5 ಯೋಜನೆಗಳು
1. ಕ್ಯಾಬ್ ಬುಕಿಂಗ್
ಹೇಗೆ ರೈಲ್ವೆ ಟಿಕೆಟ್ ಬುಕ್ ಮಾಡಿ ನಿರ್ದಿಷ್ಟ ನಿಲ್ದಾಣ ತಲುಪುತ್ತೆವಯೋ, ಹಾಗೆ ಅಲ್ಲಿಂದ ಮನೆಗೆ ತೆರಳಲು ಕ್ಯಾಬ್ ಬುಕ್ ಮಾಡುವ ಅವಕಾಶವನ್ನು ಕಲ್ಪಿಸಲಾಗುವುದು.
2. ಹೆಲಿಕಾಪ್ಟರ್ ಸೇವೆ
ಜಮ್ಮುವಿನ ವೈಷ್ಣೋದೇವಿ ದೇವಾಲಯಕ್ಕೆ ಜಮ್ಮುವಿನ ಕಟ್ರಾ ರೈಲು ನಿಲ್ದಾಣದಿಂದ ಹೆಲಿಕಾಪ್ಟರ್ ಸೇವೆ ಒದಗಿಸಲಾಗುವುದು. ಭಕ್ತರು ಮತ್ತು ವೃದ್ಧರನ್ನು ದೃಷ್ಟಿಯಲ್ಲಿಟ್ಟುಕೊಂಡು ವ್ಯವಸ್ಥೆ ಜಾರಿ ಮಾಡಲಾಗುತ್ತಿದ್ದು ಕೈಗೆಟಕುವ ದರದಲ್ಲಿ ಸೇವೆ ನೀಡಲಾಗುವುದು.
3.ಗ್ಲಾಸ್ ಪ್ರೂಫ್ ಕೋಚ್
ಪ್ರವಾಸೋದ್ಯಮ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ಗ್ಲಾಸ್ ಪ್ರೂಫ್ ಕೋಚ್ ಪರಿಚಯಿಸಲಾಗುತ್ತಿದೆ. ನೈಸಗರ್ಗಿಕ ಸೊಬಗು ಸವಿಯುತ್ತ ಸಂಚರಿಸುವ ಅನುಭವ ಪಡೆದುಕೊಳ್ಳಬೇಕು.
4. ಸ್ಥಳೀಯ ರೈಲುಗಳಿಗೂ ಹವಾ ನಿಯಂತ್ರಿತ ಬೋಗಿ
ಗ್ರಾಮೀಣ ಭಾಗದ ಜನರಿಗೂ ಉತ್ತಮ ಸೇವೆ ಕಲ್ಪಿಸಲು ಸ್ಥಳೀಯ ರೈಲುಗಳಿಗೂ ಹವಾ ನಿಯಂತ್ರಿತ ಬೋಗಿ ಅಳವಡಿಕೆಗೆ ನಿರ್ಧಾರ ಮಾಡಲಾಗಿದೆ.
5.ತಾಜಾ ಸೇಬು
ಪ್ರಯಾಣಿಕರಿಗೆ ಮತ್ತು ಸೇನೆಗೆ ತಾಜಾ ಸೇಬು ಒದಗಿಸಲು ಯೋಜನೆ ರೂಪಿಸಲಾಗಿದೆ. ಇದು ರೈಲ್ವೆ ಆರ್ಥಿಕತೆ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಲಾಗಿದೆ.
No comments:
Post a Comment