ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 ಗ್ರಾಮೀಣ ಅಂಗನವಾಡಿಗಳಿಗೆ ‘ಆಸರೆ’ ಭಾಗ್ಯ | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Friday, February 27, 2015

ಗ್ರಾಮೀಣ ಅಂಗನವಾಡಿಗಳಿಗೆ ‘ಆಸರೆ’ ಭಾಗ್ಯ

  Pundalik       Friday, February 27, 2015
ಗ್ರಾಮೀಣ ಅಂಗನವಾಡಿಗಳಿಗೆ ‘ಆಸರೆ’ ಭಾಗ್ಯ

 ಹಳ್ಳಿಗಳಲ್ಲಿ ಅಂಗನವಾಡಿಗೆ ಕಟ್ಟಡ ಇಲ್ಲ ಎಂಬ ಕೊರಗು ಇನ್ಮುಂದೆ ದೂರಾಗಲಿದೆ. ಕಾರಣ ಗ್ರಾಮೀಣ ಪ್ರದೇಶದಲ್ಲಿ ಅವಶ್ಯಕತೆ ಆಧರಿಸಿ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ಉದ್ಯೋಗ ಖಾತರಿ ಹಣ ದೊರೆಯಲಿದೆ. 

2014-15 ಮತ್ತು 2015-16ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ವತಿಯಿಂದಲೇ ಒಂದು ಸಾವಿರ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ನಿರ್ಮಿಸಲಾಗುವುದು ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಗ್ರಾಮೀಣ ಅಭಿವೃದ್ಧಿ ಆಯುಕ್ತ ಮುನೀಷ್ ಮೌದ್ಗಿಲ್ ರಾಜ್ಯದ ಎಲ್ಲ ಜಿಲ್ಲೆಗಳ ಸಿಇಒಗಳಿಗೆ ಪತ್ರ ಬರೆದಿದ್ದಾರೆ. 

ಉದ್ಯೋಗ ಖಾತರಿ ಯೋಜನೆ ಮತ್ತು ಇತರ ಅನುಷ್ಠಾನ ಇಲಾಖೆಗಳ ಒಗ್ಗೂಡಿಸುವಿಕೆ ಕುರಿತ ಆರ್‌ಡಿಪಿಆರ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯದ ಆಯ್ದ ಗ್ರಾಮ ಪಂಚಾಯಿತಿಗಳಲ್ಲಿ ಖಾತರಿ ಅಡಿ ಪಂಚಾಯಿತಿಗಳ ಮೂಲಕ ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ. 


ಗ್ರಾಮಸಭೆ: 

ನರೇಗಾ ಅಡಿ ಅಂಗನವಾಡಿ ಕಟ್ಟಡ ನಿರ್ಮಿಸಲು ಅಗತ್ಯವಿದ್ದಲ್ಲಿ ವಿಶೇಷ ಗ್ರಾಮಸಭೆ ನಡೆಸಿ ಎಲ್ಲಿ ಕಟ್ಟಡ ನಿರ್ಮಿಸಬೇಕು ಎಂದು ಬಗ್ಗೆ ಸಲಹೆಗಳನ್ನು ಆಲಿಸಿ ಅನುಷ್ಠಾನಗೊಳಿಸಬೇಕು, ಸಾಮಗ್ರಿಗಳ ಸರಬರಾಜನ್ನು ಕೆಟಿಪಿಪಿ ಅನ್ವಯ ಪಡೆಯಲು ಕ್ರಮ ಕೈಗೊಳ್ಳಬೇಕು. ಕಟ್ಟಡಕ್ಕೆ ಅಗತ್ಯವಾಗಿ ಬೇಕಾದ ನಿವೇಶನವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಸಹಾಯದಿಂದ ಪಡೆಯಬೇಕಿದೆ. 

ಎಲ್ಲೆಲ್ಲಿ ಎಷ್ಟು?: 

