ಅಟಲ್ ಬಿಹಾರಿ ವಾಜಪೇಯಿ
ಜನನ: | ಡಿಸೆಂಬರ 25 1924 |
---|---|
ಹುಟ್ಟಿದೂರು: | ಗ್ವಾಲಿಯರ್,ಮಧ್ಯಪ್ರದೇಶ |
ಭಾರತದ ಪ್ರಧಾನಮಂತ್ರಿ | |
ಅಧಿಕಾರಕ್ಕೆ ಬಂದದ್ದು: | ೧೦ನೇ ಪ್ರಧಾನಮಂತ್ರಿಯಾಗಿ |
ರಾಜಕೀಯ ಪಕ್ಷ: | ಭಾರತಿಯ ಜನತಾ ಪಾರ್ಟಿ |
ಮೊದಲನೆಯ ಕಾರ್ಯಾವಧಿ | |
ಅಧಿಕಾರ ವಹಿಸಿಕೊಂಡದ್ದು: | ಮೇ16 1996 |
ಅಧಿಕಾರ ಬಿಟ್ಟುಕೊಟ್ಟದ್ದು: | ಜೂನ 1 1996 |
ಪೂರ್ವಾಧಿಕಾರಿ: | ನರಸಿಂಹರಾವ್ |
ಉತ್ತರಾಧಿಕಾರಿ: | ದೇವೇಗೌಡ |
ಎರಡನೆಯ ಕಾರ್ಯಾವಧಿ | |
ಅಧಿಕಾರ ವಹಿಸಿಕೊಂಡದ್ದು: | ಮಾರ್ಚ 19 1998 |
ಅಧಿಕಾರ ಬಿಟ್ಟುಕೊಟ್ಟದ್ದು: | ಮೇ22, 2004 |
ಪೂರ್ವಾಧಿಕಾರಿ: | ಐ ಕೆ ಗುಜ್ರಾಲ್ |
ಉತ್ತರಾಧಿಕಾರಿ: | ಡಾ. ಮನಮೋಹನ ಸಿಂಗ್ |
ಅಟಲ್ ಬಿಹಾರಿ ವಾಜಪೇಯಿ (ಜನನ ಡಿಸೆಂಬರ 25 1924) ಅಟಲ್ ಅವರು ಹುಟ್ಟಿದ್ದು ಕ್ರಿಸ್ ಮಸ್ ದಿನದಂದು. ಅದು ೧೯೨೪ ರಲ್ಲಿ ಕೃಷ್ಣದೇವಿ ಹಾಗೂ ಕೃಷ್ಣ ಬಿಹಾರಿ ವಾಜಪೇಯಿ ಅವರಿಗೆ. ಮಧ್ಯ ಪ್ರದೇಶದ ಗ್ವಾಲಿಯರ್ ಹತ್ತಿರದ ಶಿಂದೆ ಕಿ ಚವ್ವಾಣಿ ಅನ್ನೋ ಹಳ್ಳಿಯಲ್ಲಿ. ತಂದೆ ಒಬ್ಬ ಕವಿ, ಹಾಗೆ ಸಾಮಾನ್ಯ ಶಾಲೆಯ ಮೇಷ್ಟ್ರು. ಅಟಲ್ ಅವರ ಅಜ್ಜ ಪಂಡಿತ್ ಶ್ಯಾಮ್ ಲಾಲ್ ವಾಜಪೇಯಿಯವರು.
ಜೀವನ
- ಅಟಲ್ ಅವರ ಪದವಿಯನ್ನ ವಿಕ್ಟೋರಿಯಾ ಕಾಲೇಜಿನಿಂದ (ಈಗ ಲಕ್ಷ್ಮಿ ಬಾಯಿ ಕಾಲೇಜು) ಪಡೆದರು. ಹಿಂದಿ, ಇಂಗ್ಲೀಷ್ ಹಾಗೂ ಸಂಸ್ಕೃತ ಭಾಷೆಯಲ್ಲಿ ಪಾಂಡಿತ್ಯ ಗಳಿಸಿದ ಅಟಲ್ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನ ಕಾನ್ಪುರದ ಡಿ.ಎ. ವಿ ಕಾಲೇಜಿನಿಂದ ಪಡೆದರು.
- ನಂತರ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್.ಎಸ್.ಎಸ್)ವನ್ನು ಸೇರಿದರು. ವೀರ ಅರ್ಜುನ ಹಾಗೂ ಪಾಂಚಜನ್ಯ ಅನ್ನುವ ಎರಡು ಪತ್ರಿಕೆಗಳಿಗೆ ಪತ್ರಕರ್ತರಾಗಿ ಕವಿಯಾಗಿ ಸೇವೆ ಸಲ್ಲಿಸಿದರು. ೧೯೯೬ ರಲ್ಲಿ ಮತ್ತು ಇನ್ನೊಮ್ಮೆ ೧೯೯೮ ರಿಂದ ೩೦೦೪ರವರೆಗೆ ಭಾರತದ ಪ್ರಧಾನ ಮಂತ್ರಿಗಳಾಗಿದ್ದರು.
- ಭಾರತದ ರಾಜಕೀಯದಲ್ಲಿ ಬಹುಕಾಲದಿಂದ ಸಕ್ರಿಯರಾದವರು. ಕಾನ್ಪುರದ ಲಕ್ಷ್ಮೀಬಾಯಿ ಕಾಲೇಜಿನಲ್ಲಿ ರಾಜಕೀಯ ಶಾಸ್ತ್ರದಲ್ಲಿ ಮಾಸ್ಟರ್ ಡಿಗ್ರಿ ಪಡೆದ ಅಟಲ್ ೧೯೪೨ರಲ್ಲಿ ಕ್ವಿಟ್ ಇಂಡಿಯ ಚಳವಳಿಯ ಮೂಲಕ, ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ನಿಕಟವರ್ತಿಯಾಗಿ ಬೆಳೆದರು.ಇವರು ಭಾರತೀಯ ಜಬ ಸಂಘದ ಸಂಸ್ಥಾಪಕರಲ್ಲಿ ಒಬ್ಬರು. ೧೯೬೮ ಹಾಗೂ ೧೯೭೩ರಲ್ಲಿ ಇವರು ಇದರ ಮುಖ್ಯಸ್ಥರಾಗಿದ್ದರು.
- ಇವರು ಲೋಕಸಭೆಗೆ ೧೯೫೭ರಲ್ಲಿ ಮೊದಲು ಆಯ್ಕೆಯಾದರು. ೧೯೭೭ರಲ್ಲಿ ಜನತಾ ಪಾರ್ಟಿ ಸ್ಥಾಪನೆಯಾಗುವವರೆಗೂ ಜನಸಂಘದ ನಾಯಕರಾಗಿದ್ದರು. ಮೋರಾರ್ಜಿ ದೇಸಾಯಿ ಸರಕಾರದಲ್ಲಿ ಮಾರ್ಚ್ ೧೯೭೭ ರಿಂದ ಜುಲೈ ೧೯೭೯ರವರೆಗೆ ವಿದೇಶ ಮಂತ್ರಿಯಾಗಿ ಕಾರ್ಯನಿರ್ವಹಿಸಿದರು.
- ೧೯೮೦ರಲ್ಲಿ ಇವರು ಜನತಾಪಾರ್ಟಿಯನ್ನು ತೊರೆದು ಭಾರತಿಯ ಜನತಾಪಾರ್ಟಿ ನಿರ್ಮಿಸುವಲ್ಲಿ ಸಹಾಯ ಮಾಡಿದರು. ಈ ನಿರ್ಣಯ ಆರ್.ಎಸ್.ಎಸ್ ನ ಒತ್ತಡದ ಮೇರೆಗೆ ಬಂದಿತೆಂದು ಹೇಳಲಾಗುತ್ತದೆ. ಬಿಜೆಪಿ ಪಾರ್ಲಿಮೆಂಟರಿ ಪಾರ್ಟಿಯ ನಾಯಕರಾಗಿ ವಾಜಪೇಯಿಯವರು ೧೯೮೦ರಿಂದ ೧೯೮೪ ರವರೆಗೆ ಹಾಗೂ ೧೯೮೬ ರಿಂದ ೧೯೯೩ ಮತ್ತು ೧೯೯೬ರಲ್ಲಿ ಕಾರ್ಯ ನಿರ್ವಹಿಸಿದರು.
- ೧೧ನೇ ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ಇವರು ಸೇವೆ ಸಲ್ಲಿಸಿದರು. ಸ್ವಾತಂತ್ರ್ಯ ನಂತರ ಪಂಡಿತ ಜವಹಾರಲಾಲ್ ನೆಹರು ಹಾಗೂ ಇಂದಿರಾ ಗಾಂಧಿ ನಂತರ ಈ ದೇಶದ ಜನಮಾನಸವನ್ನು ಅಷ್ಟೊಂದು ವ್ಯಾಪಕವಾಗಿ ಮುಟ್ಟಿದ, ತಟ್ಟಿದ ಮತ್ತೊಬ್ಬ ವ್ಯಕ್ತಿಯಿದ್ದರೆ ಅವರು ವಾಜಪೇಯಿ.
- ವಾಜಪೇಯಿಯವರು ರಾಜಕಾರಣಿ ಮಾತ್ರವಲ್ಲದೆ ಕವಿಯೂ ಆಗಿದ್ದರು. ಹಿಂದಿ ಭಾಷೆಯಲ್ಲಿ ಅನೇಕ ಕವಿತೆಗಳನ್ನು ರಚಿಸಿದ್ದಾರೆ. ಇವರ ಇಪ್ಪತ್ತೊಂದು ಕವಿತೆಗಳ ಸಂಕಲ ನ Twenty-One Poems ಎಂಬ ಹೆಸರಿನಲ್ಲಿ ಆಂಗ್ಲಭಾಷೆಗೆ ಅನುವಾದಗೊಂಡಿದೆ.
- ೨೦೦೫ ರಲ್ಲಿ ರಾಜಕೀಯದಿಂದ ನಿವೃತ್ತಿ ಘೋಷಿಸಿ ಕೊಂಡವರು ಅಟಲ್, ರಾಜಕೀಯವನ್ನ ಬಿಟ್ಟರೆ ಅಟಲ್ ಒಬ್ಬ ಒಳ್ಳೆಯ ಕವಿ ಹಾಗೂ ಸಾಹಿತಿಯೂ ಹೌದು. ಅವರು ಬರೆದ ಪುಸ್ತಕಗಳು ಅನೇಕ.
- ತಮ್ಮ ಆಡಳಿತದ ಸಮಯದಲ್ಲಿ ಇಡೀ ವಿಶ್ವವೇ ತಬ್ಬಿಬ್ಬಾಗುವಂತೆ ಮಾಡಿದ ಪೋಖ್ರಾನ್ ಅಣು ಪರೀಕ್ಷೆ, ಭಾರತ ಪಾಕ್ ಬಾಂಧವ್ಯಕ್ಕೆ ಕೊಂಡಿಯಾಗಿ ಲಾಹೋರ್ ಬಸ್ ಪ್ರಯಾಣ ಆರಂಭ ತನ್ನ ಕನಸಿನ ಕೂಸಾದ ರಾಷ್ಟ್ರೀಯ ಹೆದ್ದಾರಿ ಮತ್ತು ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನೆಗೆ ಚಾಲನೆ ನೀಡಿದರು.
- ದೇಶದ ನಾಲ್ಕೂ ಮೂಲೆಗಳಿಗೂ ಸಂಪರ್ಕ ಕಲ್ಪಿಸುವ ೧೫ ಸಾವಿರ ಕಿ.ಮೀ. ಉದ್ದದ "ಸುವರ್ಣ ಚತುಷ್ಪಥ" ಹೆದ್ದಾರಿಯನ್ನು ದಾಖಲೆಯ ಸಮಯದಲ್ಲಿ ಪೂರ್ಣಗೊಳಿಸಿದ ವಾಜಪೇಯಿಯವರ ಸಾಧನೆ ಅಸಾಮಾನ್ಯವಾದುದು.
- ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆಯನ್ನು ಜಾರಿಗೆ ತರುವ ಮೂಲಕ ಹಳ್ಳಿಹಳ್ಳಿಗಳಿಗೂ ರಸ್ತೆಯನ್ನು ಒದಗಿಸಿದ್ದು, "ಸರ್ವ ಶಿಕ್ಷಾ ಅಭಿಯಾನ" ಮೂಲಕ ಎಲ್ಲರನ್ನೂ ಸಾಕ್ಷರರನ್ನಾಗಿ ಮಾಡಲು ಮುಂದಾಗಿದ್ದ ವಾಜಪೇಯಿಯವರು ನಿಜಕ್ಕೂ ಒಬ್ಬ ದೂರದೃಷ್ಟಿ ಹೊಂದಿದ್ದ ನಾಯಕ.
- ಭಾರತದ ಹಿರಿಯ ಪ್ರಜೆ, ರಾಜಕಾರಣಿಗಳಲ್ಲೆ ಸಭ್ಯ ರಾಜಕಾರಣಿ ಮತ್ತು ಗೌರವಾನ್ವಿತ ಮುತ್ಸದ್ಧಿ ಎಂದು ತಮ್ಮ ರಾಜಕೀಯ ವಿರೋದಿಗಳಿಂದಲೇ ಕರೆಸಿಕೊಂಡವರು ಅಟಲ್ ಬಿಹಾರಿ ವಾಜಪೇಯಿ.
- ೧೯೭೭ ರಲ್ಲಿ ಜನತಾ ಸಂಘದ ಮೊದಲ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿ ಆಯ್ಕೆ ಆದಾಗ ಅವರು ಅಮೆರಿಕದ ಅಸೆಂಬ್ಲಿಯನ್ನ ಉದ್ದೇಶಿಸಿ ಮಾತನಾಡುವ ಅವಕಾಶ ಸಿಕ್ಕಿತ್ತು. ಆ ಸಂದರ್ಭ ದಲ್ಲಿ ಹಿಂದಿಯಲ್ಲಿ ಅಮೆರಿಕದ ಅಸೆಂಬ್ಲಿಯನ್ನ ಉದ್ದೇಶಿಸಿ ಮಾತನಾಡಿದ ಏಕೈಕ ಭಾರತೀಯರು ಅಟಲ್. ವಿಶೇಷವೆಂದರೆ ಅವರು ಭಾರತದ ಅವಿವಾಹಿತ ಪ್ರಧಾನ ಮಂತ್ರಿಯಾಗಿದ್ದರು . ಕನ್ನಡ ಪ್ರಭ ಪ್ರಧಾನ ಸಂಪಾದಕರಾದ ವಾಜಪೇಯಿ ಅವರ ಜೀವನ ಚರಿತ್ರೆ "ಅಜಾತ ಶತ್ರು" ಎಂಬ ೫೨೪ ಪುಟಗಳ ಪುಸ್ತಕ ಬರೆದಿದ್ದಾರೆ.
- ೧೯೯೨ ರಲ್ಲಿ - ಪದ್ಮ ವಿಭೂಷಣ,
- ೧೯೯೪ ರಲ್ಲಿ - ಲೋಕಮಾನ್ಯ ತಿಲಕ್ ಪ್ರಶಸ್ತಿ,
- ೧೯೯೪ ರಲ್ಲಿ - ಉತ್ತಮ ರಾಜಕೀಯ ಪಟು ಗೌರವ, ಹಾಗೂ
- ೧೯೯೪ ರಲ್ಲಿ - ಪಂಡಿತ್ ಗೋವಿಂದ್ ವಲ್ಲಭ್ ಪಂತ್ ಪ್ರಶಸ್ತಿಗಳು ಮುಖ್ಯವಾದವು.
No comments:
Post a Comment