ಮೇನಕಾ
ನವದೆಹಲಿ (ಪಿಟಿಐ): ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಕುರಿತು ದೂರು ನೀಡಲು ಯಾವುದೇ ಕಾಲಮಿತಿ ನಿಗದಿಪಡಿಸಬೇಡಿ ಎಂದು ಕೇಂದ್ರ ಕಾನೂನು ಸಚಿವಾಲಯಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಮನವಿ ಮಾಡಿದ್ದಾರೆ.
‘10–15 ವರ್ಷ ಹಳೆಯವಾಗಿದ್ದರೂ ಸಹ ಲೈಂಗಿಕ ಕಿರುಕುಳ ಸಂಬಂಧಿ ದೂರುಗಳನ್ನು ದಾಖಲಿಸಿಕೊಳ್ಳಬೇಕು. ಇದಕ್ಕೆ ಅನುವು ಮಾಡಿಕೊಡಬೇಕು ಎಂದು ಸಚಿವಾಲಯಕ್ಕೆ ಪತ್ರ ಬರೆಯಲಾಗಿದೆ’ ಎಂದು ಮೇನಕಾ ಹೇಳಿದ್ದಾರೆ.
30 ವರ್ಷ ದಾಟಿದ್ದರೂ ಅಪ್ರಾಪ್ತ ವಯಸ್ಸಿನಲ್ಲಿ ಎದುರಾದ ಅನುಚಿತ ಘಟನೆಗಳ ಬಗ್ಗೆ ದೂರು ನೀಡಲು ಅವಕಾಶ ನೀಡುವಂತೆ ಮೇನಕಾ ಗಾಂಧಿ ಅವರು ಈ ಮೊದಲು ಪ್ರಸ್ತಾಪ ಇಟ್ಟಿದ್ದರು.
#MeTooಗೆ ಮೆಚ್ಚುಗೆ: ಲೈಂಗಿಕ ದೌರ್ಜನ್ಯದ ವಿರುದ್ಧ ದನಿಯೆತ್ತಲು ಪ್ರೇರೇಪಣೆ ನೀಡುವ #MeToo ಅಭಿಯಾನ ಭಾರತದಲ್ಲೂ ಆರಂಭವಾಗಿರುವುದಕ್ಕೆ ಮೇನಕಾ ಮೆಚ್ಚುಗೆ ವ್ಯಕ್ತಪಡಿಸಿದರು.
ಲೈಂಗಿಕ ಕಿರುಕುಳ ಯಾವುದೇ ಸ್ವರೂಪದ್ದಾಗಿದ್ದರೂ ಅದನ್ನು ಸಹಿಸಲಾಗದು
ಮೇನಕಾ ಗಾಂಧಿ, ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ
No comments:
Post a Comment