ರಾಜ್ಯದಲ್ಲಿ 176 ತಾಲೂಕುಗಳಿದ್ದು, 5632ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಒಟ್ಟು 1000 ಅಂಗನವಾಡಿ ಕಟ್ಟಡ ನಿರ್ಮಿಸಬೇಕಿದೆ. ಬೆಳಗಾವಿ ಜಿಲ್ಲೆಯಲ್ಲಿ ಅತೀ ಹೆಚ್ಚು ಅಂದರೆ 86, ಬಾಗಲಕೋಟೆ 29, ಬೆಂಗಳೂರು ನಗರ 15, ಬೆಂಗಳೂರು ಗ್ರಾಮಾಂತರ 17, ಬಳ್ಳಾರಿ 34, ವಿಜಯಪುರ 35, ಚಾಮರಾಜ ನಗರ 21, ಚಿಕ್ಕಬಳ್ಳಾಪುರ 27, ಚಿಕ್ಕಮಗಳೂರು 40, ಚಿತ್ರದುರ್ಗ 33, ದಕ್ಷಿಣ ಕನ್ನಡ 36, ದಾವಣಗೆರೆ 41, ಧಾರವಾಡ 23, ಗದಗ 19, ಹಾಸನ 46, ಹಾವೇರಿ 37, ಕೊಡಗು 17, ಕೋಲಾರ 28, ಕೊಪ್ಪಳ 24, ಮಂಡ್ಯ 41, ಮೈಸೂರು 42, ರಾಯಚೂರು 29, ರಾಮನಗರ 23, ಶಿವಮೊಗ್ಗ 46, ತುಮಕೂರು 57, ಉಡುಪಿ 26, ಉತ್ತರ ಕನ್ನಡ 37, ಕಲಬುರಗಿ 39, ಬೀದರ್‌ನಲ್ಲಿ 31 ಮತ್ತು ಯಾದಗಿರಿಯಲ್ಲಿ 21 ಸೇರಿ ಒಂದು ಸಾವಿರ ಕಟ್ಟಗಳು ನಿರ್ಮಾಣವಾಗಲಿವೆ. 

ಅನುಕೂಲ: 

ಗ್ರಾಮೀಣ ಪ್ರದೇಶಗಳಲ್ಲಿ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ಇಲ್ಲದೇ ಇರುವುದರಿಂದ ದೇವಸ್ಥಾನಗಳು, ಮರದ ಕೆಳಗಡೆ ಮಕ್ಕಳಿಗೆ ಕೂಡಿಸಿ ಪಾಠ ಹೇಳಲಾಗುತ್ತಿದೆ. ಬಯಲಿನಲ್ಲಿಯೇ ಉಪಾಹಾರ ತಯಾರಿಸಿ ಮಕ್ಕಳಿಗೆ ನೀಡಲಾಗುತ್ತಿದೆ. ಮಳೆಗಾಲ ಮತ್ತು ಬೇಸಿಗೆಯಲ್ಲಿ ಪರಿಸ್ಥಿತಿ ಗಂಭೀರವಾಗಲಿದ್ದು, ಕಲಿಯುವ ಮಕ್ಕಳಿಗೂ, ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಅಡುಗೆ ಸಹಾಯಕರಿಗೂ ತೊಂದರೆಯಾಗುತ್ತದೆ. ಕಪ್ಪು ಹಲಗೆ ಇಲ್ಲದೇ ಕಲಿಸುವ ನಿದರ್ಶನಗಳೂ ಇವೆ. ಇನ್ನೂ ಕೆಲವೆಡೆ ಜಾಗ ಇದ್ದರೂ ಕಟ್ಟಡ ನಿರ್ಮಾಣಕ್ಕೆ ಅನುದಾನದ ಕೊರತೆಯೂ ಇರುತ್ತದೆ. ಉದ್ಯೋಗ ಖಾತರಿಯ ಈ ಹಣ ಸದುಪಯೋಗವಾಗಿ ಕಟ್ಟಡದ ಕೊರತೆಯೂ ನೀಗಿಸಲಿದೆ. ಮಕ್ಕಳ ಕಲಿಕೆಗೂ ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. 

ಗ್ರಾಮೀಣ ಭಾಗದಲ್ಲಿ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಇಲ್ಲದೇ ತೊಂದರೆ ಇರುವ ಕಡೆ ಉದ್ಯೋಗ ಖಾತರಿ ಅನುದಾನ ಬಳಸಿ ಕಟ್ಟಡ ನಿರ್ಮಿಸಲಾಗುವುದು. ಹಳ್ಳಿಗಳ ಅಂಗನವಾಡಿಗಳನ್ನು ಬಲಪಡಿಸಲು ಇದು ಸಹಕಾರಿಯಾಗಲಿದೆ. 

