22 ಜನರ ಶಿರಚ್ಛೇದ ಮಾಡಿದ್ದ 40 ಐಎಸ್ ಉಗ್ರರಿಗೆ ಗಲ್ಲು

(22 Feb) ಬಾಗ್ದಾದ್, ಫೆ.18- ಈಜಿಪ್ಟ್ನಲ್ಲಿ 22 ಮಂದಿ ಕ್ರೈಸ್ತರನ್ನು ಶಿರಚ್ಛೇದ ಮಾಡಿದ ಇಸ್ಲಾಮಿಕ್ಸ್ಟೇಟ್ (ಐಎಸ್) ಉಗ್ರರು ಇದೀಗ ಇರಾಕಿನ ಪಶ್ಚಿಮ ಪ್ರಾಂತ್ಯದ ಅನ್ಬಾರ್ನಲ್ಲಿ ಬಹುತೇಕ ಭದ್ರತಾ ಸಿಬ್ಬಂದಿ ಸೇರಿದಂತೆ ಒಟ್ಟು 40 ಬಂಧಿತರನ್ನು ಗಲ್ಲಿಗೇರಿಸಿದ್ದಾರೆ.
* ಸುನ್ನಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಅಲ್ಬು ಒಬೇದ್ನಲ್ಲಿ ಈ 40 ಜನರನ್ನು ಐಎಸ್ ಉಗ್ರರು ಸೆರೆಹಿಡಿದಿದ್ದರು.
* ಬಂಧಿತರಲ್ಲಿ ಅನೇಕರು ಸರ್ಕಾರದ ಅರೆಸೇನಾ ಪಡೆ ಸಿಬ್ಬಂದಿ ಸೇರಿದಂತೆ ಭದ್ರತಾ ಪಡೆಯವರು. ತಾವು ವಶಪಡಿಸಿಕೊಂಡಿರುವ ಇರಾಕಿನ ಅಲ್-ಬಾಗ್ದಾದಿ ನಗರದಿಂದ ಇವರನ್ನು ಸೆರೆ ಹಿಡಿದು ಕರೆದೊಯ್ಯಲಾಗಿತ್ತು ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
* ಈ ಪ್ರದೇಶದಲ್ಲಿ ಅಮೆರಿಕ ಪಡೆಗಳು ತಮ್ಮ ನೆಲೆ ಸ್ಥಾಪಿಸಿವೆ. ಅಲ್ ಬಾಗ್ದಾದಿ ನಗರ ಹಾಗೂ ನಗರದ ಹೊರವಲಯದಲ್ಲಿ ಐಎಸ್ ಉಗ್ರ ಸಂಘಟನೆಯ ಸದಸ್ಯರ ಗುಂಡಿನ ದಾಳಿಗಳು ಮುಂದುವರಿದಿವೆ.
ಐಎಸ್ ಉಗ್ರರಿಂದ ಇರಾಕ್ನ ಅಲ್ಬಾಗ್ದಾದಿ ಪಟ್ಟಣ ಸ್ವಾಧೀನ

(17 Feb) ವಾಷಿಂಗ್ಟನ್, ಫೆ.14- ಇರಾಕ್ ಸೈನಿಕರಿಗೆ ತರಬೇತಿ ನೀಡಲು ಅಮೆರಿಕವು ಶಿಬಿರಗಳನ್ನು ಸ್ಥಾಪಿಸಿರುವ ಇರಾಕ್ನ ಪಶ್ಚಿಮ ಭಾಗದ ಅಲ್-ಬಾಗ್ದಾದಿ ಪಟ್ಟಣವನ್ನು ಐಎಸ್ ಉಗ್ರ ಪಡೆ ಸ್ವಾಧೀನ ಪಡಿಸಿಕೊಂಡಿದೆ. ಶುಕ್ರವಾರ ಸಂಜೆ ಐಎಸ್ ಸಂಘಟನೆಯ ಉಗ್ರರು ಅಲ್-ಅಸಾದ್ ವಾಯು ನೆಲೆಯ ಬಳಿ ಇರಾಕ್ ಪಡೆಗಳ ಮೇಲೆ ದಾಳಿ ನಡೆಸಿದರು.
* ಇರಾಕಿ ಸೇನಾ ಯೋಧರೂ ಕೂಡ ಮರು ದಾಳಿ ನಡೆಸಿದರು. ಆದರೆ ಯಾವುದೇ ಸಾವು-ನೋವುಗಳು ಸಂಭವಿಸಿರಲಿಲ್ಲ. ಇಂದು ಬೆಳಗ್ಗೆಯೇ ಐಎಸ್ ಭಯೋತ್ಪಾದಕ ಸಂಘಟನೆ ಪಡೆಗಳು ಅಲ್-ಬಾಗ್ದಾದಿ ಪಟ್ಟಣದ ಮೇಲೆ ಹಿಡಿತ ಸಾಧಿಸಿವೆ ಎಂದು ಅಮೆರಿಕ ಹಾಗೂ ಇರಾಕ್ ಸೇನಾ ವಕ್ತಾರರು ನೀಡಿದ ಜಂಟಿ ಹೇಳಿಕೆಯಲ್ಲಿ ತಿಳಿಸಿದೆ.
* ಈ ಪಟ್ಟಣ ದೇಶದ ಅನ್ಬಾರ್ ಪ್ರಾಂತ್ಯದಲ್ಲಿ ಸೇರುತ್ತದೆ. ನಂತರ ಸುಮಾರು 15ರಿಂದ 20 ಜನರಿದ್ದ ಐಎಸ್ ಉಗ್ರರ ಸಶಸ್ತ್ರ ತಂಡ ಸಮವಸ್ತ್ರದಲ್ಲಿ ಒಂದು ವಾಯುನೆಲೆ ಮೇಲೆ ದಾಳಿ ನಡೆಸಿತು. ಈ ವೇಳೆ ನಡೆದ ಕದನದಲ್ಲಿ ಎಲ್ಲಾ ಉಗ್ರರು ಹತರಾದರು ಎಂದು ಮೂಲಗಳು ಹೇಳಿವೆ
ಪೈಲಟ್ ಸಜೀವ ದಹನ ಬೆನ್ನಲ್ಲೇ ಜೋರ್ಡಾನಲ್ಲಿ ಅಲ್ಖೈದಾ ಉಗ್ರರಿಬ್ಬರಿಗೆ ಗಲ್ಲು

(15 Feb) ಅಮ್ಮಾನ್,ಫೆ.4- ಒಬ್ಬಳು ಮಹಿಳೆ ಸೇರಿದಂತೆ ಕಾರಾಗೃಹದಲ್ಲಿದ್ದ ಇಬ್ಬರು ಅಲ್ಖೈದಾ ಉಗ್ರರನ್ನು ಜೋರ್ಡಾನ್ ಸರ್ಕಾರ ಇಂದು ಮುಂಜಾನೆ ಗಲ್ಲಿಗೇರಿಸಿದೆ ಎಂದು ಸರ್ಕಾರದ ವಕ್ತಾರೊಬ್ಬರು ಹೇಳಿದ್ದಾರೆ.
* ತಮಗೆ ಸೆರೆ ಸಿಕ್ಕಿದ್ದ ಜೋರ್ಡಾನ್ ಯುದ್ಧ ವಿಮಾನದ ಪೈಲಟ್ ಗ್ರೀಸ್ಲಿಯನನ್ನು ಇಸ್ಲಾಮಿಕ್ ಸ್ಟೇಟ್(ಐಎಸ್) ಉಗ್ರರು ಜೀವಂತವಾಗಿ ಸುಟ್ಟು ಹಾಕಿದ ಕೆಲವೇ ಗಂಟೆಗಳ ಅವಧಿಯಲ್ಲಿ ಜೋರ್ಡಾನ್ ಸರ್ಕಾರ ಸೆರೆಯಲ್ಲಿದ್ದ ಆತ್ಮಾಹುತಿ ಬಾಂಬರ್ಗಳಾದ ಸಾಜೀದಾ ಅಲ್ ರಿಶ್ವಾಯಿ ಮತ್ತು ಜಿಯಾದ್ ಅಲ್ ಕರ್ಚಾಲಿ ಎಂಬ ಅಲ್ಖೈದಾ ಉಗ್ರರನ್ನು ಗಲ್ಲಿಗೆ ಹಾಕಿದೆ. ಅಲ್ ರಿಶ್ವಾಯಿ ಎಂಬ ಮಹಿಳೆ 2005ರಲ್ಲಿ ಜೋರ್ಡಾನ್ ರಾಜಧಾನಿ ಅಮ್ಮಾನ್ನ ಹೋಟೆಲ್ವೊಂದರಲ್ಲಿ ತ್ರಿವಳಿ ಬಾಂಬ್ ಸ್ಫೋಟಿಸಿ ಹಲವಾರು ಜನರ ಸಾವಿಗೆ ಕಾರಣಳಾಗಿದ್ದಳು.
* ಈಕೆಗೆ ಸರ್ಕಾರ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಇನ್ನೊಬ್ಬ ಉಗ್ರ ರಿಶ್ವಾಯಿ ಪ್ರಿಯಕರನಾಗಿದ್ದ, ಇಂದು ಮುಂಜಾನೆ ಇಬ್ಬರನ್ನೂ ಅಮ್ಮಾನ್ ಕೇಂದ್ರ ಕಾರಾಗೃಹದಲ್ಲಿ ನೇಣಿಗೆ ಹಾಕಲಾಯಿತು ಎಂದು ಸರ್ಕಾರದ ವಕ್ತಾರ ಮೊಹ್ಮದ್ ಅಲ್ ಮೊಮೇನಿ ತಿಳಿಸಿದ್ದಾರೆ. ಈ ಮಧ್ಯೆ ಜೋರ್ಡಾನ್ ಪೈಲಟ್ ಗ್ರಿಸ್ಲಿಯನನ್ನು ಕಬ್ಬಿಣದ ಬೋನಿನಲ್ಲಿ ಹಾಕಿ ಸಜೀವವಾಗಿ ದಹಿಸಿರುವ ಐಎಸ್ ಉಗ್ರರ ಮೇಲೆ ತಾವು ಪ್ರತೀಕಾರ ತೆಗೆದುಕೊಳ್ಳುವುದಾಗಿ ಜೋರ್ಡಾನ್ ಸರ್ಕಾರ ಹೇಳಿದೆ.
Thanks for reading
Popular Posts
-
Title : Spardha itihasa | ಸ್ಪರ್ಧಾ ಇತಿಹಾಸ File Type : See Link File Language : Kannada/English State : Karnataka...
-
Title : Spardha Atlas File Type : See Link File Language : Kannada/English State : Karnataka Publish Date :...
-
Title : General Kannada -2 File Type : See Link File Language : Kannada/English State : Karnataka Publish Date : 2019 File For...
-
Title : Good news for aspiring teachers | ಶಿಕ್ಷಕ ಹುದ್ದೆಯ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ File Type : See Link File Lang...
-
Title :FDA General Kannada Question Paper 28-02-21 File Type : See Link File Language : Kannada/English State : ...
-
Best Government Exam Prepartion group on Whats-app Add our number ‘ 8618351162 ‘ and name it ‘Spardha vin ‘ in your phone list. Se...
-
Title : General Kannada -1 File Type : See Link File Language : Kannada/English State : Karnataka Publish Date : 2019 File For...
-
Title : General Kannada -1 File Type : See Link File Language : Kannada/English State : Karnataka Publish Date : 2019 File Format : P...
-
Title : 📖 ಸ್ಟ್ಯಾಟಿಕ್ Gk ನೊಂದಿಗೆ ಪರೀಕ್ಷೆಗೆ ಸಂಬಂಧಿಸಿದ ಪ್ರಸ್ತುತ ವ್ಯವಹಾರಗಳು : ೦೭ ನವೆಂಬರ್ ೨೦೨೧ 1) ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಪ್ರತಿಷ್...
-
Title : KPSC FDA SDA Hall Ticket -2019 File Type : See Link File Language : Kannada/English State : Karnataka Publish Date : 2019 ...
No comments:
Post a Comment