ಬೈಸಿಕಲ್ ವಿತರಣಾ ಯೋಜನೆ
ಉಚತ ಬೈಸಿಕಲ್ ವಿತರಣಾ ಯೋಜನೆ:
ಗ್ರಾಮೀಣ ಹಾಗೂ ಗುಡ್ಡಗಾಡು ಪ್ರದೇಶಗಳ ಮಕ್ಕಳಿಗೆ ಸಾರಿಗೆ ಸೌಲಭ್ಯ ಒದಗಿಸುವ ದೃಷ್ಠಿಯಿಂದ ಉಚಿತ ಬೈಸಿಕಲ್ ವಿತರಣೆ ಕಾರ್ಯಕ್ರಮವನ್ನು 2006-07ನೇ ಸಾಲಿನಿಂದ ಪ್ರಾರಂಭಿಸಲಾಗಿದೆ. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 8ನೇ ತರಗತಿಯ ಬಡತನ ರೇಖೆಗಿಂತ ಕೆಳಗೆ ಇರುವ ಹೆಣ್ಣು ಮಕ್ಕಳಿಗೆ ಈ ಸೌಲಭ್ಯ ಒದಗಿಸಲಾಗಿತ್ತು.
ಬಸ್ ಪಾಸ್ ಹೊಂದಿದ ಹಾಗೂ ಹಾಸ್ಟೆಲ್ ಸೌಲಭ್ಯ ಪಡೆದ ಹೆಣ್ಣು ಮಕ್ಕಳಿಗೆ ಈ ಸೌಲಭ್ಯ ನೀಡಿರುವುದಿಲ್ಲ.
2007-08ನೇ ಸಾಲಿನಿಂದ ಈ ಯೋಜನೆಯನ್ನು ನಗರ ಪ್ರದೇಶದ ಬಿ.ಪಿ.ಎಲ್ ಕುಟುಂಬದ ಹೆಣ್ಣು ಮಕ್ಕಳಿಗೂ
ಹಾಗೂ ಗಂಡು ಮಕ್ಕಳಿಗೂ ವಿಸ್ತರಿಸಲಾಯಿತು.
- ಹೆಣ್ಣು ಮಕ್ಕಳ ದಾಖಲಾತಿಯನ್ನು ಉತ್ತೇಜಿಸುವುದು.
- ಮಕ್ಕಳು ದೂರದಲ್ಲಿರುವ ಶಾಲೆಯನ್ನು ತಲುಪಲು ಅನುಕೂಲ ಮಾಡುವುದು.
- ಮಕ್ಕಳ ಕಲಿಕೆ ಹಾಗೂ ಉಳಿಯುವಿಕೆಯನ್ನು ಉತ್ತಮ ಪಡಿಸುವುದು.
- ಮಕ್ಕಳ ಆತ್ಮಸ್ಥೈರ್ಯವನ್ನು ಹೆಚ್ಚಿಸುವುದು.
- ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸುವುದು.
- ಪ್ರಯಾಣದ ವೇಳೆಯನ್ನು ತಗ್ಗಿಸುವುದು.
ಉಚಿತ ಸಮವಸ್ತ್ರ ಮತ್ತು ಶಾಲಾಬ್ಯಾಗ್
ಉಚಿತ ಸಮವಸ್ತ್ರ ಮತ್ತು ಶಾಲಾಬ್ಯಾಗ್ :
ಭಾರತೀಯ ಸಂವಿಧಾನದ ಆನುಚ್ಛೇದ-45ರ ಪ್ರಕಾರ 14 ವರ್ಷದ ವರೆಗಿನ ಮಕ್ಕಳಿಗೆ ಕಡ್ಡಾಯವಾಗಿ ಉಚಿತ ಪ್ರಾಥಮಿಕ
ಶಿಕ್ಷಣ ನೀಡುವುದು ರಾಜ್ಯಸರ್ಕಾರಗಳ ನಿರ್ದೇಶಿತ ಪ್ರಮುಖ ಕಾರ್ಯನೀತಿಗಳಲ್ಲಿ ಒಂದಾಗಿರುತ್ತದೆ. ಪ್ರಮುಖವಾಗಿ ರಾಷ್ಟೀಯ ಶಿಕ್ಷಣ ನೀತಿಯಲ್ಲಿ ಪ್ರಾಥಮಿಕ ಶಿಕ್ಷಣದ ಸಾರ್ವತ್ರೀರಣಕ್ಕಾಗಿ ಕಡ್ಡಾಯ ಪ್ರಾಥಮಿಕ ಶಿಕ್ಷಣದಲ್ಲಿ ಮಹತ್ವದ ಗುರಿಯನ್ನು ಸಾಧಿಸಲು ಅನುಕೂಲವಾಗುವ ಉದ್ಯೇಶದಿಂದ ಕೇವಲ ಹಜರಾತಿಯ ಕ್ರಮವನ್ನು ಶಿಕ್ಷಣ ಸಾರ್ವತ್ರೀಕರಣದ ಮೂರು ಮುಖ್ಯ ದಿಕ್ಕುಗಳಾಗಿ ವಿಂಗಡಿಸಿದೆ.
ಅವು:
- ಮಕ್ಕಳ ದಾಖಲಾತಿ,
- ಕಲಿಕೆಯಲ್ಲಿನ ಗುಣಮಟ್ಟ ಹಾಗೂ
3. ಧಾರಣಾ ಶಕ್ತಿ ಎಂದು ಮೂರು ಅಳತೆಗೋಲಾಗಿ ನಿರ್ಧರಿಸಲಾಗಿದೆ..
ಸಂವಿಧಾನದ ನಿರ್ದೇಶಿತ ಅಂಶಗಳಲ್ಲದೆ ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಒಬ್ಬರಿಗಿಂತ ಒಬ್ಬರು ಮುಂದಾಗಿ ಪ್ರಾಮುಖ್ಯತೆ ಮೇರೆಗೆ ಅನುಕ್ರಮವಾದ ಯೋಜನೆಗಳನ್ನು ರೂಪಿಸುವಲ್ಲಿ ನಿರತರಾಗಿದ್ದು,ಇಂತಹ ಅನುಕರಣೆಗಳಿಂದ ಹಾಗೂ ಸರ್ಕಾರಗಳ ಪರಿಶ್ರಮದಿಂದಾಗಿ ಹಲವಾರು ರೀತಿಯಲ್ಲಿ ಪ್ರಾಥಮಿಕ ಹಂತದಲ್ಲಿ ಅಭಿವೃದ್ಧಿಯನ್ನು ಸಾಧಿಸಲಾಗಿರುತ್ತದೆ.
ಪ್ರಾಥಮಿಕ ಹಂತದಲ್ಲಿ ಶಾಲೆಗಳಲ್ಲಿ ಮಕ್ಕಳು ದಾಖಲಾಗದಿರಲು ಅಥವಾ ಭಾಗವಹಿಸದಿರಲು ಕುಟುಂಬದ ಬಡತನ
ಹಾಗೂ ಆರ್ಥಿಕ ಸಂಕಷ್ಟವೇ ಕಾರಣವಾಗಿರುತ್ತದೆ. ಈ ಕಾರಣಗಳು ಸರ್ಕಾರಗಳ ವಿಶೇಷ ಕೋರಿಕೆ ಎಂದು ಪರಿಗಣಿಸಿ
ಇಂತಹ ಸಮಸ್ಯೆಗಳಲ್ಲಿ ಸರ್ಕಾರ ವಿಶೇಷವಾಗಿ ಮಧ್ಯಸ್ಥಿಕೆ ವಹಿಸಿ ಮಕ್ಕಳು ಶಾಲೆಯನ್ನು ತೊರೆಯದಂತೆ ಅಥವಾ ಶಾಲೆಗಳಿಗೆ ಆಕರ್ಷಿತರಾಗುವಂತೆ ಯೋಜನೆಗಳನ್ನು ರೂಪಿಸುವ ಮೂಲಕ ಶಾಲೆಗಳಲ್ಲಿ ಉತ್ತಮ ಹಾಜರಾತಿಗೆ ಅವಕಾಶವಾಗಿರುತ್ತದೆ.
