ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Thursday, February 26, 2015

  Pundalik       Thursday, February 26, 2015

ಐಪಿಸಿಸಿ ಅಧ್ಯಕ್ಷ ಹುದ್ದೆಗೆ ರಾಜಿನಾಮೆ ಸಲ್ಲಿಸಿದ ಪಚೌರಿ

aipisisi adhyaksha huddege raajinaame sallisidha pachouri(24 Feb) ನೈರೋಬಿ: ಲೈಂಗಿಕ ಕಿರುಕುಳ ಆರೋಪಕ್ಕೆ ಒಳಗಾಗಿರುವ ರಾಜೇಂದ್ರ ಕೆ. ಪಚೌರಿ ಇಂದು ಜಾಗತಿಕ ತಾಪಮಾನದ ಅಂತರದೇಶೀಯ ಸಮಿತಿಯ(ಐಪಿಸಿಸಿ) ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ. ಮಂಗಳವಾರದಿಂದ ಐಪಿಸಿಸಿಯ 3 ದಿನಗಳ 41ನೇ ಸಮ್ಮೇಳನ ನಡೆಯುತ್ತಿತ್ತು. ಪಚೌರಿ ಸಮ್ಮೇಳನಕ್ಕೆ ಹಾಜರಾಗದೆ ತಮ್ಮ ರಾಜಿನಾಮೆಯನ್ನು ಸಲ್ಲಿಸಿದ್ದಾರೆ. ಇಂಧನ ಮತ್ತು ಸಂಪನ್ಮೂಲ ಸಂಸ್ಥೆಯ (ಟೆರಿ)ಯ ಪ್ರಧಾನ ನಿರ್ದೇಶಕರಾದ ಪಚೌರಿ ವಿರುದ್ಧ ಮಹಿಳಾ ಉದ್ಯೋಗಿಯೊಬ್ಬರು ಲೈಂಗಿಕ ಕಿರುಕುಳದ ದೂರು ಸಲ್ಲಿಸಿದ್ದರು. ಈ ಸಂಬಂಧ ದೆಹಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ದೆಹಲಿ ಕೋರ್ಟ್ ಸೋಮವಾರ ಫೆಬ್ರವರಿ 26ರವರೆಗೆ ಇವರ ಬಂಧನಕ್ಕೆ ತಡೆ ನೀಡಿ ಮಧ್ಯಂತರ ಆದೇಶ ಹೊರಡಿಸಿತ್ತು

ಆಫ್ಘಾನಿಸ್ತಾನ; ಹಿಮಪಾತಕ್ಕೆ 108 ಜನ ಬಲಿ

aafghaanistaana; himapaatakke 108 jana bali (25 Feb) ಕಾಬೂಲ್: ಆಫ್ಘಾನಿಸ್ತಾನದಲ್ಲಿ ಚಳಿಯ ಪ್ರಭಾವ ಹೆಚ್ಚಾಗಿದ್ದು, ಹಿಮಪಾತದಿಂದಾಗಿ 108 ಜನರು ಮೃತಪಟ್ಟಿದ್ದಾರೆ. ಆಫ್ಘಾನಿಸ್ತಾನದ ಈಶಾನ್ಯ ಭಾಗದ ನಾಲ್ಕು ಪ್ರಮುಖ ಪ್ರಾಂತ್ಯಗಳಲ್ಲಿ ಹಿಮಪಾತದಿಂದಾಗಿ ನೂರಾರು ಮನೆಗಳು ಹಾನಿಗೊಳಗಾಗಿವೆ. ಕಾಬೂಲ್​ನಿಂದ ಉತ್ತರಕ್ಕೆ 100 ಕಿ.ಮೀ. ದೂರದಲ್ಲಿ ಪಂಜಶೀರ್ ಪ್ರಾಂತ್ಯದಲ್ಲಿ ಸುಮಾರು 100 ಮನೆಗಳು ಹಿಮಪಾತಕ್ಕೆ ಧ್ವಂಸವಾಗಿವೆ. ಆಫ್ಘಾನಿಸ್ತಾನದಾದ್ಯಂತ ಹಿಮಪಾತವಾಗಿದ್ದು, ಚಳಿಯ ತೀವ್ರತೆ ಹೆಚ್ಚಾಗಿದೆ. ಭಾರೀ ಹಿಮಪಾತವಾಗಿರುವುದರಿಂದ ರಕ್ಷಣಾ ಕಾರ್ಯಕರ್ತರು ಹಿಮಪಾತದಿಂದ ಹಾನಿಗೊಳಗಾಗಿರುವ ಹಳ್ಳಿಗಳಿಗೆ ತಲುಪಲು ಸಾಧ್ಯವಾಗುತ್ತಿಲ್ಲ

