ್ಡಿದರ ಕಡಿತಗೊಳ್ಳುವ ಸಾಧ್ಯತೆಯನ್ನು ಎಲ್ಲರೂ ನೀರಿಕ್ಷಿಸುತ್ತಿದ್ದಾರೆ.
* ರೆಪೋ ದರ ಕಡಿಮೆ ಮಾಡಿದ ಬೆನ್ನಿಗೇ ಷೇರು ಮಾರುಕಟ್ಟೆ ಚೇತರಿಸಿಕೊಂಡಿದ್ದು, ಆರಂಭದ ವಹಿವಾಟಿನಲ್ಲೇ 30 ಸಾವಿರ ಗಡಿ ದಾಟಿದೆ. ನಿಫ್ಟಿ ಕೂಡ ಏರಿಕೆಯತ್ತ ಮುಖಮಾಡಿದೆ. ರೆಪೋ ಹಾಗಂದರೇನು: ಆರ್ಬಿಐ ವಾಣಿಜ್ಯ
ಮಹಾರಾಷ್ಟ್ರದಲ್ಲಿ ಗೋಹತ್ಯೆ ನಿಷೇಧ
* (4 Mar) * ಎತ್ತು, ಹೋರಿಗಳಿಗೂ ಅನ್ವಯ
* ಕಾನೂನು ಉಲ್ಲಂಘಿಸಿದರೆ 5 ವರ್ಷ ಜೈಲು ಮುಂಬೈ: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯ ತಿದ್ದುಪಡಿ ಮಸೂದೆಯನ್ನು ಇತ್ತೀಚೆಗಷ್ಟೇ ಕಾಂಗ್ರೆಸ್ ಸರ್ಕಾರ ವಾಪಸ್ ಪಡೆದಿದ್ದರೆ, ಪಕ್ಕದ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧವನ್ನು ಅಧಿಕೃತವಾಗಿ ಜಾರಿಗೆ ತಂದಿದೆ.
* ಕಳೆದ 19 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮಹಾರಾಷ್ಟ್ರ ಜಾನುವಾರು ಸಂರಕ್ಷಣಾ ತಿದ್ದುಪಡಿ ವಿಧೇಯಕಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಂಕಿತ ಹಾಕಿದ್ದಾರೆ.
* ಮಹಾರಾಷ್ಟ್ರದಲ್ಲಿ ಗೋಹತ್ಯೆ ನಿಷೇಧಿಸಿ 1976ರಲ್ಲೇ ಕಾನೂನು ರೂಪಿಸಲಾಗಿತ್ತಾದರೂ, ಕೋಣ, ಎಮ್ಮೆ ಮತ್ತು ಎತ್ತುಗಳ ಹತ್ಯೆಗೆ ಅವಕಾಶವಿತ್ತು.
* ಈ ಕಾಯ್ದೆಯ ತಿದ್ದುಪಡಿಗೆ ಈಗ ಅನುಮೋದನೆ ಲಭ್ಯವಾಗಿರುವುದರಿಂದ ಹಸು, ಗೂಳಿ ಮತ್ತು ಎತ್ತು, ಕೋಣ ಮತ್ತು ಎಮ್ಮೆಗಳ ಹತ್ಯೆಯೂ ಕಾನೂನುಬಾಹಿರವಾಗಿದೆ.
* ಹೀಗಾಗಿ ಅಲ್ಲಿ ಗೋಮಾಂಸ ಮಾರಾಟ ಮಾಡುವುದು ಸಂಪೂರ್ಣ ನಿಷೇಧಕ್ಕೆ ಒಳಗಾಗಿದೆ.
* ಈ ತಿದ್ದುಪಡಿಯನ್ನು 1995ರಲ್ಲಿ ಬಿಜೆಪಿ-ಶಿವಸೇನೆ ಸರ್ಕಾರ ರಾಷ್ಟ್ರಪತಿಗೆ ಕಳುಹಿಸಿತ್ತಾದರೂ, ತಾಂತ್ರಿಕ ಕಾರಣದಿಂದ ರಾಷ್ಟ್ರಪತಿ ವಾಪಸ್ ಕಳುಹಿಸಿದ್ದರು.
