ಬೀಜಿಂಗ್: ಅತ್ಯಾಧುನಿಕ ತಂತ್ರಜ್ಞಾನದ ಸೇನಾ ಬಳಕೆಯ 48 ಡ್ರೋನ್ಗಳನ್ನು ಚೀನಾ ಸರ್ಕಾರ ಪಾಕಿಸ್ತಾನಕ್ಕೆ ಪೂರೈಕೆ ಮಾಡಲಿದೆ. ಎಲ್ಲ ರೀತಿಯ ಹವಾಮಾನದಲ್ಲಿಯೂ ನಿಖರವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಈ ಡ್ರೋನ್ಗಳಿಗಿದೆ. ಈ ಒಪ್ಪಂದವು ಚೀನಾ-ಪಾಕ್ ಮಧ್ಯದ ಅತಿ ದೊಡ್ಡ ಮಿಲಿಟರಿ ವಾಣಿಜ್ಯ ವ್ಯವಹಾರ ಎನ್ನಲಾಗಿದೆ. ಆದರೆ, ಡ್ರೋನ್ಗಳನ್ನು ಎಷ್ಟು ಮೊತ್ತಕ್ಕೆ ಮಾರಾಟ ಮಾಡಲಾಗುತ್ತಿದೆ ಎಂಬುದು ಬಹಿರಂಗವಾಗಿಲ್ಲ.
ಬಹೋಪಯೋಗಿ ಮಾನವ ರಹಿತ (ಯುಎವಿ) ಉಡಾವಣೆಯ ಈ ಡ್ರೋನ್ಗಳಿಗೆ ‘ವಿಂಗ್ ಲಾಂಗ್- 2’ ಎಂದು ಹೆಸರಿಸಲಾಗಿದೆ. ಭಾರತ ಮತ್ತು ರಷ್ಯಾ ನಡುವೆ ‘ಎಸ್- 400 ಟ್ರಯಂಫ್’ ಕ್ಷಿಪಣಿ ನಿರೋಧಕ ವ್ಯವಸ್ಥೆ ಖರೀದಿ ಒಪ್ಪಂದ ಏರ್ಪಟ್ಟ ಬೆನ್ನಿಗೆ ಈ ಡ್ರೋನ್ ಖರೀದಿ ವ್ಯವಹಾರ ನಡೆದಿರುವುದು ಮಹತ್ವ ಬೆಳವಣಿಗೆ.
ಮತ್ತೊಂದೆಡೆ, ಬೀಜಿಂಗ್ಗೆ ಭೇಟಿ ನೀಡಿರುವ ಅಮೆರಿಕ ರಕ್ಷಣಾ ಕಾರ್ಯದರ್ಶಿ ಮೈಕ್ ಪೊಂಪಿಯೊ ಹಾಗೂ ಚೀನಾ ರಕ್ಷಣಾ ಸಚಿವ ವಾಂಗ್ ಯಿ ಮಂಗಳವಾರ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ದೇಶದ ಹಿತಾಸಕ್ತಿಯೇ ಮುಖ್ಯವೆಂದು ಇಬ್ಬರು ವಾದಿಸಿದ್ದಾರೆ.
No comments:
Post a Comment