ಸಿರಿಯಾದಲ್ಲಿ ಐಎಸ್ ಉಗ್ರರಿಂದ 90 ಕ್ರೈಸ್ತರ ಅಪಹರಣ

siriyaadalli aies ugrarindha 90 kraistara apaharana(24 Feb) ಬೈರುತ್: ಐಎಸ್​ಐಎಸ್ ಪಡೆಗಳು ಈಶಾನ್ಯ ಸಿರಿಯಾದ ತಲ್ ತಮರ್ ಪಟ್ಟಣದ ಬಳಿ ಸುಮಾರು 90 ಕ್ರೈಸ್ತ (ಅಸ್ಸಾರಿಯನ್ಸ್) ಪುರುಷರು, ಮಹಿಳೆಯರು ಮತ್ತು ಮಕ್ಕಳನ್ನು ಅಪಹರಿಸಿದ್ದಾರೆ. ಸಿರಿಯಾದ ಕುರ್ದಿಷ್ ಹೋರಾಟಗಾರರು ಅಮೆರಿಕದ ವಾಯು ಪಡೆಯ ದಾಳಿಯ ಬೆನ್ನಲ್ಲಿ ಐಎಸ್ ಉಗ್ರರ ವಿರುದ್ಧ ಸಮರ ಸಾರಿರುವ ಬೆನ್ನಲ್ಲೇ ಐಎಸ್ ಉಗ್ರರು ಕ್ರೈಸ್ತ ಸಮುದಾಯದವರನ್ನು ಅಪಹರಿಸಿದ್ದಾರೆ. ಖಾಬುರ್ ನದಿಯ ದಕ್ಷಿಣ ದಂಡೆಯಲ್ಲಿ ಐಎಸ್ ಉಗ್ರರು ಅಪಹರಣ ನಡೆಸಿದ್ದಾರೆ. ಉತ್ತರ ದಂಡೆಯಲ್ಲಿ ವಾಸಿಸುವ ಸುಮಾರು 3 ಸಾವಿರ ಜನರು ತಪ್ಪಿಸಿಕೊಂಡು ಹಸ್ಸಖ್ ಮತ್ತು ಕಮಿಷಿಲಿ ನಗರಗಳಿಗೆ ವಲಸೆ ಹೋಗಿದ್ದಾರೆ. ಉಗ್ರರು ಅಪಹೃತ ಪುರುಷರನ್ನು ಹತ್ತಿರದ ಅಬ್ದುಲ್ ಅಜೀಜ್ ಪರ್ವತ ಪ್ರದೇಶಕ್ಕೆ ಕರೆದೊಯ್ದಿದ್ದಾರೆ, ಮಹಿಳೆಯರನ್ನು ತಲ್ ಶಮ್ರಾನ್ ಹಳ್ಳಿಯಲ್ಲಿ ಬಂಧಿಸಿದ್ದಾರೆ ಎಂದು ಮೂಲಗಳುಗಳು ತಿಳಿಸಿವೆ. ಐಎಸ್ ಉಗ್ರರ ಆನ್​ಲೈನ್ ರೇಡಿಯೋ, ಅಲ್ ಬಯಾನ್ ಹತ್ತಾರು ಕ್ರುಸಾಡರ್ಸ್ (ಯೋಧರು)ನ್ನು ಬಂಧಿಸಲಾಗಿದೆ ಎಂದು ವರದಿ ಮಾಡಿದೆ