* ನಂತರ ಬಂದ ಕಾಂಗ್ರೆಸ್-ಎನ್ಸಿಪಿ ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡಿರಲಿಲ್ಲ. ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರ್ಕಾರ ರೂಪಿಸಿದ್ದ ಗೋಹತ್ಯೆ ಕಾಯ್ದೆಯ ತಿದ್ದುಪಡಿ ಮಸೂದೆಯನ್ನು ಕಾಂಗ್ರೆಸ್ ಸರ್ಕಾರ ವಾಪಸ್
ಮೊತ್ತ ಮೊದಲ ಬಾರಿಗೆ 9000ದ ಗಡಿಗೆ ನಿಫ್ಟಿ
'111' ಬಳಸಬೇಡಿ: ವೊಡಾಫೋನ್ಗೆ ಟ್ರಾಯ್ ಆದೇಶ
* ಈ ಬಗ್ಗೆ ಆದೇಶ ಪಾಲನೆ ವರದಿಯನ್ನು ಮಾರ್ಚ್ 10ರ ಒಳಗೆ ಸಲ್ಲಿಸುವಂತೆಯೂ ಟ್ರಾಯ್ ಸೂಚನೆ ನೀಡಿದೆ. ದೂರ ಸಂಪರ್ಕ ಇಲಾಖೆಯು 2003ರಲ್ಲೇ ರಾಷ್ಟ್ರೀಯ ನಂಬರ್ ನೀಡಿಕೆ ಯೋಜನೆಯನ್ನು ಜಾರಿಗೊಳಿಸಿದೆ.
* ಇದರ ಪ್ರಕಾರ 111ರಿಂದ 115ವರೆಗಿನ ಸಂಖ್ಯೆಗಳನ್ನು ಯಾವುದೇ ರೀತಿಯ ಸೇವೆಗಳಿಗೆ ಮಂಜೂರು ಮಾಡಿಲ್ಲ.
* ಅವುಗಳನ್ನು ಮೀಸಲು ಸಂಖ್ಯೆಗಳಾಗಿ ಇಟ್ಟುಕೊಳ್ಳಲಾಗಿದೆ ಎಂದು ಟ್ರಾಯ್ ತಿಳಿಸಿದೆ.
* ಆದರೆ ವೊಡಾಫೋನ್ ವೆಬ್ ಸೈಟ್ ಜಾಹೀರಾತುಗಳಲ್ಲಿ ಗ್ರಾಹಕರನ್ನು ವಿವಿಧ ಇಂಟರ್ನೆಟ್ ಸೆಟ್ಟಿಂಗ್ಗಳಿಗಾಗಿ '111' ಸಂಖ್ಯೆಗೆ ಕರೆ ನೀಡುವಂತೆ ಸೂಚಿಸಿರುವುದು ಕಂಡು ಬಂದಿದೆ.
* ಈ ಹಿನ್ನೆಲೆಯಲ್ಲಿ 111 ಸಂಖ್ಯೆಯನ್ನು ಬಳಸದಂತೆ ಸೂಚನೆ ನೀಡಲಾಗಿದೆ ಎಂದು ಟ್ರಾಯ್ ಹೇಳಿದೆ.
* ಈ ಬಗ್ಗೆ ವೊಡಾಪೋನ್ ನಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.
* ಟ್ರಾಯ್ ಪ್ರಕಾರ ಈ ಬಗ್ಗೆ ಫೆಬ್ರುವರಿ 2ರಂದೇ ವೊಡಾಫೋನ್ಗೆ ಷೋಕಾಸ್ ನೋಟಿಸ್ ಜಾರಿ ಮಾಡಲಾಗಿತ್ತು ಎಂದು ಹೇಳಲಾಗಿದೆ.
ನಡಾಲ್ಗೆ ಅರ್ಜೆಂಟೀನಾ ಓಪನ್ ಕಿರೀಟ
* ಎದುರಾಳಿ ಜುವಾನ್ ಮೊನಾಕೋ ಅವರನ್ನು 6-4, 6-1 ಅಂತರದಿಂದ ಸೋಲಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಕಳೆದ 9 ತಿಂಗಳಿಂದೀಚೆಗೆ ರಫೆಲ್ ನಡಾಲ್ ಗೆದ್ದ ಮೊದಲ ಅಂತಾರಾಷ್ಟ್ರೀಯ ಪ್ರಶಸ್ತಿ ಇದಾಗಿದೆ
ಆಸ್ಟ್ರೇಲಿಯಾ ಓಪನ್ನಿಂದ ನಡಾಲ್, ಹಲೆಪ್ ನಿರ್ಗಮನ
* ಮಂಗಳವಾರ ನಡೆದ ಕ್ವಾರ್ಟರ್ಫೈನಲ್ನಲ್ಲಿ ಬೆರ್ಡಿಕ್ 14 ಗ್ರಾಂಡ್ ಸ್ಲಾಂ ವಿಜೇತ ನಡಾಲ್ಗೆ ಆಘಾತ ನೀಡುವುದರೊಂದಿಗೆ ಸೆಮಿಫೈನಲ್ ಪ್ರವೇಶಿಸಿದರು.
* ದಿನದ ಇನ್ನೊಂದು ಅಚ್ಚರಿಯ ಫಲಿತಾಂಶದಲ್ಲಿ ರಷ್ಯಾದ ಎಕಟರೀನಾ ಮಕರೋವಾ ರೊಮೆನಿಯ ಆಟಗಾರ್ತಿ ಸಿಮೋನಾ ಹಲೆಪ್ರನ್ನು ಮಣಿಸಿದರು.
* ಮರಿಯ ಶರಪೋವಾ ಏಳನೇ ಬಾರಿಗೆ ವರ್ಷದ ಮೊದಲ ಗ್ರಾಂಡ್ ಸ್ಲಾಂ ಟೂರ್ನಿಯ ಉಪಾಂತ್ಯಕ್ಕೇರಿದರು.
* ಪುರುಷರ ಸಿಂಗಲ್ಸ್ ಕ್ವಾರ್ಟರ್ಫೈನಲ್ನ ದಿನದ ಅಂತಿಮ ಪಂದ್ಯದಲ್ಲಿ ಬ್ರಿಟನ್ ತಾರೆ ಆಂಡಿ ಮರ್ರೆ ಸ್ಥಳೀಯ ಆಶಾಕಿರಣ ಹಾಗೂ ಉತ್ಸಾಹಿ ಆಟಗಾರ ನಿಕ್ ರ್ಕಿಗಿಯೋಸ್ರನ್ನು ನೇರ ಸೆಟ್ಗಳಲ್ಲಿ ಮಣಿಸಿ ಮುನ್ನಡೆದರು.
* ಬೌಚಾರ್ಡ್ ಟೆನಿಸ್ ಪಾಠ ಹೇಳಿಕೊಟ್ಟ ಶೆರ್ಪಿ: ಆಟ ಹಾಗೂ ಸೌಂದರ್ಯದಲ್ಲಿ ತನಗೆ ರಷ್ಯಾದ ಮರಿಯ ಶರಪೋವಾ ಆದರ್ಶ ಎಂದೆನ್ನುವ ಕೆನಡದ 20 ವರ್ಷದ ಆಟಗಾರ್ತಿ ಎಗುನಿ ಬೌಚಾರ್ಡ್ ಮಂಗಳವಾರದ ಪಂದ್ಯದಲ್ಲಿ ಅವರಿಂದಲೇ ಟೆನಿಸ್ ಪಾಠ ಹೇಳಿಸಿಕೊಂಡಿದ್ದು ವಿಶೇಷ. 2ನೇ ಶ್ರೇಯಾಂಕದ ಶರಪೋವಾ ಒಂದು ಗಂಟೆ 18 ನಿಮಿಷದ ಹೋರಾಟದಲ್ಲಿ 7ನೇ ಶ್ರೇಯಾಂಕದ ಬೌಚಾರ್ಡ್ರನ್ನು ನೇರ ಸೆಟ್ಗಳಲ್ಲಿ 6-3, 6-2 ರಿಂದ ಮಣಿಸಿ
ಸೈನಾ ನೆಹ್ವಾಲ್, ಕಷ್ಯಪ್ಗೆ ಪ್ರಶಸ್ತಿ
* ಭಾನುವಾರ ಇಲ್ಲಿನ ಬಾಬು ಬನಾರಸಿ ದಾಸ್ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕಷ್ಯಪ್ 23-21, 23-21ರಿಂದ ಶ್ರೀಕಾಂತ್ರನ್ನು ಸೋಲಿಸಿದರು.
* ಇನ್ನು ಮಹಿಳಾ ಸಿಂಗಲ್ಸ್ನಲ್ಲಿ ಅಗ್ರ ಕ್ರಮಾಂಕಿತ ಸೈನಾ ನೆಹ್ವಾಲ್ ಅತ್ಯಾಕರ್ಷಕ ಪ್ರದರ್ಶನದಿಂದ ಒಂದು ಗಂಟೆ 19 ನಿಮಿಷಗಳ ಕಾಲ ಆಡಿ ಸ್ಪೇನ್ನ ವಿಶ್ವ ನಂ.7 ಆಟಗಾರ್ತಿ ಕರೋಲಿನಾ ಮರಿನ್ ಅವರನ್ನು 19-21, 25-23, 21-16 ಅಂತರದಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಒಲಂಪಿಕ್ಸ್ನಲ್ಲಿ ಚಿನ್ನ ಗೆದ್ದವರಿಗೆ '75 ಲಕ್ಷ' ಬಹುಮಾನ!