ಆರ್.ಟಿ.ಪಡಗಣ್ಣನವರ್, ಉಪ ನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಲಬುರಗಿ 

ಸರಕಾರಿ ಶಾಲೆಗಳ ಮೂಲಸೌಕರ್ಯ:
ಬೆಂಗಳೂರು: ಸರಕಾರಿ ಶಾಲೆಗಳಿಗೆ ಮೂಲ ಸೌಲಭ್ಯಗಳನ್ನು ಒದಗಿಸಲು ಕಾರ್ಪೊರೇಟ್ ಕಂಪನಿಗಳು ಕೈ ಜೋಡಿಸಬೇಕು ಎಂದು ಸಚಿವ ಕಿಮ್ಮನೆ ರತ್ನಾಕರ ಹೇಳಿದ್ದಾರೆ.

ಅಗಸ್ತ್ಯ ಇಂಟರ್ ನ್ಯಾಷನಲ್ ಫೌಂಡೇಷನ್ ಶಿಕ್ಷಕರ ಸದನದಲ್ಲಿ ಗುರುವಾರ ಆಯೋಜಿಸಿದ್ದ 'ಅನ್ವೇಷಣಾ' ವಿಜ್ಞಾನ ಮಾದರಿಗಳ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

''ರಾಜ್ಯದಲ್ಲಿ 1.4 ಕೋಟಿ ಮಕ್ಕಳು ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದಾರೆ. ಅವರಲ್ಲಿ 84 ಲಕ್ಷ ಮಕ್ಕಳು ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 60 ಸಾವಿರ ಶಾಲಾ ಕಟ್ಟಡಗಳಿದ್ದು, ಅವುಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸರಕಾರದ ಅನುದಾನ ಸಾಲುವುದಿಲ್ಲ,'' ಎಂದರು.

''ಶಿಕ್ಷಣ ಇಲಾಖೆಗೆ ನೀಡುವ ಅನುದಾನದ ಮೊತ್ತ 16 ಸಾವಿರ ಕೋಟಿ ರೂ.ನಲ್ಲಿ 3 ಲಕ್ಷ ಉದ್ಯೋಗಿಗಳಿಗೆ ವೇತನ ನೀಡಲು 12 ಸಾವಿರ ಕೋಟಿ ರೂ. ವೆಚ್ಚವಾಗಲಿದೆ. ಉಳಿದಂತೆ ಮಧ್ಯಾಹ್ನದ ಬಿಸಿಯೂಟಕ್ಕೆ 1,200 ಕೋಟಿ, ಉಚಿತ ಸಮವಸ್ತ್ರ ಹಾಗೂ ಪಠ್ಯಪುಸ್ತಕಕ್ಕಾಗಿ 300 ಕೋಟಿ, ಸೈಕಲ್ ವಿತರಣೆಗಾಗಿ 173 ಕೋಟಿ ಹೀಗೆ ಒಟ್ಟು ಅನುದಾನದಲ್ಲಿ ಮುಕ್ಕಾಲು ಭಾಗ ಖರ್ಚಾಗುತ್ತದೆ,'' ಎಂದು ವಿವರಿಸಿದರು.

''ರಾಜ್ಯದ ಎಲ್ಲಾ ಸರಕಾರಿ ಶಾಲೆಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಕನಿಷ್ಠ 62 ಸಾವಿರ ಕೋಟಿ ಅನುದಾನದ ಅಗತ್ಯವಿದೆ,'' ಎಂದು ಹೇಳಿದರು.

''ರಾಜ್ಯದ ಸರಕಾರಿ ಶಾಲೆಗಳಲ್ಲಿನ ವಿದ್ಯಾರ್ಥಿಗಳ ಅಂಕಗಳಿಕೆ ಪ್ರಮಾಣ ಸುಧಾರಿಸಿದೆ. ಅದಕ್ಕೆ ಪೂರಕ ವಾತಾವರಣ ನಿರ್ಮಿಸಲು ಹಾಗೂ ಗುಣಮಟ್ಟದ ಶಿಕ್ಷಣ ನೀಡಲು ಅಗತ್ಯ ಸೌಕರ್ಯಗಳನ್ನು ಕಲ್ಪಿಸಬೇಕಿದೆ,'' ಎಂದರು.

ಪ್ರದರ್ಶನದಲ್ಲಿ ರಾಜ್ಯದ 12 ಜಿಲ್ಲೆಗಳಿಂದ 31 ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, 50 ವಿಜ್ಞಾನ ಮಾದರಿಗಳನ್ನು ಪ್ರದರ್ಶನದಲ್ಲಿ ಕಾಣಬಹುದು. ಸಮಾರಂಭದಲ್ಲಿ ವಿಜ್ಞಾನಿಗಳಾದ ಡಾ.ವಿ.ಕೆ. ಅತ್ರಿ, ಸುಧೀಂದ್ರ ಹಾಲ್ದೊಡ್ಡೇರಿ, ಇಂಡಿಯನ್ ಇಂಜಿನಿಯರ್ಸ್‌ ಅಸೋಸಿಯೇಷನ್ ಅಧ್ಯಕ್ಷ ಪ್ರೊ.ಆರ್.ಎಂ. ವಾಸಗಂ, ಭಾರತೀಯ ವಿಜ್ಞಾನ ಮಂದಿರದ ನಿರ್ದೇಶಕ ಪ್ರೊ.ಅನುರಾಗ್ ಕುಮಾರ್, ಅಗಸ್ತ್ಯ ಇಂಟರ್ ನ್ಯಾಷನಲ್ ಫೌಂಡೇಷನ್ ಅಧ್ಯಕ್ಷ ರಾಮ್‌ಜೀ ರಾಘವನ್ ಮತ್ತಿತರರು ಉಪಸ್ಥಿತರಿದ್ದರು.

ಆರ್ಥಿಕ ಸಮೀಕ್ಷೆ ವರದಿ: ಶೇ 8.5 ‘ಜಿಡಿಪಿ’ ಪ್ರಗತಿ ನಿರೀಕ್ಷೆ

                    ಪ್ರಸಕ್ತ ಸಾಲಿನ ಆರ್ಥಿಕ ಸಮೀಕ್ಷಾ ವರದಿ ಪ್ರಕಟಗೊಂಡಿದ್ದು ದೇಶದ ಒಟ್ಟಾರೆ ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಮುಂದಿನ ಹಣಕಾಸು ವರ್ಷದಲ್ಲಿ (2016–17) ಶೇ 8.1 ರಿಂದ ಶೇ 8.5ರ ವರೆಗೆ ಪ್ರಗತಿ ಕಾಣಲಿದೆ. 2018-20ರ ವೇಳೆಗೆ ದೇಶವು ಎರಡಂಕಿ ಪ್ರಗತಿ ಪಥದಲ್ಲಿ ಮುನ್ನಡೆಯಲಿದೆ ಎಂದು ಅಂದಾಜು ಮಾಡಲಾಗಿದೆ.
ಕಚ್ಚಾ ತೈಲದ ಬೆಲೆ ತಗ್ಗಿದೆ. ಇದರ ಜತೆಗೆ ಹಣದುಬ್ಬರವೂ  ಗಣನೀಯವಾಗಿ ಇಳಿಕೆಯಾಗಿದೆ. ಇದರಿಂದ ಬ್ಯಾಂಕ್‌ಗಳು ಬಡ್ಡಿ ದರ ತಗ್ಗಿಸುವ ಸಾಧ್ಯತೆ ಹೆಚ್ಚಿದ್ದು ಮಾರುಕಟ್ಟೆಗೆ ಹೆಚ್ಚಿನ ಬಂಡವಾಳ ಹರಿವು ನಿರೀಕ್ಷಿಸಲಾಗಿದೆ. ಪರಿಣಾಮವಾಗಿ ಹೂಡಿಕೆ ಹೆಚ್ಚಲಿದ್ದು ‘ಜಿಡಿಪಿ’ ಪ್ರಗತಿ ಕಾಣಲಿದೆ. ಇದರ ಜತೆಗೆ 2015–16ನೇ ಸಾಲಿನಲ್ಲಿ ಸಹಜ ಮುಂಗಾರು ಲಭಿಸಿದರೆ  ಉತ್ತಮ ಆರ್ಥಿಕ ವೃದ್ಧಿ ದರ ನಿರೀಕ್ಷಿಸಬಹುದು ಎಂದು ಶುಕ್ರವಾರ ಇಲ್ಲಿ ಸಮೀಕ್ಷಾ ವರದಿ ಮಂಡಿಸಿದ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದರು.
ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ ‘ಜಿಡಿಪಿ’ ಶೇ 7.4ರಷ್ಟು ಏರಿಕೆ ಕಾಣುವ ನಿರೀಕ್ಷೆ ಇದೆ.  2013–14ನೇ ಸಾಲಿನಲ್ಲಿ ಇದು ಶೇ 6.9ರಷ್ಟಿತ್ತು. 2020ರ ವೇಳೆಗೆ ಎರಡಂಕಿ ಜಿಡಿಪಿ ಪ್ರಗತಿ ದಾಖಲಿಸಲು ರಾಜಕೀಯ ಸ್ಥಿರತೆಯೂ ಅಷ್ಟೇ ಮುಖ್ಯ ಎಂದೂ ಈ ಸಮೀಕ್ಷೆ ಅಭಿಪ್ರಾಯಪಟ್ಟಿದೆ.
ಸಮೀಕ್ಷೆ ಮುಖ್ಯಾಂಶಗಳು
* 2015–16ನೇ ಸಾಲಿನಲ್ಲಿ ಗ್ರಾಹಕ ಬೆಲೆ ಸೂಚ್ಯಂಕ ಆಧರಿಸಿದ ಹಣದುಬ್ಬರ  ಶೇ 5 ರಿಂದ ಶೇ 5.5ರ ಒಳಗೆ ಸ್ಥಿರಗೊಳ್ಳುವ ಅಂದಾಜು
* ಹಣದುಬ್ಬರ ತಗ್ಗಿರುವುದರಿಂದ ಮಾರುಕಟ್ಟೆಗೆ ಹೆಚ್ಚಿನ ಬಂಡವಾಳ ಹರಿದು ಬರುವ ನಿರೀಕ್ಷೆ, ಬ್ಯಾಂಕ್‌ ಬಡ್ಡಿ ದರ ಕಡಿತ ಸಾಧ್ಯತೆ ಹೆಚ್ಚಳ
* ದೊಡ್ಡ ಮಟ್ಟದಲ್ಲಿ ಆರ್ಥಿಕ ಸುಧಾರಣಾ ಕ್ರಮಗಳ ನಿರೀಕ್ಷೆ
* ಪ್ರಸಕ್ತ ಹಣಕಾಸು ವರ್ಷದಲ್ಲಿ ಹೆಚ್ಚಿನ ಷೇರು ವಿಕ್ರಯ ಗುರಿ
* ಜನ್‌ ಧನ್‌ ಯೋಜನಾ, ಆಧಾರ್‌ ಮೂಲಕ ಬಡವರಿಗೆ ಸೋರಿಕೆ ಇಲ್ಲದೆ ಹಣ ವರ್ಗಾವಣೆ
* ದೇಶೀಯ ತಯಾರಿಕಾ ವಲಯದ ಉತ್ತೇಜನಕ್ಕೆ ‘ಮೇಕ್‌ ಇನ್‌ ಇಂಡಿಯಾ’ ಯೋಜನೆ
* ಹೂಡಿಕೆಗಾಗಿ ಮಾತ್ರ ಸಾಲ ಪಡೆಯಲು ಸಲಹೆ
* ಏಪ್ರಿಲ್‌–ಜನವರಿ ಅವಧಿಯಲ್ಲಿ ಆಹಾರ ಸಬ್ಸಿಡಿ ಮೊತ್ತದಲ್ಲಿ ಶೇ 20 ರಷ್ಟು  ಹೆಚ್ಚಳ. 1.08 ಲಕ್ಷ ಕೋಟಿಗೆ ಏರಿಕೆ
* ರೈಲ್ವೆ ಕಾರ್ಯವಿಧಾನದಲ್ಲಿ ಬದಲಾವಣೆ. ಸರಕು ಸಾಗಣೆ ಸೇರಿದಂತೆ ವಾಣಿಜ್ಯ ವ್ಯವಹಾರಗಳಲ್ಲಿ ತಂತ್ರಜ್ಞಾನ ಅಳವಡಿಕೆ 
* 2013–14ರಲ್ಲಿ ರೂ 1.39 ಲಕ್ಷ ಕೋಟಿಯಷ್ಟಿದ್ದ ಪೆಟ್ರೋಲಿಯಂ ಉತ್ಪನ್ನಗಳ ಮಾರಾಟ ನಷ್ಟ  2014–15ರಲ್ಲಿ ರೂ 74,664 ಕೋಟಿಗೆ ಇಳಿಕೆ
*  ಹಣಕಾಸು ಮಾರುಕಟ್ಟೆ ಸ್ಥಿರತೆಗೆ ಇನ್ನಷ್ಟು ಬಿಗಿ ಕ್ರಮ
* ಜಿಡಿಪಿ ಪ್ರಗತಿಗಾಗಿ ಮತ್ತು ರಫ್ತು ಉತ್ತೇಜನಕ್ಕೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೊಳಿಸಲು ಸಲಹೆ


logoblog

Thanks for reading ಗ್ರಾಮೀಣ ಅಂಗನವಾಡಿಗಳಿಗೆ ‘ಆಸರೆ’ ಭಾಗ್ಯ

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *