ಎಎವೈ, ಬಿಪಿಎಲ್: 5 ಕೆ.ಜಿ. ಉಚಿತ ಆಹಾರ ಧಾನ್ಯ
* ರಾಜ್ಯ ಸರ್ಕಾರ ಪ್ರಸಕ್ತ ಬಜೆಟ್ ನಲ್ಲಿ ಅಂತ್ಯೋದಯ ಅನ್ನ ಯೋಜನೆ (ಎಎವೈ) ಮತ್ತು ಬಿಪಿಎಲ್ ಕುಟುಂಬಗಳ ಪ್ರತಿ ಸದಸ್ಯರಿಗೆ ತಲಾ 5 ಕೆ.ಜಿ. ಉಚಿತ ಆಹಾರ ಧಾನ್ಯ ನೀಡುವ ಘೋಷಣೆ ಮಾಡಲಾಗಿದೆ.
* ರಿಯಾಯಿತಿ ದರದಲ್ಲಿ ₹ 25ಕ್ಕೆ ಒಂದು ಲೀಟರ್ ತಾಳೆ ಎಣ್ಣೆ
* ಮತ್ತು ₹ 2ಕ್ಕೆ 1 ಕೆ.ಜಿ.ಯಂತೆ ಅಯೋಡಿನ್ ಯುಕ್ತ ಉಪ್ಪು ವಿತರಣೆಗೆ ಕ್ರಮ ಕೈಗೊಂಡಿದೆ.
* ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆ ಮೂಲಕ ವಿತರಿಸುವ ಪಡಿತರ ಯೋಜನೆಯಲ್ಲಿ
* ಎಪಿಎಲ್ ಪಡಿತರ ಚೀಟಿ ಹೊಂದಿದ ಕುಟುಂಬಗಳಿಗೆ ಒಬ್ಬ ಸದಸ್ಯರಿದ್ದಲ್ಲಿ 5 ಕೆ.ಜಿ. ಆಹಾರ ಧ್ಯಾನ,
* ಹೆಚ್ಚು ಸದಸ್ಯರಿದ್ದಲ್ಲಿ 10 ಕೆ.ಜಿ. ಆಹಾರ ಧಾನ್ಯವನ್ನು ನೀಡಿದೆ.
* ಪ್ರತೀ ಕೆ.ಜಿ. ಅಕ್ಕಿಗೆ ₹ 15 ಮತ್ತು ಪ್ರತಿ ಕೆ.ಜಿ. ಗೋಧಿಗೆ 10 ರೂಪಾಯಿ ನಿಗದಿ ಮಾಡಿದೆ. ಹೊಸ ಕಾರ್ಡ್: ಅರ್ಜಿ ಸ್ವೀಕಾರ ಮೇ 1ರಿಂದ ಹೊಸ ಪಡಿತರ ಚೀಟಿಗಳಿಗಾಗಿ ಅರ್ಜಿ ಸ್ವೀಕಾರ ಆರಂಭವಾಗಲಿದೆ.
* ಮಹಿಳಾ ಮೀಸಲಾತಿ ಶೇ 33ಕ್ಕೆ ಹೆಚ್ಚಳ: ಮಹಿಳೆಯರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿರುವ ರಾಜ್ಯ ಸರ್ಕಾರ ಪ್ರಸಕ್ತ ಬಜೆಟ್ ನಲ್ಲಿ ರಾಜ್ಯ ಸಿವಿಲ್ ಸೇವಾ- ನೇಮಕಾತಿಯಲ್ಲಿನ ಮಹಿಳೆಯರ ಮೀಸಲಾತಿಯನ್ನು ಶೇ 33ಕ್ಕೆ ಹೆಚ್ಚಳ ಮಾಡಿದೆ.
* ಪಟ್ಟಣ, ನಗರ ಪುನರ್ ವರ್ಗೀಕರಣ
* 2011ರ ಜನಗಣತಿ ಆಧಾರದ ಮೇಲೆ ರಾಜ್ಯದ ನಗರ ಹಾಗೂ ಪಟ್ಟಣ ಪ್ರದೇಶಗಳ ಪುನರ್ ವರ್ಗೀಕರಣಕ್ಕೆ ಕ್ರಮ ಕೈಗೊಂಡಿದೆ. ಇದರ ಅಡಿ 13
ಮೈಸೂರು ವಿವಿಯಲ್ಲಿ ಅನಂತಮೂರ್ತಿ ಅಧ್ಯಯನ ಪೀಠ
* ಮಂಗಳೂರು ವಿಶ್ವವಿದ್ಯಾಲಯದಲ್ಲಿ ₹ 1 ಕೋಟಿ ವೆಚ್ಚದಲ್ಲಿ ರಾಣಿ ಅಬ್ಬಕ್ಕ ಪೀಠ ಸ್ಥಾಪಿಸಲಾಗುವುದು.
* ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ₹ 3 ಕೋಟಿ ವೆಚ್ಚದಲ್ಲಿ ನೆಹರೂ ಚಿಂತನ ಕೇಂದ್ರ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
* ಮೈಸೂರು ವಿಶ್ವವಿದ್ಯಾಲಯದ ಶತಮಾನೋತ್ಸವ ಆಚರಣೆಗಾಗಿ ₹ 50 ಕೋಟಿ ಬಜೆಟ್‌ನಲ್ಲಿ ಮೀಸಲಿಡಲಾಗಿದೆ.
* ಕಲಬುರ್ಗಿ ಮತ್ತು ಧಾರವಾಡದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವಲಯ ಕಚೇರಿಗಳನ್ನು ಸ್ಥಾಪಿಸಲಾಗುವುದು ಎಂದರು.
* ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹಿಮ್ಮಾವು ಗ್ರಾಮದಲ್ಲಿ ನಳಂದ ಬೌದ್ಧ ಅಧ್ಯಯನ ಕೇಂದ್ರ ಸ್ಥಾಪಿಸಲು ₹ 5 ಕೋಟಿ ನೆರವು ನೀಡಲಾಗುವುದು ಎಂದು ಅವರು ಹೇಳಿದರು.
* ಉನ್ನತ ಶಿಕ್ಷಣ ಇಲಾಖೆಗೆ ಈ ಬಾರಿಯ ಬಜೆಟ್‌ನಲ್ಲಿ ಒಟ್ಟು ₹ 3,896 ಕೋಟಿ ಒದಗಿಸಲಾಗಿದೆ
ಕರ್ನಾಟಕ ಬಜೆಟ್ 2015-16 : ಮುಖ್ಯಾಂಶಗಳು
* ಒಟ್ಟು ಹತ್ತನೇ ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. * ಈ ಸಾಲಿನ ಬಜೆಟ್ ಮುಖ್ಯಾಂಶಗಳು ಇಂತಿವೆ.
* ಕೃಷಿ ಕ್ಷೇತ್ರದ ಬಗ್ಗೆ ಸಮಗ್ರ ದೂರದೃಷ್ಟಿ ರೂಪಿಸಲು ಕೃಷಿ, ತೋಟಗಾರಿಕೆ ಮತ್ತು ಆಹಾರ ಸಂಸ್ಕರಣೆ ವಲಯಗಳಿಗೆ ತಜ್ಞರ ಅಧ್ಯಕ್ಷತೆಯಲ್ಲಿ ವಿಷನ್ ಗ್ರೂಪ್ ರಚನೆ.
* ನೀರಿನ ಸಮರ್ಥ ಬಳಕೆ ಮತ್ತು ಮಣ್ಣಿನಲ್ಲಿ ಲಘು ಪೋಷಕಾಂಶಗಳನ್ನು ಅಳವಡಿಕೆ ಉತ್ತೇಜನಕ್ಕೆ 'ಲಘು ನೀರಾವರಿ ನೀತಿ' ಜಾರಿಗೆ.
* ಐಸಿಆರ್‌ಐಎಸ್‌ಎಟಿ, ಐಸಿಎಆರ್‌ಡಿಎ ಮತ್ತು ಸಿಐಎಂಎಂವವೈಟಿ ಮುಂತಾದ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳ ತಜ್ಞರ ನೆರವಿನೊಂದಿಗೆ 'ಉತ್ಕೃಷ್ಟ ಜ್ಞಾನ ಕೇಂದ್ರ'ವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.
* ಪ್ರಸಕ್ತ ಮುಂಗಾರು ಮತ್ತು ಹಿಂಗಾರು ಪ್ರಾರಂಭದಲ್ಲಿ ಕೃಷಿ ವಿವಿ ತಜ್ಞರು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ರೈತರೊಂದಿಗೆ ಸಂವಾದ ನಡೆಸುವ 'ಕೃಷಿ ಅಭಿಯಾನ' ಕಾರ್ಯಕ್ರಮ ಜಾರಿಗೆ ತರಲಾಗುವುದು.
* ಹಾವೇರಿ ತಾಲೂಕಿನ ದೇವಿ ಹೊಸೂರು ಗ್ರಾಮದಲ್ಲಿ ತೋಟಗಾರಿಕೆ ಕಾಲೇಜು ಸ್ಥಾಪನೆ
* ಶಿವಮೊಗ್ಗದಲ್ಲಿ ಕೃಷಿ ಮತ್ತು ತೋಟಗಾರಿಕೆ ಕ್ಯಾಂಪಸ್
* ರೈತರಿಗೆ ಅಲ್ಪಾವಧಿ ಸಾಲ ನೀಡಲು ರೂ 10 ಸಾವಿರ ಕೋಟಿ
ಬಜೆಟ್ಟಲ್ಲಿ ಏನೇನಿರಲಿದೆ, ಪುಸ್ತಕ ಕೊಂಡು ಓದಿ, ತಿಳಿದುಕೊಳ್ಳಿ
* ಮಾ 13 : 2015-16ನೇ ಸಾಲಿನ ರಾಜ್ಯ ಆಯವ್ಯಯ ಭಾಷಣದ ಪುಸ್ತಕವನ್ನು ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ಮುದ್ರಿಸಲಾಗುತ್ತಿದ್ದು, ಈ ಪುಸ್ತಕಗಳನ್ನು ಮಾರಾಟಕ್ಕೆ ಮಾರ್ಚ್ 13ರ ಮಧ್ಯಾಹ್ನ 3.30 ಗಂಟೆ ನಂತರ ಮಾರಾಟಕ್ಕೆ ಲಭ್ಯವಾಗಲಿದೆ.
* ಪ್ರತಿ ಪುಸ್ತಕದ ಬೆಲೆ ಕೇವಲ 50 ರು., ಅರ್ಧ ಪ್ಯಾಕೆಟ್ ಸಿಗರೇಟಿಗೆ ಸಮಾನ! ವಿತ್ತ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಎರಡನೇ ಬಾರಿ ಆಯವ್ಯಯ ಮಂಡಿಸುತ್ತಿದ್ದಾರೆ.
* ಮಧ್ಯಾಹ್ನ 12.30ಕ್ಕೆ ಸರಿಯಾಗಿ 2015-16ನೇ ಸಾಲಿನ ಬಜೆಟ್ ಮಂಡಿಸುತ್ತಿದ್ದು, ಸಹಜವಾಗಿ ರಾಜಕಾರಣಿಗಳು, ಜನಸಾಮಾನ್ಯರು, ಆರ್ಥಿಕ ತಜ್ಞರ ದೃಷ್ಟಿ ಬಜೆಟ್ ಮೇಲೆ ನೆಟ್ಟಿದೆ.
* ಸಿದ್ದರಾಮಯ್ಯ ರುಪಾಯಿಯನ್ನು ಹೇಗೆ ವಿಭಾಗಿಸಲಿದ್ದಾರೆ ಎಂಬುದು ಸದ್ಯದಲ್ಲಿಯೇ ತಿಳಿಯಲಿದೆ.
* ಇದಲ್ಲದೆ ಕರ್ನಾಟಕ ಸರ್ಕಾರದ ಆರ್ಥಿಕ ಸಮೀಕ್ಷೆ 2014-15 ಪುಸ್ತಕವನ್ನು ಕನ್ನಡ ಮತ್ತು ಆಂಗ್ಲ ಭಾಷೆ ಆವೃತ್ತಿಯಲ್ಲಿ ಮುದ್ರಿಸಿ ಪ್ರಕಟಿಸಲಾಗುತ್ತಿದೆ. ಇದರ ಬೆಲೆ ಕನ್ನಡ ರು. 920. ಆಂಗ್ಲ ರು. 864. ಈ ಪುಸ್ತಕಗಳು ಬೆಂಗಳೂರಿನ ಸರ್ಕಾರಿ ಪುಸ್ತಕ ಮಾರಾಟ ಮಳಿಗೆಗಳಲ್ಲಿ ಲಭ್ಯವಿರುತ್ತದೆ. ಆಸಕ್ತರ ಕೊಂಡು ಓದಿ, ರಾಜ್ಯದ ಆರ್ಥಿಕ ಸ್ಥಿತಿಗತಿಯ ಬಗ್ಗೆ ತಿಳಿದುಕೊಳ್ಳಬಹುದು. ಮಾರ್ಚ್ 16ರ ನಂತರ ಮೈಸೂರು, ಧಾರವಾಡ, ಕಲಬುರಗಿಯಲ್ಲಿನ ಸರ್ಕಾರಿ ಪುಸ್ತಕ ಮಳಿಗೆಗಳಲ್ಲೂ ಮಾರಾಟಕ್ಕೆ ಲಭ್ಯವಿರುತ್ತದೆ. ಕರ್ನಾಟಕ
ಬಜೆಟ್ ನಲ್ಲಿ ಸಿದ್ದರಾಮಯ್ಯ ಘೋಷಿಸಿದ ಯೋಜನೆಗಳು ಯಾವುವು?
By Udayavani, 13 Mar 2015 06:09 PMಸಿದ್ದರಾಮಯ್ಯ ಬಜೆಟ್ ದುಬಾರಿಯೋ, ಜನಪರವೋ: ಹೈಲೈಟ್ಸ್ ಇಲ್ಲಿದೆ...
By Udayavani, 13 Mar 2015 06:30 PM
(13 Mar) ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶುಕ್ರವಾರ ಮಧ್ಯಾಹ್ನ 12-30ಕ್ಕೆ 2015-16ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾಗಿ ಹ್ಯಾಟ್ರಿಕ್ ಹಾಗೂ ವಿತ್ತ ಸಚಿವರಾಗಿ ದಾಖಲೆಯ ಹತ್ತನೇ (ಹಿಂದಿನ ಬಜೆಟ್ ಕಥೆ ಏನಾಯ್ತು) ಬಜೆಟ್ ಅನ್ನು ಶುಕ್ರವಾರ ವಿಧಾನಮಂಡಲದಲ್ಲಿ ಮಂಡಿಸಿದ್ದಾರೆ. ರಾಜ್ಯದ ಆರ್ಥಿಕ ವ್ಯವಸ್ಥೆಗೆ ಶಕ್ತಿ ತುಂಬಬೇಕಾದ ಅನಿರ್ವಾಯತೆಗೆ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪಂಚಾಯತ್ ಚುನಾವಣೆಯ ಸಾಮೀಪ್ಯದಿಂದಾಗಿ ಮತ್ತೆ (ಇದು ಎಂಥಾ ಭಾಗ್ಯವಯ್ಯ) ಭಾಗ್ಯ ಸರಣಿಯನ್ನು ಮುಂದುವರಿಸುವರೋ ಅಥವಾ ರಾಜ್ಯದ ದೂರಗಾಮಿ ಹಿತ ಕಾಯಲು ಜನರ ಮೇಲೆ ಭಾರೀ ಹೊರೆ ಹೊರಿಸಿದ್ದಾರೋ ಎಂಬ (ಸಿಗರೇಟ್, ಮದ್ಯ ಇನ್ನೂ ದುಬಾರಿ?) ಕುತೂಹಲಕ್ಕೆ ಇದೀಗ ಉತ್ತರ ದೊರೆತಿದೆ. ಬಜೆಟ್ ಮುಖ್ಯಾಂಶ ಇಲ್ಲಿದೆ..ಜಲಾನಯನ ನಿರ್ವಹಣೆಗಾಗಿ ಡಿಜಿಟಲ್ ಗ್ರಂಥಾಲಕ ಹಾಗೂ ನಿರ್ಣಯ ಬೆಂಬಲ ವ್ಯವಸ್ಥೆ ಜಾರಿ. *ರಾಜ್ಯದ ಕೃಷಿ ಕ್ಷೇತ್ರದ ಬಗ್ಗೆ ಸಮಗ್ರ ದೂರದೃಷ್ಟಿ ರೂಪಿಸಲು ಕೃಷಿ, ತೋಟಗಾರಿಕೆ ಮತ್ತು ಆಹಾರ ಸಂಸ್ಕರಣೆ ವಲಯಗಳಿಗೆ ತಜ್ಞರ ಅಧ್ಯಕ್ಷತೆಯಲ್ಲಿ 'ವಿಷನ್ ಗ್ರೂಪ್' ರಚಿಸಲಾಗುವುದು
ದಾಖಲೆಯ 10ನೇ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ
By Kannada Prabha, 13 Mar 2015 04:17 PMಸಿದ್ದರಾಮಯ್ಯ ಬಜೆಟ್'ನ ಸಮಗ್ರ ಮಾಹಿತಿ ನಕ್ಷೆಗಳಲ್ಲಿ..
By suvarnanews tv, 13 Mar 2015ಪಶು ಸಂಗೋಪನೆಗೆ 'ಪಶು ಭಾಗ್ಯ' ಯೋಜನೆ ಜಾರಿ
By suvarnanews tv, 13 Mar 2015
ಇಲಾಖೆಗೆ 147 ಕೋಟಿ
No comments:
Post a Comment