ಅಧ್ಯಾಯ 1 ಭಾರತ ನಮ್ಮ ಭೂಮಿ (GEO)
ಮುಖ್ಯಾಂಶಗಳು:
• ಇಂಡಿಯಾ ಎಂಬ ಹೆಸರು ಸಿಂದೂ ನದಿಯಿಂದ ಬಳಕೆಗೆ ಬಂದಿದೆ.
• ಭಾರತವು ಒಟ್ಟು 32,87,263 ಚದರ ಕಿ.ಮೀ. ವಿಸ್ತಾರವಾಗಿದೆ.
• ಭಾರತದ ಮಧ್ಯಭಾಗದಲ್ಲಿ 23 ಳಿº ಉತ್ತರ ಅಕ್ಷಾಂಶ ಹಾಯ್ದು ಹೋಗುತ್ತದೆ.
• ಭಾರತದ ದಕ್ಷಿಣ ತುದಿಯಲ್ಲಿರುವ ದೇಶ ಶ್ರೀಲಂಕಾ
• ಭಾರತವು ಹೊಂದಿರುವ ಉದ್ದವಾದ ಕರಾವಳಿಯು 6100 ಕಿ.ಮೀ. ಆಗಿದೆ.
• ಭಾರತವು ಏಷ್ಯಾ ಖಂಡದ ದಕ್ಷಿಣ ಭಾಗದಲ್ಲಿದೆ.
• ಭಾರತವು ಭೂಮಿಯ ಉತ್ತರ ಗೋಳಾರ್ಧದಲ್ಲಿದೆ.
• ಭಾರತದ ಭೂರಾಶಿಯ ದಕ್ಷಿಣ ತುದಿ ಇಂದಿರಾ ಪಾಯಿಂಟ್
• ಭಾರತದ ದಕ್ಷಿಣದ ಭಾಗದ ಭೂಶಿರದ ಹೆಸರು ಕನ್ಯಾಕುಮಾರಿ
• ಇಂದಿರಾಪಾಯಿಂಟ್ ಇರುವ ದ್ವೀಪ ಗ್ರೇಟ್ ನಿಕೋಬಾರ್ ದ್ವೀಪ
• ಭಾರತವು ಪ್ರಪಂಚದ 7 ನೇ ದೊಡ್ಡ ದೇಶವಾಗಿದೆ.
• ಭಾರತದಲ್ಲಿ ಒಟ್ಟು 29 ರಾಜ್ಯಗಳು & 6 ಕೇಂದ್ರಾಡಳಿತ ಪ್ರದೇಶಗಳಿವೆ.
• 2011 ರ ಜನಗಣತಿಯ ಪ್ರಕಾರ ಭಾರತದ ಜನಸಂಖ್ಯೆ 121 ಕೋಟಿ.
• ಭಾರತವು 8º4′ ಉತ್ತರ ಅಕ್ಷಾಂಶದಿಂದ 37º6ꞌ ಉತ್ತರ ಅಕ್ಷಾಂಶದವರೆಗೆ ಹರಡಿದೆ.
• ಭಾರತವು ದಕ್ಷಿಣದ ಕನ್ಯಾಕುಮಾರಿ ಭೂಶಿರದಿಂದ ಉತ್ತರದ ಕಾಶ್ಮೀರದವರೆಗೆ 3214 ಕಿ.ಮೀ.ಉದ್ದವಾಗಿದೆ. (ಭಾರತದ ದಕ್ಷೀಣೋತ್ತರ ಉದ್ದ)
• ದ್ವೀಪಗಳನ್ನು ಪರಿಗಣಿಸಿದಾಗ ಗ್ರೇಟ್ ನಿಕೋಬಾರ್ ದ್ವೀಪದ ಇಂದಿರಾ ಪಾಯಿಂಟ್ ಭಾರತದ ಅತ್ಯಂತ ದಕ್ಷಿಣ ತುದಿಯಾಗಿದೆ.
• ಭಾರತವು 68º7ꞌ ಪೂರ್ವ ರೇಖಾಂಶದಿಂದ 97º25ꞌ ಪೂರ್ವ ರೇಖಾಂಶದವರೆಗೆ ಹಬ್ಬಿದೆ.
• ಭಾರತವು ಪೂರ್ವ-ಪಶ್ಚಿಮವಾಗಿ 2933 ಕಿ.ಮೀ.ಅಗಲವಾಗಿದೆ.
• 82ಳಿº ರೇಖಾಂಶವನ್ನಾಧರಿಸಿ ಭಾರತದ ಪ್ರಮಾಣ ವೇಳೆಯನ್ನು ನಿಗದಿಪಡಿಸಲಾಗಿದೆ.
• ಭಾರತದ ಕಾಲಮಾನವು ಗ್ರೀನವಿಚ್ ಕಾಲಮಾನಕ್ಕಿಂತ 5:30 ಗಂಟೆ ಮುಂದೆ ಇರುವುದು.
• ಭಾರತದ ಭೂಗಡಿಯ ಉದ್ದ 15200 ಕಿ.ಮೀ.ಗಳು.
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
1. ಭಾರತವನ್ನು ಉಪಖಂಡ ಎಂದು ಕರೆಯಲು ಕಾರಣಗಳೇನು?
ಭಾರತದಲ್ಲಿನ ವಿವಿಧ ರೀತಿಯ ಮೇಲ್ಮೈ ಲಕ್ಷಣಗಳು, ವಾಯುಗುಣ, ಸ್ವಾಭಾವಿಕ ಸಸ್ಯವರ್ಗಗಳು ಹಾಗೂ ಜನರಲ್ಲಿನ ವೈವಿದ್ಯತೆಗಳನ್ನು ಗಮನಿಸಿದಾಗ ಇದನ್ನು ಒಂದು ಉಪಖಂಡ ಎಂದು ಕರೆಯಬಹುದಾಗಿದೆ.
2. ಭಾರತದ ನೆರಹೊರೆ ರಾಷ್ಟ್ರಗಳಾವವು?
• ಭಾರತದ ವಾಯುವ್ಯದಲ್ಲಿ ಪಾಕಿಸ್ತಾನ & ಅಫಘಾನಿಸ್ತಾನ, ಉತ್ತರದಲ್ಲಿ ಚೀನಾ, ನೇಪಾಳ &
• ಭೂತಾನ್, ಪೂರ್ವದಲ್ಲಿ ಮಯನ್ಮಾರ್(ಬರ್ಮಾ) ಹಾಗೂ ಬಾಂಗ್ಲಾದೇಶ, ದಕ್ಷಿಣದಲ್ಲಿ ಶ್ರೀಲಂಕಾ ಹಾಗೂ
• ನೈರುತ್ಯದಲ್ಲಿರುವ ಮಾಲ್ದೀವ್ಸ್ ದ್ವೀಪಗಳು ಭಾರತದ ನೆರೆಯ ರಾಷ್ಟ್ರಳಾಗಿವೆ.
• ಇಂಡಿಯಾ ಎಂಬ ಹೆಸರು ಸಿಂದೂ ನದಿಯಿಂದ ಬಳಕೆಗೆ ಬಂದಿದೆ.
• ಭಾರತವು ಒಟ್ಟು 32,87,263 ಚದರ ಕಿ.ಮೀ. ವಿಸ್ತಾರವಾಗಿದೆ.
• ಭಾರತದ ಮಧ್ಯಭಾಗದಲ್ಲಿ 23 ಳಿº ಉತ್ತರ ಅಕ್ಷಾಂಶ ಹಾಯ್ದು ಹೋಗುತ್ತದೆ.
• ಭಾರತದ ದಕ್ಷಿಣ ತುದಿಯಲ್ಲಿರುವ ದೇಶ ಶ್ರೀಲಂಕಾ
• ಭಾರತವು ಹೊಂದಿರುವ ಉದ್ದವಾದ ಕರಾವಳಿಯು 6100 ಕಿ.ಮೀ. ಆಗಿದೆ.
• ಭಾರತವು ಏಷ್ಯಾ ಖಂಡದ ದಕ್ಷಿಣ ಭಾಗದಲ್ಲಿದೆ.
• ಭಾರತವು ಭೂಮಿಯ ಉತ್ತರ ಗೋಳಾರ್ಧದಲ್ಲಿದೆ.
• ಭಾರತದ ಭೂರಾಶಿಯ ದಕ್ಷಿಣ ತುದಿ ಇಂದಿರಾ ಪಾಯಿಂಟ್
• ಭಾರತದ ದಕ್ಷಿಣದ ಭಾಗದ ಭೂಶಿರದ ಹೆಸರು ಕನ್ಯಾಕುಮಾರಿ
• ಇಂದಿರಾಪಾಯಿಂಟ್ ಇರುವ ದ್ವೀಪ ಗ್ರೇಟ್ ನಿಕೋಬಾರ್ ದ್ವೀಪ
• ಭಾರತವು ಪ್ರಪಂಚದ 7 ನೇ ದೊಡ್ಡ ದೇಶವಾಗಿದೆ.
• ಭಾರತದಲ್ಲಿ ಒಟ್ಟು 29 ರಾಜ್ಯಗಳು & 6 ಕೇಂದ್ರಾಡಳಿತ ಪ್ರದೇಶಗಳಿವೆ.
• 2011 ರ ಜನಗಣತಿಯ ಪ್ರಕಾರ ಭಾರತದ ಜನಸಂಖ್ಯೆ 121 ಕೋಟಿ.
• ಭಾರತವು 8º4′ ಉತ್ತರ ಅಕ್ಷಾಂಶದಿಂದ 37º6ꞌ ಉತ್ತರ ಅಕ್ಷಾಂಶದವರೆಗೆ ಹರಡಿದೆ.
• ಭಾರತವು ದಕ್ಷಿಣದ ಕನ್ಯಾಕುಮಾರಿ ಭೂಶಿರದಿಂದ ಉತ್ತರದ ಕಾಶ್ಮೀರದವರೆಗೆ 3214 ಕಿ.ಮೀ.ಉದ್ದವಾಗಿದೆ. (ಭಾರತದ ದಕ್ಷೀಣೋತ್ತರ ಉದ್ದ)
• ದ್ವೀಪಗಳನ್ನು ಪರಿಗಣಿಸಿದಾಗ ಗ್ರೇಟ್ ನಿಕೋಬಾರ್ ದ್ವೀಪದ ಇಂದಿರಾ ಪಾಯಿಂಟ್ ಭಾರತದ ಅತ್ಯಂತ ದಕ್ಷಿಣ ತುದಿಯಾಗಿದೆ.
• ಭಾರತವು 68º7ꞌ ಪೂರ್ವ ರೇಖಾಂಶದಿಂದ 97º25ꞌ ಪೂರ್ವ ರೇಖಾಂಶದವರೆಗೆ ಹಬ್ಬಿದೆ.
• ಭಾರತವು ಪೂರ್ವ-ಪಶ್ಚಿಮವಾಗಿ 2933 ಕಿ.ಮೀ.ಅಗಲವಾಗಿದೆ.
• 82ಳಿº ರೇಖಾಂಶವನ್ನಾಧರಿಸಿ ಭಾರತದ ಪ್ರಮಾಣ ವೇಳೆಯನ್ನು ನಿಗದಿಪಡಿಸಲಾಗಿದೆ.
• ಭಾರತದ ಕಾಲಮಾನವು ಗ್ರೀನವಿಚ್ ಕಾಲಮಾನಕ್ಕಿಂತ 5:30 ಗಂಟೆ ಮುಂದೆ ಇರುವುದು.
• ಭಾರತದ ಭೂಗಡಿಯ ಉದ್ದ 15200 ಕಿ.ಮೀ.ಗಳು.
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
1. ಭಾರತವನ್ನು ಉಪಖಂಡ ಎಂದು ಕರೆಯಲು ಕಾರಣಗಳೇನು?
ಭಾರತದಲ್ಲಿನ ವಿವಿಧ ರೀತಿಯ ಮೇಲ್ಮೈ ಲಕ್ಷಣಗಳು, ವಾಯುಗುಣ, ಸ್ವಾಭಾವಿಕ ಸಸ್ಯವರ್ಗಗಳು ಹಾಗೂ ಜನರಲ್ಲಿನ ವೈವಿದ್ಯತೆಗಳನ್ನು ಗಮನಿಸಿದಾಗ ಇದನ್ನು ಒಂದು ಉಪಖಂಡ ಎಂದು ಕರೆಯಬಹುದಾಗಿದೆ.
2. ಭಾರತದ ನೆರಹೊರೆ ರಾಷ್ಟ್ರಗಳಾವವು?
• ಭಾರತದ ವಾಯುವ್ಯದಲ್ಲಿ ಪಾಕಿಸ್ತಾನ & ಅಫಘಾನಿಸ್ತಾನ, ಉತ್ತರದಲ್ಲಿ ಚೀನಾ, ನೇಪಾಳ &
• ಭೂತಾನ್, ಪೂರ್ವದಲ್ಲಿ ಮಯನ್ಮಾರ್(ಬರ್ಮಾ) ಹಾಗೂ ಬಾಂಗ್ಲಾದೇಶ, ದಕ್ಷಿಣದಲ್ಲಿ ಶ್ರೀಲಂಕಾ ಹಾಗೂ
• ನೈರುತ್ಯದಲ್ಲಿರುವ ಮಾಲ್ದೀವ್ಸ್ ದ್ವೀಪಗಳು ಭಾರತದ ನೆರೆಯ ರಾಷ್ಟ್ರಳಾಗಿವೆ.
ಅಧ್ಯಾಯ 2] ಭಾರತದ ಪ್ರಾಕೃತಿಕ ಲಕ್ಷಣಗಳು (GEO)
ಭಾರತದ ಪ್ರಾಕೃತಿಕ ವಿಭಾಗಗಳು
1. ಹಿನ್ನಲೆ.
2. ಭಾರತದ ಪ್ರಾಕೃತಿಕ ವಿಭಾಗಗಳು:
3.1 ಉತ್ತರದ ಪರ್ವತಗಳು:
3.2 ಉತ್ತರದ ಮೈದಾನಗಳು:
3.3 ಪರ್ಯಾಯ ಪ್ರಸ್ಥ ಭೂಮಿ:
3.3 ಕರಾವಳಿ ಪ್ರದೇಶಗಳು ಮತ್ತು ದ್ವೀಪಗಳು:
ಮುಖ್ಯಾಂಶಗಳು:
• ಭಾರತದ ಭೂಸ್ವರೂಪವನ್ನು 4 ಪ್ರಧಾನ ವಿಭಾಗಗಳಾಗಿ ವಿಂಗಡಿಸಲಾಗಿದೆ.• ಮಹಾ ಹಿಮಾಲಯವನ್ನು ಹಿಮಾದ್ರಿ ಎಂದು ಕರೆಯುವರು.
• ಪ್ರಪಂಚದಲ್ಲಿಯೇ ಮೌಂಟ್ ಎವರೆಸ್ಟ (8848 ಮೀ) ಅತ್ಯುನ್ನತ ಶಿಖರವಾಗಿದೆ.
• ಉತ್ತರ ಭಾರತದ ಮೈದಾನವು ಮೆಕ್ಕಲು ಮಣ್ಣಿನಿಂದ ನಿರ್ಮಾಣವಾಗಿದೆ.
• ಪಶ್ಚಿಮ ಘಟ್ಟಗಳನ್ನು ಮಹಾರಾಷ್ಟ್ರದಲ್ಲಿ ಹಾಗೂ ಕರ್ನಾಟಕದಲ್ಲಿ ಸಹ್ಯಾದ್ರಿ ಎಂದು ಕರೆಯುವರು.
• ಹಿಮಾಲಯ ಪಾದ ಬೆಟ್ಟಗಳಿಗಿರುವ ಮತ್ತೊಂದು ಹೆಸರು ಶಿವಾಲಿಕ್ ಬೆಟ್ಟಗಳು.
• ಹಿಮಾಲಯ ಪರ್ವತ ಶ್ರೇಣಿಯು ಪಾಮೀರ ಗ್ರಂಥಿಯಿಂದ ಪ್ರಾರಂಭವಾಗಿ ಪೂರ್ವದಲಿ ್ಲಅರುಣಾಚಲ ಪ್ರದೇಶದವರೆಗೆ ಸುಮಾರು 2500 ಕಿ.ಮೀ.ಉದ್ದವಾಗಿ ಹಬ್ಬಿದೆ.
• ಹಿಮಾಲಯ ಪರ್ವತಗಳಲ್ಲಿ ಅತಿ ಎತ್ತರವಾದ ಹಾಗೂ ಮೊದಲು ನಿರ್ಮಿತಗೊಂಡಿರುವ ಸರಣಿ ಹಿಮಾದ್ರಿ.
• ಪ್ರಪಂಚದಲ್ಲಿಯೇ ಅತ್ಯುನ್ನತ ಶಿಖರವಾದ ಮೌಂಟ್ ಎವರೆಸ್ಟ ನೇಪಾಳ & ಟಿಬೇಟ್ ಮಧ್ಯದಲ್ಲಿದೆ.
• ಗಂಗಾನದಿಯ ಉಗಮ ಸ್ಥಾನ ಗಂಗೋತ್ರಿ ಹಿಮನದಿ.
• ಭಾರತದ ಅತ್ಯುನ್ನತವಾದ ಶಿಖರ - ಕೆ2 ಅಥವಾ ಮೌಂಟ ಗಾಡ್ವಿನ್ ಅಸ್ಟಿನ್
• ಉತ್ತರ ಮಹಾ ಮೈದಾನವನ್ನು ಸತ್ಲಜ್‍ಗಂಗಾ ಮೈದಾನವೆಂತಲೂ ಕರೆಯುವರು.
• ಭಾರತದ ಭೂಸ್ವರೂಪ ವಿಭಾಗಗಳಲ್ಲಿ ಅತಿ ದೊಡ್ಡದು ಪರ್ಯಾಯ ಪ್ರಸ್ಥಭೂಮಿ.
• ಭಾರತದ ಅತಿ ಪುರಾತನ ಭೂಭಾಗ ಪರ್ಯಾಯ ಪ್ರಸ್ಥಭೂಮಿ.
• ಪರ್ಯಾಯ ಪ್ರಸ್ಥಭೂಮಿಯ ಒಟ್ಟು ವಿಸ್ತೀರ್ಣ 16 ಲಕ್ಷ ಚ.ಕಿ.ಮೀ.
• 16. ಅಣ್ಣಾಮಲೈ ಸರಣಿಯ ಅನೈಮುಡಿ ಶಿಖರ ದಕ್ಷಿಣ ಭಾರತದಲ್ಲಿಯೇ ಅತ್ಯುನ್ನತ ಪ್ರದೇಶವಾಗಿದೆ.
• ಪೂರ್ವ ಘಟ್ಟಗಳು ಹಾಗೂ ಪಶ್ಚಿಮ ಘಟ್ಟಗಳು ನೀಲಗಿರಿ ಬೆಟ್ಟಗಳಲ್ಲಿ ಸಂಧಿಸುತ್ತವೆ.
• ಪಶ್ಚಿಮ ಕರಾವಳಿಯನ್ನು ಕರ್ನಾಟಕದಲ್ಲಿ ಕೊಂಕಣ ತೀರ ಎಂದು ಕರೆಯುವರು.
• ಒರಿಸ್ಸಾದ ಚಿಲ್ಕಾ ಹಾಗೂ ತಮಿಳುನಾಡಿನ ಪುಲಿಕಾಟ್ ಸರೋವರಗಳು ಉಪ್ಪುನೀರಿನ ಸರೋವರಗಳಾಗಿವೆ.
• ಭಾರತಕ್ಕೆ ಸೇರಿದ 247 ದ್ವೀಪಗಳಿವೆ. ಇವುಗಳಲ್ಲಿ 204 ದ್ವೀಪಗಳು ಬಂಗಾಳ ಕೊಲ್ಲಿಯಲ್ಲಿ ಮತ್ತು 43 ದ್ವೀಪಗಳು ಅರಬ್ಬಿ ಸಮುದ್ರದಲ್ಲಿವೆ.
• ಅಂಡಮಾನ್ & ನಿಕೋಬಾರ್ ದ್ವೀಪಗಳು ಗಟ್ಟಿಯಾದ ಜ್ವಾಲಾಮುಖಿ ನಿರ್ಮಿತ ಶಿಲೆಗಳಿಂದ ಕೂಡಿವೆ.
• ಲಕ್ಷದ್ವೀಪಗಳು ಹವಳಗಳಿಂದ ನಿರ್ಮಿತವಾಗಿವೆ.
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ಸಿವಾಲಿಕ್ ಶ್ರೇಣಿಯನ್ನು ಕುರಿತು ಬರೆಯಿರಿ.
ಶಿವಾಲಿಕ್ ಶ್ರೇಣಿಯು ಅತಿ ಕಡಿಮೆ ಎತ್ತರವನ್ನು ಹೊಂದಿದೆ. ಇದನ್ನು ಹಿಮಾಲಯದ ಪಾದಬೆಟ್ಟಗಳೆಂದು ಕರೆಯುವರು. ಇಲ್ಲಿ ಕಿರಿದಾದ ಮೈದಾನಗಳಿವೆ. ಇವುಗಳಿಗೆ ಡೂನ್‍ಗಳೆಂದು ಕರೆಯುವರು.
ಉದಾ : ಡೆಹರಾಡೂನ್. ಇವು ಸಮುದ್ರ ಮಟ್ಟದಿಂದ 600 ರಿಂದ 1500 ಮೀ. ಎತ್ತರವಾಗಿವೆ.
2. ಭಾರತದ ಭೂಸ್ವರೂಪ ವಿಭಾಗಗಳಲ್ಲಿ ಯಾವುದು ಇತ್ತೀಚಿನ ಅವಧಿಯಲ್ಲಿ ನಿರ್ಮಿತವಾಗಿದೆ?
ಉತ್ತರದ ಮಹಾಮೈದಾನ ಭಾರತದ ¨Àೂs ಸ್ವರೂಪ ವಿಭಾಗಗಳಲ್ಲಿ ಇತ್ತೀಚಿನ ಅವಧಿಯಲ್ಲಿ ನಿರ್ಮಿತವಾಗಿದೆ.
3. ಹಿಮಾಲಯ ಪರ್ವತಗಳ ಮೂರು ಶ್ರೇಣಿಗಳನ್ನು ತಿಳಿಸಿ.
ಎತ್ತರಕ್ಕನುಗುಣವಾಗಿ ಹಿಮಾಲಯ ಪರ್ವತಗಳನ್ನು ಮೂರು ಶ್ರೇಣಿಗಳನ್ನಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ
1. ಶಿವಾಲಿಕ್ ಶ್ರೇಣಿ 2. ಹಿಮಾಚಲ ( ಮಧ್ಯ ಹಿಮಾಲಯ )
3. ಮಹಾ ಹಿಮಾಲಯ ( ಹಿಮಾದ್ರಿ ).
4. ಹಿಮಾಲಯ ಪರ್ವತದಿಂದಾಗುವ ಪ್ರಯೋಜನಗಳೇನು?
• ಭಾರತಕ್ಕೆ ರಕ್ಷಣೆಯನ್ನು ಒದಗಿಸುತ್ತವೆ.
• ಮಧ್ಯೆ ಏಷ್ಯಾದಿಂದ ಬೀಸುವ ಶೀತಗಾಳಿಯನ್ನು ತಡೆಹಿಡಿಯುತ್ತವೆ.
• ನದಿಗಳ ಉಗಮ ಪ್ರದೇಶವಾಗಿವೆ.
• ಜಲವಿದುಚ್ಛಕ್ತಿ ಉತ್ಪಾದನೆಗೆ ಅನುಕೂಲವಾಗಿವೆ.
• ವೈವಿದ್ಯಮಯ ಸಸ್ಯ & ಪ್ರಾಣಿ ಸಂಕುಲಗಳಿಗೆ ಆಶ್ರಯ ತಾಣವಾಗಿವೆ.
• ಅಪಾರ ಪ್ರಮಾಣದ ಖನಿಜ ಸಂಪನ್ಮೂಲಗಳನ್ನು ಒಳಗೊಂಡಿವೆ.
5. ಡೂನ್‍ಗಳೆಂದರೇನು?
ಶಿವಾಲಿಕ್ ಶ್ರೇಣಿಯಲ್ಲಿರುವ ಸಮತಟ್ಟಾದ ಕಿರಿದಾದ ಮೈದಾನಗಳಿಗೆ ಡೂನ್‍ಗಳೆಂದು ಕರೆಯುತ್ತಾರೆ.
6. ಪರ್ಯಾಯ ಪ್ರಸ್ಥಭೂಮಿಯು ಹೊಂದಿರುವ ವ್ಯಾಪ್ತಿಯನ್ನು ವಿವರಿಸಿ.
1. ಪರ್ಯಾಯ ಪ್ರಸ್ಥಭೂಮಿಯು ಉತ್ತರದಲ್ಲಿ ಸತ್ಲಜ್ ಗಂಗಾ ಮೈದಾನದಿಂದ ದಕ್ಷಿಣದಲ್ಲಿ ಹಿಂದುಮಹಾಸಾಗರದಲ್ಲಿ ಚಾಚಿಕೊಂಡಿದೆ.
2. ಪಶ್ಚಿಮದಲ್ಲಿ ಪಶ್ಚಿಮ ಘಟ್ಟಗಳಿಂದ ಪೂರ್ವದಲ್ಲಿ ಪೂರ್ವ ಘಟ್ಟಗಳಿಂದ ಕೂಡಿಕೊಂಡಿದೆ.
3. ಈ ಪ್ರಸ್ಥಭೂಮಿಯು ತ್ರಿಕೋನಾಕೃತಿಯಲ್ಲಿದ್ದು ಉತ್ತರದಲ್ಲಿ ಅಗಲವಾಗಿದ್ದು ದಕ್ಷಿಣದ ಕಡೆಗೆ ಕಿರಿದಾಗಿದೆ.
4. ಪಶ್ಚಿಮದಲ್ಲಿ ಅರಬ್ಬಿ ಸಮುದ್ರ, ಪೂರ್ವದಲಿ ಬಂಗಾಳಕೊಲ್ಲಿ & ದಕ್ಷಿಣದಲ್ಲಿ ಹಿಂದೂಮಹಾಸಾಗರವನ್ನು ಹೊಂದಿದೆ.
7. ಉತ್ತರದ ಮೈದಾನವನ್ನು ಸಂಚಯನ ಮೈದಾನವೆಂದು ಕರೆಯುತ್ತಾರೆ. ಏಕೆ? ಅಥವಾ ಉತ್ತರದ ಮೈದಾನ ಪ್ರದೇಶಗಳು ಹೇಗೆ ರಚಿತವಾಗಿವೆ?
ಉತ್ತರ ಭಾರತದ ಮೈದಾನಗಳು ಹಿಮಾಲಯದಿಂದ ತುಂಬಿ ಹರಿಯುವ ನದಿಗಳು ಹೊತ್ತು ತಂದು ಹಾಕಿದ ಮೆಕ್ಕಲು ಮಣ್ಣಿನಿಂದ ನಿರ್ಮಿತವಾಗಿರುವದರಿಂದ ಇದನ್ನು ಸಂಚಯನ
ಮೈದಾನವೆಂದು ಕರೆಯುತ್ತಾರೆ.
8. ಭಾರತದ ವಾಯುಗುಣದ ಮೇಲೆ ಹಿಮಾಲಯ ಪರ್ವತಗಳು ಹೇಗೆ ಪ್ರಭಾವ ಬೀರುತ್ತದೆ?
ಹಿಮಾಲಯ ಪರ್ವತಗಳು ಮಧ್ಯ ಏಶಿಯಾದಿಂದ ಬೀಸುವ ಶೀತ ಮಾರುತಗಳನ್ನುತಡೆಗಟ್ಟುತ್ತವೆ. ನೈರುತ್ಯ ಮಾರುತಗಳನ್ನು ತಡೆಗಟ್ಟಿ ಹೆಚ್ಚು ಮಳೆ ಸುರಿಯುವಂತೆ ಮಾಡುತ್ತದೆ.
9. ಪೂರ್ವ & ಪಶ್ಚಿಮ ಘಟ್ಟಗಳ ವ್ಯತ್ಯಾಸವನ್ನು ತಿಳಿಸಿ.
ಪೂರ್ವ ಘಟ್ಟಗಳು
• ಪೂರ್ವ ಘಟ್ಟಗಳು ಹೆಚ್ಚು ಎತ್ತರವಾಗಿಲ್ಲ. ಮತ್ತು ನಿರಂತರವಾಗಿಲ್ಲ.
• ಈ ಘಟ್ಟಗಳು ನದಿ ಕಣಿವೆಗಳಿಂದ
ಅಲ್ಲಲ್ಲಿ ಪ್ರತ್ಯೇಕಿಸಲ್ಪಟ್ಟಿವೆ. ಸಮುದ್ರದಿಂದ ದೂರದಲ್ಲಿ ಹರಡಿವೆ.
• ವಿಶಾಲವಾದ ನದಿಮುಖಜ ಭೂಮಿಯನ್ನು ಒಳಗೊಂಡಿವೆ.
ಪಶ್ಚಿಮ ಘಟ್ಟಗಳು
• ಪಶ್ಚಿಮ ಘಟ್ಟಗಳು ಅತ್ಯಂತ ಹೆಚು ್ಚಎತ್ತರವಾಗಿವೆ. ಮತ್ತು ನಿರಂತರವಾಗಿವೆ.
• ಇವು ಕರಾವಳಿಗೆ ಹೊಂದಿಕೊಂಡು ತುಂಬಾ ಕಡಿದಾಗಿವೆ.
• ಅನೇಕ ಜಲವಿದ್ಯುತ್ ಉತ್ಪಾದನಾ ಕೇಂದ್ರಗಳನ್ನು ಸೃಷ್ಟಿಸಿವೆ.
10. ಪಶ್ಚಿಮ ಕರಾವಳಿ ಮತ್ತು ಪೂರ್ವ ಕರಾವಳಿಗೂ ಇರುವ ವ್ಯತ್ಯಾಸವೇನು?
ಪಶ್ಚಿಮ ಕರಾವಳಿ
• ಪಶ್ಚಿಮ ಕರಾವಳಿಯು ಅರಬ್ಬೀ ಸಮುದ್ರ ಮತ್ತು ಪಶ್ಚಿಮ ಘಟ್ಟಗಳ ನಡುವೆ
• ಗುಜರಾತಿನ ಕಛ್‍ನಿಂದ ಕನ್ಯಾಕುಮಾರಿಯವರೆಗೆ ಹಬ್ಬಿದೆ.
• ಇದು ಇಕ್ಕಟ್ಟಾಗಿದ್ದು ಸಮುದ್ರಕ್ಕೆ ಹೊಂದಿಕೊಂಡಿದೆ.
ಪೂರ್ವ ಕರಾವಳಿ
• ಪೂರ್ವ ಕರಾವಳಿಯು ಪೂರ್ವ ಘಟ್ಟ ಹಾಗೂ ಬಂಗಾಳಕೊಲ್ಲಿ ನಡುವೆ ಕನ್ಯಾಕುಮಾರಿ ಯಿಂದ ಉತ್ತರದಲ್ಲಿ ಗಂಗಾನದಿ ಮುಖಜ ಭೂಮಿಯವರೆಗೆ ಹಬ್ಬಿದೆ.
• ಇದು ಈ ಮೈದಾನವು ಹೆಚ್ಚು ಅಗಲ & ಒಂದೇ ರೀತಿ ಸಮತಟ್ಟಾಗಿದೆ
ಅಧ್ಯಾಯ 3. ಭಾರತದ ವಾಯುಗುಣದ ಋತುಮಾನಗಳು ಮತ್ತು ಲಕ್ಷಣಗಳು (GEO)
ಮುಖ್ಯಾಂಶಗಳು:
• ದೇಶದಲ್ಲಿಯೇ ಅತಿ ಹೆಚ್ಚು ಉಷ್ಣಾಂಶ ಹೊಂದಿರುವ ಪ್ರದೇಶ ರಾಜಸ್ತಾನದ ಗಂಗಾನಗರ (52’ಸೆಂ) ಆಗಿದೆ.
• ಅತಿ ಹೆಚ್ಚು ಮಳೆ ಬೀಳುವ ಋತುಮಾನ ನೈರುತ್ಯ ಮಾನ್ಸೂನ್ ಕಾಲ ಆಗಿದೆ.
• ಭಾರತದಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರದೇಶ ರಾಜಸ್ತಾನದ ರೂಯ್ಲಿ. (8.3 ಸೆಂ.ಮೀ.)
• ಭಾರತದಲ್ಲಿಯೇ ಅತಿ ಹೆಚ್ಚು ಮಳೆಯಾಗುವ ಪ್ರದೇಶ ಮೇಘಾಲಯದ ಮಾಸಿನರಾಮ
• ಭಾರತದ ವ್ಯವಸಾಯವನ್ನು ಮಾನ್ಸೂನ್ ಮಳೆಯ ಜೊತೆಯಲ್ಲಿ ಆಡುವ ಜೂಜಾಟ ಎಂದು ಕರೆಯುತ್ತಾರೆ.
• ಭಾರತದ ವಾಯುಗುಣವನ್ನು ವಾರ್ಷಿಕವಾಗಿ 4 ಋತುಮಾನಗಳನ್ನಾಗಿ ವಿಂಗಡಿಸಲಾಗಿದೆ.
• ಭಾರತದಲ್ಲಿ ನೈರುತ್ಯ ಮನ್ಸೂನ್ ಎಂದರೆ ಮಳೆಗಾಲ ಎಂದರ್ಥ.
8. ಅಕ್ಟೋಬರ್ ತಿಂಗಳಲ್ಲಿ ಉಷ್ಣಾಂಶವು ಉತ್ತರಾರ್ದs ಗೋಳದಲ್ಲಿ ಕಡಿಮೆಯಾಗಲು ಕಾರಣ -
ಸೂರ್ಯನ ಕಿರಣಗಳು ದಕ್ಷಿಣಾರ್ಧ ಗೋಳದ ಮೇಲೆ ಲಂಬವಾಗಿ ಬೀಳುತ್ತವೆ ಅಥವಾ ಸೂರ್ಯನ ಕಿರಣಗಳು ಉತ್ತರಾರ್ಧ ಗೋಳದ ಮೇಲೆ ಓರೆಯಾಗಿ ಬೀಳುತ್ತವೆ.
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ಭಾರತವು ಯಾವ ಬಗೆಯ ವಾಯುಗುಣವನ್ನು ಹೊಂದಿದೆ?
ಭಾರತವು ಉಷ್ಣವಲಯದ ಮಾನ್ಸೂನ್ ಮಾದರಿಯ ವಾಯುಗುಣವನ್ನು ಹೊಂದಿದೆ.
2. ಮಾನ್ಸೂನ್ ಮಾರುತ ಎಂದರೇನು?
ಮಾನ್ಸೂನ್ ಎಂಬ ಪದವು ಅರಬ್ಬಿ ಭಾಷೆಯ ಮೌಸಿಮ್ ಎಂಬ ಪದದಿಂದ ಬಂದಿದೆ.ಇದು ಋತು ಅಥವಾ ಕಾಲ ಎಂ ದರ್ಥ ಕೊಡುತ್ತದೆ.
3. ಯಾವ ಋತುವನ್ನು ಸಾಮಾನ್ಯವಾಗಿ ಮಳೆಗಾಲವೆಂದು ಕರೆಯುವರು?
ನೈರುತ್ಯ ಮಾನ್ಸೂನ್ ಮಾರುತಗಳನ್ನು ಸಾಮಾನ್ಯವಾಗಿ ಮಳೆಗಾಲವೆಂದು ಕರೆಯುವರು.
4. ಭಾರತದ ವಾಯುಗುಣದ ಮೇಲೆ ಪ್ರಭಾವ ಬೀರುವ ಅಂಶಗಳಾವವು?
• ಅಕ್ಷಾಂಶ, ಸಮುದ್ರ ಮಟ್ಟದಿಂದ ಇರುವ ಎತ್ತರ, ಸಾಗರಗಳಿಂದ ಇರುವ ದೂರ,
• ಮಾರುತಗಳು ಬೀಸುವ ದಿಕ್ಕು, ಪರ್ವತ ಸರಣಿಗಳು ಹಬ್ಬಿರುವ ರೀತಿ, ಸಾಗರ ಪ್ರವಾಹಗಳು
5. ಭಾರತದ ವ್ಯವಸಾಯವು ‘ಮಾನ್ಸೂನ್ ಮಾರುತಗಳೊಡನೆ ಆಡುವ ಜೂಜಾಟವಾಗಿದೆ’ ಚರ್ಚಿಸಿ
• ಭಾರತದ ಜನತೆಯ ಪ್ರಧಾನ ಉದ್ಯೋಗವು ವ್ಯವಸಾಯವಾಗಿರುವದರಿಂದ ನೈಋತ್ಯ
• ಮಾನ್ಸೂನ್ ಮಾರುತಗಳು ಒಂದು ವಿಧದಲ್ಲಿ ದೇಶದ ವ್ಯವಸಾಯವನ್ನು ನಿಯಂತ್ರಿಸುತ್ತವೆ.
• ಈ ಮಳೆಯು ವಿಫಲವಾದರೆ ಬರಗಾಲ ಬರುವದು.
• ಅತಿ ಹೆಚ್ಚಾದಾಗ ಪ್ರವಾಹ ಉಂಟಾಗಿ ಪ್ರಾಣಹಾನಿ ಮತ್ತು ಆಸ್ತಿಗಳಿಗೆ ಹಾನಿ ಉಂಟಾಗುತ್ತದೆ.
• ಆದ್ದರಿಂದ ಭಾರತದ ವ್ಯವಸಾಯವನ್ನು ಮಾನ್ಸೂನ್
ಮಳೆಯೊಡನೆ ಆಡುವ ಜೂಜಾಟ ಎಂದು ಕರೆಯುತ್ತಾರೆ.
6. ನೈರುತ್ಯ ಮಾನ್ಸೂನ್ ಮಾರುತಗಳು ಅಕ್ಟೋಬರ್ ತಿಂಗಳಿನ ಆರಂಭದೊಡನೆ ಹಿಂದಿರುಗಲು ಪ್ರಾರಂಭಿಸುತ್ತವೆ ಕಾರಣ ಕೊಡಿ.
ಏಕೆಂದರೆ ಭಾರತದ ಒಳನಾಡಿನ ಉಷ್ಣಾಂಶ ಕಡಿಮೆಯಾಗಿ ಒತ್ತಡ ಹೆಚ್ಚಾಗುತ್ತಾ ಹೋಗುವದರಿಂದ ಮಾನ್ಸೂನ್ ಮಾರುತಗಳು ಹಿಂದಿರುಗಲು ಪ್ರಾರಂಭಿಸುತ್ತವೆ.
7. ಮಾವಿನ ಹೊಯ್ಲು ಎಂದರೇನು?
• ಬೇಸಿಗೆಯ ಅವಧಿಯಲ್ಲಿ ಸ್ಥಳೀಯ ಉಷ್ಣಾಂಶ ಮತ್ತು ಪ್ರಚಲನ ಪ್ರವಾಹಗಳಿಂದ ಎಪ್ರೀಲ್ ಹಾಗೂ ಮೇ ತಿಂಗಳಲ್ಲಿ ಅಲ್ಲಲ್ಲಿ ಮಳೆಯಾಗುತ್ತದೆ.
• ಈ ಮಳೆಯನ್ನು ಪಶ್ಚಿಮ ಬಂಗಾಳದಲ್ಲಿ ಕಾಲಬೈಸಾಕಿ, ದಕ್ಷಿಣ
ಭಾರತದಲ್ಲಿ ಕಾಫಿ ತುಂತುರು ಹಾಗೂ ಮಾವಿನ ಹೊಯ್ಲು ಎಂದು ಕರೆಯುತ್ತಾರೆ.
8. ಭಾರತವನ್ನು ಪ್ರವೇಶಿಸುವ ನೈರುತ್ಯ ಮಾನ್‍ಸೂನ್ ಮಾರುತಗಳ ಎರಡು ಕವಲುಗಳು ಯಾವುವು?
ಅವುಗಳೆಂದರೆ 1. ಅರಬ್ಬಿ ಸಮುದ್ರ ಶಾಖೆ, 2. ಬಂಗಾಳಕೊಲ್ಲಿ ಶಾಖೆ
ಅಧ್ಯಾಯ 4. ಭಾರತದ ಮಣ್ಣುಗಳು (GEO)
ಮುಖ್ಯಾಂಶಗಳು:
• ನದಿಗಳು ಪರ್ವತ ಪ್ರದೇಶದಿಂದ ತಂದು ಸಂಚಯಿಸಿರುವ ಮಣ್ಣಿಗೆ ಮೆಕ್ಕಲು ಮಣ್ಣು ಎಂದು ಹೆಸರು.
• ಕಪ್ಪು ಮಣ್ಣಿನ ಪ್ರದೇಶವನ್ನು ಡೆಕ್ಕನ್ ಟ್ರಾಪ್ ಎಂದು ಸಹ ಕರೆಯುವರು.
• ರಾಜಸ್ತಾನದಲ್ಲಿ ಮರಭೂಮಿ ಮಣ್ಣು ಹೆಚ್ಚಾಗಿ ಕಂಡುಬರುವದು.
• ಜೋಳ ಬೆಳೆಯಲು ಕಪ್ಪು ಮಣ್ಣು ಸೂಕ್ತವಾಗಿದೆ.
• ರಾಗಿ & ಎಣ್ಣೆ ಕಾಳು ಬೆಳೆಯಲು ಕೆಂಪು ಮಣ್ಣು ಸೂಕ್ತವಾಗಿದೆ.
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ಕಪ್ಪು ಮಣ್ಣು ಯಾವ ಯಾವ ಬೆಳೆಗಳಿಗೆ ಹೆಚ್ಚು ಸೂಕ್ತವಾಗಿದೆ?
• ಕಪ್ಪು ಮಣ್ಣು - ಹತ್ತಿ, ಜೋಳ, ಗೋದಿ, ಈರುಳ್ಳಿ,
ಮೆಣಸಿನಕಾಯಿ, ಹೊಗೆಸೊಪ್ಪು,
• ಎಣ್ಣೆಕಾಳುಗಳು, ನಿಂಬೆ & ದ್ರಾಕ್ಷಿ ಮುಂತಾದ ಬೆಳೆಗಳಿಗೆ ಹೆಚ್ಚು ಸೂಕ್ತವಾಗಿದೆ.
2. ಭಾರತದಲ್ಲಿ ಕಂಡು ಬರುವ ಮಣ್ಣಿನ ಮುಖ್ಯ ಪ್ರಕಾರಗಳಾವವು?
ಭಾರತದಲ್ಲಿ ಕಂಡು ಬರುವ ಮಣ್ಣನ್ನು ಆರು ಪ್ರಮುಖ ವಿಧಗಳಾಗಿ ವಿಂಗಡಿಸಲಾಗಿದೆ.
ಅವುಗಳೆಂದರೆ – 1. ಮೆಕ್ಕಲುಮಣ್ಣು, 2. ಕಪ್ಪುಮಣ್ಣು,
3. ಕೆಂಪುಮಣ್ಣು, 4. ಜಂಬಿಟ್ಟಿಗೆ ಮಣ್ಣು,
5. ಮರು¨Àೂsಮಿ ಮಣು,್ಣ 6. ಪರ್ವತ ಮಣ್ಣು.
3. ಉತ್ತರ ಮೈದಾನ ಪ್ರದೇಶದಲ್ಲಿ ಯಾವ ಮಣ್ಣು ಕಂಡು ಬರುತ್ತದೆ?
ಉತ್ತರ ಮೈದಾನ ಪ್ರದೇಶದಲ್ಲಿ ಮೆಕ್ಕಲು ಮಣ್ಣು ಕಂಡು ಬರುತ್ತದೆ.
4. ಮಣ್ಣಿನ ಸಂರಕ್ಷಣೆ ಎಂದರೇನು? ಅದರ ವಿಧಾನಗಳನ್ನು ಪಟ್ಟಿ ಮಾಡಿರಿ.
ಮಣ್ಣಿನ ಸವೆತವನ್ನು ತಡೆಗಟ್ಟುವುದು ಹಾಗೂ ಅದರ
ಫಲವತ್ತತೆಯನ್ನು ಕಾಪಾಡುವುದೇ ‘ಮಣ್ಣಿನ ಸಂರಕ್ಷಣೆ’ ಎನ್ನುವರು. ಮಣ್ಣಿನ ಸವೆತವನ್ನು ತಡೆಗಟ್ಟಲು ಹಲವಾರು ವಿಧಾನಗಳಿವೆ. ಅವುಗಳಲ್ಲಿ
ಮುಖ್ಯವಾದವುಗಳೆಂದರೆ –
• ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡುವುದು.
• ಅಡ್ಡ ಬದುಗಳನ್ನು ನಿರ್ಮಿಸುವದು.
• ವೈಜ್ಞಾನಿಕ ಬೇಸಾಯ ಕ್ರಮಗಳನ್ನು ಅನುಸರಿಸುವದು.
• ಅರಣ್ಯ ನಾಶವನ್ನು ತಡೆಗಟ್ಟಿ ಕಾಡನ್ನು ಬೆಳೆಸುವದು.
• ನೀರಿನ ಸೂಕ್ತ ಬಳಕೆ ಮಾಡುವದು.
• ಚೆಕ್ ಡ್ಯಾಮ್‍ಗಳ ನಿರ್ಮಾಣ.
5. ಮಣ್ಣಿನ ಸವೆತಕ್ಕೆ ಕಾರಣಗಳೇನು?
• ಅರಣ್ಯಗಳ ನಾಶ, 2. ಸಾಕು ಪ್ರಾಣಿಗಳನ್ನು ಮೇಯಿಸುವದು,
• ಅವೈಜ್ಞಾನಿಕ ಬೇಸಾಯ, 4. ಅಧಿಕ ನೀರಾವರಿ ಬಳಕೆ.
6. ಮೆಕ್ಕಲು ಮಣ್ಣಿನ ಗುಣಲಕ್ಷಣಗಳನ್ನು ತಿಳಿಸಿ.
• ಸಮಾರು 7.7 ದಶಲಕ್ಷ ಚ.ಕಿ.ಮೀ. ಪ್ರದೇಶಗಳಲ್ಲಿ ಹರಡಿದೆ.
• ನದಿಗಳು ಪರ್ವತ ಪ್ರದೇಶಗಳಿಂದ ಹೊತ್ತುತಂದು ಸಂಚಯಿಸಿರುವ ಮಣ್ಣಿನಿಂದ ರಚಿತವಾಗಿದೆ.
• ಈ ಮಣ್ಣಿನಲ್ಲಿ ¥ಇಂmಂಚಿμi ಮತ್ತು ಸುಣ್ಣ ಹೆಚ್ಚಾಗಿರುತ್ತದೆ.
• ಜೈವಿಕಾಂಶ & ಸಾರಜನಕ ಕಡಿಮೆ ಪ್ರಮಾಣದಲ್ಲಿರುತ್ತವೆ.
• 5 ಇಲ್ಲಿ ಬೆಳೆಯುವ ಪ್ರಮುಖ ಬೆಳೆಗಳೆಂದರೆ ಗೋದಿ, ಭತ್ತ, ಕಬ್ಬು & ಸಣಬು.
7. ಮಣ್ಣಿನ ಸವೆತ ಎಂದರೇನು? ಅದರಿಂದ ಉಂಟಾಗುವ ಸಮಸ್ಯೆಗಳು ಅಥವಾ ಪರಿಣಾಮಗಳನ್ನು ಪಟ್ಟಿಮಾಡಿ.
ಭೂಮೇಲ್ಮೈಯಲ್ಲಿ ಕಂಡು ಬರುವ ಸಡಿಲವಾದ ಪದರವು ವಿವಿಧ ಪ್ರಾಕೃತಿಕ ಶಕ್ತಿಗಳಿಂದ ಸ್ಥಳಾಂತರ ಹೊಂದುವ ಕ್ರಿಯೆಯನ್ನೇ ಮಣ್ಣಿನ ಸವೆತ ಅಥವಾ ಭೂಸವೆತ ಎಂದು ಕರೆಯುತ್ತಾರೆ.
ಮಣ್ಣಿನ ಸವೆತದಿಂದ ಉಂಟಾಗುವ ಪರಿಣಾಮಗಳು.
• ನದಿಗಳಲ್ಲಿ ಹೂಳು ತುಂಬಿ ಪ್ರವಾಹ ಉಂಟಾಗುತ್ತದೆ.
• ನದಿಗಳು ತಮ್ಮ ದಿಕ್ಕನ್ನು ಬದಲಾಯಿಸಿ ಆಸ್ತಿ ಪಾಸ್ತಿಗೆ ಹಾನಿ ಉಂಟು ಮಾಡುತ್ತವೆ.
• ಜಲಾಶಯ ಅಥವಾ ಕರೆಗಳಲ್ಲಿ ಹೂಳು ತುಂಬುವದರಿಂದ ನೀರಿನ ಸಂಗ್ರಹಣಾ ಸಾಮಥ್ರ್ಯ ಕಡಿಮೆಯಾಗುವದು.
• ಭೂಸವೆತದಿಂದ ಭೂಮಿಯಲ್ಲಿ ಇಂಗುವ ನೀರಿನ ಪ್ರಮಾಣ ಕಡಿಮೆಯಾಗುವದು.
• ಭೂಸವೆತದಿಂದ ಭೂಮಿಯ ಫಲವತ್ತತೆ ಕಡಿಮೆಯಾಗುವದು.
8. ಕಪ್ಪು ಮಣ್ಣಿನ ಗುಣಲಕ್ಷಣಗಳನ್ನು ತಿಳಿಸಿರಿ.
• ಈ ಮಣ್ಣು ಹತ್ತಿ ಬೆಳೆಗೆ ಹೆಚ್ಚು ಉಪಯುಕ್ತವಾದುದು.
• ಈ ಮಣ್ಣು ಅಗ್ನಿಶಿಲೆಗಳ ಶಿಥಿಲಿಕರಣದಿಂದ ಉತ್ಪತ್ತಿಯಾಗಿದೆ.
• ಇದರಲ್ಲಿ ಜೇಡಿಮಣ್ಣಿನ ಕಣಗಳು ಹೆಚ್ಚಾಗಿ ಕಂಡುಬರುತ್ತವೆ.
• ಮಣ್ಣು ಫಲವತ್ತಾಗಿದ್ದು ತೇವಾಂಶವನ್ನು ಹಿಡಿದಿಟ್ಟುಕೊಳ್ಳಲು ಸಮರ್ಥವಾಗಿದೆ.
• ಈ ಮಣ್ಣು ಕಬ್ಬಿಣ, ಸುಣ್ಣ ಹಾಗೂ ಮೆಗ್ನೀಷಿಯಂ ಕಾರ್ಬೋನೇಟ್‍ಗಳನ್ನು ಅಧಿಕ ಪ್ರಮಾಣದಲ್ಲಿ ಒಳಗೊಂಡಿದೆ.
• ಬೆಳೆಯುವ ಪ್ರಮುಖ ಬೆಳೆಗಳೆಂದರೆ ಹತ್ತಿ, ಜೋಳ, ಗೋಧಿ, ಈರುಳ್ಳಿ, ಮೆಣಸಿನಕಾಯಿ.
9. ಕೆಂಪು ಮಣ್ಣಿನ ಗುಣಲಕ್ಷಣಗಳನ್ನು ತಿಳಿಸಿ.
• ಈ ಮಣ್ಣು ಸ್ಪಟಿಕ ಶಿಲೆಗಳ ಶಿಥಲೀಕರಣದಿಂದ ಉಂಟಾಗುತ್ತದೆ.
• ಈ ಮಣ್ಣಿನಲ್ಲಿ ಕಬ್ಬಿಣದ ಅಂಶವು ಕಬ್ಬಿಣದ ಆಕ್ಸೈಡ್ ಆಗಿ ಪರಿವರ್ತನೆ ಹೊಂದುವದರಿಂದ
• ಇದು ಕೆಂಪು ಬಣ್ಣವನ್ನು ಹೊಂದಿದೆ.
• ಜೈವಿಕಾಂಶ, ರಂಜಕ ಮತ್ತು ಸುಣ್ಣದ ಕೊರತೆ ಈ ಮಣ್ಣಿನಲ್ಲಿದೆ.
• ಇಲ್ಲಿ ಬೆಳೆಯುವ ಪ್ರಮುಖ ಬೆಳೆಗಳೆಂದರೆ ಹೊಗೆಸೊಪ್ಪು, ಎಣ್ಣೆಕಾಳು, ಕಬ್ಬು, ಹತ್ತಿ.
10. ಹಿಮಾಲಯ ಪರ್ವತಗಳಲ್ಲಿ ಯಾವ ಬಗೆಯ ಮಣ್ಣು ಕಂಡು
ಬರುವುದು?
ಹಿಮಾಲಯ ಪರ್ವತಗಳಲ್ಲಿ ಕೊಳೆತ ಜೈವಿಕಾಂಶಗಳನ್ನೊಳಗೊಂಡ ಮಣ್ಣು ಕಂಡು ಬರುವದು
ಅಧ್ಯಾಯ 5. ಭಾರತದ ಅರಣ್ಯಗಳು (GEO)
ಮುಖ್ಯಾಂಶಗಳು:
• ಅಸ್ಸಾಂ, ಮೇಘಾಲಯಗಳಲ್ಲಿ ಕಂಡುಬರುವ ಅರಣ್ಯದ ಪ್ರಕಾರವು ನಿತ್ಯ ಹರಿದ್ವರ್ಣ ಅರಣ್ಯ ಆಗಿದೆ.
• ಹಿಮಾಲಯದಲ್ಲಿ ಅಲ್ಫೈನ್ ಅರಣ್ಯಗಳು ಕಂಡುಬರುತ್ತವೆ.
• ಗಂಗಾನದಿ ಮುಖಜ ಭೂಮಿಯನ್ನು ಸುಂದರಬನ ಎಂದು ಕರೆಯುತ್ತಾರೆ.
• ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವು ಕರ್ನಾಟಕ ರಾಜ್ಯದಲ್ಲಿದೆ.
• ಸುಂದರಬನ್ ಎಂದು ಕರೆಯಲು ಸುಂದರಿ ಮರಗಳು ಬೆಳೆಯಲು ಕಾರಣವಾಗಿದೆ.
• ದೇಶದಲ್ಲಿ ಅರಣ್ಯ ಪ್ರದೇಶದ ಹಂಚಿಕೆಯಲ್ಲಿ ಮಧ್ಯಪ್ರದೇಶ ರಾಜ್ಯ ಪ್ರಥಮ ಸ್ಥಾನದಲ್ಲಿದ್ದರೆ,
• ಹರಿಯಾಣ ರಾಜ್ಯವು ಕೊನೆ ಸ್ಥಾನದಲ್ಲಿದ್ದು, ಕರ್ನಾಟಕವು 13ನೇ ಸ್ಥಾನದಲ್ಲಿದೆ.
• ಭಾರತದಲ್ಲಿ ಇಂದು 523 ವನ್ಯಜೀವಿ ಧಾಮಗಳಿವೆ.
• ಭಾರತದಲ್ಲಿ ಸ್ಥಾಪಿತವಾದ ಮೊದಲ ರಾಷ್ಟ್ರೀಯ ಉದ್ಯಾನವನವೆಂದರೆ ಉತ್ತರಾಂಚಲದ ಜಿಮ್ ಕಾರ್ಬೆಟ್.
• ಜೀವವ್ಯವಸ್ಥೆಯನ್ನು ಕಾಪಾಡಲು ದೇಶದಲ್ಲಿ 18 ಜೈವಿಕ ವಲಯಗಳನ್ನು ಸಂರಕ್ಷಿಸಲಾಗಿದೆ.
• ದೇಶದಲ್ಲಿ ಪ್ರಥಮ ಜೈವಿಕ ಸಂರಕ್ಷಣಾ ವಲಯ ನೀಲಗಿರಿ ಸಂರಕ್ಷಣಾ ವಲಯ.
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ಭಾರತವು ಹೊಂದಿರುವ ಅರಣ್ಯ ಪ್ರದೇಶಗ¼ಇμಂಂಔ?
ಭಾರತವು 2009 ರ ಅಂದಾಜಿನಂತೆ 6.9 ಲಕ್ಷ ಚ.ಕಿ.ಮೀ.(69.0 ದ.ಲ.ಹೇ.) ಅಂದರೇ ಭೌಗೋಳಿಕ ಕ್ಷೇತ್ರದ ಶೇ. 21.02 ಭೂಭಾಗವು ಅರಣ್ಯಗಳಿಂದ ಕೂಡಿರುವುದಾಗಿದೆ.
2. ಕರ್ನಾಟಕದ ರಾಷ್ಟ್ರೀಯ ಉದ್ಯಾನವನಗಳನ್ನು ಹೆಸರಿಸಿ.
ಕರ್ನಾಟಕದ ರಾಷ್ಟ್ರೀಯ ಉದ್ಯಾನವನಗಳು : ಬಂಡಿಪುರ, ನಾಗರಹೊಳೆ, ಬನ್ನೇರುಘಟ್ಟ.
3. ಸ್ವಾಭಾವಿಕ ಸಸ್ಯವರ್ಗ ಎಂದರೇನು?
ಒಂದು ಪ್ರದೇಶದಲ್ಲಿ ಪ್ರಕೃತಿದತ್ತವಾಗಿ ಬೆಳೆದಿರುವ ಎಲ್ಲಾ ಬಗೆಯ ಸಸ್ಯ ಸಮೂಹವನ್ನು ಅರಣ್ಯಗಳು ಅಥವಾ ಸ್ವಾಭಾವಿಕ ಸಸ್ಯವರ್ಗವೆಂದು ಕರೆಯುವರು.
4. ಭಾರತದ ಸಸ್ಯವರ್ಗವನ್ನು ಎಷ್ಟು ವಿಧಗಳಾಗಿ ವಿಂಗಡಿಸಲಾಗಿದೆ? ಅವು ಯಾವುವು?
• ಭಾರತದ ಸಸ್ಯವರ್ಗವನ್ನು ಆರು ವಿಧಗಳಾಗಿ ವಿಂಗಡಿಸಬಹುದು.
• 1. ಉಷ್ಟವಲಯದ ನಿತ್ಯ ಹರಿದ್ವರ್ಣ ಕಾಡುಗಳು
2. ಉಷ್ಟವಲಯದ ಎಲೆ ಉದುರುವಕಾಡುಗಳು
3. ಉಷ್ಟವಲಯದ ಮುಳ್ಳುಗಿಡಗಳು ಮತ್ತು ಪೊದೆಗಳು
4. ಮರುಭೂಮಿ ಸಸ್ಯವರ್ಗ
5. ಮ್ಯಾಂಗ್ರೋವ್ ಕಾಡುಗಳು
6. ಹಿಮಾಲಯ ಸಸ್ಯವರ್ಗ
5. ಜೈವಿಕ ವೈವಿದ್ಯತೆ ಎಂದರೇನು?
ಭಾರತದಲ್ಲಿ ವೈವಿಧ್ಯಮಯವಾದ ಭೂಸ್ವರೂಪ, ವಾಯುಗುಣ ಮತ್ತು ಸ್ವಾಭಾವಿಕ ಸಸ್ಯವರ್ಗಕ್ಕೆ ಅನುಗುಣವಾಗಿ ಇಲ್ಲಿನ ಪ್ರಾಣಿವರ್ಗ ಮತ್ತು ಪಕ್ಷಿಸಂಕುಲಗಳೂ ವೈವಿಧ್ಯಮಯವಾಗಿವೆ.
ಆದ್ದರಿಂದ ಇದನ್ನು ಜೈವಿಕ ವೈವಿದ್ಯತೆ ಎನ್ನುತ್ತಾರೆ.
6. ದೇಶದಲ್ಲಿ ಅರಣ್ಯ ಸಂರಕ್ಷಣೆಗೆ ನಿಮ್ಮ ಸಲಹೆಯೇನು? ಅಥವಾ
ಅರಣ್ಯ ಸಂರಕ್ಷಣೆ ಎಂದರೇನು? ಸಂರಕ್ಷಣಾ ವಿಧಾನಗಳನ್ನು ತಿಳಿಸಿ.
ಅರಣ್ಯಗಳನ್ನು ಮಾನವ, ಪ್ರಾಣಿಗಳಿಂದ ಹಾಗೂ ನೈಸರ್ಗಿಕ ವಿಪತ್ತುಗಳಿಂದ ಕಾಪಾಡುವದನ್ನೇ ಅರಣ್ಯ ಸಂರಕ್ಷಣೆ ಎಂದು ಕರೆಯುವರು.
ಅರಣ್ಯ ಸಂರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳು
• ಅರಣ್ಯದ ಮರಗಳಿಗೆ ತಗುಲುವ ರೋಗಗಳನ್ನು ನಿಯಂತ್ರಿಸುವದು.
• ಸಸಿಗಳನ್ನು ನೆಡುವದು, ಬೀಜಗಳನ್ನು ಹರಡುವದು.
• ಕಾನೂನು ಬಾಹಿರವಾಗಿ ಮರ ಕಡಿಯುವದನ್ನು ನಿಯಂತ್ರಿಸುವದು.
• ಸಾರ್ವಜನಿಕರನ್ನು ಮರ ನೆಡಲು ಪ್ರೋತ್ಸಾಹಿಸುವದು.
• ಅರಣ್ಯಗಳಲ್ಲಿ ಸಾಕುಪ್ರಾಣಿಗಳನ್ನು ಮೇಯಿಸುವದನ್ನು ನಿಯಂತ್ರಿಸುವದು.
• ಅರಣ್ಯಗಳ ಪ್ರಾಮುಖ್ಯತೆಯ ಬಗ್ಗೆ ತಿಳುವಳಿಕೆ ನೀಡಿ ರಕ್ಷಣೆಗೆ ಪ್ರೇರೇಪಿಸುವದು.
7. ಭಾರತದಲ್ಲಿ ಎಲೆ ಉದುರುವ ಅರಣ್ಯಗಳ ಲಕ್ಷಣ ಮತ್ತು
ಹಂಚಿಕೆಯನ್ನು ತಿಳಿಸಿ.
• ವಾರ್ಷಿಕ ಸರಾಸರಿ 75 ರಿಂದ 250 ಸೆಂ.ಮೀ. ಮಳೆ ಬೀಳುವ ಕಡೆಗಳಲ್ಲಿ ಈ ಅರಣ್ಯಗಳು ಕಂಡು ಬರುತ್ತವೆ.
• ಈ ಕಾಡುಗಳಲ್ಲಿ ಮರಗಳು ವಿರಳವಾಗಿಯೂ, ಕಡಿಮೆ ಎತ್ತರವಾಗಿಯೂ ಬೆಳೆದಿರುತ್ತವೆ.
• ಬೇಸಿಗೆಯ ಆರಂಭದಲ್ಲಿ ಈ ಮರಗಳ ಎಲೆಗಳು ಉದುರುತ್ತವೆ.
• ಬೆಲೆ ಬಾಳುವ ತೇಗ, ಸಾಲ, ಶ್ರೀಗಂಧ ಮರಗಳು ಹೆಚ್ಚಾಗಿ ಕಂಡುಬರುತ್ತವೆ.
• ಇವು ಪಶ್ಚಿಮ ಘಟ್ಟದ ಪೂರ್ವದ ಇಳಿಜಾರು, ಜಮ್ಮು & ಕಾಶ್ಮೀರ, ಬಂಗಾಳ, ಛತ್ತೀಸಘಡ್,
• ಒರಿಸ್ಸಾ, ಬಿಹಾರ & ಝಾರ್ಖಂಡ್‍ಗಳಲ್ಲಿ ಕಂಡುಬರುತ್ತವೆ.
8. ಭಾರತದಲ್ಲಿ ನಿತ್ಯಹರಿದ್ವರ್ಣ ಕಾಡುಗಳ ಲಕ್ಷಣ ಮತ್ತು ಹಂಚಿಕೆಯನ್ನು ತಿಳಿಸಿ.
• ಈ ಸಸ್ಯವರ್ಗವು ವರ್ಷದಲ್ಲಿ 250 ಸೇಂ.ಮೀ.ಗಿಂತ ಹೆಚ್ಚು ಮಳೆ ಬೀಳುವ ಮತ್ತು 25’ರಿಂದ
• 27’ಸೆ. ಉಷ್ಣಾಂಶವಿರುವ ಪ್ರದೇಶಗಳಲ್ಲಿ ಕಂಡುಬರುತ್ತವೆ.
• ಇಲ್ಲಿನ ಮರಗಳು 60 ಮೀಟರ ಎತ್ತರವಾಗಿ ಬೆಳೆದಿರುತ್ತವೆ.
• ಇಲ್ಲಿನ ಮುಖ್ಯ ಮರಗಳೆಂದರೆ ಎಬೋನಿ, ಮಹಾಗನಿ, ಕರಿಮರ, ಬಿದಿರು ಮತ್ತು ರಬ್ಬರ
• ಭಾರತದಲ್ಲಿ ಈ ಕಾಡುಗಳು ಪಶ್ಚಿಮ ಘಟ್ಟದ ಪಶ್ಚಿಮ ಭಾಗ, ಈಶಾನ್ಯ ಬೆಟ್ಟ ಗುಡ್ಡಗಳಪ್ರದೇಶ, ಅಂಡಮಾನ್ ಮತ್ತು ನಿಕೋಬಾರ ದ್ವೀಪಗಲ್ಲಿ ಕಂಡು ಬರುತ್ತವೆ.
8. ಮಾನ್ಸೂನ್ ಕಾಡುಗಳು ಮತ್ತು ಮಾನ್‍ಗ್ರೋವ್ ಕಾಡುಗಳಲ್ಲಿ
ಕಂಡುಬರುವ ವ್ಯತ್ಯಾಸಗಳೇನು?
ಮಾನ್ಸೂನ್ ಕಾಡುಗಳು 75 ರಿಂದ 250 ಸೆಂ.ಮೀ. ಮಳೆ
ಬೀಳುವ ಪ್ರದೇಶಗಳಲ್ಲಿ ಕಂಡುಬರುತ್ತವೆ. ಬೇಸಿಗೆ ಆರಂಭದಲ್ಲಿ
ಈ ಅರಣ್ಯಗಳ ಮರಗಳ ಎಲೆಗಳು ಉದುರುತ್ತವೆ. ಆದರೆ
ಮ್ಯಾನ್‍ಗ್ರೋವ್ ಅರಣ್ಯಗಳು ತೀರ ಪ್ರದೇಶಗಳ
ತಗ್ಗುವಲಯಗಳು ಸಮುದ್ರದ ಉಬ್ಬರದ ಕಾಲದಲ್ಲಿ ನೀರಿನಿಂದ
ಆವರಿಸಲ್ಪಡುತ್ತವೆ. ಈ ಕಾಡುಗಳು ನದಿಮುಖಜ ಮತ್ತು ನದಿ
ಅಳಿವೆಗಳ ತಗ್ಗು ಪ್ರದೇಶಗಳಲಿ ಕಂಡುಬರುತ್ತವೆ.
10. ಸುಂದರಬನ್ಸ ಎಂದರೇನು?
ಗಂಗಾನದಿಯ ಮುಖಜಭೂಮಿಯಲ್ಲಿ ಸುಂದರಿ ಮರಗಳು ಅಧಿಕವಾಗಿರುವದರಿಂದ ಈ ಪ್ರದೇಶವನ್ನು ಸುಂದರಬನ್ಸ ಕಾಡುಗಳು ಎಂದು ಕರೆಯುತ್ತಾರೆ.
11. ಅರಣ್ಯಗಳ ಪ್ರಾಮುಖ್ಯತೆಯನ್ನು ತಿಳಿಸಿ.
• ಕೈಗಾರಿಕೆಗಳಿಗೆ ಬೇಕಾದ ಕಚ್ಚಾವಸ್ತುಗಳನ್ನು, ಗಿಡಮೂಲಿಕೆಗಳು, ಪಶುಗಳಿಗೆ ಆಹಾರವನ್ನು ಒದಗಿಸುತ್ತವೆ.
• ಕಾಡುಗಳು ತೇವಾಂಶವನ್ನು ಪೂರೈಸಿ ಉμಂUಂ}Àವನ್ನು ಮಾರ್ಪಡಿಸುತ್ತವೆ.
• ತೇವಾಂಶವುಳ್ಳ ಮಾರುತಗಳನ್ನು ತಡೆದು ಮಳೆ ಬೀಳುವದಕ್ಕೆ ನೆರವಾಗುತ್ತವೆ.
• ಕಾಡುಗಳು ಮಣ್ಣಿನ ಸವಕಳಿಯನ್ನು ತಡೆಗಟ್ಟುತ್ತವೆ. ಹಾಗೂ ಫಲವತ್ತತೆಯನ್ನು ಹೆಚ್ಚಿಸುತ್ತವೆ.
• ಕಾಡುಗಳು ಅನೇಕ ಪ್ರಾಣಿ ಪಕ್ಷಿಗಳಿಗೆ ಆಶ್ರಯ ನೀಡಿವೆ.
• ಕಾಡುಗಳು ಪರಿಸರ ಸಮತೋಲನ ಕಾಯ್ದುಕೊಳ್ಳಲು ಸಹಕರಿಸುತ್ತವೆ.
• ವನ್ಯಧಾಮಗಳನ್ನೊಂದಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತವೆ.
ಅಧ್ಯಾಯ 6. ಜಲ ಸಂಪನ್ಮೂಲಗಳು (GEO)
ಮುಖ್ಯಾಂಶಗಳು:
• ದಾಮೋದರ ನದಿಯನ್ನು ಬಂಗಾಳದ ಕಣ್ಣೀರಿನ ನದಿ ಎಂದು ಕರೆಯುತ್ತಾರೆ.
• ಬಿಹಾರದ ಕಣ್ಣೀರಿನ ನದಿ ಕೋಸಿ ನದಿ.
• ಕರ್ನಾಟಕದ ದೊಡ್ಡ ನೀರಾವರಿ ಯೋಜನೆ ಕೃಷ್ಣಾ ಮೇಲ್ದಂಡೆ ಯೋಜನೆ.
• ಕಾವೇರಿ ನದಿಗೆ ಶಿವನಸಮುದ್ರ ಎಂಬಲ್ಲಿ ವಿದ್ಯುಚ್ಛಕ್ತಿ ಯೋಜನೆಯನ್ನು ನಿರ್ಮಿಸಲಾಗಿದೆ.
• ಹಿರಾಕುಡ್ ಯೋಜನೆಯನ್ನು ಮಹಾನದಿಗೆ ನಿರ್ಮಿಸಲಾಗಿದೆ.
• ದಾಮೋದರ ನದಿ ಕಣಿವೆ ಯೋಜನೆಯು ಸ್ವತಂತ್ರ ಭಾರತದ ಮೊದಲನೆಯ ವಿವಿದೋದ್ದೇಶನದಿ ಕಣಿವೆ ಯೋಜನೆಯಾಗಿದೆ.
• ಭಾಕ್ರಾ ನಂಗಲ್ ಯೋಜನೆಯು ಭಾರತದಲ್ಲಿಯೇ ಅತ್ಯಂತ ಎತ್ತರವಾದ ವಿವಿದೋದ್ದೇಶ ನದಿ ಕಣಿವೆ ಯೋಜನೆಯಾಗಿದೆ.
• ಭಾಕ್ರಾ ನಂಗಲ್ : ಗೋವಿಂದ ಸಾಗರ : : ತುಂಗಭದ್ರಾ : ಪಂಪಸಾಗರ.
• ಮಹಾನದಿಯನ್ನು ಒರಿಸ್ಸಾದ ಕಣ್ಣೀರಿನ ನದಿ ಎಂದು ಕರೆಯುತ್ತಾರೆ.
• ಹಿರಾಕುಡ್ ಆಣೆಕಟ್ಟು ಭಾರತದಲ್ಲಿಯೇ ಅತ್ಯಂತ ಉದ್ದವಾದ ಆಣೆಕಟ್ಟಾಗಿದೆ.
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ನೀರಾವರಿ ಎಂದರೇನು? ನೀರಾವರಿಯ ವಿಧಗಳಾವವು?
ನೀರಾವರಿ ಎಂದರೆ ವ್ಯವಸಾಯ ಭೂಮಿಗೆ ಕೃತಕವಾಗಿ ಕಾಲುವೆ, ಬಾವಿ & ಕರೆಗಳಿಂದ ನೀರು ಸರಬರಾಜು ಮಾಡುವುದಾಗಿದೆ.
ನೀರಾವರಿಯ ವಿಧಗಳು - ಬಾವಿ ನೀರಾವರಿ, ಕಾಲುವೆ ನೀರಾವರಿ & ಕೆರೆ ನೀರಾವರಿ
2. ವಿವಿದೋದ್ದೇಶ ನದಿ ಕಣಿವೆ ಯೋಜನೆ ಎಂದರೇನು? ಅದರ
ಉದ್ದೇಶಗಳಾವವು?
ವ್ಯವಸಾಯಕ್ಕೆ ನೀರನ್ನು ಒದಗಿಸುವದಲ್ಲದೆ ಜಲಸಂಪತ್ತಿನ ಗರಿಷ್ಟ ಪ್ರಮಾಣದ ಉಪಯೋಗಕ್ಕಾಗಿ ಹಲವಾರು ಉದ್ದೇಶಗಳನ್ನಿಟ್ಟುಕೊಂಡು ರೂಪಿಸಿದ ಯೋಜನೆಯನ್ನು ವಿವಿದೋದ್ದೇಶ ನದಿ ಕಣಿವೆ ಯೋಜನೆ ಎಂದು ಕರೆಯುತ್ತಾರೆ.
ವಿವಿದೋದ್ದೇಶ ನದಿ ಕಣಿವೆ ಯೋಜನೆಯ ಉದ್ದೇಶಗಳು
• ನೀರಾವರಿ ಸೌಲಭ್ಯವನ್ನು ಒದಗಿಸುವದು.
• ಜಲವಿದ್ಯುಚ್ಛಕ್ತಿ ಉತ್ಪಾದಿಸುವದು.
• ನದಿಗಳ ಪ್ರವಾಹಗಳನ್ನು ನಿಯಂತ್ರಿಸುವದು.
• ನೌಕಾಯಾನದ ಸೌಲಭ್ಯವನ್ನು ಒದಗಿಸುವದು.
• ಗೃಹಬಳಕೆ ಹಾಗೂ ಕೈಗಾರಿಕೆಗಳಿಗೆ ನೀರನ್ನು ಒದಗಿಸುವದು.
• ಮಣ್ಣಿನ ಸವಕಳಿಯನ್ನು ನಿಯಂತ್ರಿಸುವದು.
• ಮೀನುಗಾರಿಕೆಯನ್ನು ಅಭಿವೃದ್ಧಿಪಡಿಸುವುದು.
• ಅರಣ್ಯ ಸಂಪತ್ತನ್ನು ವೃದ್ಧಿಸುವದು.
3. ಸರ್ವಕಾಲಿಕ ಕಾಲುವೆ ಎಂದರೇನು?
ನದಿಗಳಿಗೆ ಆಣೆಕಟ್ಟನ್ನು ಕಟ್ಟಿ ಜಲಾಶಯಗಳನ್ನು ನಿರ್ಮಿಸಿ, ನೀರನ್ನು ಸಂಗ್ರಹಿಸಿ, ಕೃಷಿ ಭೂಮಿಗೆ ನೀರನ್ನೊದಗಿಸಲು ತೋಡುವ ಕಾಲುವೆಗಳಿಗೆ ‘ಸರ್ವಕಾಲಿಕ ಕಾಲುವೆ’ಗಳೆಂದು ಕರೆಯುವರು.
4. ಭಾಕ್ರಾನಂಗಲ್ ಯೋಜನೆಯನ್ನು ಕುರಿತು ಬರೆಯಿರಿ.
• ಭಾಕ್ರಾ ನಂಗಲ್ ಯೋಜನೆಯು ಭಾರತದಲ್ಲಿಯೇ ಅತ್ಯಂತ ಎತ್ತರವಾದ ವಿವಿದೋದ್ದೇಶ ನದಿ ಕಣಿವೆ ಯೋಜನೆಯಾಗಿದೆ.
• ಹಿಮಾಚಲ ಪ್ರದೇಶದ ಭಾಕ್ರಾ & ನಂಗಲ್ ಎಂಬಲ್ಲಿ ಸಟ್ಲೆಜ್ ನದಿಗೆ ಆಣೆಕಟ್ಟುಗಳನ್ನು ಕಟ್ಟಲಾಗಿದೆ.
• ಹಿಮಾಚಲ ಪ್ರದೇಶ & ದೆಹಲಿಗಳು ನೀರಾವರಿ & ವಿದ್ಯುಚ್ಛಕ್ತಿ ಸೌಲಭ್ಯವನ್ನು ಪಡೆಯುತ್ತವೆ.
• ಈ ಜಲಾಶಯವನ್ನು ಗೋವಿಂದಸಾಗರ ಎಂದು ಕರೆಯುತ್ತಾರೆ.
5. ಮಳೆಕೊಯ್ಲು ಅಥವಾ ಮಳೆ ನೀರಿನ ಸಂಗ್ರಹಣೆ ಇಂದು ಕಡ್ಡಾಯವಾಗಿದೆ. ಏಕೆ?
• ಭಾರತದಲ್ಲಿ ಜಲಸಂಪತ್ತು ಅಪಾರ ಪ್ರಮಾಣದಲ್ಲಿದ್ದರೂ ಅದು ಅಸಮಾನತೆಯಿಂದ ಕೂಡಿದೆ.
• ಮಳೆಗಾಲದ ಅವಧಿ ಕಡಿಮೆ ಇದ್ದು ಬೇಸಿಗೆಯಲ್ಲಿ ನೀರಿನ ಕೊರತೆ ಕಂಡುಬರುತ್ತದೆ.
• ದೇಶದಲ್ಲಿ ಕಂಡುಬರುತ್ತಿರುವ ಜಲಕ್ಷಾಮದ ಪರಿಹಾರಕ್ಕೆ ಇರುವ ಸರಳ ಮಾರ್ಗವೆಂದರೆ
• ಮಳೆ ಕೊಯ್ಲು ಅಥವಾ ಮಳೆ ನೀರಿನ ಸಂಗ್ರಹಣೆ ಮಾಡುವುದು ಇಂದು ಕಡ್ಡಾಯವಾಗಿದೆ.
6. ಕರ್ನಾಟಕದ ಜಲವಿದ್ಯುತ್ ಉತ್ಪಾದನಾ ಕೇಂದ್ರಗಳನ್ನು ಹೆಸರಿಸಿ.
ಶಿವನಸಮುದ್ರ, ತುಂಗಭದ್ರಾ, ಜೋಗ, ಭದ್ರಾ, ಕೃಷ್ಣಾ ಯೋಜನೆ, ಕಾಳಿ ಯೋಜನೆಗಳು ಕರ್ನಾಟಕದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರಗಳಾಗಿವೆ.
7. ಸಣ್ಣ ಹಿಡುವಳಿದಾರರಿಗೆ ಬಾವಿ ನೀರಾವರಿಯು ಅತ್ಯಂತ
ಸೂಕ್ತವಾದದು ಏಕೆ?
ಸಣ್ಣ ಹಿಡುವಳಿದಾರರರಿಗೆ ಬಾವಿ ನೀರಾವರಿಯು ಸೂಕ್ತವಾದದು ಏಕೆಂದರೆ ಬಾವಿಗಳ ನಿರ್ಮಾಣಕ್ಕೆ ಅಧಿಕ ಬಂಡವಾಳ ಅಥವಾ ತಾಂತ್ರಿಕತೆಯ ಅವಶ್ಯಕತೆ ಇಲ್ಲ. ವರ್ಷದ ಎಲ್ಲಾ ಕಾಲದಲ್ಲಿಯೂ ಬಾವಿಗಳಿಂದ ನೀರಾವರಿ ಸೌಲಭ್ಯ ಸಾಧ್ಯ.
8. ರಾಷ್ಟ್ರೀಯ ವಿದ್ಯುತ್ ಜಾಲ ಎಂದರೇನು?
ಹೆಚ್ಚುವರಿ ವಿದ್ಯುತ್ತನ್ನು ಕೊರತೆಯಿರುವ ಪ್ರದೇಶಗಳಿಗೆ ಸಾಗಿಸಲು ಹಾಗೂ ವಿದ್ಯುತ್ತನ್ನು ಸಮರ್ಪಕವಾಗಿ ಪ್ರಸರಣ ಮಾಡಲು ಅಳವಡಿಸಿರುವ ವಿದ್ಯುತ್ ಜಾಲವನ್ನೇ ರಾಷ್ಟ್ರೀಯ ವಿದ್ಯುತ್ ಜಾಲ ಎನ್ನುವರು.
9. ಭಾರತದ ಪ್ರಮುಖ ವಿವಿದೋದ್ದೇಶ ನದಿ ಕಣಿವೆ ಯೋಜನೆಗಳು
ಯಾವವು?
• ದಾಮೋದರ ನದಿ ಕಣಿವೆ ಯೋಜನೆ 2. ಭಾಕ್ರಾ ನಂಗಲ್ ಯೋಜನೆ
• ಕೋಸಿ ಯೋಜನೆ 4. ಹಿರಾಕುಡ್ ಯೋಜನೆ
• ತುಂಗಭದ್ರಾ ಯೋಜನೆ 6. ನಾಗಾರ್ಜುನ ಸಾಗರ ಯೋಜನೆ
• ಕೃಷ್ಣಾ ಮೇಲ್ದಂಡೆ ಯೋಜನೆ 8 ನರ್ಮದಾ ನದಿ ಕಣಿವೆ ಯೋಜನೆ.
10. ಮಳೆ ಕೊಯ್ಲಿನಲ್ಲಿ ಎಷ್ಟು ಪ್ರಕಾರ? ಅವು ಯಾವವು?
• ಮಳೆ ಬಿದ್ದ ಸ್ಥಳದಲ್ಲಿಯೇ ನೀರನ್ನು ಸಂಗ್ರಹಿಸುವದು. ಉದಾ : ಮನೆಯ ಮೇಲ್ಚಾವಣಿಯಿಂದ.
• ಮಳೆ ಬಿದ್ದ ನಂತರ ಹರಿಯುವ ನೀರನ್ನು ಸಂಗ್ರಹಿಸುವದು. ಉದಾ : ಒಡ್ಡು ಕಟ್ಟಿ ನೀರನ್ನು ಸಂಗ್ರಹಿಸುವದು
ಅಧ್ಯಾಯ 8 ಖನಿಜ ಮತ್ತು ಶಕ್ತಿ ಸಂಪನ್ಮೂಲಗಳು (GEO)
ಮುಖ್ಯಾಂಶಗಳು:
• ಭಾರತದಲ್ಲಿ ಝಾರ್ಖಂಡ್ & ಓರಿಸ್ಸಾ ರಾಜ್ಯಗಳು ಅತಿ ಹೆಚ್ಚು ಕಬ್ಬಿಣದ ಅದಿರಿನ ನಿಕ್ಷೇಪವನ್ನು ಹೊಂದಿವೆ.
• ಬಾಕ್ಸೈಟ್ ಅದಿರಿನಿಂದ ಅಲ್ಯೂಮಿನಿಯಂ ಲೋಹವನ್ನು ಉತ್ಪಾದಿಸುತ್ತಾರೆ.
• ಅಭ್ರಕವನ್ನು ಕಾಗೆ ಬಂಗಾರ ಎಂದು ಕರೆಯುತ್ತಾರೆ.
• ಕಬ್ಬಿಣದ ಮಿಶ್ರ ಲೋಹಗಳಲ್ಲಿ ಅತಿ ಮುಖ್ಯವಾದ ಮಿಶ್ರ ಲೋಹ ಮಾಂಗನೀಸ್ ಆಗಿದೆ.
• ಭಾರತವು ಅಭ್ರಕ ಅದಿರಿನ ಉತ್ಪಾದನೆಯಲ್ಲಿ ಪ್ರಪಂಚದಲ್ಲಿ ಅಗ್ರ ಸ್ಥಾನದಲ್ಲಿದೆ.
• ಚಿನ್ನವು ಪ್ರಾಚೀನ ಕಾಲದಿಂದಲೂ ಪ್ರಪಂಚದಾದ್ಯಂತ ಅತ್ಯಂತ ಹೆಚ್ಚಿನ ಮೌಲ್ಯವನ್ನು ಹೊಂದಿದ
• ಲೋಹವಾಗಿದೆ.
• ದ್ರವರೂಪದ ಚಿನ್ನ : ಪೇಟ್ರೋಲಿಯಂ : : ಕಪ್ಪು ಬಂಗಾರ : ಕಲ್ಲಿದ್ದಲು.
• ಭಾರತದ ಆಸ್ಸಾಂನ ‘ದಿಗ್ಬಾಯಿ’ ಎಂಬಲ್ಲಿ ಪೆಟ್ರೋಲಿಯಂನ್ನು ಮೊದಲು ಪತ್ತೆ ಹಚ್ಚಲಾಯಿತು.
• ಬಾಂಬೈ ಹೈ ಪ್ರದೇಶವು ಭಾರತದ ಅತಿ ದೊಡ್ಡ ತೈಲ ನಿಕ್ಷೇಪವಾಗಿದೆ.
• ಭಾರತದಲ್ಲಿ ಮೊದಲ ಸೌರ ವಿದ್ಯುತ್ ಉತ್ಪಾದನಾ ಕೇಂದ್ರವನ್ನು ರಾಜಸ್ತಾನದ ಬಾರ್‍ಮರ್‍ನಲ್ಲಿ ಸ್ಥಾಪಿಸಲು ಯೋಜಿಸಲಾಗಿದೆ.
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ಭಾರತದಲ್ಲಿ ದೊರಕುವ ಖನಿಜ ಸಂಪನ್ಮೂಲಗಳಾವವು?
ಕಬ್ಬಿಣದ ಅದಿರು, ಮ್ಯಾಂಗನೀಸ್ ಅದಿರು, ಬಾಕ್ಸೈಟ್ ಅದಿರು, ಅಭ್ರಕ, ಚಿನ್ನದ ಅದಿರು ಭಾರತದಲ್ಲಿ ದೊರಕುವ ಪ್ರಮುಖ ಖನಿಜ ಸಂಪನ್ಮೂಲಗಳಾಗಿವೆ.
2. ಭಾರತದಲ್ಲಿ ಮ್ಯಾಂಗನೀಸ್ ಅದಿರು ಉತ್ಪಾದಿಸುವ ಪ್ರಮುಖ ರಾಜ್ಯಗಳು ಯಾವವು?
ಒಡಿಸ್ಸಾ, ಕರ್ನಾಟಕ, ಮಧ್ಯಪ್ರದೇಶ ಮತ್ತು ಮಧ್ಯಪ್ರದೇಶಗಳು ಮ್ಯಾಂಗನೀಸ್ ಅದಿರನ್ನು ಉತ್ಪಾದಿಸುವ ಪ್ರಮುಖ ರಾಜ್ಯಗಳಾಗಿವೆ.
3. ಭಾರತದಲ್ಲಿ ಉತ್ಪಾದಿಸುವ ಕಬ್ಬಿಣದ ಅದಿರಿನ ವಿಧಗಳು ಯಾವವು?
ಮ್ಯಾಗ್ನಟೈಟ್ & ಹೇಮಟೈಟ್ ಕಬ್ಬಿಣದ ಅದಿರುಗಳು ಭಾರತದಲ್ಲಿ ಉತ್ಪಾದಿಸುವ ಕಬ್ಬಿಣದ ಅದಿರಿನ ವಿಧಗಳಾಗಿವೆ.
4. ಭಾರತದ ಪ್ರಮುಖ ಶಕ್ತಿ ಸಂಪನ್ಮೂಲಗಳಾವವು? ವಿವರಿಸಿ.
ಮುಗಿದು ಹೋಗುವ ಶಕ್ತಿ ಸಂಪನ್ಮೂಲಗಳಲ್ಲಿ ಕಲ್ಲಿದ್ದಲು, ಪೆಟ್ರೋಲಿಯಂ, ಅಣು ಖನಿಜಗಳು ಹಾಗೂ ಮುಗಿದು ಹೋಗದೇ ಇರುವ ಶಕ್ತಿ ಸಂಪನ್ಮೂಲಗಳಲ್ಲಿ ಸೌರಶಕ್ತಿ, ಪವನ ಶಕ್ತಿ, ಜೈವಿಕ ಅನಿಲ ಶಕ್ತಿ ಮುಂತಾದವು ಭಾರತದ ಪ್ರಮುಖ ಶಕ್ತಿ ಸಂಪನ್ಮೂಲಗಳಾಗಿವೆ.
5. ಅಸಂಪ್ರದಾಯಕ ಶಕ್ತಿ ಸಂಪನ್ಮೂಲಗಳೆಂದರೇನು?
ಪುನರ್ ಬಳಕೆ ಮಾಡಬಹುದಾದ ಶಕ್ತಿ ಮೂಲಗಳಾದ ಸೌರಶಕ್ತಿ, ಪವನ ಶಕ್ತಿ, ಸಾಗರ ನೀರಿನ ಉಬ್ಬರವಿಳಿತ ಶಕ್ತಿ, ಜೈವಿಕ ಅನಿಲ ಶಕ್ತಿ ಮೊದಲಾದವುಗಳನ್ನು ಅಸಂಪ್ರದಾಯಕ ಶಕ್ತಿ
ಸಂಪನ್ಮೂಲಗಳೆಂದು ಕರೆಯುವರು.
6. ಕರ್ನಾಟಕದಲ್ಲಿ ಕಂಡು ಬರುವ ಕಬ್ಬಿಣ ಅದಿರಿನ ನಿಕ್ಷೇಪಗಳು
ಯಾವವು?
ಕರ್ನಾಟಕದ ಕೆಮ್ಮಣ್ಣುಗುಂಡಿ, ಹೊಸಪೇಟೆ, ಸೊಂಡುರು, ಕುದುರೆಮುಖಗಳಲ್ಲಿ ಕಬ್ಬಿಣ ಅದಿರಿನ ನಿಕ್ಷೇಪಗಳಿವೆ.
7. ಭಾರತದಲ್ಲಿ ಕಂಡುಬರುವ ಪ್ರಮುಖ ಅಣು ಖನಿಜಗಳಾವವು?
ಭಾರತದಲ್ಲಿ ಕಂಡು ಬರುವ ಅಣು ಖನಿಜಗಳಲ್ಲಿ ಯುರೋನಿಯಂ, ಥೋರಿಯಂ, ಬೆರಿಲಿಯಂ, ಲಿಥಿಯಂ ಮುಂತಾದವುಗಳು ಪ್ರಮುಖವಾಗಿವೆ.
8. ಶಕ್ತಿ ಸಂಪನ್ಮೂಲಗಳ ಕೊರತೆಯನ್ನು ನಿವಾರಿಸಲು ಕೈಗೊಳ್ಳಬೇಕಾದ ಕ್ರಮಗಳಾವವು?
• ಅಸಂಪ್ರದಾಯಕ ಶಕ್ತಿ ಸಂಪನ್ಮೂಲಗಳನ್ನು ಹೆಚ್ಚಾಗಿ ಬಳಸುವದು.
• ಜಲವಿದ್ಯುತ್ ಉತ್ಪಾದನೆಗೆ ಪ್ರಾಮುಖ್ಯತೆ ನೀಡುವದು.
• ನಿರುಪಯುಕ್ತ ವಸ್ತುಗಳನ್ನು ಬಳಸಿ ವಿದ್ಯುತ್ ಉತ್ಪಾದಿಸುವದು.
9. ಮ್ಯಾಂಗನೀಸ್ ಅದಿರಿನ ಉಪಯೋಗಗಳೇನು?
ಮ್ಯಾಂಗನೀಸ್ ಅದಿರನ್ನು ಉಕ್ಕಿನ ಉತ್ಪಾದನೆಯಲ್ಲಿ ಬಳಸುವರು. ರಾಸಾಯನಿಕ ಮತ್ತು ವಿದ್ಯುತ್ ಉಪಕರಣಗಳ ತಯಾರಿಕೆ ಹಾಗೂ ಬಣ್ಣದ ಗಾಜುಗಳ ತಯಾರಿಕೆಯಲ್ಲಿ ಬಳಸುವರು.
10. ಬಾಕ್ಸೈಟ್‍ನ್ನು 20 ನೇ ಶತಮಾನದ ಅದ್ಭುತ ಲೋಹವೆಂದು ಕರೆಯಲು ಕಾರಣವೇನು?
ಬಾಕ್ಸೈಟ್ ವೈವಿದ್ಯಮಯ ಉಪಯೋಗಗಳಿಗಾಗಿ ಬಳಸಲ್ಪಡುವದರಿಂದ ಇದನ್ನು 20 ನೇ ಶತಮಾನದ ಅದ್ಭುತ ಲೋಹವೆಂದು ಕರೆಯುತ್ತಾರೆ.
11. ಅಭ್ರಕನಲ್ಲಿರುವ ಗುಣವಿಶೇಷತೆಗಳು ಏನು?
ಅಭ್ರಕವು ಒಳ್ಳೆಯ ಪಾರದರ್ಶಕತೆ, ಸ್ಥಿತಿ ಸ್ಥಾಪಕತ್ವ, ಶಾಖ ನಿರೋಧಕ
ಹಾಗೂ ಹೊಳಪುಳ್ಳ ಸಿಲಿಕೇಟ ಖನಿಜವಾಗಿದೆ.
12. ಕರ್ನಾಟಕದಲ್ಲಿ ಚಿನ್ನದ ನಿಕ್ಷೇಪಗಳು ಎಲ್ಲಿ ಕಂಡು ಬರುತ್ತವೆ?
ಕರ್ನಾಟಕದ ಕೋಲಾರ, ರಾಯಚೂರು ಜಿಲ್ಲೆಯ ಹಟ್ಟಿ, ಗದಗ ಬಳಿಯ ಕಪ್ಪತಗುಡ್ಡದಲ್ಲಿ ಬೆಣಚುಕಲ್ಲಿನ ಶಿಲಾಸ್ತರಗಳಲ್ಲಿ ಚಿನ್ನದ ನಿಕ್ಷೇಪಗಳು ಕಂಡು ಬರುತ್ತವೆ.
13. ಕಲ್ಲಿದ್ದಲಿನ ಉಪಯೋಗವನ್ನು ತಿಳಿಸಿರಿ. ಅಥವಾ
ಕಲ್ಲಿದ್ದಲನ್ನು ಕಪ್ಪು ಬಂಗಾರ ಎಂದು ಕರೆಯಲು ಕಾರಣವೇನು?
ಕಲ್ಲಿದ್ದಲು ಕೇವಲ ಶಕ್ತಿಯ ಖನಿಜವಾಗಿರದೇ ಕೀಟ ನಿರೋಧಕಗಳು, ಸ್ಪೋಟಕ ವಸ್ತುಗಳು, ಕೃತಕ ನಾರು, ಕೃತಕ ರಬ್ಬರ್, ಪ್ಲಾಸ್ಟಿಕ್, ರಾಸಾಯನಿಕ ಗೊಬ್ಬರ ಮುಂತಾದವುಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಹೀಗೆ ಬಹು ಉಪಯೋಗಿ ಖನಿಜವಾದ್ದರಿಂದ ಇದನ್ನು ಕಪ್ಪು ಬಂಗಾರ ಎಂದು ಕರೆಯುತ್ತಾರೆ.
13. ಪೆಟ್ರೋಲಿಯಂನ್ನು ಶುದ್ಧೀಕರಿಸಿದಾಗ ದೊರೆಯುವ
ವಸ್ತುಗಳಾವವು?
ಪೆಟ್ರೋಲಿಯಂನ್ನು ಶುದ್ಧೀಕರಿಸಿದಾಗ ಗ್ಯಾಸೋಲಿನ್, ಪೆಟ್ರೋಲ್, ಡಿಸೇಲ್ & ಸೀಮೆಎಣ್ಣೆ ಮುಂತಾದವುಗಳು ದೊರೆಯುವವು.
15. ಪೆಟ್ರೋಲಿಯಂನ್ನು ದ್ರವರೂಪದ ಚಿನ್ನ ಎಂದು ಕರೆಯಲು ಕಾರಣವೇನು?
ವ್ಯವಸಾಯ, ಕೈಗಾರಿಕೆ ಹಾಗೂ ಸಾರಿಗೆ ಕ್ಷೇತ್ರಗಳಲ್ಲಿ ಪೆಟ್ರೋಲಿಯಂ ಅಮೂಲ್ಯ ಶಕ್ತಿ ಸಂಪನ್ಮೂಲ. ಇದು ಶಾಂತಿ ಹಾಗೂ ಯುದ್ಧ ಕಾಲಗಳೆರಡರಲ್ಲೂ ಅಮೂಲ್ಯವಾದದು. ಆದುದರಿಂದಲೇ ಇದನ್ನು ‘ದ್ರವರೂಪದ ಚಿನ್ನ’ ಎಂದು ಕರೆಯಲಾಗುತ್ತದೆ.
16. ಭಾರತದ ಪ್ರಮುಖ ತೈಲ ನಿಕ್ಷೇಪಗಳಾವವು?
ಅಸ್ಸಾಂನ ದಿಗ್ಬಾಯಿ, ಲಕಿಮಪುರ, ಹುಗ್ರಿಜಾನ್,ನಹರ್‍ಕಟಿಯಾ, ಗುಜರಾತ್ ರಾಜ್ಯದ ಅಂಕಲೇಶ್ವರ, ಮಹಾರಾಷ್ಟ್ರದ ಬಾಂಬೈ ಹೈ ಪ್ರದೇಶಗಳು ಭಾರತದ ಪ್ರಮುಖ ತೈಲ ನಿಕ್ಷೇಪಗಳಾಗಿವೆ.
17. ಗ್ಲೋಬಲ್ ವಾರ್ಮಿಂಗ್ ಎಂದರೇನು?
ಪ್ರಪಂಚದಾದ್ಯಂತ ಸಾಂಪ್ರದಾಯಕ ಶಕ್ತಿ ಮೂಲಗಳ ಬಳಕೆಯಿಂದ ಹಸಿರು ಮನೆ ಪರಿಣಾಮ ಉಂಟಾಗುತ್ತಿದ್ದು, ಭೂಮಿಯ ವಾಯುಮಂಡಲದಲ್ಲಿ ಉಷ್ಣಾಂಶ ಹೆಚ್ಚಾಗುವ ಸಂಭವನೀಯತೆಯನ್ನು ಗಮನಿಸಲಾಗಿದೆ. ಇದನ್ನೇ ಗ್ಲೋಬಲ್ ವಾರ್ಮಿಂಗ್ ಎಂದು ಕರೆಯಲಾಗಿದೆ.
ಅಧ್ಯಾಯ 9 ಭಾರತದ ಸಾರಿಗೆ (GEO)
ಮುಖ್ಯಾಂಶಗಳು:.
• ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರು ನಾಡ ಪ್ರಭು ಕೆಂಪೇಗೌಡ
• ಹಳ್ಳಿಗಳು & ಕೃಷಿ ಅಭಿವೃದ್ಧಿಗೆ ರಸ್ತೆಗಳು ಅವಶ್ಯಕವಾಗಿವೆ.
• ಭಾರತದ ಹೆಬ್ಬಾಗಿಲು ಎಂದು ಮುಂಬಯಿ ಬಂದರನ್ನು ಕರೆಯುತ್ತಾರೆ.
• ವಸ್ತುಗಳು, ಸೇವೆಗಳು, ಮಾಹಿತಿ & ಸರಕುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವದನ್ನೇ ಸಾರಿಗೆ ಎಂದು ಕರೆಯುವರು.
• ಭಾರತ ಸರಕಾರವು ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಮತ್ತು ನಿರ್ವಹಣೆಗೆ 1989 ರಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಸ್ಥಾಪಿಸಿದೆ.
• ಕುಲುಮನಾಲಿ ಮತ್ತು ಲ್ಹೇಗಳನ್ನು ಸಂಪರ್ಕಿಸುವ ಹೆದ್ದಾರಿ 4267 ಮೀ. ಎತ್ತರದಲ್ಲಿದೆ. ಇದು ಜಗತ್ತಿನ ಎತ್ತರದ ರಸ್ತೆ ಮಾರ್ಗವಾಗಿದೆ.
• ಕಾಂಡ್ಲಾ ಕಛ್ ಖಾರಿಯ ಶಿರೋಭಾಗದಲ್ಲಿದೆ.
• ಮುಂಬಯಿ ಬಂದರಿನ ಒತ್ತಡವನ್ನು ತಗ್ಗಿಸುವ ಉದ್ದೇಶದಿಂದ ನವಶೇವಾ ಬಂದರನ್ನು ನಿರ್ಮಿಸಲಾಗಿದೆ.
• ಮರ್ಮಗೋವಾ ಬಂದರು ಗೋವಾ ರಾಜ್ಯದ ಝವಾರಿ ಕೊಲ್ಲಿಯ ಪ್ರದೇಶದಲ್ಲಿದೆ.
• ಕೋಲ್ಕತ್ತಾ ಬಂದರನ್ನು ಭಾರತದ ಚಹದ ಬಂದರು ಎಂದು ಕರೆಯಲಾಗುತ್ತಿದೆ.
• ಹಾಲ್ಡಿಯಾ ಬಂದರು ಕೊಲ್ಕತ್ತಾ ಬಂದರಿನ ಒತ್ತಡ ಕಡಿಮೆ ಮಾಡಲು ನಿರ್ಮಿಸಿರುವ ಕೃತಕ ಬಂದರಾಗಿದೆ.
• ಭಾರತ ಸರಕಾರವು 1955 ರಲ್ಲಿ ‘ದಿ ಏರ್‍ಪೋರ್ಟ ಅಥಾರಿಟಿ ಆಫ್ ಇಂಡಿಯಾ’
• ಸಂಸ್ಥೆಯನ್ನು ಸ್ಥಾಪಿಸಿದ್ದು, ದೇಶದ ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ನೀಡಲಾಗಿದೆ.
• ಸಹರಾ & ಸಾತ್ರಾಕ್ರೂಜ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು ಮುಂಬೈನಲ್ಲಿವೆ.
• ದೆಹಲಿ : ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ : : ಚನ್ನೈ : ಅಣ್ಣಾ
• ಅಂತರಾಷ್ಟ್ರೀಯ ವಿಮಾನ ನಿಲ್ದಾಣ : : ಕೊಲ್ಕತ್ತಾ : ಸುಭಾಸ್‍ಚಂದ್ರ ಬೋಸ್ ವಿಮಾನ ನಿಲ್ದಾಣ.
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ಸಾರಿಗೆಯಿಂದಾಗುವ ಪ್ರಯೋಜನಗಳೇನು?
ಸಾರಿಗೆಯು ಆರ್ಥಿಕ ಅಭಿವೃದ್ಧಿಯಲ್ಲಿ ನಿರ್ವಹಿಸುವ ಪಾತ್ರ ಮಹತ್ತರವಾದುದು. ಆರ್ಥಿಕತೆಯ ಮುಖ್ಯ ಕ್ಷೇತ್ರಗಳಾದ ವ್ಯವಸಾಯ, ಕೈಗಾರಿಕೆ, ಗಣಿಗಾರಿಕೆ, ಅರಣ್ಯಗಾರಿಕೆ, ಮೀನುಗಾರಿಕೆ, ಹೈನುಗಾರಿಕೆ ಮೊದಲಾದವುಗಳನ್ನು ಸಾರಿಗೆಯು ಮಾರುಕಟ್ಟೆಗಳೊಡನೆ ಸಂಪರ್ಕಿಸುವದು. ಇದರಿಂದ ತ್ವರಿತಗತಿಯಲ್ಲಿ ದೇಶದ ಆರ್ಥಿಕ ಬೆಳವಣಿಗೆ ಉಂಟಾಗುವದು.
2. ಭಾರತದಲ್ಲಿರುವ ನಾಲ್ಕು ಪ್ರಕಾರದ ಸಾರಿಗೆಗಳಾವವು?
1. ರಸ್ತೆ ಸಾರಿಗೆ, 2. ರೈಲುಸಾರಿಗೆ, 3. ವಾಯುಸಾರಿಗೆ, 4. ಜಲಸಾರಿಗೆ.
3. ಭಾರತದಲ್ಲಿರುವ ನಾಲ್ಕು ಪ್ರಕಾರದ ರಸ್ತೆ ಸಾರಿಗೆಗಳಾವವು?
1. ರಾಷ್ಟ್ರೀಯ ಹೆದ್ದಾರಿಗಳು 2. ರಾಜ್ಯ ಹೆದ್ದಾರಿಗಳು 3. ಜಿಲ್ಲಾ
ರಸ್ತೆಗಳು 4. ಗ್ರಾಮೀಣ ರಸ್ತೆಗಳು
4. ಸುವರ್ಣ ಚತುಷ್ಪತ’À ಯೋಜನೆ ಎಂದರೇನು?
ಈ ಯೋಜನೆಯು ಚತಷ್ಪತ ರಸ್ತೆಗಳನ್ನು ಹೊಂದಿದ 15000 ಕಿ.ಮೀ. ಉದ್ದವಾಗಿರುವ ರಾಷ್ಟ್ರೀಯ ಹೆದ್ದಾರಿಯಾಗಿದೆ.
5. ರಾಷ್ಟ್ರೀಯ ಹೆದ್ದಾರಿಗಳ ಕಾರ್ಯಗಳನ್ನು ತಿಳಿಸಿ.
ಇವು ದೇಶದ ಅತಿ ಮುಖ್ಯ ರಸ್ತೆಗಳು. ದೇಶದ ಉದ್ದಗಲಕ್ಕೂ ನಿರ್ಮಿತವಾಗಿವೆ. ರಾಜ್ಯದ ರಾಜದಾನಿಗಳು, ಪ್ರಧಾನ ಬಂದರುಗಳು ಮತ್ತು ಕೈಗಾರಿಕಾ ನಗರಗಳನ್ನು ಸಂಪರ್ಕಿಸುತ್ತವೆ.
6. ಭಾರತದಲ್ಲಿರುವ ಪ್ರಮುಖ ಬಂದರುಗಳನ್ನು ಪಟ್ಟಿ ಮಾಡಿರಿ.
ಭಾರತದಲ್ಲಿ ಒಟ್ಟು 12 ಅತ್ಯಾಧುನಿಕ ಬಂದರುಗಳಿವೆ.
• ಪಶ್ಚಿಮ ಕರಾವಳಿಯಲ್ಲಿ ಕಾಂಡ್ಲಾ, ಮುಂಬಯಿ, ನವಶೇವಾ,
ಮರ್ಮಗೋವಾ, ನವಮಂಗಳೂರು, ಕೊಚ್ಚಿನ್
• ಪೂರ್ವ ಕರಾವಳಿಯಲ್ಲಿ ತುತುಕುಡಿ, ಚನ್ನೈ, ವಿಶಾಖಪಟ್ಟಣ,
ಪಾರಾದೀಪ, ಕೋಲ್ಕತ್ತಾ & ಹಾಲ್ಡಿಯಾ ಪ್ರಮುಖ
ಬಂದರುಗಳಾಗಿವೆ.
7. ರಸ್ತೆ ಸಾರಿಗೆಯ ತೊಡಕುಗಳನ್ನು ತಿಳಿಸಿರಿ.
• ಅನೇಕ ಗ್ರಾಮೀಣ ರಸ್ತೆಗಳು ಮಳೆಗಾಲದಲ್ಲಿ ವಾಹನ ಸಂಚಾರಕ್ಕೆ ಅನುಪಯುಕ್ತವಾಗಿವೆ.
• ರಸ್ತೆ ಸಾರಿಗೆಯು ಪರಿಸರ ಮಾಲಿನ್ಯ, ವಾಹನ ದಟ್ಟಣೆ ಹಾಗೂ ಅಪಘಾತಗಳಿಗೂ ಕಾರಣವಾಗಿವೆ.
• ರಸ್ತೆಗಳು ಪ್ರತಿ ªಂμಂಜ ಮಳೆ, ಪ್ರವಾಹ ಮತ್ತು ಚಂಡಮಾರುತಗಳಿಂದ ಹಾಳಾಗುತ್ತವೆ.
• ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ನಿರ್ಮಾಣ & ನಿರ್ವಹಣೆಯೂ ಅಸಮರ್ಪಕವಾಗಿದೆ
ಅಧ್ಯಾಯ 10. ಭಾರತದ ಪ್ರಮುಖ ಕೈಗಾರಿಕೋದ್ದಿಮೆಗಳು (GEO)
ಮುಖ್ಯಾಂಶಗಳು:
• ಬೆಂಗಾಲ್ ಐರನ್ ಕಂಪನಿಯು ಪಶ್ಚಿಮ ಬಂಗಾಲದ ಕುಲ್ಟಿ ಎಂಬಲ್ಲಿ 1870 ರಲ್ಲಿ ಸ್ಥಾಪಿತಗೊಂಡಿತು.
• ವಿವಿಧ ಬಗೆಯ ನಾರುಗಳಿಂದ ಬಟ್ಟೆಯನ್ನು ತಯಾರಿಸುವದನ್ನೇ ಜವಳಿ ಕೈಗಾರಿಕೆ ಎಂದುಕರೆಯುವರು.
• ಸಕ್ಕರೆ ಕೈಗಾರಿಕೆಯ ಮುಖ್ಯ ಕಚ್ಚಾ ವಸ್ತು ಕಬ್ಬು.
• ಭಾರತದ ಮೊದಲ ಕಾಗದದ ಕೈಗಾರಿಕೆಯು 1840 ರಲ್ಲಿ ಪಶ್ಚಿಮ ಬಂಗಾಳದ ಸೆರಾಂಪುರದಲ್ಲಿ ಹೂಗ್ಲಿನದಿಯ ದಡದಲ್ಲಿ ಸ್ಥಾಪನೆಗೊಂಡಿತು.
• ಭಾರತದಲ್ಲಿ 8 ಕೈಗಾರಿಕಾ ವಲಯಗಳನ್ನು ಗುರುತಿಸಲಾಗಿದೆ.
• ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಯನ್ನು ಮೂಲ ಕೈಗಾರಿಕೆ ಎಂದು ಕರೆಯುತ್ತಾರೆ.
• 1907 ರಲ್ಲಿ ಟಾಟಾ ಐರನ್ & ಸ್ಟೀಲ್ ಕಂಪನಿ ಜಮಶೆಡ್‍ಪುರ ಬಳಿ, 1919 ರಲ್ಲಿ ದಿ ಇಂಡಿಯನ್ ಐರನ್ & ಸ್ಟೀಲ್ ಕಂಪನಿಯು ಪಶ್ಚಿಮ ಬಂಗಾಳದ ಬರ್ನಪುರ ಬಳಿಯು, 1923 ರಲ್ಲಿ ದಿ ಮೈಸೂರ್ ಐರನ್ ಸ್ಟೀಲ್ ವಕ್ರ್ಸ ಕೈಗಾರಿಕೆ ಭದ್ರಾವತಿ ಬಳಿಯು ಸ್ಥಾಪಿಸಿತು.
• ಭಾರತದಲ್ಲಿ ಮೊದಲ ಹತ್ತಿ ಬಟ್ಟೆ ಕೈಗಾರಿಕೆಗಳು 1854 ರಲ್ಲಿ ಮುಂಬೈ & ಬರೂಚ್‍ಗಳಲ್ಲಿ ಸ್ಥಾಪಿಸಲ್ಪಟ್ಟವು.
• ಮಾಹಾರಾಷ್ಟ್ರದ ಮುಂಬಯಿಯಲ್ಲಿ ಅತಿ ಹೆಚ್ಚು ಹತ್ತಿ ಬಟ್ಟೆ ಗಿರಿಣಿಗಳಿದ್ದು, ಇದನ್ನು ಭಾರತದ ‘ಮ್ಯಾಂಚೆಸ್ಟರ್’ ಅಥವಾ ಭಾರತದ ‘ಕಾಟನೋಪೊಲಿಸ್’ ಎಂದು ಕರೆಯುತ್ತಾರೆ.
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ಕೈಗಾರಿಕಾ ವಲಯಗಳನ್ನು ಪಟ್ಟಿಮಾಡಿ.
ಭಾರತದಲ್ಲಿ 8 ಕೈಗಾರಿಕಾ ವಲಯಗಳನ್ನು ಗುರುತಿಸಲಾಗಿದೆ.
• ಹೂಗ್ಲಿ ಪ್ರದೇಶ, 2. ಮುಂಬೈ-ಪೂನಾ ಪ್ರದೇಶ,
• ಅಹಮದಾಬಾದ್-ವಡೋದರಾ ಪ್ರದೇಶ. 4. ದಾಮೋದರ ಕಣಿವೆ ಪ್ರದೇಶ.
• ದಕ್ಷಿಣದ ಕೈಗಾರಿಕಾ ಪ್ರದೇಶ 6. £ಂಚಿμಂ’Àಲ್ ಕ್ಯಾಪಿಟಲ್ ಪ್ರದೇಶ.
• ವಿಶಾಖಪಟ್ಟಣ – ಗುಂಟೂರ ಪ್ರದೇಶ. 8. ಕೊಲ್ಲಂ-ತಿರುವಂತಪುರ ಪ್ರದೇಶ.
2. ಕಬ್ಬಿಣ & ಉಕ್ಕಿನ ಕೈಗಾರಿಕೆಗಳು ಇರುವ ಸ್ಥಳಗಳಾವವು?
• ಝಾರ್ಖಂಡ್ ರಾಜ್ಯದ ಜಮ್‍ಶೆಡ್‍ಪುರ – ಟಾಟಾ ಕಬ್ಬಿಣ & ಉಕ್ಕಿನ ಕೈಗಾರಿಕೆ
• ಪಶ್ಚಿಮಬಂಗಾಳ ರಾಜ್ಯದ ಬರ್ನಪುರ – ಇಂಡಿಯನ್ ಐರನ್ & ಸ್ಟೀಲ್ ಕಂಪನಿ
• ಕರ್ನಾಟಕ ರಾಜ್ಯದ ಭದ್ರಾವತಿ - ವಿಶ್ವೇಶ್ವರಯ್ಯ ಕಬ್ಬಿಣ & ಉಕ್ಕಿನ ಕೈಗಾರಿಕೆ
• ಛತ್ತೀಸ್‍ಘಡ್‍ದ ಬಿಲಾಯಿ 5. ಒರಿಸ್ಸಾದ ರೂರ್ಕೆಲಾ 6. ಪಶ್ಚಿಮಬಂಗಾಳದ ದುರ್ಗಾಪುರ
• ಝಾರ್ಖಂಡ್‍ದ ಬೋಕಾರೊ 8. ತಮಿಳುನಾಡುನ ಸೇಲಂ
ಆಂದ್ರಪ್ರದೇಶದ ವಿಶಾಖಪಟ್ಟಣ
3. ಕೈಗಾರಿಕೆಗಳ ಸ್ಥಾನೀಕರಣದ ಮೇಲೆ ಪ್ರಭಾವ ಬೀರುವ ಅಂಶಗಳಾವವು?
• ಕಚ್ಚಾ ವಸ್ತುಗಳ ಲಭ್ಯತೆ, ಶಕ್ತಿ ಸಂಪನ್ಮೂಲಗಳ ಲಭ್ಯತೆ, ಮಾರುಕಟ್ಟೆ, ಸಂಚಾರ ಸೌಲಭ್ಯ,
• ಕಾರ್ಮಿಕರ ಪೂರೈಕೆ, ಬಂದರುಗಳ ಸೌಲಭ್ಯ ಮೊದಲಾದ ಅಂಶಗಳು ಕೈಗಾರಿಕೆಗಳ
• ಸ್ಥಾನೀಕರಣದ ಮೇಲೆ ಪ್ರಭಾವ ಬೀರುತ್ತವೆ.
• ಕೈಗಾರಿಕೆಗಳ ಸ್ಥಾನವು ಕಡಿಮೆ ದರದ ಭೂಮಿ ದೊರೆಯುವಿಕೆ, ತಾಂತ್ರಿಕತೆ, ಸರ್ಕಾರದ
• ನೀತಿ ನಿಯಮಗಳಿಂದಲೂ ಪ್ರಭಾವಿತವಾಗಿರುವುದು.
4. ಗಂಗಾನದಿ ಬಯಲು ಪ್ರದೇಶದಲ್ಲಿ ಸಕ್ಕರೆ ಕೈಗಾರಿಕೆಗಳು ಹೆಚ್ಚು ಕೇಂದ್ರಿಕೃತವಾಗಿವೆ. ಏಕೆ?
• ಮಧ್ಯ ಗಂಗಾ ಬಯಲು ಪ್ರದೇಶವು ಸಕ್ಕರೆ ಕೈಗಾರಿಕೆಗಳಿಗೆ ಬೇಕಾದ ಕಚ್ಚಾ ವಸ್ತುಗಳು ಹೇರಳವಾಗಿ ದೊರೆಯುತ್ತವೆ.
• ಮೈದಾನ ಪ್ರದೇಶವಾದ್ದರಿಂದ ರಸ್ತೆ ಮತ್ತು ರೈಲು ಮಾರ್ಗಗಳು ಅಭಿವೃದ್ಧಿ ಹೊಂದಿವೆ.
• ಹೆಚ್ಚು ಜನಸಾಂದ್ರತೆ ಹೊಂದಿದ್ದು ಮಾರುಕಟ್ಟೆ ಹಾಗೂ ಕಾರ್ಮಿಕ ಬಲದ ಸೌಕರ್ಯವಿದೆ.
5. ಕಾಗದ ತಯಾರಿಕೆಯಲ್ಲಿ ಬಳಸುವ ಕಚ್ಚಾವಸ್ತುಗಳು ಯಾವವು?
ಮರದ ತಿರುಳು, ಬಿದಿರು, ಸಬಾಯಿ ಹುಲ್ಲು, ಕಬ್ಬಿನ ಸಿಪ್ಪೆ, ಮೃದುಜಲ, ರಾಸಾಯನಿಕ ವಸ್ತುಗಳು ಕಾಗದ ತಯಾರಿಕೆಯಲ್ಲಿ ಬಳಸುವ ಕಚ್ಚಾವಸ್ತುಗಳಾಗಿವೆ.
6. ಹತ್ತಿ ಬಟ್ಟೆ ಕೈಗಾರಿಕೆಯ ಹಂಚಿಕೆಯನ್ನು ವಿವರಿಸಿ.
ಹತ್ತಿ ಬಟ್ಟೆ ಕೈಗಾರಿಕೆಗಳು ಹೆಚ್ಚಾಗಿ ಮºಂgಂμಂಔಛಿ, ಗುಜರಾತ್, ತಮಿಳುನಾಡು, ಕರ್ನಾಟಕ, ಉತ್ತರ ಪ್ರದೇಶ, ಮಧ್ಯಪ್ರದೇಶ ರಾಜ್ಯಗಳಲ್ಲಿ ಹಂಚಿಕೆಯಾಗಿವೆ.
7. ಜೈವಿಕ ತಂತ್ರಜ್ಞಾನದಿಂದ ಕೃಷಿ ಕ್ಷೇತ್ರದ ಮೇಲಿನ ಪರಿಣಾಮಗಳೇನು?
ಜೈವಿಕ ತಂತ್ರಜ್ಞಾನದಿಂದ ಸಸ್ಯ, ಪ್ರಾಣಿ ಮೊದಲಾದವುಗಳಿಗೆ ಕಸಿ ಮಾಡುವಿಕೆಯಿಂದ ಹೊಸ ಹೊಸ ಬೀಜ, ಔಷಧ, ರಸಗೊಬ್ಬರ ಉತ್ಪಾದನೆಯಾಗುತ್ತದೆ. ಜೈವಿಕ ಗೊಬ್ಬರ ಬಳಕೆಯಿಂದ ಸೋಯಾ,
ಅವರೆ, ಮಕ್ಕೆಜೋಳ, ಹತ್ತಿ ಮೊದಲಾದ ಸಮ್ಮಿಶ್ರ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ.
8. ಸುಧಾರಿತ ತಂತ್ರಜ್ಞಾನ ಬಳಕೆಯಿಂದ ಆದ ಬದಲಾವಣೆಗಳೇನು?
• ಟೆಲಿಫೋನ್, ಅಂತರ್‍ಜಾಲ ಸಂಪರ್ಕ, ರಕ್ಷಣಾ ಇಲಾಖೆಗೆ
ಸಂಬಂಧಿಸಿದಂತೆ ಯುದ್ಧ ಸಾಮಗ್ರಿಗಳ ತಯಾರಿಕೆ,
• ಅಣುಬಾಂಬ್ ತಯಾರಿಕೆ, ಉಪಗ್ರಹ ಉಡಾವಣೆ, ಚಂದ್ರನ
ಮೇಲೆ ಪಾದಾರ್ಪಣೆ,
• ಸರ್ಕಾರಿ ಕಚೇರಿಗಳಲ್ಲಿ ಪಾರದರ್ಶಕ ಇ-ಆಡಳಿತ, ಜಾಗತೀಕ
ಅರ್ಥವ್ಯವಸ್ಥೆ ಸುಧಾರಣೆ ಮುಂತಾದ ಬದಲಾವಣೆಗಳಾಗಿವೆ
11. ಸಂಪರ್ಕ (GEO)
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ಸಂಪರ್ಕ ಮಾಧ್ಯಮ ಎಂದರೇನು?
ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುದ್ದಿ ಸಮಾಚಾರ ಮತ್ತು ವಿಷಯಗಳನ್ನು ರವಾನಿಸುವ ಮಾಧ್ಯಮಗಳಿಗೆ ಸಂಪರ್ಕ ಮಾಧ್ಯಮಗಳೆನ್ನುವರು. ಉದಾ : ವೃತ್ತ ಪತ್ರಿಕೆ, ರೇಡಿಯೋ
2. ಸಂಪರ್ಕದ ಸಾಧನಗಳಾವವು?
ಸಾಂಪ್ರದಾಯಿಕ ವಿಧಾನಗಳಾದ ಅಂಚೆ ಮತ್ತು ವೃತ್ತಪತ್ರಿಕೆಗಳ ಜೊತೆಗೆ ರೇಡಿಯೋ, ಅಂತರ್ಜಾಲ, ಇ-ಮೇಲ್, ದೂರವಾಣಿ, ಕಂಪ್ಯೂಟರ್, ದೂರದರ್ಶನ, ಕೃತಕ ಉಪಗ್ರಹಗಳು, ಸಂಚಾರಿ ದೂರವಾಣಿಗಳು ಮೊದಲಾದವುಗಳು ಇಂದು ಸಂಪರ್ಕದ ಸಾಧನಗಳಾಗಿವೆ.
3. ಸಂಪರ್ಕದ ಪ್ರಾಮುಖ್ಯತೆಯನ್ನು ತಿಳಿಸಿ.
• ಸಂಪರ್ಕ ಮಾಧ್ಯಮಗಳು ದೇಶದ ಜನರಿಗೆ ವಿವಿಧ ಪ್ರದೇಶದ ಆಗು-ಹೋಗುಗಳನ್ನು ತಿಳಿಯಲು ಅಗತ್ಯವಾಗಿದೆ.
• ಸರಕಾರದ ನೀತಿ ನಿಯಮಗಳನ್ನು ತಿಳಿಯಪಡಿಸಿ ಅದರ ಬಗ್ಗೆ ತಿಳುವಳಿಕೆಯನ್ನು ಮೂಡಿಸಬಹುದು.
• ವಾಣಿಜ್ಯ ವ್ಯಾಪಾರದ ಅಭಿವೃದ್ಧಿಗೆ ಸಂಪರ್ಕ ಮಾಧ್ಯಮಗಳು ಮೂಲ ಅಗತ್ಯವಾಗಿವೆ.
• ದೇಶದ ಏಕತೆ, ಒಗ್ಗಟ್ಟು ಹಾಗೂ ಸ್ಥಿರvಂÉiÀುನ್ನು ಕಾಪಾಡಿಕೊಳ್ಳಲು ಅನುಕೂಲವಾಗುವದು.
4. ಗ್ಲೋಬಲ್ ಪೊಜಿಶನಿಂಗ್ (ಜಿಪಿಎಸ್) ಸಿಸ್ಟಂನ ಕಾರ್ಯವನ್ನು
ಕುರಿತು ಬರೆಯಿರಿ.
ಗ್ಲೋಬಲ್ ಪೊಜಿಶನಿಂಗ್ ಸಿಸ್ಟಂನ ಮುಖ್ಯ ಕಾರ್ಯ ಭೂ ಮೈಲ್ಮೈಯಲ್ಲಿನ ಯಾವುದೇ ಒಂದು ಸ್ಥಿರವಾಗಿರುವ ಅಥª ಚಲಿಸುತ್ತಿರುವ ವಸ್ತು ಅಥವಾ ವ್ಯಕ್ತಿಯ ಸ್ಥಾನವನ್ನು ಅಕ್ಷಾಂಶ ಮತ್ತು ರೇಖಾಂಶಗಳ ಮೂಲಕ ನಿಖರವಾಗಿ ಸೂಚಿಸುವದು ಹಾಗೂ ಆ ವಸ್ತುವಿನ ಎತ್ತರವನ್ನು ಸಹ ಸೂಚಿಸುವುದು.
5. ದೂರಸಂವೇದಿ ತಂತ್ರಜ್ಞಾನವನ್ನು ಕುರಿತು ಬರೆಯಿರಿ.
ವಸ್ತುಗಳನ್ನು ಭೌತಿಕವಾಗಿ ಸ್ಪರ್ಶಿಸದೆ ದೂರದಿಂದಲೇ ಅವುಗಳಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹಣೆಯನ್ನು ‘ದೂರ ಸಂವೇದಿ’ ಎಂದು ಕರೆಯುವರು. ವೈಮಾನಿಕ ಚಿತ್ರಗಳು ಹಾಗೂ
ಉಪಗ್ರಹದಿಂದ ಪಡೆದ ಚಿತ್ರಗಳು ದೂರ ಸಂವೇದಿ ಚಿತ್ರಗಳಾಗಿವೆ.
6. ಜಿ.ಐ.ಎಸ್. ಎಂದರೇನು? ಹಾಗೂ ಅದರ ಉಪಯೋಗಗಳನ್ನು ತಿಳಿಸಿರಿ.
ಪೃಥ್ವಿಯ ಮೇಲ್ಮೈನ ಅಂಕಿ ಅಂಶ ಅಥವಾ ಮಾಹಿತಿಯನ್ನು ಕಲೆಹಾಕುವ, ಸಂಗ್ರಹಿಸುವ, ಅಗತ್ಯವಿದ್ದಾಗ ಬಳಕೆ ಮಾಡುವ, ಮಾರ್ಪಡಿಸುವ ಹಾಗೂ ತೋರಿಸುವ ಪ್ರಭಲ ಸಲಕರಣೆಯ ಸಮೂಹವನ್ನು ಭೌಗೋಳಿಕ ಮಾಹಿತಿ (ಜಿ.ಐ.ಎಸ್) ವ್ಯವಸ್ಥೆ ಎಂದು ಕರೆಯಲಾಗಿದೆ.
ಇದರ ಉಪಯೋಗಗಳು
• ಜಿ.ಐ.ಎಸ್. ತಂತ್ರಜ್ಞಾನ ಆಧಾರಿತ ನಕ್ಷೆಗಳು ಹೆಚ್ಚು ಆಕರ್ಷಕ ಹಾಗೂ ಮಾಹಿತಿಯನ್ನು ಸ್ಪಷ್ಟವಾಗಿ ನೀಡುತ್ತವೆ.
• ಪ್ರಾಕೃತಿಕ ಸಂಪನ್ಮೂಲಗಳ ನಿರ್ವಹಣೆಯಲ್ಲಿ ಜಿಐಎಸ್ ತಂತ್ರಜ್ಞಾನದ ಪ್ರಾಮುಖ್ಯತೆ ಹೆಚ್ಚು ಕಂಡುಬರುತ್ತದೆ.
7. ಜಿಪಿಎಸ್ ವ್ಯವಸ್ಥೆಯ ಉಪಯೋಗವನ್ನು ತಿಳಿಸಿ.
• ಪ್ರಾಕೃತಿಕ ವಿಕೋಪಗಳ ಸ್ಪಷ್ಟ ಭೌಗೋಳಿಕ ಸ್ಥಾನವನ್ನು ಗುರುತಿಸಿ ಪರಿಹಾರ ಕೈಗೊಳ್ಳಲು ಇವುಗಳು ಉಪಯುಕ್ತ.
• ಸೈನಿಕರು, ವೈಮಾನಿಕರು, ಮೀನುಗಾರರು ಹಾಗೂ ನಾವಿಕರು ಸರಿಯಾದ ಮಾರ್ಗವನ್ನುಅನುಸರಿಸಲು ಜಿ.ಪಿ.ಎಸ್. ವ್ಯವಸ್ಥೆ ಅಗತ್ಯ ಮಾಹಿತಿಯನ್ನು ನೀಡುವದು.
8. ದೂರ ಸಂವೇದಿ ತಂತ್ರಜ್ಞಾನದಿಂದಾಗುವ ಉಪಯೋಗಗಳೇನು?
• ಇದರ ಚಿತ್ರಗಳಿಂದ ಆ ಕಾಲದ ಅವಧಿಯಲ್ಲಿನ ನೈಜ ಹಾಗೂ ನಂಬಲರ್ಹವಾದ ಸ್ಪಷ್ಟ ಮಾಹಿತಿ ದೊರೆಯುವದು.
• ಇದರಿಂದ ಪಡೆದ ಮಾಹಿತಿಯನ್ನು ಸುಲಭವಾಗಿ ಕಂಪ್ಯೂಟರ್‍ಗಳಿಂದ ವಿಶ್ಷೇಷಿಸಬಹುದು.
ಅಧ್ಯಾಯ 12. ನೈಸರ್ಗಿಕ ವಿನಾಶಕಾರಕಗಳು (GEO)
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ಪ್ರಾಕೃತಿಕ ವಿನಾಶಗಳು ಎಂದರೇನು?
ಪ್ರಾಕೃತಿಕವಾಗಿ ಸಂಭವಿಸುವ ಮಾನವನ ಪ್ರಾಣ, ಆಸ್ತಿ-ಪಾಸ್ತಿ ಸೇರಿದಂತೆ ನೈಸರ್ಗಿಕ ಸಂಪತ್ತುಗಳ ನಾಶಕ್ಕೆ ಕಾರಣವಾಗುವ ವಿನಾಶಕಾರಿ ಘಟನೆಗಳನ್ನು ಪ್ರಾಕೃತಿಕ ವಿನಾಶಕಾರಕಗಳೆಂದು
ಕರೆಯುವರು.
2. ಚಂಡಮಾರುತಗಳ ಪರಿಣಾಮಗಳಾವವು?
• ಇವುಗಳಿಂದ ಅಪಾರ ಸಾವು ನೋವು ಉಂಟಾಗುತ್ತದೆ.
• ಬೆಳೆಗಳು ಸಂಪೂರ್ಣ ನಾಶವಾಗುತ್ತವೆ.
• ಸಾರಿಗೆ ಸಂಪರ್ಕ, ವಿದ್ಯುತ್ ಸೌಕರ್ಯ, ಜನಜೀವನ ಅಸ್ತವ್ಯಸ್ತವಾಗುವದು.
3. ಪ್ರವಾಹಗಳೆಂದರೇನು?
ಅತ್ಯಧಿಕ ಮಳೆ ಸುರಿದಾಗ ಮತ್ತು ಅತ್ಯಧಿಕ ಹಿಮ ಕರಗಿದಾಗ ನದಿಗಳ ನೀರಿನ ಪ್ರಮಾಣವು ಅವುಗಳ ಸಾಮಥ್ರ್ಯಕ್ಕಿಂತಲೂ ಹೆಚ್ಚಾಗಿ ನದಿ ದಂಡೆಗಳ ಇಕ್ಕೆಲಗಳಲ್ಲಿ ಉಕ್ಕಿ ಹರಿಯವುದು. ಇದನ್ನು ಪ್ರವಾಹ ಎನ್ನುವರು.
4. ಭೂಕುಸಿತ ಎಂದರೇನು?
ಪರ್ವತಗಳ ಅಥವಾ ಬೆಟ್ಟಗಳ ಮೇಲ್ಬಾಗದಿಂದ ಕಡಿದಾದ ಇಳಿಜಾರಿನಗುಂಟ ಕೆಳಕ್ಕೆ ಜಾರುವ ಭೂರಾಶಿಗೆ ಭೂಕುಸಿತಗಳೆನ್ನುವರು.
5. ಭೂಕಂಪ ಎಂದರೇನು?
ಭೂಮೇಲ್ಮೈ ಕಂಪಿಸುವುದು, ನಡುಗುವುದು ಅಥವಾ ಅಲುಗಾಡುವುದನ್ನು ‘ಭೂಕಂಪ’ವೆಂದು ಕರೆಯುವರು.
6. ಪ್ರವಾಹಗಳಿಂದುಂಟಾಗುವ ಪರಿಣಾಮಗಳೇನು?
• ಪ್ರವಾಹಗಳು ಜನರ ಆಸ್ತಿ-ಪಾಸ್ತಿ, ಮನೆ, ಭೂಮಿ ಮತ್ತು ಬೆಳೆಗಳನ್ನು ಹಾನಿಗೀಡುಮಾಡುತ್ತದೆ.
• ದೂರ ಸಂಪರ್ಕ, ವಿದ್ಯುತ್ ಪೂರೈಕೆ, ಸಾರಿಗೆ ಸೌಲಭ್ಯ ಮುಂತಾದವುಗಳು ಅಸ್ತ-ವ್ಯಸ್ತಗೊಳ್ಳುತ್ತವೆ.
7. ಕಡಲ ಕೊರೆತ ಎಂದರೇನು? ಅದರ ನಿರ್ವಹಣೆಯನ್ನು ತಿಳಿಸಿ.
ಸಮುದ್ರದ ಅಲೆಗಳು ನಿರಂತರವಾಗಿ ತೀರ ಪ್ರದೇಶಗಳಿಗೆ ಅಪ್ಪಳಿಸುತ್ತವೆ. ಇವುಗಳಿಂದ ತೀರ ಪ್ರದೇಶವು ಸವೆತಕ್ಕಿಡಾಗುತ್ತದೆ. ಇದನ್ನು ಕಡಲ ಕೊರೆತ ಎನ್ನುವರು.
ಕಡಲ ಕೊರೆತದ ನಿರ್ವಹಣೆ
• ತೀರ ಪ್ರದೇಶದಲ್ಲಿ ಮರಳು ತೆಗೆಯುವದನ್ನು ನಿಯಂತ್ರಿಸುವದು.
• ತೀರ ಪ್ರದೇಶದುದ್ದಕ್ಕೂ ಅಲೆಗಳು ಪ್ರಭಲವಾಗಿರುವ ಕಡೆ ತಡೆಗೋಡೆಯನ್ನು ನಿರ್ಮಿಸುವದು.
• ತೀರದುದ್ದಕ್ಕೂ ಮ್ಯಾಂಗ್ರೋವ್ ಅರಣ್ಯಗಳನ್ನು ಬೆಳೆಸಲು ಕಾರ್ಯಕ್ರಮ ರೂಪಿಸುವದು ಅತ್ಯಂತ ಪರಿಣಾಮಕಾರಿ.
8. ಪ್ರವಾಹಗಳುಂಟಾಗಲು ಕಾರಣಗಳೇನು?
• ಕೆಲವು ವೇಳೆ ಅತ್ಯಧಿಕ ಮಳೆ ಬೀಳುವದರಿಂದ ಪ್ರವಾಹಗಳುಂಟಾಗುತ್ತವೆ.
• ನದಿಯ ಪಾತ್ರಗಳಲ್ಲಿ ಹೂಳು ತುಂಬಿ ನೀರು ಇಕ್ಕೆಲಗಳಲ್ಲಿಯೂ ಹರಿದು ಪ್ರವಾಹಗಳು ಉಂಟಾಗುತ್ತವೆ.
• ಸಮುದ್ರದ ಮಧ್ಯೆ ಭೂಕಂಪನಗಳು ಸಂಭವಿಸುವುದರಿಂದಲೂ ಪ್ರವಾಹಗಳುಂಟಾಗುತ್ತವೆ.
9. ಪ್ರವಾಹ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳೇನು?
• ಜಲಾನಯನ ಪ್ರದೇಶದಲ್ಲಿ ಅರಣ್ಯಗಳನ್ನು ಬೆಳೆಸುವದು.
• ನದಿಗಳಿಗೆ ಆಣೆಕಟ್ಟುಗಳನ್ನು ಕಟ್ಟಿ ಜಲಾಶಯಗಳಲ್ಲಿ ನೀರನ್ನು ಸಂಗ್ರಹಿಸಿ ಇತರ ಕಡೆಗಳಿಗೆ ನೀರನ್ನು ಹರಿಸುವದು.
10. ಭೂಕಂಪದ ಪರಿಣಾಮಗಳನ್ನು ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಸಿ.
ಭೂಕಂಪದ ಪರಿಣಾಮಗಳು
• ಸಾರಿಗೆ ಸಂಪರ್ಕಗಳ ಕಡಿತ ಉಂಟಾಗುವದು.
• ನದಿಯ ದಿಕ್ಕು ಬದಲಾಯಿಸುವದು.
• ಸಾರ್ವಜನಿಕ ಆಸ್ತಿಗೆ ಹಾನಿಯಾಗುವದು.
ಭೂಕಂಪದ ಮುನ್ನೆಚ್ಚರಿಕೆಯ ಕ್ರಮಗಳು
• ಭೂಕಂಪನ ಹೆಚ್ಚು ಸಂಭವಿಸುವ ವಲಯಗಳಲ್ಲಿ ಬಹು ಅಂತಸ್ತಿನ ಕಟ್ಟಡಗಳನ್ನು ನಿμಇಂ‘üಸುವದು.
• ಕಟ್ಟಡಗಳು ಸ್ಥಿತಿ ಸ್ಥಾಪಕತ್ವ ಗುಣವನ್ನು ಹೊಂದುವಂತೆ ನಿರ್ಮಿಸುವದು.
• ಭೂಕಂಪನ ಉಂಟಾದಾಗ ಶೀಘ್ರವೇ ವಿದ್ಯುತ್ ಸಂಪರ್ಕವನ್ನು ಕತ್ತರಿಸುವದು.
11. ಭೂಕುಸಿದ ಪರಿಣಾಮಗಳೇನು?
• ಸಾರಿಗೆ ಸಂಚಾರಕ್ಕೆ ಅಡ್ಡಿ ಉಂಟಾಗುತ್ತದೆ.
• ಜೀವಹಾನಿ ಮತ್ತು ಆಸ್ತಿ ಹಾನಿಯನ್ನುಂಟುಮಾಡುತ್ತವೆ.
12. ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ ಕೈಗೊಳ್ಳಬೇಕಾದ ಪರಿಹಾರೋಪಾಯಗಳೇನು?
• ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ ಸಿದ್ದಪಡಿಸಿದ ಆಹಾರ, ಆಹಾರದ ಹಂಚಿಕೆ,
• ಶುದ್ಧ ಕುಡಿಯುವ ನೀರಿನ ಪೂರೈಕೆ, ಔμಂ‘ü ಹಂಚಿಕೆ, ತಾತ್ಕಾಲಿಕ ವಸತಿ ವ್ಯವಸ್ಥೆ, ಅಗತ್ಯ
• ಸೌಕರ್ಯಗಳನ್ನು ತುರ್ತಾಗಿ ಒದಗಿಸುವಂತಹ ಕ್ರಮಗಳನ್ನು ಕೈಗೊಳ್ಳುವದು.
ಅಧ್ಯಾಯ 13. ಭಾರತದ ಜನಸಂಖ್ಯೆ (GEO)
ಮುಖ್ಯಾಂಶಗಳು:
• ಜನಸಂಖ್ಯಾ ಹಂಚಿಕೆಯನ್ನು ವಿವರಿಸಲು ಸಾಂದ್ರತೆ ಎಂಬ ಪದವನ್ನು ಬಳಸಲಾಗುವದು.
• 2011ರ ಜನಗಣತಿಯ ಪ್ರಕಾರ ಭಾರತದ ಒಟ್ಟು ಜನಸಂಖ್ಯೆ 121 ಕೋಟಿ.
• ಭಾರತದ ಸರಾಸರಿ ಜನಸಾಂದ್ರತೆಯ ಪ್ರಮಾಣ ಪ್ರ.ಚ.ಕಿ.ಮೀ.ಗೆ 382 ರಷ್ಟಿದೆ.
• ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದ ರಾಜ್ಯ ಉತ್ತರ ಪ್ರದೇಶ.
• ಅತಿ ಕಡಿಮೆ ಜನಸಂಖ್ಯೆಯನ್ನು ಹೊಂದಿದ ರಾಜ್ಯ ಸಿಕ್ಕಿಂ.
• ಭಾರತದಲ್ಲಿ ಅತಿ ಹೆಚ್ಚು ಜನಸಾಂದ್ರತೆಯ ರಾಜ್ಯ ಬಿಹಾರ.
• ಭಾರತದಲ್ಲಿ ಅತಿ ಕಡಿಮೆ ಜನಸಾಂದ್ರತೆಯ ರಾಜ್ಯ ಅರುಣಾಚಲ ಪ್ರದೇಶ.
• ಭಾರತದಲ್ಲಿ ಮೊದಲ ಬಾರಿಗೆ 1872 ರಲ್ಲಿ ಜನಗಣತಿ ಆರಂಭವಾಯಿತು.
• 2011ರ ಜನಗಣತಿಯ ಪ್ರಕಾರ ಭಾರತದ ಸರಾಸರಿ ಸಾಕ್ಷರತೆಯ ಪ್ರಮಾಣ ಶೇ. 74.04%.
• 2011ರ ಜನಗಣತಿಯ ಪ್ರಕಾರ ಭಾರತದಲ್ಲಿ ಗರಿಷ್ಟ ಸಾಕ್ಷರತೆಯನ್ನು ಹೊಂದಿದ ರಾಜ್ಯ ಕೇರಳ.
• 2011ರ ಜನಗಣತಿಯ ಪ್ರಕಾರ ಭಾರತದಲ್ಲಿ ಕನಿಷ್ಟ ಸಾಕ್ಷರತೆಯನ್ನು ಹೊಂದಿದ ರಾಜ್ಯ ಬಿಹಾರ.
• ಭಾರತದ ಸರಾಸರಿ ಲಿಂಗಾನುಪಾತ ಪ್ರತಿ 1000 ಪುರುಷರಿಗೆ 940 ಮಹಿಳೆಯರು.
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ಜನಸಂಖ್ಯೆ ಎಂದರೇನು?
ಒಂದು ಪ್ರದೇಶದಲ್ಲಿ ಒಂದು ನಿರ್ದಿಷ್ಟ ಅವಧಿಯಲ್ಲಿ ವಾಸಿಸುತ್ತಿರುವ ಜನರ ಪ್ರಮಾಣವೇ ಅಲ್ಲಿನ ಜನಸಂಖ್ಯೆಯಾಗಿದೆ.
2. ಜನಸಾಂದ್ರತೆ ಎಂದರೇನು?
ಒಂದು ಭೂಪ್ರದೇಶದಲ್ಲಿರುವ ಒಟ್ಟು ಜನರ ಸಂಖ್ಯೆಯನ್ನು ಆ ಭೂ ಪ್ರದೇಶದ ಕ್ಷೇತ್ರದಿಂದ ಭಾಗಿಸಿದಾಗ ಬರುವ ಭಾಗಲಬ್ಧವೇ ಜನಸಾಂದ್ರತೆಯಾಗಿದೆ.
3. ವಲಸೆ ಎಂದರೇನು?
ಮಾನವನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಾಸಸ್ಥಳವನ್ನು ಬದಲಾಯಿಸುವದನ್ನೇ ವಲಸೆ ಎಂದು ಕರೆಯುವರು.
4. ವಲಸೆಯ ವಿಧಗಳಾವವು?
1. ಅಂತರಾಷ್ಟ್ರೀಯ ವಲಸೆ. 2. ಆಂತರಿಕ ವಲಸೆ.
5. ಜನಸಂಖ್ಯಾ ಹಂಚಿಕೆಯ ಮೇಲೆ ಪ್ರಭಾವ ಬೀರುವ ಅಂಶಗಳಾವುವು?
ಭಾರತದ ಜನಸಂಖ್ಯಾ ಹಂಚಿಕೆಯ ಮೇಲೆ ಅನೇಕ ಭೌಗೋಳಿಕ, ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಅಂಶಗಳು ಪ್ರಭಾವ ಬೀರಿದ್ದು ಅದು ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸವನ್ನು
ಹೊಂದಲು ಕಾರಣವಾಗಿದೆ.
6. ಪುರಯೋಜನೆ ಎಂದರೇನು?
ನಗರಗಳಲ್ಲಿ ಕಂಡುಬರುವ ಮೂಲ ಸೌಲಭ್ಯಗಳನ್ನು ಅಂದರೆ ರಸ್ತೆ, ಕುಡಿಯುವ ನೀರು, ಚರಂಡಿ ವ್ಯವಸ್ಥೆ, ಗ್ರಂಥಾಲಯ, ಶೈಕ್ಷಣಿಕ ಸೌಲಭ್ಯಗಳನ್ನು ಹಳ್ಳಿಗಳು ಮತ್ತು ಪಟ್ಟಣಗಳಿಗೆ ವಿಸ್ತರಿಸುವದು. ಇದನ್ನು ಪುರಯೋಜನೆ ಎಂದು ಕರೆದಿರುವರು.
7. ಭಾರತದ ಜನಸಾಂದ್ರತೆಯ ವಲಯಗಳನ್ನು ಕುರಿತು ಬರೆಯಿರಿ.
1. ಅಧಿಕ ಜನಸಾಂದ್ರತೆಯ ವಲಯ (ಪ್ರತಿ ಚ.ಕಿ.ಮೀ.ಗೆ 500ಕ್ಕಿಂತ ಹೆಚ್ಚು ಜನಸಂಖ್ಯೆ)
2. ಸಾಧಾರಣ ಜನಸಾಂದ್ರತೆಯ ವಲಯ (ಪ್ರತಿ ಚ.ಕಿ.ಮೀ.ಗೆ 251 ರಿಂದ 500 ವರೆಗೆ)
3. ವಿರಳ ಜನಸಾಂದ್ರತೆಯ ವಲಯ (ಪ್ರತಿ ಚ.ಕಿ.ಮೀ.ಗೆ 250ಕ್ಕಿಂತ ಕಡಿಮೆ ಜನಸಂಖ್ಯೆ)
8. ಜನಸಂಖ್ಯಾ ಬೆಳವಣಿಗೆಯಿಂದ ಉಂಟಾಗುವ ಪರಿಣಾಮಗಳಾವವು?
• ಅಧಿಕ ಜನಸಂಖ್ಯಾ ಬೆಳವಣಿಗೆಯಿಂದ ನಿರುದ್ಯೋಗ ಸಮಸ್ಯೆ, ಆಹಾರ ಮತ್ತು ಪೌಷ್ಟಿಕಾಂಶದ ಕೊರತೆ ಉಂಟಾಗುತ್ತದೆ.
• ಸಾಮಾಜಿಕ ಹಾಗೂ ನಾಗರಿಕ ಸೌಲಭ್ಯಗಳ ಮೇಲೆ ಅಧಿಕ ಒತ್ತಡ ಉಂಟಾಗುತ್ತದೆ.
• ಕಡಿಮೆ ತಲಾವಾರು ಆದಾಯ , ನಿದಾನಗತಿಯ ಆರ್ಥಿಕಾಭಿವೃದ್ಧಿ, ಸಾಮಾಜಿಕ ಸಮಸ್ಯೆಗಳು, ವಸತಿ ಸಮಸ್ಯೆ ಇತ್ಯಾದಿ ದುಷ್ಪರಿಣಾಮಗಳು ಉಂಟಾಗುತ್ತವೆ.
9. ಹಳ್ಳಿಯಿಂದ ನಗರಗಳಿಗೆ ವಲಸೆ ಹೋಗುವದರಿಂದ, ನಗರಗಳ ಮೇಲುಂಟಾಗುವ ಪರಿಣಾಮಗಳು ಅಥವಾ ಸಮಸ್ಯೆಗಳಾವವು?
• ಗ್ರಾಮೀಣ ಪ್ರದೇ±ದಿÀಂದ ನಗರUಳಿÀಗೆ ಹೆZುÀ ್ಚ ವಲಸೆ ಹೋಗುವ ಕಾರ್ಮಿಕರು ನೆಲೆಸಲು ಸ್ಥಳವಿಲ್ಲದೆ ಕೋಳಗೇರಿಗಳು ನಿರ್ಮಾಣವಾಗುತ್ತವೆ.
• ನೀರು, ವಿದ್ಯುತ್, ರಸ್ತೆ, ವಿದ್ಯಾಭ್ಯಾಸ ಮೊದಲಾದ ಮೂಲ ಸೌಕರ್ಯಗಳ ಮೇಲೆ ಒತ್ತಡ ಉಂಟಾಗಿ ದೊರೆಯದಂvಹ À ಪರಿಸ್ಥಿತಿಯುಂಟಾಗುತ್ತದೆ.
• ವ್ಯಭಿಚಾರ ಹಾಗೂ ಇತರೆ ಅನೈತಿಕ ಚಟುವಟಿಕೆಗಳಿಗೆ ಬಹುತೇಕ ವಲಸೆಗಳು ಕಾರಣವಾಗುತ್ತವೆ.
• ಉದ್ಯೋಗವಕಾಶಗಳ ಮೇಲೆ ಪರಿಣಾಮ ಉಂಟಾಗುತ್ತದೆ. ಇದು ಕೊಲೆ, ಸುಲಿಗೆ, ದರೋಡೆ, Wಂμಂಜuಇ ಮೊದಲಾದವುಗಳಿಗೆ ಕಾರಣವಾಗುತ್ತದೆ.
• ವಲಸೆ ಇರುವ ಪ್ರದೇಶಗಳಲ್ಲಿ ಜನಸಾಂದ್ರತೆ ಹಾಗೂ ಬೆಳವಣಿಗೆ ಹೆಚ್ಚಾಗುವದು.
9. ವಲಸೆಯನ್ನು ನಿಯಂತ್ರಿಸುವ ಕ್ರಮಗಳಾವವು?
1. ಕೈಗಾರಿಕಾ ವಲಯಗಳನ್ನು ನಗರಗಳ ಹೊರಗೆ ನಿರ್ಮಿಸುವದು.
2. ಗ್ರಾಮೀಣ ಕಸುಬು ಉಪಕಸುಬುಗಳಿಗೆ ಹೆಚ್ಚಿನ ಪ್ರಧಾನ್ಯತೆ ನೀಡುವುದು.
3. ನಗರ ಹಾಗೂ ಸುತ್ತಲಿನ ಗ್ರಾಮೀಣ ವಸತಿಗಳ ನಡುವೆ ಸಾರಿಗೆ ಸೌಲಭ್ಯಗಳನ್ನು ವಿಸ್ತರಿಸುವದು.
11. ವಿರಳ ಜನಸಂಖ್ಯೆಗೆ ಕಾರಣವಾಗುವ ಅಂಶಗಳು ಯಾವವು?
• ಪ್ರವಾಹಗಳು,
• ಭೂಕಂಪಗಳು,
• ಮರುಭೂಮಿ ಪ್ರದೇಶಗಳು
• ಚಂಡಮಾರುತಗಳು,
• ಇತರ ನೈಸರ್ಗಿಕ ವಿಕೋಪಗಳು
12. ಜನಸಂಖ್ಯೆ ನಿಯಂತ್ರಿಸಲು ಕೈಗೊಂಡಿರುವ ಕ್ರಮಗಳಾವವು?
ಭಾರತ ಸರಕಾರವು ತ್ವರಿತಗತಿಯಲ್ಲಿ ಏರುತ್ತಿರುವ ಜನಸಂಖ್ಯೆಯನ್ನು ತಡೆಗಟ್ಟಲು ಹಲವಾರು ಕ್ರಮಗಳನ್ನು ರೂಪಿಸಿ ಕಾರ್ಯಗತಗೊಳಿಸಿದೆ. ಅವುಗಳಲ್ಲಿ
• ಕುಟುಂಬ ಯೋಜನೆ,
• ಮಹಿಳಾ ಕಲ್ಯಾಣ ಯೋಜನೆ,
• ಶಿಶು ಮರಣ vಡ Éಗಟ್ಟುವದು,
• ಪ್ರಚಾರ ಜಾಹಿರಾತು, PುÀಟುಂಬ
• ಯೋಜನಾ ಶಿಬಿರಗಳು ಮುಂತಾದ ಕ್ರಮಗಳನ್ನು ಕೈಗೊಳ್ಳಲಾಗಿದೆ.
13. ವಲಸೆಗೆ ಕಾರಣಗಳೇನು?
ಮದುವೆ, ನೌಕರಿ, ವ್ಯಾಪಾರ, ಉತ್ತಮ ಜೀವನ ಹುಡುಕಾಟ, ಸಾಮಾಜಿಕ ಭದ್ರತೆ,ಉತ್ತಮ ಆರೋಗ್ಯ ಮೊದಲಾದವುಗಳ ಉದ್ದೇಶದಿಂದ ಜನರು ಮೂಲ ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಬಂದು ನೆಲೆಸುತ್ತಾರೆ.
13. ಭಾರತ ನಕಾಶೆ ರಚಿಸಿ ಈ ಕೆಳಗಿನವುಗಳನ್ನು ಗುರುತಿಸಿರಿ
1. 23 1/2º ಉತ್ತರ ಅಕ್ಷಾಂಶ (ಕರ್ಕಾಟಕ ಸಂಕ್ರಾಂತಿ ವೃತ್ತ)
2. 82 1/2º ಪೂರ್ವ ರೇಖಾಂಶ.
3. ನರೆಯ ರಾಷ್ಟ್ರಗಳು
4. ಪಶ್ಚಿಮ ಘಟ್ಟಗಳು, ಪೂರ್ವ ಘಟ್ಟಗಳು, ಅರಾವಳಿ ಬೆಟ್ಟಗಳು,
5. ರೂಯ್ಲಿ, ಗಂಗಾನಗರ, ಮಾಸಿನ್‍ರಾಮ್,
6. ದಾಮೋದರ ನದಿ ಕಣಿವೆ ಯೋಜನೆ, ಭಾಕ್ರಾನಂಗಲ್ ಯೋಜನೆ, ಕೋಸಿ ಯೋಜನೆ
7. ಹಿರಾಕುಡ್ ಯೋಜನೆ, ತುಂಗಭದ್ರಾ ಯೋಜನೆ, ನರ್ಮದಾ ನದಿ ಕಣಿವೆ ಯೋಜನೆ.
8. ನರ್ಮದಾ ನದಿ, ಕಾವೇರಿ ನದಿ, ಗಂಗಾ ನದಿ, ಮಹಾನದಿ, ಕೃಷ್ಣಾ ನದಿ, ಕೋಸಿ ನದಿ,
9. ಮುಂಬಯಿ, ಕಲ್ಲತ್ತಾ, ಚನ್ನೈ, ದೆಹಲಿ
10. ಕೆಮ್ಮಣ್ಣುಗುಂಡಿ, ಹೊಸಪೇಟ್, ಸೊಂಡುರು, ಕುದುರೆಮುಖ, ಹಟ್ಟಿ ಚಿನ್ನದ ಗಣಿ,
11. ಝರಿಯಾ, ದಿಗ್ಬಾಯಿ, ಅಂಕಲೇಶ್ವರ, ಬಾಂಬೆ ಹೈ, ಬಾರಾಮರ್,
12. ಪ್ರಮುಖ ಬಂದರುಗಳು & ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು
No comments:
Post a Comment