By Vijayavani, 06 Feb 2015
* 2016ರ ರಿಯೋ ಒಲಂಪಿಕ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವವರಿಗೆ 75 ಲಕ್ಷ ರೂ. ನಗದು ಬಹುಮಾನ ನೀಡಲು ಸರ್ಕಾರ ತೀರ್ಮಾನಿಸಿದೆ.
* ಬೇಸಿಗೆ ಒಲಂಪಿಕ್ಸ್ ಮತ್ತು ಚಳಿಗಾಲದ ಒಲಂಪಿಕ್ಸ್ನಲ್ಲಿ ಪದಕ ಗೆಲ್ಲುವವರಿಗೆ ನೀಡುವ ನಗದು ಬಹುಮಾನದ ಮೊತ್ತದಲ್ಲಿ ಏರಿಕೆ ಮಾಡಲಾಗಿದೆ.
* ಪ್ರಸ್ತುತ ಚಿನ್ನದ ಪದಕ ಗೆದ್ದ ಕ್ರೀಡಾಪಟುವಿಗೆ 50 ಲಕ್ಷ ನೀಡಲಾಗುತ್ತಿದ್ದು ಏರಿಕೆಯ ನಂತರ 75 ಲಕ್ಷ ರೂ. ಬಹುಮಾನ ದೊರೆಯಲಿದೆ.
* ಬೆಳ್ಳಿ ಪದಕ ಗೆದ್ದವರಿಗೆ 30 ಲಕ್ಷದಿಂದ 50 ಲಕ್ಷ ರೂ.ಗೆ ಮತ್ತು ಕಂಚಿನ ಪದಕ ಗೆದ್ದವರಿಗೆ 20 ಲಕ್ಷದಿಂದ 30 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ.
* ಏಷ್ಯನ್ ಮತ್ತು ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪದಕ ಗೆಲ್ಲುವವರಿಗೂ ಸಹ ಬಹುಮಾನದ ಮೊತ್ತದಲ್ಲಿ ಏರಿಕೆ ಮಾಡಲಾಗಿದೆ.
* ಚಿನ್ನದ ಪದಕ ಗೆದ್ದವರಿಗೆ 20 ಲಕ್ಷದಿಂದ 30 ಲಕ್ಷ ರೂ.ಗೆ, ಬೆಳ್ಳಿ ಪದಕ ಗೆದ್ದವರಿಗೆ 10 ಲಕ್ಷದಿಂದ 20 ಲಕ್ಷ ರೂ.ಗೆ ಮತ್ತು ಕಂಚಿನ ಪದಕ ಗೆದ್ದವರಿಗೆ 6 ಲಕ್ಷದಿಂದ 10 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ.
* ಪ್ಯಾರಾ ಒಲಂಪಿಕ್ಸ್ (ಬೇಸಿಗೆ ಮತ್ತು ಚಳಿಗಾಲ), ಪ್ಯಾರಾ ಏಷ್ಯನ್ ಗೇಮ್ಸ್ ಮತ್ತು ಕಾಮನ್ವೆಲ್ತ್ ಗೇಮ್ಸ್ (ಪ್ಯಾರಾ ಅಥ್ಲಿಟ್ಗಳು) ನಲ್ಲಿ ಗೆಲ್ಲುವ ಕ್ರೀಡಾ ಪಟುಗಳಿಗೆ ಒಲಂಪಿಕ್ಸ್, ಏಷ್ಯನ್ ಗೇಮ್ಸ್ ಮತ್ತು
ಹಿರಿಯ ಪತ್ರಕರ್ತ ಶಿವಾನಂದ ಜೋಶಿ ನಿಧನ
* ಕ್ರೀಡಾ ಬರಹಗಳಿಂದ ಪ್ರಸಿದ್ಧರಾಗಿದ್ದ .
* 2007ರ ಸಾಲಿನ ಟಿಯೆಸ್ಸಾರ್ ಪ್ರಶಸ್ತಿ ಪಡೆದಿದ್ದ ಅವರು ಮಾಧ್ಯಮ ಅಕಾಡೆಮಿ ಪ್ರಶಸ್ತಿ (2006),
* ಪಾಪು ಪುರಸ್ಕಾರ (2010),
* ಮುಂಬೈ ಹವ್ಯಕ ಪ್ರಶಸ್ತಿ,
* ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಪ್ರಶಸ್ತಿ, ರಾಜ್ಯ ಕ್ರೀಡಾ ಮಂಡಳಿ ಪ್ರಶಸ್ತಿಗೆ ಭಾಜನರಾಗಿದ್ದರು.
No comments:
Post a Comment