ಮಹಿಳಾ ದಿನ: ದೇಶದ ಪ್ರಥಮ ಮಹಿಳೆಯರು
1) ಮಹಿಳಾ ಪೊಲೀಸ್ ಮಹಾ ನಿರ್ದೇಶಕಿ - ಕಾಂಚನ್ ಚೌಧರಿ ಭಟ್ಟಾಚಾರ್ಯ
2) ಅಶೋಕ ಚಕ್ರ ಪಡೆದ ಮೊದಲ ಮಹಿಳೆ - ನಿರ್ಜಾ ಬನೋಟ್
3) ಎವರೆಸ್ಟ್ ಶಿಖರವನ್ನು ಏರಿದ ಪ್ರಥಮ ಭಾರತೀಯ ಮಹಿಳೆ - ಬಚೇಂದ್ರಿ ಪಾಲ್
4) ಇಂಡಿಯನ್ ಏರ್ ಲೈನ್ಸ್ ನ ಪ್ರಥಮ ವಿಮಾನ ಚಾಲಕಿ - ದರ್ಬಾ ಬ್ಯಾನರ್ಜಿ
5) ಭಾರತೀಯ ಸಿನಿಮಾದ ಮೊದಲ ನಟಿ - ದೇವಿಕಾ ರಾಣಿ
6) ದೂರದರ್ಶನದ ಮೊದಲ ಮಹಿಳಾ ವಾರ್ತಾವಾಚಕಿ - ಪ್ರತಿಮಾ ಪುರಿ
7) ಇಂಗ್ಲಿಷ್ ಕಾಲುವೆಯನ್ನು ಈಜಿಕೊಂಡು ದಾಟಿದ ಪ್ರಥಮ ಮಹಿಳೆ - ಆರತಿ ಸಹಾ
8) ದಕ್ಷಿಣ ಭಾರತದಿಂದ ವೈದ್ಯಕೀಯ ಪದವಿ ಪಡೆದ ಪ್ರಥಮ ಮಹಿಳೆ - ಡಾ. ಮುತ್ತುಲಕ್ಷ್ಮಿ ರೆಡ್ಡಿ
9) ಉಚ್ಚ ನ್ಯಾಯಾಲಯಕ್ಕೆ ನ್ಯಾಯಾಧೀಶರಾಗಿ ಆಯ್ಕೆಯಾದ ಪ್ರಥಮ ಮಹಿಳೆ - ಲೈಲಾ ಸೇಠ್
10) ಸೇನಾಪದಕ ಪಡೆದ ಮೊದಲ ಮಹಿಳೆ - ಬಿನ್ ಲಾದೇವಿ
11) ವಿಶ್ವಸುಂದರಿಯಾಗಿ ಆಯ್ಕೆಯಾದ ಪ್ರಥಮ ಸುಂದರಿ - ರೀಟಾ ಫರಿಯಾ
12) ಭಾರತದ ಮೊದಲ ಮಹಿಳಾ ಇಂಜಿನಿಯರ್ - ಪಿ.ಕೆ. ಥ್ರೇಸಿಯಾ
13) ಭಾರತದ ಪ್ರಥಮ ಮಹಿಳಾ ಗಗನಯಾತ್ರಿ
(2 Mar) ವಾಷಿಂಗ್ಟನ್, ಮಾ. 2: ಅಮೆರಿಕ ಮೂಲದ ಅಂತರಿಕ್ಷ ಸಂಸ್ಥೆ (ಸ್ಪೇಸ್ ಎಕ್ಸ್) ವಿಶ್ವದ ಮೊದಲ ವಿದ್ಯುತ್ ಸಂವಹನ ಮಾದರಿಯ ಉಪಗ್ರಹವನ್ನು ಕಕ್ಷೆಗೆ ಯಶಸ್ವಿಯಾಗಿ ಬಿಟ್ಟಿದೆ. 'ಫಾಲ್ಕನ್ 9' ರಾಕೆಟ್ ಗಳ ಮೂಲಕ ಉಪಗ್ರಹವನ್ನು ಕಕ್ಷೆಗೆ ಸೇರಿಸಲಾಗಿದೆ. ಕ್ಯಾಲಿಫೋರ್ನಿಯಾದ ಕೇಪ್ ಕಾನ್ ವೆರಲ್ ಉಪಗ್ರಹ ಉಡಾವಣಾ ಕೇಂದ್ರದಿಂದ ಮೇ 1 ರಂದು ಉಪಗ್ರಹ ಹಾರಿಸಿ ಬಿಡಲಾಗಿದೆ. ಫ್ರೆಂಚ್ ಮೂಲದ ಬೋಯಿಂಗ್ ಮತ್ತು ಏಷ್ಯಾ ಬ್ರೋಡ್ ಕಾಸ್ಟ್ ಸೆಟ್ ಲೈಟ್ ಸಂಸ್ಥೆ ತಯಾರಿಸಿರುವ ರಾಕೆಟ್ ಗಳ ಮೂಲಕ ಉಪಗ್ರಹ ಉಡಾವಣೆ ಮಾಡಲಾಗಿದೆ.[ಸಂವಹನ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ದಾಟಿದ ಭಾರತ] ಶಕ್ತಿಯ ಪರಿಪೂರ್ಣ ಬಳಕೆ ಆಧಾರದಲ್ಲಿ ತಯಾರಾಗಿರುವ ಉಪಗ್ರಹ ಭೂಮಿಯ ಕಕ್ಷೆಯಲ್ಲಿ 2 ದಶಕ ಕಾಲ ಸುತ್ತುವರಿಯಲಿದೆ. ಸಾಂಪ್ರದಾಯಿಕ ಅಥವಾ ಸಾಮಾನ್ಯವಾಗಿ ನಿರ್ಮಾಣವಾಗುವ ರಾಕೆಟ್ ಗಳಿಗಿಂತ ಭಿನ್ನವಾಗಿ ಇದನ್ನು ತಯಾರು ಮಾಡಲಾಗಿದೆ. ಉಪಗ್ರಹದ ಹೊರಭಾಗವನ್ನು ಸಂಪೂರ್ಣವಾಗಿ ವಿದ್ಯುತ್ ಉಪಕರಣಗಳಿಂದಲೇ ಕೂಡಿದೆ ಎಂದು ಪೋರ್ಬ್ಸ್ ತನ್ನ ವರದಿಯಲ್ಲಿ ತಿಳಿಸಿದೆ.[ಜಿಎಸ್‌ಎಲ್‌ವಿ ಎಂಕೆ 3 ಯಶಸ್ಸಿನ 10 ಬೆಳವಣಿಗೆಗಳು] ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿರುವ ಸ್ಪೇಸ್ ಎಕ್ಸ್ ಈ ವರ್ಷದ ಅಂತ್ಯದ ವೇಳೆಗೆ ಇನ್ನು ಎರಡು 'ಫಾಲ್ಕನ್ 9' ರಾಕೆಟ್ ತಯಾರು ಮಾಡುವ ಇಂಗಿತ ವ್ಯಕ್ತಪಡಿಸಿದೆ. ಮಾರ್ಚ್ 21 ಕ್ಕೆ ಇದೇ ರೀತಿಯ ಇನ್ನೊಂದು ಉಪಗ್ರಹವನ್ನು ಉಡಾವಣೆ ಮಾಡಲಾಗುತ್ತಿದೆ.
No comments:
Post a Comment