ಅತ್ಯುತ್ತಮ ಚಿತ್ರ 'ಬರ್ಡ್​ಮ್ಯಾನ್'ಗೆ ಆಸ್ಕರ್ ಪ್ರಶಸ್ತಿ

atyuttama chitra 'bard​myaan'ge aaskar prashasti (23 Feb) ಲಾಸ್​ಏಂಜಲೀಸ್: ವಿಶ್ವ ಅಕಾಡೆಮಿಗಳ ಸಾಲಿನಲ್ಲಿ ಪ್ರತಿಷ್ಠಿತ ಪ್ರಶಸ್ತಿ ಎನಿಸಿಕೊಂಡಿರುವ 87ಏ ಆಸ್ಕರ್ ಪ್ರಶಸ್ತಿ ಪಟ್ಟಿಯನ್ನು ಸೋಮವಾರ ಪ್ರಕಟಿಸಲಾಗಿದ್ದು, 'ಅತ್ಯುತ್ತಮ ಚಲನಚಿತ್ರ' ಪ್ರಶಸ್ತಿಯನ್ನು ಈ ಬಾರಿ 'ಬರ್ಡ್ ಮ್ಯಾನ್' ಚಿತ್ರ ತನ್ನದಾಗಿಸಿಕೊಂಡಿದೆ. ಉಳಿದಂತೆ 'ಬರ್ಡ್ ಮ್ಯಾನ್' ಚಿತ್ರದ ನಿರ್ದೇಶಕ ಅಲೆಜಾಂಡ್ರೋ ಗಾಂಜ್​ಲೆಜ್ ಇನಾರಿತು ಅತ್ಯುತ್ತಮ ನಿರ್ದೇಶನಕ್ಕಾಗಿ ನೀಡುವ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇನ್ನು ಅತ್ಯುತ್ತಮ ನಟನೆಗಾಗಿ ನೀಡುವ ಅತ್ಯುತ್ತಮ ನಟಿ ಪ್ರಶಸ್ತಿಯನ್ನು 'ಸ್ಟಿಲ್ ಅಲೀಸ್' ಚಿತ್ರದ ನಾಯಕ ನಟಿ ಜೂಲಿಯನ್ನೆ ಮೂರೆ ತನ್ನದಾಗಿಸಿಕೊಂಡಿದ್ದರೆ, ಅತ್ಯುತ್ತಮ ನಟ ಪ್ರಶಸ್ತಿಯನ್ನು 'ದಿ ಥಿಯರಿ ಆಫ್ ಎವರಿಥಿಂಗ್' ಚಲನಚಿತ್ರದ ಎಡ್ಡೀ ರೆಡ್​ವೆುಯ್ನೆ ಪಡೆದುಕೊಂಡಿದ್ದಾರೆ. ಇನ್ನು ಅತ್ಯುತ್ತಮ ಅನಿಮೇಷನ್ ಚಿತ್ರ ಪ್ರಶಸ್ತಿಯನ್ನು 'ಬಿಗ್ ಹೀರೊ ಸಿಕ್ಸ್' ಪಡೆದುಕೊಂಡಿದ್ದರೆ, ಅತ್ಯುತ್ತಮ ವಿದೇಶಿ ಚಿತ್ರ ಪ್ರಶಸ್ತಿಯನ್ನು 'ಇಡಾ' ಪಡೆದುಕೊಂಡಿದೆ. ಪೂರ್ಣ ಪಟ್ಟಿ ಹೀಗಿದೆ... * BEST MOTION PICTURE OF THE YEAR- Birdman or (The Unexpected Virtue of Ignorance) Alejandro G. Iñárritu, John Lesher and James W. Skotchdopole, Producers . * PERFORMANCE BY AN ACTRESS IN A LEADING ROLE- Julianne Moore in Still Alice . * PERFORMANCE

ಬಾಂಗ್ಲಾ ದೋಣಿ ದುರಂತ ಮೃತ ಸಂಖ್ಯೆ 48ಕ್ಕೆ ಏರಿಕೆ

baangla doni duranta mruta sankhye 48kke(22 Feb) ಢಾಕಾ: ಬಾಂಗ್ಲಾದೇಶದಲ್ಲಿ ಪ್ರಯಾಣಿಕ ದೋಣಿಯೊಂದು ಸರಕು ಸಾಗಣೆ ದೋಣಿಗೆ ಡಿಕ್ಕಿ ಹೊಡೆದ ಪರಿಣಾಮ ಮುಳುಗಿದ್ದು, ಅಪಘಾತದಲ್ಲಿ ಸುಮಾರು 48 ಜನರು ಮೃತಪಟ್ಟಿದ್ದಾರೆ. ದೋಣಿಯಲ್ಲಿ ಸುಮಾರು 150 ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು. ದೋಣಿಯು ರಾಜಬರಿ ಜಿಲ್ಲೆಯ ದೌಲತ್​ದಿಯದಿಂದ ಪತುರಿಯಗೆ ತೆರಳುತ್ತಿತ್ತು. ದೋಣಿಯು ಪದ್ಮ ನದಿಯಲ್ಲಿ ತೆರಳುವಾಗ ಸರಕು ಸಾಗಣೆ ದೋಣಿಗೆ ಡಿಕ್ಕಿಯಾಗಿ ದೋಣಿ ಮುಳುಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನದಿಯಿಂದ ಇದುವರೆಗೆ 48 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಮುಳುಗಿರುವ ದೋಣಿಯನ್ನು ಹೊರಗೆಯುವ ಪ್ರಯತ್ನಗಳು ಮತ್ತು ದೋಣಿಯಲ್ಲಿ ಸಿಲುಕಿರುವವ ಮೃತದೇಹಗಳನ್ನು ಹೊರತೆಗೆಯುವ ಕಾರ್ಯ ನಡೆಯುತ್ತಿದೆ. ದೋಣಿಯಲ್ಲಿ ಪ್ರಯಾಣಿಸುತ್ತಿದ್ದವರ ನಿಖರ ಸಂಖ್ಯೆಯ ಕುರಿತು ಇನ್ನೂ ಸ್ಪಷ್ಟನೆಯಿಲ್ಲ, ಸುಮಾರು 150ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು. 'ನಾನು ದೋಣಿಯ ಮೇಲ್ಭಾಗದಲ್ಲಿ ಕುಳಿತಿದ್ದೆ ದೋಣಿ ಮುಳುಗಲು ಪ್ರಾರಂಭಿಸಿದ ನಂತರ ನಾನು ನದಿಗೆ ಜಿಗಿದು ದಡ ಸೇರಿದೆ. ನನ್ನಂತೆಯೇ ಇನ್ನೂ ಹಲವರು ದಡ ಸೇರಿದರು. ಆದರೆ ದೋಣಿಯ ಒಳಗಡೆ ಕ್ಯಾಬಿನ್​ಗಳಲ್ಲಿ ಇದ್ದವರು ಅಲ್ಲಿಯೇ ಸಿಲುಕಿರುವ ಸಾಧ್ಯತೆ ಇದೆ' ಎಂದು ದೋಣಿಯಿಂದ ಪಾರಾದ ಪ್ರಯಾಣಿಕನೊಬ್ಬ ತಿಳಿಸಿದ್ದಾನೆ

ಮಾಲ್ಡೀವ್ಸ್: ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್ ಬಂಧನ

maaldivs: maaji adhyaksha mohammadh nashidh bandhana(22 Feb) ಮಾಲೆ: ಭಯೋತ್ಪಾದನಾ ವಿರೋಧಿ ಕಾನೂನಿನ್ವಯ ಮಾಲ್ಡೀವ್ಸ್​ನ ಮಾಜಿ ಅಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕ ಮೊಹಮ್ಮದ್ ನಶೀದ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. 2012ರಲ್ಲಿ ಹಿರಿಯ ನ್ಯಾಯಾಧೀಶರನ್ನು ಬಂಧಿಸಲು ಮೊಹಮ್ಮದ್ ನಶೀದ್ ಅಧ್ಯಕ್ಷರಾಗಿದ್ದಾಗ ಆದೇಶ ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಶೀದ್ ಅವರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ನಶೀದ್ ಅವರ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನಿನ್ವಯ ಪ್ರಕರಣ ದಾಖಲಿಸಲಾಗಿದೆ. ಕ್ರಿಮಿನಲ್ ಕೋರ್ಟ್​ನ ನ್ಯಾಯಾಧೀಶ ಅಬ್ದುಲ್ಲಾ ಮೊಹಮ್ಮದ್ ಅವರನ್ನು ಬಂಧಿಸಲು ನಶೀದ್ ಆದೇಶ ಹೊರಡಿಸಿದ್ದರು. ಅವರನ್ನು ಮಿಲಟಿರಿ ಸಹಾಯದಿಂದ ಬಂಧಿಸಿ ಯಾವುದೇ ವಿಚಾರಣೆ ಅಥವಾ ಕಾನೂನು ಕ್ರಮ ಜರುಗಿಸದೆ ವಾರಗಳ ಕಾಲ ಬಂಧನದಲ್ಲಿ ಇಡಲಾಗಿತ್ತು. ನಂತರ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಬಿಡುಗಡೆ ಆದೇಶಿಸಿದರೂ ಸಹ ಕೋರ್ಟ್ ಆದೇಶವನ್ನು ಪುರಸ್ಕರಿಸಿರಲಿಲ್ಲ. ಈ ಸಂಬಂಧ ಮಾಲ್ಡೀವ್ಸ್​ನಲ್ಲಿ ವ್ಯಾಪಕ ವಿರೋಧ ಮತ್ತು ಪ್ರತಿಭಟನೆ ವ್ಯಕ್ತವಾದ ನಂತರ ಫೆಬ್ರವರಿ 2012ರಲ್ಲಿ ನಶೀದ್ ಅಧ್ಯಕ್ಷ ಹುದ್ದೆಗೆ ರಾಜಿನಾಮೆ ಸಲ್ಲಿಸಿದ್ದರು. ನಂತರ 2013ರಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಯಮೀನ್ ಅಬ್ದುಲ್ ಗಯ್ಯೂಮ್​ಅವರ ವಿರುದ್ಧ ಸೋತಿದ್ದರು. ನಶೀದ್ ರಾಷ್ಟ್ರ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು, ಹಿಂಸಾಚಾರಕ್ಕೆ ಉತ್ತೇಜನ ನೀಡುತ್ತಿದ್ದರು ಹಾಗಾಗಿ ಅವರನ್ನು ಭಯೋತ್ಪಾದನಾ ವಿರೋಧಿ

