ಅಕ್ಟೋಬರ್- ಡಿಸೆಂಬರ್ ತಿಂಗಳವರೆಗಿನ ತ್ರೀಮಾಸಿಕ ಅವಧಿಯಲ್ಲಿ ಕೇಂದ್ರ ಸರಕಾರ ಪಿಎಫ್ (ಕಾರ್ಮಿಕರ ಭವಿಷ್ಯ ನಿಧಿ) ಬಡ್ಡಿದರವನ್ನು ಶೇ.0.4ರಷ್ಟು ಏರಿಕೆ ಮಾಡಿದೆ. ಅದರೊಂದಿಗೆ ಒಟ್ಟಾರೆ ಬಡ್ಡಿ ದರವನ್ನು ಶೇ.7.6 ರಿಂದ ಶೇ.8 ರಷ್ಟಕ್ಕೆ ಏರಿಕೆ ಮಾಡಿದೆ.
ಈ ಕುರಿತು ಕೇಂದ್ರ ಹಣಕಾಸು ಸಚಿವಾಲಯ ಸೂಚನೆ ಹೊರಡಿಸಿದ್ದು, 2018-19ನೇ ಸಾಲಿನಲ್ಲಿ ಜೆನರಲ್ ಪ್ರಾವಿಡೆಂಟ್ ಹಾಗೂ ಅದೇರೀತಿಯ ಇನ್ನು ಮುಂದೆ ಶೇ.8ರಷ್ಟು ಬಡ್ಡಿ ದರವನ್ನು ಹೊಂದಲಿವೆ. ಈ ನಿರ್ಧಾರ ಅಕ್ಟೋಬರ್ 1ರಿಂದ ಡಿಸೆಂಬರ್ 31 2018ರ ತ್ರೀಮಾಸಿಕ ಅವಧಿಯಿಂದಲೇ ಜಾರಿಗೆ ಬರಲಿದೆ’ ಎಂದು ತಿಳಿಸಿದೆ.
No comments:
Post a Comment