ವಿಸ್ತರಿಸಿದ ಶಾಲಾ ಸೌಕರ್ಯಗಳು ಇದೀಗ ಕನಿಷ್ಠ ವರಮಾನದ ಕುಟುಂಬದಲ್ಲಿನ ಹೆಚ್ಚು ಹೆಚ್ಚು ಮಕ್ಕಳೂ ಸಹ
ಶಾಲೆಗಳಿಗೆ ದಾಖಲಾಗಲು ಅನುಕೂಲವಾಗಿರುತ್ತದೆ. ಹೀಗೆ ದಾಖಲಾದ ಮಕ್ಕಳು ಕಡ್ಡಾಯ ಪ್ರಾಥಮಿಕ ಹಂತವನ್ನು
ಪೂರ್ಣಗೊಳಿಸುವವರೆಗೆ ಶಾಲೆಯಲ್ಲಿ ಉಳಿಯಲು ಸರ್ಕಾರದ ಮಹತ್ವದ ಯೋಜನೆಗಳಾದ ಮಧ್ಯಾಹ್ನದ ಬಿಸಿಯೂಟ,
ಉಚಿತ ಸಮವಸ್ತ್ರ, ಉಚಿತ ಪಠ್ಯಪುಸ್ತಕ, ಉಚಿತ ಶಾಲಾಬ್ಯಾಗ್ ಹಾಗೂ ನಿಯಮಿತವಾದ ಮಕ್ಕಳ ಆರೋಗ್ಯ
ತಪಾಸಣಾ ಕಾರ್ಯಕ್ರಮಗಳು ಸಹಕಾರಿಯಾಗಿರುತ್ತದೆ.
ಉಚಿತ ಸಮವಸ್ತ್ರವಿತರಣೆಯ ಮುಖ್ಯ ಉದ್ಯೇಶಗಳು :
- 14 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡುವುದು.
- 14 ವರ್ಷದ ಒಳಗಿನ ಎಲ್ಲಾ ಮಕ್ಕಳೂ ಶಾಲೆಗೆ ಕಡ್ಡಾಯವಾಗಿ ದಾಖಲಾಗಲು ಆಕರ್ಷಿಸುವುದು, ಹಾಗೂ ದಾಖಲಾದ ಮಕ್ಕಳು ಮಧ್ಯದಲ್ಲಿ ಶಾಲೆ ತೊರೆಯದಂತೆ ನೋಡಿಕೊಳ್ಳುವುದು
- ಎಲ್ಲಾ ಮಕ್ಕಳಲ್ಲಿ ಏಕತೆ ಮತ್ತು ಶಿಸ್ತು ರೂಪಿಸುವುದು
ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ಪೂರೈಕೆ ಯೋಜನೆಯು ದೇಶದ ಸ್ವಾತಂತ್ರ್ಯ ಪೂರ್ವದಲ್ಲೂ ಸಹ ಜಾರಿಯಲ್ಲಿತ್ತು, ಆದಾಗ್ಯೂ ರಾಜ್ಯ ಸರ್ಕಾರ ಕಡ್ಡಾಯ ಪ್ರಾಥಮಿಕ ಶಿಕ್ಷಣ ನೀತಿ ಜಾರಿಗೆ ತಂದಾಗ ಅನೇಕ ವಿಚಾರಗಳನ್ನು ಪರಾಮರ್ಷಿಸಿ ಹಾಗೂ ಸತತ ಪ್ರಯತ್ನಗಳ ಮೂಲಕ ಸಮವಸ್ತ್ರ ಪೂರೈಕೆಯನ್ನು ಒಂದು ಪ್ರೋತ್ಸಾಹದಾಯಕ ಕಾರ್ಯಕ್ರಮವಾಗಿ 1961ನೇ ಸಾಲಿನಿಂದ ಜಾರಿಗೆ ತರಲಾಯಿತು
ರಾಜ್ಯದಲ್ಲಿ ಕರ್ನಾಟಕ ಸರ್ಕಾರ ವಿದ್ಯಾವಿಕಾಸ ಯೋಜನೆಯಡಿ ಉಚಿತ ಸಮವಸ್ತ್ರ ವಿತರಣೆ ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ಮಕ್ಕಳಿಗೆ ಉಚಿತ ಸಮವಸ್ತ್ರವನ್ನು ವಿತರಿಸಲಾಗುತ್ತಿದೆ. ಹೀಗೆ ವಿತರಿಸಲಾಗುವ ಸಮವಸ್ತ್ರ ಬಟ್ಟೆಗಳನ್ನು ಪ್ರತಿ ತರಗತಿವಾರು ವಿವಿಧ ಅಳತೆಗಳಲ್ಲಿ ಸರಬರಾಜು ಮಾಡಲಾಗುತ್ತಿದೆ, ಈ ರೀತಿ ವಿವಿಧ ಅಳತೆಯನ್ನು ತರಗತಿ-1 ಮತ್ತು 2ನೇ ತರಗತಿ ಗಂಡು ಮತ್ತು ಹೆಣ್ಣುಮಕ್ಕಳಿಗೆ (ಅಳತೆ-1), 3 ಮತ್ತು 4ನೇ ತರಗತಿ ಗಂಡು ಮತ್ತು ಹೆಣ್ಣುಮಕ್ಕಳಿಗೆ (ಅಳತೆ-2), 5 ರಿಂದ 7ನೇ ತರಗತಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ (ಅಳತೆ-3), 8 ರಿಂದ 10ನೇ ತರಗತಿ ಗಂಡು ಮಕ್ಕಳಿಗೆ ಹಾಗೂ 8ನೇ ತರಗತಿ
ಮಧ್ಯಾಹ್ನ ಉಪಹಾರ ಯೋಜನೆ
ಮಧ್ಯಾಹ್ನ ಉಪಹಾರ ಯೋಜನೆ
ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಒಪ್ಪಂದದಲ್ಲಿ ಘೋಷಿಸಲ್ಪಟ್ಟಿರುವಂತೆ ಪ್ರತಿಯೊಬ್ಬ ಹಸಿದ ಮಗುವಿಗೂ ಆಹಾರವನ್ನು ಒದಗಿಸಬೇಕಾಗಿದೆ. ಮಧ್ಯಾಹ್ನ ಉಪಹಾರ ಯೋಜನೆಯು ಒಂದು ಪ್ರತಿಷ್ಠಿತ ಯೋಜನೆಯಾಗಿದ್ದು, ಮಕ್ಕಳು ಆರೋಗ್ಯ ಪೂರ್ಣವಾಗಿ ಶಕ್ತಿವಂತರು ಹಾಗೂ ದೃಢಕಾಯರಾಗಿ ಬೆಳೆಯಲು ಒಂದು ಸದವಕಾಶ ಕಲ್ಪಿಸುವ ಬದ್ಧತೆಯಿಂದ ಕೂಡಿದ್ದು, ಸಹಕಾರಿಯಾಗಿದೆ. ಸದರಿ ಕಾರ್ಯಕ್ರಮದ ಪ್ರಮುಖ ಉದ್ದೇಶವು ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಹಸಿವು ನೀಗಿಸಿ ತನ್ಮೂಲಕ ಅವರ ಕಲಿಕಾ ಸಾಮರ್ಥ್ಯಗಳನ್ನೂ ಮತ್ತು ಸಾಧನೆಗಳನ್ನು ಹೆಚ್ಚಿಸುವುದಾಗಿದೆ.
ಖಾಸಗಿ ಶಿಕ್ಷಣ ಸಂಸ್ಥೆಗಳ ಅನುದಾನ :
ಖಾಸಗಿ ಶೈಕ್ಷಣಿಕ ಸಂಸ್ಥೆಗಳ ಆಡಳಿತ ಮತ್ತು ನಿಯಂತ್ರಣವು ಅನುದಾನ ಸಂಹಿತೆಯ ನಿಯಮಗಳಿಗೆ ಒಳಪಟ್ಟಿರುತ್ತದೆ. ಖಾಸಗಿ ಶೈಕ್ಷಣಿಕ ಸಂಸ್ಥೆಗಳ ಆಡಳಿತವನ್ನು ಸ್ಥಿರಗೊಳಿಸುವ ಸಲುವಾಗಿ ಕರ್ನಾಟಕ ರಾಜ್ಯ ಶಾಸಕಾಂಗವು ದಿ:20-10-1993ರಲ್ಲಿ ಕರ್ನಾಟಕ ಶಿಕ್ಷಣ ಕಾಯ್ದೆ 1993(1883)ರ ಕಾಯ್ದೆ ರಚಿಸಿ ಭಾರತದ ರಾಷ್ಟ್ರಪತಿಗಳ ಅನುಮೋದನೆ ಪಡೆದಿರುತ್ತದೆ.
ಈ ಶಿಕ್ಷಣ ಕಾಯ್ದೆಯಲ್ಲಿ ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮ ಸಂಘಟನೆ, ಅಭಿವೃದ್ಧಿ, ಶಿಸ್ತು, ಸಾಮರಸ್ಯ ಸೃಷ್ಟಿಸುವ ದೃಷ್ಟಿಯಿಂದ ಉತ್ತಮ ಸಂಘಟನೆಯೊಂದಿಗೆ ಆರೋಗ್ಯಕರ ನಿಯಂತ್ರಣ ಗುಣಮಟ್ಟದ ಶೈಕ್ಷಣಿಕ ಅಭಿವೃದ್ಧಿಯೊಂದಿಗೆ ಯೋಜಿತ ಅಭಿವೃದ್ಧಿಗೆ ಪರಿಗಣಿಸಲಾಗಿರುತ್ತದೆ. ವಿದ್ಯಾರ್ಥಿಗಳಲ್ಲಿ ಉತ್ತಮ ಶಿಕ್ಷಣ, ವೈಜ್ಞಾನಿಕ ಮತ್ತು ಜಾತ್ಯಾತೀತ ದೃಷ್ಟಿಕೋನವನ್ನು ಮಾನಸಿಕ ಹಾಗೂ ದೈಹಿಕ ಬೆಳವಣಿಗೆ ಈ ಕಾಯ್ದೆಯಲ್ಲಿ ಆಯಂತ್ರಿಸಲಾಗಿದೆ
- ಈ ಕಾಯ್ದೆಯಡಿ ಶಾಲೆಗಳ ನೊಂದಣಿ ಹಾಗೂ ಮಾನ್ಯತೆ.,
- ನೇಮಕಾತಿಗಳನ್ನು ಅನುಮೋದಿಸುವುದು ಹಾಗೂ ಅನುದಾನ ಮಂಜೂರು ಮಾಡುವುದು
- ಶಾಲಾ ಆಡಳಿತ ಮಂಡಳೀಯ ಆಡಳಿತಾತ್ಮಕ ಅಧಿಕಾರಿಗಳು ಹಾಗೂ ನಿಯಂತ್ರಣಗಳು.
- ಆಡಳಿತ ಮಂಡಳಿ ಮತ್ತು ಶಿಕ್ಷಕರ ನಡುವಿನ ವಿವಾದವನ್ನು ಬಗೆಹರಿಸಿಕೊಳ್ಳುವುದು.
- ಶಿಕ್ಷಕರ ವರ್ಗಾವಣೆ,
- ಶಾಲೆಗಳ ನೋಂದಣಿ ಹಾಗೂ ಮಾನ್ಯತೆಯನ್ನು ರದ್ದುಗೊಳಿಸುವುದು
- ಸಿಬ್ಬಂದಿಯ ಸೇವಾ ನಿಯಮಾವಳಿಗಳು,
- ಅಪೀಲುಗಳ ಸಕ್ಷಮ ಪ್ರಾಧಿಕಾರ.
- ಜಿಲ್ಲಾ ಮಟ್ಟದಲ್ಲಿ ಇ.ಎ.ಟಿ.
- ರಾಜ್ಯ ಮಟ್ಟದಲ್ಲಿ ಮೇಲ್ಮನವಿ ಪ್ರಾಧಿಕಾರ ನಿರ್ದೇಶಕರು, ಆಯುಕ್ತರು ಇವರಲ್ಲಿ ಅಪೀಲು ಸಲ್ಲಿಸಿ ವಿವಾದಗಳನ್ನು ಬಗೆಹರಿಸಿಕೊಳ್ಳುವುದು.
ಯ ಹೆಣ್ಣು ಮಕ್ಕಳಿಗೆ (ಅಳತೆ-4), 9 ಮತ್ತು 10ನೇ ತರಗತಿ ಹೆಣ್ಣು ಮಕ್ಕಳಿಗೆ (ಅಳತೆ-5), ಈ ರೀತಿಯಾಗಿ ಸಮವಸ್ತ್ರಗಳನ್ನು ಸರಬರಾಜು ಮಾಡಲಾಗುತ್ತಿದೆ.
No comments:
Post a Comment