ಫುಕುಷಿಮದಲ್ಲಿ ಮತ್ತೆ ಅಣು ವಿಕಿರಣ ಸೋರಿಕೆ ಪತ್ತೆ

fukushimadalli matte anu vikirana sorike patte(22 Feb) ಟೋಕಿಯೋ: ನಾಲ್ಕು ವರ್ಷಗಳ ಹಿಂದೆ ಸುನಾಮಿ ಹೊಡೆತಕ್ಕೆ ಸಿಲುಕಿ ನಾಶವಾಗಿದ್ದ ಫುಕುಷಿಮ ಅಣು ಸ್ಥಾವರದಿಂದ ಸಮುದ್ರಕ್ಕೆ ಅಪಾಯಕಾರಿ ವಿಕಿರಣಯುಕ್ತ ನೀರು ಸೋರಿಕೆಯಾಗುತ್ತಿರುವುದು ಪತ್ತೆಯಾಗಿದೆ. ಫುಕುಷಿಮ ಅಣುಸ್ಥಾವರದಿಂದ ಒಳಚರಂಡಿ ಮತ್ತು ಮಳೆಯ ನೀರು ಸಮುದ್ರ ಸೇರಲು ನಿರ್ಮಿಸಿರುವ ಕೊಳವೆ ಮಾರ್ಗದ ಮೂಲಕ ಅಪಾಯಕಾರಿ ವಿಕಿರಣಯುಕ್ತ ನೀರು ಸಮುದ್ರಕ್ಕೆ ಸೋರಿಕೆಯಾಗಿರುವುದು ಸೆನ್ಸಾರ್ ಮೂಲಕ ಪತ್ತೆಯಾಗಿದೆ. ಈ ಮೂಲಕ ಆ ಪ್ರದೇಶದ ಸಮುದ್ರದಲ್ಲಿ 70 ಪಟ್ಟು ಹೆಚ್ಚು ವಿಕಿರಣ ಪತ್ತೆಯಾಗಿದೆ. ವಿಕಿರಣಯುಕ್ತ ಅಣುತ್ಯಾಜ್ಯ ನೀರು ಫೆಸಿಫಿಕ್ ಸಾಗರಕ್ಕೆ ಸೋರಿಕೆಯಾದ ನಂತರ ಒಳಚರಂಡಿಯನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫುಕುಷಿಮ ಅಣು ಸ್ಥಾವರ ಸುನಾಮಿಗೆ ಸಿಲುಕಿ ನಾಶವಾದ ನಂತರ ನಿರಂತರವಾಗಿ ಅಣು ವಿಕಿರಣ ಸುತ್ತಲ ಪರಿಸರಕ್ಕೆ ಸೇರ್ಪಡೆಯಾಗುತ್ತಿದೆ. ವಿಕಿರಣ ತ್ಯಾಜ್ಯ ಸೋರಿಕೆ ತಡೆಯಲು ಸಾಧ್ಯವಾಗುತ್ತಿಲ್ಲ. ಇದು ಅಣು ಸ್ಥಾವರ ನಿರ್ವಹಣೆ ಮತ್ತು ಸ್ಥಾವರದ ಕಾರ್ಯಾಚರಣಿಯನ್ನು ನಿಲ್ಲಿಸುವುದು ಸಾಧ್ಯವಾಗುತ್ತಿಲ್ಲ
logoblog

Thanks for reading

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *