ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Wednesday, March 04, 2015

  Pundalik       Wednesday, March 04, 2015

ಕಲ್ಲಿದ್ದಲು ಮಸೂದೆ ಅಂಗೀಕರಿಸಿದ ಲೋಕಸಭೆ

kalliddalu masude angikarisidha lokasabhe (4 Mar) ನವದೆಹಲಿ: ಲೋಕಸಭೆಯಲ್ಲಿ ಇಂದು ಕಲ್ಲಿದ್ದಲು ಸುಗ್ರೀವಾಜ್ಞೆಯನ್ನು ಬದಲಿಸಲು ಮಂಡಿಸಲಾಗಿದ್ದ ಕಲ್ಲಿದ್ದಲು ಮಸೂದೆಗೆ ಅಂಗೀಕಾರ ನೀಡಲಾಗಿದೆ. *
* 'ಕಲ್ಲಿದ್ದಲು ಗಣಿಗಾರಿಕೆ (ವಿಶೇಷ ಅವಕಾಶ) ಕಾಯ್ದೆ 2015' ಮಸೂದೆಯನ್ನು ಲೋಕಸಭೆಯು ಧ್ವನಿಮತದ ಮೂಲಕ ಅಂಗೀಕರಿಸಿದೆ. 
* ಈ ಮಸೂದೆಯು ಕೇಂದ್ರ ಸರ್ಕಾರವು ಕಳೆದ ವರ್ಷ ಅಕ್ಟೋಬರ್ 21ರಂದು ಮತ್ತು ಡಿಸೆಂಬರ್​ನಲ್ಲಿ ಹೊರಡಿಸಿದ್ದ ಸುಗ್ರೀವಾಜ್ಞೆಯನ್ನು ಕಾಯ್ದೆಯಾಗಿ ಬದಲಿಸಲಿದೆ. 
* ನ್ಯಾಯಾಲಯವು 204 ಕಲ್ಲಿದ್ದಲು ಗಣಿಗಳ ಹಂಚಿಕೆಯನ್ನು ರದ್ದುಗೊಳಿಸಿದ ನಂತರ ಕೇಂದ್ರ ಸರ್ಕಾರವು ಸುಗ್ರೀವಾಜ್ಞೆ ಹೊರಡಿಸಿತ್ತು. 
* ಮಸೂದೆ ಕುರಿತು ಮಾತನಾಡಿದ ಕಲ್ಲಿದ್ದಲು ಮತ್ತು ವಿದ್ಯುತ್ ಸಚಿವ ಪಿಯೂಷ್ ಗೋಯಲ್ ಕಾಯ್ದೆಯಿಂದ ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆಯು ಪಾರದರ್ಶಕವಾಗಲಿದೆ ಎಂದು ತಿಳಿಸಿದರು. ಕಾಯ್ದೆಯಿಂದಾಗಿ ಕಲ್ಲಿದ್ದಲು ಕ್ಷೇತ್ರದಲ್ಲಿನ ಸಮಸ್ಯೆ ನಿವಾರಿಸಲು ಅನುಕೂಲವಾಗಲಿದೆ.

ಮುಂದಿನ ಹಂತದ ಕಲ್ಲಿದ್ದಲು ಗಣೆ ಹರಾಜು ಶೀಘ್ರ ಪ್ರಾರಂಭ: ಗೋಯಲ್

mundina hantadha kalliddalu gane haraaju shighra(3 Mar) ನವದೆಹಲಿ: ಕಲ್ಲಿದ್ದಲು ಗಣಿಯ ಮುಂದಿನ ಹಂತದ ಹರಾಜು ಪ್ರಕ್ರಿಯೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಕೇಂದ್ರ ಕಲ್ಲಿದ್ದಲು, ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ. 
* ಮೊದ ಹಂತದಲ್ಲಿ ಸರ್ಕಾರವು 19 ಕಲ್ಲಿದ್ದಲು ಗಣಿಗಳನ್ನು ಹರಾಜು ಮಾಡಿದ್ದು, ಎರಡನೇ ಹಂತದ ಹರಾಜು ಪ್ರಕ್ರಿಯೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು. 
* ಸುಗ್ರೀವಾಜ್ಞೆ ಹೊರಡಿಸದಿದ್ದರೆ ಕಲ್ಲಿದ್ದಲು ಗಣಿಯನ್ನು ಹರಾಜು ಮಾಡಲು ಸಾಧ್ಯವಾಗುತ್ತಿರಲಿಲ್ಲ. 
* ಸುಗ್ರೀವಾಜ್ಞೆಯ ಕಾರಣ 2004-14ರ ಅವಧಿಯಲ್ಲಿ ಕಲ್ಲಿದ್ದಲು ಗಣಿ ಹರಾಜು ಪ್ರಕ್ರಿಯೆ ನಡೆದಿರಲಿಲ್ಲ. 
* ನಮ್ಮ ಸರ್ಕಾರ ಮೊದಲ ಹಂತದ ಹರಾಜಿನಲ್ಲಿ 19 ಗಣಿಗಳನ್ನು ಹರಾಜು ಮಾಡಿದೆ ಎಂದು ಗೋಯಲ್ ತಿಳಿಸಿದರು

ಕಲ್ಲಿದ್ದಲು ಹರಾಜು; ರಾಜ್ಯಗಳಿಗೆ 1.09 ಲಕ್ಷ ಕೋಟಿ

kalliddalu haraaju; raajyagalige 1.09 laksha koti
* 19 ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆಯಿಂದ ಛತ್ತೀಸ್​ಘಡ, ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಸ್ಸಾ ಮತ್ತು ಮಹಾರಾಷ್ಟ್ರಗಳಿಗೆ ಸುಮಾರು 1.09 ಕೋಟಿ ಆದಾಯ ಸಿಗಲಿದೆ ಎಂದು ಕೆಂದ್ರ ಕಲ್ಲಿದ್ದಲು ಕಾರ್ಯದರ್ಶಿ ಅನಿಲ್ ಸ್ವರೂಪ್ ತಿಳಿಸಿದ್ದಾರೆ. 
* ಇದರ ಜತೆಗೆ ರಾಯಲ್ಟಿ ರೂಪದಲ್ಲಿ ಸುಮಾರು 12,500 ಕೋಟಿ ರೂ. ಆದಾಯ ರಾಜ್ಯಗಳಿಗೆ ಸಿಗಲಿದೆ. 
* 19 ಗಣಿಗಳ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದ್ದು, ಪಾರದರ್ಶಕ ಹರಾಜು ಪ್ರಕ್ರಿಯೆಯಿಂದ ಸಂತಸವಾಗಿದೆ. 
* ಎಲ್ಲಾ 204 ಕಲ್ಲಿದ್ದಲು ಗಣಿಗಳನ್ನು 2016ರ ಮಾರ್ಚ್ 31ರೊಳಗೆ ಹಂಚಿಕೆ ಮಾಡಲಾಗುವುದು. 
* ರಾಜ್ಯ ಸರ್ಕಾರದ ಉದ್ದಿಮೆಗಳು ಗಣಿ ಹಂಚಿಕೆ ಮಾಡಲಾಗುವುದು ಮತ್ತು ಖಾಸಗಿ ಉದ್ದಿಮೆಗಳಿಗೆ ಗಣಿ ಹರಾಜು ಮಾಡಲಾಗುವುದು ಎಂದು ಸ್ವರೂಪ್ ತಿಳಿಸಿದ್ದಾರೆ

ಕಲ್ಲಿದ್ದಲು ಹರಾಜು: ತಾಂತ್ರಿಕ ತಜ್ಞರ ಸಮಿತಿ ರಚನೆ

kalliddalu haraaju: taantrika tagnara samiti rachane(2 Feb) ನವದೆಹಲಿ: ಕಲ್ಲಿದ್ದಲು ಗಣಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವವರ ತಾಂತ್ರಿಕ ಅರ್ಹತೆಯನ್ನು ಪರೀಕ್ಷಿಸಲು ಕೇಂದ್ರ ಸರ್ಕಾರವು 6 ಜನ ತಜ್ಞರ ಸಮಿತಿಯನ್ನು ರಚಿಸಲಿದೆ.
*  ಕಲ್ಲಿದ್ದಲು ಗಣಿ ಹರಾಜು ವೇಳಾ ಪಟ್ಟಿ 1ರಲ್ಲಿ ಭಾಗವಹಿಸುವವರ ತಾಂತ್ರಿಕ ಅರ್ಹತೆಯನ್ನು ಪರೀಕ್ಷಿಸಲು ತಾಂತ್ರಿಕ ಮೌಲ್ಯಮಾಪನ ಸಮಿತಿಯನ್ನು ರಚಿಸಲು ನಿರ್ಧರಿಸಲಾಗಿದೆ. 
* ಪಶ್ಚಿಮ ಬಂಗಾಳದ ರಾಜ್ಯ ವಿಚಕ್ಷಣಾ ಆಯುಕ್ತ ಕೆ.ಎಸ್.ರಾಮಸುಬ್ಬನ್ ಸಮಿತಿಯ ಅಧ್ಯಕ್ಷರಾಗಲಿದ್ದಾರೆ. 
* ಉಳಿದಂತೆ ಕೇಂದ್ರ ವಿದ್ಯುತ್ ಪ್ರಾಧಿಕಾರ, 
* ವಿದ್ಯುತ್ ಸಚಿವಾಲಯ ಮತ್ತು
* ರಾಷ್ಟ್ರೀಯ ಎರಡನೇ ಹಂತದ ಉಕ್ಕು ತಂತ್ರಜ್ಞಾನ ಸಂಸ್ಥೆ, 
* ಉಕ್ಕು ಸಚಿವಾಲಯ ಮತ್ತು ಇತರರು ಇರಲಿದ್ದಾರೆ. 
* ಕಲ್ಲಿದ್ದಲು ಗಣಿ ಹರಾಜು ಪ್ರಕ್ರಿಯೆ ಫೆಬ್ರವರಿ 14 ರಿಂದ ಫೆಬ್ರವರಿ 22ರವರೆಗೆ ನಡೆಯಲಿದೆ. 
* ಈ ಹರಾಜು ಪ್ರಕ್ರಿಯೆಯಲ್ಲಿ ಸರ್ಕಾರವು 46 ಗಣಿಗಳನ್ನು ಖಾಸಗಿಯವರಿಗೆ ಹರಾಜು ಮಾಡಲಿದೆ. 
* ಎರಡನೇ ಹಂತದ ಹರಾಜು ಪ್ರಕ್ರಿಯೆಯಲ್ಲಿ 23 ಕಲ್ಲಿದ್ದಲು ಗಣಿಗಳನ್ನು ಹರಾಜು ಮಾಡಲಾಗುವುದು. 
* ಈ 23 ಗಣಿಗಳು ಮತ್ತು ಉಳಿದಂತೆ ಮೂರನೇ ಹಂತದ 23 ಗಣಿಗಳನ್ನು ಫೆಬ್ರವರಿ 25 ರಿಂದ ಮಾರ್ಚ್ 5ರೊಳಗೆ ಹರಾಜು ಮಾಡಲಾಗುತ್ತದೆ. ಉಳಿದಂತೆ 36 ಗಣಿಗಳನ್ನು ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ ಹಂಚಿಕೆ ಮಾಡಲಾಗುತ್ತದೆ


logoblog

Thanks for reading

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *