ಲೈಂಗಿಕ ಕಿರುಕುಳ ಆರೋಪಿ ಪಚೌರಿಗೆ ಜಾಮೀನು ಮಂಜೂರು ಮಾಡಿದ ದೆಹಲಿ ಕೋರ್ಟ್
ಲೈಂಗಿಕ ಕಿರುಕುಳ ಆರೋಪವನ್ನು ಎದುರಿಸುತ್ತಿದ್ದ ನೊಬೆಲ್ ಪ್ರಶಸ್ತಿ ಪುರಸ್ಕೃತ ಹಿರಿಯ ವಿಜ್ಞಾನಿ ಆರ್.ಕೆ.ಪಚೌರಿ ಅವರಿಗೆ ಇಂದು ಇಲ್ಲಿನ ನ್ಯಾಯಾಲಯವು ಮಧ್ಯಂತರ ನಿರೀಕ್ಷಣಾ ಜಾಮೀನನ್ನು ನೀಡಿದೆ.
ಪಚೌರಿ ಅವರಿಗೆ ದೆಹಲಿಯ ಕೆಳ ಹಂತದ ನ್ಯಾಯಾಲಯವು ಈ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು, ಮುಂದಿನ ಮಾರ್ಚ್ 17ರ ವರೆಗೆ ಜಾಮೀನು ನೀಡಲಾಗಿದೆ. ಇನ್ನು ಜಾಮೀನು ನೀಡುವ ವೇಳೆ ಕೆಲವು ಷರತ್ತುಗಳನ್ನೂ ವಿಧಿಸಿದೆ ಎನ್ನಲಾಗಿದೆ.
ಪಚೌರಿ ಅವರಿಗೆ ದೆಹಲಿಯ ಕೆಳ ಹಂತದ ನ್ಯಾಯಾಲಯವು ಈ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು, ಮುಂದಿನ ಮಾರ್ಚ್ 17ರ ವರೆಗೆ ಜಾಮೀನು ನೀಡಲಾಗಿದೆ. ಇನ್ನು ಜಾಮೀನು ನೀಡುವ ವೇಳೆ ಕೆಲವು ಷರತ್ತುಗಳನ್ನೂ ವಿಧಿಸಿದೆ ಎನ್ನಲಾಗಿದೆ.
ಪಚೌರಿ, ತಮಗೆ ಕಳೆದ ಎರಡು ವರ್ಷಗಳಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳಾ ಸಹೋದ್ಯೋಗಿರ್ವರು ಪಚೌರಿ ವಿರುದ್ಧ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಪಚೌರಿ ಅವರು ತಾವು ನಿರ್ವಹಿಸುತ್ತಿದ್ದ ಅಂತಾರಾಷ್ಟ್ರೀಯ ಹವಾಮಾನ ವೈಪರೀತ್ಯ ಮಂಡಳಿಯ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅಲ್ಲದೆ ಪ್ರಕರಣದಲ್ಲಿ ತಮಗೆ ಜಾಮೀನು ನೀಡುವಂತೆ ದೆಹಲಿ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್ ಮಧ್ಯಂತರ ನಿರೀಕ್ಷಣಾ ಜಾಮೀನನ್ನು ಮಂಜೂರು ಮಾಡಿದೆ.
ಮಧ್ಯಪ್ರದೇಶ ನೇಮಕಾತಿ ಹಗರಣ: ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಲು ಕೇಂದ್ರ ಸರಕಾರ ಸೂಚನೆ
ರಾಜ್ಯಪಾಲ ನರೇಸ್ ಯಾದವ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದರಿಂದ ಅವರು ಸ್ಥಾನದಲ್ಲಿ ಮುಂದುವರಿಯಲು ಅವರ್ಹರು. ಆದ್ದರಿಂದ ಇಂದು ಸಂಜೆಯೊಳಗೆ ಯಾದವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲವಾದಲ್ಲಿ ವಜಾಗೊಳಿಸಲು ಶಿಫಾರಸ್ಸು ಮಾಡಲಾಗುವುದು ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.
* ಕಳೆದ 2011 ರಿಂದ ಮಧ್ಯಪ್ರದೇಶದ ರಾಜ್ಯಪಾಲರಾಗಿ ಅದಿಕಾರ ವಹಿಸಿಕೊಂಡ ಯಾದವ್,
* 2013ರಲ್ಲಿ ನಡೆದ ಫಾರೆಸ್ಟ್ ಗಾರ್ಡ್ ನೇಮಕಾತಿಯಲ್ಲಿ ವಿದ್ಯಾರ್ಥಿಗಳಿಂದ ಹಣ ಪಡೆದಿದ್ದರು ಎಂದು ಆರೋಪಿಸಲಾಗಿದೆ.
* 86 ವರ್ಷ ವಯಸ್ಸಿನ ರಾಜ್ಯಪಾಲ ಯಾದವ್ ವಿದ್ಯಾರ್ಥಿಗಳಿಗೆ ಶಿಫಾರಸ್ಸು ಪತ್ರ ನೀಡಲು ತಮ್ಮ ಲೆಟರ್‌ಹೆಡ್ ಪೇಪರ್‌ಗಳನ್ನು ಬಳಸುತ್ತಿದ್ದರು. ಭ್ರಷ್ಟಾಚಾರ, ಅದಿಕಾರ ದುರುಪಯೋಗ ಮತ್ತು ವಂಚನೆ ಪ್ರಕರಣಗಳನ್ನು ಯಾದವ್ ವಿರುದ್ಧ ದಾಖಲಾಗಿವೆ.
* ರಾಜ್ಯಪಾಲರ ವಿರುದ್ಧ ಪ್ರಕರಣ ದಾಖಲಿಸಲು ರಾಷ್ಟ್ರಪತಿಗಳ ಅನುಮೋದನೆ ಅಗತ್ಯವಾಗಿರುತ್ತದೆ ಆದ್ದರಿಂದ ರಾಷ್ಟ್ರಪತಿಗಳ ಅನುಮತಿ ಪಡೆದು ಆರೋಪಿ ರಾಜ್ಯಪಾಲ ರಾಮ ನರೇಶ್ ಯಾದವ್ ಹಾಗೂ ಅವರ ಪುತ್ರ ಶೈಲೇಶ್ ಯಾದವ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ವಿಶೇಷ ತನಿಖಾ ತಂಡದ ಅದಿಕಾರಿಗಳು ತಿಳಿಸಿದ್ದಾರೆ.
ಹುಷಾರ್... ಅನ್ಯಗ್ರಹ ಜೀವಿ ಭೂಮಿಗೆ ಬಂದ್ರೆ ಅನಾಹುತ
ಜೀವಂತ ದಂತ ಕತೆಯಾಗಿರುವ ವಿಜ್ಞಾನಿ ಸ್ಟೀಫನ್ ಹಾಕಿನ್ಸ್ ಅವರು ದೇಹದ ಮೇಲೆ ಸಂಪೂರ್ಣ ನಿಯಂತ್ರಣ ಕಳೆದುಕೊಂಡಿದ್ದಾರೆ. ಆದರೆ, ಬುದ್ಧಿಮತ್ತೆಯಲ್ಲಿ ಅವರಿಗವರೇ ಸಾಟಿ. ಹಲವು ವಿಷಯಗಳಲ್ಲಿ ಜಗತ್ತಿನಲ್ಲಿ ಎಲ್ಲರೂ ಮೈಮರೆತಿರುವಾಗ ಅವರು ಎಚ್ಚರಿಕೆ ನೀಡಿದ್ದಾರೆ.
ಈ ಸ್ಫೀಫನ್ ಹಾಕಿನ್ಸ್ ನೀಡಿರುವ ಎಚ್ಚರಿಕೆ ಅನ್ಯಗ್ರಹ ಜೀವಿಗಳ ಕುರಿತು! ಭೂಮಿಯಲ್ಲದೆ ಬೇರೆ ಗ್ರಹಗಳಲ್ಲೂ ಜೀವಿಗಳಿವೆ ಎಂದು ವಿಜ್ಞಾನಿಗಳು ದೃಢವಾಗಿ ನಂಬಿದ್ದಾರೆ. ಈಗಾಗಲೇ ಹಲವು ಬಾರಿ ಅನ್ಯಗ್ರಹ ಜೀವಿಗಳಿಗೆ "ಭೂಮಿ ಎಂಬುದೊಂದಿದೆ. ಇಲ್ಲಿ ಜೀವಿಗಳಿದ್ದಾರೆ" ಎಂಬ ಸಂದೇಶವನ್ನು ರೇಡಿಯೋ ತರಂಗಗಳ ಮೂಲಕ ರವಾನಿಸಿದ್ದಾರೆ. ಆದರೆ, ಇಂತಹ ಪ್ರಯತ್ನಗಳು ಅಪಾಯ ತಂದೊಡ್ಡಬಹುದು ಎಂದು ಸ್ಟೀಫನ್ ಹಾಕಿಂಗ್ಸ್ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಬ್ರಿಟನ್‌ನ 'ಡೇಲಿ ಸ್ಟಾರ್' ವರದಿ ಮಾಡಿದೆ.
"ಒಂದು ವೇಳೆ ಅನ್ಯಗ್ರಹ ಜೀವಿಗಳು ಭೂಮಿಗೆ ಬಂದರೆ ನಮಗೆ ಒಳಿತಾಗುವುದಿಲ್ಲ. ಕೊಲಂಬಸ್ ಅಮೆರಿಕಕ್ಕೆ ಬಂದಿಳಿದ ನಂತರ ಸ್ಥಳೀಯರು ತೀವ್ರ ತೊಂದರೆ ಎದುರಿಸಬೇಕಾಯಿತು. ಅಂತಹದೇ ಪರಿಣಾಮ ಅನ್ಯಗ್ರಹ ಜೀವಿಗಳಿಂದ ಭೂ ವಾಸಿಗಳಿಗೂ ಉಂಟಾಗುತ್ತದೆ" ಎಂದು ಎಚ್ಚರಿಕೆ ನೀಡಿದ್ದಾರೆ.
ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ 'ಎಕ್ಸ್ಟ್ರಾಟೆರಿಸ್ಟ್ರಿಯಲ್ ಇಂಟೆಲಿಜೆನ್ಸ್ ಇನ್‌ಸ್ಟಿಟ್ಯೂಟ್' ಮತ್ತೊಮ್ಮೆ ವಿವಿಧ ನಕ್ಷತ್ರಗಳು ಹಾಗೂ ಗ್ರಹಗಳಿಗೆ ರೇಡಿಯೋ ಟೆಲಿಸ್ಕೋಪ್ ಮೂಲಕ ಭೂಮಿಯ ಅಸ್ತಿತ್ವದ ಕುರಿತು ಅಂಕಿ ಅಂಶಗಳನ್ನು ಕಳುಹಿಸಲು ಸಿದ್ಧತೆ ನಡೆಸಿದೆ. ಆದರೆ, ಸ್ಟ್ಪೀಫನ್ ಹಾಕಿಂಗ್ಸ್ ಈಗ ನೀಡಿರುವ ಎಚ್ಚರಿಕೆಗೆ ವಿಜ್ಞಾನಿಗಳು ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
No comments:
Post a Comment